ಭಯೋತ್ಪಾದಕರು  

(Search results - 37)
 • India26, Jun 2020, 3:35 PM

  ಪುಲ್ವಾಮದಲ್ಲಿ ಮೂವರು ಉಗ್ರರ ಹತ್ಯೆ, ತಪ್ಪಿತು ಮತ್ತೊಂದು ದುರಂತ!

  ಕೊರೋನಾ ವೈರಸ್ ಹೋರಾಟ, ಲಡಾಖ್ ಗಡಿಯಲ್ಲಿ ಚೀನಿ ಸೈನಿಕರ ಜೊತೆ ತಿಕ್ಕಾಟದ ನಡುವೆ ಭಾರತೀಯ ಸೇನೆ ಮತ್ತೊಂದು ಭಾರಿ ವಿಧ್ವಂಸಕ ಕೃತ್ಯಕ್ಕೆ ಮುಂದಾಗಿದ್ದ ಉಗ್ರರಿಗೆ ಭಾರತೀಯ ಸೇನೆ ನರಕ ದರ್ಶನ ಮಾಡಿದೆ. ಈ ಮೂಲಕ ಬಹುದೊಡ್ಡ ದುರಂತವೊಂದು ತಪ್ಪಿದೆ.

 • The Islamic terrorists caught in Assam,had planned to bomb blast in country on August 15

  India25, Apr 2020, 9:43 AM

  26/11 ರೀತಿ ಮತ್ತೊಂದು ದಾಳಿಗೆ ಪಾಕ್ ಸಂಚು

  ಕೊರೋನಾ ವೈರಸ್‌ ವಿರುದ್ಧ ಒಂದೆಡೆ ಭಾರತ ಹೋರಾಡುತ್ತಿದ್ದರೆ, ಪಕ್ಕದ ಪಾಕಿಸ್ತಾನಕ್ಕೆ ಭಯೋತ್ಪಾದನೆಯದ್ದೇ ಚಿಂತೆ. ಪಾಕಿಸ್ತಾನವು ತನ್ನ ಕಳ್ಳಸಾಗಣೆ ಹಾಗೂ ಭೂಗತ ಗುಂಪುಗಳ ಸಹಾಯದಿಂದ ಸಮುದ್ರ ಮಾರ್ಗದ ಮೂಲಕ ಭಾರತದ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದೆ ಎಂದು ಗುಪ್ತಚರ ಸಂಸ್ಥೆಗಳು ಎಚ್ಚರಿಕೆ ನೀಡಿವೆ.

 • <p>Viral Check </p>

  Fact Check21, Apr 2020, 10:13 AM

  Fact Check: ಕೇಸರಿ ದಬ್ಬಾಳಿಕೆ ನಡೆಯುತ್ತಿದೆಯೇ?

  ಕೇಸರಿ ಶಾಲು ಧರಿಸಿ, ಕತ್ತಿ ಗುರಾಣಿ ಹಿಡಿದಿರುವ ಗುಂಪೊಂದು ವ್ಯಕ್ತಿಯೊಬ್ಬನ ಕೊರಳ ಪಟ್ಟಿಹಿಡಿದು ಬೆದರಿಸುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡಿ, ‘ಇವರು ಆರ್‌ಎಸ್‌ಎಸ್‌ ಭಯೋತ್ಪಾದಕರು. ಇವರೀಗ ಭಾರತದಲ್ಲಿ ಸರ್ಕಾರವನ್ನೇ ನಿಯಂತ್ರಿಸುತ್ತಿದ್ದಾರೆ’ ಎಂದು ಹೇಳಲಾಗುತ್ತಿದೆ. 

 • Video Icon

  CRIME31, Jan 2020, 11:54 AM

  CCB ಯಿಂದ ಅರೆಸ್ಟ್ ಆಗಿದ್ದ ಉಗ್ರರು ಇಂದು NIA ವಶಕ್ಕೆ

  CCB ಯಿಂದ ಅರೆಸ್ಟ್ ಆಗಿದ್ದ ಉಗ್ರರನ್ನು ಇಂದು NIA ವಶಕ್ಕೆ ಒಪ್ಪಿಸಲಾಗಿದೆ. ಮೆಹಬೂಬ ಪಾಷಾ, ಮೊಹಮ್ಮದ್ ಮನ್ಸೂರ್, ಜಬೀವುಲ್ಲಾ, ಅಜ್ಮತ್ತುಲ್ಲಾ ಹಾಗೂ ಸಲೀಂರನ್ನು ಇಂದು ಎನ್‌ಐಎಗೆ ಹಸ್ತಾಂತರ ಮಾಡಲಾಗುತ್ತದೆ. 

 • trump

  International8, Jan 2020, 12:35 PM

  ಇರಾನ್ ಮಿಸೈಲ್ ದಾಳಿಗೆ 80 'ಅಮೆರಿಕನ್ ಭಯೋತ್ಪಾದಕರ' ಸಾವು?: ಏನಾಗಿಲ್ಲ ಎಂದ ಟ್ರಂಪ್!

  ಇರಾಕ್‌ನಲ್ಲಿ ಬೀಡು ಬಿಟ್ಟಿರುವ ಅಮೆರಿಕ ಸೇನಾ ನೆಲೆಗಳ ಮೇಲೆ ಇರಾನ್ ಮಿಸೈಲ್ ದಾಳಿ ನಡೆಸಿದೆ ಎನ್ನಲಾಗಿದ್ದು, ದಾಳಿಯಲ್ಲಿ ಸುಮಾರು 80 'ಅಮೆರಿಕನ್ ಭಯೋತ್ಪಾದಕರು'(ಸೈನಿಕರು) ಮೃತಪಟ್ಟಿರುವುದಾಗಿ ಇರಾನ್ ಸರ್ಕಾರಿ ಮಾಧ್ಯಮ ಹೇಳಿದೆ.

 • NIA, terrorist attack, Gorakhpur, attack, Diwali, attack alert, UP attack, Kashmir

  News4, Nov 2019, 7:13 AM

  ಚಳಿಗಾಲದಲ್ಲಿ ದೊಡ್ಡ ದಾಳಿ ನಡೆಸಲು ಉಗ್ರರ ಸಂಚು

   ಪಾಕಿಸ್ತಾನದ ಜೈಷ್‌ ಎ ಮೊಹಮ್ಮದ್‌ ಹಾಗೂ ಲಷ್ಕರ್‌ ಎ ತೊಯ್ಬಾ ಸಂಘಟನೆಯ ಭಯೋತ್ಪಾದಕರು, ಈ ಚಳಿಗಾಲದಲ್ಲಿ ಭಾರತದಲ್ಲಿ ದೊಡ್ಡ ಪ್ರಮಾಣದ ದಾಳಿ ನಡೆಸಲು ಸಂಚು ರೂಪಿಸಿದ್ದಾರೆ ಎಂದು ಭಾರತದ ಭದ್ರತಾ ಪಡೆಗಳಿಗೆ ಗುಪ್ತಚರ ಇಲಾಖೆಯು ಹೊಸ ಎಚ್ಚರಿಕೆ ಸಂದೇಶ ರವಾನಿಸಿದೆ. 

 • Terrorist

  INDIA30, Oct 2019, 8:15 AM

  ಕಾಶ್ಮೀರದಲ್ಲಿ ಹೊರರಾಜ್ಯದ ಕಾರ್ಮಿಕರ ಅಪಹರಿಸಿ ಗುಂಡಿಟ್ಟು ಹತ್ಯೆ

  ಅನ್ಯರಾಜ್ಯದ ಕಾರ್ಮಿಕರ ಹುಡುಕಿ ಹುಡುಕಿ ಹತ್ಯೆ ಮಾಡುವ ಪಾಪದ ಕೆಲಸವನ್ನು ಮುಂದುವರೆಸಿರುವ ಉಗ್ರರು, ಮಂಗಳವಾರ ಪಶ್ಚಿಮ ಬಂಗಾಳದ 5 ಕಾರ್ಮಿಕರನ್ನು ಹತ್ಯೆಗೈದಿದ್ದಾರೆ. ದಕ್ಷಿಣ ಕಾಶ್ಮೀರದ ಕುಲ್ಗಾಂ ಜಿಲ್ಲೆಯಲ್ಲಿ ಉಗ್ರರು ಈ ಹೀನ ಕೃತ್ಯ ಎಸಗಿದ್ದಾರೆ. ಘಟನೆಯಲ್ಲಿ ಓರ್ವ ಕಾರ್ಮಿಕ ತೀವ್ರವಾಗಿ ಗಾಯಗೊಂಡಿದ್ದಾನೆ.

 • Drones

  INDIA23, Oct 2019, 8:04 AM

  ಪಂಜಾಬ್ ಗಡಿಯಲ್ಲಿ ಮತ್ತೆ ಪಾಕ್ ಗುಪ್ತಚರ ಡ್ರೋನ್ ಗಳ ಸಂಚಾರ ಪತ್ತೆ

  ಭಾರತದಲ್ಲಿ ಉಗ್ರ ದಾಳಿಯ ಪಿತೂರಿ ರೂಪಿಸುತ್ತಿರುವ ಪಾಕಿಸ್ತಾನ ಮೂಲದ ಭಯೋತ್ಪಾದಕರು, ಡ್ರೋನ್‌ಗಳಲ್ಲಿ ನೂತನ ತಂತ್ರಜ್ಞಾನ ಅಳವಡಿಸುವ ಮೂಲಕ ಭಾರತದ ಗಡಿ ನುಸುಳಲು ಯತ್ನಿಸುತ್ತಿದ್ದಾರೆ. ಡ್ರೋನ್‌ಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನೊಳಗೊಂಡ ಕ್ಯಾಮೆರಾ, ಜಿಪಿಎಸ್‌ ಮತ್ತು ದಿಕ್ಸೂಚಿ ಉಪಕರಣಗಳನ್ನು ಉಗ್ರರು ಡ್ರೋನ್‌ಗಳಲ್ಲಿ ಅಡಗಿಸಿಟ್ಟಿದ್ದಾರೆ.

 • pak terrorists

  News16, Oct 2019, 9:34 AM

  ‘ಜಮಾತ್‌ ಭಾರತ್‌’ ಕಟ್ಟಲು ನಿರ್ಧರಿಸಿದ್ದ ಜೆಎಂಬಿ!

  ಜೆಎಂಬಿ ಸಂಘಟನೆಯ ಭಯೋತ್ಪಾದಕರು ಭಾರತದಲ್ಲಿ ಭಯೋತ್ಪಾದನೆ ಕೃತ್ಯ ಎಸಗಲು ಪ್ರತ್ಯೇಕವಾಗಿ ‘ಜಮಾತ್‌ ಉಲ್‌ ಮುಜಾಹಿದೀನ್‌ ಭಾರತ’ (ಜೆಎಂಐ) ಎಂಬ ಹೆಸರಿನಲ್ಲಿ ಸಂಘಟನೆ ಕಟ್ಟಲು ನಿರ್ಧರಿಸಿದ್ದರು ಎಂಬ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ. 

 • pak terrorists

  News15, Oct 2019, 7:20 AM

  ಕರ್ನಾಟಕದಲ್ಲಿ ಬಾಂಗ್ಲಾ ಉಗ್ರರ ಅಡಗುತಾಣ

  ‘ಜಮಾತ್‌ ಉಲ್‌ ಮುಜಾಹಿದಿನ್‌ ಬಾಂಗ್ಲಾದೇಶ’ (ಜೆಎಂಬಿ) ಸಂಘಟನೆಯ ಭಯೋತ್ಪಾದಕರು ಕರ್ನಾಟಕದಲ್ಲಿ ಸಕ್ರಿಯರಾಗಿ ಚಟುವಟಿಕೆ ನಡೆಸುತ್ತಿದ್ದಾರೆ ಎಂಬ ಆತಂಕಕಾರಿ ಸಂಗತಿ ಅಧಿಕೃತವಾಗಿ ಹೊರಬಿದ್ದಿದೆ.

 • terrorist jammu

  News1, Oct 2019, 9:34 AM

  ಅಮಾವಾಸ್ಯೆ ದಿನವೇ ಗಡಿಯೊಳಕ್ಕೆ ಒಳನುಸುಳ್ತಾರೆ ಭಯೋತ್ಪಾದಕರು!

  ಅಮಾವಾಸ್ಯೆ ದಿನವೇ ಗಡಿಯೊಳಕ್ಕೆ ಒಳನುಸುಳ್ತಾರೆ ಭಯೋತ್ಪಾದಕರು!| ನಸುಕಿನ 2ರಿಂದ 5: ಉಗ್ರ ಅಚ್ಚುಮೆಚ್ಚಿನ ಸಮಯ| ಎನ್‌ಐಎ ತನಿಖೆಯಿಂದ ಬೆಳಕಿಗೆ

 • Encounter

  NEWS28, Sep 2019, 7:22 PM

  ಧಿಮಾಕಿನ ಮೂವರು ಉಗ್ರರನ್ನು ಸದೆಬಡಿದ ಸೇನೆ: ಓರ್ವ ಯೋಧ ಹುತಾತ್ಮ!

  ಗಂದೇರ್ ಬಾಲ್ ಜಿಲ್ಲೆಯ ನರನಾಗ್ ಬಳಿ ಮನೆಯೊಳಗೆ ನುಗ್ಗಿದ್ದ ಉಗ್ರರು, ಮನೆಯವರನ್ನು ಒತ್ತೆಯಾಳಾಗಿರಿಸಿಕೊಂಡು, ಭದ್ರತಾ ಪಡೆಗಳೊಂದಿಗೆ ಕಾಳಗಕ್ಕೆ ಇಳಿದಿದ್ದರು. ಕಾರ್ಯಾಚರಣೆಯಲ್ಲಿ ಸೇನೆ ಮೂವರೂ ಭಯೋತ್ಪಾದಕರನ್ನು ಹೊಡೆದುರುಳಿಸುವಲ್ಲಿ ಸಫಲವಾಗಿದೆ.

 • India-Pakistan border, India Pakistan, terrorist, Pakistani intruder, terrorist video

  NEWS27, Sep 2019, 4:36 PM

  ಒಳಬಂದ ಉಗ್ರರಿಗೆ ಗುಂಡಿನ ಸ್ವಾಗತ: ಎದ್ನೊ ಬಿದ್ನೊ ಅಂತ ಓಡಿದರು ಪಾಕ್‌ನತ್ತ!

  ಭಾರತದ ಗಡಿಯೊಳಗೆ ನುಸುಳಲು ಯತ್ನಿಸಿದ ಪಾಕಿಸ್ತಾನಿ ಉಗ್ರರ ಮೇಲೆ ಭಾರತೀಯ ಸೈನಿಕರು ಗುಂಡಿನ ದಾಳಿ ನಡೆಸಿದ್ದು, ಪ್ರಾಣ ಉಳಿಸಿಕೊಳ್ಳಲು ಉಗ್ರರು ಓಡಿ ಹೋಗುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಕುರಿತು ಭಾರತೀಯ ಸೇನೆ ವಿಡಿಯೋ ಬಿಡುಗಡೆ ಮಾಡಿದೆ.

 • Karnataka Districts27, Sep 2019, 12:06 PM

  ಕೆಲವೇ ದಿನಗಳಲ್ಲಿ ಪಾಕ್‌ ಆಕ್ರಮಿತ ಕಾಶ್ಮೀರ ಭಾರತಕ್ಕೆ: ತೇಜಸ್ವಿನಿ

  ಭಯೋತ್ಪಾದಕರು ಹಾಗೂ ಪ್ರತ್ಯೇಕತಾವಾದಿಗಳಿಂದ ನಲುಗಿದ್ದ ಜಮ್ಮು-ಕಾಶ್ಮೀರದ ಜನರಿಗೆ 7 ದಶಕಗಳ ಬಳಿಕ ಸ್ವಾತಂತ್ರ್ಯ ಕೊಡಿಸಿದ ಕೀರ್ತಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಸಲ್ಲುತ್ತದೆ. ಡಾ. ಅಂಬೇಡ್ಕರ್‌ ಮೂಲಕ ಕಾಂಗ್ರೆಸ್‌ ಪಕ್ಷವು ಒತ್ತಡದಿಂದ ಆರ್ಟಿಕಲ್‌ 370ನ್ನು ಹೇರಿತ್ತು, ಇದೀಗ ರದ್ದು ಮಾಡಿರುವುದನ್ನು ಅಂತಾರಾಷ್ಟ್ರೀಯ ಸಮಸ್ಯೆ ಎಂದು ಬಿಂಬಿಸಲು ಹೊರಟ ಪಾಕಿಸ್ತಾನಕ್ಕೆ ಮುಖಭಂಗವಾಗಿದ್ದು, ಕೆಲವೇ ದಿನಗಳಲ್ಲಿ ಪಿಓಕೆ ಸಹ ನಮ್ಮದಾಗಲಿದೆ ಎಂದು ಬಿಜೆಪಿ ನಾಯಕಿ ತೇಜಸ್ವಿನಿ ರಮೇಶಗೌಡ ಹೇಳಿದರು.

 • Video Icon

  NEWS31, Aug 2019, 3:43 PM

  ಸಿಲಿಕಾನ್ ಸಿಟಿಗೆ ಆತಂಕ; ನಗರದಲ್ಲಿ ಅಡ್ಡಾಡುತ್ತಿದ್ದಾರೆ ಪಾಕ್ ಕ್ರಿಮಿಗಳು?

  ಸಿಲಿಕಾನ್ ಸಿಟಿ ಬೆಂಗಳೂರಿಗೆ ಆಗಮಿಸಿದ್ದರು ಪಾಕ್ ಶಂಕಿತ ಉಗ್ರರು. ಕೇಂದ್ರ ಗುಪ್ತಚರ ಇಲಾಖೆ ಅವರ ತಂಡವನ್ನು ಭೇದಿಸಿದೆ. ಮೂವರು ಅನುಮಾನಾಸ್ಪದ ವ್ಯಕ್ತಿಗಳನ್ನು ಹಿಡಿದು ತೀವ್ರ ವಿಚಾರಣೆ ನಡೆಸಿದಾಗ ಸತ್ಯಾಂಶ ಹೊರ ಬಿದ್ದಿದೆ. ಈ ಬಗ್ಗೆ ವರದಿಯನ್ನು ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಏನಿದು ಸುದ್ದಿ? ಇಲ್ಲಿದೆ ನೋಡಿ.