ಪ.ಬಂಗಾಳ  

(Search results - 51)
 • Gangadhar Dhuloi
  Video Icon

  NEWS18, Sep 2019, 8:51 PM IST

  ಕೊನೆಯ ಭಯೋತ್ಪಾದಕನೂ ಸತ್ತಾಗಲೇ ‘ಉರಿ’ ಕಡಿಮೆಯಾದೀತು: ಹುತಾತ್ಮ ಗಂಗಾಧರ್ ಕುಟುಂಬ!

  ಇಂದು ಉರಿ ಸೇನಾ ನೆಲೆ ಮೇಲೆ ಭಯೋತ್ಪಾದಕ ದಾಳಿ ನಡೆದು ಬರೋಬ್ಬರಿ ಒಂದು ವರ್ಷ ಭರ್ತಿಯಾಗಿದೆ. ಉಗ್ರರ ಹೀನ ಕೃತ್ಯದಲ್ಲಿ ಹುತಾತ್ಮರಾದ ಭಾರತೀಯ ಸೇನೆಯ ವೀರ ಯೋಧರನ್ನು ಇಡೀ ದೇಶ ಸ್ಮರಿಸುತ್ತಿದೆ. ಅದರಂತೆ ಉರಿ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ಪ.ಬಂಗಾಳದ ಹೌರಾದ ವೀರ ಸೈನಿಕ ಗಂಗಾಧರ್ ಧುಲೋಯಿ ಅವರ ಕುಟುಂಬ ವರ್ಗವನ್ನು ಏಶೀಯಾನೆಟ್ ಸುದ್ದಿಸಂಸ್ಥೆ ಭೇಟಿ ಮಾಡಿ ಮಾತುಕತೆ ನಡೆಸಿದೆ.

 • NEWS18, Sep 2019, 8:11 PM IST

  ಕುರ್ತಾದೊಂದಿಗೆ ಬಂಗಾಳದಿಂದ ಬಂದ ದೀದಿ: ನಗುತ್ತಾ ಭೇಟಿಯಾದ ಪ್ರಧಾನಿ ಮೋದಿ!

  ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಇಂದು ಪ್ರಧಾನಿ ನರೇಂದ್ರ ಮೋದಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ನವದೆಹಲಿಯಲ್ಲಿ ಇಂದು ಪ್ರಧಾನಿ ಮೋದಿ ಅವರನ್ನು ಭೇಟಿಯಾದ ಮಮತಾ ಬ್ಯಾನರ್ಜಿ, ಎಂದಿನಂತೆ ಮೋದಿ ಅವರಿಗೆ ಕುರ್ತಾವನ್ನು ಉಡುಗೊರೆಯಾಗಿ ನೀಡಿದರು.

 • यूपी के देवरिया की एक बच्‍ची और उसकी मां का एक विडियो वायरल हुआ है। विडियो में ट्रैफिक नियमों का पालन करते हुए दोनों ने हेल्मेट लगा रखा है और इसके लिए एक पुलिस अधिकारी उनकी तारीफ करता दिख रहा है।

  AUTOMOBILE11, Sep 2019, 8:38 PM IST

  ರಾಜ್ಯದಲ್ಲಿ ಹೊಸ ಸಂಚಾರಿ ನಿಯಮ ಜಾರಿ ಮಾಡಲ್ಲ: ಸಿಎಂ ಘರ್ಜನೆ!

  ಕೇಂದ್ರ ಸರ್ಕಾರದ ನೂತನ ಮೋಟಾರು​ ವಾಹನ ಕಾಯ್ದೆಯನ್ನು ರಾಜ್ಯದಲ್ಲಿ ಜಾರಿಗೊಳಿಸುವುದಿಲ್ಲ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಘೋಷಿಸಿದ್ದಾರೆ. ಹೊಸ ಸಂಚಾರಿ ದಂಡ ತುಂಬಾ ಕಠಿಣ ಹಾಗೂ ಅಸಮರ್ಪಕವಾಗಿದೆ ಎಂದು ಮಮತಾ ದೂರಿದ್ದಾರೆ.

 • kolkata Police

  AUTOMOBILE29, Aug 2019, 7:34 PM IST

  ದೇಶದೆಲ್ಲಡೆ ಹೊಸ ಟ್ರಾಫಿಕ್ ನಿಯಮ; ಪ.ಬಂಗಾಳಕ್ಕೆ ಅನ್ವಯವಾಗಲ್ಲ!

  ಸೆಪ್ಟೆಂಬರ್ 1 ರಿಂದ ಟ್ರಾಫಿಕ್ ನಿಯಮ ಉಲ್ಲಂಘಿಸಿದರೆ 10 ಪಟ್ಟು ಹೆಚ್ಚು ದಂಡ ಪಾವತಿಸಬೇಕು. ಹೊಸ ಟ್ರಾಫಿಕ್ ನಿಯಮ ಕಟ್ಟು ನಿಟ್ಟಾಗಿ ಜಾರಿಗೊಳಿಸಲು ರಾಜ್ಯದ ಎಲ್ಲಾ ಪೊಲೀಸ್ ಇಲಾಖೆ ಸಜ್ಜಾಗಿದೆ. ಆದರೆ ಪಶ್ಚಿಮ ಬಂಗಾಳ ಸರ್ಕಾರ ಮಾತ್ರ ಈ ನಿಯಮ ಜಾರಿಗೊಳಿಸುತ್ತಿಲ್ಲ. ಇದಕ್ಕೆ ಕಾರಣವೇನು? ಇಲ್ಲಿದೆ ವಿವರ.

 • Gold

  NEWS25, Jul 2019, 5:59 PM IST

  ಮಹಿಳೆ ಹೊಟ್ಟೆಯಿಂದ 1.5 ಕೆಜಿ ಚಿನ್ನ ಹೊರತೆಗೆದ ವೈದ್ಯರು!

  ಮಾನಸಿಕ ಅಸ್ವಸ್ಥ ಮಹಿಳೆಯ ಹೊಟ್ಟೆಯಿಂದ ವೈದ್ಯರು ಬರೋಬ್ಬರಿ 1.5 ಕೆಜಿ ಚಿನ್ನವನ್ನು ಹೊರತೆಗದ ಘಟನೆ ಪ.ಬಂಗಾಳದ ಬಿರ್’ಬುಮ್ ಜಿಲ್ಲೆಯಲ್ಲಿ ನಡೆದಿದೆ.

 • NEWS21, Jul 2019, 3:08 PM IST

  ‘2019ರ ತೀರ್ಪು HISTORY ಅಲ್ಲಾ ಅದೊಂದು MYSTERY’!

  2019ರ ಲೋಕಸಭೇ ಚುನಾವಣೆಯ ಫಲಿತಾಂಶದ ಮೇಲೆ ಅನುಮಾನ ವ್ಯಕ್ತಪಡಿಸಿರುವ ಪ.ಬಂಗಾಳ ಸಿಎಂ , ಟಿಎಂಸಿ ಮುಖ್ಯಸ್ಥೆ ಮಮತ ಬ್ಯಾನರ್ಜಿ, ಫಲಿತಾಂಶವನ್ನು ಐತಿಹಾಸಿಕವಲ್ಲ ಬದಲಿಗೆ ರಹಸ್ಯಮಯ ಎಂದು ಬಣ್ಣಿಸಿದ್ದಾರೆ. ಕೋಲ್ಕತ್ತಾದಲ್ಲಿ ಟಿಎಂಸಿ ಹಮ್ಮಿಕೊಂಡಿರುವ ಮೆಗಾ ರ‍್ಯಾಲಿ ಉದ್ದೇಶಿಸಿ ಮಮತಾ ಮಾತನಾಡಿದರು.

 • election commission

  NEWS19, Jul 2019, 6:33 PM IST

  ಟಿಎಂಸಿ, ಸಿಪಿಐ, ಎನ್’ಸಿಪಿ ರಾಷ್ಟ್ರೀಯ ಪಕ್ಷದ ಮಾನ್ಯತೆ ರದ್ದು ಸಂಭವ!

  ಲೋಕಸಭೆ ಚುನಾವಣೆಯಲ್ಲಿ ಕಳಪೆ ಪ್ರದರ್ಶನ ತೋರಿದ ಹಿನ್ನೆಲೆಯಲ್ಲಿ, ಪ.ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್(ಟಿಎಂಸಿ), ಶರದ್ ಪವಾರ್ ನೇತೃತ್ವದ ನ್ಯಾಶಲಿಸ್ಟ್ ಕಾಂಗ್ರೆಸ್ ಪಕ್ಷ(ಎನ್’ಸಿಪಿ) ಹಾಗೂ ಭಾರತೀಯ ಕಮ್ಯೂನಿಸ್ಟ್ ಪಕ್ಷ(ಸಿಪಿಐ)ಗಳು ರಾಷ್ಟ್ರೀಯ ಪಕ್ಷದ ಮಾನ್ಯತೆ ಕಳೆದುಕೊಳ್ಳುವ ಭೀತಿಯಲ್ಲಿವೆ.

 • Chandrakanta

  TECHNOLOGY16, Jul 2019, 9:42 PM IST

  ರೈತನ ಮಗ ಚಂದ್ರಕಾಂತ್: ಚಂದ್ರಯಾನ-2 ಪ್ರಮುಖ ವಿಜ್ಞಾನಿ!

  ಚಂದ್ರಯಾನ -2 ಮಿಷನ್‌ನ ಭಾಗವಾಗಿರುವ ಪ.ಬಂಗಾಳ ಮೂಲದ ವಿಜ್ಞಾನಿ ಚಂದ್ರಕಾಂತ್, ಯೋಜನೆಯಲ್ಲಿ ಪ್ರಮುಖ ಪಾತ್ರವಹಿಸುವ ಮೂಲಕ ಗಮನ ಸೆಳೆದಿದ್ದಾರೆ. ಬಂಗಾಳದ ಕೃಷಿಕರ ಮಗ ಚಂದ್ರಕಾಂತ ಭಾರತದ ಅತ್ಯಂತ ಮಹತ್ವಾಕಾಂಕ್ಷೆಯ ಬಾಹ್ಯಾಕಾಶ ಯೋಜನೆಯಾದ ಚಂದ್ರಯಾನ -2 ರ ಪ್ರಮುಖ ಭಾಗವಾಗಿದ್ದಾರೆ.

 • bjp

  NEWS13, Jul 2019, 9:52 PM IST

  ಒಟ್ಟು 107 ಶಾಸಕರು ಬಿಜೆಪಿಗೆ: ಕತೆಯೇ ಮುಗಿಯಿತಾ ಇಲ್ಲಿಗೆ?

  ಟಿಎಂಸಿ, ಕಾಂಗ್ರೆಸ್, ಸಿಪಿಎಂ ಪಕ್ಷಗಳ ಸುಮಾರು 107 ಶಾಸಕರು ಬಿಜೆಪಿ ಸೇರಲಿದ್ದಾರೆ ಎಂಬ ಮುಕುಲ್ ರಾಯ್ ಹೇಳಿಕೆ ಇಡೀ ಪ.ಬಂಗಾಳವನ್ನು ತಲ್ಲಣಗೊಳಿಸಿದೆ. ಮೂರು ಪಕ್ಷಗಳ ಒಟ್ಟು 107 ಶಾಸಕರು ಪಕ್ಷಕ್ಕೆ ಶೀರ್ಘದಲ್ಲೇ ಸೇರಲಿದ್ದಾರೆ ಎಂದು ಮುಕುಲ್ ರಾಯ್ ಘೋಷಿಸಿದ್ದಾರೆ.

 • Mamata-Kishor

  NEWS11, Jul 2019, 4:11 PM IST

  ಬಿಜೆಪಿ ಬಡಿಯಲು ಪ್ರಶಾಂತ್ ಕಿಶೋರ್ YIP: ಪ್ಲ್ಯಾನ್ ಕೇಳಿ ದೀದಿ ಫುಲ್ ಹ್ಯಾಪಿ!

  ಪ.ಬಂಗಾಳದಲ್ಲಿ ಅತ್ಯಂತ ವೇಗವಾಗಿ ಬಿಜೆಪಿ ತನ್ನ ಬೇರುಗಳನ್ನು ಗಟ್ಟಿಗೊಳಿಸುತ್ತಿದೆ. ಈ ಕಾರಣಕ್ಕೆ ಪ.ಬಂಗಾಳಧ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಇದೀಗ ರಾಜಕೀಯ ಚತುರ ಪ್ರಶಾಂತ್ ಕಿಶೋರ್ ಮೊರೆ ಹೋಗಿದ್ದಾರೆ. ರಾಜ್ಯದಲ್ಲಿ ಟಿಎಂಸಿ ಮತ್ತೆ ಟಿಎಂಸಿ ಪ್ರಭಾವ ಮರುಕಳಿಸುವಂತೆ ಕೋರಿ ಕಿಶೋರ್ ಅವರ ಸಲಹೆ ಬಯಿಸಿದ್ದಾರೆ.

 • congress

  NEWS9, Jul 2019, 5:05 PM IST

  ಕಾಂಗ್ರೆಸ್ ಅಧ್ಯಕ್ಷರ ದಿಢೀರ್ ರಾಜೀನಾಮೆ: ಕೈ ಪಾಳಯ ಅಯೋಮಯ!

  ಲೋಕಸಭಾ ಚುನಾವಣೆಯಲ್ಲಿ ಪ.ಬಂಗಾಳದಲ್ಲಿ ಪಕ್ಷ ಹೀನಾಯ ಸೋಲು ಕಂಡ ಪರಿಣಾಮ, ಕಾಂಗ್ರೆಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸೋಮೆನ್ ಮಿತ್ರಾ ರಾಜೀನಾಮೆ ಸಲ್ಲಿಸಿದ್ದಾರೆ. ಚುನಾವಣೆಯಲ್ಲಿ ಕಳಪೆ ಸಾಧನೆಯ ಜವಾಬ್ದಾರಿ ಹೊತ್ತು ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ಸೋಮೆನ್ ಮಿತ್ರಾ ಸ್ಪಷ್ಟಪಡಿಸಿದ್ದಾರೆ. 

 • Amartya Sen

  NEWS6, Jul 2019, 2:48 PM IST

  ಶ್ರೀರಾಮನ ಹೆಸರು ಜನರನ್ನು ಬಡಿಯಲು ಬಳಕೆ: ಸೇನ್!

  ದೇಶದಲ್ಲಿ ಜೈ ಶ್ರೀರಾಮ್ ಘೋಷಣೆಯನ್ನು ಜನರನ್ನು ಥಳಿಸಲು ಬಳಸುತ್ತಿರುವುದು ದುರದೃಷ್ಟಕರ ಎಂದು  ನೊಬೆಲ್ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಖೇದ ವ್ಯಕ್ತಪಡಿಸಿದ್ದಾರೆ.

 • Nusrat Jahan

  NEWS4, Jul 2019, 4:24 PM IST

  ಮೌಲ್ವಿಗಳು ಬೊಬ್ಬಿಟ್ಟರು: ರಥಯಾತ್ರೆಯಲ್ಲಿ ನುಸ್ರತ್ ಕುಂಕುಮ ಇಟ್ಟರು!

  ಪ.ಬಂಗಾಳದ ರಾಜಧಾಣಿ ಕೋಲ್ಕತ್ತಾದಲ್ಲಿ ಇಸ್ಕಾನ್ ಏರ್ಪಡಿಸಿದ್ದ ರಥಯಾತ್ರೆಯಲ್ಲಿ, ಟಿಎಂಸಿ ಸಂಸದೆ ನುಸ್ರತ್ ಜಹಾನ್ ಹಣೆಗೆ ಕುಂಕುಮ ಇಟ್ಟು, ಬಳೆ ಮತ್ತು ಸಿಂಧೂರ ತೊಟ್ಟು ಭಾಗವಹಿಸಿ ಗಮನ ಸೆಳೆದಿದ್ದಾರೆ.

 • Mamta Banerjee government announced 10 percent reservation for the upper caste

  NEWS3, Jul 2019, 5:44 PM IST

  ಬಂಗಾಳವನ್ನು ಬಾಂಗ್ಲಾ ಅನ್ನಲ್ಲ: ದೀದಿ ಮನವಿಗೆ ಕೇಂದ್ರ ಬಗ್ಗಲಿಲ್ಲ!

  ಪಶ್ಚಿಮ ಬಂಗಾಳದ ಹೆಸರನ್ನು ಬಾಂಗ್ಲಾ ಎಂದು ಬದಲಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಈ ಮೂಲಕ ರಾಜ್ಯದ ಹೆಸರು ಬದಲಾಯಿಸಲು ಕೋರಿ ಟಿಎಂಸಿ ಸರ್ಕಾರ ಮಾಡಿದ್ದ ಮನವಿಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ.

 • আক্রন্ত বাবুল সুপ্রিয়I ছবি- ফেসবুক

  NEWS17, Jun 2019, 6:42 PM IST

  ಬಂಗಾಳ ಸಂಸದರ ಪ್ರಮಾಣವಚನ: ಸದನದಲ್ಲಿ ಮೊಳಗಿದ ಜೈ ಶ್ರೀರಾಮ ಘೋಷಣೆ!

  ಪ.ಬಂಗಾಳದಿಂದ ಆಯ್ಕೆಯಾಗಿರುವ ಬಿಜೆಪಿ ಸದಸ್ಯರು ಪ್ರಮಾಣವಚನ ಸ್ವೀಕರಿಸುವಾಗ, ಸದನದಲ್ಲಿ ಜೈ ಶ್ರೀರಾಮ ಘೋಷಣೆ ಮೊಳಗಿದೆ. ಪ್ರಮುಖವಾಗಿ ಪ.ಬಂಗಾಳದ ಬಿಜೆಪಿ ಸಂಸದರಾದ ಬಾಬುಲ್ ಸುಪ್ರಿಯೋ ಮತ್ತು ದೇಬಶ್ರೀ ಚೌಧರಿ ಪ್ರಮಾಣವಚನ ಸ್ವೀಕರಿಸುವಾಗ ಇತರ ಬಿಜೆಪಿ ಸದಸ್ಯರು ಜೈ ಶ್ರೀರಾಮ ಘೋಷಣೆ ಕೂಗಿದರು.