Search results - 75 Results
 • Bidar20, Nov 2018, 6:26 PM IST

  ಕೊನೆಗೂ ಬಂತು ಬೀದರ್ ಹಳ್ಳಿಗೆ ನೀರು; ಜನರ ಬಾಯಿಗೆ BIG 3 ಖೀರು

  ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಹಂಗರಗಾ ಗ್ರಾಮದಲ್ಲಿ ನೀರಿನ ಟ್ಯಾಂಕ್ ಇದ್ರೂ ಗ್ರಾಮಸ್ಥರು ನೀರಿಗಾಗಿ ಬಾವಿ ಮುಂದೆ ಉದ್ದುದ್ದ ಕ್ಯೂ ನಿಲ್ಲಬೇಕಾದ ಪರಿಸ್ಥಿತಿ. ಬಿಗ್ 3 ಈ ಬಗ್ಗೆ ವರದಿ ಮಾಡಿದ್ದೇ ತಡ, ಬೀದರ್ ಜಿಲ್ಲಾ ಪಂಚಾಯತ್ ಸಿಇಓ, ಒಂದೋ ನೀರು ಕೊಡಿ, ಇಲ್ದೇ ಇದ್ರೆ ನೀರು ಸಿಗುವವರೆಗೂ ಗ್ರಾಮದಲ್ಲೇ ಇರಿ, ಎಂದು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದರು. ಅದಾದ ಬಳಿಕ ಗ್ರಾಮಕ್ಕೆ ನೀರು ಬಂದಿದೆ, ಜನರ ಮುಖದಲ್ಲಿ ಹರ್ಷವೂ ಮನೆಮಾಡಿದೆ. ಖುದ್ದು ಸಿಇಓ ಗ್ರಾಮಕ್ಕೆ ತೆರಳಿ, ಅದೇ ನೀರು ಕುಡಿದು, ನೀರಿನ ವ್ಯವಸ್ಥೆಯ ಪರಿಶೀಲನೆ ನಡೆಸಿದ್ದಾರೆ .

 • Bidar Water Problem

  NEWS16, Nov 2018, 11:05 PM IST

  ಶುದ್ಧ ನೀರು ಕಾಣಲು ಬೀದರ್‌ನ ಈ ಗ್ರಾಮಕ್ಕೆ ಇನ್ನೆಷ್ಟು ವರ್ಷ ಬೇಕು?

  ಯಾವ ಸರಕಾರಗಳು ಬಂದರೂ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಲ್ಲ. ಬೀದರ್ ನ ಈ ಗ್ರಾಮದ ಜನರ ಬಾಯಾರಿಕೆ ನೀಗಿಸುವ ಅಧಿಕಾರಿ ಯಾರು ಇಲ್ಲವೆ? ಜನರಿಗೆ ಶುದ್ಧ ನೀರು ಕುಡಿಯುವ ನೀರು ಬೇಕೆ ಬೇಕು...

 • Bidar16, Nov 2018, 3:55 PM IST

  BIG 3 ಇಂಪ್ಯಾಕ್ಟ್ | ನೀರು ಸಿಗೋವರೆಗೂ ಗ್ರಾಮದಲ್ಲೇ ಇರಿ! ಅಧಿಕಾರಿಗಳಿಗೆ ಸೂಚನೆ

  ಅಧಿಕಾರಿಗಳಂದ್ರೆ ಹೀಗೆ ಇರಬೇಕು! ಯಾಕಂತೀರಾ? ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಹಂಗರಗಾ ಗ್ರಾಮದಲ್ಲಿ ನೀರಿನ ಟ್ಯಾಂಕ್ ಇದ್ರೂ ಗ್ರಾಮಸ್ಥರು ನೀರಿಗಾಗಿ ಬಾವಿ ಮುಂದೆ ಉದ್ದುದ್ದ ಕ್ಯೂ ನಿಲ್ಲಬೇಕಾದ ಪರಿಸ್ಥಿತಿ. ಬಿಗ್ 3 ಈ ಬಗ್ಗೆ ವರದಿ ಮಾಡಿದ್ದೇ ತಡ, ಬೀದರ್ ಜಿಲ್ಲಾ ಪಂಚಾಯತ್ ಸಿಇಓ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ. ಒಂದೋ ನೀರು ಕೊಡಿ, ಇಲ್ದೇ ಇದ್ರೆ ನೀರು ಸಿಗುವವರೆಗೂ ಗ್ರಾಮದಲ್ಲೇ ಇರಿ ಎಂದು ಎಚ್ಚರಿಕೆ ನೀಡಿದ್ದಾರೆ. ಇಲ್ಲಿದೆ ಸಂಪೂರ್ಣ ಡೀಟೆಲ್ಸ್...

 • Loan waive off

  NEWS16, Nov 2018, 10:07 AM IST

  ನಮಗೆ ಬೆಂಬಲ ಬೆಲೆ ಕೊಡಿ; ನಾವೇ ಸಾಲ ಕೊಡ್ತೀವಿ: ಸಿಎಂಗೆ ರೈತನ ಸವಾಲು

  ಬೀದರ್ ನ ಸಂವಾದ ಕಾರ್ಯಕ್ರಮದಲ್ಲಿ ಅನ್ನದಾತ ರೊಚ್ಚಿಗೆದ್ದಿದ್ದಾನೆ. ನನಗೆ ಸಾಲಮನ್ನಾ ಬೇಡ. ಬೆಂಬಲ ಬೆಲೆ ಕೊಡಿ. ನಾನೇ ನಿಮಗೆ ಸಾಲ ಕೊಡುತ್ತೇನೆ ಎಂದು ರೈತ ಸಿಎಂಗೆ ಸವಾಲು ಹಾಕಿದ್ದಾನೆ. ಸಕ್ಕರೆ ಕಾರ್ಖಾನೆಯಿಂದಲೇ ರೈತರಿಗೆ ಅನ್ಯಾಯವಾಗಿದೆ ಎಂದು ಸಚಿವ ಈಶ್ವರ ಖಂಡ್ರೆ ಸಮ್ಮುಖದಲ್ಲೇ ಸಿಎಂಗೆ ದೂರು ನೀಡಿದ್ದಾರೆ. 

 • Janardhan Reddy

  NEWS15, Nov 2018, 5:52 PM IST

  12 ವರ್ಷದ ಸೇಡು: ಜನಾರ್ದನ ರೆಡ್ಡಿ ಮಾತಿಗೆ ಕುಮಾರಸ್ವಾಮಿ ತಿರುಗೇಟು

   ಜನಾರ್ದನ ರೆಡ್ಡಿ ವಿರುದ್ಧ ನಾನು ಯಾವುದೇ ಕಾರಣಕ್ಕೂ ದ್ವೇಷ ರಾಜಕಾರಣ ಮಾಡುತ್ತಿಲ್ಲ. ಸೇಡಿನ ರಾಜಕೀಯ ಮಾಡೋದಿದ್ರೆ ಸಿಎಂ ಆದಾಗಲೇ ಆ ಕೆಲಸಕ್ಕೆ ಕೈ ಹಾಕುತ್ತಿದ್ದೆ ಎಂದು ಸಿಎಂ ಎಚ್. ಡಿ. ಕುಮಾರಸ್ವಾಮಿ, ರೆಡ್ಡಿಗೆ  ತಿರುಗೇಟು ನೀಡಿದ್ದಾರೆ. 

 • Modi

  NEWS19, Oct 2018, 8:30 PM IST

  ಮೋದಿ ಬಸವಣ್ಣನವರ ಭಕ್ತರಾ?ಲಿಂಗಾಯತ ಧರ್ಮಕ್ಕೆ ಮಾನ್ಯತೆ ನೀಡ್ತಾರಾ?

  ಮುಂದೆ ಲೋಕಸಭೆ ಚುನಾವಣೆ ಬರುತ್ತಿದ್ದು, ಕೇಂದ್ರ ಸರ್ಕಾರ ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಮಾನ್ಯತೆ ನೀಡುತ್ತೆ ಎಂದು ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

 • Bidar24, Sep 2018, 5:38 PM IST

  ’ಆಪರೇಶನ್’ ಪಿತಾಮಹ ಬಿಎಸ್‌ವೈ: ನಾಡಗೌಡ

  ನಾನು ಶಾಸಕನಿದ್ದಾಗ ಆಪರೇಷನ್ ಕಮಲ ಮಾಡಿ ರಾಜೀನಾಮೆ ಕೊಡಿಸಿ ಮಂತ್ರಿ ಮಾಡಿದರು. ರಾಜಕೀಯದಲ್ಲಿ ಹೀಗೂ ಮಾಡಬಹುದು ಎಂದು ತೋರಿಸಿ ಕೊಟ್ಟವರು ಬಿಎಸ್ ವೈ.  ಈಗ ಅವರಿಗೆ ಎಲ್ಲಿ ಅವರ ಎಂಎಲ್ಎಗಳಿಗೆ ಆಪರೇಷನ್ ಮಾಡುತ್ತಾರೊ ಹೇಗೊ ಅಂತ ಭಯ ಶುರುವಾಗಿದೆ ಎಂದು ವೆಂಕಟ ರಾವ್ ಟೀಕಿಸಿದ್ದಾರೆ. 

 • VIDEO21, Sep 2018, 8:06 PM IST

  ‘ಕುಮಾರಸ್ವಾಮಿ, ರಾಹುಲ್ ಗಾಂಧಿ ಇಬ್ರೂ ಕಳ್ರೇ!‘

  ಮುಖ್ಯಮಂತ್ರಿ ಕುಮಾರಸ್ವಾಮಿ ‘ದಂಗೆ’ ಹೇಳಿಕೆಗೆ ಬಿಜೆಪಿ ನಾಯಕರಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ. ಕುಮಾರಸ್ವಾಮಿ ಹಾಗೂ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಕಿಡಿಕಾರಿರುವ ಬೀದರ್ ಸಂಸದ ಭಗವಂತ ಖೂಬಾ, ಅವರಿಬ್ಬರನ್ನು ಕಳ್ಳರೆಂದು ಕರೆದಿದ್ದಾರೆ.    

 • Bidar Congress

  Bidar8, Sep 2018, 8:37 PM IST

  ಬೆಳಗಾವಿ ಮುಗೀತು, ಮತ್ತೊಂದು ಜಿಲ್ಲೆಯಲ್ಲಿ ಕಾಂಗ್ರೆಸ್ ಭಿನ್ನಮತ: ಯಾರ ನಡುವೆ ಟಾಕ್ ವಾರ್?

  ಬೆಳಗಾವಿ ಆಯ್ತು ಈಗ ಬೀದರ್ ಕಾಂಗ್ರೆಸ್ನಲ್ಲಿ ಭಿನ್ನಮತ ಸ್ಪೋಟಗೊಂಡಿದೆ. ಈಶ್ವರ್ ಖಂಡ್ರೆ ಸ್ವಂತ ಜಿಲ್ಲೆ ಬೀದರ್ ನ ಕಾಂಗ್ರೆಸ್ ನಲ್ಲಿ ಎರಡು ಬಣ ಸೃಷ್ಟಿಯಾಗಿವೆ. ಇಷ್ಟು ದಿನ ಇದ್ದ ಮುಸುಕಿನ ಗುದ್ದಾಟ ಈಗ ಬಹಿರಂಗವಾಗಿದ್ದು, ಬೀದರ್ ಕಾಂಗ್ರೆಸ್ ನಲ್ಲಿ ಎಲ್ಲವೂ ಸರಿ ಇಲ್ಲ ಎಂಬ ಸತ್ಯ ಎಂಬುದು ಬಹಿರಂಗವಾಗಿದೆ. 

 • Big3

  Bidar6, Sep 2018, 7:20 PM IST

  ಜನರ ಜೀವಕ್ಕೆ ಕಂಟಕವಾಗಿರೋ ಫ್ಯಾಕ್ಟರಿ!

   ಜಿಲ್ಲೆಯ ಹುಮ್ನಾಬಾದ್ ನ ಡೆಡ್ಲಿ ಫ್ಯಾಕ್ಟರಿ ಜನರ ಜೀವಕ್ಕೆ ಕುತ್ತು ತಂದಿದೆ. ಸುವರ್ಣ ನ್ಯೂಸ್ ನ ಬಿಗ್ 3 ಈ ಅವಾಂತರ ಬಗ್ಗೆ ಗಮನಕ್ಕೆ  ತರೋಕೆ ಹೋದ್ರೆ ಅಧಿಕಾರಿ ಸುಗಂಧಾ ಬಿ ಕುರಿ ಉಡಾಫೆ ಉತ್ತರ ನೀಡಿದ್ದಾರೆ. ಇಲ್ಲಿನ ಆರ್ ಕೆ. ಎಂ ಸೋಮನಳ್ಳಿ ಕಾರ್ಖಾನೆ ತ್ಯಾಜ್ಯವನ್ನು ಸಣ್ಣ ಸಣ್ಣ ಕೆರೆಗಳಿಗೆ ಬಿಡುವ ಮೂಲಕ ಜನರಿಗೆ ಕುಡಿಯುವ ನೀರು ಇಲ್ಲದಂತೆ ಮಾಡಿದೆ.

 • Election new

  Bidar3, Sep 2018, 5:58 PM IST

  ನಗರ ಸ್ಥಳೀಯ ಸಂಸ್ಥೆ ಚುನಾವಣೆ : ಬೀದರ್‌ನಲ್ಲಿ ಕಾಂಗ್ರೆಸ್ ಗೆಲುವು

  ಬೀದರ್ ಜಿಲ್ಲೆಯಲ್ಲಿ ಒಂದೇ ಒಂದು ಪುರಸಭೆಗೆ ಚುನಾವಣೆ ನಡೆಸಲಾಗಿತ್ತು. ಹಳ್ಳಿಖೇಡ ಪುರಸಭೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಹೈದರಾಬಾದ್-ಕರ್ನಾಟಕ ಭಾಗದ ಪ್ರಮುಖ ನಗರವಿದು.

 • Bidar

  Bidar27, Aug 2018, 9:51 PM IST

  ರಾಜ್ಯದ ಶಾಸಕರಿಂದ ಎಂಥಾ ಮಾತು...ಮೇಲ್ವರ್ಗದವರಿಗೆ ಸಾರಾಯಿ ಕುಡಿಸ್ಬೇಕಂತೆ!

  ಶಾಸಕ ಬಿ.ನಾರಾಯಣರಾವ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಹಿಂದುಳಿದವರನ್ನು ಸಮರ್ಥನೆ ಮಾಡಿಕೊಳ್ಳುವ ಭರದಲ್ಲಿ ತಮ್ಮತನವನ್ನು ಹರಾಜು ಹಾಕಿಕೊಂಡಿದ್ದಾರೆ. ಬ್ರಹ್ಮಶ್ರೀ ನಾರಾಯಣಗುರು ಜಯಂತಿಯಲ್ಲಿ ಭಾಷಣದ ವೇಳೆ ಈಡಿಗ ಸಮಾಜದವರಿಗೆ ಸರಾಯಿ ಕುಡಿಯಬೇಡಿ ಎಂದು ಉಪದೇಶ ಮಾಡುವ ವೇಳೆ ವಿವಾದಿತ ಹೇಳಿಕೆ ನೀಡಿದ್ದಾರೆ.

 • Rahul Gandhi

  NEWS14, Aug 2018, 1:01 PM IST

  'ರಾಹುಲ್‌ ಬೀದರಲ್ಲಿ ನಿಂತರೂ ಸೋಲ್ತಾರೆ'

  ರಾಹುಲ್ ಗಾಂಧಿ ಅವರು ಈಗಾಗಲೇ ಬೀದರ್ ನಲ್ಲಿ ಚುನಾವಣೆಗೆ ಸ್ಪರ್ಧೆ ಮಾಡುವ ಬಗ್ಗೆ ಗುಸು ಗುಸು ಆರಂಭವಾಗಿದೆ. ಆದರೆ ಇಲ್ಲಿ ಅವರಿಗೆ ಗೆಲುವು ಸಾಧ್ಯವಿಲ್ಲ ಎಂದು ಬಸನಗವಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. 

 • Rahul Gandhi

  Bidar13, Aug 2018, 10:09 PM IST

  ರಾಜ್ಯದಲ್ಲಿ ರಣ ಕಹಳೆ ಊದಿದ ರಾಹುಲ್

  • ಬೀದರ್ ಆಗಮಿಸಿ ಮುಂದಿನ ಚುನಾವಣೆಗೆ ರಣಕಹಳೆ ಊದಿದ ರಾಹುಲ್ ಗಾಂಧಿ
  • ಎಐಸಿಸಿ ಅಧ್ಯಕ್ಷರ ಜೊತೆ ಜೊತೆಯಾದ ರಾಜ್ಯ ನಾಯಕರ ದಂಡು
 • Rahul Gandhi

  Bidar13, Aug 2018, 2:41 PM IST

  ತಾಕತ್ತಿದ್ದರೆ ಮೋದಿಯನ್ನು ನನ್ನೆದುರು ನಿಲ್ಲಿಸಿ; ಚರ್ಚೆಗೆ ಸಿದ್ಧ: ರಾಹುಲ್ ಗಾಂಧಿ

  ಕೇಂದ್ರ ರಕ್ಷಣಾ ಮಂತ್ರಿ ನಿರ್ಮಲಾ ಸೀತಾರಾಮನ್ ರಾಷ್ಟ್ರದ ಜನರಿಗೆ ಸುಳ್ಳು ಹೇಳಿದ್ದಾರೆ. ಒಪ್ಪಂದಲ್ಲಿ ಹೇಳಲಾಗಿರುವ ಯುದ್ಧ ವಿಮಾನಗಳ ಬೆಲೆಯನ್ನ ಬಹಿರಂಗವಾಗಿ ಹೇಳಬಹುದು. ನಾನು ಫ್ರಾನ್ಸ್ ರಾಷ್ಟ್ರಪತಿ ಅವರನ್ನೇ ಕೇಳಿದ್ದೇನೆ. ಭಾರತ ಬಯಸಿದರೆ ಯುದ್ಧ ವಿಮಾನಗಳ ಬೆಲೆಯನ್ನ ಬಹಿರಂಗಪಡಿಸಬಹುದು ಎಂದಿದ್ದರು. ಈ ಬಗ್ಗೆ ಚರ್ಚಿಸಿದ್ರೆ ಮೋದಿ ಅವರನ್ನ ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡಲು ಸಾಧ್ಯವಾಗಲಿಲ್ಲ. ಕಳ್ಳತನ ಮಾಡಿದವರಿಗೆ ಹೀಗೆ ಕಣ್ಣಲ್ಲಿ ಕಣ್ಣಟ್ಟು ನೋಡಲು ಸಾಧ್ಯವಾಗುವುದಿಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.