Search results - 90 Results
 • NEWS11, Nov 2018, 1:22 PM IST

  ಅಲ್ಪ ಸಂಖ್ಯಾತ ನಾಯಕರಲ್ಲಿ ಒಂಟಿಯಾದ್ರಾ ಜಮೀರ್ ಅಹ್ಮದ್?

  ಸಚಿವ ಜಮೀರ್ ಅಹಮದ್ ಗೆ ಕಾಂಗ್ರೆಸ್ ಮುಸ್ಲಿಂ ಮುಖಂಡರೇ ಸಾಥ್ ನೀಡುತ್ತಿಲ್ಲ.  ಟಿಪ್ಪು ಜಯಂತಿ ಆಚರಣೆ ವೇಳೆ ಕಾಂಗ್ರೆಸ್ ಮುಸ್ಲಿಂ ನಾಯಕರ ಭಿನ್ನಮತ ಹೊರಬಿದ್ದಿದೆ. 

 • Arunachal Pradesh

  NEWS8, Nov 2018, 5:59 PM IST

  ಅರುಣಾಚಲ ಪ್ರದೇಶದಲ್ಲಿ ಸೇನೆ ವರ್ಸಸ್ ಆರ್ಮಿ!

  ಅರುಣಾಚಲ ಪ್ರದೇಶದಲ್ಲಿ ಭಾರತೀಯ ಸೇನೆ ಮತ್ತು ಸ್ಥಳೀಯ ಪೊಲೀಸರ ನಡುವೆ ವೈಮನಸ್ಸು ಸ್ಫೋಟಗೊಂಡಿದೆ. ಸಾರ್ವಜನಿಕರು ಮತ್ತು ಪೊಲೀಸ್ ಅಧಿಕಾರಿಗಳ ಜೊತೆ ಅಸಭ್ಯವಾಗಿ ವರ್ತಿಸಿದ ಇಬ್ಬರು ಸೈನಿಕರ ಬಂಧನದ ಕುರಿತಂತೆ ಸೇನೆ ಮತತ್ತು ಪೊಲೀಸ್ ಇಲಾಖೆ ನಡುವೆ ಭಿನ್ನಮತ ಕಾಣಿಸಿಕೊಂಡಿದೆ.

 • NEWS24, Oct 2018, 5:15 PM IST

  ಏಕಾಏಕಿ ಜೊತೆಯಲ್ಲಿ ಕೆಲಸ ಮಾಡಲು ಇರಿಸು-ಮುರಿಸು ಉಂಟಾಗುತ್ತೆ

  ಜೆಡಿಎಸ್  ಬಹಳ ವರ್ಷಗಳಿಂದ ಎದುರಾಳಿಯಾಗಿ ಹೋರಾಟ ಮಾಡಿಕೊಂಡು ಬಂದವ್ರು. ಈಗ ಏಕಾಏಕಿ ಜೊತೆಯಲ್ಲಿ ಕೆಲಸ ಮಾಡಲು ಇರಿಸು-ಮುರಿಸು ಉಂಟಾಗುತ್ತೆ-  ಚುನಾವಣಾ ಪ್ರಚಾರದಲ್ಲಿ ಜೆಡಿಎಸ್ - ಕಾಂಗ್ರೆಸ್ ನಡುವಿನ ಭಿನ್ನಮತ ಒಪ್ಪಿಕೊಂಡ ಮಾಜಿ ಸಿಎಂ ಸಿದ್ದರಾಮಯ್ಯ. 

 • NEWS24, Oct 2018, 12:29 PM IST

  ದೇವೇಗೌಡ್ರು, ಎಚ್‌ಡಿಕೆಗೆ ಬಿಗ್ ಶಾಕ್? ವಿಶ್ವನಾಥ್ ಗುಡ್‌ಬೈ?

  ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದ ದಿನದಿಂದ ಒಂದಲ್ಲ ಒಂದು ಸಮಸ್ಯೆಗಳನ್ನು ಎದುರಿಸುತ್ತಾ ಇದೆ. ಭಿನ್ನಮತ, ಆಪರೇಷನ್ ಕಮಲ ಮುಂತಾದ ಸವಾಲುಗಳನ್ನು ಸಮರ್ಥವಾಗಿ ಎದುರಿಸಿದ ಎಚ್‌.ಡಿ. ಕುಮಾರಸ್ವಾಮಿಗೆ ಇದೀಗ ಮತ್ತೊಂದು ಕಂಟಕ ಎದುರಾಗಿದೆಯಾ? ಎಂಬ ಪ್ರಶ್ನೆಗಳು ಎದ್ದಿವೆ. ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ವಿಶ್ವನಾಥ್ ಇದೀಗ ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಇಲ್ಲಿದೆ ಸಂಪೂರ್ಣ ಡೀಟೆಲ್ಸ್.. 

 • NEWS20, Oct 2018, 11:02 AM IST

  ಡಿಕೆಶಿ ಭೇಟಿ ಮಾಡಿದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್

  ಲಿಂಗಾಯತ ಧರ್ಮದ ವಿಚಾರವಾಗಿ ಸಚಿವ ಡಿ.ಕೆ.ಶಿವಕುಮಾರ್‌ ನೀಡಿರುವ ಹೇಳಿಕೆ ಕಾಂಗ್ರೆಸ್‌ ವಲಯದಲ್ಲಿ ಭಿನ್ನಮತ ಭುಗಿಲೆಬ್ಬಿಸಿದ ಬೆನ್ನಲ್ಲೇ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರು ಡಿ.ಕೆ. ಶಿವಕುಮಾರ್‌ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

 • BJP

  NEWS17, Oct 2018, 4:41 PM IST

  ಜಮಖಂಡಿ ಭಿನ್ನಮತ ಶಮನ: ಒಗ್ಗಟ್ಟಿನ ರಣಕಹಳೆ ಮೊಳಗಿಸಿದ ಬಿಜೆಪಿ

  ಜಮಖಂಡಿ ಬಿಜೆಪಿಯಲ್ಲಿ ಭುಗಿಲೆದ್ದಿದ್ದ ಭಿನ್ನಮತ ಶಮನ ಮಾಡುವಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಯಶಸ್ವಿಯಾಗಿದ್ದಾರೆ. 

 • NEWS16, Oct 2018, 7:05 PM IST

  ಮುನಿಸಿಕೊಂಡಿರುವ ನಾಗೇಂದ್ರ ಒಲಿಸಲು ಡಿಕೆಶಿ ಏನ್ ಪ್ಲಾನ್?

  ಅಂತೂ ಇಂತೂ ಬಳ್ಳಾರಿ ಉಪಚುನಾವಣಾ ಕಣಕ್ಕೆ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಅಂತಿಮಗೊಳಿಸಿಯೂ ಆಯ್ತು, ನಾಮಪತ್ರ ಸಲ್ಲಿಸಿಯೂ ಆಯ್ತು. ಆದ್ರೆ ಪಕ್ಷದೊಳಗಿನ ಭಿನ್ನಮತ ಇನ್ನೂ ಶಮನಗೊಂಡಿಲ್ಲ ಎಂದೇ ಹೇಳಬಹುದು. ಶಾಸಕ ಬಿ. ನಾಗೇಂದ್ರ ತನ್ನ ಸಹೋದರನಿಗೆ ಟಿಕೆಟ್ ಸಿಕ್ಕಿಲ್ಲವೆಂದು ಮುನಿಸಿಕೊಂಡಿದ್ದಾರೆ. ಲೋಕಸಭಾ ಸೀಟು ಗೆಲ್ಲಲು ಸ್ಥಳೀಯ ಶಾಸಕರ ಬೆಂಬಲ ಅತ್ಯಗತ್ಯ. ನಾಗೇಂದ್ರರನ್ನು ಒಲಿಸಲು ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್ ಒಂದು ತಂತ್ರವನ್ನು ಹೆಣೆದಿದ್ದಾರೆ. ಇಲ್ಲಿದೆ ವಿವರ

 • NEWS13, Oct 2018, 7:28 PM IST

  ಕಾಂಗ್ರೆಸಿನಲ್ಲಿ ಸಿದ್ದರಾಮಯ್ಯ ಮತ್ತಷ್ಟು ಪವರ್ ಫುಲ್

  ರಾಜ್ಯ ಕಾಂಗ್ರೆಸಿನಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತಷ್ಟು ಪವರ್'ಫುಲ್ ಆಗಿದ್ದಾರೆ. ಬಳ್ಳಾರಿ ಲೋಕಸಭಾ ಉಪಚುನಾವಣೆಯ ಹಿನ್ನಲೆಯಲ್ಲಿ ಬುಗಿಲೆದ್ದ ಭಿನ್ನಮತವನ್ನು ಸಿದ್ದು ಬ್ರೇಕ್ ಹಾಕಿದ್ದು, ಬಳ್ಳಾರಿಯ ಎಲ್ಲಾ ಶಾಸಕರಿಗೆ ಶಾಂತಿ ಪಾಠ ಮಾಡಿ ಮತ್ತೆ ಪವರ್ ಸೆಂಟರ್ ಆಗಿದ್ದಾರೆ.

 • NEWS10, Oct 2018, 6:03 PM IST

  ಜೆಡಿಎಸ್‌ನಲ್ಲಿ ಭುಗಿಲೆದ್ದ ಭಿನ್ನಮತ; ಸಿಎಂ ಪತ್ನಿ ನಾಮಪತ್ರ ಸಲ್ಲಿಕೆ ರದ್ದು!

  ರಾಮನಗರ ಉಪಚುನಾವಣೆ ಜೆಡಿಎಸ್ ವರಿಷ್ಠರ ಪಾಲಿಗೆ ಕಗ್ಗಾಂಟಾಗಿದೆ. ಸಿಎಂ ಎಚ್.ಡಿ. ಕುಮಾರಸ್ವಾಮಿ ಪತ್ನಿ ಅನಿತಾ ಕುಮಾರಸ್ವಾಮಿ ಇಲ್ಲಿಂದ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿತ್ತು. ಆದರೆ, ವರಿಷ್ಠರ ಈ ಏಕಪಕ್ಷೀಯ ನಿರ್ಧಾರಕ್ಕೆ ಸ್ಥಳೀಯ ನಾಯಕರು ಹಾಗೂ ಕಾರ್ಯಕರ್ತರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಇದೀಗ ಅನಿತಾ ನಾಮಪತ್ರ ಸಲ್ಲಿಕೆಯನ್ನು ರದ್ದುಗೊಳಿಸಲಾಗಿದೆ. 

 • NEWS3, Oct 2018, 5:17 PM IST

  ರಾಮನಗರದಿಂದ ಅನಿತಾ ಕುಮಾರಸ್ವಾಮಿ ಕಣಕ್ಕೆ; ಜೆಡಿಎಸ್‌ನಲ್ಲಿ ಭಿನ್ನಮತ?

  ರಾಮನಗರಕ್ಕೆ ಉಪ-ಚುನಾವಣೆಗೆ ಸಂಬಂಧಿಸಿದಂತೆ ನಡೆಯಲಿರುವ ಜೆಡಿಎಸ್ ಸಭೆಗೆ ಮಾಧ್ಯಮಗಳಿಗೆ ಅವಕಾಶ ನಿರಾಕರಿಸಲಾಗಿದೆ. ಮಾಧ್ಯಮಗಳಿಗೆ ನಿಷೇಧ ಹೇರುವ ಈ ನಡೆಯ ಹಿಂದೆ ಕಾರಣವೇನು? ರಾಮನಗರದಿಂದ ಸಿಎಂ ಪತ್ನಿ ಅನಿತಾ ಕುಮಾರಸ್ವಾಮಿಯವರನ್ನು ಕಣಕ್ಕಿಳಿಸುವ ಕುರಿತು ಪಕ್ಷದಲ್ಲಿ ಭಿನ್ನಮತ ಕಾರಣವೇ? ಭಿನ್ನಮತ ಉಪಚುನಾವಣೆ ಮೇಲೆ ಪರಿಣಾಮ ಬೀರಬಹುದೆಂಬ ಆತಂಕವೇ? ಇಲ್ಲಿದೆ ವರದಿ...  

 • Dharwad1, Oct 2018, 7:42 PM IST

  ಬೆಳಗಾವಿ ನಂತರ ಈ ಜಿಲ್ಲೆಯಲ್ಲೂ ಒಡೆದ ಮನೆಯಾದ ಕಾಂಗ್ರೆಸ್

  ಕಳೆದ ಸರ್ಕಾರದಲ್ಲಿ ಸಚಿವರಾಗಿದ್ದ ವಿನಯ ಕುಲಕರ್ಣಿ ಹಾಗೂ ಸಂತೋಷ ಲಾಡ್ ಇಬ್ಬರ ಹಿಡಿತದಲ್ಲೇ ಮಹಾನಗರ ಕಾಂಗ್ರೆಸ್ ಇತ್ತು. ಆಗಲೂ ಹಿರಿ ತಲೆಗಳು ಮೂಲೆಗುಂಪಾಗಿದ್ದವು ಎನ್ನುವ ಆರೋಪ ಇತ್ತು. ಪಕ್ಷದಲ್ಲಿನ ಭಿನ್ನಮತದಿಂದ ವಿಧಾನಸಭೆ ಚುನಾವಣೆಯಲ್ಲಿ ನಾಲ್ಕಕ್ಕಿದ್ದ ಶಾಸಕರ ಸ್ಥಾನಗಳು ಎರಡಕ್ಕೇ ಇಳಿದಿವೆ. 

 • NEWS30, Sep 2018, 3:33 PM IST

  ಅಶೋಕ್ ಪರ ಬ್ಯಾಟ್‌ ಬೀಸಿದ ಯಡಿಯೂರಪ್ಪ! ಸಂತೋಷ್‌ಗೆ ಪರೋಕ್ಷ ಟಾಂಗ್?

  ಬಿಬಿಎಂಪಿ ಚುನಾವಣೆ ಬೆನ್ನಲ್ಲಿ ಬಿಜೆಪಿಯಲ್ಲಿ ಭಿನ್ನಮತ ಹೊರಗೆ ಬಂದಿದೆ. ಆರ್ ಅಶೋಕ್ ವಿರುದ್ಧ ಆರ್ ಎಸ್ ಎಸ್ ಮುಖಂಡ ಸಂತೋಷ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ ಬಿಜೆಪಿ ರಾಜ್ಯಾಧ್ಯಕ್ಷ ಆರ್. ಆಶೋಕ್ ಪರ ಬ್ಯಾಟ್ ಬೀಸಿದ್ದಾರೆ. ಅವರೇನು ಹೇಳಿದ್ದಾರೆ ನೋಡೋಣ... 

 • BJP

  NEWS30, Sep 2018, 1:43 PM IST

  ಬಿಬಿಎಂಪಿ ಸೋಲು: ಅಶೋಕ್ ವಿರುದ್ಧ ಆರ್‌ಎಸ್‌ಎಸ್ ಮುಖಂಡ ಅಸಮಾಧಾನ

  ಬಿಬಿಎಂಪಿ  ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಪಕ್ಷದಲ್ಲೇ ಭಿನ್ನಮತ ಎದ್ದಿದೆ. ಆರ್ ಅಶೋಕ್ ವಿರುದ್ಧ ಆರ್ ಎಸ್ ಎಸ್ ಮುಖಂಡ ಸಂತೋಷ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಂಡ ಸ್ಪೂರ್ತಿ ಇಲ್ಲದವರು ಹಾಗೂ ಗೆಲುವಿನ ಕೀರ್ತಿ ಹಂಚಿಕೊಳ್ಳಲು ಸಿದ್ದರಿಲ್ಲದವರು ಎಂದಿಗೂ ಗೆಲುವು ಸಾಧಿಸಲಾರರು ಎಂದು ಬಿ ಎಲ್ ಸಂತೋಷ್ ಟ್ವೀಟ್ ಮಾಡಿದ್ದಾರೆ. 

 • Bengaluru City25, Sep 2018, 9:37 PM IST

  ಭಿನ್ನಮತ ಸ್ಫೋಟ: ತುರ್ತು ಸಭೆ ಕರೆದ ಜೆಡಿಎಸ್

  ವಿಧಾನ ಪರಿಷತ್ ಗೆ ರಮೇಶ್ ಗೌಡ ಅವರನ್ನು  ಆಯ್ಕೆ ಮಾಡಿರುವ ಜೆಡಿಎಸ್ ವರಿಷ್ಟರ ವಿರುದ್ಧ ಬೆಂಗಳೂರು ನಗರ ಜೆಡಿಎಸ್ ಘಟಕದ ಪದಾಧಿಕಾರಿಗಳು ಗರಂ ಆಗಿದ್ದಾರೆ.ಈ ಹಿನ್ನೆಲೆಯಲ್ಲಿ ಜೆಡಿಎಸ್ ಬೆಂಗಳೂರು ನಗರ ಘಟಕದ ಅಧ್ಯಕ್ಷ ಆರ್. ಪ್ರಕಾಶ್ ನಾಳೆ [ಬುಧವಾರ] ತುರ್ತುಸಭೆ ಕರೆದಿದ್ದಾರೆ.

 • NEWS21, Sep 2018, 7:54 PM IST

  ಸರ್ಕಾರ ಉಳಿವಿಗೆ ಸಂಪುಟ ವಿಸ್ತರಣೆ ಟಾನಿಕ್

  ಭಿನ್ನಮತ ಚಟುವಟಿಕೆಗಳಲ್ಲಿ ಪಾಲ್ಗೊಂಡಿರುವ  ಪ್ರಮುಖ ನಾಲ್ಕು ಮಂದಿಗೆ ಸಚಿವ ಸ್ಥಾನ ನೀಡಿ ಸರ್ಕಾರಕ್ಕೆ ಎದುರಾಗಿರುವ  ಕಂಟಕವನ್ನು ಸದ್ಯದ ಮಟ್ಟಿಗೆ ನಿವಾರಿಸಿಕೊಳ್ಳಲು ರಾಜ್ಯ ಹಿರಿಯ ನಾಯಕರು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.