ಪೌರತ್ವ ತಿದ್ದುಪಡಿ ಮಸೂದೆ  

(Search results - 56)
 • <p>Supreme Court&nbsp;</p>

  India7, Oct 2020, 4:46 PM

  ಸಿಎಎ ವಿರುದ್ಧ ಪ್ರತಿಭಟನೆ ಮಾಡ್ತಾ ಕೂತವರಿಗೆ ಜಾಗ ಖಾಲಿ ಮಾಡಿ ಎಂದ ಸುಪ್ರೀಂ!

  ಸಿಎಎ ವಿರುದ್ಧ ಪ್ರತಿಭಟನೆ ಹಮ್ಮಿಕೊಂಡು  ಒಂದೆ ಜಾಗದಲ್ಲಿ ಹಲವು ದಿನಗಳಿಂದ ಇದ್ದವರಿಗೆ ಮನೆಗೆ ಹೊರಡಿ ಎಂದು ಪರೋಕ್ಷವಾಗಿ ಸುಪ್ರೀಂ ಕೋರ್ಟ್ ಹೇಳಿದೆ. ಶಾಹೀನ್ ಬಾಗ್ ಪ್ರತಿಭಟನೆ ವಿಚಾರವಾಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿತ್ತು.

 • Mangaluru
  Video Icon

  Karnataka Districts4, Feb 2020, 7:09 PM

  ಮಂಗಳೂರು ಗೋಲಿಬಾರ್; ಎಸ್‌ಐಟಿ ಮಾಡಿ ಎಂದವರೆ ಅಪರಾಧ ಹಿನ್ನಲೆ ಉಳ್ಳವರು!

  ಮಂಗಳೂರು ಗೋಲಿಬಾರ್ ಸಂಬಂಧ ವಿಶೇಷ ತನಿಖಾ ತಂಡದಿಂದ ತನಿಖೆ ನಡೆಯಬೇಕು ಎಂದು ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕಾರ ಮಾಡಲಾಗಿದೆ. ಈಗಾಗಲೇ ಸಿಐಡಿ ತನಿಖೆ ನಡೆಯುತ್ತಿದ್ದು ಪ್ರತ್ಯೇಕ ತಂಡ ರಚಿಸಿ ತನಿಖೆ ಮಾಡುವ ಅಗತ್ಯ ಇಲ್ಲ ಎಂದು ನ್ಯಾಯಾಲಯ ಹೇಳಿದೆ.

 • amit shah

  Karnataka Districts22, Jan 2020, 11:45 AM

  'ಮೋದಿ, ಅಮಿತ್ ಶಾ ದೇಶಭಕ್ತಿಯ ಗುತ್ತಿಗೆ ಹಿಡಿದವರಂತೆ ವರ್ತಿಸುತ್ತಿದ್ದಾರೆ'

  ರಾಷ್ಟ್ರೀಯ ಪೌರತ್ವ ತಿದ್ದುಪಡಿ ಮಸೂದೆ ವಿಷಯದಲ್ಲಿ ಗೊಂದಲ ಹುಟ್ಟು ಹಾಕುತ್ತಿರುವುದು ಪ್ರತಿಪಕ್ಷಗಳಲ್ಲ, ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ. ಆದರೆ ಅದನ್ನು ಪ್ರತಿಪಕ್ಷಗಳ ಮೇಲೆ ಹಾಕುತ್ತಿದ್ದಾರೆಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ, ಮಾಜಿ ಕೇಂದ್ರ ಸಚಿವ ಡಾ. ಮಲ್ಲಿಕಾರ್ಜುನ ಖರ್ಗೆ ದೂರಿದ್ದಾರೆ. 
   

 • caa
  Video Icon

  CRIME14, Jan 2020, 4:14 PM

  ಬೆಂಗಳೂರಿನಲ್ಲಿಯೂ ಫ್ರೀ ಕಾಶ್ಮೀರ ಕೂಗು, ಚರ್ಚ್ ಸ್ಟ್ರೀಟ್‌ನಲ್ಲಿ ಏನಾಯ್ತು?

  ಬೆಂಗಳೂರು(ಜ.14)  ಮೈಸೂರಿನಲ್ಲಿ ಕೇಳಿ ಬುಂದು ಸುದ್ದಿಗೆ ಗ್ರಾಸವಾಗಿದ್ದ ಫ್ರೀ ಕಾಶ್ಮೀರ ಕೂಗು ಬೆಂಗಳೂರಿನಲ್ಲಿಯೂ ಕೇಳಿಬಂದಿದೆ. ಬೆಂಗಳೂರಿನ ಚರ್ಚ್ ಸ್ಟ್ರೀಟ್ ನಲ್ಲಿ ಕಿಡಿಗೇಡಿಗಳು ಕೃತ್ಯ ಎಸಗಿದ್ದಾರೆ.

  ಅಂಗಡಿ ಮುಂಗಟ್ಟುಗಳಿಗೆ ಎನ್ ಆರ್ ಸಿ ಬೇಡ, ಸಿಎಎ ಬೇಡ ಎಂದು ಬರೆಯಲಾಗಿದ್ದು ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.

 • Mangaluru
  Video Icon

  Karnataka Districts10, Jan 2020, 11:51 PM

  HDK ಬಿಡುಗಡೆ ಮಾಡಿದ ವಿಡಿಯೋದ ಅಸಲಿಯತ್ತು ಬಟಾ ಬಯಲು!

  ಬೆಂಗಳೂರು/ಮಂಗಳೂರು(ಜ. 10) ಮಂಗಳೂರಿನ ಗಲಭೆ ಕುರಿತಾಗಿ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ 35 ವಿಡಿಯೋ ಬಿಡುಗಡೆ ಮಾಡಿದ್ದಾರೆ.

  ಹಾಗಾದರೆ ಈ ವಿಡಿಯೋದ ಅಸಲಿಯತ್ತು ಏನು? ಸುವರ್ಣ ನ್ಯೂಸ್ ನಿಮ್ಮ ಮುಂದೆ ಸತ್ಯ ಬಿಚ್ಚಿಟ್ಟಿದೆ.

 • pallavi
  Video Icon

  Karnataka Districts9, Jan 2020, 11:55 PM

  CAA ವಿರುದ್ಧ ಪಲ್ಲವಿ ಗಾಯನ.. ನೋಡೋಣ..ನಾವು ನೋಡೇ ಬಿಡೋಣ

  ಬೆಂಗಳೂರಿನ ಪುರಭವನದ ಮುಂದೆ ಪೌರತ್ವ ಕಾಯ್ದೆ ವಿರೋಧಿ ಪ್ರತಿಭಟನೆಯಲ್ಲಿ ಗಾಯಕಿ ಎಂ.ಡಿ.ಪಲ್ಲವಿ ಹಾಡಿನ ಮುಖೇನ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.

  ಸಿಎಎ ಅನುಷ್ಠಾನ ಮಾಡಿದ ನಾಯಕರ ವಿರುದ್ಧ ಹಾಡಿನಲ್ಲಿಯೇ ಕಿಡಿ ಕಾರಿರುವ ಪಲ್ಲವಿ, ನಾವು ನೋಡೋಣ.. ನೋಡೇ ಬಿಡೋಣ ಎಂದು ಎಂದು ಹಾಡಿನ ಮೂಲಕವೇ ತಮ್ಮ ಪ್ರತಿಭಟನೆ ವ್ಯಕ್ತಪಡಿಸಿದರು.

 • dcm
  Video Icon

  Karnataka Districts9, Jan 2020, 8:54 PM

  ಜ್ಯೋತಿ ನಿವಾಸ ಕಾಲೇಜು ಗಲಾಟೆಗೆ ಕಾರಣ ಹೇಳಿದ ಡಿಸಿಎಂ ಅಶ್ವಥ್ ನಾರಾಯಣ

  ಬೆಂಗಳೂರು[ಜ. 09 ] ಸಿಎಎಗೆ ಒತ್ತಾಯಿಸಿದ್ದ ಪ್ರತಿಪಕ್ಷಗಳು ಈಗ ರಿವರ್ಸ್‌ ಗೇರ್‌ ಹಾಕಿವೆ ಎಂದು ಡಿಸಿಎಂ ಡಾ. ಸಿ ಎನ್‌ ಅಶ್ವತ್ಥನಾರಾಯಣ ಲೇವಡಿ ಮಾಡಿದ್ದಾರೆ.

  ಬೇರೆ ದೇಶಗಳಲ್ಲಿ ಕಿರುಕುಳ ಸಹಿಸಲಾಗದೇ ದೇಶಕ್ಕೆ ವಲಸೆ ಬಂದ ಭಾರತೀಯ ಮೂಲದವರಿಗೆ ಕಾನೂನಿನ ರಕ್ಷಣೆ ನೀಡಬೇಕು ಎಂಬುದು ಎಲ್ಲ ಪಕ್ಷಗಳ ಒತ್ತಾಯವಾಗಿತ್ತು. ಈ ನಿಟ್ಟಿನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ತರಲಾಯಿತು. ಆದರೆ, ಈಗ ಪ್ರತಿಪಕ್ಷಗಳೇ ರಿವರ್ಸ್‌ ಗೇರ್‌ ಹಾಕಿವೆ ಎಂದು ಉಪ ಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ ಹೇಳಿದ್ದಾರೆ.

 • somashekar reddy zameer ahmed
  Video Icon

  Politics6, Jan 2020, 5:17 PM

  ರೆಡ್ಡಿ ಖಡ್ಗ ತಂದರೆ ಜಮೀರ್ ಏನ್ ಮಾಡ್ತಾರೆ? ನೋಡ್ತಾ ಇರಿ

  ಒಂದು ವಾರದಲ್ಲಿ ಸೋಮಶೇಖರ್ ರೆಡ್ಡಿ ಅವರನ್ನು ಬಂಧಿಸದೇ ಇದ್ದರೆ ಧರಣಿ ಮಾಡುತ್ತೇನೆ ಎಂಬ ಎಚ್ಚರಿಕೆಯನ್ನು ಕಾಂಗ್ರೆಸ್ ನಾಯಕ ಜಮೀರ್ ಅಹಮದ್ ಖಾನ್ ಹೇಳಿದ್ದಾರೆ

  ನಾನು ಬಳ್ಳಾರಿಗೆ ಬರುತ್ತೇನೆ. ತಾಕತ್ತು ಇದ್ದರೆ ನನ್ನನ್ನು ಎದುರಿಸಲಿ ಎಂದು ಸವಾಲು ಹಾಕಿದ್ದಾರೆ. ಸೋಮಶೇಖರ್ ರೆಡ್ಡಿ ಎಲ್ಲಿಂದ ಬಂದವರು ಎಂದು ಪ್ರಶ್ನೆ ಮಾಡಿದ್ದಾರೆ.

 • undefined
  Video Icon

  Karnataka Districts28, Dec 2019, 11:34 PM

  'ಶೋಭಾ ಹೇಳಿದ್ರು ಅಂಥ ಕೊಟ್ಟಿದ್ದೆಲ್ಲ ವಾಪಸ್ ತಗೋತಿರಾ BSY'

   ಕೇಂದ್ರ ಸರ್ಕಾರ ಪೌರತ್ವ ಮಸೂದೆ ಕಾಯ್ದೆ ವಾಪಸ್ ಪಡೆಯಬೇಕು, ಏಸು, ಅಲ್ಲಾ ಎಲ್ಲವನ್ನು ನೋಡುತ್ತಿದ್ದಾರೆ ಎಂದು ಮಾಜಿ ಸಚಿವ ಎಚ್‌.ಡಿ.ರೇವಣ್ಣ ಹೇಳಿದ್ದಾರೆ.

  ಪರಿಹಾರ ಕೊಟ್ಟು ವಾಪಸ್ ಪಡೆಯುತ್ತೀರಾ, ಸರ್ಕಾರ ದಿವಾಳಿಯಾಗಿದೆ. ಶೋಭಾ ಕರಂದ್ಲಾಜೆ ಹೇಳಿದರು ಅಂಥ ಪರಿಹಾರ ವಾಪಸ ಪಡೆಯುತ್ತೀರಾ? ಎಂದು ರೇವಣ್ಣ ಪ್ರಶ್ನೆ ಮಾಡಿದ್ದಾರೆ.

 • undefined
  Video Icon

  Karnataka Districts26, Dec 2019, 10:21 PM

  ರಾಜ್ಯ ಸರ್ಕಾರಕ್ಕೆ ಖಾದರ್ ಖಡಕ್ ಪ್ರಶ್ನೆ, ಉತ್ತರ ಕೊಡುವವರು ಯಾರು?

  ಕುಟುಂಬಕ್ಕೆ ಪರಿಹಾರ ಕೊಟ್ಟು ವಾಪಸ್ ಪಡೆಯಬಾರದಿತ್ತು. ಸರ್ಕಾರ ಇಂಥ ಕೆಲಸ ಮಾಡಬಾರದಿತ್ತು. ಸಾವಿನ ಮನೆಯಲ್ಲಿ ರಾಜಕಾರಣ ಮಾಡಬಾರದಿತ್ತು ಎಂದು ಮಾಜಿ ಸಚಿವ ಯುಟಿ ಖಾದರ್ ಹೇಳಿದ್ದಾರೆ.

  ಪೌರತ್ವ ಮಸೂದೆ ವಿಚಾರ ಮಂಗಳೂರಿನಲ್ಲಿ ನಡೆದ ಪ್ರತಿಭಟನೆ ವೇಳೆ ಗೋಲಿಬಾರ್ ನಲ್ಲಿ ಇಬ್ಬರು ಮೃತಪಟ್ಟಿದ್ದರು. ಸರ್ಕಾರ ಆರಂಭದಲ್ಲಿ ಪರಿಹಾರ ಘೋಷಣೆ ಮಾಡಿ ನಂತರ ಸಿಸಿ ಟಿವಿ ದೃಶ್ಯಾವಳಿ ಬಿಡುಗಡೆಯಾದ ನಂತರ ಸರ್ಕಾರ ತನಿಖೆ ನಂತರವಷ್ಟೇ ಪರಿಹಾರ ಎಂದು ಹೇಳಿತ್ತು.

 • baby

  News26, Dec 2019, 5:08 PM

  ವಾರದಿಂದ ಪೋಷಕರ ಕಾಣದೆ ಪರಿತಪಿಸುತ್ತಿದ್ದಾಳೆ ಐರಾ

  ದೇಶಲ್ಲಿ ಪೌರತ್ವ ಮಸೂದೆ ವಿಚಾರದಲ್ಲಿ ಪ್ರತಿಭಟನೆಗಳು ನಡೆಯುತ್ತಿದ್ದರೆ ಈ ಮಗುವಿನ ಕತೆ ಮಾತ್ರ ಹೇಳತೀರದು. ತಂದೆ ತಾಯಿಯನ್ನು ಕಾಣದೆ ಮಗು ಒಂದು ವಾರ ಕಳೆದಿದೆ. 14 ತಿಂಗಳು ಮಗುವಿನ ತಂದೆತಾಯಿ ಪ್ರತಿಭಟನೆ ನಡೆಸಿದ ಕಾರಣಕ್ಕೆ ಜೈಲಿನಲ್ಲಿದ್ದಾರೆ. 

 • undefined

  Karnataka Districts26, Dec 2019, 10:25 AM

  'ಜಾರ್ಖಂಡ್‌ನಲ್ಲಿ ಬಿಜೆಪಿ ಸೋಲಿಗೆ ಪೌರತ್ವ ಕಾಯ್ದೆಯೇ ಕಾರಣ'

  ದೀಪ ಆರುವ ಮುನ್ನ ಜಾಸ್ತಿ ಉರಿಯುತ್ತದೆ ಎಂಬಂತೆ ಸದ್ಯದ ಬಿಜೆಪಿ ಸ್ಥಿತಿ ದೇಶದಲ್ಲಿ ಇದೆ ಎಂದು ವ್ಯಂಗ್ಯವಾಡಿರುವ ವಿಧಾನ ಪರಿಷತ್‌ನ ಪ್ರತಿಪಕ್ಷದ ನಾಯಕ ಎಸ್‌.ಆರ್‌.ಪಾಟೀಲ, ಪೌರತ್ವ ತಿದ್ದುಪಡಿ ಮಸೂದೆ ಜಾರಿ ಬಂದ ನಂತರವೇ ಜಾರ್ಖಂಡ್‌ ಚುನಾವಣೆಯಲ್ಲಿ ಸೋಲು ಅನುಭವಿಸಿರುವ ಬಿಜೆಪಿ ಇನ್ನಾದರೂ ಬುದ್ಧಿ ಕಲಿಯಲಿ ಎಂದು ಹೇಳಿದ್ದಾರೆ.
   

 • Bengaluru
  Video Icon

  CRIME25, Dec 2019, 5:34 PM

  ಬೆಂಗಳೂರಿನಲ್ಲೂ ದುಷ್ಕರ್ಮಿಗಳ ಕಿತಾಪತಿ, ಸಿಪಿಐ ಕಚೇರಿಗೆ ಬೆಂಕಿ

  ಬೆಂಗಳೂರು(ಡಿ. 25) ಅತ್ತ ಕೇರಳ ಪ್ರವಾಸದಲ್ಲಿದ್ದ ಸಿಎಂ ಬಿಎಸ್ ಯಡಿಯೂರಪ್ಪ ಕಚೇರಿಗೆ ಮುತ್ತಿಗೆ ಹಾಕಲು ಪ್ರಯತ್ನ ಮಾಡಿದ್ದು ಮಂಗಳವಾರದ ಸುದ್ದಿ.

  ಇತ್ತ ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಸಿಪಿಐ ಕಚೇರಿಗೆ ಕಿಡಿಗೇಡಿಗಳು ಪೆಟ್ರೋಲ್ ಸುರಿದು ಬೆಂಕಿ ಹಾಕಲು ಯತ್ನ ಮಾಡಿದ್ದಾರೆ.

 • Dinesh resigns
  Video Icon

  state24, Dec 2019, 6:11 PM

  ಬಟ್ಟೆ ಕಟ್ಕೊಂಡಿದ್ದಕ್ಕೆ ಕಾರಣ ಕೊಟ್ಟ ದಿನೇಶ್‌ಗೆ ಪಂಚ ಪ್ರಶ್ನೆ, ಉತ್ತರ ಕೊಡ್ತಾರಾ ಗುಂಡೂರಾವ್?

  ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದ ದಿನೇಶ್ ಗುಂಡೂರಾವ್ ಮಂಗಳೂರು ಘಟನೆ ನಂತರದಲ್ಲಿ ಅನೇಕ ಪ್ರತಿಕ್ರಿಯೆ ನೀಡಿದ್ದರು. ಟಿಯರ್ ಗ್ಯಾಸ್ ನಿಂದ ರಕ್ಷಣೆ ಪಡೆಯಲು ಪ್ರತಿಭಟನಾಕಾರರು ಮುಖಕ್ಕೆ ಬಟ್ಟೆ ಕಟ್ಟಿಕೊಂಡಿದ್ದರು ಎಂದು ದಿನೇಶ್ ಹೇಳಿದ್ದರು.

  ಇವತ್ತು ಬಿಡುಗಡೆಯಾದ ಸಿಸಿಟಿವಿ ದೃಶ್ಯಾವಳಿಗಳು ಅನೇಕ ವಿಚಾರಗಳನ್ನು ಬಹಿರಂಗ ಮಾಡಿದೆ. ದಿನೇಶ್ ಗುಂಡೂರಾವ್ ಅವರಿಗೆ ಪಂಚ ಪ್ರಶ್ನೆ ಇಲ್ಲಿದೆ.

 • Sulibele
  Video Icon

  state24, Dec 2019, 5:06 PM

  ಟೈಗರ್ ಅಶೋಕ್ ಕುಮಾರ್, ಚಕ್ರವರ್ತಿ ಸೂಲಿಬೆಲೆ ಹೇಳುವುದು ಒಂದೇ ಮಾತು

  ಮಂಗಳೂರು ಸಂಘರ್ಷದ ಬಗ್ಗೆ ನಿವೃತ್ತ ಪೊಲೀಸ್ ಅಧಿಕಾರಿ ಟೈಗರ್ ಆಶೋಕ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ರಾಜಕಾರಣಿಗಳು ಮುಠ್ಠಾಳರ ರೀತಿ ವರ್ತನೆ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. 1994 ರ ಬೆಂಗಳೂರು ಗಲಭೆ ಸಂದರ್ಭ 88 ಗುಂಡುಗಳನ್ನು ಹಾರಿಸಿದ್ದೇನೆ ಎಂದು ಅಶೋಕ್ ಕುಮಾರ್ ಅಂದಿನ ಘಟನೆ ನೆನಪು ಮಾಡಿಕೊಂಡರು.

  ಚಿಂತಕ ಚಕ್ರವರ್ತಿ ಸೂಲಿಬೆಲೆ ಸಹ ಘಟನೆಗಳ ಬಗ್ಗೆ ಪ್ರತಿಕ್ರಿಯೆ ನೀಡಿದ್ದು ಪೊಲೀಸರ ಕಾರ್ಯ ಶ್ಲಾಘನೀಯ ಎಂದು ಕೊಂಡಾಡಿದ್ದಾರೆ. ಇಡೀ ರಾಜ್ಯದಲ್ಲಿ ಬೆಂಕಿ ಹೊತ್ತಿಕೊಳ್ಳಲಿದೆ ಎಂದು ಯು.ಟಿ.ಖಾದರ್ ಹೇಳುತ್ತಾರೆ ಇದರ ಅರ್ಥ ಏನು? ಇಂಥ ಗಲಭೆಗೆ ಕಾರಣವಾಗುವವರಿಗೆ ಸಾಂತ್ವನ ಹೇಳುವರ ಬಗ್ಗೆ ಏನು ಹೇಳಬೇಕು ಗೊತ್ತಾಗುತ್ತಿಲ್ಲ ಎಂದು ಸೂಲಿಬೆಲೆ ಆತಂಕ ವ್ಯಕ್ತಪಡಿಸಿದ್ದಾರೆ.