Search results - 300 Results
 • Anjaneya

  NEWS14, Nov 2018, 4:53 PM IST

  ಮಂಗಳಾರತಿ ವೇಳೆ ಪವಾಡ; ದರ್ಶನ ನೀಡಿದ ಹೊಳೆ ಆಂಜನೇಯಸ್ವಾಮಿ

  ಮದ್ದೂರು ತಾಲೂಕಿನ ಹೊಳೆ ಆಂಜನೇಯಸ್ವಾಮಿ ದೇವಾಲಯದಲ್ಲಿ ಅಚ್ಚರಿ ಘಟನೆ ನಡೆದಿದೆ. ಅಲಂಕಾರಕ್ಕೆಂದು ಹಾಕಲಾಗಿದ್ದ ಬೆಳ್ಳಿಯ ಮುಖವಾಡ ಕಳಚಿದಾಗ ಮೂಲ ಸ್ವರೂಪದ ದರ್ಶನ ನೀಡಿದ್ದಾರೆ ಹೊಳೆ ಆಂಜನೇಯಸ್ವಾಮಿ.  ವಿಶ್ವವಲ್ಲಭ ತೀರ್ಥ ಸ್ವಾಮೀಜಿ ದೇವರಿಗೆ ಮಂಗಳಾರತಿ ಮಾಡುವಾಗ ಈ ಅಚ್ಚರ ಘಟನೆ ನಡೆದಿದೆ. ಅದರ ವಿಡಿಯೋ ಇಲ್ಲಿದೆ ನೋಡಿ. 

 • Karnataka Byelections

  NEWS6, Nov 2018, 6:36 PM IST

  ಅಪ್ಪ-ಮಗ, ಅಪ್ಪ-ಮಗ, ಗಂಡ-ಹೆಂಡತಿ...ಸದ್ಯದ ಸ್ಥಿತಿ!

  ಕುತೂಹಲ ಕೆರಳಿಸಿದ್ದ ಕರ್ನಾಟಕದ 3 ಲೋಕಸಭೆ ಮತ್ತು 2 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಬಿಜೆಪಿ ಒಂದು ಕ್ಷೇತ್ರದಲ್ಲಿ ಜಯಗಳಿಸಿದರೆ, ಉಳಿದ 4 ಕ್ಷೇತ್ರಗಳಲ್ಲಿ ಕಾಂಗ್ರೆಸ್‌-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಗಳು ಗೆದ್ದಿದ್ದಾರೆ. ಆದರೆ ಇಲ್ಲಿಯೂ ಮತ್ತೆ ಕುಟುಂಬ ರಾಜಕಾರಣವೇ ಮುಂಚೂಣಿಯಲ್ಲಿರುವುದನ್ನು ಒಪ್ಪಿಕೊಳ್ಳಲೇಬೇಕು.

 • NEWS6, Nov 2018, 1:27 PM IST

  ಗೌಡರ ಮನೆಯಲ್ಲಿ ಇರೋರಿಗಿಂತ ವಿಧಾನಸಭೆಯಲ್ಲಿ ಇರೋರೆ ಹೆಚ್ಚು!

  ಉಪಚುನಾವಣೆ ಫಲಿತಾಂಶ ಹೊರಬಿದ್ದಿದೆ. ದೋಸ್ತಿ ಸರಕಾರ ಗೆಲುವಿನ ನಗೆ ಬೀರಿದ್ದು ಬಿಜೆಪಿಗೆ ಮುಖಭಂಗವಾಗಿದೆ. ರಾಮನಗರದಿಂದ ಅನಿತಾ ಕುಮಾರಸ್ವಾಮಿ ಗೆಲುವು ಸಾಧಿಸಿದ್ದು ದೇವೇಗೌಡರ ಕುಟುಂಬದ ಮತ್ತೊಬ್ಬರು ವಿಧಾನಸಭೆ ಪ್ರವೇಶ ಮಾಡಿದ್ದಾರೆ.

 • shivarame gowda

  POLITICS6, Nov 2018, 12:00 PM IST

  ಮಂಡ್ಯ ಲೋಕಸಭೆ: ಗೆಲುವು ಒಂದು, ದಾಖಲೆ ಎರಡು..!

  ನಿರೀಕ್ಷೆಯಂತೆ ಮಂಡ್ಯ ಲೋಕಸಭಾ ಉಪ ಚುನಾವಣೆಯಲ್ಲಿ ಜೆಡಿಎಸ್​ ಅಭ್ಯರ್ಥಿ ಎಲ್.ಆರ್.​ಶಿವರಾಮೇಗೌಡ ಅವರು ಬಿಜೆಪಿ ಅಭ್ಯರ್ಥಿ ಡಾ.ಸಿದ್ದರಾಮೇಗೌಡರ ವಿರುದ್ಧ ಭಾರೀ ಮತಗಳ ಅಂತರದಿಂದ  ಜಯಗಳಿಸಿದ್ದಾರೆ.  
   

 • Shivarame Gowda

  POLITICS6, Nov 2018, 11:13 AM IST

  ಮಂಡ್ಯ ಉಪಚುನಾವಣೆ: ಅಂಬರೀಶ್ ದಾಖಲೆ ಮುರಿದ ಶಿವರಾಮೇಗೌಡ

  ಮತ ಎಣಿಕೆಯ 8ನೇ ಸುತ್ತಿ ಮುಕ್ತಾಯದ ವೇಳೆಗೆ ಜೆಡಿಎಸ್ 2,66,806 ಮತ ಪಡೆದುಕೊಂಡರೆ, ಬಿಜೆಪಿ 1,02,470 ಮತಗಳಿಗೆ ಸಮಾಧಾನ ಪಟ್ಟುಕೊಂಡಿದೆ.  ಈ ಮೂಲಕ ಶಿವರಾಮೇಗೌಡ ಅವರು ಅಂಬರೀಶ್ ದಾಖಲೆ ಉಡೀಸ್ ಮಾಡಿದ್ದಾರೆ.

 • Shanvi

  Sandalwood6, Nov 2018, 10:30 AM IST

  ಈ ಸಲ ದೀಪಾವಳಿ, ರವಿಚಂದ್ರ ಶೂಟಿಂಗ್‌ನಲ್ಲಿ; ಶಾನ್ವಿ ಶ್ರೀವಾಸ್ತವ್

  ನಾನೀಗ ಮೈಸೂರಿನಲ್ಲಿದ್ದೇನೆ. ‘ರವಿಚಂದ್ರ’ ಚಿತ್ರದ ಶೂಟಿಂಗ್ ಬ್ಯುಸಿ. ಈ ಬಾರಿಯ ದೀಪಾವಳಿ ಆಚರಣೆ ಮೈಸೂರು, ಮಂಡ್ಯ, ಶ್ರೀರಂಗಪಟ್ಟಣ ಸುತ್ತಮುತ್ತಲ ಸುತ್ತಾಟದ ಮೂಲಕ. 

 • Kannada Rajyothsava

  NEWS5, Nov 2018, 9:19 AM IST

  ಟೋಕಿಯೋದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

  ಟೋಕಿಯೋದಲ್ಲಿ ಕನ್ನಡದ ಕಂಪು ಹರಡಿದೆ. ಅಲ್ಲಿನ ಕನ್ನಡ ಬಳಗ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಿದೆ. ಕನ್ನಡದ ಕಂಪಿಗೆ ಮಂಡ್ಯ ರಮೇಶ್ ಸಾಕ್ಷಿಯಾಗಿದ್ದಾರೆ. 

 • By Election

  NEWS3, Nov 2018, 7:45 PM IST

  5 ಉಪಚುನಾವಣೆ ಮತದಾನ ಅಂತ್ಯ: ಯಾವ ಕ್ಷೇತ್ರದಲ್ಲಿ ಎಷ್ಟು ಮತದಾನ?

  ಮೂರು ಲೋಕಸಭೆ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳು ಸೇರಿ ಒಟ್ಟು ಐದು ಕ್ಷೇತ್ರಗಳ ಉಪಚುನಾವಣೆ ಮತದಾನ ಮುಕ್ತಾಯವಾಗಿದೆ.

 • Ramya

  NEWS3, Nov 2018, 6:57 PM IST

  ಮತ್ತೆ ಮತದಾನದ ಹಕ್ಕು ಮರೆತ ರಮ್ಯಾ: ಏಕೆ ಇಷ್ಟು ಅಸಡ್ಡೆ?

  ಬಿಜೆಪಿ ಹಾಗೂ ಪ್ರಧಾನಿ ಮೋದಿ ವಿರುದ್ಧ ಟ್ವೀಟ್​ ಮಾಡುತ್ತಾ ಸದಾ ವಿವಾದಾತ್ಮಕವಾಗಿ ಸುದ್ದಿಯಾಗುವ ಎಐಸಿಸಿ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ರಮ್ಯಾ ಈ ಬಾರಿಯೂ ಮತದಾನದ ಹಕ್ಕನ್ನು ಮರೆತಿದ್ದಾರೆ.

 • By election

  NEWS3, Nov 2018, 12:27 PM IST

  ಉಪ ಸಮರ: ಎಲ್ಲೆಲ್ಲಿ ಹೇಗಾಗ್ತಿದೆ ಮತದಾನ?

  ಕರ್ನಾಟಕದ ಮಂಡ್ಯ, ಶಿವಮೊಗ್ಗ ಹಾಗೂ ಬಳ್ಳಾರಿ ಲೋಕಸಭಾ ಕ್ಷೇತ್ರಗಳು ಹಾಗೂ ಜಮಖಂಡಿ ಮತ್ತು ರಾಮನಗರ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯುತ್ತಿದ್ದು, ಎಲ್ಲೆಲ್ಲಿ, ಹೇಗಿದೆ ಪರಿಸ್ಥಿತಿ?

 • NEWS3, Nov 2018, 12:14 PM IST

  ಮಂಡ್ಯ ಉಪಚುನಾವಣೆ: ಕಬ್ಬು ಬೆಳೆಗಾರರಿಂದ ಮತದಾನ ಬಹಿಷ್ಕಾರ

  ಮಂಡ್ಯ ಲೋಕಸಭಾ ಉಪ ಚುನಾವಣೆಯಲ್ಲಿ ಕಬ್ಬು ಬೆಳೆಗಾರರು ಮತದಾನ ಬಹಿಷ್ಕಾರ ಮಾಡಿದ್ದಾರೆ. ಎನ್ಎಸ್ಎಲ್ ಕಾರ್ಖಾನೆಗೆ ಕಬ್ಬು ಪೂರೈಸುವ ರೈತರು ಮತದಾನಕ್ಕೆ ಬಹಿಷ್ಕಾರ ಹಾಕಿದ್ದಾರೆ.

 • NEWS3, Nov 2018, 11:53 AM IST

  ’ಕೈ’ ಗೆ ಗುಡ್‌ಬೈ ಹೇಳಿ ತೆನೆ ಹೊರುತ್ತಾರಾ ಅಂಬರೀಶ್?

  ಮಂಡ್ಯ ಲೋಕಸಭಾ ಉಪಚುನಾವಣೆಯ ಮತದಾನ ಬಳಿಕ ನಟ ಅಂಬರೀಶ್ , ಈ ಚುನಾವಣೆಯಲ್ಲಿ ಉತ್ಸಾಹವೇ ಇಲ್ಲ. ನಮ್ಮ ತಮ್ಮಣ್ಣ ಅವರ ಊರು ಅಂತ ಇಲ್ಲಿ ಉತ್ಸಾಹ ಇದೆ. 11 ನೇ ತಾರೀಖು ಬನ್ನಿ ಎಲ್ಲ ಹೇಳ್ತಿನಿ ಎಂದು ನಗೆ ಚಟಾಕಿ ಹಾರಿಸಿದ್ದಾರೆ ಅಂಬರೀಶ್. 

 • Dr Siddaramaiah

  NEWS3, Nov 2018, 11:24 AM IST

  ಮಂಡ್ಯ ಬಿಜೆಪಿ ಅಭ್ಯರ್ಥಿಗೆ ಶಾಕ್ : ದೂರಿಗೆ ನಿರ್ಧಾರ

  ಈಗಾಗಲೇ ರಾಮನಗರ ಬಿಜೆಪಿ ಅಭ್ಯರ್ಥಿ ಕಣದಿಂದ ಹಿಂದೆ ಸರಿದು ಬಿಜೆಪಿ ಶಾಕ್ ನೀಡಿದ್ದಾರೆ. ಇದೇ ವೇಳೆ ಮಂಡ್ಯ ಬಿಜೆಪಿ ಅಭ್ಯರ್ಥಿ ನಿವೃತ್ತರಾಗಿದ್ದಾರೆ ಎಂದು ಬೇಳೂರು ಗೋಪಾಲಕೃಷ್ಣ ಹೇಳಿದ್ದು ಅವರ ವಿರುದ್ಧ ದೂರು ನೀಡುವುದಾಗಿ ಹೇಳಿದ್ದಾರೆ. 

 • ramya

  NEWS3, Nov 2018, 11:21 AM IST

  ರಮ್ಯಕ್ಕಾ, ಎಲ್ಲಿದ್ದೀಯಕ್ಕ? ಇವತ್ತಾದ್ರೂ ಬಂದು ವೋಟ್ ಮಾಡಕ್ಕಾ!

  ಮಂಡ್ಯ (ನ. 03): ರಮ್ಯಾ ಈ ಬಾರಿಯ ಚುನಾವಣೆಯಲ್ಲೂ ಮತದಾನ ಮಾಡುವುದು ಬಹುತೇಕ ಅನುಮಾನ. ನಗರಸಭೆ, ವಿಧಾನಸಭೆ ಚುನಾವಣೆಯಲ್ಲೂ ಮತದಾನ ಮಾಡದೇ ತಪ್ಪಿಸಿಕೊಂಡಿದ್ದರು. ಈ ಬಾರಿಯಾದರೂ ಮತದಾನ ಮಾಡಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ ಈ ಬಾರಿಯೂ ಮಾಡುವುದು ಅನುಮಾನವಾಗಿದೆ.  

 • By Election

  NEWS3, Nov 2018, 10:02 AM IST

  ಬಳ್ಳಾರಿ : ಗಣಿ ನೆಲದಲ್ಲಿ ಅರಳುತ್ತಾ ಕಮಲ?

  ಮಂಡ್ಯ, ಶಿವಮೊಗ್ಗ, ಬಳ್ಳಾರಿ, ರಾಮನಗರ, ಜಮಖಂಡಿ ವಿಧಾನಸಭಾ ಕ್ಷೇತ್ರಗಳಿಗೆ ಇಂದು ಉಪಚುನಾವಣೆ ನಡೆಯುತ್ತಿದೆ. ಬಳ್ಳಾರಿ ಮತದಾರರ ಲೆಕ್ಕಾಚಾರ ಹೇಗಿದೆ ಇಲ್ಲಿದೆ ಸಂಪೂರ್ಣ ಮಾಹಿತಿ.