ಫೀಚರ್

(Search results - 236)

WhatsApp

Technology14, Aug 2020, 5:06 PM

ಸದ್ಯದಲ್ಲೇ ವಾಟ್ಸ್‌ಆ್ಯಪ್‌ ಮತ್ತೊಂದು ಹೊಸ ಫೀಚರ್ ಪರಿಚಯ..!

ಇತ್ತೀಚೆಗೆ ಏಕಕಾಲಕ್ಕೆ 8 ಜನರು ವಿಡಿಯೋ ಕಾಲ್‌ ಮಾಡುವ, ಫಾರ್ವರ್ಡ್‌ ಸುದ್ದಿಗಳಿಗೆ ಲೇಬಲ್‌ ನೀಡುವ ಫೀಚರ್‌ ಅನ್ನು ವಾಟ್ಸ್‌ ಆ್ಯಪ್‌ ಪರಿಚಯಿಸಿತ್ತು.

Ford Freestyle Flair

Automobile13, Aug 2020, 3:36 PM

ಸ್ಪೊರ್ಟಿ ಲುಕ್, 6 ಏರ್‌ಬ್ಯಾಗ್; ಫೋರ್ಡ್ ಫ್ರೀ ಸ್ಟೈಲ್ ಫ್ಲೇರ್ ಎಡಿಶನ್ ಕಾರು ಬಿಡುಗಡೆ!

ಭಾರತದಲ್ಲಿ ಹ್ಯಾಚ್‌ಬ್ಯಾಕ್ ಕಾರುಗಳ ಪೈಕಿ ಫೋರ್ಡ್ ಫ್ರೀ ಸ್ಟೈಲ್ ಹೆಚ್ಚು ಯಶಸ್ವಿಯಾಗಿದೆ. ಇದೀಗ ಈ ಯಶಸ್ಸಿನ ಬೆನ್ನಲ್ಲೇ ಫೋರ್ಡ್ ಇಂಡಿಯಾ ಫ್ರೀ ಸ್ಟೈಲ್ ಫ್ಲೇರ್ ಎಡಿಶನ್ ಕಾರು ಬಿಡುಗಡೆಯಾಗಿದೆ. ಆಕರ್ಷಕ ಲುಕ್, ಅಗ್ರೆಸ್ಸೀವ್ ಹಾಗೂ ಸ್ಪೋರ್ಟ್ಸ್ ಸ್ಟೈಲ್ ಹಾಗೂ ಹೆಚ್ಚು ಸುರಕ್ಷತಾ ಫೀಚರ್ಸ್‌ನೊಂದಿಗೆ ಕಾರು ಬಿಡುಗಡೆಯಾಗಿದೆ. ನೂತನ ಕಾರಿನ ವಿವರ ಇಲ್ಲಿದೆ.

• mahindra thar

Automobile5, Aug 2020, 7:39 PM

ಸ್ವಾತಂತ್ರ್ಯ ದಿನಾಚರಣೆಗೆ ನೂತನ ಮಹೀಂದ್ರ ಥಾರ್ ಅನಾವರಣ!

ಬಹುನಿರೀಕ್ಷಿತ ನ್ಯೂ ಜನರೇಶನ್ ಮಹೀಂದ್ರ ಥಾರ್ ಆಫ್ ರೋಡ್ ಜೀಪ್ ಅನಾವರಣಕ್ಕೆ ಸಜ್ಜಾಗಿದೆ. ಸದ್ಯ ಮಾರುಕಟ್ಟೆಯಲ್ಲಿರುವ ಥಾರ್ ವಾಹನಕ್ಕಿಂತ ದೊಡ್ಡದಾದ, ಆಕರ್ಷಕ ಹಾಗೂ ಹೆಚ್ಚುವರಿ ಫೀಚರ್ಸ್ ಹೊಂದಿರುವ ನೂತನ ಥಾರ್ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ

Maruti, suzuki, cross, petrol, car, launched

Automobile5, Aug 2020, 12:17 PM

ಮಾರುತಿ S ಕ್ರಾಸ್ ಪೆಟ್ರೋಲ್ ಕಾರು ಬಿಡುಗಡೆ; ಕ್ರೆಟಾ, ಸೆಲ್ಟೋಸ್ ಕಾರಿಗಿಂತ ಕಡಿಮೆ ಬೆಲೆ!

ಬಹುನಿರೀಕ್ಷಿತ ಮಾರುತಿ ಸುಜುಕಿ S ಕ್ರಾಸ್ ಕಾರು ಬಿಡುಗಡೆಯಾಗಿದೆ. ಕೊರೋನಾ ವೈರಸ್ ಕಾರಣ ವಿಳಂಬವಾಗಿದ್ದ S ಕ್ರಾಸ್ ಕಾರು ಹೆಚ್ಚುವರಿ ಫೀಚರ್ಸ್, ಆಕರ್ಷಕ ಹಾಗೂ ದಕ್ಷ ಎಂಜಿನ್ ಸಾಮರ್ಥ್ಯದೊಂದಿಗೆ ಬಿಡುಗಡೆಯಾಗಿದೆ. ಹ್ಯುಂಡೈ ಕ್ರೆಟಾ ಹಾಗೂ ಕಿಯಾ ಸೆಲ್ಟೋಸ್ ಕಾರಿಗಿಂತ ನೂತನ S ಕ್ರಾಸ್ ಕಾರಿನ ಬೆಲೆಯೂ ಕಡಿಮೆ ಇದೆ. ಕಾರಿನ ಕುರಿತ ಹೆಚ್ಚಿನ ವಿವರ ಇಲ್ಲಿದೆ.

Snooze, Gmail

Whats New4, Aug 2020, 7:23 PM

ಅಲಾರಾಂ ರೀತಿ ನಿಮ್ಮ G-Mail ಮೆಸೇಜ್‌ ಸ್ನೂಜ್ ಮಾಡಿ..!

ಕಾಲವನ್ನು ನಿಲ್ಲಿಸಲಾಗಲ್ಲ, ಜೊತೆಗೆ ಮತ್ತೆ ರಿವೈಂಡ್ ಮಾಡಿಕೊಂಡು ಜೀವನ ನಡೆಸಲೂ ಆಗಲ್ಲ. ನಡೆದ ಘಟನೆಗಳನ್ನು ಮನಸ್ಸಿನಲ್ಲಿ ರಿವೈಂಡ್ ಮಾಡಿಕೊಳ್ಳಬಹುದಷ್ಟೇ. ಆದರೆ, ತಂತ್ರಜ್ಞಾನ ಹಾಗಲ್ಲ. ಅದಿರುವುದೇ ನಮ್ಮ ಉಪಯೋಗಕ್ಕಾಗಿ. ಕೆಲವೊಮ್ಮೆ ತಂತ್ರಜ್ಞಾನಗಳು ಅದೆಷ್ಟು ಬಳಕೆದಾರರಸ್ನೇಹಿಯಾಗಿರುತ್ತದೆ ಎಂದರೆ ನಮ್ಮ ಕೆಲಸವನ್ನು ಬಹಳಷ್ಟು ಕಡಿಮೆ ಮಾಡುತ್ತದೆ. ಅವುಗಳಲ್ಲಿ ಸಾಕಷ್ಟು ಆಯ್ಕೆಗಳು ನಮಗೆ ಅನುಕೂಲಕರವಾಗಿರುತ್ತವೆ. ಆದರೆ, ಬಹಳಷ್ಟನ್ನು ನಾವು ನೋಡಿದ್ದರೂ ಆ ಬಗ್ಗೆ ತಿಳಿದುಕೊಂಡಿರುವುದಿಲ್ಲ. ಈಗ ನಮ್ಮ ಪ್ರತಿ ಕೆಲಸದಲ್ಲೂ ಛಾಪು ಮೂಡಿಸಿರುವ ಜಿ-ಮೇಲ್‌ಗಳಲ್ಲೂ ಸಾಕಷ್ಟು ಇಂತಹ ಅಂಶಗಳಿದ್ದರೂ ನಮ್ಮ ಗಮನಕ್ಕೆ ಬಂದಿರುವುದಿಲ್ಲ. ಜಿ-ಮೇಲ್‌ನಲ್ಲಿ ಸ್ನೂಜ್ ಆಪ್ಷನ್ ಇದ್ದು, ನಿಮಗೆ ಬೇಕಾದ ಸಮಯ ಹಾಗೂ ದಿನಾಂಕವನ್ನು ನಿಗದಿಪಡಿಸಿ, ಆ ಸಮಯದಲ್ಲಿ ಓದಿಕೊಳ್ಳಬಹುದು. ಈ ಸ್ನೂಜ್ ಆಯ್ಕೆ ಏನು..? ಎತ್ತ..? ಎಂಬ ಬಗ್ಗೆ ಗಮನಹರಿಸೋಣ...

Google Meet, Zoom

Whats New28, Jul 2020, 7:05 PM

ಗೂಗಲ್ ಮೀಟ್ ವೇಳೆ ಬ್ಯಾಕ್ ಗ್ರೌಂಡ್ ಶಬ್ದ ವನ್ನು ಮ್ಯೂಟ್ ಮಾಡೋದು ಹೇಗೆ?

ವರ್ಕ್ ಫ್ರಂ ಹೋಂ ಅಂದ ಮೇಲೆ ವಿಡಿಯೋ ಕಾನ್ಫರೆನ್ಸ್‌ಗಳು ಇದ್ದೇ ಇರುತ್ತವೆ. ಆದರೆ, ಇಂತಹ ಸಂದರ್ಭದಲ್ಲಿ ಮನೆಯ ಕೊಠಡಿಯ ಬಾಗಿಲು ತೆಗೆಯುವ-ಮುಚ್ಚುವ ಶಬ್ದ, ಇಲ್ಲವೇ ಕೀಬೋರ್ಡ್ ಟೈಪಿಂಗ್ ಶಬ್ದಗಳು ಸ್ವಲ್ಪ ಕಿರಿಕಿರಿ ಹಾಗೂ ಮುಜುಗರವನ್ನುಂಟು ಮಾಡುತ್ತವೆ. ಈ ನಿಟ್ಟಿನಲ್ಲಿ ಗೂಗಲ್ ಮೀಟ್ ಈಗ ನೂತನ ಫೀಚರ್ ಒಂದನ್ನು ಹೊರತಂದಿದ್ದು, ಅದನ್ನು ಆ್ಯಕ್ಟಿವೇಟ್ ಮಾಡಿಕೊಂಡರೆ ಇಂತಹ ಶಬ್ದಗಳು ಕೇಳಿಸುವುದಿಲ್ಲ. ಹಾಗಾದರೆ, ಯಾವುದು ಆ ನೂತನ ಫೀಚರ್ ಎಂಬ ಬಗ್ಗೆ ನೋಡೋಣ ಬನ್ನಿ...

bike

Automobile25, Jul 2020, 2:22 PM

ಸ್ಮಾರ್ಟ್‌ಫೋನ್ ಶಿಓಮಿ ಕಂಪನಿಯಿಂದ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಸ್ಕೂಟರ್ ಲಾಂಚ್!

ಸ್ಮಾರ್ಟ್‌ಫೋನ್ ಯಶಸ್ಸಿನ ಬೆನ್ನಲ್ಲೇ ಹಲವು ಎಲೆಕ್ಟ್ರಾನಿಕ್ ಉಪಕರಣಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿರುವ ಶಿಓಮಿ(Xiaomi) ಚೀನಾ, ಭಾರತ ಸೇರಿದಂತೆ ಏಷ್ಯಾದಲ್ಲೇ ಜನಪ್ರಿಯವಾಗಿದೆ. ಇದೀಗ Xiaomi ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದೆ. ಮೊಬೈಲ್ ರೀತಿಯಲ್ಲೇ ಕಡಿಮೆ ಬೆಲೆಯ ಹಾಗೂ ಗರಿಷ್ಠ ಫೀಚರ್ಸ್ ಇರುವ ಸ್ಕೂಟರ್ ಇದಾಗಿದೆ. ನೂತನ ಸ್ಕೂಟರ್ ಕುರಿತ ಮಾಹಿತಿ ಇಲ್ಲಿದೆ.

• Automobile20, Jul 2020, 9:09 PM

ರೆನಾಲ್ಟ್ ಡಸ್ಟರ್ ಟರ್ಬೋ ಪೆಟ್ರೋಲ್ ಕಾರು ಶೀಘ್ರದಲ್ಲಿ ಬಿಡುಗಡೆ!

2020ರ ಆಟೋ ಎಕ್ಸ್ಪದಲ್ಲಿ ಪ್ರದರ್ಶನಕ್ಕಿಟ್ಟಿದ್ದ ರೆನಾಲ್ಟ್ ಡಸ್ಟರ್ 1.3 ಲೀಟರ್ ಟರ್ಬೋ ಪೆಟ್ರೋಲ್ ಕಾರು ಇದೀಗ ಬಿಡುಗಡೆಗೆ ಸಜ್ಜಾಗಿದೆ. ಕೆಲ ಬದಲಾವಣೆ, ಹೆಚ್ಚುವರಿ ಫೀಚರ್ಸ್‌ನೊಂದಿಗೆ ನೂತನ ಕಾರು ಬಿಡುಗಡೆಯಾಗುತ್ತಿದೆ. ಈ ಕಾರಿನ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.

• ಯುರೋಪ್ ಮಾಡೆಲ್ ಹಾಗೂ ಭಾರತ ಮಾಡೆಲ್ ಕಾರಿನಲ್ಲಿ ಹೆಚ್ಚಿನ ವ್ಯತ್ಯಾಸಗಳಿಲ್ಲ

Automobile20, Jul 2020, 3:14 PM

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೊಸ ವಿನ್ಯಾಸ, ಮತ್ತಷ್ಟು ಆಕರ್ಷಕ ಹ್ಯುಂಡೈ i20!

ಪ್ರಿಮಿಯಂ ಹ್ಯಾಚ್‌ಬ್ಯಾಕ್ ಕಾರುಗಳಲ್ಲಿ ಹ್ಯುಂಡೈ ಐ20 ಕಾರು ಅತ್ಯಂತ ಜನಪ್ರಿಯವಾಗಿದೆ. ಆರಾಮದಾಯಕ ಪ್ರಯಾಣ, ಆಕರ್ಷಕ ವಿನ್ಯಾಸ, ಅಗ್ರೆಸ್ಸೀವ್ ಹಾಗೂ ಸ್ಪೋರ್ಟ್ ಲುಕ್‌ನಿಂದ ಐ20 ಬಹುತೇಕರ ನೆಚ್ಚಿನ ಕಾರಾಗಿದೆ. ಇದೀಗ ಹೆಚ್ಚುವರಿ ಫೀಚರ್ಸ್, ಮಹತ್ವದ ಬದಲಾವಣೆ, ಮತ್ತಷ್ಟು ಆಕರ್ಷಕ ವಿನ್ಯಾಸದೊಂದಿಗೆ ಹ್ಯುಂಡೈ ಐ20 ಕಾರು ಭಾರತದಲ್ಲಿ ಬಿಡುಗಡೆಯಾಗಲಿದೆ.

• Whats New13, Jul 2020, 12:09 PM

ಟಿಕ್‌ಟಾಕ್ ಗೆ ಪರ್ಯಾಯವಾಗಿ ರೀಲ್ಸ್ ಬಿಟ್ಟ ಇನ್‌ಸ್ಟಾಗ್ರಾಂ!

ಅಲ್ಪ ಅವಧಿಯಲ್ಲೇ ಸೋಷಿಯಲ್ ಮೀಡಿಯಾದಲ್ಲಿ ಹವಾ ಎಬ್ಬಿಸಿ ಅನಭಿಶಕ್ತವಾಗಿ ಮೆರೆಯುತ್ತಿದ್ದ ಟಿಕ್‌ಟಾಕ್ ಈಗ ಬ್ಯಾನ್ ಆಗಿದೆ. ಟಿಕ್‌ಟಾಕ್ ಸಹ ಜನರ ದೈನಂದಿನ ಚಟುವಟಿಕೆಯ ಭಾಗ ಎಂಬುದಾಗಿತ್ತು. ಅಲ್ಲದೆ, ಇದು ಅದೆಷ್ಟೋ ಮಂದಿಯಲ್ಲಿ ಅಡಗಿ ಕುಳಿತಿದ್ದ ಪ್ರತಿಭೆಗಳನ್ನು ಹೊರಗೆಡವಿವೆ. ಕೆವರು ಈ ಟಿಕ್‌ಟಾಕ್‌ನಿಂದಲೇ ರಾತ್ರೋ ರಾತ್ರಿ ಸ್ಟಾರ್‌ಗಳಾಗಿದ್ದಾರೆ. ಆದರೆ, ದೇಶದ ಭದ್ರತೆ ದೃಷ್ಟಿಯಿಂದ ಬ್ಯಾನ್ ಆಗಿದ್ದರಿಂದ ಈಗ ಇದಕ್ಕೊಂದು ಪರ್ಯಾಯ ಬೇಕಿದೆ. ಅಷ್ಟೇ ಫೀಚರ್ ಇರುವ, ಮನಸ್ಸಿಗೆ ಇನ್ನೂ ಹತ್ತಿರವಾಗುವಂತಹ ಆ್ಯಪ್‌ನ ಅವಶ್ಯಕತೆ ಇರುವುದರ ಲಾಭ ಪಡೆದ ಇನ್‌ಸ್ಟಾಗ್ರಾಂ, ಈಗ ತನ್ನ ಆ್ಯಪ್‌ನಲ್ಲೇ ಇನ್‌ಸ್ಟಾ ರೀಲ್ಸ್ ಎಂಬ ನೂತನ ಫೀಚರ್ ಅನ್ನು ಪ್ರಾಯೋಗಿಕವಾಗಿ ಬಳಕೆಗೆ ಬಿಟ್ಟಿದೆ. ಇದು ಈಗ ಯಾವ ರೀತಿ ಇದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

Sunroof

Automobile7, Jul 2020, 9:33 PM

ಭಾರತದಲ್ಲಿ ಲಭ್ಯವಿರುವ ಕಡಿಮೆ ಬೆಲೆಯ 5 ಪನರೊಮಿಕ್ ಸನ್‌ರೂಫ್ ಕಾರು!

ಹಲವು ವರ್ಷಗಳ ಹಿಂದೆ ಭಾರತದಲ್ಲಿ ಸನ್‌ರೂಫ್ ಸೌಲಭ್ಯ ಕೇವಲ ಐಷಾರಾಮಿ ಕಾರುಗಳಲ್ಲಿ ಮಾತ್ರ ಲಭ್ಯವಿತ್ತು. ಇದೀಗ ಬಿಡುಗಡಯಾಗುವ ಬಹುತೇಕ ಎಲ್ಲಾ ಕಾರುಗಳಲ್ಲಿ ಸನ್‌ರೂಫ್ ಆಯ್ಕೆ ನೀಡಲಾಗುತ್ತಿದೆ. ಅದರಲ್ಲಿ SUV ಕಾರುಗಳಲ್ಲಿ ಸನ್‌ರೂಪ್‌ ಫೀಚರ್ಸ್‌ಗೆ ವಿಶೇಷ ಆದ್ಯತೆ ಇದೆ. ಹೀಗೆ ಭಾರತದಲ್ಲಿ ಕೈಗೆಟುಕುವ ದರದಲ್ಲಿ ಲಭ್ಯವಿರುವ 5 ಸನ್‌ರೂಫ್ ಕಾರುಗಳ ವಿವರ ಇಲ್ಲಿದೆ.

• Whats New30, Jun 2020, 5:19 PM

ಆ್ಯಂಡ್ರಾಯ್ಡ್ ಫೋನ್‌ನಲ್ಲಿ 10 ಫನ್ನಿ ಕೀಬೋರ್ಡ್ ಆ್ಯಪ್‌ಗಳು

ಮೊಬೈಲ್ ಇದ್ದರೆ ಸಾಕು ಪ್ರಪಂಚವೇ ನಮ್ಮ ಕೈಯಲ್ಲಿದ್ದ ಹಾಗೆ ನಾವು ಆಡುತ್ತಿರುತ್ತೇವೆ. ಅವರವರ ಇಷ್ಟಕ್ಕೆ ತಕ್ಕಂತೆ ಮೊಬೈಲ್ ಗಳನ್ನು ಬಳಸುತ್ತಿರುತ್ತಾರೆ. ಇಂದು ಮುಂಜಾನೆ ಎದ್ದಾಗಿಂದ ಹಿಡಿದು ರಾತ್ರಿ ಮಲಗುವವರೆಗೂ ಮೊಬೈಲ್ ಬೇಕೇ ಬೇಕು. ಅವರವರಿಗೆ ಬೇಕಾಗಿದ್ದನ್ನು ಅವರವರು ನೋಡುತ್ತಿರುತ್ತಾರೆ. ಇನ್ನು ಅನೇಕರು ಮೊಬೈಲ್ ಅನ್ನು ಬಳಸುತ್ತಾರೆಯೇ ವಿನಃ ಅದರಲ್ಲಿರುವ ಹೆಚ್ಚುವರಿ ಫೀಚರ್ ಗಳ ತಂಟೆಗೆ ಹೋಗಿರುವುದಿಲ್ಲ. ಮತ್ತೆ ಕೆಲವರು ಅಂಥದ್ದೊಂದು ಆಪ್ಷನ್ ಬಗ್ಗೆ ತಿಳಿದುಕೊಳ್ಳಲೂ ಹೋಗುವುದಿಲ್ಲ. ಆದರೆ, ಕೇವಲ ನಾವು-ನೀವು ಬಳಸುವ ಕೀಬೋರ್ಡ್‌ಗಳಲ್ಲೇ ಅದೆಷ್ಟು ವಿಧಗಳಿವೆ ಗೊತ್ತೇ? ಅವುಗಳನ್ನು ಬಳಸುತ್ತಾ ಹೋದಂತೆ ಒಂಥರಾ ಮಜವಾದ ಅನುಭವವನ್ನು ಕೊಡುತ್ತದೆ. ಅಂತಹ 10 ಕೀಬೋರ್ಡ್ ಆ್ಯಪ್ ಗಳ ಬಗ್ಗೆ ಇಲ್ಲಿದೆ ಮಾಹಿತಿ.

Honda Livo

Automobile30, Jun 2020, 2:31 PM

ಆಕರ್ಷಕ ವಿನ್ಯಾಸ, ಹೊಸತನಗಳೊಂದಿಗೆ ಹೊಂಡಾ ಲಿವೊ BS6 ಬೈಕ್ ಬಿಡುಗಡೆ

ಕೊರೋನಾ ವೈರಸ್ ಕಾರಣ ವಿಳಂಬವಾಗಿದ್ದ ಹೊಂಡಾ ಲಿವೋ ಬೈಕ್ ಇದೀಗ ಬಿಡುಗಡೆಯಾಗಿದೆ. BS6 ಎಂಜಿನ್ ಸೇರಿದಂತೆ ಹಲವು ಫೀಚರ್ಸ್‌ನೊಂದಿಗೆ ನೂತನ ಲಿವೊ ಮಾರುಕಟ್ಟೆ ಪ್ರವೇಶಿಸಿದೆ. 2020ರ ಹೊಂಡಾ ಲಿವೊ ಬೈಕ್ ಬೆಲೆ ಹಾಗೂ ಇತರ ಮಾಹಿತಿ ಇಲ್ಲಿದೆ

• Whats New29, Jun 2020, 5:26 PM

ಸಣ್ಣ ಉದ್ದಿಮೆಗಳಿಗೆ ಡಿಜಿಟಲ್ ಟಚ್ ಕೊಡಲಿದೆ ಗೂಗಲ್!

ಸಣ್ಣ ಉದ್ದಿಮೆದಾರರಿಗೆ ಫೇಸ್ಬುಕ್ ವೇದಿಕೆಯಾಗಿದ್ದಾಯ್ತು. ಈಗ ಗೂಗಲ್ ಸರದಿ. ಗೂಗಲ್ ಈಗ ಡಿಜಿಟಲ್ ಪ್ಲಾಟ್ ಫಾರ್ಮ್ ಅನ್ನು ಸಿದ್ಧಪಡಿಸುತ್ತಿದ್ದು, ಸಣ್ಣ ಉದ್ದಿಮೆದಾರರನ್ನು ಒಂದೇ ವೇದಿಕೆಯಡಿ ತಂದಿದೆ. ಇದು ಉದ್ದಿಮೆಗಳಿಗೆ ಸಹಾಯಕವಾಗುತ್ತಿದ್ದು, ಗ್ರಾಹಕರಿಗೂ ಅನುಕೂಲವಾಗಿದೆ. ಹೀಗಾಗಿ ಕೋವಿಡ್-19 ಯುಗದಲ್ಲಿ ಡಿಜಿಟಲ್ ಕ್ರಾಂತಿ ಮಾಡಲು ಗೂಗಲ್ ಸಹ ಮುಂದಾಗಿದ್ದು, ಎಷ್ಟರಮಟ್ಟಿಗೆ ಸಕ್ಸಸ್ ಕಾಣಲಿದೆ ಎಂಬುದನ್ನು ನೋಡಬೇಕಿದೆ.

• Whats New26, Jun 2020, 11:46 AM

ಆ್ಯಂಡ್ರಾಯ್ಡ್, ಐಫೋನ್‌ನಲ್ಲಿ ಅನಿಮೇಟೆಡ್ ಸ್ಟಿಕ್ಕರ್ ಪೀಚರ್ ಕೊಡ್ತಿರೋ ವಾಟ್ಸಪ್

ತಂತ್ರಜ್ಞಾನಗಳ ಆವಿಷ್ಕಾರ ಆಗುತ್ತಲೇ ಇರುವಂತೆ ಅದರ ಬಳಕೆಯೂ ಹೆಚ್ಚುತ್ತಾ ಹೋಗುತ್ತಿದೆ. ವಾಟ್ಸಪ್ ಸಹ ಈಗ ಜಗತ್ತಿನಾದ್ಯಂತ ಹೆಚ್ಚಿನ ಜನ ಬಳಸುತ್ತಿರುವ ಆ್ಯಪ್‌ಗಳಲ್ಲೊಂದು. ಇಲ್ಲೂ ಸಹ ಅನೇಕ ಹೊಸ ಹೊಸ ಫೀಚರ್‌ಗಳನ್ನು ತನ್ನ ಬಳಕೆದಾರರಿಗೆ ಪರಿಚಯಿಸಲಾಗುತ್ತಿದೆ. ಈಗ ವಾಟ್ಸಪ್ ಸಂಸ್ಥೆ ಮತ್ತೊಂದು ಹೊಸ ಫೀಚರ್‌ಗೆ ಕೈ ಹಾಕಿದ್ದು, ಅನಿಮೇಟೆಡ್ ಸ್ಟಿಕ್ಕರ್ ಅನ್ನು ಬಳಕೆಗೆ ನೀಡಲು ಸಿದ್ಧವಾಗಿದೆ. ಸದ್ಯ ಇದಿನ್ನೂ ಪ್ರಾಯೋಗಿಕ ಹಂತದಲ್ಲಿದೆ. ಒಂದು ಚಿತ್ರ ನೂರು ಪದಕ್ಕೆ ಸಮ ಎಂದು ಹೇಳಲಾಗುತ್ತದೆ. ಅಂದರೆ, ನಾವು ಮಾತಿನಲ್ಲಿ ಹೇಳಬಹುದಾಗಿದ್ದನ್ನು ಒಂದು ಸರಿಯಾದ ಚಿತ್ರ ಹೇಳಿಬಿಡುತ್ತದೆ. ಇದೇ ನಿಟ್ಟಿನಲ್ಲಿ ಈಗ ಚಲಿಸುವ ಚಿತ್ರದ ಮಾದರಿಯಲ್ಲಿ ಅನಿಮೇಟೆಡ್ ಸ್ಟಿಕ್ಕರ್ ನೀಡಲು ಮುಂದಾಗಲಾಗಿದೆ.