ಮಳೆಗಾಲ  

(Search results - 111)
 • Dengue Stories17, Oct 2019, 10:38 AM IST

  ಡೆಂಗ್ಯೂ ಮಳೆಗಾಲದಲ್ಲಿ ಕಾಡೋ ರೋಗವಲ್ಲ, ಸರ್ವಕಾಲವೂ ತರುತ್ತೆ ಕುತ್ತು

  ಡೆಂಗ್ಯೂ ಎಂಬ ಹೆಸರು ಕೇಳಿದರೆ ಬೆಚ್ಚಿ ಬೀಳುತ್ತೇವೆ. ಅಷ್ಟೆಲ್ಲಾ ಸುಸ್ತು ಹೊಡೆಸುವ ಈ ರೋಗ ಮಳೆಗಾಲದಲ್ಲಿ ಮಾತ್ರ ಕಾಡುತ್ತೆ ಎಂಬ ನಂಬಿಕೆ ಜನರಲ್ಲಿ ಇದೆ. ಅಷ್ಟಕ್ಕೂ ಈ ರೋಗದ ಬಗ್ಗೆ ಇರುವ ಕೆಲವು ತಪ್ಪು ಕಲ್ಪನೆಗಳೆ ಬಗ್ಗೆ ಮಾಹಿತಿ ಇಲ್ಲಿದೆ. 

 • wine

  Koppal16, Oct 2019, 8:23 AM IST

  ಹನುಮಸಾಗರ: ಕುಡುಕರ ತಾಣವಾದ ಕಪಿಲ ತೀರ್ಥ

  ಲ್ಲಿಯ ಇತಿಹಾಸ ಪ್ರಸಿದ್ಧ ಪ್ರವಾಸಿ ತಾಣ ‘ಕಪಿಲ ತೀರ್ಥ ಜಲಪಾಲ’ ಇತ್ತೀಚಿಗೆ ಕುಡುಕರ ಮೋಜಿನ ತಾಣವಾಗುತ್ತಿದ್ದು, ಸಭ್ಯಸ್ಥರು ಸಂಸಾರ ಸಮೇತ ಇಲ್ಲಿ ಪ್ರವಾಸ ಬರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕಪಿಲ ತೀರ್ಥ ಎಂದು ಕರೆಯಲ್ಪಡುವ ಈ ಕಪ್ಪಲೆಪ್ಪ ಜಲಪಾತ ಮಳೆಗಾಲದಲ್ಲಿ ಸುತ್ತಮುತ್ತಲಿನ ಜನರು ಕುಟುಂಬ ಸಮೇತ ಬಂದು ಖುಷಿ ಪಡುವ ಪ್ರೇಕ್ಷನೀಯ ಸ್ಥಳ. ಜತೆಗೆ ರೈತರು ಈ ಜಲಪಾತಕ್ಕೆ ಪೂಜಿಸಿ ಇಲ್ಲಿನ ನೀರನ್ನು ತೀರ್ಥದ ರೂಪದಲ್ಲಿ ತೆಗೆದುಕೊಂಡು ಹೋಗಿ ಬೆಳೆಗಳಿಗೆ ಚಿಮುಕಿಸುವಂತಹ ಪದ್ಧತಿ ಇರುವುದರಿಂದ ಶ್ರದ್ಧಾ ಕೇಂದ್ರವೂ ಹೌದು. ಆದರೆ ಸದ್ಯ ಜಲಪಾತದಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಪ್ರತಿ ನಿತ್ಯ ಆಗಮಿಸುವ ಜನರ ಸಂಖ್ಯೆ ಮಾತ್ರ ಕಡಿಮೆಯಾಗಿದೆ. ಇಡೀ ವಾತಾವರಣದಲ್ಲಿ ಮದ್ಯದ ವಾಸನೆ ತುಂಬಿಕೊಂಡಿದೆ. ಮಾಂಸದ ತುಂಡುಗಳು ಅಲ್ಲಲ್ಲಿ ಬಿದ್ದು ವಾಕರಿಕೆ ತರಿಸುತ್ತಿವೆ. ಸದ್ಯ ಈ ಸ್ಥಳಕ್ಕೆ ಸಭ್ಯಸ್ಥರು ಬಾರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
   

 • Kodagu rain

  Karnataka Districts10, Sep 2019, 2:09 PM IST

  ಮುಂದುವರಿದ ಮಳೆ: ಭಾಗಮಂಡಲದಲ್ಲಿ ಪ್ರವಾಹ

  ಮಡಿಕೇರಿಯಲ್ಲಿ ಮಳೆ ಮುಂದುವರಿದಿದ್ದು, ಭಾಗಮಂಡಲ ಪ್ರದೇಶ ಸೇರಿ ತಗ್ಗು ಪ್ರದೇಶಗಳು ಜಲಾವೃತವಾಗಿದೆ. ಮಡಿಕೇರಿ ತಾಲೂಕು ವ್ಯಾಪ್ತಿಯಲ್ಲಿ ಮಳೆ ಅಬ್ಬರಿಸಿದ್ದು, ಜಿಲ್ಲೆಯಾದ್ಯಂತ ಬೆಳಗಿನವರೆಗೆ ಧಾರಾಕಾರ ಮಳೆಯಾಗಿದೆ. ಭಾಗಮಂಡಲ ಸಮೀಪದ ಬ್ರಹ್ಮಗಿರಿ ಸುತ್ತಮುತ್ತ ಭಾನುವಾರ ರಾತ್ರಿ ಧಾರಾಕಾರ ಮಳೆಯಾದ ಪರಿಣಾಮ ಭಾಗಮಂಡಲದ ತ್ರಿವೇಣಿ ಸಂಗಮ ಮತ್ತೊಮ್ಮೆ ಜಲಾವೃತವಾಗಿದೆ.

 • Spices

  LIFESTYLE9, Sep 2019, 1:22 PM IST

  ಸ್ಮಾರ್ಟ್ ಕಿಚನ್ ನಿಯಮ ತಿಳ್ಕೊಳ್ಳಿ, ಸ್ಮಾರ್ಟ್ ಹೆಣ್ಣು ನೀವಾಗಿ..

  ಮಸಾಲೆ ಪದಾರ್ಥಗಳು ಮಳೆಗಾಲದ ಬಣ್ಣ, ರುಚಿ ಹಾಗೂ ಪರಿಮಳಗೆಡುತ್ತವೆ. ಅವುಗಳನ್ನು ಕೆಡದಂತೆ ಕಾಪಾಡಲು, ತಾಜಾವಾಗಿಡಲು ಹೀಗೆ ಮಾಡಿ...

 • mumbai

  Karnataka Districts8, Sep 2019, 1:35 PM IST

  ಮಲೆನಾಡಿನಲ್ಲಿ ಮಳೆ: ಜನಜೀವನ ಅಸ್ತವ್ಯಸ್ತ

  ಮಹಾ ಮಳೆಗೆ ತತ್ತರಿಸಿರುವ ಮಲೆನಾಡಿನಲ್ಲಿ ಶನಿವಾರವೂ ಮಳೆ ಮುಂದುವರೆದಿದ್ದು, ಜನರಲ್ಲಿ ಆತಂಕ ಎದುರಾಗಿದೆ. ಮೂಡಿಗೆರೆ, ಶೃಂಗೇರಿ, ಕೊಪ್ಪ ಸೇರಿದಂತೆ ಕೆಲವೆಡೆ ಚಿಕ್ಕಪುಟ್ಟಭೂ ಕುಸಿತ ಉಂಟಾಗಿದೆ. ಇದರಿಂದ ಜನ ಭಯಭೀತರಾಗಿದ್ದಾರೆ. ಮಳೆಯಿಂದಾಗಿ ಕೆಲವೆಡೆ ಭೂ ಕುಸಿತ ಉಂಟಾಗಿದೆ. ಹಂಡುಗುಳಿ ಗ್ರಾಮದಲ್ಲಿ ಸುಧೀರ್‌ ಎಂಬುವವರ ಕಾಫಿ ತೋಟದಲ್ಲಿ ಸುಮಾರು 15 ಅಡಿಯಷ್ಟುಆಳಕ್ಕೆ ಭೂಮಿ ಕುಸಿದಿದೆ.

 • Bihar Brain Fever

  Karnataka Districts8, Sep 2019, 12:04 PM IST

  ಮಡಿಕೇರಿ: ಪ್ರವಾಹ ಪೀಡಿತ ಪ್ರದೇಶಗಳಲ್ಲಿ ವ್ಯಾಪಕ ಜ್ವರ ಬಾಧೆ

  ಭಾರೀ ಮಳೆಯಿಂದ ಕೊಡಗಿನಲ್ಲಿ ಪ್ರವಾಹ ಬಂದ ಪ್ರದೇಶಗಳಲ್ಲಿ ಇದೀಗ ಜನ ಜ್ವರ ಬಾಧೆಯಿಂದ ಬಳಲುತ್ತಿದ್ದಾರೆ. ಕೊಡಗಿನಲ್ಲಿ ಇನ್ನೂ ಮಳೆಯಾಗುತ್ತಿದ್ದು, ರೋಗ ಗುಣಮುಖವಾಗುವುದು ಕಷ್ಟವಾಗಿದೆ. ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆಯೂ ಹೆಚ್ಚಾಗಿ ಸಕಾಲದಲ್ಲಿ ವೈದ್ಯ ಸೇವೆ ದೊರೆಯದೆ ಜನ ತೊಂದರೆ ಪಡುವಂತಾಗಿದೆ.

 • Mumbai heavy rain red alert

  Karnataka Districts8, Sep 2019, 11:11 AM IST

  ಮಂಗಳೂರು: ಭಾರೀ ಮಳೆಯಿಂದ ಗುಡ್ಡದಲ್ಲಿ ನೀರಿನ ಬುಗ್ಗೆ ಉದ್ಭವ..!

  ದಕ್ಷಿಣ ಕನ್ನಡದಲ್ಲಿ ಭಾರೀ ಮಳೆಯಾಗುತ್ತಿದ್ದು ಸುಳ್ಯದ ಸಮೀಪ ಗುಡ್ಡ ಒಂದರಲ್ಲಿ ನೀರು ಉದ್ಭವಿಸಿದೆ. ಇದರಿಂದಾಗಿ ಗುಡ್ಡ ಕುಇಸಯುವ ಭೀತಿ ಎದುರಾಗಿದೆ. ಅಲ್ಲಲ್ಲಿ ನೀರಿನ ಬುಗ್ಗೆಗಳು ನಿರ್ಮಾಣಗೊಂಡು ಕಲ್ಲು, ಮಣ್ಣು, ಹಾಗೂ ಮರಗಳ ಬೇರಿನ ಸಮೇತ ಕೆಳಗಿನ ಪ್ರದೇಶಕ್ಕೆ ಕೊಚ್ಚಿಕೊಂಡು ಹರಿದು ಬಂದಿರುವುದನ್ನು ಗಮನಿಸಿದ ಸ್ಥಳೀಯರು ಭಯಭೀತರಾಗಿದ್ದಾರೆ.

 • Punjab district Ferozepur are facing a flood because Pakistan has released water

  Karnataka Districts7, Sep 2019, 3:34 PM IST

  ಕೊಡಗಿನಲ್ಲಿ ತಗ್ಗಿದ ಮಳೆ: ಪ್ರವಾಹ ಇಳಿಮುಖ

  ಕಳೆದ ಕೆಲವು ದಿನಗಳಿಂದ ಮಡಿಕೇರಿಯಲ್ಲಿ ಭಾರೀ ಮಳೆಯಾಗದ ಪರಿಣಾಮ ನದಿಗಳಲ್ಲಿ ಪ್ರವಾಹ ಹೆಚ್ಚಾಗಿತ್ತು. ಕೆಲವು ತಗ್ಗು ಪ್ರದೇಶಗಳು ಜಲಾವೃತವಾಗಿತ್ತು. ಆದರೆ ಇದೀಗ ಮಳೆ ಪ್ರಮಾಣ ಕಡಿಮೆಯಾಗಿ, ಪ್ರವಾಹ ಇಳಿಮುಖವಾಗಿರುವುದು ಜನರ ಆತಂಕ ಸ್ವಲ್ಪಮಟ್ಟಿಗೆ ದೂರ ಮಾಡಿದೆ.

 • Karnataka Districts7, Sep 2019, 11:59 AM IST

  ಚಾರ್ಮಾಡಿ ತಪ್ಪಲಲ್ಲಿ ನಿರಂತರ ಮಳೆ: ತಪ್ಪಿಲ್ಲ ಪ್ರವಾಹ ಭೀತಿ

  ಚಾರ್ಮಾಡಿಯಲ್ಲಿ ಸ್ವಲ್ಪಮಟ್ಟಿಗೆ ಕಡಿಮೆಯಾಗಿದ್ದ ಮಳೆ ಮತ್ತೆ ಅಬ್ಬರಿಸುತ್ತಿದೆ. ಬೆಳ್ಳಂಬೆಳಗೆಯೇ ಕಪ್ಪು ಮೋಡ ಆವರಿಸಿ, ಮಳೆಯಾಗುತ್ತಿದ್ದರೆ ಜನರಲ್ಲಂತೂ ಪ್ರವಾಹದ ದಿನಗಳ ನೆನಪೇ ಹುಟ್ಟಿಸುವಂತಿದೆ. ಪಶ್ವಿಮ ಘಟ್ಟದ ತಪ್ಪಲಿನಲ್ಲಿ ಧಾರಾಕಾರ ವರ್ಷಧಾರೆಯಾಗುತ್ತಿದ್ದು, ಪ್ರವಾಹ ಭೀತಿ ತಪ್ಪಿಲ್ಲ.

 • Bhadra Dam new

  Karnataka Districts7, Sep 2019, 9:55 AM IST

  ಭದ್ರಾವತಿ ಹೊಸಸೇತುವೆ ಮುಳುಗಡೆಗೆ ಕೆಲವೇ ಅಡಿ ಬಾಕಿ

  ಭದ್ರಾ ಜಲಾಶಯದಿಂದ ಸುಮಾರು 28 ಸಾವಿರ ಕ್ಯೂಸೆಕ್‌ ಹೆಚ್ಚುವರಿ ನೀರು ನದಿಗೆ ಹರಿ ಬಿಡಲಾಗಿದೆ. ಇದರಿಂದ ಹಳೇ ಸೇತುವೆ ಸಮೀಪ ಭದ್ರಾ ನದಿಯಲ್ಲಿರುವ ಸಂಗಮೇಶ್ವರ ದೇವಸ್ಥಾನ ಸಂಪೂರ್ಣ ಮುಳುಗಡೆಗೊಂಡಿತ್ತು. ಈ ಹಿನ್ನೆಲೆಯಲ್ಲಿ ಹೊಸಸೇತುವೆ ಕೂಡ ಮುಳುಗಡೆಯಾಗುವ ಲಕ್ಷಣ ಕಂಡು ಬಂದಿದೆ.

 • Kaveri River

  Karnataka Districts6, Sep 2019, 12:04 PM IST

  ಕೊಡಗು: ಅಪಾಯ ಮಟ್ಟ ಮೀರಿದ ಕಾವೇರಿ ಹರಿವು

  ಕೊಡಗಿನಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಕುಶಾಲನಗರ ವ್ಯಾಪ್ತಿಯಲ್ಲಿ ಕಾವೇರಿ ಅಪಾಯದ ಮಟ್ಟಮೀರಿ ಹರಿಯುತ್ತಿರುವ ದೃಶ್ಯ ಕಂಡುಬಂದಿದೆ. ಈಗಾಗಲೇ ಮಡಿಕೇರಿಯಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು, ಜನರು ಜಾಗೃತೆಯಲ್ಲಿರುವಂತೆ ಜಿಲ್ಲಾಡಳಿತ ಸೂಚಿಸಿದೆ.

 • Kalaburagi

  Karnataka Districts5, Sep 2019, 3:17 PM IST

  ಕಲಬುರಗಿ: ಭಾರೀ ಮಳೆಗೆ ನೆಲಕಚ್ಚಿದ ಪುರಾತನ ಕಟ್ಟಡ

  ಕಲಬುರಗಿಯಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಪುರಾತನ ಹುಡೈ ಕಟ್ಟಡ ಕುಸಿದು ಬಿದ್ದಿದೆ. ಅತ್ಯಂತ ಹಳೆಯ ಕಾಲದ ಕಟ್ಟಡ ಸುಂದರವಾಗಿದ್ದು, ಸುತ್ತಮುತ್ತಲಿನ ಜನರನ್ನು ಆಕರ್ಷಿಸುತ್ತಿತ್ತು. ಸತತವಾಗಿ ಸುರಿದ ಮಳೆಯಿಂದಾಗಿ ಕಟ್ಟಡ ಕುಸಿದು ಬಿದ್ದಿದೆ.

 • flood1

  Karnataka Districts5, Sep 2019, 2:39 PM IST

  ಉ. ಕನ್ನಡದಲ್ಲಿ ಮತ್ತೆ ಪ್ರವಾಹ: ವರುಣ ಸಾಕು ನಿಲ್ಲಿಸು ನಿನ್ನ ಪ್ರತಾಪ!

  ಕರಾವಳಿ, ಮಲೆನಾಡು, ಕೊಡಗಿನಲ್ಲಿ ಮತ್ತೆ ಭಾರೀ ಮಳೆಯಾಗುತ್ತಿದ್ದು ಈಗ ಉತ್ತರ ಕನ್ನಡದಲ್ಲಿಯೂ ಪ್ರವಾಹ ಭೀತಿ ಉಂಟಾಗಿದೆ. ಈಗಾಗಲೇ ಪ್ರವಾಹದಿಂದ ತತ್ತರಿಸಿರುವ ಉತ್ತರ ಕನ್ನಡಲ್ಲಿ ಮತ್ತೊಮ್ಮೆ ಶರಾವತಿ ಪ್ರವಾಹದಿಂದ ಮನೆಗಳಿಗೆ ನೀರು ನುಗ್ಗಿದ್ದು ಗಾಯದ ಮೇಲೆ ಬರೆ ಎಳೆದಂತಾಗಿದೆ.

 • heavy rain in theni and dinidgul

  Karnataka Districts4, Sep 2019, 2:29 PM IST

  ಚೌತಿ ಮಳೆ: ಕರಾವಳಿಯಲ್ಲಿ ಇನ್ನೂ ಮೂರು ದಿನ ಆರೆಂಜ್‌ ಅಲರ್ಟ್‌

  ದಕ್ಷಿಣ ಕನ್ನಡಲ್ಲಿ ಮಳೆ ಮುಂದುವರಿದಿದೆ. ಮೂರು ದಿನಗಳಿಂದ ಬಿರುಸಿನ ಮಳೆ ಸುರಿಯುತ್ತಿದ್ದು ಇನ್ನೂ ಮೂರು ದಿನಗಳ ಕಾಲ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಮುಂದಿನ ದಿನಗಳಲ್ಲಿ ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

 • heavy rain in 3 dist

  Karnataka Districts4, Sep 2019, 10:36 AM IST

  ಶಿವಮೊಗ್ಗ: ರಸ್ತೆ ಮೇಲೆ 2 ಅಡಿ ನೀರು, ಬಾಳೆಕೊಪ್ಪ ಸಂಪರ್ಕ ಸಂಪೂರ್ಣ ಕಡಿತ

  ಶಿವಮೊಗ್ಗದಲ್ಲಿ ಕಳೆದ ಮೂರು ದಿನಗಳಿಂದ ಭಾರೀ ಮಳೆಯಾಗುತ್ತಿದೆ. ಮಳೆಯ ಪರಿಣಾಮ ಹೊಸನಗರದಲ್ಲಿ ರಸ್ತೆಯ ಮೇಲೆ ಎರಡು ಅಡಿ ನೀರು ತುಂಬಿ ನಿಂತು ಬಾಳೆಕೊಪ್ಪ ಸಂಪರ್ಕ ಕಡಿತಗೊಂಡಿತ್ತು. ಹಾಗೆಯೇ ಸಂಪರ್ಕ ಕಡಿತಗೊಂಡಿದ್ದರಿಂದ ವಿದ್ಯಾರ್ಥಿಗಳು ಶಾಲೆಗೆ ಹೋಗಲು ಸಾಧ್ಯವಾಗಲಿಲ್ಲ.