ಬಿಸಿಸಿಐ

(Search results - 998)

Ankeet Chavan

CricketJun 16, 2021, 4:40 PM IST

ಐಪಿಎಲ್‌ ಸ್ಪಾಟ್‌ ಫಿಕ್ಸರ್‌ ಅಂಕಿತ್ ಚೌವಾಣ್ ನಿಷೇಧ ಶಿಕ್ಷೆ ಅಂತ್ಯ

ಚೌವಾಣ್ ಸ್ಪಾಟ್ ಫಿಕ್ಸಿಂಗ್ ನಡೆಸಿರುವುದು ತನಿಖೆಯ ವೇಳೆ ದೃಢವಾಗುತ್ತಿದ್ದಂತೆಯೇ 2013ರ ಸೆಪ್ಟೆಂಬರ್‌ನಲ್ಲಿ ಮುಂಬೈ ಮೂಲದ ಸ್ಪಿನ್ನರ್ ಮೇಲೆ ಬಿಸಿಸಿಐ ಆಜೀವ ನಿಷೇಧ ಶಿಕ್ಷೆ ವಿಧಿಸಿತ್ತು. ಇನ್ನು ಕಳೆದ ತಿಂಗಳು ಬಿಸಿಸಿಐ ನೈತಿಕ ಅಧಿಕಾರಿಗಳು ಆಜೀವ ಶಿಕ್ಷೆಯ ಬದಲು 7 ವರ್ಷಗಳ ಶಿಕ್ಷೆಯನ್ನು ವಿಧಿಸಿತ್ತು. ಹೀಗಾಗಿ ರಾಜಸ್ಥಾನ ರಾಯಲ್ಸ್ ಮಾಜಿ ಬೌಲರ್ ಬಿಸಿಸಿಐ ನಿರಾಪೇಕ್ಷಣ ಪತ್ರಕ್ಕೆ ಎದುರು ನೋಡುತ್ತಿದ್ದಾರೆ.

Rahul Dravid Sourav Ganguly

CricketJun 16, 2021, 1:20 PM IST

ಲಂಕಾ ಪ್ರವಾಸಕ್ಕೆ ದ್ರಾವಿಡ್‌ ಕೋಚ್‌: ಗೊಂದಲಗಳಿಗೆ ಸೌರವ್ ತೆರೆ

ಕಳೆದ ಕೆಲವು ದಿನಗಳಿಂದ ದಿಗ್ಗಜ ಕ್ರಿಕೆಟಿಗ ರಾಹುಲ್ ದ್ರಾವಿಡ್‌ ಲಂಕಾ ಸರಣಿಯಲ್ಲಿ ಭಾರತ ಕ್ರಿಕೆಟ್ ತಂಡದ ಹೆಡ್‌ ಕೋಚ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿದ್ದವು. ಈ ಕುರಿತಂತೆ ಬಿಸಿಸಿಐ ಮೂಲಗಳು ಖಚಿತ ಪಡಿಸಿದ್ದವು. ಆದರೆ ಬಿಸಿಸಿಐನಿಂದ ಯಾವುದೇ ಪ್ರಕಟಣೆ ಹೊರಬಿದ್ದಿರಲಿಲ್ಲ.

Team India

CricketJun 15, 2021, 7:26 PM IST

ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್: ನ್ಯೂಜಿಲೆಂಡ್ ವಿರುದ್ಧ ಪಂದ್ಯಕ್ಕೆ 15 ಸದಸ್ಯರ ತಂಡ ಪ್ರಕಟಿಸಿದ ಬಿಸಿಸಿಐ!

• ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯಕ್ಕೆ ಭಾರತ ತಂಡ ಪ್ರಕಟ
• ಕೊಹ್ಲಿ ನಾಯಕತ್ವದ 15 ಸದಸ್ಯರ ಬಲಿಷ್ಠ ತಂಡ ಪ್ರಕಟಿಸಿದ ಬಿಸಿಸಿಐ
• ಜೂನ್ 18 ರಿಂದ ಇಂಗ್ಲೆಂಡ್‌ನ ಸೌಥಾಂಪ್ಟನ್‌ನಲ್ಲಿ ಪಂದ್ಯ ಆರಂಭ

IPL Rajeev Shulka

CricketJun 10, 2021, 1:48 PM IST

ಐಪಿಎಲ್ 2021 ಭಾಗ-2 ದಿನಾಂಕ ಖಚಿತಪಡಿಸಿದ ರಾಜೀವ್ ಶುಕ್ಲಾ

ಭಾರತದಲ್ಲಿ ಆಯೋಜನೆಗೊಂಡಿದ್ದ 14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯ ಮೇಲೆ ಕೋವಿಡ್ ತನ್ನ ವಕ್ರದೃಷ್ಟಿ ಬೀರಿತ್ತು. ಬಯೋ ಬಬಲ್‌ನೊಳಗಿದ್ದ ಆಟಗಾರರು ಹಾಗೂ ಸಹಾಯಕ ಸಿಬ್ಬಂದಿಗಳಿಗೆ ಕೋವಿಡ್ ದೃಢಪಟ್ಟ ಬೆನ್ನಲ್ಲೇ ಮೇ 04ರಂದು ಬಿಸಿಸಿಐ ಅನಿರ್ದಿಷ್ಟಾವಧಿಗೆ ಮುಂದೂಡಿತ್ತು. 14ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಇದುವರೆಗೂ 29 ಪಂದ್ಯಗಳು ನಡೆದಿದ್ದು, ಇನ್ನೂ 31 ಪಂದ್ಯಗಳು ನಡೆಯಬೇಕಿವೆ.

ICC BCCI

CricketJun 10, 2021, 9:51 AM IST

ಅಕ್ಟೋಬರ್ 10ರೊಳಗೆ ಐಪಿಎಲ್‌ ಮುಗಿಸಲು ಐಸಿಸಿ ಒತ್ತಡ?

ಐಸಿಸಿ ತಾತ್ಕಾಲಿಕ ವೇಳಾಪಟ್ಟಿ ಪ್ರಕಾರ, ಅಕ್ಟೋಬರ್ 18ರಿಂದ ಟಿ20 ವಿಶ್ವಕಪ್‌ ಆರಂಭಗೊಳ್ಳಬೇಕಿದ್ದು, ಐಸಿಸಿ ಟೂರ್ನಿಗಳು ಆರಂಭವಾಗುವ ಮುನ್ನ ಕನಿಷ್ಠ 7-10 ದಿನಗಳ ಮೊದಲು ಬೇರಾರ‍ಯವುದೇ ಟೂರ್ನಿಗಳನ್ನು ನಡೆಸುವಂತಿಲ್ಲ ಎನ್ನುವ ನಿಯಮವಿದೆ.

IPL BCCI

CricketJun 7, 2021, 4:46 PM IST

ಐಪಿಎಲ್ ಕ್ರಿಕೆಟ್ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌: ಯುಎಇ ಚರಣದ ವೇಳಾಪಟ್ಟಿ ಫೈನಲ್‌..!

ನವದೆಹಲಿ: ಭಾರತದ ಚುಟುಕು ಕ್ರಿಕೆಟ್ ಹಬ್ಬ ಇಂಡಿಯನ್‌ ಪ್ರೀಮಿಯರ್ ಲೀಗ್‌ಗೆ ಜಗತ್ತಿನಾದ್ಯಂತ ಕೋಟ್ಯಾಂತರ ಅಭಿಮಾನಿಗಳಿದ್ದಾರೆ. ಕೋವಿಡ್ ಕಾರಣದಿಂದಾಗಿ 14ನೇ ಆವೃತ್ತಿಯ ಐಪಿಎಲ್ ಟೂರ್ನಿಯು ಅರ್ಧದಲ್ಲೇ ಸ್ಥಗಿತಗೊಂಡಿತ್ತು. ಬಿಸಿಸಿಐ ಈ ಮಿಲಿಯನ್ ಡಾಲರ್ ಕ್ರಿಕೆಟ್ ಟೂರ್ನಿಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಿತ್ತು. ಹೀಗಾಗಿ ಐಪಿಎಲ್ ಭಾಗ 2 ಟೂರ್ನಿ ಯಾವಾಗ ಎಂದು ಕಾಯುತ್ತಿದ್ದ ಕ್ರಿಕೆಟ್ ಅಭಿಮಾನಿಗಳಿಗೆ ಬಿಸಿಸಿಐ ಇದೀಗ ಗುಡ್‌ ನ್ಯೂಸ್ ನೀಡಿದೆ.

T20 World Cup

CricketJun 7, 2021, 2:39 PM IST

ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಆತಿಥ್ಯಕ್ಕೆ ಶ್ರೀಲಂಕಾ ಒಲವು..!

ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಆಯೋಜನೆಯ ಕುರಿತಂತೆ ಈಗಾಗಲೇ ಬಿಸಿಸಿಐ ಅಧಿಕಾರಿಗಳು ಎಮಿರೇಟ್ಸ್‌ ಕ್ರಿಕೆಟ್‌ ಬೋರ್ಡ್‌ ಜತೆ ಮಾತುಕತೆ ನಡೆಸುತ್ತಿದ್ದಾರೆ. ಇದೇ ವೇಳೆ ಲಂಕಾ ಮಂಡಳಿಯ ಜತೆಯೂ ಮಾತುಕತೆ ನಡೆಸುವುದಾಗಿ ತಿಳಿಸಿದ್ದಾರೆಂದು ಎಎನ್‌ಐ ವರದಿ ಮಾಡಿದೆ.

Ehsan Mani

CricketJun 5, 2021, 5:18 PM IST

ಟಿ20 ವಿಶ್ವಕಪ್ ಭಾರತದಿಂದ ಯುಎಇಗೆ ಸ್ಥಳಾಂತರವಾಗಲಿದೆ: ಪಾಕ್‌ ಕ್ರಿಕೆಟ್ ಮುಖ್ಯಸ್ಥ ಏಹ್ಸಾನ್ ಮಣಿ

ಕಳೆದ ಮೇ.29ರಂದು ಬಿಸಿಸಿಐ ವಿಶೇಷ ಸಾಮಾನ್ಯ ಸಭೆಯನ್ನು ಕರೆದಾಗ ಹಲವು ಊಹಾಪೋಹಗಳು ಹುಟ್ಟಿಕೊಂಡಿದ್ದವು. ಸಭೆಯಲ್ಲಿ ಐಸಿಸಿಗೆ ಬಿಸಿಸಿಐ ಒಂದು ತಿಂಗಳು ಹೆಚ್ಚುವರಿಯಾಗಿ ಕಾಲಾವಕಾಶ ನೀಡಬೇಕು ಎಂದು ಮನವಿ ಮನವಿ ಮಾಡಿಕೊಂಡಿತ್ತು. ಈ ಮನವಿಯನ್ನು ಐಸಿಸಿ ಕೂಡಾ ಪುರಸ್ಕರಿಸಿದೆ. ಇದೇ ಜೂನ್ 28ರೊಳಗಾಗಿ ಟಿ20 ವಿಶ್ವಕಪ್ ಆಯೋಜನೆಯ ಕುರಿತಂತೆ ಸ್ಪಷ್ಟ ನಿರ್ಧಾರ ತಿಳಿಸಲು ಬಿಸಿಸಿಐಗೆ ಐಸಿಸಿ ಸೂಚನೆ ನೀಡಿದೆ.

Rohit Sharma

CricketJun 5, 2021, 11:54 AM IST

ಇಂಗ್ಲೆಂಡ್‌ನಲ್ಲಿ 3 ದಿನ ಭಾರತ ಕ್ರಿಕೆಟಿಗರ ಪರಸ್ಪರ ಭೇಟಿಗೆ ನಿಷೇಧ

ಇಂಗ್ಲೆಂಡ್‌ಗೆ ಆಗಮಿಸಿದ್ದ ತಂಡದ ಸದಸ್ಯರು 3 ದಿನಗಳ ಕಾಲ ಪರಸ್ಪರ ಭೇಟಿ ಆಗದಂತೆ ಸೂಚಿಸಲಾಗಿದೆ ಎಂದು ಸ್ಪಿನ್ನರ್‌ ಅಕ್ಷರ್‌ ಪಟೇಲ್‌ ಹೇಳಿದ್ದಾರೆ. ಇಂಗ್ಲೆಂಡ್‌ಗೆ ತೆರಳುವ ಮುನ್ನವೂ ಭಾರತ ತಂಡ ಮುಂಬೈನಲ್ಲೂ 14 ದಿನ ಕ್ವಾರಂಟೈನ್‌ಗೆ ಒಳಪಟ್ಟಿತ್ತು. ಭಾರತ ಹಾಗೂ ನ್ಯೂಜಿಲೆಂಡ್‌ ನಡುವಿನ ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್ ಫೈನಲ್ ಪಂದ್ಯವು ಜೂನ್ 18ರಿಂದ ಆರಂಭವಾಗಲಿದ್ದು, ಈ ಹೈವೋಲ್ಟೇಜ್ ಪಂದ್ಯಕ್ಕೆ ಸೌಥಾಂಪ್ಟನ್‌ ಆತಿಥ್ಯ ವಹಿಸಲಿದೆ.

ICC BCCI

CricketJun 2, 2021, 1:17 PM IST

ಐಸಿಸಿ ಟಿ20 ವಿಶ್ವಕಪ್ ಆಯೋಜನೆ: ಜೂನ್‌ 28ರವರೆಗೆ ಗಡುವು ಪಡೆದ ಬಿಸಿಸಿಐ

ಐಸಿಸಿ ಸಭೆ ಸೇರುವ ಮುನ್ನವೇ ಬಿಸಿಸಿಐ ಮೇ 29ರಂದು ವಿಶೇಷ ಸಾಮಾನ್ಯ ಸಭೆ ಸೇರಿತ್ತು. ಈ ಸಂದರ್ಭದಲ್ಲಿ ಐಪಿಎಲ್ ಭಾಗ 2 ಟೂರ್ನಿಯನ್ನು ಯುಎಇಗೆ ಸ್ಥಳಾಂತರಿಸುವ ತೀರ್ಮಾನ ತೆಗೆದುಕೊಂಡಿತ್ತು. ಇದೇ ವೇಳೆ ಕೋವಿಡ್ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಟೂರ್ನಿ ಆಯೋಜನೆ ಕುರಿತಂತೆ ತೀರ್ಮಾನ ತೆಗೆದುಕೊಳ್ಳಲು ಇನ್ನೊಂದು ತಿಂಗಳು ಕಾಲಾವಕಾಶ ಬೇಕು ಎಂದು ಬಿಸಿಸಿಐ, ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ(ಐಸಿಸಿ) ಬಳಿ ಮನವಿ ಮಾಡಿಕೊಂಡಿತ್ತು.

IPL Franchisee

CricketJun 2, 2021, 10:56 AM IST

ಐಪಿಎಲ್‌ಗೆ ವಿದೇಶಿಗರು ಗೈರಾದ್ರೆ ಫ್ರಾಂಚೈಸಿಗಳಿಗೆ ಲಾಭ!

ಬಹುತೇಕ ತಂಡಗಳಿಗೆ ದ್ವಿಪಕ್ಷೀಯ ಸರಣಿಗಳು ಇರುವ ಕಾರಣ, ಐಪಿಎಲ್‌ಗೆ ತಾರಾ ಆಟಗಾರರನ್ನು ಕಳುಹಿಸಲು ಆಗುವುದಿಲ್ಲ ಎಂದು ವಿವಿಧ ರಾಷ್ಟ್ರಗಳ ಕ್ರಿಕೆಟ್‌ ಮಂಡಳಿಗಳು ಬಿಸಿಸಿಐಗೆ ಮಾಹಿತಿ ನೀಡಿವೆ ಎನ್ನಲಾಗಿದೆ.

IPL fans

CricketJun 1, 2021, 12:38 PM IST

ಐಪಿಎಲ್ 2021‌: ಸ್ಟೇಡಿಯಂಗೆ ಪ್ರೇಕ್ಷಕರಿಗೆ ಪ್ರವೇಶ?

ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ, ಕಾರ‍್ಯದರ್ಶಿ ಜಯ್‌ ಶಾ, ಐಪಿಎಲ್‌ ಅಧ್ಯಕ್ಷ ಬ್ರಿಜೇಶ್‌ ಪಟೇಲ್‌ ಬುಧವಾರ ಯುಎಇಗೆ ತೆರಳಿ, ಅಲ್ಲಿನ ಕ್ರಿಕೆಟ್‌ ಮಂಡಳಿ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ. ಈಗಾಗಲೇ ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಅರಬ್ಬರ ನಾಡಿಗೆ ಬಂದಿಳಿದ್ದು, ಟೂರ್ನಿ ಆಯೋಜನೆಯ ಕುರಿತಂತೆ ಯೋಜನೆ ನಡೆಸುತ್ತಿದ್ದಾರೆ.

BCCI Rajeev Shukla

CricketJun 1, 2021, 11:42 AM IST

ವಿದೇಶಿ ಕ್ರಿಕೆಟಿಗರು ಗೈರಾದ್ರೂ ಐಪಿಎಲ್‌ ನಡೆಯುತ್ತೆ: ರಾಜೀವ್ ಶುಕ್ಲಾ

ಯುಎಇ ಅಧಿಕಾರಿಗಳೊಂದಿಗೆ ಸಭೆ ನಡೆಸಲು ದುಬೈ ತಲುಪಿರುವ ಶುಕ್ಲಾ, ಅಲ್ಲಿನ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ‘ವಿದೇಶಿ ತಾರೆಯರು ಬರದಿದ್ದರೂ ಐಪಿಎಲ್‌ ನಡೆಯಲಿದೆ. ಭಾರತೀಯ ಆಟಗಾರರು ಲಭ್ಯರಿರಲಿದ್ದಾರೆ. ಕೆಲವರನ್ನು ಹೊರತುಪಡಿಸಿ ಉಳಿದ ವಿದೇಶಿ ಆಟಗಾರರು ಸಹ ಆಗಮಿಸಲಿದ್ದಾರೆ. ಇರುವವರನ್ನು ಬಳಸಿಕೊಳ್ಳಲು ಫ್ರಾಂಚೈಸಿಗಳಿಗೆ ತಿಳಿಸುತ್ತೇವೆ. ಟೂರ್ನಿ ನಡೆಸುವುದಷ್ಟೇ ನಮ್ಮ ಆದ್ಯತೆ’ ಎಂದಿದ್ದಾರೆ.

BCCI Sourav Ganguly

CricketMay 31, 2021, 10:59 AM IST

ಐಪಿಎಲ್ 2021 ಭಾಗ-2: ವಿದೇಶಿ ಆಟಗಾರರನ್ನು ಕರೆತರಲು ಬಿಸಿಸಿಐ ಮಾಸ್ಟರ್‌ ಪ್ಲಾನ್

ಸೆಪ್ಟೆಂಬರ್ 18ರಿಂದ ಐಪಿಎಲ್‌ ಭಾಗ-2 ಆರಂಭಗೊಳ್ಳುವ ನಿರೀಕ್ಷೆ ಇದ್ದು, ಸಿಪಿಎಲ್‌ನಲ್ಲಿ ಆಡುವ ಆಟಗಾರರು ಯುಎಇ ತಲುಪಿ, ತಂಡಗಳನ್ನು ಕೂಡಿಕೊಳ್ಳಲು ಕನಿಷ್ಠ 4-5 ದಿನಗಳ ಸಮಯ ಬೇಕಾಗುತ್ತದೆ. ಸಿಪಿಎಲ್‌ ಕೂಡ ಬಯೋ ಬಬಲ್‌ನೊಳಗೆ ನಡೆಯಲಿರುವ ಕಾರಣ, ಒಂದು ಬಯೋ ಬಬಲ್‌ನಿಂದ ಮತ್ತೊಂದು ಬಯೋ ಬಬಲ್‌ಗೆ ಆಟಗಾರರನ್ನು ಕರೆಸಿ, ಯುಎಇನಲ್ಲಿ ಕ್ವಾರಂಟೈನ್‌ ತಪ್ಪಿಸಲು ಬಿಸಿಸಿಐ ಚಿಂತನೆ ನಡೆಸುತ್ತಿದೆ.

IPL BCCI

CricketMay 29, 2021, 1:36 PM IST

ಗುಡ್ ನ್ಯೂಸ್‌: ಐಪಿಎಲ್‌ 2021 ಭಾಗ-2 ಆತಿಥ್ಯ ಎಲ್ಲಿ? ಗೊಂದಲಗಳಿಗೆ ಬಿಸಿಸಿಐ ತೆರೆ

ಇಂದು(ಮೇ.29) ವಿಶೇಷ ಸಾಮಾನ್ಯ ಸಭೆ ನಡೆಸಿದ ಬಿಸಿಸಿಐ ಈ ಮಹತ್ವದ ತೀರ್ಮಾನವನ್ನು ತೆಗೆದುಕೊಂಡಿದೆ. ಈ ಹಿಂದೆ 13ನೇ ಆವೃತ್ತಿಯ ಸಂಪೂರ್ಣ ಐಪಿಎಲ್‌ ಟೂರ್ನಿಗೆ ಯುನೈಟೆಡ್ ಅರಬ್ ಎಮಿರೇಟ್ಸ್‌(ಯುಎಇ) ಆತಿಥ್ಯವನ್ನು ವಹಿಸಿತ್ತು.