ಪಿಕೆಎಲ್ 6  

(Search results - 16)
 • Bengaluru Bulls

  SPORTS9, Jan 2019, 10:39 AM IST

  ರಾತ್ರಿ ಪೂರ್ತಿ ಪಾರ್ಟಿ ಮಾಡಿದ ಬೆಂಗ್ಳೂರು ಬುಲ್ಸ್‌!

  ಆರನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್’ನಲ್ಲಿ ಬಲಿಷ್ಠ ಗುಜರಾತ್ ಫಾರ್ಚೂನ್’ಜೈಂಟ್ಸ್ ತಂಡವನ್ನು ಮಣಿಸಿ ಬೆಂಗಳೂರು ಬುಲ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಸತತ 5 ಆವೃತ್ತಿಗಳಲ್ಲಿ ಪ್ರಶಸ್ತಿಯ ಬರ ಅನುಭವಿಸುತ್ತಿದ್ದ ಬುಲ್ಸ್ ಬಳಗ ಚೊಚ್ಚಲ ಪ್ರಶಸ್ತಿ ಜಯಿಸಿ ಸಂಭ್ರಮಿಸಿದೆ. ಇದರ ಖುಷಿಯನ್ನು ರಾತ್ರಿಯಿಡಿ ಪಾರ್ಟಿ ಮಾಡುವ ಮೂಲಕ ಆಚರಿಸಿದೆ.

   

 • Pro kabaddi Gujarat

  SPORTS4, Jan 2019, 9:30 AM IST

  ಪ್ರೊ ಕಬಡ್ಡಿ ಫೈನಲ್‌ಗೆ ಗುಜರಾತ್‌ ಲಗ್ಗೆ

  ದ್ವಿತೀಯಾರ್ಧದ ಮೊದಲ 8 ನಿಮಿಷಗಳಲ್ಲಿ ಯೋಧಾಗೆ ಒಂದೂ ಅಂಕ ಗಳಿಸಲು ಬಿಡದೆ 10 ಅಂಕಗಳ ಮುನ್ನಡೆ ಸಾಧಿಸಿದ್ದು ಗುಜರಾತ್‌ ಗೆಲುವಿಗೆ ಕಾರಣವಾಯಿತು. 27ನೇ ನಿಮಿಷದಲ್ಲಿ ಯೋಧಾ ಮೇಲೆ ಆಲೌಟ್‌ ಹೇರಿದ್ದು ಸಹ ಗುಜರಾತ್‌ ಮಾನಸಿಕ ಬಲ ಹೆಚ್ಚಿಸಿತು.

 • Gujarat Fortunegaints

  CRICKET3, Jan 2019, 10:32 AM IST

  ಪ್ರೊ ಕಬಡ್ಡಿ: 2ನೇ ಕ್ವಾಲಿಫೈಯರ್‌’ನಲ್ಲಿ ಗುಜರಾತ್‌-ಯು.ಪಿ.ಯೋಧಾ ಸೆಣಸು

  ಮತ್ತೊಂದೆಡೆ ಸತತ 8 ಪಂದ್ಯಗಳಲ್ಲಿ ಸೋಲೇ ಕಾಣದ ಯು.ಪಿ.ಯೋಧಾ, ಎಲಿಮಿನೇಟರ್‌ ಪಂದ್ಯಗಳಲ್ಲಿ ಬೆಂಗಾಲ್‌ ವಾರಿಯ​ರ್ಸ್ ಹಾಗೂ ದಬಾಂಗ್‌ ಡೆಲ್ಲಿಯನ್ನು ಸೋಲಿಸಿ, ಫೈನಲ್‌ಗೇರುವ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.

 • Dabang Delhi

  SPORTS30, Dec 2018, 4:24 PM IST

  ಪ್ರೊ ಕಬಡ್ಡಿ ಪ್ಲೇ-ಆಫ್‌ ಹಣಾಹಣಿ: ಸೋಲುವ ತಂಡ ಟೂರ್ನಿಯಿಂದ ಹೊರಕ್ಕೆ

  ಪ್ರೊ ಕಬಡ್ಡಿ ಲೀಗ್ ರೋಚಕ ಘಟ್ಟ ತಲುಪಿದ್ದು, ಭಾನುವಾರದಿಂದ ಪ್ಲೇ ಆಫ್ ಹಂತ ಆರಂಭಗೊಳ್ಳಲಿದೆ. ಇಲ್ಲಿನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಎರಡು ಎಲಿಮಿನೇಟರ್ ಪಂದ್ಯಗಳು ನಡೆಯಲಿದ್ದು, ಮೊದಲ ಪಂದ್ಯದಲ್ಲಿ ಯು ಮುಂಬಾ-ಯು.ಪಿ ಯೋಧಾ, 2ನೇ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್-ದಬಾಂಗ್ ಡೆಲ್ಲಿ ತಂಡಗಳು ಸೆಣಸಲಿವೆ. ಗೆಲ್ಲುವ ತಂಡಗಳು ಟೂರ್ನಿಯಲ್ಲಿ ಉಳಿದುಕೊಂಡರೆ, ಸೋಲುವ ತಂಡಗಳು ಹೊರಬೀಳಲಿವೆ.

 • Pro Kabaddi TT

  SPORTS14, Dec 2018, 11:14 AM IST

  ಪ್ರೊ ಕಬಡ್ಡಿ: ಟೈಟಾನ್ಸ್ ಎದುರು ಪೈರೇಟ್ಸ್‌ಗೆ ಆಘಾತ!

  ತಾರಾ ರೈಡರ್‌ಗಳಾದ ರಾಹುಲ್‌ ಚೌಧರಿ (13 ಅಂಕ) ಹಾಗೂ ನೀಲೇಶ್‌ ಸಾಳುಂಕೆ (09 ಅಂಕ) ಆಕರ್ಷಕ ಪ್ರದರ್ಶನ ಟೈಟಾನ್ಸ್‌ಗೆ ನೆರವಾಯಿತು. ಮೊದಲಾರ್ಧದಲ್ಲಿ ಅಂಕ ಗಳಿಸದ ಪಾಟ್ನಾ ನಾಯಕ ಪ್ರದೀಪ್‌ ನರ್ವಾಲ್‌, ದ್ವಿತೀಯಾರ್ಧದಲ್ಲಿ ಹೋರಾಡಿ 12 ಅಂಕ ಕಲೆಹಾಕಿದರು.

 • PKL DD vs Pune

  SPORTS3, Dec 2018, 10:36 AM IST

  ಪ್ರೊ ಕಬಡ್ಡಿ 2018 ಡೆಲ್ಲಿ ಅಬ್ಬರಕ್ಕೆ ಪುಣೆ ಪಲ್ಟಿ

  ಈ ಪಂದ್ಯದಲ್ಲಿ ದಬಾಂಗ್ ಡೆಲ್ಲಿಯ ಸ್ಟಾರ್ ಡಿಫೆಂಡರ್ ರವೀಂದ್ರ ಪೆಹಾಲ್ ಪ್ರೊ ಕಬಡ್ಡಿ ಆವೃತ್ತಿಯಲ್ಲಿ 250 ಟ್ಯಾಕಲ್ ಅಂಕ ಕಬಳಿಸಿದ ಸಾಧನೆ ಮಾಡಿದರು. ಈ ಮೂಲಕ ಪಿಕೆಎಲ್’ನಲ್ಲಿ ಈ ಸಾಧನೆ ಮಾಡಿದ ಎರಡನೇ ಆಟಗಾರ ಎನ್ನುವ ಕೀರ್ತಿಗೆ ಭಾಜನರಾದರು.

 • PKL BB vs BW

  SPORTS30, Nov 2018, 9:08 AM IST

  ಪ್ರೊ ಕಬಡ್ಡಿ: ಬುಲ್ಸ್‌ಗೆ ಹೀನಾಯ ಸೋಲು!

  ಬೆಂಗಾಲ್‌ ವಿರುದ್ಧದ 7 ಅಂಕಗಳ ಅಂತರದ ಸೋಲು, ಬುಲ್ಸ್‌ ಪಾಳಯದಲ್ಲಿ ಆತಂಕ ಹುಟ್ಟಿಹಾಕಿದೆ. ಪ್ಲೇ-ಆಫ್‌ಗೆ ಹತ್ತಿರವಾಗುತ್ತಿದ್ದಂತೆ ಲಯ ಕಳೆದುಕೊಳ್ಳುತ್ತಿರುವುದು, ರೋಹಿತ್‌ ಪಡೆಯನ್ನು ಸಂಕಷ್ಟಕ್ಕೆ ದೂಡಿದೆ.

 • Bengaluru bulls

  SPORTS24, Nov 2018, 10:40 AM IST

  ತವರು ಚರಣದಲ್ಲಿ ಬುಲ್ಸ್’ಗೆ ಸೋಲಿನ ಆರಂಭ

  ಪಂದ್ಯದ ಆರಂಭದಿಂದಲೂ ಉಭಯ ತಂಡಗಳ ನಡುವೆ ಭಾರೀ ಪೈಪೋಟಿ ಕಂಡುಬಂತು. 4ನೇ ನಿಮಿಷದ ವೇಳೆಗೆ 4-4ರಲ್ಲಿ ತಂಡಗಳು ಸಮಬಲ ಸಾಧಿಸಿದವು. ಬುಲ್ಸ್ 15ನೇ ನಿಮಿಷದಲ್ಲಿ ಆಲೌಟ್ ಆಗಿ 11-13ರ ಹಿನ್ನಡೆ ಅನುಭವಿಸಿತು. ಮೊದಲಾರ್ಧದ ಅಂತ್ಯಕ್ಕೆ ಬೆಂಗಾಲ್ 18-14ರ ಮುನ್ನಡೆ ಪಡೆದುಕೊಂಡಿತು.

 • PKL DD

  SPORTS8, Nov 2018, 9:44 PM IST

  ಸ್ಟೀಲರ್ಸ್’ಗೆ ಸೋಲುಣಿಸಿದ ದಬಾಂಗ್ ಡೆಲ್ಲಿ

  ದಬಾಂಗ್ ಡೆಲ್ಲಿ-ಹರಿಯಾಣ ಸ್ಟೀಲರ್ಸ್ ನಡುವಿನ ತೀವ್ರ ಜಿದ್ದಾಜಿದ್ದಿನಿಂದ ಕೂಡಿದ್ದ ಪಂದ್ಯದಲ್ಲಿ ದಬಾಂಗ್ ಡೆಲ್ಲಿ 39-33 ಅಂಕಗಳಿಂದ ಕೊನೆಗೂ ಗೆಲುವಿನ ನಗೆ ಬೀರಿದೆ. ಈ ಗೆಲುವಿನೊಂದಿಗೆ ಡೆಲ್ಲಿ ನಾಲ್ಕನೇ ಸ್ಥಾನದಲ್ಲೇ ಮುಂದುವರೆದಿದೆ.

 • Amaresh Mondal

  SPORTS6, Nov 2018, 10:28 AM IST

  ರಗ್ಬಿ ಬಿಟ್ಟು ಕಬಡ್ಡಿ ಪಟುವಾದ ಮೊಂಡಲ್‌!

  ಅಮರೇಶ್‌ಗೆ ಬಾಲ್ಯದಿಂದಲೂ ರಗ್ಬಿಯತ್ತ ವಿಶೇಷ ಆಸಕ್ತಿ. ಪಶ್ಚಿಮ ಬಂಗಾಳದಲ್ಲಿ ಜನ ಫುಟ್ಬಾಲನ್ನು ಆರಾಧಿಸುತ್ತಾರೆ. ಆದರೆ ಮೊಂಡಲ್‌ರ ಊರಿನಲ್ಲಿ ರಗ್ಬಿ ಹಾಗೂ ಕಬಡ್ಡಿ ಬಿಟ್ಟು ಬೇರೆ ಆಟವನ್ನೇ ಆಡುವುದಿಲ್ಲ ಎನ್ನುವ ಸಂಗತಿ ಹುಬ್ಬೇರಿಸುವಂತೆ ಮಾಡುತ್ತದೆ.

 • Bengaluru Bulls Vs Tamil

  SPORTS27, Oct 2018, 3:24 PM IST

  ಸರ್ಕಾರಿ ಅವ್ಯವಸ್ಥೆಯಲ್ಲಿ ಬಡವಾಯ್ತು ಕಬಡ್ಡಿ..!

  ಅ.3ರಂದು ಬೆಂಗಳೂರು ಬುಲ್ಸ್ 2ನೇ ಬಾರಿಗೆ ಕ್ರೀಡಾಂಗಣವನ್ನು ನೀಡುವಂತೆ ಕೋರಿ ಅರ್ಜಿ ಸಲ್ಲಿಸಿತ್ತು. ಅ.14ರಂದು ರಾಜ್ಯದ ಪ್ರಭಾವಿ ಸಚಿವರೊಬ್ಬರಿಗೆ ಮನವಿ ಮಾಡಿ, ಅವರೂ ಪ್ರೊ ಕಬಡ್ಡಿ ಆಯೋಜನೆಗೆ ಅನುಮತಿ ನೀಡುವಂತೆ ಶಿಫಾರಸು ಮಾಡಿದ್ದರು ಎನ್ನಲಾಗಿದೆ. ಆದರೆ, ಕ್ರೀಡಾ ಇಲಾಖೆಯ ಅಧಿಕಾರಿಗಳು ಇದಕ್ಕೂ ಕವಡೆ ಕಿಮ್ಮತ್ತು ನೀಡಿಲ್ಲ ಎಂದು ಬುಲ್ಸ್ ಮೂಲಗಳಿಂದ ತಿಳಿದು ಬಂದಿದೆ. 

 • Patna Pirates

  SPORTS27, Oct 2018, 11:32 AM IST

  ತವರಿನಲ್ಲಿ ಪಾಟ್ನಾ ಪೈರೇಟ್ಸ್ ಶುಭಾರಂಭ

  ಹಾಲಿ ಚಾಂಪಿಯನ್ ಪಾಟ್ನಾ ಪೈರೇಟ್ಸ್ ಪ್ರೊ ಕಬಡ್ಡಿ 6ನೇ ಆವೃತ್ತಿಯ ತವರಿನ ಚರಣವನ್ನು ಭರ್ಜರಿ ಗೆಲುವಿನೊಂದಿಗೆ ಆರಂಭಿಸಿದೆ. ಶನಿವಾರ ಇಲ್ಲಿ ನಡೆದ ಅಂತರ ವಲಯ ಪಂದ್ಯದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್‌ ವಿರುದ್ಧ 41-30 ಅಂಕಗಳ ಗೆಲುವು ಸಾಧಿಸಿತು.

 • SPORTS26, Oct 2018, 12:24 PM IST

  ಕುಸ್ತಿಪಟುವಾಗಿದ್ದ ತೋಮರ್ ಕಬಡ್ಡಿ ಸ್ಟಾರ್ ಆಗಿದ್ದೇಗೆ..?

  ಶಾಲಾ, ಕಾಲೇಜು ದಿನಗಳಲ್ಲಿ ಕುಸ್ತಿಪಟುವಾಗಿದ್ದೆ. ಆದರೆ, ನಮ್ಮ ಊರಿನ ಅಕ್ಕಪಕ್ಕದ ಹಳ್ಳಿಗಳಲ್ಲಿ ಕಬಡ್ಡಿ ಭಾರೀ ಜನಪ್ರಿಯ. ಹೀಗಾಗಿ ನನಗೂ ಕಬಡ್ಡಿ ಬಗ್ಗೆ ಆಸಕ್ತಿ ಬೆಳೆಯಿತು. ಕಬಡ್ಡಿಯಲ್ಲಿ ಉತ್ತಮ ಪ್ರದರ್ಶನ ತೋರಿದ್ದನ್ನು ಕಂಡು ಮನೆಯಲ್ಲಿಯೂ ಪ್ರೋತ್ಸಾಹ ಸಿಕ್ಕಿತು. ಮುಂದೆ ಸಣ್ಣಪುಟ್ಟ ಕಬಡ್ಡಿ ಲೀಗ್‌ಗಳಲ್ಲಿ ಆಡಿಕೊಂಡು, ಮುಂದೆ ಬರುಬರುತ್ತಾ ಪೂರ್ಣ ಪ್ರಮಾಣದ ಕಬಡ್ಡಿ ಪಟುವಾದೆ. 

 • Bengaluru Bulls Vs Tamil

  SPORTS25, Oct 2018, 12:26 PM IST

  ಬೆಂಗಳೂರು ಪ್ರೊ ಕಬಡ್ಡಿ ಪುಣೆಗೆ ಹೋಯ್ತು..!

  ಕಂಠೀರವ ಕ್ರೀಡಾಂಗಣದಲ್ಲಿ ಕಬಡ್ಡಿ ಆಯೋಜಿಸಲು ಬೆಂಗಳೂರು ಬುಲ್ಸ್ ತಂಡ 2 ತಿಂಗಳು ಹಿಂದೆಯೇ ಅನುಮತಿ ಕೋರಿತ್ತು. ಇದಕ್ಕೆ ಪ್ರತಿಯಾಗಿ ಕ್ರೀಡಾ ಇಲಾಖೆ ಕೆಲವು ಕಠಿಣ ಷರತ್ತುಗಳನ್ನು ವಿಧಿಸಿತ್ತು. ಲೈಟ್ ಹಾಕದಿರುವುದು, ಕ್ಯಾಮರಾ ಅಳವಡಿಸದಿರುವುದು ಸೇರಿದಂತೆ ಕೆಲವು ಪಾಲಿಸಲು ಸಾಧ್ಯವಿಲ್ಲದಂತಹ ಷರತ್ತುಗಳನ್ನು ಹಾಕಿತ್ತು. ಆದರೆ, ಬಹುತೇಕ ಷರತ್ತುಗಳನ್ನು ಬುಲ್ಸ್ ಆಡಳಿತ ಒಪ್ಪಿಕೊಂಡಿತ್ತು. 

 • Pro Kabaddi 2018

  SPORTS6, Oct 2018, 10:34 AM IST

  ನಾಳೆಯಿಂದ ಪ್ರೊ ಕಬಡ್ಡಿ ಆರಂಭ: ಹೇಗಿವೆ 12 ತಂಡಗಳ ಬಲಾಬಲ..?

  ಹ್ಯಾಟ್ರಿಕ್ ಹಾಲಿ ಚಾಂಪಿಯನ್ ಪಾಟ್ನಾ ಪೈರೇಟ್ಸ್ ತನ್ನ ನಾಗಾಲೋಟವನ್ನು ಮುಂದುವರಿಸುವ ವಿಶ್ವಾಸದಲ್ಲಿದ್ದರೆ, ಬೆಂಗಳೂರು, ಹೈದರಾಬಾದ್, ಚೆನ್ನೈ ಮೊದಲ ಬಾರಿಗೆ ಟ್ರೋಫಿಗೆ ಮುತ್ತಿಡಲು ಹಾತೊರೆಯುತ್ತಿವೆ. ಮೊದಲ ಆವೃತ್ತಿಯಲ್ಲಿ ಆಡಿದ ಅನೇಕ ಆಟಗಾರರು ಇಂದು ಕಾಣೆಯಾಗಿದ್ದಾರೆ. ಇನ್ನೂ ಅನೇಕರಿಗೆ ಹಿಂದೆ ಸಿಗುತ್ತಿದ್ದ ಮಹತ್ವ ಸಿಗುತ್ತಿಲ್ಲ. ವಿದೇಶಿ ಆಟಗಾರರ ಪ್ರಾಬಲ್ಯ ಹೆಚ್ಚುತ್ತಿದ್ದು, ದೇಸಿಪಟುಗಳ ಮೇಲೆ ಆವೃತ್ತಿಯಿಂದ ಆವೃತ್ತಿಗೆ ಒತ್ತಡ ಅಧಿಕಗೊಳ್ಳುತ್ತಿದೆ. ಸವಾಲಿನ ಎದುರು ತೊಡೆ ತಟ್ಟಲು ತಂಡಗಳು ಹೇಗೆ ಸಿದ್ಧಗೊಂಡಿವೆ, 12 ತಂಡಗಳ ಬಲಾಬಲದ ಸಂಕ್ಷಿಪ್ತ ವಿವರ ಇಲ್ಲಿದೆ.