ಬೆಳಗಾವಿ

(Search results - 1516)
• Video Icon

Karnataka Districts14, Jul 2020, 1:16 PM

ಬೆಳಗಾವಿ: ಕೊರೋನಾ ಲಕ್ಷಣ, ಹೋಂ ಕ್ವಾರಂಟೈನ್‌ನಲ್ಲಿ ಬಿಜೆಪಿ ಶಾಸಕ ಅನಿಲ್‌ ಬೆನಕೆ

ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಅನಿಲ್‌ ಬೆನಕೆ ಅವರಿಗೆ ಮಹಾಮಾರಿ ಕೊರೋನಾ ವೈರಸ್‌ನ ಲಕ್ಷಣಗಳು ಕಂಡು ಬಂದಿವೆ. ಹೀಗಾಗಿ ಅನಿಲ್‌ ಬೆನಕೆ ಅವರು ಹೋಂ ಕ್ವಾರಂಟೈನ್‌ಲ್ಲಿದ್ದಾರೆ ಎಂದು ತಿಳಿದು ಬಂದಿದೆ.

Satish Jarkiholi

Politics13, Jul 2020, 7:35 PM

ಸ್ಮಶಾನದಲ್ಲಿಯೇ ಹೊಸ ಕಾರಿಗೆ ಪೂಜೆ: ವಾಹನ ಸಂಖ್ಯೆ 2023ರ ಗುಟ್ಟು ಬಿಚ್ಚಿಟ್ಟ ಜಾರಕಿಹೊಳಿ

ಹೊಸ ವಾಹನ ಖರೀದಿ ಮಾಡಿದರೆ ಮನೆ ದೇವರು, ಇಷ್ಟದ ದೇವಸ್ಥಾನದ ಬಳಿ ಪೂಜೆ ಮಾಡಿಸುವುದು ಸಾಮಾನ್ಯ. ಆದರೆ  ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ತಮ್ಮ ಕಾರಿಗೆ ಸ್ಮಶಾನದಲ್ಲಿ ಪೂಜೆ ನೆರವೇರಿಸುವ ಮೂಲಕ ಗಮನ ಸೆಳೆದಿದ್ದಾರೆ. ತಮ್ಮ ಮೂಢನಂಬಿಕೆ ವಿರುದ್ಧ ಹೋರಾಟವನ್ನು ಮುಂದುವರೆಸಿದ್ದಾರೆ. ಇನ್ನು ಸತೀಶ ಜಾರಕಿಹೊಳಿ ನೂತನ ವಾಹನ ಸಂಖ್ಯೆ 2023 ಗುಟ್ಟು ಬಿಚ್ಚಿಟ್ಟಿದ್ದಾರೆ.

• Karnataka Districts13, Jul 2020, 9:53 AM

ಬೆಳಗಾವಿಯಲ್ಲಿ ಗಮನ ಸೆಳೆದ ಕ್ಯಾಮೆರಾ ವಿನ್ಯಾಸದ ಮನೆ ನಿರ್ಮಾಣ

ಬೆಳಗಾವಿ(ಜು.13): ಕ್ಯಾಮೆರಾ ಆಕೃತಿಯಲ್ಲಿ ನಗರದಲ್ಲಿ ಮನೆ ನಿರ್ಮಾಣ ಮಾಡಲಾಗಿದ್ದು. ಇದೀಗ ಎಲ್ಲರನ್ನೂ ತನ್ನತ್ತ ಸೆಳೆಯುವಂತೆ ಮಾಡಿದೆ.

• Satish Jarakiholi

Karnataka Districts13, Jul 2020, 7:25 AM

ಬೆಳಗಾವಿ: ಸ್ಮಶಾ​ನ​ದಲ್ಲಿ ಸತೀಶ್‌ ಜಾರ​ಕಿ​ಹೊಳಿ ಕಾರಿಗೆ ಚಾಲನೆ

ಹೊಸದಾಗಿ ಖರೀದಿಸಿದ ಕಾರನ್ನು ಒಳ್ಳೆಯ ಮುಹೂರ್ತ ನೋಡಿ, ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಸುವುದು ನಂಬಿಕೆ. ಆದರೆ, ಮೂಢನಂಬಿಕೆಗಳ ವಿರುದ್ಧ ಸಡ್ಡು ಹೊಡೆದಿರುವ ಕೆಪಿ​ಸಿಸಿ ಕಾರ್ಯಾ​ಧ್ಯ​ಕ್ಷರೂ ಆದ ಶಾಸಕ ಸತೀಶ್‌ ಜಾರಕಿಹೊಳಿ ಅವರು ಹೊಸ​ದಾಗಿ ಖರೀ​ದಿಸಿದ ತಮ್ಮ ಫಾರ್ಚೂ​ನರ್‌ (ಓಅ​49 N​2023) ಕಾರಿಗೆ ಇಲ್ಲಿನ ಸದಾ​ಶಿವ ನಗ​ರದ ಸ್ಮಶಾನದಲ್ಲಿ ಚಾಲನೆ ಕೊಡ​ಲಿ​ದ್ದಾರೆ.

Lockdown

Karnataka Districts12, Jul 2020, 2:36 PM

ಸರ್ಕಾರಕ್ಕಿಂತ ಮುಂಚೆ ಜಿಲ್ಲೆಯಲ್ಲಿ ಲಾಕ್‌ಡೌನ್‌ ಘೋಷಿಸಿದ ಸಚಿವ

ಬೆಂಗಳೂರು ಮಾದರಿಯಲ್ಲಿ ಜಿಲ್ಲೆಯ ಗೋಕಾಕ್‌ ತಾಲೂಕಿನಲ್ಲಿ 7 ರಿಂದ 10 ದಿನ ಲಾಕ್‌ಡೌನ್ ಮಾಡಲು ನಿರ್ಧರಿಸಲಾಗಿದೆ ಎಂದು ಜಲಸಂಪನ್ಮೂಲ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ‌ ಅವರು ಹೇಳಿದ್ದಾರೆ.

• Karnataka Districts12, Jul 2020, 10:32 AM

KSRTC ನೌಕರರ ವೇತನ ಕಡಿತ: ಸಚಿವ ಸವದಿ ಪ್ರತಿಕ್ರಿಯೆ

ಕೊರೋನಾ ಪರಿ​ಣಾ​ಮ​ವಾಗಿ ಕಳೆದ ನಾಲ್ಕು ತಿಂಗಳಲ್ಲಿ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ 2652 ಕೋಟಿ ಹಾನಿಯಾಗಿದೆ. ಆದರೂ ಸಂಸ್ಥೆಯ ಯಾವುದೇ ನೌಕರರನ್ನು ರಜೆ ಮೇಲೆ ಕಳಿಸುತ್ತಿಲ್ಲ. ಸುಳ್ಳು ಸುದ್ದಿಗೆ ಗಮನಹರಿಸಬೇಡಿ ಎಂದು ಸಾರಿಗೆ ಸಚಿವರೂ ಆದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ.

• Video Icon

state9, Jul 2020, 5:07 PM

ಹೆಬ್ಬಾಳ್ಕರ್ VS ಸಾಹುಕಾರ್ ಮಧ್ಯೆ ಶುರುವಾಗಿದೆ ಕುಕ್ಕರ್ ವಾರ್..!

' ನನ್ನ ನೀನು ಗೆಲ್ಲಲಾರೆ' ಎಂದು ಒಬ್ರು ಹೇಳಿದ್ರೆ, ' ನನ್ನ ಮುಂದೆ ನೀನ್ಯಾವ ಲೆಕ್ಕ' ಎಂದು ಇನ್ನೊಬ್ಬರು ಹೇಳಲು ಶುರು ಮಾಡಿದ್ದಾರೆ. ಸೈಲೆಂಟ್ ಆಗಿದ್ದ ಬೆಳಗಾವಿ ರಾಜಕಾರಣದಲ್ಲಿ ಮತ್ತೆ ಗುರು ಶಿಷ್ಯರ ಜಟಾಪಟಿ ಶುರುವಾಗಿದೆ. ಗೋಕಾಕ್ ಗಂಡು ರಮೇಶ್ ಜಾರಕಿಹೊಳಿ ಹಾಗೂ ಹೆಣ್ಣು ಹುಲಿ ಲಕ್ಷ್ಮೀ ಹೆಬ್ಬಾಳ್ಕರ್ ಅಖಾಡಕ್ಕಿಳಿದಿದ್ದಾರೆ. ಹೆಬ್ಬಾಳ್ಕರ್ VS ಸಾಹುಕಾರ್ ಕದನ ಶುರುವಾಗಿದೆ.

lakshmi-hebbalkar

Video Icon

Politics8, Jul 2020, 3:30 PM

ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಕಾನೂನು ಸಮರಕ್ಕೆ ಲಕ್ಷ್ಮೀ ಹೆಬ್ಬಾಳ್ಕರ್ ಚಿಂತನೆ

ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಸಚಿವ ರಮೇಶ್ ಜಾರಕಿಹೊಳಿ ನಡುವೆ ಮುಸುಕಿನ ಗುದ್ದಾಟ ಮುಂದುವರೆದಿದೆ.

• Karnataka Districts8, Jul 2020, 1:55 PM

ಬೆಳಗಾವಿ: ರಮೇಶ ಜಾರಕಿಹೊಳಿ-ಲಕ್ಷ್ಮೀ ಹೆಬ್ಬಾಳಕರ ಕುಕ್ಕರ್‌ ವಾರ್‌..!

ರಾಜ್ಯ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ಚಿಂತನೆ ನಡೆಸಿರುವುದಾಗಿ ಮತ್ತು ಚುನಾವಣೆ ಆಯೋಗಕ್ಕೆ ದೂರು ಸಲ್ಲಿಸುವುದಾಗಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ, ಕಾಂಗ್ರೆಸ್ ನಾಯಕಿ ಲಕ್ಷ್ಮೀ ಹೆಬ್ಬಾಳಕರ ಅವರು ತಿಳಿಸಿದ್ದಾರೆ.

Coronavirus

Karnataka Districts6, Jul 2020, 8:35 AM

ಬೆಳಗಾವಿ: ಕೊನೆಗೂ ನಡೀತು ಕೊರೋನಾ ಸೋಂಕಿನಿಂದ ಮೃತಪಟ್ಟವರ ಅಂತ್ಯಕ್ರಿಯೆ

ಸ್ಥಳೀಯ ಬಿಮ್ಸ್‌ ಆಸ್ಪತ್ರೆಯಲ್ಲಿ ಕೊರೋನಾ ಸೋಂಕಿನಿಂದ ಮೃತಪಟ್ಟ ಇಬ್ಬರು ಪುರುಷರ ಶವಗಳ ಅಂತ್ಯಕ್ರಿಯೆ ಕೊನೆಗೂ ಬೆಳಗಾವಿಯ ಈದ್ಗಾ ಮೈದಾನ ಬಳಿ ಭಾನುವಾರ ನೆರವೇರಿದೆ.

Suicide

CRIME6, Jul 2020, 8:22 AM

ಬೈಲಹೊಂಗಲ: ಮಗನ ಕಿರುಕುಳಕ್ಕೆ ಬೇಸತ್ತು ತಾಯಿ ಆತ್ಮಹತ್ಯೆ

ಹಣಕ್ಕಾಗಿ ಪೀಡಿಸುತ್ತಿದ್ದ ಮಗನ ಕಿರುಕುಳ ತಾಳಲಾರದೆ ತಾಯಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಯರಡಾಲ ಗ್ರಾಮದಲ್ಲಿ ಭಾನುವಾರ ಜರುಗಿದೆ.

Coronavirus

Video Icon

state5, Jul 2020, 3:33 PM

ಅಂತ್ಯಕ್ರಿಯೆ ವಿಚಾರವಾಗಿ ಪಾಲಿಕೆ- ಆರೋಗ್ಯ ಇಲಾಖೆ ನಡುವೆ ಫೈಟ್..! ಏನಿದು ಅವ್ಯವಸ್ಥೆ?

ಬೆಳಗಾವಿಯಲ್ಲಿ ಕೊರೊನಾ ಸೋಂಕಿತರ ಅಂತ್ಯಕ್ರಿಯೆಯದ್ದೇ ಒಂದು ಸಮಸ್ಯೆಯಾಗಿದೆ. ಶವಸಂಸ್ಕಾರ ವಿಚಾರವಾಗಿ ಮಹಾನಗರ ಪಾಲಿಕೆ ಹಾಗೂ ಆರೋಗ್ಯ ಇಲಾಖೆ ನಡುವೆ ಫೈಟ್ ನಡೆಯುತ್ತಿದೆ. ಕಳೆದ ರಾತ್ರಿಯಿಂದ ಶವಾಗಾರದಲ್ಲಿ ಎರಡು ಶವಗಳಿವೆ. ಪಾಲಿಕೆಯಿಂದ ಅಂತ್ಯಸಂಸ್ಕಾರ ಎಂದು ಆರೋಗ್ಯ ಇಲಾಖೆ ಹೇಳಿದರೆ, ಆರೋಗ್ಯ ಇಲಾಖೆ ಅಂತ್ಯ ಸಂಸ್ಕಾರ ಮಾಡಲಿ ಅಂತ ಪಾಲಿಕೆ ಹೇಳುತ್ತಿದೆ. ಇಬ್ಬರ ಕಿತ್ತಾಟದ ನಡುವೆ ಅನಾಥವಾಗಿ ಬಿದ್ದಿವೆ ಶವಗಳು. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!

Coronavirus

Karnataka Districts5, Jul 2020, 11:07 AM

ಅಥಣಿ: ಒಂದೇ ಕುಟುಂಬದ ಐವರಿಗೆ ಅಂಟಿದ ಮಹಾಮಾರಿ ಕೊರೋನಾ..!

ತಾಲೂಕಿನಲ್ಲಿ ಕೊರೋನಾ ಅಟ್ಟಹಾಸ ಮುಂದುರೆದಿದ್ದು, ಶನಿವಾರ ಒಂದೇ ದಿನ ಮತ್ತೆ 12 ಪ್ರಕರಣಗಳು ಬೆಳಕಿಗೆ ಬಂದಿವೆ. ತಾಲೂಕಿನ ಸಂಕೋನಟ್ಟಿ, ಅನಂತಪೂರ, ಗುಂಡೇವಾಡಿ, ಝುಂಜರವಾಡ, ಚಿಕ್ಕಟ್ಟಿಮತ್ತು ಅಥಣಿ ಪಟ್ಟಣ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಕೋರೋನಾ ಸೊಂಕಿತರು ಹೆಚ್ಚಾಗುತ್ತಿದ್ದಾರೆ. ಶೇಡಬಾಳ ಗ್ರಾಮದಲ್ಲಿ ಒಂದೇ ಕುಟುಂಬದ 5 ಜನರಿಗೆ ಸೋಂಕು ದೃಢಪಟ್ಟಿದೆ.

Coronavirus

Karnataka Districts5, Jul 2020, 10:55 AM

ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾಗೆ ಮತ್ತೊಂದು ಬಲಿ, 27 ಪಾಸಿಟಿವ್‌ ಕೇಸ್‌

ಜಿಲ್ಲೆಯಲ್ಲಿ ಮಹಾಮಾರಿ ಕೊರೋನಾಗೆ ಮತ್ತೊಂದು ಬಲಿಯಾಗಿದೆ. ಈ ಮೂಲಕ ಕೊರೋನಾ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 5ಕ್ಕೆ ಏರಿಕೆಯಾಗಿದೆ. ರಾಯಬಾಗ ತಾಲೂಕಿನ ಕುಡಚಿ ಗ್ರಾಮದ ವೃದ್ಧ ಮೃತಪಟ್ಟಿದ್ದಾನೆ. ಇದೆ ವೇಳೆ ಕೊರೋನಾ ಆರ್ಭಟ ಮುಂದುವರಿದಿದ್ದು, ಶನಿವಾರ ಮೂವರು ಪೊಲೀಸ್‌ ಪೇದೆ, ಯೋಧ, ಬಳೆಗಾರ್ತಿ ಸೇರಿದಂತೆ ಒಟ್ಟು 27 ಜನರಿಗೆ ಕೊರೋನಾ ಸೋಂಕು ಇರುವುದು ಪತ್ತೆಯಾಗಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 383ಕ್ಕೆ ಏರಿಕೆಯಾಗಿದೆ.

• Satish Jarakiholi

Karnataka Districts5, Jul 2020, 10:41 AM

ಕಾಂಗ್ರೆಸ್‌ ಪಕ್ಷವನ್ನು ಕೆಳ ಮಟ್ಟದಿಂದ ಸಂಘಟಿಸಬೇಕಿದೆ: ಜಾರಕಿಹೊಳಿ

ಕಾಂಗ್ರೆಸ್‌ ಪಕ್ಷವನ್ನು ಬೇರು ಮಟ್ಟದಿಂದ ಸಂಘಟಿಸುವುದೇ ನಮ್ಮ ಮುಖ್ಯ ಅಜೆಂಡಾ ಆಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದ್ದಾರೆ.