ಪರಿಹಾರ ವಸ್ತುಗಳು  

(Search results - 5)
 • Relief Materials

  Karnataka Districts16, Aug 2019, 1:26 PM

  ಮಂಡ್ಯ: ನೆರೆ ಸಂತ್ರಸ್ತರಿಗೆ 10 ಲಾರಿ ಸಾಮಗ್ರಿ ರವಾನೆ

  ಶಿವಮೊಗ್ಗ ಹಾಗೂ ಉತ್ತರ ಕರ್ನಾಟಕದಲ್ಲಿ ಪ್ರವಾಹ ಸಂತ್ರಸ್ತರಿಗಾಗಿ ಶಾಸಕ ಡಿ.ಸಿ.ತಮ್ಮಣ್ಣ ಪ್ರತಿಷ್ಠಾನದ ವತಿಯಿಂದ 50 ಲಕ್ಷ ರು. ಮೌಲ್ಯದ ಪರಿಹಾರ ಸಾಮಗ್ರಿಗಳನ್ನು ರವಾನಿಸುವ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಪ್ರತಿಷ್ಠಾನದ ಅಧ್ಯಕ್ಷೆ ಸೌಮ್ಯರಮೇಶ್‌ ಹಸಿರು ನಿಶಾನೆ ತೋರಿಸುವ ಮೂಲಕ ಪರಿಹಾರ ಸಾಮಗ್ರಿಗಳನ್ನು ಹೊತ್ತ 10 ಲಾರಿಗಳಿಗೆ ಚಾಲನೆ ನೀಡಿದರು

 • Relief Materials

  Karnataka Districts15, Aug 2019, 2:33 PM

  ಶಿವಮೊಗ್ಗ: ಪರಿಹಾರ ಸಾಮಾಗ್ರಿ ಸಂಗ್ರಹ

  ಶಿವಮೊಗ್ಗದ ಮಹಾನಗರ ಪಾಲಿಕೆ ಆವರಣದ ನೆರೆ ಪರಿಹಾರ ಕೇಂದ್ರಕ್ಕೆ ಸಾಕಷ್ಟು ಪ್ರಮಾಣದಲ್ಲಿ ಪರಿಹಾರ ವಸ್ತುಗಳು ಬಂದು ಸೇರಿದ್ದು, ಆದ್ಯತೆಯ ಮೇರೆ ವಸಗ್ತುಗಳನ್ನು ಹಂಚಲು ತೀರ್ಮಾನಿಸಲಾಗಿದೆ. ಪಾಲಿಕೆ ಸಿಬ್ಬಂದಿ ಹಗಲಿರುಳೆನ್ನದೆ ಸಾಮಾಗ್ರಿಗಳನ್ನು ಪ್ರತ್ಯೇಕವಾಗಿಸಿ ಕಿಟ್‌ ರೂಪದಲ್ಲಿ ಸಿದ್ಧಪಡಿಸುತ್ತಿದ್ದಾರೆ.

 • Relief Materials

  Karnataka Districts14, Aug 2019, 12:20 PM

  ತುಮಕೂರು: ನೆರೆ ಸಂತ್ರಸ್ತರಿಗೆ ಸಾಮಾಗ್ರಿ ಸಂಗ್ರಹ

  ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗಾಗಿ ತಿಪಟೂರು ಲೈಫ್ ಎಂಪವರ್‌ಮೆಂಟ್‌ ಸಂಸ್ಥೆಯು ಬಟ್ಟೆ, ನೀರು, ಆಹಾರ ಇತರ ಸಾಮಾಗ್ರಿಗಳನ್ನು ಸಂಗ್ರಹಿಸಿ ಬಾಗಲಕೋಟೆಗೆ ಕಳುಹಿಸಿದೆ. ನೇರವಾಗಿ ಅಲ್ಲಿನ ಸಂತ್ರಸ್ತರಿಗೆ ವಸ್ತುಗಳನ್ನು ತಾವೇ ನೀಡಲು ಸಂಸ್ಥೆಯ ಅಧ್ಯಕ್ಷ ಸಿ.ಎಸ್‌.ರೇಣುಕಾರಾಧ್ಯ, ಹರೀಶ್‌, ಮನು, ಕಿರಣ್‌, ಧನು, ಪ್ರಕಾಶ್‌, ರವಿ, ತೇಜು, ಜಯಾನಂದಯ್ಯ ಸೇರಿದಂತೆ ಇತರರು ತೆರಳಿದರು.

 • flood in karnataka

  Karnataka Districts13, Aug 2019, 1:58 PM

  ನೆರೆ ಸಂತ್ರಸ್ತರಿಗಾಗಿ ಜೋಳಿಗೆ ಹಿಡಿದ ಸಿದ್ದಲಿಂಗ ಸ್ವಾಮೀಜಿ

  ಜಲಪ್ರಳಯದಿಂದ ಉತ್ತರ ಕರ್ನಾಟಕ ಸೇರಿ 17 ಜಿಲ್ಲೆಯ ಜನರು ಸಂತ್ರಸ್ತರಾಗಿದ್ದು, ಇವರ ನೆರವಿಗೆ ಧಾವಿಸಿರುವ ಸಿದ್ಧಗಂಗಾ ಮಠಾಧ್ಯಕ್ಷ ಡಾ. ಸಿದ್ದಲಿಂಗ ಸ್ವಾಮೀಜಿ ಜೋಳಿಗೆ ಹಿಡಿದು ಧಾನ್ಯ ಸೇರಿ ಇತರ ವಸ್ತುಗಳನ್ನು ಸಂಗ್ರಹಿಸಿದ್ದಾರೆ. ಒಟ್ಟು 4 ಟನ್ ವಸ್ತುಗಳು ಸಂಗ್ರಹವಾಗಿದೆ. ನಗದು ನಿರಾಕರಿಸಿ ವಸ್ತುಗಳನ್ನಷ್ಟೇ ಸಂಗ್ರಹಿಸಲಾಗಿದೆ.

 • Relief Materials

  Karnataka Districts13, Aug 2019, 8:14 AM

  ಚಿಕ್ಕಬಳ್ಳಾಪುರ : ನೆರೆ ಸಂತ್ರಸ್ತರಿಗೆ ನೆರವಿನ ಮಹಾಪೂರ

  ನೆರೆಯಿಂದ ಸಂತ್ರಸ್ತರಾದ ಜನರರಿಗಾಗಿ ಕೋಲಾರದ ಜನ ಅಗತ್ಯ ವಸ್ತುಗಳನ್ನು ಸಂಗ್ರಹಿಸಿ ಕಳುಹಿಸಿದ್ದಾರೆ. ನಾನಾ ಸಂಘ ಸಂಸ್ಥೆಗಳು, ರಾಜಕೀಯ ಪಕ್ಷಗಳು, ಸಾರ್ವಜನಿರು ಅಪಾರ ಪ್ರಮಾಣದಲ್ಲಿ ಆಹಾರ ಸಾಮಗ್ರಿ ಮತ್ತಿತರ ಅಗತ್ಯ ವಸ್ತುಗಳನ್ನು ನೀಡಿದ್ದಾರೆ. ಸೋಮವಾರ ಬಕ್ರೀದ್‌ ಹಬ್ಬ ಇದ್ದು, ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದ ಮುಸ್ಲಿಂರು ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗಾಗಿ ದೇಣಿಗೆ ಸಂಗ್ರಹಿಸಿದರು.