Search results - 60 Results
 • BUSINESS8, Nov 2018, 10:42 AM IST

  ಶುಭ ಗುರುವಾರ: ಸಿಕ್ಕಾಪಟ್ಟೆ ಇಳಿದಿದೆ ಪೆಟ್ರೋಲ್ ದರ!

  ಕಳೆದ ಕೆಲವು ದಿನಗಳಿಂದ ಇಳಿಕೆಯಾಗುತ್ತಿರುವ ಪೆಟ್ರೋಲ್ ದರ 2 ದಿನಗಳ ಕಾಲ ಯಥಾ ಸ್ಥಿತಿ ಕಂಡುಕೊಂಡಿತ್ತು. ನ.08 ರಂದು ಮತ್ತೆ ಬೆಲೆ ಇಳಿಕೆಯಾಗಿದ್ದು ನವದೆಹಲಿಯಲ್ಲಿ ಪೆಟ್ರೋಲ್ ದರ 78.21 ರೂ. ಆಗಿದೆ.

 • modi

  NEWS3, Nov 2018, 9:23 AM IST

  ಪೆಟ್ರೋಲ್ ದರ ಏರಿಸಿ ಗಡಿಯಲ್ಲಿ ಸ್ಮಾರ್ಟ್ ಬೇಲಿ ನಿರ್ಮಿಸಿದರಾ ಮೋದಿ?

  ಭಾರತದ ಗಡಿಯಲ್ಲಿ ಸ್ಮಾರ್ಟ್ ಬೇಲಿ ನಿರ್ಮಿಸಲಾಗಿದೆ ಎಂಬ ಸಂದೇಶದೊಂದಿಗಿನ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿವೆ. ಅದರೊಂದಿಗೆ, ‘ಮೋದಿ ಜಿ.. ನೀವು ದೇಶದ ಪ್ರಜೆಗಳು ಹೆಮ್ಮೆಪಡುವ ಕೆಲಸ ಮಾಡಿದ್ದೀರಿ. ಇವತ್ತು ಇಸ್ರೇಲ್‌ನಂತೆಯೇ ನಮ್ಮ ದೇಶದ ಗಡಿಯಲ್ಲೂ ಸ್ಮಾರ್ಟ್ ಬೇಲಿ ತಲೆ ಎತ್ತಿದೆ. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಬಳಿಕ ಆತಂಕಗೊಂಡಿದ್ದೆವು. ಆದರೆ ಆ ದುಡ್ಡು ನಮ್ಮ ದೇಶದ ರಕ್ಷಣೆಗೆ ಬಳಕೆಯಾಗಿದೆ ಎಂಬುದು ಈಗ ಮನವರಿಕೆಯಾಗುತ್ತಿದೆ’ ಎಂದು ಒಕ್ಕಣೆಯನ್ನು ಬರೆಯಲಾಗಿದೆ.

 • Modi

  BUSINESS2, Nov 2018, 10:52 AM IST

  ‘ಚಾಯ್ ಪೇ ಚರ್ಚಾ’ ಬಿಟ್ಬಿಡಿ: ‘ಪೆಟ್ರೋಲ್ ಪೇ ಖರ್ಚಾ’ ಮಾತಾಡಿ!

  ಸತತ ಮೂರನೇ ವಾರವೂ ತೈಲೋತ್ಪನ್ನಗಳ ದರ ಇಳಿಕೆಯಾಗಿದ್ದು, ಶುಕ್ರವಾರ ಪೆಟ್ರೋಲ್ ಮತ್ತು ಡೀಸೆಲ್ ಇಂಧನಗಳ ಬೆಲೆಯಲ್ಲಿ ಅಲ್ಪ ಪ್ರಮಾಣದ ಇಳಿಕೆಯಾಗಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪೆಟ್ರೋಲ್ ದರ 79.82 ರೂ. ಮತ್ತು ಡೀಸೆಲ್ ದರ 74.12 ರೂ. ಆಗಿದೆ.
   

 • BUSINESS1, Nov 2018, 12:52 PM IST

  ಪೆಟ್ರೋಲ್ ದರ ಇಳಿಕೆ: ಡೀಸೆಲ್ ದರ ಇಳಿದಿಲ್ಲ ಯಾಕೆ?

  ಸತತ 13 ದಿನಗಳಿಂದ ಇಳಿಕೆಯತ್ತ ಮುಖ ಮಾಡಿದ್ದ ತೈಲದರ ನಿನ್ನೆ ಯಾವುದೇ ಬದಲಾವಣೆ ಕಾಣದೇ ತಟಸ್ಥವಾಗಿತ್ತು. ಆದರೆ ಇಂದು ಮತ್ತೆ ತೈಲದರ ಇಳಿಕೆ ಕಂಡಿದೆ. ಇಂದು ಕೇವಲ ಪೆಟ್ರೋಲ್ ದರದಲ್ಲಿ ಮಾತ್ರ ಅಲ್ಪ ಪ್ರಮಾಣದ ಇಳಿಕೆ ಕಂಡುಬಂದಿದ್ದು, ಡೀಸೆಲ್ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

 • BUSINESS30, Oct 2018, 10:35 AM IST

  ಇಂದೂ ಪೆಟ್ರೋಲ್ ದರ ಇಳಿಕೆ: ಜೇಬಿನ ಚಿಂತೆ ಇನ್ನೇಕೆ?

  ಅಂತರಾಷ್ಟ್ಕೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಗಣನೀಯವಾಗಿ ಇಳಿಕೆಯಾಗಿದ್ದು, ಅದರ ಪರಿಣಾಮ ಭಾರತೀಯ ತೈಲ ಮಾರುಕಟ್ಟೆಯ ಮೇಲೂ ಬೀರಿದೆ. ಪರಿಣಾಮ ಸತತ 13ನೇ ದಿನವೂ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಇಳಿಕೆ ಕಂಡುಬಂದಿದೆ.
   

 • BUSINESS28, Oct 2018, 3:37 PM IST

  11ನೇ ದಿನದಾಟ: ಇನ್ಮೇಲೆ ಇರಲ್ವಾ ಪೆಟ್ರೋಲ್ ದರ ಏರಿಕೆ ಕಾಟ?

  ನಿರಂತರವಾಗಿ ಇಳಿಕೆಯಾಗುತ್ತಿರುವ ಪೆಟ್ರೋಲ್, ಡೀಸೆಲ್ ದರ ಇದೀಗ 11ನೇ ದಿನವೂ ಕೂಡ ಇಳಿದಿದೆ. ಭಾನುವಾರ ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲಿ ಇಳಿಕೆ ಕಂಡು ಬಂದಿದೆ. ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಪ್ರತೀ ಲೀಟರ್ ಪೆಟ್ರೋಲ್ ಬೆಲೆಯಲ್ಲಿ 40 ಪೈಸೆ ಇಳಿಕೆಯಾಗಿದೆ.

 • BUSINESS26, Oct 2018, 12:55 PM IST

  ಇದಪ್ಪಾ ಅಸಲಿ ನವರಾತ್ರಿ:9ನೇ ದಿನವೂ ಇಳಿದ ಪೆಟ್ರೋಲ್ ದರ!

  ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದರದಲ್ಲಿ ಇಳಿಕೆ ಮತ್ತು ಡಾಲರ್ ಎದುರು ಭಾರತದ ರೂಪಾಯಿ ಮೌಲ್ಯ ಚೇತರಿಕೆ ಕಂಡು ಬಂದ ಪರಿಣಾಮ ತೈಲದರದಲ್ಲಿ ಇಳಿಕೆ ಕಂಡು ಬರುತ್ತಿದೆ. ಅದರಂತೆ ದೇಶದ ಮಹಾನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಗಮನಾರ್ಹ ಇಳಿಕೆಯಾಗಿದೆ.

 • NEWS22, Oct 2018, 12:47 PM IST

  ಇಳಿಯುತ್ತಿರುವ ಪೆಟ್ರೋಲ್ ದರ : ಗ್ರಾಹಕರ ಸೆಳೆಯಲು ಹೊಸ ಪ್ಲಾನ್ ?

  ಗ್ರಾಹಕರನ್ನು ಸೆಳೆಯುವ ನಿಟ್ಟಿನಿಂದ ಪೆಟ್ರೋಲ್ ದರ ಒಂದು ಪೈಸೆಯಷ್ಟು ಇಳಿದರೂ ಅದನ್ನು ದೊಡ್ಡದಾಗಿ ತೋರಿಸುವ ಡಿಜಿಟಲ್ ಫಲಕವನ್ನು ಅಳವಡಿಸಲಾಗುತ್ತಿದೆ. 

 • BUSINESS21, Oct 2018, 11:45 AM IST

  4ನೇ ದಿನವೂ ಪೆಟ್ರೋಲ್ ದರ ಇಳಿಕೆ: ಕನಸಲ್ಲೂ ಇದೇ ಕನವರಿಕೆ!

  ಹಬ್ಬದ ನಿಮಿತ್ತ ಕಳೆದ ಮೂರು ದಿನಗಳಿಂದ ಸತತವಾಗಿ ತೈಲದರದಲ್ಲಿ ಇಳಿಕೆಯಾಗುತ್ತಿದ್ದು, ಇಂದೂ ಕೂಡ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಕೊಂಚ ಇಳಿಕೆ ಕಂಡು ಬಂದಿದೆ. ಬೆಂಗಳೂರು ಸೇರಿದಂತೆ ದೇಶದ ಮಹಾನಗರಗಳಲ್ಲಿ ತೈಲದರ ಇಳಿದಿದೆ.

 • BUSINESS20, Oct 2018, 2:42 PM IST

  ಇಂದು ಮೂರನೇ ದಿನ: ಪೆಟ್ರೋಲ್ ದರ ಇಳಿಯಲಿದೆ ಅನುದಿನ?

  ದಸರಾ ಹಬ್ಬದ ಪ್ರಯುಕ್ತ ಸತತ ಎರಡು ದಿನಗಳಿಂದ ತೈಲ ಬೆಲೆಯಲ್ಲಿ ಗಮನಾರ್ಹ ಇಳಿಕೆ ಕಂಡು ಬಂದಿದ್ದು, ಮೂರನೇ ದಿನವಾದ ಇಂದೂ ಕೂಡ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಕೊಂಚ ಇಳಿಕೆ ಮಾಡಲಾಗಿದೆ.

 • petrol 5 rupees reduce

  BUSINESS19, Oct 2018, 2:51 PM IST

  ಹಬ್ಬದ ಎರಡನೇ ದಿನ: ಪೆಟ್ರೋಲ್ ಇಳಿದಿದ್ದೆಷ್ಟು ನೋಡಣ್ಣ!

  ಹಬ್ಬದ ನಿಮಿತ್ತ ತೈಲದರ ಕಡಿಮೆ ಮಾಡಲು ಮುಂದಾಗಿರುವ ಕೇಂದ್ರ ಸರ್ಕಾರ, ಕಳೆದ ಎರಡು ದಿನಗಳಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಕೊಂಚ ಇಳಿಕೆ ಮಾಡಿದೆ. ಅದರಂತೆ ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ದರ  24 ಪೈಸೆ , ಡೀಸೆಲ್ ಬೆಲೆಯಲ್ಲಿ 10 ಪೈಸೆ ಇಳಿದಿದೆ. 

   

 • Modi

  BUSINESS7, Oct 2018, 3:35 PM IST

  ಕೊಟ್ಟು ಕಿತ್ಕೊಂಡ್ರು ಮೋದಿ: ಪೆಟ್ರೋಲ್ ರೇಟ್ ಮತ್ತೆ ಜಂಪ್!

  ಮೂರು ದಿನಗಳ ಹಿಂದೆಯಷ್ಟೆ ಪ್ರತಿ ಲೀಟರ್​ ಡಿಸೇಲ್ ಮತ್ತು ಪೆಟ್ರೋಲ್ ದರವನ್ನು,​ ತಲಾ 2.50 ರೂಪಾಯಿ ಕಡಿತಗೊಳಿಸಿದ ಕೇಂದ್ರ ಸರ್ಕಾರ  ಮತ್ತೆ ಬೆಲೆ ಏರಿಸಿದೆ. ಡಿಸೇಲ್​ ಹಾಗೂ ಪೆಟ್ರೋಲ್ ದರ ಕ್ರಮವಾಗಿ 20 ಪೈಸೆ ಹಾಗೂ 7 ಪೈಸೆ ಹೆಚ್ಚಳವಾಗಲಿದೆ.

 • NEWS4, Oct 2018, 3:42 PM IST

  ಕೇಂದ್ರದಿಂದ ಪೆಟ್ರೋಲ್, ಡೀಸೆಲ್ ಬೆಲೆ 2 .50 ರೂ. ಇಳಿಕೆ : ತಕ್ಷಣದಿಂದಲೇ ಜಾರಿ

  • ಕಳೆದ ವರ್ಷ ಪೆಟ್ರೋಲ್ ದರ ಏರಿಕೆಯಾದಾಗ 2 ರೂ. ಇಳಿಸಲಾಗಿತ್ತು. ಕೆಲವು ರಾಜ್ಯ ಸರ್ಕಾರಗಳೂ ತೆರಿಗೆ ಇಳಿಕೆ ಮಾಡಿವೆ. 
  • ಅಮೆರಿಕದಲ್ಲಿ ಬಡ್ಡಿದರ ಶೇ.32ರಷ್ಟು ಹೆಚ್ಚಳವಾಗಿದ್ದು, ಇದರಿಂದ ಜಾಗತಿಕ ಮಾರುಕಟ್ಟೆಯಲ್ಲಿ ತೈಲ ದರ ಹೆಚ್ಚಿದೆ.
 • BUSINESS25, Sep 2018, 12:34 PM IST

  ಮತ್ತೆ ರೂಪಾಯಿ ಬಿತ್ತು: ನಿಮ್ಮ ಜೇಬಿಗೂ ಬಂತು ಕುತ್ತು!

  ಅತ್ತ ಪೆಟ್ರೋಲ್ ದರ ದಿನೇ ದಿನೇ ಏರುತ್ತಿರುವಂತೆಯೇ ಇತ್ತ ಅಂತಾರಾಷ್ಟ್ರೀಯ ಮಟ್ಟದಲ್ಲಿ ರೂಪಾಯಿ ಮೌಲ್ಯ ಕೂಡ ಕುಸಿತದತ್ತ ಸಾಗಿದೆ. ಇಂದು ವಹಿವಾಟು ಆರಂಭವಾಗುತ್ತಿದ್ದಂತೆಯೇ ಡಾಲರ್ ಎದುರು ರೂಪಾಯಿ ಮೌಲ್ಯ 33 ಪೈಸೆಯಷ್ಟು ಕುಸಿತಗೊಂಡಿದೆ.

 • fuel scarcity

  BUSINESS24, Sep 2018, 12:43 PM IST

  ಬಿಟ್ಬಿಡಿ 90: ಪೆಟ್ರೋಲ್ ಬೆಲೆ ಕ್ರಾಸ್ಡ್ 90!

  ದಿನದಿಂದ ದಿನಕ್ಕೆ ಏರುತ್ತಿರುವ ತೈಲದರ ಕಂಡು ಜನಸಾಮಾನ್ಯ ಕಂಗಾಲಾಗಿದ್ದಾನೆ. ವಾಣಿಜ್ಯ ನಗರಿ ಮುಂಬೈನಲ್ಲಿ ಪೆಟ್ರೋಲ್ ದರ 90 ರೂ. ಗಡಿ ದಾಟಿದ್ದು, ಪೆಟ್ರೋಲ್ ದರ ಶತಕ ಬಾರಿಸುತ್ತಾ ಎಂಬ ಆತಂಕ ಜನರಲ್ಲಿ ಮನೆ ಮಾಡಿದೆ.