ಮಂಗಳೂರು ಗೋಲಿಬಾರ್  

(Search results - 28)
 • Golibar

  Karnataka Districts18, Jun 2020, 9:01 AM

  ಮಂಗಳೂರು ಗೋಲಿಬಾರ್‌: ನಾಲ್ಕು ಚಾರ್ಜ್‌ಶೀಟ್ ಸಲ್ಲಿಕೆ

  ರಾಜ್ಯದಲ್ಲಿ ತೀವ್ರ ಸಂಚಲನಕ್ಕೆ ಕಾರಣವಾದ ಮಂಗಳೂರು ಗೋಲಿಬಾರ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ನಾಲ್ಕು ಚಾಜ್‌ರ್‍ ಶೀಟ್‌ಗಳನ್ನು ಮಂಗಳೂರಿನ 2ನೇ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಲಾಗಿದೆ.

 • Karnataka Districts13, Mar 2020, 12:57 PM

  ಮಂಗಳೂರು ಗೋಲಿಬಾರ್‌: 1000 ಪುಟಗಳ ದಾಖಲೆ ಸಲ್ಲಿಕೆ

  ಮಂಗಳೂರು ಗಲಭೆ ಹಾಗೂ ಗೋಲಿಬಾರ್‌ಗೆ ಸಂಬಂಧಿಸಿ ನಗರ ಪೊಲೀಸ್‌ ಕಮಿಷನರ್‌ ಅವರು ಒಂದು ಸಾವಿರ ಪುಟಗಳ ಸಾಕ್ಷ್ಯ ದಾಖಲೆಗಳನ್ನು ತನಿಖಾ ಆಯೋಗಕ್ಕೆ ಸಲ್ಲಿಸಿದ್ದಾರೆ.

 • Kazi in Twaka Ahmed

  Karnataka Districts10, Mar 2020, 12:17 PM

  ಮಂಗಳೂರು ಗೋಲಿಬಾರ್‌: ಬೆದರಿಕೆ ಕರೆಯ ಮಾಹಿತಿ ನೀಡಿದ ಖಾಝಿ

  ಮಂಗಳೂರು ಖಾಝಿ ತ್ವಾಕಾ ಅಹ್ಮದ್‌ ಮುಸ್ಲಿಯಾರ್‌ ಅವರು ಜೀವ ಬೆದರಿಕೆ ಕರೆ ಬಂದ ಬಗ್ಗೆ ಮಾಹಿತಿ ನೀಡಿದ್ದಾರೆ. ಮುಂದಿನ ತನಿಖೆ 12ರಂದು ನಡೆಯಲಿದೆ ಎಂದು ತನಿಖಾಧಿಕಾರಿಯಾಗಿರುವ ಉಡುಪಿ ಜಿಲ್ಲಾಧಿಕಾರಿ ಜಗದೀಶ್‌ ತಿಳಿಸಿದ್ದಾರೆ.

 • Golibar

  Karnataka Districts5, Mar 2020, 8:09 AM

  ಮಂಗಳೂರು ಗೋಲಿಬಾರ್‌: ಪೊಲೀಸ್‌ ಕಮಿಷನರ್‌ಗೆ ನೋಟಿಸ್‌

  ಡಿ.19ರಂದು ಮಂಗಳೂರಿನಲ್ಲಿ ನಡೆದ ಹಿಂಸಾಚಾರ ಮತ್ತು ಗೋಲಿಬಾರ್‌ ಘಟನೆಗೆ ಸಂಬಂಧಿಸಿ ಇಲ್ಲಿನ ಸಹಾಯಕ ಆಯುಕ್ತರ ಕಚೇರಿಯಲ್ಲಿ ಬುಧವಾರ ನಡೆದ ಮ್ಯಾಜಿಸ್ಟ್ರೀರಿಯಲ್‌ ವಿಚಾರಣೆಯಲ್ಲಿ ಎಸಿಪಿ ಸಹಿತ 29 ಪೊಲೀಸರು ಹಾಜರಾಗಿ ಸಾಕ್ಷ್ಯ ಸಲ್ಲಿಸಿದ್ದರು. ಇದೀಗ ಪೊಲೀಸ್ ಕಮಿಷನರ್‌ಗೂ ನೋಟಿಸ್ ಕಳುಹಿಸಲಾಗಿದೆ.

 • Golibar

  Karnataka Districts26, Feb 2020, 10:16 AM

  ಮಂಗಳೂರು ಗೋಲಿಬಾರ್‌: ಮಾರ್ಚ್ 4ಕ್ಕೆ ಪೊಲೀಸರ ವಿಚಾರಣೆ

  ಮಂಗಳೂರು ಗಲಭೆ ಹಾಗೂ ಗೋಲಿಬಾರ್‌ ಘಟನೆಗೆ ಸಂಬಂಧಿಸಿ ಮಂಗಳವಾರ ನಗರದ ಎಸಿ ಕಚೇರಿ ಕೋರ್ಟ್‌ನಲ್ಲಿ ನಡೆದ ಮ್ಯಾಜಿಸ್ಟ್ರೀರಿಯಲ್‌ ತನಿಖೆಯಲ್ಲಿ ಪೊಲೀಸ್‌ ಇಲಾಖೆ ಪರವಾದ ಸಾಕ್ಷ್ಯವನ್ನು ಸಲ್ಲಿಸಲಾಯಿತು. ಪೊಲೀಸರ ವೈಯಕ್ತಿಕ ಸಾಕ್ಷ್ಯ ಸಲ್ಲಿಕೆಗೆ ಮಾಚ್‌ರ್‍ 4ರಂದು ಅವಕಾಶ ನೀಡಲಾಗಿದೆ.

 • Mangalore

  Karnataka Districts20, Feb 2020, 2:08 PM

  ಮಂಗಳೂರು ಗೋಲಿಬಾರ್: ಕಮಿಷನರ್ ಸೇರಿ 176 ಪೊಲೀಸರಿಗೆ ನೋಟಿಸ್

  ಮಂಗಳೂರು ನಗರ ಪೊಲೀಸ್‌ ಆಯುಕ್ತ ಡಾ. ಪಿ.ಎಸ್‌. ಹರ್ಷ ಮತ್ತು ಡಿಸಿಪಿ ಅರುಣಾಂಶಗಿರಿ ಸೇರಿದಂತೆ 176 ಪೊಲೀಸ್‌ ಅಧಿಕಾರಿ ಹಾಗೂ ಸಿಬ್ಬಂದಿಗೆ ನೋಟಿಸ್‌ ಜಾರಿಗೊಳಿಸಲಾಗುವುದು ಎಂದು ಉಡುಪಿ ಜಿಲ್ಲಾಧಿಕಾರಿಯೂ ಆಗಿರುವ ಮ್ಯಾಜಿಸ್ಟೀರಿಯಲ್‌ ತನಿಖಾಧಿಕಾರಿ ಜಗದೀಶ್‌ ತಿಳಿಸಿದ್ದಾರೆ.

 • Mangalore Golibar

  Karnataka Districts19, Feb 2020, 2:33 PM

  ಮಂಗಳೂರು ಗೋಲಿಬಾರ್: ಇಲ್ಲಿವೆ ಕಲ್ಲೆಸೆದವರ ಫೋಟೋಸ್

  ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಮಂಗಳೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಕಲ್ಲೆಸೆತ ನಡೆದಿತ್ತು. ನಂತರದಲ್ಲಿ ಪೊಲೀಸರು ಗೋಲಿಬಾರ್ ನಡೆಸಿದ್ದರು. ಶಾಂತಿಯುತವಾಗಿ ನಡೆಯುತ್ತಿದ್ದ ಪ್ರತಿಭಟನೆ ಹಠಾತ್ತನೆ ಹಿಂಸೆಗೆ ತಿರುಗಿ ಇಬ್ಬರು ಯುವಕರು ಮೃತಪಟ್ಟಿದ್ದರು. ಘಟನೆ ಸಂಬಂಧ ವಿಸ್ತೃತ ತನಿಖೆ ನಡೆಯುತ್ತಿದ್ದು, ಇದೀಗ ಘಟನೆಯಲ್ಲಿ ಕಲ್ಲೆಸದವರು ಯಾರ್ಯಾರು ಎಂಬುದು ಬಯಲಾಗಿದೆ. ಘಟನೆಯಲ್ಲಿ ಕಲ್ಲೆಸೆದವರ ಫೋಟೋಸ್ ಇಲ್ಲಿವೆ.

 • Golibar

  Karnataka Districts17, Feb 2020, 10:11 AM

  ಮಂಗಳೂರು ಗೋಲಿಬಾರ್‌: ವಿಡಿಯೋ ಸಾಕ್ಷ್ಯ ಸಲ್ಲಿಸಲು ಮತ್ತೊಂದು ಅವಕಾಶ

  ಮಂಗಳೂರು ನಗರ ಕಮಿಷನರೇಟ್‌ ವ್ಯಾಪ್ತಿಯಲ್ಲಿ 2019 ಡಿಸೆಂಬರ್‌ 19ರಂದು ನಡೆದ ಘಟನೆಯ ಬಗ್ಗೆ ಮ್ಯಾಜಿಸ್ಟಿರಿಯಲ್‌ ವಿಚಾರಣೆ ಉಡುಪಿ ಜಿಲ್ಲಾಧಿಕಾರಿಗಳಿಂದ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಅಂದಿನ ಘಟನೆ ಬಗ್ಗೆ ಯಾವುದೇ ಸಾರ್ವಜನಿಕರು ಹಾಗೂ ಪತ್ರಿಕೆ/ವಾರ್ತಾ ಮಾಧ್ಯಮದವರ ಬಳಿ ವಿಡಿಯೋ ತುಣುಕುಗಳು ಇದ್ದಲ್ಲಿ ಫೆ.19ರಂದು ಹಾಜರುಪಡಿಸಲು ಅವಕಾಶ ನೀಡಲಾಗಿದೆ.

 • Golibar

  Karnataka Districts7, Feb 2020, 7:51 AM

  ಮಂಗಳೂರು ಗೋಲಿಬಾರ್: ವಿಡಿಯೋ ಸಾಕ್ಷಿ ನೀಡಲು ಮಾಧ್ಯಮಗಳಿಗೆ ಸೂಚನೆ

  ಮಂಗಳೂರು ಗೋಲಿಬಾರ್ ಬಗ್ಗೆ ಮೌಖಿಕವಾಗಿ ಸಾಕ್ಷಿ ಹೇಳಿಕೆ ನೀಡಲು ಬಂದಿದ್ದ 8 ಮಂದಿಗೆ ಫೆ. 13ರಂದು ಅಫಿದಾವಿತ್‌ ಸಮೇತ ಬಂದು ಸಾಕ್ಷಿ ಹೇಳಿಕೆ ನೀಡಲು ಅವಕಾಶ ನೀಡಲಾಗಿದೆ. ಇದೇ ವೇಳೆ ಪೊಲೀಸರು ತಮ್ಮ ಬಳಿ ಇರುವ ವೀಡಿಯೋ ಮತ್ತು ಸಿಸಿ ಕ್ಯಾಮರಾ ಸಾಕ್ಷಿಗಳನ್ನು ಅಂದು ಹಾಜರು ಪಡಿಸುವಂತೆ ಸೂಚಿಸಲಾಗಿದೆ.

 • Golibar

  Karnataka Districts6, Feb 2020, 3:02 PM

  ಮಂಗಳೂರು ಗೋಲಿಬಾರ್: ಸಾಕ್ಷಿ ಹೇಳೋಕೆ ಬಂದ್ರು ಅಪಾರ ಜನ

  ಮಂಗಳೂರು ಗಲಭೆಗೆ ಸಂಬಂಧಿಸಿ ಈ ಹಿಂದೆ ಸಾರ್ವಜನಿಕರಿಗೆ ಸಾಕ್ಷಿ ಹೇಳಲು ಅವಕಾಶ ನೀಡಲಾಗಿತ್ತು. ಆಗ ಹೆಚ್ಚಿನ ಸಂಖ್ಯೆಯಲ್ಲಿ ಜನ ಸಾಕ್ಷಿ ಹೇಳಲು ಬಂದಿದ್ದರು. ಇದೀಗ ಮತ್ತೊಮ್ಮೆ ಅವಕಾಶ ನೀಡಲಾಗಿದ್ದು, ಜನ ಅಪಾರ ಸಂಖ್ಯೆಯಲ್ಲಿ ಸಾಕ್ಷಿ ಹೇಳಲು ಆಗಮಿಸಿದ್ದಾರೆ.

   

 • Golibar

  Karnataka Districts5, Feb 2020, 9:44 AM

  'ಮಂಗ್ಳೂರು ಗೋಲಿಬಾರ್ ಸಂಬಂಧ ಬಂದ ದೂರುಗಳೆಷ್ಟು..'?

  ಮಂಗಳೂರು ಗೋಲಿಬಾರ್‌ ಘಟನೆಗೆ ಸಂಬಂಧಿಸಿದಂತೆ ದಾಖಲಾದ ದೂರುಗಳ ಸಂಬಂಧ ಕೈಗೊಂಡ ಕ್ರಮಗಳ ಕುರಿತು ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಮಂಗಳವಾರ ನಿರ್ದೇಶಿಸಿದೆ.

 • Mangaluru
  Video Icon

  Karnataka Districts4, Feb 2020, 7:09 PM

  ಮಂಗಳೂರು ಗೋಲಿಬಾರ್; ಎಸ್‌ಐಟಿ ಮಾಡಿ ಎಂದವರೆ ಅಪರಾಧ ಹಿನ್ನಲೆ ಉಳ್ಳವರು!

  ಮಂಗಳೂರು ಗೋಲಿಬಾರ್ ಸಂಬಂಧ ವಿಶೇಷ ತನಿಖಾ ತಂಡದಿಂದ ತನಿಖೆ ನಡೆಯಬೇಕು ಎಂದು ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕಾರ ಮಾಡಲಾಗಿದೆ. ಈಗಾಗಲೇ ಸಿಐಡಿ ತನಿಖೆ ನಡೆಯುತ್ತಿದ್ದು ಪ್ರತ್ಯೇಕ ತಂಡ ರಚಿಸಿ ತನಿಖೆ ಮಾಡುವ ಅಗತ್ಯ ಇಲ್ಲ ಎಂದು ನ್ಯಾಯಾಲಯ ಹೇಳಿದೆ.

 • Mangalore

  Karnataka Districts29, Jan 2020, 9:01 AM

  ವಿಶೇಷ ತನಿಖಾ ತಂಡದಿಂದ ಮಂಗಳೂರು ಗೋಲಿಬಾರ್ ತನಿಖೆ..?

  2019ರ ಡಿ.19ರಂದು ಮಂಗಳೂರಿನಲ್ಲಿ ನಡೆದ ಪ್ರತಿಭಟನೆ ವೇಳೆ ಪೊಲೀಸರ ಗೋಲಿಬಾರ್‌ ಘಟನೆ ಬಗ್ಗೆ ತನಿಖೆ ನಡೆಸಲು ಎಸ್‌ಐಟಿ ರಚನೆಗೆ ಆದೇಶಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿ ಸಂಬಂಧ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಮಂಗಳವಾರ ನೋಟಿಸ್‌ ಜಾರಿಗೊಳಿಸಿದೆ.

 • 10 top10 stories

  India10, Jan 2020, 5:17 PM

  HDK ವಿಡಿಯೋ ರಿಲೀಸ್ to ಮದ್ವೆಯಾಗಿ 3 ನಿಮಿಷಕ್ಕೆ ಡಿವೋರ್ಸ್; ಜ.10ರ ಟಾಪ್ 10 ಸುದ್ದಿ!

  ರಾಜ್ಯ ಚಲನ ಚಿತ್ರ ಪ್ರಶಸ್ತಿ ಪ್ರಕಟವಾಗಿದ್ದುರಾಘವೇಂದ್ರ ರಾಜ್‌ಕುಮಾರ್ , ಮೇಘನಾ ರಾಜ್ ಸೇರಿದಂತೆ ಹಲವು ಕಲಾವಿದರು, ಚಿತ್ರಗಳು ಪ್ರಶಸ್ತಿ ಬಾಚಿಕೊಂಡಿವೆ. ಇತ್ತ ಮಂಗಳೂರು ಗೋಲಿಬಾರ್ ಹಾಗೂ ಹಿಂಸಾಚಾರ ಪ್ರಕರಣ ಕುರಿತ 35 ವಿಡಿಯೋ ಹೆಚ್ ಡಿ ಕುಮಾರಸ್ವಾಮಿ ರಿಲೀಸ್ ಮಾಡಿದ್ದಾರೆ. ಆ ದಿನಗಳು ಚಿತ್ರದ ಖ್ಯಾತಿಯ ಚೇತನ್ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಜ.10ರ ಟಾಪ್ 10 ಸುದ್ದಿ ಇಲ್ಲಿವೆ.

 • Mangalore

  Karnataka Districts8, Jan 2020, 12:21 PM

  15 ದಿನದಲ್ಲಿ ಬಯಲಾಗುತ್ತೆ ಮಂಗಳೂರು ಗಲಭೆ ಸತ್ಯಾಂಶ..!

  ಮಂಗಳೂರು ಗೋಲಿಬಾರ್‌ ಪ್ರಕರಣಕ್ಕೆ ಸಂಬಂಧಿಸಿದ ಮಾಹಿತಿ ಕಲೆ ಹಾಕಲಾಗಿದ್ದು, 15 ದಿನದೊಳಗೆ ವರದಿ ಸಿದ್ಧಪಡಿಸಿ ಜನರ ಮುಂದಿಡಲಾಗುವುದು. ಅದಕ್ಕೂ ಮೊದಲು ವರದಿಯ ಸಾರಾಂಶವನ್ನು ತಿಳಿಸಲಾಗುವುದು ಎಂದು ಸತ್ಯಾಂಶದ ವರದಿ ಮಾಡಲು ಆಗಮಿಸಿದ್ದ ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ನೇತೃತ್ವದ ಸತ್ಯಶೋಧನಾ ತಂಡ ತಿಳಿಸಿದೆ.