ಭತ್ತ ನಾಟಿ  

(Search results - 5)
 • undefined

  Mandya30, Oct 2019, 2:23 PM IST

  ಪಾಂಡವಪುರ: ಹದಗೆಟ್ಟರಸ್ತೆಯಲ್ಲಿ ಗ್ರಾಮಸ್ಥರಿಂದ ಭತ್ತ ನಾಟಿ

  ತಾಲೂಕಿನ ಸುಂಕಾತೊಣ್ಣೂರು ಮಾಡರಹಳ್ಳಿ ಗ್ರಾಮದ ರಸ್ತೆಯನ್ನು ದುರಸ್ತಿ ಮಾಡಬೇಕೆಂದು ಒತ್ತಾಯಿಸಿ ಗ್ರಾಮಸ್ಥರು ರಸ್ತೆಯಲ್ಲಿ ನಾಟಿ ಮಾಡಿ ಧರಣಿ ನಡೆಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದಾರೆ.

 • Shivamogga 2
  Video Icon

  Shivamogga25, Oct 2019, 6:00 PM IST

  ಸಿಎಂ ತವರು ಜಿಲ್ಲೆ ರಸ್ತೆ ಗುಂಡಿ ಗುಂಡಿಗಳಲ್ಲಿ ಕೊರಗ ಮೀನು ಬೇಟೆ!

  ಶಿವಮೊಗ್ಗ[ಅ. 25] ಸಿಎಂ ತವರು ಜಿಲ್ಲೆಯ ಗುಂಡಿ ಬಿದ್ದ ರಸ್ತೆಗಳ ದುಸ್ಥಿತಿ ಈ ಪ್ರತಿಭಟನೆಯತಲ್ಲಿ ಅನಾವರಣವಾಯಿತು.  ರಸ್ತೆಗಳೋ ಕೆರೆಯೋ ತಿಳಿಯದಾಗಿದೆ ಎಂದು ವಿದ್ಯಾರ್ಥಿ ಸಂಘಟನೆಯ ವಿನಯ್ ರಾಜಾವತ್ ನೇತೃತ್ವದಲ್ಲಿ ಶಿವಮೊಗ್ಗ ನಗರದ ಪಾರ್ಕ್ ಬಡಾವಣೆಯ ಮುಖ್ಯ ರಸ್ತೆಯಲ್ಲಿ ವಿನೂತನ ಪ್ರತಿಭಟನೆ ನಡೆಸಲಾಯಿತು.

  ಮುಖ್ಯಮಂತ್ರಿ ಬಿ.ಎಸ್.ಯಡ್ಡಿಯೂರಪ್ಪ, ಸಚಿವ ಈಶ್ವರಪ್ಪ ರಿಗೆ,ಸಂಸದ ಬಿ.ವೈ.ರಾಘವೇಂದ್ರರಿಗೆ ಧಿಕ್ಕಾರ, ಬರಬೇಕಪ್ಪ ಬರಬೇಕು ಜಿಲ್ಲಾಧಿಕಾರಿಗಳು ಬರಬೇಕು, ಸರ್ಕಾರ ಅಂತೆ ಸರ್ಕಾರ ಅವರಪ್ಪಂದಂತೆ ಸರ್ಕಾರ, ಬೇಕೇ ಬೇಕು ನ್ಯಾಯಬೇಕು ಎಂಬ ಘೋಷಣೆ ಆಕ್ರೋಶ ಹೊರಹಾಕಿದರು.

  ರಸ್ತೆಗಳಲ್ಲಿ ಗುಂಡಿ ಮುಚ್ಚದೆ ಇರುವುದರ ವಿರುದ್ಧ  ಮಳೆಯಿಂದಾಗಿ ನೀರು ನಿಂತಿದ್ದು ಇದನ್ನ ಅಣಕಿಸುವಂತೆ ನೀರಿನಲ್ಲಿ ಕೊರಗ ಮೀನನ್ನ ಹಿಡಿದು ಹಾಗೂ ಭತ್ತ ನಾಟಿ ಮಾಡುವ ಮೂಲಕ ವಿದ್ಯಾರ್ಥಿ ಸಂಘಟನೆ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ಹೊರ ಹಾಕಿತು. 

 • nikk

  Lok Sabha Election News8, Apr 2019, 5:17 PM IST

  ಕ್ಯಾಮರಾ ಕ್ಲಿಕ್ಸ್: ಮಂಡ್ಯ ಪ್ರಚಾರದಲ್ಲಿ ನಿಖಿಲ್ ವಿವಿಧ ರೂಪಗಳು!

  ಲೋಕಸಭಾ ಚುನಾವಣೆಯಲ್ಲಿ ಈ ಬಾರಿ ಕರ್ನಾಟಕದ ಮಂಡ್ಯ ಕ್ಷೇತ್ರ ಭಾರೀ ಕುತೂಹಲ ಮುಡಿಸಿದೆ. ಸುಮಲತಾ ಅಂಬರೀಶ್ ಮಂಡ್ಯ ಲೋಕಸಭಾ ಅಖಾಡಕ್ಕಿಳಿದಿರುವುದರಿಂದ ಸಿಎಂ ಕುಮಾರಸ್ವಾಮಿಗೆ ತಮ್ಮ ಪುತ್ರ ನಿಖಿಲ್ ಗೆ ಗೆಲುವು ತಂದು ಕೊಡುವುದು ಪ್ರತಿಷ್ಠೆಯ ವಿಚಾರವಾಗಿದೆ. ಒಂದೆಡೆ ಸುಮಲತಾ ಪರವಾಗಿ ಸ್ಯಾಂಡಲ್ ವುಡ್ ಸ್ಟಾರ್ಸ್ ದರ್ಶನ್ ಹಾಗೂ ಯಶ್ ಅಬ್ಬರದ ಪ್ರಚಾರ ನಡೆಸುತ್ತಿದ್ದರೆ. ಇತ್ತ ಕುಮಾರಸ್ವಾಮಿ ಮಗನ ಪರ ಪ್ರಚಾರಕ್ಕಾಗಿ ನಾನಾ ಕಸರತ್ತು ನಡೆಸುತ್ತಿದ್ದಾರೆ. ನಿಖಿಲ್ ಕೂಡಾ ಮತದಾರರನ್ನು ಓಲೈಸಲು ಯತ್ನಿಸುತ್ತಿದ್ದು ಇದಕ್ಕಾಗಿ ವಿವಿಧ ರೂಪಗಳನ್ನೂ ಧರಿಸಿದ್ದಾರೆ. ಪ್ರಚಾರದ ವೇಳೆ ಎತ್ತಿನ ಗಾಡಿ ನಡೆಸುವುದು, ಭತ್ತ ನಾಟಿ ಹೀಗೆ ಹಲವಾರು ಕಸರತ್ತು ನಡೆಸಿದ್ದಾರೆ. ಇಂತಹ ಕೆಲ ದೃಶ್ಯಗಳು ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಗಿವೆ.

 • undefined

  Bidar13, Aug 2018, 12:33 PM IST

  ಏರ್ ಶೋ ಬೆಂಗಳೂರಿನಿಂದ ಲಕ್ನೋಗೆ ಶಿಫ್ಟ್ ಆಗಲ್ಲ: ಬಿಎಸ್‌ವೈ

  ಸಿಎಂ ಭತ್ತ ನಾಟಿ ವಿಚಾರವಾಗಿ ಬಿಎಸ್ ವೈ ಪ್ರತಿಕ್ರಿಯಿಸುತ್ತಾ,  ಉತ್ತರ ಕರ್ನಾಟಕದ 13 ಜಿಲ್ಲೆಯಲ್ಲಿ ತೀವ್ರ ಬರಗಾಲ ಇದೆ. ರಾಜಕೀಯ ದೊಂಬರಾಟ ಬಿಟ್ಟು  ರೈತರ ಜ್ವಲಂತ ಸಮಸ್ಯೆಗಳನ್ನು ಇತ್ಯರ್ಥ ಮಾಡಲಿ.  ಕೇವಲ ಒಂದು ಜಿಲ್ಲೆಯಲ್ಲಿ ನಾಟಿ ಮಾಡಿದ್ರೆ ರೈತರ ಸಮಸ್ಯೆ ಬಗೆಹರಿಯಲ್ಲ.  ಉತ್ತರ ಕರ್ನಾಟಕದಲ್ಲಿ ತೀವ್ರ ಬರಗಾಲ ಇದೆ.  ಸಿ.ಎಂ ಕುಮಾರಸ್ವಾಮಿ ಪ್ರವಾಸ ಮಾಡಿ ರೈತರ ಸಮಸ್ಯೆ ಅರಿಯಲಿ ಎಂದು ಬಿಎಸ್ ವೈ ಹೇಳಿದ್ದಾರೆ. 
   

 • undefined
  Video Icon

  NEWS10, Aug 2018, 10:09 PM IST

  ಹಳ್ಳಿ ಗೆಟಪ್‌ನಲ್ಲಿ ಸಿಎಂ ಕುಮಾರಸ್ವಾಮಿ ಭತ್ತ ನಾಟಿ!

  ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಗದ್ದೆಗಿಳಿದು ಕೈಯಲ್ಲಿ ಭತ್ತದ ಪೈರು ಹಿಡಿದು ನಾಟಿ ಮಾಡಿದರೆ ಹೇಗಿರುತ್ತೆ? ಶನಿವಾರ ಮಂಡ್ಯಕ್ಕೆ ಭೇಟಿ ನೀಡಲಿರುವ ಎಚ್‌ಡಿಕೆ, ಹಳ್ಳಿ ಗೆಟಪ್‌ನಲ್ಲಿ ನಾಟಿ ಕೆಲಸ ಮಾಡಲಿದ್ದಾರೆ. ಯಾಕಂತೀರಾ? ಹಾಗಾದರೆ ಈ ಸ್ಟೋರಿ ನೋಡಿ...