ಪಶ್ಚಿಮ ಘಟ್ಟ  

(Search results - 36)
 • <p>MNG</p>

  Karnataka Districts6, May 2020, 9:01 AM

  ಲಾಕ್‌ಡೌನ್‌ ಎಫೆಕ್ಟ್‌: ನಾಡಿನತ್ತ ಮುಖ ಮಾಡಿದ ಪ್ರಾಣಿಗಳು, ವಾಹನಗಳ ಹಾರ್ನ್‌ಗೆ ಬೆದರಿ ಪ್ರಾಣ ಬಿಟ್ಟ ಕಾಡುಕೋಣ..!

  ಮಂಗಳೂರು/ಮೂಲ್ಕಿ (ಮೇ.06): ಲಾಕ್‌ಡೌನ್‌ ಆಗಿದ್ದರಿಂದ ನಗರಗಳಲ್ಲಿ ಜನಸಂಚಾರ ಕಡಿಮೆಯಾದ ಹಿನ್ನೆಲೆಯಲ್ಲಿ ಕಾಡುಪ್ರಾಣಿಗಳು ನಾಡಿನತ್ತ ಮುಖ ಮಾಡುತ್ತಿವೆ. ಹೀಗೆಯೇ ಪಶ್ಚಿಮ ಘಟ್ಟದಲ್ಲಿ ಕಂಡುಬರುವ ಕಾಡೆಮ್ಮೆ ಕೂಡ ಮಂಗಳವಾರ ಬೆಳಿಗ್ಗೆ ನಗರದ ಹೃದಯ ಭಾಗದಲ್ಲಿ ಕಾಡುಕೋಣ ಕಾಣಿಸಿಕೊಂಡಿತ್ತು. ಆದರೆ ಈ ಕಾಡುಕೋಣವನ್ನು ಅರಣ್ಯ ಇಲಾಖೆ ಸೆರೆ ಹಿಡಿದು ಕಾಡಿಗೆ ಸೇರಿಸುವ ಹಂತದಲ್ಲಿ ಅದು ಮೃತಪಟ್ಟಿದೆ.

 • undefined

  Karnataka Districts3, May 2020, 9:22 AM

  ನಿರ್ಮಲವಾಗಿದೆ ಪಶ್ಚಿಮ ಘಟ್ಟ: ಲಾಕ್‌ಡೌನ್‌ನಿಂದಾಗಿ ಕಾಡ್ಗಿಚ್ಚೂ ಇಲ್ಲ..!

  ಪ್ರತಿವರ್ಷ ಬೆಂಕಿ ಬಿದ್ದು ಸಾವಿರಾರು ಎಕರೆ ಸಸ್ಯ, ಪ್ರಾಣಿ ಸಂಪತ್ತು ನಾಶಕ್ಕೆ ಸಾಕ್ಷಿಯಾಗುತ್ತಿದ್ದ ರಾಜ್ಯದ ರಕ್ಷಣಾ ಗೋಡೆ ಪಶ್ಚಿಮಘಟ್ಟಈ ಬಾರಿ ಕೊರೋನಾ ಲಾಕ್‌ಡೌನ್‌ನಿಂದಾಗಿ ಮಾನವ ಹಸ್ತಕ್ಷೇಪವಿಲ್ಲದೆ ನಿರುಮ್ಮಳವಾಗಿದೆ.

 • <p>King Cobra</p>
  Video Icon

  Karnataka Districts16, Apr 2020, 9:53 PM

  ಕ್ಯಾಮರಾದಲ್ಲಿ ಸೆರೆಯಾದ ಕಾಳಿಂಗ ಮಿಲನ, ಆಗುಂಬೆ ಸಂಜೆಯಲ್ಲೊಂದು ಅಪರೂಪದ ದೃಶ್ಯ

  ಕಾಳಿಂಗ ಸರ್ಪಗಳೆರಡು‌ ಕಾಡಿನಿಂದ ಹೊರಕ್ಕೆ‌ ಬಂದು ಮಿಥುನ ಕ್ರಿಯೆ ಯಲ್ಲಿ ತೊಡಗಿಸಿಕೊಂಡ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ತಾಲೂಕಿನ  ಮಾಳಗ್ರಾಮದಲ್ಲಿ ದೃಶ್ಯ ಸೆರೆಯಾಗಿದೆ.

   

 • Western ghats

  state4, Mar 2020, 7:43 AM

  ರಾಜ್ಯದಲ್ಲಿ 30 ಲಕ್ಷಕ್ಕೂ ಹೆಚ್ಚು ಮರ ಹನನಕ್ಕೆ ಸಿದ್ಧತೆ!

  ರಾಜ್ಯದಲ್ಲಿ 30 ಲಕ್ಷಕ್ಕೂ ಹೆಚ್ಚು ಮರ ಹನನಕ್ಕೆ ಸಿದ್ಧತೆ!| ಅನುಷ್ಠಾನ ಹಂತದ, ಭವಿಷ್ಯದ 28 ಯೋಜನೆಗಳಿಂದ ಕುತ್ತು| ಪಶ್ಚಿಮ ಘಟ್ಟವೈವಿಧ್ಯತೆಗೆ ದೊಡ್ಡಮಟ್ಟದಲ್ಲಿ ಕೊಡಲಿಯೇಟು|

 • undefined

  state7, Jan 2020, 5:42 PM

  ಅಸ್ತಿತ್ವಕ್ಕಾಗಿ ಮರಾಠಿ ಅಸ್ಮಿತೆ ಮಾರ್ಗ ಹಿಡಿದ ಶಿವಸೇನೆ

  ಗಡಿಭಾಗ ಬೆಳಗಾವಿ ಜಿಲ್ಲೆ ವಿಸ್ತೀರ್ಣದಲ್ಲಿ ರಾಜ್ಯದಲ್ಲಿಯೇ ದೊಡ್ಡ ಜಿಲ್ಲೆ. ಸಪ್ತನದಿಗಳ ಸಂಪತ್ತು, ಪ್ರಕೃತಿ ಸೌಂದರ್ಯ, ಜೊತೆಗೆ ಪಶ್ಚಿಮ ಘಟ್ಟಪ್ರದೇಶವನ್ನು ಹೊದ್ದುಕೊಂಡಿದೆ. ಮಾತ್ರವಲ್ಲ, ತನ್ನ ಎಡಭಾಗಕ್ಕೆ ಗೋವಾ ಮತ್ತು ಮೇಲ್ಭಾಗಕ್ಕೆ ಮಹಾರಾಷ್ಟ್ರದೊಂದಿಗೆ ತನ್ನ ಗಡಿಯನ್ನು ಹಂಚಿಕೊಂಡಿದೆ.

 • king cobra

  Shivamogga18, Oct 2019, 10:06 AM

  ಮಿಲನದ ಬಳಿಕ ಸಂಗಾತಿಯನ್ನೇ ತಿನ್ನುವ ಕಾಳಿಂಗ! ಕಾರಣವೇನು?

  ಪಶ್ಚಿಮ ಘಟ್ಟ ಹಾವುಗಳ ಸ್ವರ್ಗವೆಂದೇ ಕರೆಯಲಾಗುತ್ತದೆ. ಇದೀಗ ಇಲ್ಲಿ ಗಂಡು ಕಾಳಿಂಗ ಹಾವುಗಳ ಸಂಖ್ಯೆ ಹೆಚ್ಚಾಗಿದ್ದು ಇದಕ್ಕೆ ಈ ವಿಚಿತ್ರವೇ ಕಾರಣವಿರಬಹುದು ಎನ್ನಲಾಗಿದೆ. 

 • king cobra

  state17, Oct 2019, 7:58 AM

  ಕಾಳಿಂಗ ಸರ್ಪಕ್ಕೂ ಬಂತು ಆಧಾರ್ ರೀತಿ ವಿಶಿಷ್ಟ ನಂಬರ್!

  ದೇಶದ ನಾಗರಿಕರಿಗೆ ಆಧಾರ್‌ ನಂಬರ್‌ ನೀಡುವಂತೆ, ಇದೀಗ ಪಶ್ಚಿಮ ಘಟ್ಟಪ್ರದೇಶಗಳಲ್ಲಿ ವಾಸಿಸುವ ಕಾಳಿಂಗ ಸರ್ಪಗಳಿಗೂ, ಯೂನಿಕ್‌ ಐಡೆಂಟಿಟಿ ನಂಬರ್‌ಗಳನ್ನು (ಅನನ್ಯ ಗುರುತಿನ ಸಂಖ್ಯೆ) ಅಳವಡಿಸುವ ಕಾರ್ಯ ಸದ್ದಿಲ್ಲದೆ ನಡೆಯುತ್ತಿದೆ.

 • flood

  NEWS10, Sep 2019, 4:32 PM

  ವಿಚಿತ್ರ ಶಬ್ದ ಎಲ್ಲಿಂದ ಬರುತ್ತಿದೆ? ಪಶ್ಚಿಮ ಘಟ್ಟ ವಾಸಕ್ಕೆ ಅಪಾಯಕಾರಿಯೇ?

  ಕಳೆದ ವರ್ಷ ಕೇರಳ, ಕೊಡಗು... ಈ ವರ್ಷ ಉತ್ತರ ಕನ್ನಡ, ಚಿಕ್ಕಮಗಳೂರಲ್ಲಿ ಗುಡ್ಡ ಕುಸಿತ, ಪಶ್ಚಿಮ ಘಟ್ಟವಾಸಕ್ಕೆ ಅಪಾಯಕಾರಿಯೇ?| ಕಾಡು ಬೋಳಾಗಿ, ನೀರು ಹಿಡಿದಿಟ್ಟುಕೊಳ್ಳದ ಕಾರಣ ಗುಡ್ಡ ಕುಸಿತ ಸಂಭವಿಸುತ್ತಿದೆ ಎಂಬ ಹಳೆಯ ವಾದವನ್ನು ಪುನಃ ಪರಿಶೀಲಿಸಬೇಕಿದೆ. ಈ ವರ್ಷ ಗುಡ್ಡ ಕುಸಿತ ಸಂಭವಿಸಿರುವ ಸ್ಥಳಗಳಲ್ಲಿ ಮಾನವನ ಹಸ್ತಕ್ಷೇಪವೇ ಆಗಿಲ್ಲದ ಜಾಗಗಳು ಹೆಚ್ಚಿವೆ. ಹಾಗಿದ್ದರೆ ಪಶ್ಚಿಮ ಘಟ್ಟದ ಭೂತಳದಲ್ಲಿ ನೈಸರ್ಗಿಕವಾಗಿಯೇ ಏನಾದರೂ ವಿದ್ಯಮಾನ ಘಟಿಸುತ್ತಿದೆಯೇ? ಅಧ್ಯಯನ ನಡೆಯಬೇಕಿದೆ.

 • কলকাতায় বৃষ্টি শুরু

  Karnataka Districts4, Sep 2019, 10:24 AM

  ಘಟ್ಟದಲ್ಲಿ ಮತ್ತೆ ಬಿರುಸಿನ ಮಳೆ: ಆತಂಕದಲ್ಲಿ ಜನ

  ಘಟ್ಟಪ್ರದೇಶದಲ್ಲಿ ಮತ್ತೆ ಮಳೆ ಆರಂಭವಾಗಿದ್ದು, ಕಳೆದ ಮೂರು ದಿನಗಳಿಂದ ಬಿಡದೇ ಮಳೆ ಸುರಿದಿದೆ. ಇದರಿಂದ ಮಲೆನಾಡಿನಲ್ಲಿ ಮತ್ತೆ ಆತಂಕ ಸೃಷ್ಟಿಯಾಗಿದೆ. ಆದರೆ ಆರ್ಭಟದ ಮಳೆ ಬದಲಾಗಿ ಆಗಾಗ್ಗೆ ಒಮ್ಮೆ ಜೋರಾಗಿ ಸುರಿಯುವುದು ಮತ್ತು ಬಳಿಕ ಜಿಟಿ ಜಿಟಿ ಮಳೆ ಕಂಡುಬರುತ್ತಿದೆ.

 • Sadguru Vasudev
  Video Icon

  NEWS3, Sep 2019, 9:27 AM

  ಕಾವೇರಿ ಕೂಗು : ಸದ್ಗುರು ಜೊತೆ ಕೆಜಿಎಫ್ ನಟಿ ಸಂವಾದ

  ಕಾವೇರಿ ಕೂಗು ಅಭಿಯಾನ ಹುಟ್ಟು ಹಾಕಿರುವ ಜಗ್ಗಿ ವಾಸುದೇ ವ್  ಕಾವೇರಿ ತವರೂರು ಕೊಡಗಿನಲ್ಲಿ ವಾಸ್ತವ್ಯ ಹೂಡಿದ್ದಾರೆ. ಸದ್ಗುರು ಜೊತೆ ನಟಿ ಶ್ರೀನಿಧಿ ಶೆಟ್ಟಿ ಸಂವಾದ ನಡೆಸಿದ್ದಾರೆ. ಇದೇ ವೇಳೆ ಪಶ್ಚಿಮ ಘಟ್ಟಗಳ ಸೌಂದರ್ಯ ಕಂಡು ಸಂತಸ ವ್ಯಕ್ತಪಡಿಸಿದ್ದಾರೆ.  

 • Charmadi Ghat

  Karnataka Districts24, Aug 2019, 11:52 AM

  ಚಾರ್ಮಾಡಿ ಘಾಟ್‌: ಪ್ರಕೃತಿ ಸೊಬಗಿಗಿಂತ ಕುಸಿತದ ಆತಂಕವೇ ಹೆಚ್ಚು...!

  ಬೆಳ್ತಂಗಡಿಯ ಸುಪ್ರಸಿದ್ಧ ಚಾರ್ಮಾಡಿ ಕಣಿವೆಯ ಘಾಟಿ ರಸ್ತೆಯಲ್ಲಿ ಮಳೆಗಾಲದಲ್ಲಿ ಇಳಿಯುವಾಗ ಅಥವಾ ಹತ್ತುವಾಗ ನೀರಿನ ಜಲಪಾತಗಳು, ಬಳುಕುವ ಝರಿಗಳನ್ನು ನೋಡುವುದೇ ಒಂದು ಸೊಬಗು. ಆದರೆ ಈ ಬಾರಿ ಮಾತ್ರ ಎಲ್ಲಿ ನೋಡಿದರಲ್ಲಿ ಭೂ ಕುಸಿತದ ದೃಶ್ಯಗಳೇ ಕಾಣಸಿಗುತ್ತಿವೆ.

 • WESTERN GHATS

  Karnataka Districts20, Aug 2019, 4:41 PM

  ಪಶ್ಚಿಮ ಘಟ್ಟ ಉಳಿಸದಿದ್ದರೆ ನಾಡಿಗೆ ಅಪಾಯ ಕಟ್ಟಿಟ್ಟ ಬುತ್ತಿ

  ಪಶ್ಚಿಮ ಘಟ್ಟ ಅಪಾಯದ ಅಂಚಿನಲ್ಲಿ ಇದೆ ಎನ್ನುವುದು ಎಲ್ಲರಿಗೂ ಗೊತ್ತಿರುವು ವಿಷಯ. ಆದರೆ, ಇದರ ಸಂರಕ್ಷಣೆಗೆ ತೆಗೆದುಕೊಂಡ ಕ್ರಮಗಳು ಮಾತ್ರ ಗೊತ್ತಾಗುತ್ತಿಲ್ಲ. ಹೀಗೇ ನಮ್ಮ ನಿಸರ್ಗವನ್ನು ನಿರ್ಲಕ್ಷಿಸಿದರೇ ಇಡೀ ಕರ್ನಾಟಕಕ್ಕೆ ಅಪಾಯ ಎನ್ನುತ್ತಿದ್ದಾರೆ ಪರಿಸರ ತಜ್ಞರು.

 • Western Ghats, Maharashtra, Goa, Karnataka, Tamil Nadu and Kerala: Older than the Himalayas, the Western Ghats are recognised as one of the world’s eight ‘hottest hotspots’ of biological diversity.

  Karnataka Districts15, Aug 2019, 2:49 PM

  ಶಿವಮೊಗ್ಗ: ಘಟ್ಟಪ್ರದೇಶದಲ್ಲಿ ತುಂತುರು ಮಳೆ ಆರಂಭ

  ಮಲೆನಾಡಿನಲ್ಲಿ ಬಿರುಸಿನ ಗಾಳಿ ಮಳೆ ಮಾಯವಾಗಿ ಈಗ ತುಂತುರು ಮಳೆ ಸುರಿಯುತ್ತಿದೆ. ಘಟ್ಟ ಪದೇಶಗಳಲ್ಲಿ ತುಂತುರು ಮಳೆಯಾಗುತ್ತಿದ್ದು, ಶಿವಮೊಗ್ಗ ಸೇರಿದಂತೆ ಬಯಲು ನಾಡಿನ ಪ್ರದೇಶಗಳಲ್ಲಿ ಮಳೆ ಇಲ್ಲ. ಘಟ್ಟ ಪ್ರದೇಶದಲ್ಲಿ ಮತ್ತೊಮ್ಮೆ ಜಿಟಿಜಿಟಿ ಮಳೆ ಆರಂಭವಾಗಿರುವುದು ಜನರನ್ನು ಆತಂಕಕ್ಕೆ ದೂಡಿದೆ.

 • western ghats rivers mangalore

  Karnataka Districts12, Aug 2019, 5:08 PM

  ಪಶ್ಚಿಮ ಘಟ್ಟದಲ್ಲಿ ವ್ಯಾಪಕ ಭೂಕುಸಿತ: ನದಿಯಾಗಿ ಬದಲಾದ ತೊರೆಗಳು!

  ಪಶ್ಚಿಮ ಘಟ್ಟದಲ್ಲಿ ವ್ಯಾಪಕ ಭೂಕುಸಿತ ಬೆಳಕಿಗೆ| ಭಾರಿ ಪ್ರಮಾಣದಲ್ಲಿ ಕುಸಿದ ಗುಡ್ಡಗಳು| ತಪ್ಪಲಿನ ನಿವಾಸಿಗಳ ಸ್ಥಳಾಂತರ| ನದಿಯಾದಿ ಬದಲಾದ ತೊರೆಗಳು!

 • undefined

  Karnataka Districts7, Aug 2019, 1:41 PM

  ಭಾರೀ ಮಳೆ: ಘಾಟಿಯಲ್ಲಿ10ಕ್ಕೂ ಹೆಚ್ಚು ಕಡೆ ಭೂ ಕುಸಿತ

  ಚಾರ್ಮಾಡಿ ಘಾಟಿ ಪ್ರದೇಶದಲ್ಲಿ ಕಳೆದ ಎರಡು ದಿನಗಳಿಂದ ಭಾರೀ ಮಳೆ ಸುರಿಯುತ್ತಿದ್ದು, ಘಾಟಿಯಲ್ಲಿ ಸುಮಾರು ಹತ್ತಕ್ಕೂ ಹೆಚ್ಚು ಕಡೆ ಭೂ ಕುಸಿತಗಳಾಗಿವೆ. ಘಾಟಿಯ ಎರಡು ಹಾಗೂ ಮೂರನೇ ತಿರುವಿನ ನಡುವೆ ದೊಡ್ಡ ಪ್ರಮಾಣದ ಭೂಕುಸಿತವಾಗಿದ್ದು, ರಸ್ತೆಯ ಚರಂಡಿ ಸಂಪೂರ್ಣವಾಗಿ ಮುಚ್ಚಿಹೋಗಿದ್ದು ತಡೆಗೋಡೆಯ ಮೇಲೆ ನೀರು ಹರಿಯುತ್ತಿದ್ದು ಇಡೀ ರಸ್ತೆ ಹಾಗೂ ತಡೆಗೋಡೆ ಕುಸಿಯುವ ಅಪಾಯವಿದೆ.