ಮಗು

(Search results - 880)

ಬಾಬಯ

International6, Jul 2020, 6:30 PM

ತಂದೆಯಾದ 89ರ ವೃದ್ಧ: ವಯಾಗ್ರ ಬೇಕಿಲ್ಲ ಎಂದಾತನಿಗೆ DNA ಟೆಸ್ಟ್ ಮಾಡಲು ನೆಟ್ಟಿಗರ ಸಲಹೆ!

ತಂದೆಯಾಗುವ ಕ್ಷಣ ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲೂ ಮರೆಯಲಾಗದ ನೆನಪಾಗಿ ಉಳಿಯುತ್ತದೆ. ವಿಜ್ಞಾನ ಪುರುಷ ಹಾಗೂ ಸ್ತ್ರೀಯರಿಗೆ ಮಗುವಿಗೆ ಜನ್ಮ ನೀಡುವ ವಿಚಾರದಲ್ಲಿ ಕೆಲ ನಿಯಮಗಳನ್ನು ಮಾಡಿದೆ. ಇದರ ಅನ್ವಯ ಕೆಲ ವರ್ಷದ ಅವಧಿ ಬಳಿಕ ಮಹಿಳೆ ತಾಯಿಯಾಗಲು ಸಾಧ್ಯವಿಲ್ಲ. ಆದರೆ ಅತ್ತ ಪುರುಷರ ದೇಹ ಯಾವುದೇ ಹರೆಯದಲ್ಲಾದರೂ ಮಗು ಹುಟ್ಟಿಸಲು ತಯಾರಿರುತ್ತದೆ. ಆದರೆ ಇದಕ್ಕೂ ಕೆಲ ನಿಯಮಗಳಿವೆ. ಇತ್ತೀಚೆಗಷ್ಟೇ ಫಾರ್ಮುಲಾ ವನ್‌ನ ಮಾಜಿ ಮುಖ್ಯಸ್ಥ ಬರ್ನಿ ಎಕ್ಲೆಸ್ಟನೆ ತಾನು ತಂದೆಯಾಗಿದ್ದೇನೆಂಬ ವಿಚಾರವನ್ನು ಜನರೊಂದಿಗೆ ಜಹಂಚಿಕೊಂಡಿದ್ದಾರೆ. 89 ವರ್ಷ ಹರೆಯದಲ್ಲಿ ಒಂದು ಮಗುವಿನ ತಂದೆಯಾದ ಬರ್ನಿ ತಾನು ಇನ್ನೊಂದು ಮಗುವಿನ ತಂದೆಯಾಗ ಬಯಸಿದ್ದೇನೆ ಎಂದಿದ್ದಾರೆ. ಅವರ 35 ವರ್ಷದ ಹೆಂಡತಿ ಫಿಬಿಯಾನಾ ಫ್ಲಾಸಿ ಜೊತೆ ಇದು ಅವರ ಮೊದಲ ಮಗುವಾಗಿದೆ. ಈವರೆಗೆ ಬರ್ನಿ ಒಟ್ಟು ನಾಲ್ಕು ಮಕ್ಕಳ ತಂದೆಯಾಗಿದ್ದಾರೆ. ಇನ್ನು ಈ ವಯಸ್ಸಿನಲ್ಲಿ ತಂದೆಯಾದ ಬರ್ನಿ ತನ್ನ ಅನುಭವವನ್ನು ಜನರೊಂದಿಗೆ ಹಂಚಿಕೊಂಡಿದ್ದಾರೆ. ಇದರಲ್ಲಿ ಅವರು ಈ ಹಿರಿಯ ವಯಸ್ಸಲ್ಲಿ ತಂದೆಯಾಗಲು ಏನು ಮಾಡುತ್ತಾರೆಂದು ಬಹಿರಂಗಪಡಿಸಿದ್ದಾರೆ.

• Video Icon

state6, Jul 2020, 12:43 PM

ಅಮ್ಮನಿಗೆ ಕೊರೊನಾ, ಮಗು ICU ನಲ್ಲಿ; ಮನಕಲಕುತ್ತಿದೆ ಬಾಣಂತಿಯ ಮೂಕರೋದನೆ

ಕೊರೊನಾ ಸೃಷ್ಟಿಸಿದ ಕರುಳು ಹಿಂಡುವ ಘಟನೆಯಿದು. ಹೆತ್ತಮ್ಮನಿಗೆ ಕೊರೊನಾ ಸೋಂಕು. ಮಗು ಐಸಿಯುನಲ್ಲಿದೆ. ಮಗುವನ್ನು ನೋಡಲಾಗದೇ ಬಾಣಂತಿ ಮೂಕ ರೋದನೆ ಅನುಭವಿಸುತ್ತಿದ್ದಾರೆ. ಗದಗದಲ್ಲಿ ಕಂಡು ಬಂದ ದೃಶ್ಯವಿದು. ನಿನ್ನೆಯಷ್ಟೇ ಸೋಂಕಿತ ಮಹಿಳೆಗೆ ಹೆರಿಯಾಗಿದೆ. ತಾಯಿಗೆ ಕೋವಿಡ್ ಇರುವುದರಿಂದ ಮಗುವನ್ನು ತಾಯಿ ನೋಡಲಾಗುತ್ತಿಲ್ಲ. ಮಗುವಿನ ಕೊರೊನಾ ಟೆಸ್ಟ್ ಮಾಡಿದ್ದು, ವರದಿಗಾಗಿ ಕಾಯಲಾಗಿದೆ. ನಿಜಕ್ಕೂ ಇದು ಮನಕಲಕುವ ಘಟನೆ. ಆದಷ್ಟು ಬೇಗ ಮಗು ತಾಯಿಯ ಮಡಿಲು ಸೇರಿಕೊಳ್ಳಲಿ ಎಂಬುದು ಸುವರ್ಣ ನ್ಯೂಸ್ ಆಶಯ.

• Video Icon

state5, Jul 2020, 4:28 PM

17 ದಿನದ ಕಂದಮ್ಮನ ಅಂತ್ಯ ಸಂಸ್ಕಾರ: ಸ್ಮಶಾನ ಸಿಬ್ಬಂದಿ ಕರುಳೇ ಚುರಕ್

ಕೊರೊನಾ ತಂದಿಟ್ಟ ಸಂಕಷ್ಟವನ್ನು ನೋಡಿದರೆ ಮನಮಿಡಿಯುತ್ತದೆ. ಬೆಂಗಳೂರಿನಲ್ಲಿ 17 ದಿನದ ಕಂದಮ್ಮ ಕೊರೊನಾದಿಂದ ಸಾವನ್ನಪ್ಪಿದ್ದು, ಕೊನೆಯದಾಗಿ ಮಗುವಿನ ಮುಖವನ್ನೂ ತಾಯಿ ನೋಡಿಲ್ಲ. ತಂದೆ-ತಾಯಿ ಇಬ್ಬರಿಗೂ ಕೊರೊನಾ ಇರುವುದರಿಂದ ಕಾರ್ಯದಲ್ಲೂ ಭಾಗಿಯಾಗಿಲ್ಲ. ಹೆಬ್ಬಾಳದ ಚಿತಾಗಾರದಲ್ಲಿ ಅಂತ್ಯಕ್ರಿಯೆ ಮಾಡಲಾಯಿತು. ಸರ್ಕಾರಿ ಶುಲ್ಕವನ್ನು ಚಿತಾಗಾರ ನಿರ್ವಾಹಕ ಸುರೇಶ್ ಭರಿಸಿದ್ದಾರೆ.

• Woman4, Jul 2020, 5:43 PM

ಕೊರೋನಾ ವಾರಿಯರ್ ತುಂಬು ಗರ್ಭಿಣಿ ಪತ್ನಿ ಬಿಚ್ಚಿಟ್ಟ ಕರಾಳ ಸತ್ಯ!

ಕೋವಿಡ್ 19- ಸಾಂಕ್ರಾಮಿಕ ಸಂಕಷ್ಟ ಕಾಲದ ಗರ್ಭಿಣಿಯೊಬ್ಬಳ ಆತಂಕ, ಒಂಟಿಯಾಗಿರಬೇಕಾದ ಅನಿವಾರ್ಯತೆ, ಮಗುವಿನ ಭವಿಷ್ಯದ ಕನಸುಗಳು, ತನ್ನ ವಿವಾಹ ಜೀವನದ ನೆನಪುಗಳು, ಕೊರೋನಾ ವಾರಿಯರ್ ಆಗಿರುವ ವೈದ್ಯಪತಿಯ ಕಾಳಜಿ- ಎಲ್ಲದರ ಒಟ್ಟಾರೆ ರೂಪವೇ ಮಿಸಸ್ ಡಾ.ಕುಲಕರ್ಣಿ.

• Kukke Shri Subrahmanya Temple

Karnataka Districts4, Jul 2020, 8:16 AM

ಕುಕ್ಕೆ ಸುಬ್ರಮಣ್ಯ ದೇವಾಲಯದ ಸಿಬ್ಬಂದಿಗೆ ಕ್ವಾರೆಂಟೈನ್..!

ಕುಕ್ಕೆ ಸುಬ್ರಹ್ಮಣ್ಯ ದೇವಳ ನೌಕರನಿಗೆ ಶುಕ್ರವಾರ ಹೋಮ್‌ ಕ್ವಾರಂಟೈನ್‌ ಮಾಡಲಾಗಿದೆ. ನೌಕರನ ಎರಡು ವರ್ಷದ ಮಗುವಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ.

baby

International2, Jul 2020, 5:51 PM

ವಿಚಿತ್ರ ಮಗುವಿಗೆ ಜನ್ಮ ಕೊಟ್ಟ ಮಹಿಳೆ, ನೋಡುಗರಿಗೆ ಶಾಕ್!

ತಾಯಿಯೊಬ್ಬಳು ತನ್ನ ಮಗುವನ್ನು ಒಂಭತ್ತು ತಿಂಗಳಲ್ಲಿ ಹೊತ್ತು ಅದನ್ನು ಸ್ವಾಗತಿಸುವ ಸಮಯ ಆಕೆಗೆ ಅತ್ಯಂತ ಭಾವನಾತ್ಮಕವಾಗಿರುತ್ತದೆ. ಆದರೆ ಹಲವಾರು ಬಾರಿ ಆಕೆ ಒಂಭತ್ತು ತಿಂಗಳ ಬಳಿಕ ಕಣ್ಣೆದುರು ಕಾಣಿಸಿಕೊಳ್ಳುವ ದೃಶ್ಯ ಹೃದಯ ಛಿದ್ರಗೊಳಿಸುವತಿರುತ್ತದೆ. ಉಜ್ಬೇಕಿಸ್ತಾನದ ಹಳ್ಳಿಯ ಮಹಿಳೆಯೊಬ್ಬಳು ಒಂಭತ್ತು ತಿಂಗಳು ತನ್ನ ಹೊಟ್ಟೆಯಲ್ಲಿ ಬೆಳೆದ ಮಗುವಿಗೆ ಜನ್ಮ ಕೊಟ್ಟು ಅದನ್ನು ನೋಡಿದಾಗ ಬೆಚ್ಚಿ ಬಿದ್ದಿದ್ದಾಳೆ. ಈ ಮಹಿಳೆಯ ಹೊಟ್ಟೆಯಲ್ಲಿ ಬೆಳೆದ ಮಗುವಿಗೆ ಒಂದು ಗುಪ್ತಾಂಗ ಎರಡು ತಲೆಗಳಿತ್ತು. ಸದ್ಯ ಈ ಮಗುವಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನಡೆಯುತ್ತಿದೆ. ಸದ್ಯ ಈ ಮಗುವಿನ ಚರ್ಚೆ ಇಡೀ ಹಳ್ಳಿಯಲ್ಲಿ ಚರ್ಚೆಗೆ ಕಾರಣವಾಗಿದೆ.

Baby

Karnataka Districts2, Jul 2020, 10:17 AM

ಕೊಡಗಿನಲ್ಲಿ ಮೂರು ತಿಂಗಳ ಮಗು ಸೇರಿ 13 ಮಂದಿಗೆ ಸೋಂಕು

ಕೊಡಗು ಜಿಲ್ಲೆಯಲ್ಲಿ ಬುಧವಾರ ಕೊರೋನಾ ಸೋಂಕಿನ 13 ಹೊಸ ಪ್ರಕರಣಗಳು ಪತ್ತೆಯಾಗಿದ್ದು ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಅರ್ಧ ಶತಕವನ್ನು ಮೀರಿದೆ.

• Cine World1, Jul 2020, 7:06 PM

ತಾಯಿ, ತಂದೆ ನನ್ನ ಮಗುವನ್ನು ನೋಡಬೇಕು: ಸಲ್ಮಾನ್‌ ಖಾನ್‌

ಬಾಲಿವುಡ್‌ನ ಬಾಡ್‌ಬಾಯ್‌ ಎಂದೇ ಫೇಮಸ್‌ ಆಗಿರುವ ಸಲ್ಮಾನ್ ಖಾನ್‌ ಮದುವೆ ವಿಷಯ ಯಾವಾಗಾಲೂ ಚರ್ಚೆಯಾಗುತ್ತಲೇ ಇರುತ್ತದೆ. ಸಲ್ಲು ಲೈಫ್‌ನಲ್ಲಿ ಆಗಾಗ ಹಲವು ಕ್‌ಅಪ್‌ ಹಾಗೂ  ಬ್ರೇಕ್‌ಅಪ್‌ಗಳು ಸದ್ದು ಮಾಡುತ್ತಿರುತ್ತವೆ. ಆದರೂ ಇನ್ನೂ ಜೀವನ ಸಂಗಾತಿಯನ್ನು ಮಾತ್ರ ಆರಿಸಿಕೊಳ್ಳದೇ ಉಳಿದ್ದಾರೆ ಈ ನಟ. ಈಗ ಸಲ್ಮಾನ್‌ ತಂದೆಯಾಗಲು ರೆಡಿಯಾಗಿದ್ದಾರೆ ಎಂಬ ಸುದ್ದಿ ವೈರಲ್‌ ಆಗಿದೆ. ವರದಿಗಳ ಪ್ರಕಾರ ಬಾಲಿವುಡ್‌ನ ಹಲವು ಸೆಲೆಬ್ರೆಟಿಗಳ ಹಾಗೆ ಇವರೂ ಬಾಡಿಗೆ ತಾಯಿ ಮೂಲಕ ಮಗು ಪಡೆಯಲು ಪ್ಲಾನ್‌ ಮಾಡಿದ್ದಾರಂತೆ.

• Video Icon

Sandalwood1, Jul 2020, 5:35 PM

ರಾಧಿಕಾ ಮೂರನೇ ಮಗುವಿನಾ ನಿರೀಕ್ಷೆಯಲ್ಲಿದ್ದಾರಾ? ಥೋ ಏನೇನೋ ಅಂದ್ಕೊಬೇಡ್ರಪ್ಪಾ..!

ಸ್ಯಾಂಡಲ್‌ವುಡ್ ರಾಕಿಂಗ್ ಕಪಲ್ ಯಶ್ -ರಾಧಿಕಾ ಕೆಲದಿನಗಳಿಂದ ಸುದ್ದಿಯಲ್ಲಿದ್ದರು. ಇದಕ್ಕೆ ಕಾರಣ ಯಶ್ ಮಾಡಿರೋ ಟ್ವಿಟ್. ಈ ಟ್ವಿಟ್ ನೋಡಿ ಅಭಿಮಾನಿಗಳು ರಾಧಿಕಾ ಮತ್ತೆ ಗುಡ್ ನ್ಯೂಸ್ ಕೊಡ್ತಿದ್ದಾರಾ? ಮೂರನೇ ಮಗುವಿಗೆ ತಾಯಿಯಾಗುತ್ತಿದ್ದಾರೆ ಎಂದೆಲ್ಲ ಚರ್ಚೆ ಶುರು ಮಾಡಿದ್ದಾರೆ. ಇದಕ್ಕೀಗ ಯಶ್ ಉತ್ತರ ಕೊಟ್ಟಿದ್ದಾರೆ. ಯಾವಾಗಲೂ ಪಂಚಿಂಗ್ ಡೈಲಾಗ್ ಹೇಳುವ, ಪಂಚಿಂಗ್ ಸ್ಟೇಟ್‌ಮೆಂಟ್ ಕೊಡುವ ಯಶ್ ಈ ವಿಚಾರದಲ್ಲಿ ಕೊಟ್ಟಿರುವ ಸ್ಪಷ್ಟನೆ ಅಷ್ಟೇ ಸಖತ್ತಾಗಿದೆ. ಅಷ್ಟಕ್ಕೂ ರಾಧಿಕಾ ಮೂರನೇ ಮಗುವಿನಾ ನಿರೀಕ್ಷೆಯಲ್ಲಿದ್ದಾರಾ..!

• relationship1, Jul 2020, 3:52 PM

#Feelfree: ಮಗುವಾಗಿ ಎಷ್ಟು ಕಾಲದ ಬಳಿಕ ಪೀರಿಯಡ್ಸ್ ಆಗುತ್ತೆ?

ಕಾಂಡೋಮ್ ಅಥವಾ ಗರ್ಭ ನಿರೋಧಕ ಮಾತ್ರೆ ಸೇವಿಸಿಲ್ಲ. ಈಗ ಒಂಭತ್ತು ತಿಂಗಳಾದ ಮೇಲೂ ಪೀರಿಯಡ್ಸ್ ಆಗಿಲ್ಲದ್ದ ಕಂಡು ಭಯವಾಗುತ್ತಿದೆ. ನಾನೇನಾದರೂ ಮತ್ತೆ ಗರ್ಭ ಧರಿಸಿರಬಹುದಾ?

Coronavirus

Karnataka Districts1, Jul 2020, 7:12 AM

ಧಾರವಾಡ: ಒಂದು ದಿನದ ಮಗುವಿಗೆ ಕೋವಿಡ್‌, ಮತ್ತೆ 17 ಕೊರೋನಾ ಪಾಸಿಟಿವ್‌

ಜಿಲ್ಲೆಯಲ್ಲಿ ನಿತ್ಯವೂ ಕೋವಿಡ್‌ ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿದ್ದು, ಮಂಗಳವಾರ ಮತ್ತೆ 17 ಪ್ರಕರಣಗಳಾಗಿವೆ. ಈ ಮೂಲಕ ಒಟ್ಟು ಸಂಖ್ಯೆ 345ಕ್ಕೆ ಏರಿದೆ. ವಿಶೇಷ ಎಂದರೆ ಕೊರೋನಾ ವೈರಸ್‌ ಒಂದು ದಿನದ ಹಸಿಗೂಸಿಗೂ ಬಿಟ್ಟಿಲ್ಲ. ಪಿ- 14522 (1 ದಿನ ಹೆಣ್ಣು ಮಗು) ಹುಬ್ಬಳ್ಳಿ ತಾಲೂಕು ಉಮಚಗಿಯ, ಪಿ-10800 ಅವರ ನವಜಾತ ಶಿಶು.

baby

India30, Jun 2020, 9:46 AM

ಚಿಕಿತ್ಸೆ ಸಿಗದೇ ಬಲಿಯಾದ ಮಗು ಎದೆಗಪ್ಪಿಕೊಂಡು ಪೋಷಕರ ಆಕ್ರಂದನ!

ಕುತ್ತಿಗೆ ಊತ ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದ ಒಂದು ವರ್ಷದ ಮಗು| ಚಿಕಿತ್ಸೆಗೂ ಮುನ್ನವೇ ಆಸ್ಪತ್ರೆಯಲ್ಲೇ ಸಾವು| ಸಾವಿಗೀಡಾದ ಮಗುವನ್ನೆತ್ತಿ ಪೋಷಕರ ಆಕ್ರಂದನ

Coronavirus

Karnataka Districts29, Jun 2020, 7:09 AM

ಹುಬ್ಬಳ್ಳಿ: ಕೊರೋನಾ ಪಾಸಿಟಿವ್‌ ತುಂಬು ಗರ್ಭಿಣಿಗೆ ಶಸ್ತ್ರಚಿಕಿತ್ಸೆ, ಮುದ್ದಾದ ಮಗುವಿಗೆ ಜನ್ಮ ನೀಡಿದ ತಾಯಿ..!

ಕೋವಿಡ್‌ ಪಾಸಿಟಿವ್‌ ಸೋಂಕು ಕಾಣಿಸಿಕೊಂಡಿರುವ, ಹುಬ್ಬಳ್ಳಿ ತಾಲೂಕು ಉಮಚಗಿ ಗ್ರಾಮದ ತುಂಬು ಗರ್ಭಿಣಿಗೆ (ಪಿ-10800, 25 ವರ್ಷ) 39 ವಾರಗಳು ಹಾಗೂ 4 ದಿನಗಳು ಪೂರ್ಣಗೊಂಡಿದ್ದರೂ ಸಹಜ ಹೆರಿಗೆ ಸಾಧ್ಯವಿಲ್ಲದ ಲಕ್ಷಣಗಳಿದ್ದುದರಿಂದ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಿಸುವಲ್ಲಿ ಕಿಮ್ಸ್‌ ವೈದ್ಯರ ತಂಡ ಯಶಸ್ವಿಯಾಗಿದೆ.

Coronavirus

Video Icon

state28, Jun 2020, 12:56 PM

ಬಿಬಿಎಂಪಿ ಎಂಜಿನಿಯರ್‌ನ ಮಗುವಿಗೆ ಕೊರೊನಾ ಪಾಸಿಟಿವ್

ಬಿಬಿಎಂಪಿ ಇಂಜಿನಿಯರ್ 7 ವರ್ಷದ ಮಗುವಿಗೂ ಕೊರೊನಾ ಪಾಸಿಟಿವ್ ಬಂದಿದೆ. ಕಂಟೈನ್ಮೆಂಟ್ ಏರಿಯಾದಲ್ಲಿ ಈ ಎಂಜಿನೀಯರ್ ಕಲಸ ಮಾಡಿದ್ದರು. ತಂದೆಯಿಂದಲೇ ಮಗುವಿಗೆ ಬಂದಿರುವ ಸಾಧ್ಯತೆ ಇದೆ ಎನ್ನಲಾಗಿದ್ದು, ಎಂಜಿನೀಯರ್‌ ಅವರ ಸ್ವಾಬ್ ಟೆಸ್ಟ್‌ಗೆ ರವಾನೆ ಮಾಡಲಾಗಿದೆ. ಇದು ಬಿಬಿಎಂಪಿಗೆ ದೊಡ್ಡ ಟೆನ್ಷನ್ ತಂದಿಟ್ಟಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!

Coronavirus

Karnataka Districts28, Jun 2020, 8:40 AM

ಹಾವೇರಿ: 9 ತಿಂಗಳ ಮಗುವಿಗೆ ವಕ್ಕರಿಸಿದ ಮಹಾಮಾರಿ ಕೊರೋನಾ

ಜಿಲ್ಲೆಯಲ್ಲಿ ಶನಿವಾರ 9 ತಿಂಗಳ ಗಂಡು ಮಗುವಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಜಿಲ್ಲೆಯಲ್ಲಿ ಈ ವರೆಗೆ 56 ಕೋವಿಡ್‌ ಪಾಸಿಟಿವ್‌ ಪ್ರಕರಣ ಪತ್ತೆಯಾಗಿದ್ದು, ಈ ಪೈಕಿ 25 ಜನರು ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 31 ಪ್ರಕರಣಗಳು ಸಕ್ರಿಯವಾಗಿವೆ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ತಿಳಿಸಿದ್ದಾರೆ.