ಮಂಗಳೂರು ಗಲಭೆ
(Search results - 48)Karnataka DistrictsJan 21, 2021, 2:21 PM IST
'ಮಂಗಳೂರು ಗಲಭೆಗೆ SDPI-PFI ಸಂಚು - ಎಲ್ಲಾ ಕಾರ್ಯಕರ್ತರ ಅರೆಸ್ಟ್ ಆಗಲಿ'
ಮಂಗಳೂರು ಗಲಭೆಗೆ ಪ್ರತಿಕಾರವಾಗಿ ಮತ್ತೊಂದು ಗಲಭೆ ಉಂಟುಮಾಡಲು ಪೊಲೀಸರ ಮೇಲೆ ಹಲ್ಲೆ ಮಾಡಲಾಗಿದೆ. ವ್ಯವಸ್ಥಿತ ಸಂಚು ರೂಪಿಸಿ ಕೃತ್ಯ ಎಸಗಲಾಗಿದೆ ಎಂದು ವಿಶ್ವ ಹಿಂದೂ ಪರಿಷತ್ ಮುಖಂಡ ಗಂಭೀರ ಆರೋಪ ಮಾಡಿದ್ದಾರೆ.
Karnataka DistrictsMar 13, 2020, 12:57 PM IST
ಮಂಗಳೂರು ಗೋಲಿಬಾರ್: 1000 ಪುಟಗಳ ದಾಖಲೆ ಸಲ್ಲಿಕೆ
ಮಂಗಳೂರು ಗಲಭೆ ಹಾಗೂ ಗೋಲಿಬಾರ್ಗೆ ಸಂಬಂಧಿಸಿ ನಗರ ಪೊಲೀಸ್ ಕಮಿಷನರ್ ಅವರು ಒಂದು ಸಾವಿರ ಪುಟಗಳ ಸಾಕ್ಷ್ಯ ದಾಖಲೆಗಳನ್ನು ತನಿಖಾ ಆಯೋಗಕ್ಕೆ ಸಲ್ಲಿಸಿದ್ದಾರೆ.
stateFeb 19, 2020, 5:51 PM IST
Exclusive: ಮಂಗಳೂರು ಗಲಭೆಯ ಮತ್ತಷ್ಟು ಸ್ಫೋಟಕ ಸತ್ಯಗಳು
- ಪೌರತ್ವ ಕಾಯ್ದೆ ವಿರುದ್ಧ ಪ್ರತಿಭಟನೆ ವೇಳೆ ಮಂಗಳೂರಿನಲ್ಲಿ ನಡೆದಿದ್ದ ಹಿಂಸಾಚಾರ
- ಪೊಲೀಸರ ಗುಂಡಿಗೆ ಬಲಿಯಾಗಿದ್ದ ಇಬ್ಬರು ಪ್ರತಿಭಟನಾಕಾರರು
- ಸುವರ್ಣನ್ಯೂಸ್ ಬಿಚ್ಚಿಡ್ತಿದೆ ಗಲಭೆಯ ಹಿಂದಿರುವ ಮುಖಗಳು
Karnataka DistrictsFeb 19, 2020, 2:33 PM IST
ಮಂಗಳೂರು ಗೋಲಿಬಾರ್: ಇಲ್ಲಿವೆ ಕಲ್ಲೆಸೆದವರ ಫೋಟೋಸ್
ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಮಂಗಳೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಕಲ್ಲೆಸೆತ ನಡೆದಿತ್ತು. ನಂತರದಲ್ಲಿ ಪೊಲೀಸರು ಗೋಲಿಬಾರ್ ನಡೆಸಿದ್ದರು. ಶಾಂತಿಯುತವಾಗಿ ನಡೆಯುತ್ತಿದ್ದ ಪ್ರತಿಭಟನೆ ಹಠಾತ್ತನೆ ಹಿಂಸೆಗೆ ತಿರುಗಿ ಇಬ್ಬರು ಯುವಕರು ಮೃತಪಟ್ಟಿದ್ದರು. ಘಟನೆ ಸಂಬಂಧ ವಿಸ್ತೃತ ತನಿಖೆ ನಡೆಯುತ್ತಿದ್ದು, ಇದೀಗ ಘಟನೆಯಲ್ಲಿ ಕಲ್ಲೆಸದವರು ಯಾರ್ಯಾರು ಎಂಬುದು ಬಯಲಾಗಿದೆ. ಘಟನೆಯಲ್ಲಿ ಕಲ್ಲೆಸೆದವರ ಫೋಟೋಸ್ ಇಲ್ಲಿವೆ.
Karnataka DistrictsJan 22, 2020, 7:42 AM IST
‘ಮಂಗಳೂರು ಗಲಭೆ ನಡೆಸಿದ್ದವರೇ ಬಾಂಬ್ ಇಟ್ಟಿರುವ ಶಂಕೆ’
ಈಚೆಗೆ ಮಂಗಳೂರು ಗಲಭೆಯಲ್ಲಿ ಪಾಲ್ಗೊಂಡಿದ್ದವರ ಪ್ರೇರಣೆಯಿಂದಲೇ ಅಲ್ಲಿನ ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿರುವ ಶಂಕೆಯಿದ್ದು, ಈ ಬಗ್ಗೆ ಹೆಚ್ಚಿನ ತನಿಖೆಯಾಗಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ.
Karnataka DistrictsJan 19, 2020, 10:44 AM IST
ಮಂಗಳೂರು ಗಲಭೆ: ಮೊಬೈಲ್ ಟವರ್ ಲೊಕೇಷನ್ ಆಧಾರದಲ್ಲಿ ಕೇರಳದ ಸಾವಿರಾರು ಜನರಿಗೆ ನೋಟಿಸ್
ಮಂಗಳೂರಿನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆದ ಘಟನೆ ಹಿಂಸಾಚಾರಕ್ಕೆ ತಿರುಗಿದ ಹಿನ್ನೆಲೆ ಕೇರಳದಿಂದ ಬಂದವರ ಕೈವಾಡವಿತ್ತು ಎನ್ನುವ ಆರೋಪ ಕೇಳಿ ಬಂದಿತ್ತು. ಈಗ ಲೊಕೇಷನ್ ಆಧರಿಸಿ ಪೊಲೀಸರು ನೋಟಿಸ್ ಕಳುಹಿಸಿದ್ದಾರೆ.
Karnataka DistrictsJan 14, 2020, 3:39 PM IST
'ದಕ್ಷಿಣ ಕನ್ನಡದಲ್ಲಿ ಶಾಂತಿ ಕದಡಿದ್ದು ಸಾಕು, ಕನಕಪುರದಲ್ಲಿ ಬೇಡ'..!
ಶಾಸಕ ಯು.ಟಿ. ಖಾದರ್ ಅವರು ಕಲ್ಲಡ್ಕ ಪ್ರಭಾಕರ್ ಭಟ್ ಹೆಸರೆತ್ತದೆಯೇ ವ್ಯಂಗ್ಯ ಮಾಡಿದ್ದಾರೆ. ಕ್ಷಿಣ ಕನ್ನಡದಲ್ಲಿ ಮಾಡಿದ್ದು ಸಾಕು, ಕನಕಪುರ ಜನರ ಶಾಂತಿ ಕೆಡಿಸಬೇಡಿ. ಅವರಾದರೂ ನೆಮ್ಮದಿಯಿಂದ ಇರಲಿ ಎಂದು ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಹೆಸರೆತ್ತದೆ ಶಾಸಕ ಯು.ಟಿ. ಖಾದರ್ ವಾಗ್ದಾಳಿ ನಡೆಸಿದ್ದಾರೆ.
Karnataka DistrictsJan 12, 2020, 3:02 PM IST
'HDK ಎಲ್ಲಾ CD ಬಿಡುಗಡೆ ಮಾಡ್ಲಿ ಯಾರು ಬೆತ್ತಲಾಗ್ತಾರೋ ಗೊತ್ತಾಗುತ್ತೆ'
ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಎಲ್ಲಾ ಸಿಡಿಗಳನ್ನು ಮೊದಲು ಬಿಡುಗಡೆ ಮಾಡಲಿ, ಯಾರು ಬೆತ್ತಲಾಗುತ್ತಾರೋ, ಯಾರು ಬಟ್ಟೆ ಉಟ್ಟುಕೊಂಡಿರ್ತಾರೋ ಅನ್ನೋದು ಗೊತ್ತಾಗುತ್ತೆ ಎಂದು ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೆಚ್ಡಿಕೆ ವಿರುದ್ಧ ಹರಿಹಾಯ್ದಿದ್ದಾರೆ.
Karnataka DistrictsJan 12, 2020, 12:55 PM IST
ಮಂಗಳೂರು ಗಲಭೆ ಬಗ್ಗೆ ಸಮಗ್ರ ದಾಖಲೆ: ಪೊಲೀಸ್ ಕಮಿಷನರ್ ಡಾ.ಹರ್ಷ
ಮಂಗಳೂರು ಗಲಭೆಯಲ್ಲಿ ಕಾನೂನು ಸ್ಪಷ್ಟಉಲ್ಲಂಘನೆ ಮಾಡಿದ್ದಲ್ಲದೆ, ಗಲಭೆ ಸೃಷ್ಟಿಸಿ ಹಿಂಸಾಚಾರದಲ್ಲಿ ತೊಡಗಿದ್ದರು. ಈ ಬಗ್ಗೆ ಪೊಲೀಸ್ ಇಲಾಖೆ ಸಮಗ್ರ ದಾಖಲೆಗಳನ್ನು ಹೊಂದಿದ್ದು, ಈ ಪ್ರಕರಣದ ಸಂಪೂರ್ಣ ತನಿಖೆ ಬಳಿಕ ಸತ್ಯಾಂಶ ಹೊರಬರಲಿದೆ ಎಂದು ನಗರ ಪೊಲೀಸ್ ಕಮಿಷನರ್ ಡಾ.ಪಿ.ಎಸ್. ಹರ್ಷ ಪ್ರತಿಕ್ರಿಯಿಸಿದ್ದಾರೆ.
Karnataka DistrictsJan 12, 2020, 9:56 AM IST
'ಮಾಜಿ ಸಿಎಂ ಸಿದ್ದರಾಮಯ್ಯ ಜೊತೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ'
ಮಂಗಳೂರು ಗಲಭೆ ಕುರಿತು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಿಡಿ ಬಿಡುಗಡೆ ಮಾಡಿರುವ ವಿಚಾರವನ್ನು ಬೆಂಬಲಿಸಿರುವ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ, ಎಷ್ಟೇ ದೊಡ್ಡ ಮಟ್ಟದ ಅಧಿಕಾರಿಗಳಾಗಿದ್ದರೂ ಸಿಎಂ ಯಡಿಯೂರಪ್ಪನವರ ಮೂಗಿನ ಕೆಳಗಡೆ ಕೆಲಸ ಮಾಡುವವರು. ಹೀಗಾಗಿ ನಿಷ್ಪಕ್ಷಪಾತವಾಗಿ ತನಿಖೆ ಮಾಡಲು ಸಾಧ್ಯವಿಲ್ಲ. ಹೀಗಾಗಿ ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿಗಳಿಂದ ತನಿಖೆ ಮಾಡಿದರೆ ಮಾತ್ರ ಈ ಪ್ರಕರಣದಲ್ಲಿ ಸತ್ಯಾಸತ್ಯತೆ ಹೊರಬರಲಿದೆ ಎಂದು ಹೇಳಿದರು.
stateJan 12, 2020, 8:26 AM IST
ಧೈರ್ಯವಿದ್ದರೆ ತಜ್ಞರಿಂದ ನನ್ನ ಸೀಡಿ ಪರೀಕ್ಷೆ ಮಾಡಿಸಿ: ಸಿಎಂ ಎಚ್ಡಿಕೆ ಚಾಲೆಂಜ್!
ಧೈರ್ಯವಿದ್ದರೆ ತಜ್ಞರಿಂದ ನನ್ನ ಸೀಡಿ ಪರೀಕ್ಷೆ ಮಾಡಿಸಿ: ಸಿಎಂ ಎಚ್ಡಿಕೆ ಚಾಲೆಂಜ್!| ಕಟ್ ಅಂಡ್ ಪೇಸ್ಟ್ ಸೀಡಿ ಎಂದ ಮುಖ್ಯಮಂತ್ರಿ ಬಿಎಸ್ವೈಗೆ ಮಾಜಿ ಸಿಎಂ ಕುಮಾರಸ್ವಾಮಿ ಸವಾಲು
Karnataka DistrictsJan 11, 2020, 3:30 PM IST
ಕುಮಾರಸ್ವಾಮಿ ಪೂರ್ತಿ ವಿಡಿಯೋ ಬಿಡುಗಡೆ ಮಾಡಿಲ್ಲ ಎಂಬ ಆತಂಕ ಇದೆ
ಮಾಜಿ ಸಿಎಂ ಕುಮಾರಸ್ವಾಮಿ ಮಂಗಳೂರು ಗಲಭೆಯ ಪೂರ್ತಿ ವಿಡಿಯೋ ಯಾಕೆ ಬಿಡುಗಡೆ ಮಾಡಿಲ್ಲ ಎಂಬ ಆತಂಕ ನಮಗಿದೆ ಎಂದು ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
Karnataka DistrictsJan 11, 2020, 3:23 PM IST
'ಎಚ್ಡಿಕೆ ಬಿಡುಗಡೆ ಮಾಡಿದ ವಿಡಿಯೋ ಕಟ್ ಆ್ಯಂಡ್ ಪೇಸ್ಟ್..'!
ಮಂಗಳೂರು ಗಲಭೆಗೆ ಸಂಬಂಧಿ ಮಾಜಿ ಸಿಎಂ ಎಚ್. ಡಿ. ಕುಮಾರಸ್ವಾಮಿ ಅವರು ಶುಕ್ರವಾರ ವಿಡಿಯೋ ಬಿಡುಗಡೆ ಮಾಡಿದ್ದರು. ಜೆಡಿಎಸ್ ಬಿಡುಗಡೆ ಮಾಡಿದ ವಿಡಿಯೋ ಬಗ್ಗೆ ರಾಜಕೀಯ ಮುಖಂಡರು ಬೇರೆ ಬೇರೆ ರೀತಿಯಾಗಿ ಪ್ರತಿಕ್ರಿಯಿಸಿದ್ದಾರೆ. ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಅವರು ಈ ವಿಡಿಯೋ ಕಟ್ ಪೇಸ್ಟ್ ಎಂದು ವ್ಯಂಗ್ಯ ಮಾಡಿದ್ದಾರೆ.
Karnataka DistrictsJan 11, 2020, 12:30 PM IST
ಸೀಕ್ವೆನ್ಸ್ ಬದಲಿಸಿ ವಿಡಿಯೋ ಬಿಡುಗಡೆ ಮಾಡಿದ್ರಾ ಕುಮಾರಸ್ವಾಮಿ..?
ಶುಕ್ರವಾರ ಮಂಗಳೂರು ಗಲಭೆ ಕುರಿತು ಜೆಡಿಎಸ್ ವಿಡಿಯೋ ರಿಲೀಸ್ ಮಾಡಿದ್ದು, ಈ ಬಗ್ಗೆ ಪೊಲೀಸ್ ಆಯುಕ್ತ ಐಪಿಎಸ್ ಹರ್ಷ ಅವರು ಪ್ರತಿಕ್ರಿಯಿಸಿದ್ದಾರೆ. ಈಗಾಗಲೇ 1000ಕ್ಕೂ ಹೆಚ್ಚು ವಿಡಿಯೋಗಳನ್ನು ಸಂಗ್ರಹಿಸಿರುವ ಮಂಗಳೂರು ಪೊಲೀಸರು ಮಾಜಿ ಸಿಎಂ ಕುಮಾರಸ್ವಾಮಿ ರಿಲೀಸ್ ಮಾಡಿದ ವಿಡಿಯೋ ಬಗ್ಗೆ ಏನ್ ಹೇಳಿದ್ರು..? ಇಲ್ಲಿ ಓದಿ.
stateJan 10, 2020, 10:03 PM IST
ಮಂಗಳೂರು ಗಲಭೆ ಹೊಸ ವಿಡಿಯೋ: ಸುವರ್ಣ ನ್ಯೂಸ್ ಜತೆ ಕುಮಾರಸ್ವಾಮಿ ಮಾತು
ಪೌರತ್ವ ತಿದ್ದುಪಡಿ ವಿರೋಧಿ ಡಿ.9ರಂದು ನಡೆದ ಮಂಗಳೂರು ಗಲಭೆ ಕುರಿತಂತೆ ಪೊಲೀಸರು ವಿಡಿಯೋ ಬಿಡುಗಡೆ ಮಾಡಿದ ನಂತರ ಇದೀಗ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಬರೋಬ್ಬರಿ 35 ವಿಡಿಯೋಗಳನ್ನು ಬಿಡುಗಡೆ ಮಾಡಿದ್ದಾರೆ. ಇಂದು [ಶುಕ್ರವಾರ] ಸುದ್ದಿಗೋಷ್ಠಿ ನಡೆಸಿ ಪತ್ರಕರ್ತರಿಗೆ ವಿಡಿಯೋ ಪ್ರದರ್ಶಿಸಿ ನಂತರ ವಿಡಿಯೋಗಳನ್ನು ಬಿಡುಗಡೆ ಮಾಡಿರುವ ಕುಮಾರಸ್ವಾಮಿ, ಪೊಲೀಸರ ಮೇಲೆ ಗೂಬೆ ಕೂರಿಸಿದರು. ಇನ್ನು ಈ ಬಗ್ಗೆ ಕುಮಾರಸ್ವಾಮಿ ಅವರು ಸುವರ್ಣ ನ್ಯೂಸ್ ಲೈವ್ಗೆ ಬಂದು ಹಲವು ಮಾತುಗಳನ್ನಾಡಿದ್ದಾರೆ. ಹಾಗಾದ್ರೆ ಕುಮಾರಸ್ವಾಮಿ ಅವರು ಸುವರ್ಣ ನ್ಯೂಸ್ ಜತೆ ಏನೆಲ್ಲ ಮಾತನಾಡಿದ್ದಾರೆ ಎನ್ನುವುದನ್ನು ಅವರ ಬಾಯಿಂದಲೇ ಕೇಳಿ.