ಬಾದಾಮಿ  

(Search results - 131)
 • siddaramaiah

  Karnataka Districts5, Dec 2019, 1:37 PM IST

  'ರಮೇಶ್ ಜಾರಕಿಹೊಳಿ ಬಾಯಿಗೆ ಬಂದಂಗೆ ಮಾತನಾಡ್ತಾರೆ'

  ಜವಾಬ್ದಾರಿ ಏನಾದ್ರೂ ಇದ್ರೆ ಹೀಗೆಲ್ಲ ಮಾತನಾಡುವುದಿಲ್ಲ. ರಾಜಕಾರಣದಲ್ಲಿ ಹುಡುಗಾಟಿಕೆ ಆಡಬಾರದು. ಗಂಭೀರವಾಗಿ ಮಾತನಾಡೋದನ್ನ ಕಲಿಯಬೇಕು ಎಂದು ಗೋಕಾಕ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಟಾಂಗ್ ಕೊಟ್ಟಿದ್ದಾರೆ. 
   

 • Road Work

  Karnataka Districts28, Nov 2019, 7:46 AM IST

  ಬಾದಾಮಿ: ಆಮೆಗತಿ ಕಾಮಗಾರಿ, ನಗರದಲ್ಲಿ ಗುಂಡಿಗಳ ನಿರ್ಮಾಣ

  ಮಾಜಿ ಸಿಎಂಗೆ ರಾಜಕೀಯವಾಗಿ ಮರುಜನ್ಮ ನೀಡಿದ ಬಾದಾಮಿ ಕ್ಷೇತ್ರದಲ್ಲಿ ಹಲವು ತಿಂಗಳಿನಿಂದ ರಸ್ತೆ ಕಾಮಗಾರಿಗಳು ನಡೆಯುತ್ತಿವೆ. ಇದರಿಂದ ನಗರದ ಬಹುತೇಕ ಕಡೆಗಳಲ್ಲಿ ಗುಂಡಿಗಳು ಬಿದ್ದು ಸಂಚಾರಕ್ಕೆ ಅಡಚಣೆಯಾಗಿದೆ.
   

 • rohini sindhuri temple
  Video Icon

  Hassan26, Nov 2019, 8:24 PM IST

  ಈ ದೇವಾಲಯದಲ್ಲಿ  ರೋಹಿಣಿ ಸಿಂಧೂರಿ ಹೆಸರಿನಲ್ಲಿ ಪ್ರತಿನಿತ್ಯ ಅರ್ಚನೆ

  ಹಾಸನ(ನ. 26)  ಹಾಸನದ ಹಿಂದಿನ ಡಿಸಿ ರೋಹಿಣಿ ಸಿಂಧೂರಿ ಹೆಸರಿನಲ್ಲಿ ಪ್ರತೀ ಸೋಮವಾರ ಈ ದೇವಾಲಯದಲ್ಲಿ ಅರ್ಚನೆ ಮಾಡಲಾಗುತ್ತದೆ.  ಹಾಸನದ ವಿರೂಪಾಕ್ಷ ದೇವಾಯದಲ್ಲಿ ಹಳೇ ಜಿಲ್ಲಾಧಿಕಾರಿ ಹೆಸರಿನಲ್ಲಿ ಅರ್ಚನೆ ಮಾಡಲಾಗುತ್ತದೆ.

  ಅಲ್ಲದೇ ರೋಹಿಣಿ ಸಿಂಧೂರಿ ಹೆಸರಿನಲ್ಲಿ  ಬಾದಾಮಿ ಗಿಡ ಕೂಡಾ ಬೆಳಸಲಾಗುತ್ತಿದೆ. ಆ ಗಿಡಕ್ಕೆ ಪ್ರತಿನಿತ್ಯ ಜಲಾಭಿಷೇಕ ನಡೆಯುತ್ತಿದೆ. ಮುಜರಾಯಿ ಇಲಾಖೆಗೆ ಸೇರಿರುವ ದೇವಾಲಯ ಶಿಥಿಲಾವಸ್ಥೆಗೆ ತೆರೆಳಿದ್ದಾಗ ಯಾರೂ ಕೂಡಾ ಗಮನಹರಿಸಿರಲಿಲ್ಲ.  2017ರಲ್ಲಿ ಜೀರ್ಣೋದ್ಧಾರಕ್ಕೆ ಸರ್ಕಾರದಿಂದ 30 ಲಕ್ಷ ಹಣ ಬಿಡುಗಡೆ ಮಾಡಿಸಿದ್ದರು . ಇದರಿಂದ ಮೇಲ್ಛಾವಣಿ, ನೆಲಹಾಸು ಮತ್ತು ವಿದ್ಯುತ್ ಸೌಕರ್ಯ ಸೇರಿ ಎಲ್ಲಾ ವ್ಯವಸ್ಥೆ ಬಂದಿತ್ತು.  ಹಾಸನದ ಹಿಂದಿನ ಡಿಸಿ ರೋಹಿಣಿ ಸಿಂಧೂರಿ ಹೆಸರಿನಲ್ಲಿ ಪ್ರತೀ ಸೋಮವಾರ ಅರ್ಚನೆ ಮಾಡಲಾಗುತ್ತಿದೆ.

  ಗಿಡಗಂಟೆಗಳು ಬೆಳೆದು ಕಾಡಂತಿದ್ದ ದೇವಾಲಯದ ಆವರಣವನ್ನು ಸ್ವಚ್ಛಗೊಳಿಸಿದ್ದರು.  ಅಲ್ಲಿ ವಿಶೇಷ ಮರಗಳಿದ್ದವು, ಅವುಗಳ ನಡುವೆ ಒಂದು ಬಾದಾಮಿ ಗಿಡವನ್ನು ನೆಟ್ಟು ಅವರ ಹೆಸರನ್ನು ಇಟ್ಟು ಪೋಷಿಸಲಾಗುತ್ತಿದೆ. ಅದಕ್ಕೂ ಕೂಡಾ ಪ್ರತಿನಿತ್ಯ ಜಲಾಭಿಷೇಕ ಮಾಡಲಾಗುತ್ತದೆ. 

 • Karnataka Districts21, Nov 2019, 2:47 PM IST

  ಬಾಗಲಕೋಟೆ: ಐತಿಹಾಸಿಕ ತಾಣಗಳ ಸ್ಥಳಾಂತರಕ್ಕೆ ಸರ್ವೆ ಕಾರ್ಯ ಶುರು!

  ಪದೇ ಪದೇ ಪ್ರವಾಹಕ್ಕೆ ತುತ್ತಾಗಿ, ಇತ್ತ ಇರಲು ಆಗದೇ, ಅತ್ತ ಹೋಗಲು ಆಗದೇ ಅತಂತ್ರವಾಗಿದ್ದ ಜಿಲ್ಲೆಯ ಐತಿಹಾಸಿಕ ಐಹೊಳೆ, ಪಟ್ಟದಕಲ್ಲು ಸೇರಿ ಬಾದಾಮಿಯ ಕೆಲವು ಮನೆಗಳ ಸ್ಥಳಾಂತರದ ಸರ್ವೆ ಕಾರ್ಯ ಆರಂಭಿಸುವ ಮೂಲಕ ಸರ್ಕಾರ ಸ್ಥಳಾಂತರಕ್ಕೆ ಮುಂದಾಗಿದೆ. 
   

 • Siddu

  Politics19, Nov 2019, 6:31 PM IST

  ಬನ್ನಿ ನೋಡಿಯೇ ಬಿಡೋಣ: ಸಿದ್ದರಾಮಯ್ಯಗೆ ಶ್ರೀರಾಮುಲು ಪಂಥಾಹ್ವಾನ

  ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆ ಸಮಯದಲ್ಲೂ ಮತ್ತದೇ ಮಾತಿನ ಸಮರ ಮುಂದುವರಿಸಿದ್ದು, ಸಿದ್ದುಗೆ ರಾಮುಲು ಪಂಥಾಹ್ವಾನ ಕೊಟ್ಟಿದ್ದಾರೆ. ಏನದು..?

 • siddaramaiah1

  Karnataka Districts17, Nov 2019, 11:27 AM IST

  '36 ಸಾವಿರ ಮತಗಳಿಂದ ಸೋತರೂ ಸಿದ್ದು ಆರ್ಭಟ ಇನ್ನೂ ಕಡಿಮೆಯಾಗಿಲ್ಲ'..!

  ಮೈಸೂರಿನಿಂದ ಕದ್ದು ಹೋಗಿ ಬಾದಾಮಿಯಲ್ಲಿ 1,600 ಮತಗಳಿಂದ ಗೆದ್ದರೂ, ಚಾಮುಂಡೇಶ್ವರಿಯಲ್ಲಿ 36,000 ಮತಗಳಿಂದ ಸೋತರೂ ಮಾಜಿ ಮುಖ್ಯಮಂತ್ರಿ, ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಆರ್ಭಟ ಕಡಿಮೆಯಾಗಿಲ್ಲ ಎಂದು ಚಾಮರಾಜನಗರ ಬಿಜೆಪಿ ಸಂಸದ ವಿ. ಶ್ರೀನಿವಾಸಪ್ರಸಾದ್‌ ವಾಗ್ದಾಳಿ ನಡೆಸಿದ್ದಾರೆ.

 • road

  Bagalkot14, Nov 2019, 12:52 PM IST

  ಕೆರೂರ: ಇವೇನು ರಸ್ತೆಗಳಾ ಅಥವಾ ತಿಪ್ಪೆಗುಂಡಿಗಳಾ?

  ಸ್ವಚ್ಛ ಭಾರತ ಅಭಿಯಾನ ಪ್ರಾರಂಭಿಸಿದರೂ ಅಷ್ಟೇ. ಅರೋಗ್ಯ ರಕ್ಷಣೆಗೆ ಗ್ರಾಮ, ನಗರ ಮತ್ತು ಪಟ್ಟಣಗಳಲ್ಲಿ ಸ್ವಚ್ಛತೆ ಕಾಪಾಡಬೇಕು ಎಂದು ಜಾಗೃತಿ, ಅಭಿಯಾನ ಮೂಡಿಸಿದರೂ ಅಷ್ಟೇ. ಕೆರೂರು ಪಟ್ಟಣದ ಬಹುತೇಕ ರಸ್ತೆಗಳು ತಿಪ್ಪೆಗುಂಡಿಗಳಂತಾಗಿವೆ. ಸ್ಥಳೀಯ ಆಡಳಿತಕ್ಕೆ ಗೊತ್ತಿದ್ದರೂ ಸ್ವಚ್ಚತಾ ಕಾರ್ಯಕ್ಕೆ ಇನ್ನೂ ಕೂಡಿಬಂದಿಲ್ಲ ಮುಹೂರ್ತ. ಪಟ್ಟಣ ಪಂಚಾಯತ ನಿರ್ಲಕ್ಷ್ಯ ಧೋರಣೆ ಪಟ್ಟಣದ ಜನತೆಯ ಆಕ್ರೋಶಕ್ಕೆ ಕಾರಣವಾಗಿದೆ. 
   

 • water
  Video Icon

  Bagalkot11, Nov 2019, 3:47 PM IST

  5 ವರ್ಷದ ಹಿಂದೆ ಬತ್ತಿದ ಬೋರ್‌ವೆಲ್‌ನಲ್ಲಿ 30 ಅಡಿ ಚಿಮ್ಮಿದ ನೀರು

  5 ವರ್ಷಗಳ ಹಿಂದೆ ಬತ್ತಿದ್ದ ಬೋರ್‌ವೆಲ್‌ನಲ್ಲಿ ಏಕಾ ಏಕಾ 30 ಅಡಿ ಎತ್ತರಕ್ಕೆ ನೀರು ಚಿಮ್ಮಿದ ಘಟನೆ ಬಾಗಲಕೋಟೆ ಜಿಲ್ಲೆಯಲ್ಲಿ ನಡೆದಿದೆ.  ಬೋರವೆಲ್ ನಲ್ಲಿ ಚಿಮ್ಮುತ್ತಿರುವ ನೀರು ಕಂಡು ಜನರು ಅಚ್ಚರಿಗೊಂಡಿದ್ದಾರೆ. 

  ಬಾದಾಮಿ ತಾಲೂಕಿನ ನೀಲಗುಂದ ಗ್ರಾಮದ ರೈತ ದ್ಯಾವಪ್ಪ ಕಾಟನಾಯ್ಕರ್ ಎಂಬುವರಿಗೆ ಸೇರಿದ ಬೋರವೆಲ್ ನಲ್ಲಿ ನೀರುಕ್ಕುತ್ತಿದೆ.  

 • somanna bsy

  Bagalkot6, Nov 2019, 12:49 PM IST

  BSY ಬಗ್ಗೆ HDK ಸಾಫ್ಟ್ ಕಾರ್ನರ್: ಉಪ್ಪು ಖಾರ ಬೆರೆಸೋದು ಬೇಡ ಎಂದ ಸಚಿವ

  ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಬಿಜೆಪಿ ಸಚಿವರು ರಾಜಕೀಯ ಮಾಡುತ್ತಿದ್ದಾರೆ. ಜಿಲ್ಲೆಯ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಕ್ಷೇತ್ರ ಬಾದಾಮಿಯನ್ನು ಬಿಜೆಪಿ ಸಚಿವರು ಕಡೆಗಣಿಸಿದ್ದಾರೆ ಎಂದು ಸುವರ್ಣ ನ್ಯೂಸ್ ವಾಹಿನಿ ವರದಿ ಮಾಡಿತ್ತು. ಈ ವರದಿಯ ಬೆನ್ನಲ್ಲೇ ವಸತಿ ಸಚಿವ ವಿ.ಸೋಮಣ್ಣ ಎಚ್ಚೆತ್ತುಕೊಂಡಿದ್ದಾರೆ. 
   

 • yeddyurappa veerappa moily

  Bagalkot2, Nov 2019, 3:20 PM IST

  'ಮೋದಿ, ಅಮಿತ್ ಶಾಗೆ ಯಡಿಯೂರಪ್ಪರನ್ನ ಹುಚ್ಚರನ್ನಾಗಿ ಮಾಡೋದು ಬೇಕಿತ್ತು'

  ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕರುಣಾಜನಕ ಪರಿಸ್ಥಿತಿಯಲ್ಲಿದ್ದಾರೆ. ಅವರಿಗೆ ಸಿಎಂ ಆಗುವ ಅನಿವಾರ್ಯತೆ ಇರಲಿಲ್ಲ. ಸಿಎಂ ಸ್ಥಾನ ಬಿಎಸ್ವೈ ಬಿಟ್ಟು ಬಿಡಲಿ. ಇಂಥಹ ಅಸಹಾಯಕತೆ ಯಾಕೆ ತೋರಿಸ್ಬೇಕು. ಪ್ರಧಾನಿ ಮೋದಿ, ಅಮಿತ್ ಶಾ ಭೇಟಿಗೆ ಅವಕಾಶ ನೀಡುತ್ತಿಲ್ಲ, ಸಹಾಯ ಮಾಡ್ತಿಲ್ಲ, ಹಣ ಸಂಪನ್ಮೂಲ ಕೂಡಿಸೋ ಶಕ್ತಿ ಬಿಎಸ್ವೈಗಿಲ್ಲ. ಶತಮಾನದ ಅತ್ಯಂತ ದುರ್ಬಲ ಸಿಎಂ ಆಗಿದ್ದಾರೆ ಎಂದು ಕಾಂಗ್ರೆಸ್ ನ ಹಿರಿಯ ಮುಖಂಡ ವೀರಪ್ಪ ಮೋಯ್ಲಿ ಅವರು ಹೇಳಿದ್ದಾರೆ.

 • Ram Tirtha

  Bagalkot31, Oct 2019, 6:06 PM IST

  ಪ್ರಕೃತಿ ಪ್ರೀಯರನ್ನು ಕೈಬೀಸಿ ಕರೆಯೋ ಉಗಲವಾಟದ ರಾಮತೀರ್ಥ ತಾಣ

  ಕನ್ನಡ ನಾಡಿನ ಹಲವು ಪ್ರಕೃತಿ ತಾಣಗಳ ಮಧ್ಯೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಉಗಲವಾಟ ಗ್ರಾಮದ ಬಳಿ ಬೆಟ್ಟದಲ್ಲಿರುವ ರಾಮತೀರ್ಥ ಇದೀಗ ಎಲ್ಲರ ಕಣ್ಮನ ಸಳೆಯೋ ಹಾಟ್ ಫೆವರೆಟ್ ತಾಣವಾಗಿದೆ. 
   

 • yeddyurappa

  Bagalkot29, Oct 2019, 12:32 PM IST

  ಬಿಎಸ್‌ವೈದು ತುಘಲಕ್ ಸರ್ಕಾರ ಎಂದ ಬಾದಾಮಿಯ ಕಾಂಗ್ರೆಸ್ ಕಾರ್ಯಕರ್ತ!

  ಕರ್ನಾಟಕ ಪ್ರವಾಹ ಸಂತ್ರಸ್ತರಿಗೆ ಕೇಂದ್ರ ಸರ್ಕಾರ ಮಧ್ಯಂತರ ಪರಿಹಾರವಾಗಿ 1200 ಕೋಟಿ ರು. ಬಿಡುಗಡೆ ಮಾಡಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಹೇಳಿದ್ದಾರೆ. ಆದರೆ, ಜಿಲ್ಲೆಯ ಬಾದಾಮಿ ತಾಲೂಕಿನ ಕಗಲಗೊಂಬ ಗ್ರಾಮದ ಕಾಂಗ್ರೆಸ್ ಕಾರ್ಯಕರ್ತ ವೆಂಕಟೇಶ್ ಜಂಬಗಿ ಎಂಬುವರು ಸಿಎಂ ಯಡಿಯೂರಪ್ಪ ಅವರಿಗೆ ಟ್ವೀಟ್ ಮಾಡಿ ಮಾನ್ಯ ಬಿಎಸ್ವೈಯವರೇ, ಕೇಂದ್ರ ನೆರೆ ಪರಿಹಾರ 1200 ಕೋಟಿ ನೀಡಿದೆ ಅಂತೀರಾ,ಆದ್ರೆ ಎಲ್ಲೂ ಸಂತ್ರಸ್ತರಿಗೆ ಪರಿಹಾರ ವಿತರಣೆ ಆಗಿಲ್ಲ ಎಂದು ಬರೆದುಕೊಂಡಿದ್ದಾರೆ. 

 • Bagalkot28, Oct 2019, 10:16 AM IST

  ಬಾದಾಮಿ: ಗೋವಿನಕೊಪ್ಪ ಸೇತುವೆ ಮೇಲೆ ಫುಲ್‌ ಟ್ರಾಫಿಕ್‌ ಜಾಮ್‌!

  ಪ್ರವಾಹ ಇಳಿಮುಖವಾದ ಹಿನ್ನಲೆಯಲ್ಲಿ ಜಿಲ್ಲೆಯ ಬಾದಾಮಿ ತಾಲೂಕಿನ ಹುಬ್ಬಳ್ಳಿ- ಸೋಲ್ಹಾಪೂರ ರಾಷ್ಟ್ರೀಯ ಹೆದ್ದಾರಿ ರಸ್ತೆಯಲ್ಲಿ ಮತ್ತೆ ವಾಹನಗಳ ಸಂಚಾರ ಆರಂಭವಾಗಿದೆ. ಆದರೆ, ಗೋವಿನಕೊಪ್ಪ ಸೇತುವೆ ಮೇಲೆ ಸಂಚರಿಸಲು ವಾಹನಗಳು ಪರದಾಡಿದ ಘಟನೆ ಭಾನುವಾರ ನಡೆದಿದೆ. 
   

 • Bagalkot

  Bagalkot28, Oct 2019, 7:32 AM IST

  ದೀಪಾವಳಿ ಹಬ್ಬದಂದೇ ದುರ್ಘಟನೆ: ಕೆರೆಯಲ್ಲಿ ಈಜಲು ಹೋದ ಯುವಕ ನೀರುಪಾಲು

  ದೀಪಾವಳಿ ಹಬ್ಬದಂದೆ ದುರ್ಘಟನೆಯೊಂದು ಜಿಲ್ಲೆಯಲ್ಲಿ ನಡೆದಿದೆ. ಕೆರೆಯಲ್ಲಿ ಈಜಲು ಹೋಗಿ ಯುವಕನೊಬ್ಬ ನೀರುಪಾಲಾದ ಘಟನೆ ಜಿಲ್ಲೆಯ ಬಾದಾಮಿ ತಾಲೂಕಿನ ಹಳಗೇರಿ ಗ್ರಾಮದಲ್ಲಿ ಭಾನುವಾರ ನಡೆದಿದೆ. ನೀರು ಪಾಲಾದ ಯುವಕನನ್ನು ಫಕೀರಪ್ಪ ವಾಲೀಕಾರ (28) ಎಂದು ಗುರುತಿಸಲಾಗಿದೆ. 
   

 • Siddaramaiah

  Bagalkot23, Oct 2019, 3:25 PM IST

  ಬಾದಾಮಿ: ಸ್ವಂತ ಕಾರು ಬಿಟ್ಟು ಪೊಲೀಸರ ಜೀಪು ಹತ್ತಿದ ಸಿದ್ದರಾಮಯ್ಯ

  ಗುಡ್ಡದ ರಸ್ತೆಯಲ್ಲಿ ಕಾರು ಹೋಗದ ಹಿನ್ನೆಲೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಕಾರಿಳಿದು ಪೊಲೀಸ್ ಜೀಪಿನಲ್ಲಿ ಪ್ರಯಾಣ ಬೆಳೆಸಿದ ಘಟನೆ ಜಿಲ್ಲೆಯ ಬಾದಾಮಿ ತಾಲೂಕಿನ ಹೆಬ್ಬಳ್ಳಿ ಗ್ರಾಮದಲ್ಲಿ ನಡೆದಿದೆ.