ಬಿಜೆಪಿ ಸರ್ಕಾರ  

(Search results - 303)
 • undefined

  Karnataka Districts24, May 2020, 7:14 AM

  ತಾಕತ್ತಿದ್ದರೆ ಬಿಜೆಪಿ ಸರ್ಕಾರ ತನಿಖೆಗೆ ನಡೆಸಲಿ: ಕಾಂಗ್ರೆಸ್‌ ನಾಯಕ

  ಜಿಲ್ಲೆಯ ಕನಕಗಿರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಾಲ್ಕು ಕೋಟಿ ಅಕ್ರಮ ನಡೆದಿರುವ ಬಗ್ಗೆ ನನ್ನ ಬಳಿ ದಾಖಲೆ ಇವೆ. ಸ್ಥಳೀಯ ಶಾಸಕ ಬಸವರಾಜ ದಡೇಸ್ಗೂರು ಅವರು ತಾಕತ್ತಿದ್ದರೆ ಕೂಡಲೇ ತಮ್ಮದೇ ಸರ್ಕಾರದ ಮೂಲಕ ತನಿಖೆಯನ್ನು ನಡೆಸಲಿ ಎಂದು ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿ ಸವಾಲು ಎಸೆದಿದ್ದಾರೆ.
   

 • undefined

  Karnataka Districts18, May 2020, 3:00 PM

  ಬಿಜೆಪಿ ಸರ್ಕಾರ ಎಂದಿಗೂ ರೈತರನ್ನು ಕೈ ಬಿಡದು: ಸಿದ್ದರಾಮಯ್ಯ

  ಜಿಲ್ಲೆಯ ಜೀವನಾಡಿ ಮೈಶುಗರ್‌ ಕಾರ್ಖಾನೆಯನ್ನು ಸರ್ಕಾರಿ ಸ್ವಾಮ್ಯದಲ್ಲೇ ಜೀವ ತುಂಬ ಕೆಲಸಕ್ಕೆ ಮುಖ್ಯಮಂತ್ರಿಗಳು ಕೈ ಹಾಕಿದ್ದಾರೆ. ಕಾರ್ಖಾನೆಯ ಮಾಲೀಕರಾಗಿ ಸರ್ಕಾರವೇ ಆಡಳಿತ ನಿರ್ವಹಿಸಿದರೆ ಒ ಆ್ಯಂಡ್‌ ಎಂ (ಕಾರ್ಯ ಮತ್ತು ನಿರ್ವಹಣೆ) ಮಾದರಿಯಲ್ಲಿ ಕಾರ್ಖಾನೆ ಮುನ್ನಡೆಸಲು ಸಿಎಂ ಬಿ.ಎಸ್‌. ಯಡಿಯೂರಪ್ಪ ಅಸ್ತು ಎಂದಿದ್ದಾರೆ ಎಂದು ಜಿಲ್ಲಾ ಬಿಜೆಪಿ ಮುಖಂಡ ಡಾ. ಸಿದ್ದರಾಮಯ್ಯ ತಿಳಿಸಿದ್ದಾರೆ.
   

 • undefined

  Karnataka Districts21, Mar 2020, 12:29 PM

  ‘ಬಿಜೆಪಿ ಸರ್ಕಾರ ಬಂದಾಗ ಒಳ್ಳೆಯದ್ದೇ ಇರುತ್ತೆ, ಆದರೆ ಈ ಬಾರಿ ವೈರಸ್‌ ಬಂದಿದೆ’

  ಕೊರೋನಾ ವೈರಸ್ ಎಮರ್ಜೆನ್ಸಿ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಎನ್ ಡಿ ಆರ್ ಎಫ್, ಎಸ್ ಡಿ ಆರ್ ಎಫ್ ಹಣ ಬಳಸಿಕೊಳ್ಳಲು ಸೂಚನೆ ನೀಡಿದೆ. ಈಗಾಗಲೇ ಕಲಬುರಗಿಯಲ್ಲಿ ಕೊರೋನಾ ಪರೀಕ್ಷಾ ಲ್ಯಾಬ್ ತೆರೆಯಲಾಗಿದೆ. ಹುಬ್ಬಳ್ಳಿಯಲ್ಲೊಂದು ಲ್ಯಾಬ್ ತೆರೆಯಲಾಗುವುದು ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದ್ದಾರೆ. 

 • undefined

  Karnataka Districts8, Mar 2020, 8:39 PM

  ಸಚಿವ ಬಿ ಸಿ ಪಾಟೀಲ್ ವಿರುದ್ಧ ಕುಮಾರಸ್ವಾಮಿ ಕೆಂಡಾಮಂಡಲ

  ಬಿಜೆಪಿ ಸರ್ಕಾರ ಶಾದಿ ಭಾಗ್ಯ ಒಂದೇ ಅಲ್ಲ ರಾಜ್ಯದ ಎಲ್ಲಾ ಅಭಿವೃದ್ಧಿ ಕಾರ್ಯಗಳನ್ನ ಸ್ಥಗಿತ ಮಾಡಿದೆ.‌ಬೆಳಗಾವಿಯಲ್ಲಿ ಬಿಜೆಪಿ ಶಾಸಕರೇ ನನ್ನ ಕ್ಷೇತ್ರಕ್ಕೆ ಅನುದಾನ ಬಂದಿಲ್ಲ ಅಂತ ಗಲಾಟೆ ಮಾಡಿದ್ದಾರೆ. ಅದು ಸಹ ಮಂತ್ರಿಯನ್ನು ಕೂರಿಸಿಕೊಂಡು ಅನುದಾನ ಕೊಡಿ ಅಂತ ಕೇಳಿದ್ದಾರೆ. ಸಿಎಂ ನೆರೆ ಹಾವಳಿಯ ಜನರಿಗೆ ಹಣ ಬಿಡುಗಡೆ ಮಾಡಿ ಅಂತ ಹೇಳಿದ್ದಾರೆ. ಆದರೂ ಅಧಿಕಾರಿಗಳು ಬಿಡುಗಡೆ ಮಾಡಿಲ್ಲ ಅಂತ ಬಿಜೆಪಿ ಶಾಸಕರೇ ಆರೋಪಿಸಿದ್ದಾರೆ. ಇದು ಸದ್ಯದ ಬಿಜೆಪಿ ಸರ್ಕಾರದ ಸ್ಥಿತಿ ಎಂದು ಮಾಜಿ ಸಿಎಂ ಹೆಚ್. ಡಿ. ಕುಮಾರಸ್ವಾಮಿ ಹೇಳಿದ್ದಾರೆ.

 • Basavaraj Horatti

  Karnataka Districts8, Mar 2020, 2:22 PM

  'ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ, ಬಿಜೆಪಿಯದ್ದು 20 ಪರ್ಸೆಂಟೇಜ್ ಸರ್ಕಾರ'

  ಬಿಜೆಪಿ ಸರ್ಕಾರ 20 ಪರ್ಸೆಂಟೇಜ್ ಸರ್ಕಾರವಾಗಿದೆ. ಪ್ರತಿಯೊಂದು ಕೆಲಸಕ್ಕೂ ಪರ್ಸಂಟೇಜ್ ಮೇಲೆ ಭ್ರಷ್ಟಾಚಾರ ನಡೆಯುತ್ತಿದೆ ಎಂದು ವಿಧಾನಪರಿಷತ್ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಆರೋಪಿಸಿದ್ದಾರೆ.
   

 • budget blog

  BUSINESS6, Mar 2020, 2:42 PM

  'ನಾಮ್‌ಕೇವಾಸ್ತೆ ಬಜೆಟ್, ಕಲ್ಯಾಣ ಕರ್ನಾಟಕಕ್ಕೆ ಬಿಜೆಪಿ ಸರ್ಕಾರದಿಂದ ಅನ್ಯಾಯ'

  ರಾಜ್ಯ ಸರ್ಕಾರ ಈ ಸಲದ ಬಜೆಟ್‌ನಲ್ಲಿ ಕಲ್ಯಾಣ ಕರ್ನಾಟಕ ಭಾಗವನ್ನು ಕಡೆಗಣಿಸಿದೆ ಎಂದು ಶಾಸಕ, ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ಈ ಮೊದಲು 371 (ಜೆ) ತಿರಸ್ಕರಿಸುವ ಮೂಲಕ ಅನ್ಯಾಯವೆಸಲಾಗಿತ್ತು. ಮತ್ತೆ ಈಗ ಬಜೆಟ್‌ನಲ್ಲಿಯೂ ಕಲ್ಯಾಣ ಕರ್ನಾಟಕ ಭಾಗಕ್ಕೆ ಅನ್ಯಾಯ ಮಾಡಲಾಗಿದೆ. ಕೇವಲ ಹೆಸರು ಬದಲಾವಣೆಯಿಂದ ನಮ್ಮ ಭಾಗದ ಭವಿಷ್ಯ ಬದಲಾಗದು ಎಂದು ಟೀಕಿಸಿದ್ದಾರೆ. 
   

 • sugarcane

  Karnataka Districts6, Mar 2020, 2:00 PM

  ಮೈಷುಗರ್‌ ಕಾರ್ಖಾನೆ 40 ವರ್ಷ ಖಾಸಗಿಗೆ?

  ಮಂಡ್ಯ ಮೈಷುಗರ್‌ ಕಾರ್ಖಾನೆಯನ್ನು ಕೊನೆಗೂ ಬಿಜೆಪಿ ಸರ್ಕಾರ ಖಾಸಗಿಯವರಿಗೆ ವಹಿಸಲು ನಿರ್ಧರಿಸಿದೆ. ಸಿಎಂ ಯಡಿಯೂರಪ್ಪ ಅವರು ಮೈಷುಗರ್‌ ಕಾರ್ಖಾನೆ ಬಗ್ಗೆ ಬಜೆಟ್‌ನಲ್ಲಿ ಯಾವುದೇ ಪ್ರಸ್ತಾಪ ಮಾಡದಿದ್ದರೂ ರೈತರ ಹಿತರಕ್ಷಣೆಗೆ ಕಾರ್ಖಾನೆಯನ್ನು 40 ವರ್ಷಗಳ ಕಾಲ ಖಾಸಗಿಯವರಿಗೆ ವಹಿಸಲು ಅಂತಿಮ ನಿರ್ಧಾರ ಮಾಡಿದ್ದಾರೆ ಎಂದು ಬಿಜೆಪಿ ಮೂಲಗಳು ಹೇಳಿವೆ.

 • undefined

  Karnataka Districts6, Mar 2020, 7:20 AM

  ಎಚ್‌ಡಿಕೆ ಶೀಘ್ರ ಮತ್ತೆ ರಾಜ್ಯದ ಮುಖ್ಯಮಂತ್ರಿ ಆಗ್ತಾರೆ: ಸ್ವಾಮೀಜಿ ಭವಿಷ್ಯ

  ಸದ್ಯ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿ ಇದ್ದು ಶೀಘ್ರ ಎಚ್ ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗುತ್ತಾರೆ ಎಂದು ಸ್ವಾಮೀಜಿ ಓರ್ವರು ಭವಿಷ್ಯ ನುಡಿದಿದ್ದಾರೆ

 • r dhruvanarayan

  Karnataka Districts4, Mar 2020, 2:46 PM

  ಬಿಜೆಪಿಯಿಂದ ಹಿಂದೂ ಮುಸ್ಲಿಂ ವಿಭಜನೆ

  ಕೇಂದ್ರ ಬಿಜೆಪಿ ಸರ್ಕಾರ ಮುಸ್ಲಿಂ-ಹಿಂದೂಗಳನ್ನು ವಿಭಜನೆ ಮಾಡುವ ಕೆಲಸ ಮಾಡುತ್ತಿದೆ. ಇದು ಅಪಾಯಕಾರಿ ಬೆಳವಣಿಗೆಯಾಗಿದೆ ಎಂದು ಮಾಜಿ ಸಂಸದ ಆರ್‌. ಧ್ರುವನಾರಾಯಣ್‌ ಹೇಳಿದ್ದಾರೆ.

 • Konareddy

  Karnataka Districts4, Mar 2020, 7:22 AM

  ಬಿಜೆಪಿ, ಕೈ ಮುಖಂಡರು ನಮ್ಮ ಸಂಪರ್ಕದಲ್ಲಿ: ಕೋನರಡ್ಡಿ

  ಉಮೇಶ ಕತ್ತಿ ಅವರಂತಹ ಹಿರಿಯ ನಾಯಕರಿಗೆ ಬಿಜೆಪಿ ಸರ್ಕಾರದಲ್ಲಿ ಸಚಿವ ಸ್ಥಾನ ಸಿಕ್ಕಿಲ್ಲ. ಹೀಗಾಗಿ ಅಲ್ಲಿ ಅಸಮಾಧಾನದ ಹೊಗೆ ಆಡುತ್ತಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್‌ನ ಕೆಲ ಮುಖಂಡರು ನಮ್ಮ ಸಂಪರ್ಕದಲ್ಲಿದ್ದಾರೆ ಎಂದು ಜೆಡಿಎಸ್‌ ಮುಖಂಡ ಎನ್‌.ಎಚ್‌. ಕೋನರಡ್ಡಿ ತಿಳಿಸಿದ್ದಾರೆ.
   

 • Top 10 march 1

  News1, Mar 2020, 5:48 PM

  ಸಿದ್ದು ನಡೆಗೆ ಸಿಡಿ ಮಿಡಿ, ಕೊಹ್ಲಿ ಸೈನ್ಯದ ಗಡಿ ಬಿಡಿ; ಮಾ.1ರ ಟಾಪ್ 10 ಸುದ್ದಿ

  ಬಿಜೆಪಿ ಸರ್ಕಾರದಲ್ಲಿ ಮತ್ತೊಮ್ಮೆ ಸಚಿವರು ಬದಲಾಗಲಿದ್ದಾರೆ ಎಂದು ಡಿಕೆ ಶಿವಕುಮಾರ್ ಭವಿಷ್ಯ ನುಡಿದಿದ್ದಾರೆ. ಸಿಎಂ ಯಡಿಯೂರಪ್ಪ ಹುಟ್ಟುಹಬ್ಬದಲ್ಲಿ ಪಾಲ್ಗೊಂಡ ಸಿದ್ದರಾಮಯ್ಯಗೆ ಸ್ವಪಕ್ಷದಲ್ಲಿ ಅಸಮಧಾನ ವ್ಯಕ್ತವಾಗಿದೆ. ನ್ಯೂಜಿಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲೂ ಕೊಹ್ಲಿ ಸೈನ್ಯ ಬ್ಯಾಟಿಂಗ್ ವೈಫಲ್ಯ ಅನುಭವಿಸಿದೆ. ಅನನ್ಯ ಜೊತೆ ದೇವರಕೊಂಡ  ರೋಮ್ಯಾನ್ಸ್, ಅತ್ಯಂತ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಕಾರು ಅನಾವರಣ ಸೇರಿದಂತೆ ಮಾರ್ಚ್ 1 ರ ಟಾಪ್ 10 ಸುದ್ದಿ ಇಲ್ಲಿವೆ

 • HD Kumaraswamy

  state29, Feb 2020, 10:26 AM

  ಸಾಲಮನ್ನಾದಿಂದ 1 ಲಕ್ಷ ರೈತರಿಗೆ ಕೊಕ್‌: ಮಾಜಿ ಸಿಎಂ ಎಚ್‌ಡಿಕೆ

  ದಾಖಲೆಗಳ ನೆಪವೊಡ್ಡಿ ಸಾಲಮನ್ನಾ ಯೋಜನೆಯಿಂದ ಒಂದು ಲಕ್ಷಕ್ಕೂ ಹೆಚ್ಚು ರೈತರನ್ನು ಕೈಬಿಡುವ ಮೂಲಕ ಬಿಜೆಪಿ ಸರ್ಕಾರ ರೈತರಿಗೆ ದೋಖಾ ಮಾಡುತ್ತಿದೆ ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಹೇಳಿದರು. 

 • rohini-sindhuri

  state20, Feb 2020, 6:20 PM

  ರೋಹಿಣಿ ಸಿಂಧೂರಿ ಮತ್ತೆ ಎತ್ತಂಗಡಿ: ಬಿಜೆಪಿ ಸರ್ಕಾರದಲ್ಲಿ ಇದು 2ನೇ ಬಾರಿ

  ನಿಷ್ಠ ಅಧಿಕಾರಿಗಳಿಗಿದು ಕಾಲವಲ್ಲ ಎಂಬುದು ಪದೇಪದೆ ಸಾಬೀತಾಗುತ್ತಲೇ ಇದೆ. ತಮ್ಮ ಪ್ರಾಮಾಣಿಕ ಹಾಗೂ ಪಾರದರ್ಶಕ ಆಡಳಿತದಿಂದಲೇ ಹೆಸರುವಾಸಿಯಾದವರು ಖಡಕ್ ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ಅವರನ್ನ ಮತ್ತೆ ಎತ್ತಂಗಡಿ ಮಾಡಲಾಗಿದೆ. ಮೈತ್ರಿ ಸರ್ಕಾರ ಪತನಗೊಂಡು ಬಿಜೆಪಿ ಅಧಿಕಾರಕ್ಕೇರಿದ ಬಳಿಕ 2009ನೇ ಬ್ಯಾಚ್ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರು 2ನೇ ಬಾರಿಗೆ ವರ್ಗಾವಣೆ ಭಾಗ್ಯ ಸಿಕ್ಕಿದೆ.

 • undefined
  Video Icon

  Politics20, Feb 2020, 4:12 PM

  'ಆಪರೇಷನ್ ಕಮಲ ಮೂಲಕ ಅನೈತಿಕವಾಗಿ ಹುಟ್ಟಿದ ಕೂಸು ಬಿಜೆಪಿ ಸರ್ಕಾರ'

  ಸದನದಲ್ಲಿ ಮುಂದುವರಿದ ಮಾತಿನ ಜಟಾಪಟಿ; ಬಿಜೆಪಿ ಸರ್ಕಾರದ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ; ಸರ್ಕಾರದ ರಚನೆಯನ್ನು ಸದನದಲ್ಲಿ ಟೀಕಿಸಿದ  ಸಿದ್ದರಾಮಯ್ಯ

 • undefined
  Video Icon

  Politics19, Feb 2020, 7:20 PM

  ಬೆಂಕಿ ಹಚ್ಬೇಡಿ ಅಂದ್ರೆ ಕೇಸ್; ರುಂಡ ಕತ್ತರಿಸಿ ಅಂದ್ರೆ ಕೇಕ್: ಸರ್ಕಾರಕ್ಕೆ ಕುಟುಕಿದ ಜಯಮಾಲ

  • ವಿಧಾನ ಪರಿಷತ್ತಿನಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಶಾಸಕಿ ಜಯಮಾಲಾ
  • ಬೆಂಕಿ ಹಚ್ಬೇಡಿ ಅನ್ನುವವರ ವಿರುದ್ಧ ದೇಶದ್ರೋಹದ ಕೇಸ್ ದಾಖಲಾಗುತ್ತೆ, ರುಂಡ ಕತ್ತರಿಸಿ ಅನ್ನುವವರ ವಿರುದ್ಧ ಯಾವುದೇ ಕ್ರಮ ಇಲ್ಲ
  • ಸರ್ಕಾರದ ದ್ವಂದ್ವ ಧೋರಣೆ ವಿರುದ್ಧ ಜಯಮಾಲ ಸಿಡಿಮಿಡಿ