ಭಾರತ ಮಹಿಳಾ ಕ್ರಿಕೆಟ್ ತಂಡ

(Search results - 24)

Shafali Verma

CricketMay 11, 2021, 10:54 AM IST

ವಿದೇಶಿ ಕ್ರಿಕೆಟ್‌ ಲೀಗ್‌ಗಳಲ್ಲಿ ಶಫಾಲಿ ವರ್ಮಾಗೆ ಭಾರೀ ಬೇಡಿಕೆ!

ಕಳೆದ ವರ್ಷ ನಡೆಯಬೇಕಿದ್ದ ಚೊಚ್ಚಲ ಆವೃತ್ತಿಯ ದಿ ಹಂಡ್ರೆಡ್ ಕ್ರಿಕೆಟ್ ಟೂರ್ನಿಯು ಕೋವಿಡ್‌ ಕಾರಣದಿಂದಾಗಿ ಮುಂದೂಡಲ್ಪಟ್ಟಿತ್ತು. ಇದೀಗ ಜುಲೈ 21ರಿಂದ ಮಹಿಳಾ ದಿ ಹಂಡ್ರೆಡ್ ಟೂರ್ನಿಯು ಲಂಡನ್‌ನ ಓವಲ್‌ ಹಾಗೂ ಮ್ಯಾಂಚೆಸ್ಟರ್‌ನಲ್ಲಿ ನಡೆಯಲಿದೆ.

Veda Krishnamurthy

CricketMay 6, 2021, 5:07 PM IST

ಕೊರೋನಾ ಅಟ್ಟಹಾಸಕ್ಕೆ ವೇದಾ ಕೃಷ್ಣಮೂರ್ತಿ ಸಹೋದರಿ ಬಲಿ..!

ಕೇವಲ 10 ದಿನಗಳ ಹಿಂದಷ್ಟೇ ವೇದಾ ಕೃಷ್ಣಮೂರ್ತಿ ತಾಯಿ ಚಲುವಾಂಬ(63) ಕೊರೋನಾದಿಂದಾಗಿ ಚಿಕ್ಕಮಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ವತ್ಸಲಾ ಸಹ ಇದೀಗ ಕೋವಿಡ್‌ಗೆ ಬಲಿಯಾಗಿದ್ದಾರೆ. ಕಡೂರು ಪಟ್ಟಣದ ನಿವಾಸಿಯಾಗಿದ್ದ ವತ್ಸಲಾ ಕೃಷ್ಣಮೂರ್ತಿ ಚಿಕ್ಕಮಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇದೀಗ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.

Women's Cricket

CricketMar 23, 2021, 8:23 AM IST

ವೈಟ್‌ವಾಶ್‌ ತಪ್ಪಿಸಿಕೊಳ್ಳಲು ಭಾರತ ಮಹಿಳಾ ಕ್ರಿಕೆಟ್‌ ತಂಡ ಹೋರಾಟ

ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಸೋತಿದ್ದ ಭಾರತ ತಂಡ ಭಾರೀ ಒತ್ತಡದೊಂದಿಗೆ ಅಂತಿಮ ಪಂದ್ಯಕ್ಕೆ ಕಣಕ್ಕಿಳಿಯಲಿದೆ. ಭಾರತ ವಿರುದ್ಧ ಚೊಚ್ಚಲ ಟಿ20 ಸರಣಿ ಗೆದ್ದಿರುವ ದಕ್ಷಿಣ ಆಫ್ರಿಕಾ, ಕ್ಲೀನ್‌ ಸ್ವೀಪ್‌ ನಿರೀಕ್ಷೆಯಲ್ಲಿದೆ.

Women's Cricket

CricketMar 20, 2021, 8:24 AM IST

ಮಹಿಳಾ ಟಿ20 ಕ್ರಿಕೆಟ್‌: ಹರಿಣಗಳಿಗೆ ತಿರುಗೇಟು ನೀಡುತ್ತಾ ಭಾರತ?

ಇಲ್ಲಿನ ಭಾರತ್ ರತ್ನ ಶ್ರೀ ಅಟಲ್‌ ಬಿಹಾರಿ ವಾಜಪೇಯಿ ಏಕಾನ ಕ್ರಿಕೆಟ್‌ ಮೈದಾನದಲ್ಲಿ ಶನಿವಾರ(ಮಾ.20)ದಂದು ಮೊದಲ ಪಂದ್ಯ ನಡೆಯಲಿದ್ದು, ಭಾರತದ ಮೇಲೆ ಹೆಚ್ಚಿನ ಒತ್ತಡವಿದೆ. ಏಕದಿನ ತಂಡದಲ್ಲಿ ಸ್ಥಾನ ಪಡೆಯುವ 17 ವರ್ಷದ ಶಫಾಲಿ ವರ್ಮಾ ಟಿ20 ಸರಣಿಗೆ ಆಯ್ಕೆಯಾಗಿದ್ದು, ಅವರ ಮೇಲೆ ನಿರೀಕ್ಷೆ ಇದೆ.

South Africa Women's Cricket

CricketMar 17, 2021, 5:50 PM IST

ಕೊನೆಯ ಪಂದ್ಯದಲ್ಲೂ ಸೋಲಿನ ಕಹಿಯುಂಡ ಮಿಥಾಲಿ ಪಡೆ

ಭಾರತ ನೀಡಿದ್ದ 189 ರನ್‌ ಗಳ ಸಾಧಾರಣ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡಕ್ಕೆ ರಾಜೇಶ್ವರಿ ಗಾಯಕ್ವಾಡ್‌ ಆರಂಭದಲ್ಲೇ ಶಾಕ್‌ ನೀಡಿದರು. ಹರಿಣಗಳ ಪಡೆ 3 ರನ್‌ ಗಳಿಸುವಷ್ಟರಲ್ಲೇ ಅಗ್ರಕ್ರಮಾಂಕದ ಬ್ಯಾಟ್ಸ್‌ವುಮೆನ್‌ಗಳು ಪೆವಿಲಿಯನ್‌ ಸೇರಿದರು. ಇನ್ನು ಸುನೆ ಲಸ್‌ ಆಟ ಕೇವಲ 10 ರನ್‌ಗಳಿಗೆ ಸೀಮಿತವಾಯಿತು.

Women's Cricket

CricketMar 17, 2021, 1:17 PM IST

ಮಿಥಾಲಿ ಏಕಾಂಗಿ ಹೋರಾಟ, ಹರಿಣಗಳಿಗೆ ಸಾಧಾರಣ ಗುರಿ

ಟಾಸ್‌ ಸೋತು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಭಾರತ ತಂಡ ಉತ್ತಮ ಆರಂಭವನ್ನೇ ಪಡೆಯಿತು. ಆರಂಭಿಕ ಬ್ಯಾಟ್‌ವುಮೆನ್‌ಗಳಾದ ಪ್ರಿಯಾ ಪೂನಿಯಾ ಹಾಗೂ ಸ್ಮೃತಿ ಮಂಧನಾ ತಲಾ 18 ರನ್‌ ಬಾರಿಸಿದರು.

Women's Cricket

CricketMar 17, 2021, 9:12 AM IST

ಮಹಿಳಾ ಕ್ರಿಕೆಟ್: ಟಾಸ್‌ ಗೆದ್ದ ದಕ್ಷಿಣ ಆಫ್ರಿಕಾ ಫೀಲ್ಡಿಂಗ್ ಆಯ್ಕೆ

ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಸರಣಿಯನ್ನು 1-3ರಲ್ಲಿ ಈಗಾಗಲೇ ಸೋತಿರುವ ಭಾರತ ಮಹಿಳಾ ತಂಡ, ಬುಧವಾರ ನಡೆಯಲಿರುವ 5ನೇ ಪಂದ್ಯದಲ್ಲಿ ಪ್ರತಿಷ್ಠೆಗಾಗಿ ಆಡಲಿದೆ. 2ನೇ ಪಂದ್ಯದಲ್ಲಿ 9 ವಿಕೆಟ್‌ ಗೆಲುವು ಸಾಧಿಸಿದ್ದನ್ನು ಹೊರತುಪಡಿಸಿದರೆ ಭಾರತ ಉಳಿದ ಮೂರು ಪಂದ್ಯಗಳಲ್ಲಿ ಸಂಘಟಿತ ಪ್ರದರ್ಶನ ತೋರಲು ವಿಫಲವಾಗಿದೆ.

Woman's Cricket

CricketMar 14, 2021, 6:34 PM IST

ಪೂನಂ ಶತಕ ವ್ಯರ್ಥ, ಏಕದಿನ ಸರಣಿ ಹರಿಣಗಳು ಪಾಲು..!

ಇಲ್ಲಿನ ಏಕಾನ ಮೈದಾನದಲ್ಲಿ ಭಾರತ ನೀಡಿದ್ದ 267 ರನ್‌ಗಳ ಸವಾಲಿನ ಗುರಿ ಪಡೆದ ದಕ್ಷಿಣ ಆಫ್ರಿಕಾ ತಂಡ 8 ಎಸೆತಗಳು ಬಾಕಿ ಇರುವಂತೆಯೇ ಗೆಲುವಿನ ನಗೆ ಬೀರಿದೆ. ಕಳೆದ ಪಂದ್ಯದಲ್ಲಿ ಶತಕ ಚಚ್ಚಿದ್ದ ಲಿಜೆಲ್ಲೆ ಲೀ 69 ರನ್‌ ಬಾರಿಸಿದರೆ, ಲೌರಾ ವೋಲ್ಡ್‌ವರ್ಟ್ 53, ಲಾರಾ ಗುಡ್ಡಾಲ್‌ ಅಜೇಯ 59 ಹಾಗೂ ಮಿಘನ್‌ ಡು ಪ್ರೇಜ್‌ 61 ರನ್‌ ಬಾರಿಸುವ ಮೂಲಕ ಹರಿಣಗಳ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

Punam Raut

CricketMar 14, 2021, 12:47 PM IST

ಪೂನಂ ರಾವತ್‌ ಶತಕ; ದಕ್ಷಿಣ ಆಫ್ರಿಕಾಗೆ ಸವಾಲಿನ ಗುರಿ

ಇಲ್ಲಿನ ಏಕಾನ ಮೈದಾನದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಮಿಥಾಲಿ ರಾಜ್‌ ಪಡೆ ಆರಂಭದಲ್ಲೇ ಸ್ಮೃತಿ ಮಂಧನಾ ವಿಕೆಟ್‌ ಕಳೆದುಕೊಂಡಿತು. ಮಂಧನಾ 10 ರನ್‌ ಬಾರಿಸಿ ವಿಕೆಟ್‌ ಒಪ್ಪಿಸಿದರೆ, ಮತ್ತೋರ್ವ ಆರಂಭಿಕ ಆಟಗಾರ್ತಿ ಪ್ರಿಯಾ ಪೂನಿಯಾ 32 ರನ್‌ ಬಾರಿಸಿ ಪೆವಿಲಿಯನ್ ಸೇರಿದರು.

Jhulan Goswami

CricketMar 14, 2021, 8:27 AM IST

ಹರಿಣಗಳೆದುರು ಸರಣಿ ಉಳಿಸಿಕೊಳ್ಳಲು ಮಿಥಾಲಿ ಪಡೆ ಹೋರಾಟ

ಮೊದಲ ಪಂದ್ಯದಲ್ಲಿ ಸೋಲುಂಡಿದ್ದ ಮಿಥಾಲಿ ರಾಜ್‌ ಪಡೆ, 2ನೇ ಪಂದ್ಯದಲ್ಲಿ ಪುಟಿದೆದ್ದು ಸಮಬಲ ಸಾಧಿಸಿತ್ತು. ಆದರೆ ಶುಕ್ರವಾರ ನಡೆದಿದ್ದ 3ನೇ ಏಕದಿನದಲ್ಲಿ ಲೆಜಿಲಿ ಲೀ ಅವರ ಅಮೋಘ ಶತಕ, ಭಾರತವನ್ನು ಸೋಲಿನ ಸುಳಿಗೆ ತಳ್ಳಿತ್ತು.

Lizelle Lee

CricketMar 12, 2021, 4:58 PM IST

ಮಹಿಳಾ ಕ್ರಿಕೆಟ್‌: ಭಾರತದ ಗೆಲುವು ಕಸಿದ ಆಫ್ರಿಕಾದ ಲೀ

ಭಾರತ ನೀಡಿದ್ದ 249 ರನ್‌ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡ ಆರಂಭದಲ್ಲೇ ನಾಯಕಿ ಲೌಲಾ ವೋಲ್ವರ್ಟ್ ವಿಕೆಟ್ ಕಳೆದುಕೊಂಡಿತು. ಇನ್ನು ಲಾರಾ ಗುಡ್ಡಾಲ್‌ ಕೂಡಾ(16) ಹೆಚ್ಚುಹೊತ್ತು ಕ್ರೀಸ್‌ನಲ್ಲಿ ಉಳಿಯಲಿಲ್ಲ. ಆದರೆ ಮೂರನೇ ವಿಕೆಟ್‌ಗೆ ಲಿಜೆಲ್ಲೆ ಲೀ ಹಾಗೂ ಮೆಘಾನ್‌ ಡು ಪ್ರೇಜ್‌ 97 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು.

Mithali Raj

CricketMar 12, 2021, 12:20 PM IST

ಮಹಿಳಾ ಕ್ರಿಕೆಟ್‌: 10 ಸಾವಿರ ರನ್ ಬಾರಿಸಿ ಹೊಸ ದಾಖಲೆ ಬರೆದ ಮಿಥಾಲಿ ರಾಜ್‌..!

ಲಖನೌ: ತಮ್ಮ 16ನೇ ವಯಸ್ಸಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿ ಇಂದಿಗೂ ತಮ್ಮ ಖದರ್ ಮುಂದುವರೆಸಿರುವ ಭಾರತ ಮಹಿಳಾ ಏಕದಿನ ತಂಡದ ನಾಯಕಿ ಮಿಥಾಲಿ ರಾಜ್‌ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿ ಸೇರ್ಪಡೆಯಾಗಿದೆ. ದಕ್ಷಿಣ ಆಫ್ರಿಕಾ ವಿರುದ್ದ ಲಖನೌನ ಏಕಾನ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮೂರನೇ ಏಕದಿನ ಪಂದ್ಯದಲ್ಲಿ ಮಿಥಾಲಿ ರಾಜ್‌ ಭಾರತದ ಪರ ಅಪರೂಪದ ದಾಖಲೆ ನಿರ್ಮಿಸಿದ್ದಾರೆ.

Jhulan Goswami

CricketNov 25, 2020, 3:28 PM IST

ಮಹಿಳಾ ವೇಗಿ ಜೂಲನ್‌ ಗೋಸ್ವಾಮಿಗಿಂದು 38ನೇ ಹುಟ್ಟುಹಬ್ಬದ ಸಂಭ್ರಮ

ಜೂಲನ್ ಗೋಸ್ವಾಮಿ ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ ಅತ್ಯಂತ ಯಶಸ್ವಿ ಬೌಲರ್‌ ಆಗಿ ಹೊರಹೊಮ್ಮಿದ್ದು, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 300  ವಿಕೆಟ್ ಪಡೆದ ಮೊದಲ ಆಟಗಾರ್ತಿ ಎನ್ನುವ ಗೌರವಕ್ಕೆ ಜೂಲನ್ ಪಾತ್ರರಾಗಿದ್ದಾರೆ. ಬಿಸಿಸಿಐ ಕೂಡಾ ಜೂಲನ್ ಹುಟ್ಟುಹಬ್ಬಕ್ಕೆ ವಿನೂತನವಾಗಿ ಶುಭಕೋರಿದೆ.

• Smriti Mandhana

CricketApr 5, 2020, 2:41 PM IST

ಗಪ್ ಚುಪ್ ಪ್ರೀತಿ ಬಹಿರಂಗ ಪಡಿಸಿದ ಕ್ರಿಕೆಟ್ ಆಟಗಾರ್ತಿ ಸ್ಮೃತಿ ಮಂಧನಾ!

ಮುುಂಬೈ(ಏ.05): ಭಾರತ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ಸ್ಮೃತಿ ಮಂಧನಾ ಯುವಕರ ಕ್ರಶ್. ಮಂಧನಾ ಬ್ಯಾಟಿಂಗ್ ಮಾತ್ರವಲ್ಲ 23ರ ಹರೆಯದ ಸುಂದರ ಬೆಡಗಿ. ಹೀಗಾಗಿಯೇ ಯುವಕರು ಮಂಧನಾಗೆ ಫಿದಾ ಆಗಿದ್ದಾರೆ. ಇದೀಗ ಸ್ಮೃತಿ ಮಂಧನಾ ತಮ್ಮ ಕ್ರಶ್ ಹಾಗೂ ಪ್ರೀತಿ ಕುರಿತು ಇದೇ ಮೊದಲ ಬಾರಿಗೆ ಬಾಯ್ಬಿಟ್ಟಿದ್ದಾರೆ. ಹಾಗಾದರೆ ಸ್ಮೃತಿ ಮಂಧನಾ ಕ್ರಶ್ ಯಾರು? ಈ ಕುರಿತು ಮಂಧನಾ ಹೇಳಿದ್ದೇನು? ಇಲ್ಲಿದೆ ವಿವರ.

• Top 10 march 8

NewsMar 8, 2020, 5:52 PM IST

ಮೋದಿ ಟ್ವಿಟರ್ ಖಾತೆ ದಾನ, ಭಾರತ ವನಿತೆಯರಿಗೆ ರನ್ನರ್ ಅಪ್ ಸ್ಥಾನ; ಮಾ.08ರ ಟಾಪ್ 10 ಸುದ್ದಿ!

ಮಹಿಳಾ ದಿನಾಚರಣೆಯಂದು ಭಾರತ ಮಹಿಳಾ ಕ್ರಿಕೆಟ್ ತಂಡ, ಟಿ20 ವಿಶ್ವಕಪ್ ಟೂರ್ನಿಯಲ್ಲಿ ರನ್ನರ್ ಅಪ್ ಸ್ಥಾನ ಪಡೆದುಕೊಂಡಿದೆ. ಮಹಿಳಾ ಸಾಧಕಿಯರಿಗೆ ಪ್ರಧಾನಿ ಮೋದಿ ತಮ್ಮ ಟ್ವಿಟರ್ ಖಾತೆಯನ್ನು ನೀಡಿದ್ದಾರೆ. ಕನ್ನಡಿಗ ಸುನಿಲ್ ಜೋಶಿ ನೇತೃತ್ವದ ಟೀಂ ಇಂಡಿಯಾ ಆಯ್ಕೆ ಸಮಿತಿ ಸೌತ್ ಆಫ್ರಿಕಾ ತಂಡಕ್ಕೆ ಭಾರತ ತಂಡ ಆಯ್ಕೆ ಮಾಡಿದೆ. ಬೆಂಗಳೂರಿನಲ್ಲಿ ಸ್ಫೋಟ, ರೈತರ ಸಾಲಮನ್ನಾ ಸೇರಿದಂತೆ ಮಹಿಳಾ ದಿನಾಚರಣೆಯ ದಿನವಾದ ಮಾರ್ಚ್ 8ರ ಟಾಪ್ 10 ಸುದ್ದಿ ಇಲ್ಲಿವೆ.