ಪತ್ರಿಕಾಗೋಷ್ಠಿ  

(Search results - 48)
 • siddaramaiah deve gowda
  Video Icon

  NEWS23, Aug 2019, 1:32 PM IST

  ದೇವೇಗೌಡ್ರ ವಿರುದ್ಧ ಸಿದ್ದು ಗರಂ; ಕಾಂಗ್ರೆಸ್-ಜೆಡಿಎಸ್ ಮೈತ್ರಿ ಖತಂ!

  ಮೈತ್ರಿ  ಸರ್ಕಾರ ಪತನಕ್ಕೆ ಸಿದ್ದರಾಮಯ್ಯ ಕಾರಣ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಆರೋಪಿಸಿದ್ದರು. ಅದಕ್ಕೆ ಪತ್ರಿಕಾಗೋಷ್ಠಿ ಕರೆದು ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದರು. ರಾಜ್ಯ ರಾಜಕೀಯದ ಇತಿಹಾಸದ ಪುಟಗಳನ್ನು ಕೆದಕಿ, ದೇವೇಗೌಡರ ವಿರುದ್ಧ ಸಿದ್ದರಾಮಯ್ಯ ಪ್ರಹಾರ ನಡೆಸಿದರು. ಆ ಮೂಲಕ ತಮ್ಮಿಬ್ಬರ ಮೈತ್ರಿ ಮುಗಿದಿದೆ ಎಂಬ ಸಂದೇಶವನ್ನೂ ನೀಡಿದರು. ಬನ್ನಿ ಅವರೇನು ಹೇಳಿದ್ದಾರೆ ಕೇಳೋಣ... 

 • Chidu House

  NEWS21, Aug 2019, 9:36 PM IST

  ಕೈ ಕಚೇರಿ ಮುಂದೆ ಹೈಡ್ರಾಮಾ: ಚಿದು ಮನೆ ಗೇಟ್ ಜಿಗಿದ ಅಧಿಕಾರಿಗಳು!

  ದೆಹಲಿಯ ಕಾಂಗ್ರೆಸ್ ಕಚೇರಿಯಲ್ಲಿ ತುರ್ತು ಸುದ್ದಿಗೋಷ್ಠಿ ನಡೆಸಿದ ಪಿ.ಚಿದಂಬರಂ, ಪತ್ರಿಕಾಗೋಷ್ಠಿ ಮುಗಿಯುತ್ತಿದ್ದಂತೇ ಮತ್ತೆ ಪರಾರಿಯಾದ ಘಟನೆ ನಡೆದಿದೆ. ಚಿದಂಬರಂ ಕಚೇರಿಯಿಂದ ನಿರ್ಗಮಿಸಿದ ಕುರಿತು ಮಾಹಿತಿ ಪಡೆದ ಅಧಿಕಾರಿಗಳು, ನೇರವಾಗಿ ಚಿದು ಮನೆಗೆ ಲಗ್ಗೆ ಇಟ್ಟರು. ಅಲ್ಲದೇ ಒತ್ತಾಯಪೂರ್ವಕವಾಗಿ ಮನೆಯ ಗೇಟ್’ನ್ನು ತೆರೆದು ಒಳ ನುಗ್ಗಿದ್ದಾರೆ.

 • Chidambaram

  NEWS21, Aug 2019, 8:57 PM IST

  ಚಿದಂಬರಂ ಪ್ರತ್ಯಕ್ಷ: ಕೇಂದ್ರ ಆಟ ಆಡ್ತಿದೆಯಂತೆ ಪರೋಕ್ಷ!

  ನಿನ್ನೆ ಸಂಜೆಯಿಂದ ನಾಪತ್ತೆಯಾಗಿದ್ದ ಪಿ.ಚಿದಂಬರಂ ಇಂದು ಕಾಂಗ್ರೆಸ್ ಕೇಂದ್ರ ಕಚೇರಿಯಲ್ಲಿ ದಿಢೀರ್ ಪ್ರತ್ಯಕ್ಷರಾಗಿದ್ದು, ತುರ್ತು ಪತ್ರಿಕಾಗೋಷ್ಠಿ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಪರೋಕ್ಷವಾಗಿ ಹರಿಹಾಯ್ದರು. ತಾವು ಪರಾರಿಯಾಗಿರುವುದಾಗಿ ಮಾಧ್ಯಮಗಳು ಸುಳ್ಳು ಸುದ್ದಿ ಹಬ್ಬಿಸಿವೆ ಎಂದು ಅವರು ಕಿಡಿಕಾರಿದರು.

 • Video Icon

  NEWS17, Aug 2019, 2:41 PM IST

  ಟೆರರ್ ಅಲರ್ಟ್: ಶಂಕಿತರನ್ನು ಮಂಗಳೂರು ಪೊಲೀಸರು ಖೆಡ್ಡಾಗೆ ಬೀಳಿಸಿದ್ದು ಹೀಗೆ...

  ದೇಶದ ಹಲವು ನಗರಗಳಲ್ಲಿ ಟೆರರ್ ಅಲರ್ಟ್ ಘೋಷಿಸಲಾಗಿದೆ. ಮಂಗಳೂರಿನಲ್ಲಿ ಕಾರಿಗೆ ನ್ಯಾಶನಲ್ ಕ್ರೈಮ್ ಇನ್ವೆಸ್ಟಿಗೇಶನ್ ಬ್ಯೂರೋ ಹೆಸರಿನ ಬೋರ್ಡ್ ಹಾಕಿಕೊಂಡು ಸಂಶಯಾಸ್ಪದವಾಗಿ ಓಡಾಡುತ್ತಿದ್ದ  8 ಮಂದಿ ಶಂಕಿತರನ್ನು  ಪೊಲೀಸರು ಬಂಧಿಸಿದ್ದಾರೆ.  ಆರೋಪಿಗಳನ್ನು ಮದನ್ ಕುಮಾರ್, ಸ್ಯಾಮ್ ಪೀಟರ್, ಸುನೀಲ್ ರಾಜು, ಮೊಹಿನುದ್ದಿನ್, ಚಿನ್ನಪ್ಪ, ಲತೀಫ್, ಬೋಪಣ್ಣ, ಕೋದಂಡ ರಾಮು ಎಂದು ಗುರುತಿಸಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ. ಈ ಬಗ್ಗೆ ಮಂಗಳೂರು ನಗರ ಕಮಿಷನರ್ ಡಾ. ಪಿ.ಎಸ್. ಹರ್ಷ ಪತ್ರಿಕಾಗೋಷ್ಠಿ ನಡೆಸಿ ಘಟನೆಯನ್ನು ವಿವರಿಸಿದ್ದಾರೆ.

 • NEWS25, Jul 2019, 8:21 AM IST

  ಹೇಗೆ ಅಸ್ಥಿರತೆ ಉಂಟಾಗುತ್ತದೆ ಎಂದು ಊಹಿಸಲಸಾಧ್ಯ: ಎಚ್‌ಡಿಕೆ ಎಚ್ಚರಿಕೆ

  ಮುಂದಿನ ಸರ್ಕಾರಕ್ಕೂ ಅಸ್ಥಿರತೆ: ಎಚ್‌ಡಿಕೆ ಎಚ್ಚರಿಕೆ| ಹೇಗೆ ಅಸ್ಥಿರತೆ ಉಂಟಾಗಲಿದೆ ಎಂದು ಊಹಿಸಲಸಾಧ್ಯ| ಪತ್ರಿಕಾಗೋಷ್ಠಿ ನಡೆಸಿ ಅಧಿಕಾರಿಗಳಿಗೆ ಧನ್ಯವಾದ ಹೇಳಿದ ಹಂಗಾಮಿ ಸಿಎಂ

 • trump

  NEWS23, Jul 2019, 5:45 PM IST

  ನಂಗೆ ಪಾಕ್ ರಿಪೋರ್ಟರ್ಸ್ ಇಷ್ಟ: ಟ್ರಂಪ್ ಸಹಿಸೋದು ಅಮೆರಿಕಕ್ಕೂ ಕಷ್ಟ!

  ಟ್ರಂಪ್-ಇಮ್ರಾನ್ ಅಧಿಕೃತ ಪತ್ರಿಕಾಗೋಷ್ಠಿಯಲ್ಲಿ, ತಮಗೆ ಅಮೆರಿಕದ ಪತ್ರಕರ್ತರಿಗಿಂತ ಪಾಕಿಸ್ತಾನದ ಪತ್ರಕರ್ತರು ಇಷ್ಟ ಎಂದು ಅಮೆರಿಕದ ಅಧ್ಯಕ್ಷ ಟ್ರಂಪ್ ಹೇಳಿದ್ದಾರೆ.

 • Video Icon

  Karnataka Districts20, Jun 2019, 3:41 PM IST

  ವ್ಯಕ್ತಿಗೆ ಬೈದಿದ್ದೇನೆ, ಕುರುಬ ಸಮುದಾಯವನ್ನಲ್ಲ, ಕ್ಷಮೆ ಇರಲಿ: ಸುರೇಶ್ ಗೌಡ

  ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ತುಮಕೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿಯ ಮಾಜಿ ಶಾಸಕ ಸುರೇಶ್ ಗೌಡ, ವ್ಯಕ್ತಿಗೆ ಬೈದಿದ್ದೇನೆ, ಕುರುಬ ಸಮುದಾಯವನ್ನಲ್ಲ ಎಂದು ಸ್ಪಷ್ಟನೆ ನೀಡಿದರು. ನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ, ಎಂದರು

 • Video Icon

  Lok Sabha Election News24, May 2019, 6:17 PM IST

  ಮಾತಿಲ್ಲ, ಕತೆಯಿಲ್ಲ; ಮೌನಕ್ಕೆ ಶರಣಾದ ಎಚ್‌ಡಿಕೆ!

  ಲೋಕಸಭೆ ಚುನಾವಣೆಯಲ್ಲಿ ಮೈತ್ರಿಕೂಟ ಹೀನಾಯ ಸೋಲನ್ನುಂಡಿದೆ. ಮಂಡ್ಯದಲ್ಲಿ ಪುತ್ರ ನಿಖಿಲ್ ಕುಮಾರಸ್ವಾಮಿ, ತುಮಕೂರಿನಲ್ಲಿ ಅಪ್ಪಾಜಿ ಎಚ್.ಡಿ. ದೇವೇಗೌಡರು ಸೋತಿರುವುದು ಸಿಎಂ ಎಚ್.ಡಿ. ಕುಮಾರಸ್ವಾಮಿ ಆಘಾತ ಉಂಟುಮಾಡಿದೆಯಾ? ಶುಕ್ರವಾರ ನಡೆದ ಸಚಿವರ ಸಭೆಯಲ್ಲೂ ದೀರ್ಘ ಮೌನಕ್ಕೆ ಶರಣಾಗಿದ್ದ ಎಚ್ ಡಿಕೆ, ಪತ್ರಿಕಾಗೋಷ್ಠಿಯಲ್ಲೂ ಪತ್ರಕರ್ತರ ಪ್ರಶ್ನೆಗೆ ಮೌನ ಮುರಿಯಲಿಲ್ಲ. 
   

 • Rahul Gandhi

  Lok Sabha Election News23, May 2019, 6:13 PM IST

  ಜನತೆಯ ತೀರ್ಪು ಗೌರವಿಸುತ್ತೇವೆ: ರಾಹುಲ್ 5 ನಿಮಿಷದ "ದಿಲ್ ಕಿ ಬಾತ್'!

  ಲೋಕಸಭೆ ಚುನಾವಣೆಯ ಫಲಿತಾಂಶದ ಬಳಿಕ ಮೊದಲ ಪತ್ರಿಕಾಗೋಷ್ಠಿ ನಡೆಸಿದ ರಾಹುಲ್ ಗಾಂಧಿ, ಜನಾದೇಶವನ್ನು ಗೌರವಿಸುವುದಾಗಿ ಘೋಷಿಸಿದ್ದಾರೆ.

 • congress try to form govt in goa

  Lok Sabha Election News17, May 2019, 7:32 PM IST

  ಪ್ರಧಾನಿ ಮೋದಿ ಪತ್ರಿಕಾಗೋಷ್ಠಿ ಅದ್ಭುತ: ರಾಹುಲ್ ವ್ಯಂಗ್ಯ!

  ಪ್ರಧಾನಿ ಹುದ್ದೆಗೇರಿದ ಐದು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಸುದ್ದಿಗೋಷ್ಠಿ ನಡೆಸಿದ ಪ್ರಧಾನಿ ಮೋದಿ ನಡೆಯನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಟೀಕಿಸಿದ್ದಾರೆ.

 • BJP

  Lok Sabha Election News17, May 2019, 5:32 PM IST

  ಗಾಂಭೀರ್ಯತೆ, ಹಾಸ್ಯ, ಭವಿಷ್ಯ: ಮೋದಿ ಮೊದಲ ಸುದ್ದಿಗೋಷ್ಠಿ ವಿಷ್ಯ!

  ಪ್ರಧಾನಿ ಹುದ್ದೆಗೇರಿದ ಬಳಿಕ ಇದೇ ಮೊದಲ ಬಾರಿಗೆ ಪತ್ರಿಕಾಗೋಷ್ಠಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ಭಾರೀ ಬಹುಮತದೊಂದಿಗೆ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

 • Atishi

  Lok Sabha Election News9, May 2019, 4:27 PM IST

  ಪತ್ರಿಕಾಗೋಷ್ಠಿಯಲ್ಲಿ ಕಣ್ಣೀರಿಟ್ಟ ಆಪ್ ಅಭ್ಯರ್ಥಿ: 'ಗಂಭೀರ' ಆರೋಪಗಳಿಗೆ ಹೈರಾಣು!

  ತಮ್ಮ ವಿರುದ್ಧ ಅವಹೇಳನಕಾರಿ ಮತ್ತು ಕೀಳು ಪದಗಳನ್ನು ಬಳಸಿ ಕರಪತ್ರಗಳನ್ನು ಹಂಚಲಾಗಿದೆ ಎಂದು ಆರೋಪಿಸಿ ಪೂರ್ವ ದೆಹಲಿ ಆಪ್ ಅಭ್ಯರ್ಥಿ ಅತಿಶಿ ಪತ್ರಿಕಾಗೋಷ್ಠಿಯಲ್ಲಿ ಕಣ್ಣೀರಿಟ್ಟ ಪ್ರಸಂಗ ನಡೆದಿದೆ.

 • Video Icon

  Koppal20, Apr 2019, 2:08 PM IST

  ಲಿಫ್ಟ್‌ನಲ್ಲಿ ಸಿಕ್ಕಿಹಾಕಿಕೊಂಡ ಸಚಿವ; ಪರದಾಡಿದ್ರು ಕೈಯಲ್ಲಿ ಹಿಡ್ಕೊಂಡು ಜೀವ!

  ಕೊಪ್ಪಳಕ್ಕೆ ಆಗಮಿಸಿದ್ದ ಸಚಿವ ಪುಟ್ಟರಂಗ ಶೆಟ್ಟಿ ಖಾಸಗಿ ಹೊಟೇಲ್ ಒಂದರ ಲಿಫ್ಟ್‌ನಲ್ಲಿ ಸಿಕ್ಕಿಹಾಕಿಕೊಂಡ ಘಟನೆ ನಡೆದಿದೆ. ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಬೇಕಾಗಿದ್ದ ಸಚಿವರು ಸುಮಾರು 5 ನಿಮಿಷ ಲಿಫ್ಟ್‌ನಲ್ಲಿ ಸಿಕ್ಕಿಬಿದ್ದಿದ್ದರು. ಕೂಡಲೇ ಕಾರ್ಯಪ್ರವೃತ್ತರಾದ ಸಿಬ್ಬಂದಿ, ಲಿಫ್ಟ್ ಸರಿ ಮಾಡಿ ಸಚಿವರನ್ನು ಹೊರ ತಂದಿದ್ಧಾರೆ. 

 • Lok Sabha Election News17, Apr 2019, 6:07 PM IST

  ನಾಳೆ ಎಲೆಕ್ಷನ್: ಮೋದಿ ಪ್ರಚಾರಕ್ಕೆ ಅಡ್ಡಿಯಿಲ್ಲ ಎಂದ ಚುನಾವಣಾ ಆಯುಕ್ತ!

  ನಾಳೆ(ಏ.18)ರಾಜ್ಯದಲ್ಲಿ ಲೋಕಸಭೆಗೆ ಮೊದಲ ಹಂತದ ಚುನಾವಣೆ ನಡೆಯಲಿದ್ದು, ರಾಜ್ಯ ಚುನವಣಾ ಆಯುಕ್ತ ಸಂಜೀವ್ ಕುಮಾರ್ ಪತ್ರಿಕಾಗೋಷ್ಠಿ ನಡೆಸಿ ಸಿದ್ಧತೆಯ ಕುರಿತು ಮಾಹಿತಿ ನೀಡಿದರು.

 • Sumalatha
  Video Icon

  Lok Sabha Election News31, Mar 2019, 1:18 PM IST

  ನಮಗೆ 99 % ನ್ಯಾಯ ಸಿಗಲ್ಲ: ಸಿಎಂ ಮೇಲೆ ಸುಮಲತಾ ಆಕ್ರೋಶ

  ಸುಮಲತಾ ಪತ್ರಿಕಾಗೋಷ್ಠಿಯಲ್ಲಿ ಮುಖ್ಯವಾದ ವಿಡಿಯೋವೊಂದನ್ನು ಬಿಡುಗಡೆ ಮಾಡಬಹುದು ಎನ್ನಲಾಗಿತ್ತು. ಆದರೆ ಯಾವುದೇ ವಿಡಿಯೋ ಬಿಡುಗಡೆ ಮಾಡಿಲ್ಲ. ಸಿಎಂ ಕುಮಾರಸ್ವಾಮಿ, ಹಾಗೂ ಮಂಡ್ಯ ಡಿಸಿ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ನಿಖಿಲ್ ನಾಮಪತ್ರ ಸಲ್ಲಿಕೆ ಹಾಗೂ ನಂತರ ನಡೆದ ಬೆಳವಣಿಗೆಗಳ ಬಗ್ಗೆ ಇದ್ದ ಸಂಶಯವನ್ನು ಎಳೆ ಎಳೆಯಾಗಿ ಜನರೆದುರು ಬಿಚ್ಚಿಟ್ಟರು.