ಮಹದಾಯಿ ಹೋರಾಟಗಾರರು  

(Search results - 6)
 • mahadayi

  Karnataka Districts5, Mar 2020, 8:30 AM IST

  ಕರ್ನಾಟಕ ಬಜೆಟ್ 2020: 'ಮಹದಾಯಿಗೆ ಕನಿಷ್ಠ 1000 ಕೋಟಿ ಮೀಸಲಿಡಲಿ'

  ಉತ್ತರ ಕರ್ನಾಟಕದ ದಶಕಗಳ ಕನಸಾದ ಮಹದಾಯಿ ವಿವಾದ ಇದೀಗಷ್ಟೇ ಮುಗಿದಿದೆ. ಅತ್ತ ಕೇಂದ್ರ ಸರ್ಕಾರ ಅಧಿಸೂಚನೆಯನ್ನೂ ಹೊರಡಿಸಿಯೂ ಆಗಿದೆ. ಈಗೇನಿದ್ದರೂ ರಾಜ್ಯ ಸರ್ಕಾರದ ಕೆಲಸ. ಈ ನಿಟ್ಟಿನಲ್ಲಿ  ರಾಜ್ಯ ಸರ್ಕಾರ ಈ ಬಜೆಟ್‌ನಲ್ಲಿ ಎಷ್ಟು ತೆಗೆದಿರಿಸಲಿದೆ. ಎಷ್ಟು ತೆಗೆದಿರಿಸಿದರೆ ಉತ್ತಮ ಎಂಬೆಲ್ಲ ಲೆಕ್ಕಾಚಾರ ಹಾಕುತ್ತಿರುವ ಮಹದಾಯಿ ಹೋರಾಟಗಾರರು, ಕನಿಷ್ಠ ಪಕ್ಷ ಈ ಕೆಲಸಗಳಿಗೆ ಈ ಬಜೆಟ್‌ನಲ್ಲಿ 1 ಸಾವಿರ ಕೋಟಿ ಅನುದಾನ ಮೀಸಲಿಡಬೇಕು ಎಂದು ನಿರೀಕ್ಷೆ ಇಟ್ಟುಕೊಂಡಿದ್ದಾರೆ. 
   

 • DWD_MAHADAYI_AV
  Video Icon

  Karnataka Districts27, Jan 2020, 1:18 PM IST

  ಮತ್ತೆ ಹೋರಾಟಕ್ಕಿಳಿದ ಮಹದಾಯಿ ಹೋರಾಟಗಾರರು:ಡಿಸಿ ಕಚೇರಿ ಎದುರು ಅಹೋರಾತ್ರಿ ಧರಣಿ

  ಮಹದಾಯಿ, ಕಳಸಾ ಬಂಡೂರಿ ಹೋರಾಟಗಾರರು ಮತ್ತೆ ಹೋರಾಟಕ್ಕಿಳಿದಿದ್ದಾರೆ. ರೈತ ಬೆಳೆದ ಬೆಳೆಗೆ ಬೆಂಬಲ ಬೆಲೆ ಹಾಗೂ ಮಾಹಾದಾಯಿ ಯೋಜನೆ ಅನುಷ್ಟಾನಕ್ಕೆ ಆಗ್ರಹಿಸಿ ಹೋರಾಟಗಾರರು ಅಹೋರಾತ್ರಿ ಧರಣಿ ಆರಂಭಿಸಿದ್ದಾರೆ.
   

 • Dharwad

  Karnataka Districts20, Jan 2020, 11:24 AM IST

  ಧಾರವಾಡ: ಮಹದಾಯಿ ಹೋರಾಟಗಾರರ ಮೇಲೆ ರೌಡಿ ಶೀಟರ್ ಕೇಸ್ ಓಪನ್‌

  ಮಹದಾಯಿ ಹೋರಾಟಗಾರರ ಮೇಲೆ ರೌಡಿ ಶೀಟರ್ ಕೇಸ್ ಓಪನ್ ಆಗಿದ್ದಕ್ಕೆ ಎಸ್ಪಿ ವರ್ತಿಕಾ ಕಟಿಯಾರ ಅವರು ರೌಡಿ ಶೀಟರ್‌ಗಳ ಪರೇಡ್‌ ಮಾಡಿಸಿದ್ದಾರೆ. ಮಹದಾಯಿ ನೀರಿಗಾಗಿ ಹೋರಾಟ ನಡೆಸಿದ ರೈತರ ಮೇಲೆ ಪೊಲೀಸರು ರೌಡಿ ಶೀಟರ್‌ ಕೇಸ್ ಹಾಕಿದೆ. 

 • Veeresh Sobaradamath

  Karnataka Districts20, Dec 2019, 8:41 AM IST

  ಮಹದಾಯಿ ಹೋರಾಟ: ರಾಷ್ಟ್ರಪತಿ ಭವನದ ಎದುರು ಅಹೋರಾತ್ರಿ ಧರಣಿ

  ರಾಜ್ಯದ ಉತ್ತರ ಕರ್ನಾಟಕ ಭಾಗದ ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ರೈತರಿಗೆ ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಹಳ್ಳಗಳ ನೀರು ಬಳಕೆಗೆ ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆ ನೀಡಿರುವ ಅನುಮತಿಗೆ ತಡೆ ನೀಡಿರುವುದನ್ನು ಖಂಡಿಸಿ ಮಹದಾಯಿ ಹೋರಾಟಗಾರರು ದೆಹಲಿ ರಾಷ್ಟ್ರಪತಿ ಭವನದ ಎದುರು ಅಹೋರಾತ್ರಿ ಧರಣಿ ಪ್ರಾರಂಭಿಸುವುದಾಗಿ ರೈತ ಸೇನಾ ಸಂಘಟನೆ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ಶ್ರೀಗಳು ಹೇಳಿದ್ದಾರೆ.

 • Veeresh Sobaradamath

  Karnataka Districts19, Dec 2019, 7:33 AM IST

  ‘ರಕ್ತ ಹರಿಸಿಯಾದರೂ ಮಹದಾಯಿ ನೀರು ತಂದೇ ತರುತ್ತೇವೆ'

  ಮಹದಾಯಿ ನದಿಯಿಂದ ಕರ್ನಾಟಕಕ್ಕೆ ಕುಡಿಯುವ ನೀರಿಗಾಗಿ ಕಳಸಾ- ಬಂಡೂರಿ ಯೋಜನೆ ಕೈಗೆತ್ತಿಕೊಳ್ಳಲು ಕೇಂದ್ರ ಪರಿಸರ ಇಲಾಖೆ ನೀಡಿದ್ದ ಅನುಮತಿಯನ್ನು ಕೇಂದ್ರದ ಪರಿಸರ ಇಲಾಖೆ ಅಮಾನತ್ತಿನಲ್ಲಿ ಇಟ್ಟಿರುವುದಕ್ಕೆ ಮಹದಾಯಿ ಹೋರಾಟಗಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
   

 • undefined

  Karnataka Districts21, Nov 2019, 7:51 AM IST

  ಉಲ್ಟಾ ಹೊಡೆದ ಕೇಂದ್ರ, ಭುಗಿಲೆದ್ದ ರೈತರ ಆಕ್ರೋಶ!

  ಕಳಸಾ-ಬಂಡೂರಿ ಯೋಜನೆಗೆ ಪರಿಸರ ಇಲಾಖೆ ನೀಡಿದ್ದ ಅನುಮೋದನೆಯ ಮರುಪರಿಶೀಲನೆಗೆ ಕೇಂದ್ರ ಸರ್ಕಾರ ನಿರ್ಧರಿಸಿದ್ದಕ್ಕೆ ಮಹದಾಯಿ ಹೋರಾಟಗಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನ್ಯಾಯಾಧಿಕರಣವೇ ತೀರ್ಪು ನೀಡಿದ ಮೇಲೆ ಮತ್ತೇನು ಇವರ ಕ್ಯಾತೆ ಎಂದು ಪ್ರಶ್ನಿಸಿದ್ದಾರೆ.