Search results - 6 Results
 • Katha Kammata Mudigere

  Chikkamagalur22, Oct 2018, 6:32 PM IST

  ಚಾರ್ಮಾಡಿ ಬೆಟ್ಟದ ಮೇಲೆ ಕನ್ನಡ ಬಾವುಟ, ಸಾಹಿತ್ಯದ ಧ್ಯಾನ

  ಹಚ್ಚ ಹಸಿರಿನ, ದಟ್ಟ ಕಾನನದ ಚಾರ್ಮಾಡಿ ಘಾಟ್ ನಲ್ಲಿ ಜಲ ಧಾರೆಗಳ ಸೆಲೆಯಿಂದ ಒರತೆ ಹುಟ್ಟುವುದು ಸಾಮಾನ್ಯ. ಆದರೆ ಈ ಒಂದು ದಿನ ಕಥೆಗಳು ಹುಟ್ಟಿದವು. ಯಾವ ಸಾಹಿತ್ಯ ಸಮ್ಮೇಳನಕ್ಕೂ ಇದು ಕಡಿಮೆ ಇರಲಿಲ್ಲ. ಪೂರ್ಣ ಕುಂಭ ಸ್ವಾಗತದ ಮುಖೇನ ಗಣ್ಯರನ್ನು ಕರೆತರಲಾಯಿತು. ಜಾನಪದ ಕಲಾ ತಂಡಗಳು ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿದ್ದವು. ಕಥಾ ಕಮ್ಮಟದಲ್ಲಿ ಕನ್ನಡದ ಕಂಪು ಮೂಡಿಬಂತು.

 • Human Chain

  NEWS15, Oct 2018, 5:12 PM IST

  ಚಾರ್ಮಾಡಿ ಕಥಾ ಕಮ್ಮಟಾಸಕ್ತರ ಹೆಸರು ನೂರು ತರಹ!

  ಪೂರ್ಣಚಂದ್ರ ತೇಜಸ್ವಿಯವರ ನೆನಪಿನಲ್ಲಿ,  ಚಾರ್ಮಾಡಿಯ ಒಡಲಲ್ಲಿ  ಇದೇ ಭಾನುವಾರ ಅಕ್ಟೋಬರ್ 21ರಂದು ನಡೆಯಲಿರುವ  "ಕಥಾ ಕಮ್ಮಟ"ದಲ್ಲಿ ಭಾಗಿಯಾಗುವುದೇ ಒಂದು ವಿಶಿಷ್ಟ ಅನುಭವ.  ಇಂಥ ಕಮ್ಮಟಕ್ಕೆ ಬರ್ತೀರಾ ಎಂದು ಕೇಳಿದ ಕ್ಷಣಾರ್ಥದಲ್ಲಿ ಶಿಬಿರಕ್ಕೆ 
  ನೊಂದಾಯಿಸಿಕೊಂಡವರು ನೂರು ಜನ. ನಿಮ್ಮ ಹೆಸರು ಇಲ್ಲಿದೆಯಾ? ಬಗ್ಗಿ ನೋಡಿ !

 • Kammata 2

  NEWS15, Oct 2018, 4:40 PM IST

  ಚಾರ್ಮಾಡಿ ಘಾಟ್ ನೆತ್ತಿಯ ಮೇಲೆ ಸಾಹಿತ್ಯದ ಕಸರತ್ತು!

  "ಇಲ್ಲಿ ಇರೋರೆಲ್ಲರ ತಲೆ ಒಳಗೂ ಒಂದೊಂದು ಕಥೆ ಇದೆ"  ಹಾಗಂತ ಅಬಚೂರಿನ ಪೋಸ್ಟ್  ಆಫೀಸಿನಿಂದ ಪತ್ರವೊಂದು ಬಂದಿದೆ.  ಪತ್ರ ಡಬ್ಬಿಗೆ ಹಾಕಿ ಕಾಡಿನೊಳಗೆ ಕಣ್ಮರೆಯಾದವರು ನವ್ಯ ಸಾಹಿತ್ಯದ ಪ್ರಮುಖ ಲೇಖಕರಲ್ಲೊಬ್ಬರಾದ ಪೂರ್ಣಚಂದ್ರ ತೇಜಸ್ವಿ. ತಲೆಯೊಳಗೆ ಕತೆ  ಇದ್ದ ಮಾತ್ರಕ್ಕೆ ಪ್ರಯೋಜನವಿಲ್ಲ.  ಅದನ್ನು ಅಕ್ಷರಕ್ಕೆ ತನ್ನಿ ಎಂದು ಪುನಃ ನೆನಪಿಸುವ  ಕಥಾ ಕಮ್ಮಟವೊಂದಕ್ಕೆ ಚಾರ್ಮಾಡಿ ಘಾಟ್ ಅಣಿಯಾಗಿದೆ.  ಇಂಥದೊಂದು  ವಿಶಿಷ್ಟ  ಕಾರ್ಯಕ್ರಮಕ್ಕೆ ಅಲ್ಲಿನ ಜುಳುಜುಳು ನೀರು, ಹಸುರು ವನರಾಶಿಯೇ ಸಾಕ್ಷಿ. ಜತೆಗೆ, ತೇಜಸ್ವಿ ನೆನಪು, ಘಾಟಿಯ ನೆತ್ತಿಯ ಮೇಲೆ ಕಥೆ ಹೆಣೆಯುವ ತಂತ್ರ, ಮಂತ್ರಾಲೋಚನೆ.  ಇದಿಷ್ಟೇ ಅಲ್ಲ, ಒಂದು ಅರ್ಥಪೂರ್ಣ ಭಾನುವಾರಕ್ಕೆ ಹಾತೊರೆಯುವ ಮನ..

 • poornachandra tejaswi

  LIFESTYLE9, Sep 2018, 10:55 AM IST

  ಮೊಗೆದಷ್ಟು ಮತ್ತೆ ಮತ್ತೆ ಸಿಗುವ ತೇಜಸ್ವಿ ನೆನಪು

  ಎಷ್ಟು ಹೇಳಿದರೂ ಮುಗಿಯದ ಕತೆಗಳನ್ನು ತಮ್ಮ ಆಪ್ತರ ನಡುವೆ ಬಿಟ್ಟು ಹೋದವರು ಪೂರ್ಣಚಂದ್ರ ತೇಜಸ್ವಿ. ಅವರ ತುಂಟತನ, ಪ್ರಯೋಗಶೀಲತೆ, ಜೀವನಪ್ರೀತಿ, ಅಕ್ಕರೆಗಳನ್ನು ನೆನಪಿಸುವ ಕೆಲವು ಪ್ರಸಂಗಗಳು ಇಲ್ಲಿವೆ. ಅದರಲ್ಲಿ ಅವರು ಕ್ಯಾಮೆರಾ ಕೊಂಡ ಮಜವಾದ ಕಥೆ ಇಲ್ಲಿದೆ. 

 • Rishab Shetty

  Sandalwood25, Aug 2018, 10:44 AM IST

  ಚಿತ್ರ ವಿಮರ್ಶೆ:ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ

  ಛಕ್, ಇಷ್ಟು ಬೇಗ ಶಾಲೆ ಶುರುವಾಗಬಾರದಿತ್ತು! ಹಾಗಂತ ತನಗೆ ತಾನೇ ಉದ್ಗರಿಸುವ ಮಮ್ಮೂಟಿ ಎಂಬ ಬಾಲಕ, ಹೇಗಾದರೂ ಶಾಲೆ ಮತ್ತೆ ಶುರುವಾಗಲೇಬೇಕು ಎಂದು ನಿರ್ಧರಿಸುವಲ್ಲಿಗೆ ಕಾಸರಗೋಡಿನ ಕರಂದಕ್ಕಾಡು ಎಂಬ ಊರು, ಅಲ್ಲಿಯ ತುಂಟ ಹುಡುಗರು, ಮಿಂಚುಗಣ್ಣಿನ ಬಾಲಕಿ, ಪಾಪದ ಹೆಡ್ಮಾಸ್ಟರು, ಅಬ್ಬರಿಸುವ ಯಕ್ಷಗಾನ ಕಲಾವಿದ, ರಾಶಿಭವಿಷ್ಯ ಕೇಳುವ ಮುದುಕ, ಅರೆಹುಚ್ಚ ಸೆಬಾಸ್ಟಿನ್, ಒಬ್ಬ ಅಗೋಳಿಮಂಜಣ್ಣ, ಪುಗ್ಗೆಮಾರುವ ಸಾಬಿ, ಮಲಯಾಳಂ ಭಾಷೆಯಲ್ಲಿ ಗಣಿತ ಕಲಿಸುವ ಶಿಕ್ಷಕ ಮತ್ತು ಒಬ್ಬ ದುಷ್ಟ ಅಧಿಕಾರಿ ನಮ್ಮ ಮನಸ್ಸಿನೊಳಗೆ ನೆಲೆ ನಿಂತಾಗಿರುತ್ತದೆ.

 • poornachandra tejaswi

  LIFESTYLE17, Jun 2018, 12:57 PM IST

  ಅಣ್ಣ ಹೀಗೂ ನೆನಪಾಗಬಹುದು

  ಇಂದು ಅಪ್ಪಂದಿರ ದಿನ. ಇಂದಿನ ದಿನವಷ್ಟೇ ಅಲ್ಲದೇ ಅಪ್ಪ ಎಂದರೆ ಮಕ್ಕಳಿಗೆ ಆಕಾಶದಷ್ಟೇ ವಿಸ್ತಾರ. ಅಪ್ಪನ ಬಗ್ಗೆ ವರ್ಣನೆಗೆ ನಿಲುಕುವ ಪದಗಳೇ ಇಲ್ಲ. ಅಂತಹ ಅಪ್ಪ ಅಂತರಂಗದ ಒಂದು ಭಾಗವಾಗಿ ಬಾಲ್ಯದ ಅನುಭವವವಾಗಿ ದಕ್ಕಿದಾಗ ಇಂಥದ್ದು ಸಾಧ್ಯ, ಹೀಗಾಗಿ ಮೇರುಕವಿಯನ್ನು ಅವರ ಪುತ್ರ ಪೂರ್ಣಚಂದ್ರ ತೇಜಸ್ವಿಯವರು ಕಂಡಿದ್ದ ಒಂದು ಬರಹ ಇಲ್ಲಿದೆ.