Gadag11, Feb 2019, 3:43 PM IST
’ಹಿಂದುತ್ವವಾದಿ ಬಿಜೆಪಿಯಿಂದಲೇ ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಹಿನ್ನಡೆ’
ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟಕ್ಕೆ ಸಹಕರಿಸದ ಬಿಜೆಪಿ ವಿರುದ್ಧ ತೋಂಟದಾರ್ಯ ಮಠದ ಡಾ.ಸಿದ್ಧರಾಮ ಶ್ರೀಗಳು ಆಕ್ರೋಶ ವ್ಯಕ್ತಪಡಿಸಿದರು. 'ಬಿಜೆಪಿ ಹಿಂದುತ್ವ ರಕ್ಷಕ ಪಕ್ಷ. ಹಿಂದುತ್ವವಾದಿ ಬಿಜೆಪಿಯಿಂದಲೇ ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಹಿನ್ನಡೆಯಾಯಿತು ಎಂದು ಡಾ. ಸಿದ್ಧರಾಮ ಶ್ರೀಗಳು ಆಕ್ರೋಶ ವ್ಯಕ್ತಪಡಿಸಿದರು.
Dharwad5, Feb 2019, 6:11 PM IST
ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟ: ವರಸೆ ಬದಲಿಸಿದ MB ಪಾಟೀಲ್
ರಾಜ್ಯದಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟದಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿದ್ದ ಗೃಹ ಸಚಿವ ಎಂ.ಬಿ. ಪಾಟೀಲ್ ಇದೀಗ ತಮ್ಮ ವರಸೆ ಬದಲಿಸಿದ್ದಾರೆ.
state10, Dec 2018, 6:24 PM IST
ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಕೇಂದ್ರ ಸರ್ಕಾರ ಎಳ್ಳು ನೀರು..!
ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟದಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮದ ಮಾನ್ಯತೆ ನೀಡಲು ಕೇಂದ್ರಕ್ಕೆ ಮಾಡಿದ್ದ ಶಿಫಾರಸ್ಸುನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ.
state12, Nov 2018, 7:12 AM IST
ಡಿಕೆಶಿ ಬಳಿಕ ಸಿದ್ದರಾಮಯ್ಯರಿಂದ ಲಿಂಗಾಯತ ಅಸಮಾಧಾನ
ಸಚಿವ ಡಿ.ಕೆ. ಶಿವಕುಮಾರ್ ಬಳಿಕ ಇದೀಗ ಸ್ವತಃ ಮಾಜಿ ಸಿಎಂ ಸಿದ್ದರಾಮಯ್ಯ ಅವರೇ ಲಿಂಗಾಯತ ಧರ್ಮದ ಬಗ್ಗೆ ಇದೀಗ ವಿಷಾದ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮಕ್ಕಾಗಿ ನಡೆದ ಹೋರಾಟ ಸಂದರ್ಭದಲ್ಲಿ ನಾನು ಮುಖ್ಯಮಂತ್ರಿಯಾಗಿ ಸರ್ಕಾರದ ಪರವಾಗಿ ತೆಗೆದುಕೊಂಡ ನಿರ್ಧಾರ ನನಗೆ ತೊಂದರೆ ಮಾಡಿತು ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.
NEWS18, Oct 2018, 8:18 PM IST
ಕಾಂಗ್ರೆಸ್ನೊಳಗೆ ‘ಧರ್ಮಯುದ್ಧ’ ಶುರು! ಡಿಕೆಶಿಗೆ ಸ್ವಪಕ್ಷೀಯರಿಂದಲೇ ತಿರುಗೇಟು
ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರವಾಗಿ ಸಚಿವ ಡಿ,ಕೆ.ಶಿವಕುಮಾರ್ ನೀಡಿರುವ ಹೇಳಿಕೆ ಇದೀಗ ಕಾಂಗ್ರೆಸ್ನಲ್ಲಿ ‘ಧರ್ಮಯುದ್ಧ’ಕ್ಕೆ ನಾಂದಿ ಹಾಡಿದೆ. ಡಿಕೆಶಿ ಹೇಳಿಕೆಗೆ ಸ್ವಪಕ್ಷೀಯ ನಾಯಕರೇ ಗರಂ ಆಗಿದ್ದಾರೆ. ಪ್ರತ್ಯೇಕ ಧರ್ಮ ಹೋರಾಟದ ರೂವಾರಿ ಎಂ.ಬಿ. ಪಾಟೀಲ್, ಡಿಕೆಶಿಗೆ ತಿರುಗೇಟು ನೀಡಿದ್ದಾರೆ. ಅವರೇನು ಹೇಳಿದ್ದಾರೆ ನೋಡೋಣ...
NEWS18, Oct 2018, 7:59 PM IST
ಸಿದ್ದರಾಮಯ್ಯ ಮಾಡಿರೋದು ಗ್ರೇಟ್ ಕೆಲ್ಸ; ಹೇಳೋರು ಹೇಳ್ತಾರೆ ಬಿಡ್ರಿ...
ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರವಾಗಿ ಸಚಿವ ಡಿ.ಕೆ.ಶಿವಕುಮಾರ್ ನೀಡಿರುವ ಹೇಳಿಕೆಗೆ, ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟದ ಮುಂದಾಳತ್ವ ವಹಿಸಿದ್ದ ವಿನಯ್ ಕುಲಕರ್ಣಿ ಪ್ರತಿಕ್ರಿಯಿಸಿದ್ದಾರೆ. ಮಾಜಿ ಸಚಿವರೂ, ಕಾಂಗ್ರೆಸ್ ನಾಯಕರೂ ಆಗಿರುವ ವಿನಯ್ ಕುಲಕರ್ಣಿ ಏನು ಹೇಳಿದ್ದಾರೆ ನೋಡೋಣ...
NEWS2, Jul 2018, 12:07 PM IST
ಪ್ರತ್ಯೇಕ ಧರ್ಮ ವಿಚಾರ ತಣ್ಣಗಾಗುತ್ತಲೇ ರಾಜ್ಯದಲ್ಲಿ ಮತ್ತೊಂದು ಧರ್ಮ ವಿವಾದ
ವೀರಶೈವ ಮತ್ತು ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರ ತಣ್ಣಗಾದ ಬೆನ್ನಲ್ಲೇ ಇದೀಗ ಸ್ವಾಮಿಗಳ ಮಧ್ಯೆ ಮತ್ತೊಂದು ವಿವಾದ ಹುಟ್ಟಿಕೊಂಡಿದ್ದು, ಸ್ವಾಮೀಜಿಗಳ ಮದ್ಯೆ ಆರೋಪ - ಪ್ರತ್ಯಾರೋಪ ಶುರುವಾಗಿದೆ.
14, Jun 2018, 10:58 AM IST
ಈ ಇಬ್ಬರು ನಾಯಕರಿಗೆ ಕಾಂಗ್ರೆಸ್ ತೊರೆಯಲು ಸಲಹೆ
ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟದಲ್ಲಿ ಭಾಗಿಯಾಗಿದ ಕಾರಣಕ್ಕೆ ಸಚಿವ ಸ್ಥಾನಕ್ಕೆ ಪರಿಗಣಿಸದ ಹಿನ್ನೆಲೆಯಲ್ಲಿ ಎಂ.ಬಿ.ಪಾಟೀಲ್ ಅವರು ತಮ್ಮ ಸಮಾನ ಮನಸ್ಕರೊಡನೆ ಕಾಂಗ್ರೆಸ್ನಿಂದ ಹೊರ ಬರಬೇಕು ಎಂದು ಬಸವ ಪೀಠಾಧ್ಯಕ್ಷೆ ಮಾತೆ ಮಹಾದೇವಿ ಸಲಹೆ ನೀಡಿದ್ದಾರೆ.
13, Jun 2018, 2:48 PM IST
ಸ್ವತಂತ್ರ ಲಿಂಗಾಯತ ಧರ್ಮ: ಪ್ರಧಾನಿಯತ್ತ ಮಠಾಧೀಶರ ನಿಯೋಗ..!
ಪ್ರತ್ಯೇಕ ಲಿಂಗಾಯತ ಧರ್ಮಕ್ಕಾಗಿ ಆಗ್ರಹಿಸಿ ರಾಜ್ಯ ಸರ್ಕಾರ ಕಳುಹಿಸಿದ್ದ ಶಿಫಾರಸ್ಸನ್ನು ಕೇಂದ್ರ ಸರ್ಕಾರ ಮಾನ್ಯ ಮಾಡಿಲ್ಲ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲು 30ಕ್ಕೂ ಹೆಚ್ಚು ಮಠಾಧೀಶರ ನಿಯೋಗ ನವದೆಹಲಿಗೆ ತೆರಳಲಿದೆ.
10, Jun 2018, 8:24 PM IST
ಧರ್ಮ ಒಡೆದವರಿಗೆ ಜನ ಬುದ್ದಿ ಕಲಿಸಿದ್ದಾರೆ: ಯತ್ನಾಳ್
ಪ್ರತ್ಯೇಕ ಲಿಂಗಾಯತ ಧರ್ಮ ಶಿಫಾರಸ್ಸನ್ನು ಕೇಂದ್ರ ಸರ್ಕಾರ ತಿರಸ್ಕರಿಸಿರುವುದನ್ನು ಬಸವನಗೌಡ ಯತ್ನಾಲ್ ಸ್ವಾಗತಿಸಿದ್ದಾರೆ. ಹಿಂದೂ ಧರ್ಮವನ್ನು ಒಡೆಯುವ ಕಾಂಗ್ರೆಸ್ ಕುತಂತ್ರಕ್ಕೆ ಸೋಲಾಗಿದೆ ಎಂದು ಯತ್ನಾಳ್ ಈ ಸಂದರ್ಭದಲ್ಲಿ ಹೇಳಿದ್ದಾರೆ.
10, Jun 2018, 5:57 PM IST
ಒಗ್ಗಟ್ಟು ಪ್ರದರ್ಶನಕ್ಕೆ ಮುಂದಾದ ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟಗಾರರು..!
ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟಕ್ಕೆ ಸಂಬಂಧಿಸಿದಂತೆ, ಹಿಂದಿನ ರಾಜ್ಯ ಸರ್ಕಾರ ಕಳುಹಿಸಿದ್ದ ಶಿಫಾರಸ್ಸನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ. ಲಿಂಗಾಯತ ಪ್ರತ್ಯೇಕ ಧರ್ಮದ ಬೇಡಿಕೆ ಈಡೇರಿಸಲು ಸಾಧ್ಯವಿಲ್ಲ ಎಂದು ಹೇಳಿರುವ ಕೇಂದ್ರ, ರಾಜ್ಯ ಸರ್ಕಾರದ ಶಿಫಾರಸ್ಸನ್ನು ಮಾನ್ಯ ಮಾಡಿಲ್ಲ.
10, Jun 2018, 1:05 PM IST
ಜಾಮದಾರ್ ಇಟ್ಟ ಮೂರು ಷರತ್ತಿಗೆ ಒಪ್ಪಿಕೊಳ್ಳುತ್ತಾ ವೀರಶೈವ ಮಹಾಸಭಾ?
ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟಕ್ಕೆ ಸದ್ಯಕ್ಕೆ ಬ್ರೇಕ್ ಬೀಳುವ ಲಕ್ಷಣ ಗೋಚರವಾಗುತ್ತಿದೆ. ಲಿಂಗಾಯತ ಧರ್ಮಕ್ಕೆ ಅಲ್ಪಸಂಖ್ಯಾತ ಸ್ಥಾನಮಾನ ನೀಡುವಂತೆ ಕೋರಿ ಸಲ್ಲಿಸಿದ್ದ ಮನವಿಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ. ಈ ಹಿನ್ನೆಲೆಯಲ್ಲಿ ಕೆಲವು ಷರತ್ತುಗಳೊಂದಿಗೆ ಹೋರಾಟವನ್ನು ನಿಲ್ಲಿಸುವ ಸೂಚನೆಯನ್ನು ಹೋರಾಟಗಾರರು ನೀಡಿದ್ದಾರೆ.
8, May 2018, 2:25 PM IST
ವಿಜಯಪುರದಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರವೆತ್ತಿದ ಮೋದಿ
ಪ್ರಾದೇಶಿಕ ಸಮಸ್ಯೆಗಳನ್ನೇ ಎತ್ತಿಕೊಂಡು ಪ್ರಚಾರ ಕಾರ್ಯ ಕೈಗೆತ್ತಿಕೊಳ್ಳುತ್ತಿರುವ ಪ್ರಧಾನಿ ನರೇಂದ್ರ ಮೋದಿ ಮೇ 8ರಂದು ವಿಜಯಪುರದಲ್ಲಿ ಚುನಾವಣೆ ರಣ ಕಹಳೆ ಮೊಳಗಿಸಿದರು. ಬಸವಣ್ಣನ ಹುಟ್ಟೂರಿನಲ್ಲಿ, ಬಸವ ತತ್ವಗಳನ್ನೇ ಉಲ್ಲೇಖಿಸಿ, ಬಿಜೆಪಿ ಅದನ್ನು ಹೇಗೆ ಅನುಸರಿಸುತ್ತಿದೆ ಎಂದು ಹೇಳುವುದಲ್ಲದೇ, ಕಾಂಗ್ರೆಸ್ ಹೇಗೆ ವಿರೋಧಿಸುತ್ತದೆ ಎಂಬುದನ್ನೂ ವಿವರಿಸಿದರು.
24, Mar 2018, 12:34 PM IST
19, Mar 2018, 5:46 PM IST