ಪಂಪ್‌ವೆಲ್‌  

(Search results - 17)
 • Pumpwell Flyover

  Karnataka Districts1, Mar 2020, 9:40 AM IST

  ಮಂಗಳೂರು: ಪಂಪ್‌ವೆಲ್ ಫ್ಲೖಓವರ್ ಆಯ್ತು, ಇನ್ನು ಬಸ್‌ಸ್ಟ್ಯಾಂಡ್

  445 ಕೋಟಿ ರು. ಅಂದಾಜು ವೆಚ್ಚದಲ್ಲಿ ಪಂಪ್‌ವೆಲ್‌ ಬಳಿ ಖಾಸಗಿ ಬಸ್‌ ನಿಲ್ದಾಣ ನಿರ್ಮಾಣ ಪ್ರಸ್ತಾವನೆಯನ್ನು ಅನುಮೋದನೆಗಾಗಿ ಸಂಪುಟದ ಮುಂದೆ ಇಡಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ಹೇಳಿದ್ದಾರೆ.

 • Flyover

  Karnataka Districts25, Feb 2020, 9:24 AM IST

  ಮಂಗಳೂರಿಗೆ ಮೆರುಗು ತುಂಬಿದ್ದ ಕಲಶ ಮರುಸ್ಥಾಪನೆ

  ಮಂಗಳೂರು ನಗರದ ಮುಕುಟಮಣಿ ಎನಿಸಿದ ಬೃಹತ್‌ ಕಲಶವನ್ನು ಮರು ಸ್ಥಾಪಿಸಲು ಸಿದ್ಧತೆ ನಡೆದಿದೆ. ನಗರದ ಪಂಪ್‌ವೆಲ್‌ನ ಮಹಾವೀರ ವೃತ್ತದಲ್ಲಿ ವಿರಾಜಮಾನವಾಗಿದ್ದ ಈ ಕಲಶವನ್ನು ಮೇಲ್ಸೇತುವೆ ಕಾಮಗಾರಿಗಾಗಿ ನಾಲ್ಕು ವರ್ಷ ಹಿಂದೆ ತೆರವುಗೊಳಿಸಲಾಗಿತ್ತು.

 • Pumpwell

  Karnataka Districts9, Feb 2020, 7:39 AM IST

  ಪಂಪ್‌ವೆಲ್‌ ಮೇಲ್ಸೇತುವೆಯಲ್ಲಿ ಭೀಕರ ಅಪಘಾತ: ಒಬ್ಬ ಸಾವು, ಐವರು ಗಂಭೀರ

  ಪಂಪ್‌ವೆಲ್‌ ಮೇಲ್ಸೇತುವೆಯಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಒಬ್ಬರು ಮೃತಪಟ್ಟರೆ ಐದು ಮಂದಿ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಲ್ಟೋ ಮತ್ತು ಡಸ್ಟರ್‌ ಕಾರುಗಳ ನಡುವೆ ಅಪಘಾತ ನಡೆದ ಬಳಿಕ ಆಲ್ಟೋ ಕಾರು ಮೇಲ್ಸೇತುವೆಯಿಂದ ಕೆಳಗೆ ಸರ್ವಿಸ್‌ ರಸ್ತೆಗೆ ಉರುಳಿ ಈ ಅವಘಡ ಸಂಭವಿಸಿದೆ. ವಾರದ ಹಿಂದೆಯಷ್ಟೆ ಉದ್ಘಾಟನೆಗೊಂಡಿರುವ ಪಂಪ್‌ವೆಲ್‌ ಮೇಲ್ಸೇತುವೆಯಲ್ಲಿ ಇದು ಮೊದಲ ಅಪಘಾತವಾಗಿದೆ.

 • Pumpwell Flyover
  Video Icon

  Karnataka Districts31, Jan 2020, 3:11 PM IST

  ಮಂಗಳೂರು ಪಂಪ್‌ವೆಲ್‌ ಫ್ಲೈಓವರ್‌ಗೆ ಕೊನೆಗೂ ಸಿಕ್ತು ಉದ್ಘಾಟನೆ ಭಾಗ್ಯ

  10 ವರ್ಷದ ನಂತರ ಮಂಗಳೂರಿನ ಪಂಪ್‌ವೆಲ್‌ ಫ್ಲೈ ಓವರ್‌ಗೆ ಕೊನೆಗೂ ಉದ್ಘಾಟನೆಯ ಭಾಗ್ಯ ದೊರೆತಿದೆ. ಸುಮಾರು 600 ಮೀ ಉದ್ದದ ಫ್ಲೈಓವರ್‌ ಕಾಮಗಾರಿ 2010ರಲ್ಲಿ ಆರಂಭವಾಗಿತ್ತು. ಐದಾರು ಬಾರಿ ಡೆಡ್‌ಲೈನ್ ಕೊಟ್ಟ ಮೇಲೆ ಇದೀಗ ಪಂಪ್‌ವೆಲ್‌ ಫ್ಲೈಓವರ್‌ಗೆ ಉದ್ಘಾಟನೆ ಭಾಗ್ಯ ಬಂದಿದೆ.

 • Nalin Kumar Kateel

  Karnataka Districts31, Jan 2020, 2:36 PM IST

  ಟ್ರೋಲಿಗರನ್ನು ಅಭಿನಂದಿಸಿದ ಸಂಸದ ನಳಿನ್

  ನನ್ನನ್ನು ಟೀಕೆ ಮಾಡಿದವರೇ ನನ್ನ ದೇವರು ಎಂದು ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ. ಮಂಗಳೂರು ಫ್ಲೈಓವರ್ ಉದ್ಘಾಟಿಸಿ ಮಾತನಾಡಿದ ಅವರು ಟ್ರೋಲ್ ಮಾಡಿದವರನ್ನು ಅಭಿನಂದಿಸಿದ್ದಾರೆ.

 • Pumpwell

  Karnataka Districts31, Jan 2020, 11:02 AM IST

  'ಬಲೆ ಪಂಪ್‌ವೆಲ್‌ಗೇ' BJPಯಿಂದ ತುಳುವಿನಲ್ಲೇ ಆಹ್ವಾನ..!

  10 ವರ್ಷಗಳ ಕಾಲ ಕಾಮಗಾರಿ ನಡೆದು ಕೊನೆಗೂ ಮಂಗಳೂರಿನ ಪಂಪ್‌ವೆಲ್‌ ಫ್ಲೈಓವರ್ ಕಾಮಗಾರಿ ಮುಗಿದು ಉದ್ಘಾಟನೆಯಾಗುತ್ತಿದೆ. ಈ ಕಾರ್ಯಕ್ರಮಕ್ಕೆ ಬಿಜೆಪಿ ತುಳುವಿನಲ್ಲಿಯೇ ಎಲ್ಲರನ್ನೂ ಆಹ್ವಾನಿಸಿದೆ.

 • Pumpwell Flyover
  Video Icon

  state31, Jan 2020, 9:55 AM IST

  10 ವರ್ಷದ ಬಳಿಕ ಪಂಪ್‌ವೆಲ್‌ ಫ್ಲೈಓವರ್‌ಗಿಂದು ಉದ್ಘಾಟನಾ ಭಾಗ್ಯ!

  ಮಂಗಳೂರಿನ ಪಂಪ್‌ವೆಲ್ ಫ್ಲೈ ಓವರ್ ಇಂದು ಉದ್ಘಾಟನೆ ಆಗಲಿದೆ. 10 ವರ್ಷದ ಬಳಿಕ ಕೊನೆಗೂ ಈ ಫ್ಲೈಓವರ್‌ಗೆ ಉದ್ಘಾಟನೆ ಭಾಗ್ಯ ಸಿಕ್ಕಿದೆ. ನಿಧಾನಗತಿಯ ಕಾಮಗಾರಿಯಿಂದಾಗಿ ಕುಖ್ಯಾತಿಗೊಳಗಾಗಿತ್ತು. ಹತ್ತಾರು ಡೆಡ್‌ ಲೈನ್‌ಗಳನ್ನು ಕಂಡಿದ್ದ ಕಾಮಗಾರಿ ಇದು. ಇಂದು ಸಂಸದ ನಳೀನ್ ಕುಮಾರ್ ಕಟೀಲ್ ಉದ್ಘಾಟನೆ ಮಾಡಲಿದ್ದಾರೆ. 

 • Pumpwell Flyover

  Karnataka Districts29, Jan 2020, 1:21 PM IST

  10 ವರ್ಷದ ನಂತರ ಪಂಪ್‌ವೆಲ್ ಫ್ಲೈ ಓವರ್ ಉದ್ಘಾಟನೆಗೆ ಮುಹೂರ್ತ ಫಿಕ್ಸ್!

  10 ವರ್ಷದ ಹಿಂದೆ ಕಾಮಗಾರಿ ಆರಂಭಿಸಿ ಹಲವು ಬಾರಿ ಗಡುವುಗಳು ಮುಗಿದು ಕೊನೆಗೂ ಮಂಗಳೂರು ಪಂಪ್‌ವೆಲ್‌ ಫ್ಲೈಓವರ್‌ಗೆ ಉದ್ಘಾಟನೆಗೆ ಮುಹೂರ್ತ ಫಿಕ್ಸ್‌ ಆಗಿದೆ. ಫ್ಲೈಓವರ್‌ ಉದ್ಘಾಟನೆಗೆ ಹಲವು ಬಾರಿ ಗಡುವು ಫಿಕ್ಸ್ ಮಾಡಿಯೂ ಕಾಮಗಾರಿ ಪೂರ್ತಿಯಾಗದೆ ಸಂಸದ ನಳಿನ್ ಕುಮಾರ್ ಟ್ರೋಲ್ ಆಗುತ್ತಲೇ ಇದ್ದರು.

 • Mangaluru

  Karnataka Districts25, Jan 2020, 7:48 AM IST

  ಕೊನೆಗೂ ಸಂಚಾರಕ್ಕೆ ಸಿದ್ಧವಾಯ್ತು ಪಂಪ್‌ವೆಲ್‌ ಮೇಲ್ಸೇತುವೆ!

  ದಶಕಗಳ ಕಾಲ ಕುಂಟುತ್ತಾ ಸಾಗಿದ ಮಂಗಳೂರಿನ ಬಹುನಿರೀಕ್ಷಿತ ಪಂಪ್‌ವೆಲ್‌ ಮೇಲ್ಸೇತುವೆ ಕಾಮಗಾರಿ ಕೊನೆಗೂ ಜನವರಿ ಅಂತ್ಯದೊಳಗೆ ಮುಕ್ತಾಯಗೊಳ್ಳುವುದು ಖಚಿತವಾಗಿದೆ.

 • Mangaluru

  Karnataka Districts8, Jan 2020, 1:55 PM IST

  ಪಂಪ್‌ವೆಲ್‌ ಫ್ಲೈಓವರ್‌ ವಿರುದ್ಧ ‘ಒಂಭತ್ತು ಕೆರೆ’ ಅಸ್ತ್ರ ಪ್ರಯೋಗ!

  ಇತ್ತೀಚೆಗೆ ಕಾಂಗ್ರೆಸ್‌ ಅಣಕು ಉದ್ಘಾಟನೆಯ ಮೂಲಕ ಬಿಜೆಪಿಗರಿಗೆ ಟಾಂಗ್‌ ಕೊಟ್ಟಿತ್ತು. ಇದೀಗ ಕಾಂಗ್ರೆಸ್‌ಗೆ ಸೆಡ್ಡು ಹೊಡೆದಿರುವ ಬಿಜೆಪಿ ಪಡೆ ಮಂಗಳೂರು ಕ್ಷೇತ್ರದಲ್ಲಿ ನೆನೆಗುದಿಗೆ ಬಿದ್ದಿರುವ ಒಂಭತ್ತುಕೆರೆ ಆಶ್ರಯ ಮನೆ ಯೋಜನೆಯನ್ನು ಮುನ್ನೆಲೆಗೆ ತಂದು ಕಾಂಗ್ರೆಸ್‌ ವಿರುದ್ಧ ಸೋಷಿಯಲ್‌ ವಾರ್‌ ಆರಂಭಿಸಿದೆ.

 • model

  Karnataka Districts2, Jan 2020, 8:24 AM IST

  ಪಂಪ್‌ವೆಲ್‌ ಮೇಲ್ಸೇತುವೆ ಕಾಮಗಾರಿ ಮುಗಿಯಲು ಕನಿಷ್ಠ 3 ತಿಂಗಳು..!

  ಮಂಗಳೂರಿನ ಸ್ಥಳೀಯ ಕಾರ್ಮಿಕರು ಹೇಳುವ ಪ್ರಕಾರ, ಮೇಲ್ಸೇತುವೆ ಕಾಮಗಾರಿ ಪೂರ್ಣಗೊಳ್ಳಲು ಕನಿಷ್ಟಮೂರು ತಿಂಗಳು ಬೇಕು. ಆದರೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಇಲಾಖೆ ಅಧಿಕಾರಿಗಳು ಆರಂಭದಲ್ಲಿ ಕೇವಲ 20 ದಿನ ಸಾಕು ಎಂದು ಹೇಳುತ್ತಿದ್ದರೂ, ಸಂಸದರು ನಡೆಸಿದ ಸಭೆಯಲ್ಲಿ ಮತ್ತೆ ಮೂರು ತಿಂಗಳು ಗಡುವು ಕೇಳುತ್ತಿದ್ದಾರೆ.

 • Flyover

  Karnataka Districts2, Jan 2020, 8:00 AM IST

  ಕಾಮಗಾರಿಯೇ ಮುಗಿಯದ ಪಂಪ್‌ವೆಲ್‌ ಫ್ಲೈಓವರ್‌ಗೆ ಕೊನೆಗೂ ಉದ್ಘಾಟನೆ ಭಾಗ್ಯ..?

  ಕಳೆದೊಂದು ದಶಕದಿಂದ ಕಾಮಗಾರಿ ಮುಗಿಯದೆ ಅತಿ ಹೆಚ್ಚು ಟ್ರೋಲ್‌ಗೆ ಒಳಗಾಗಿರುವ ಪಂಪ್‌ವೆಲ್‌ ಫ್ಲೈಓವರ್‌ ಕೊನೆಗೂ ಬುಧವಾರ ಉದ್ಘಾಟನೆಗೊಂಡಿತು! ಅದಕ್ಕಾಗಿ ಸ್ವತಃ ನಳಿನ್‌ ಕುಮಾರ್‌, ವೇದವ್ಯಾಸ ಕಾಮತ್‌ ಸೇರಿದಂತೆ ಬಿಜೆಪಿ ನಾಯಕರು ಬಂದಿದ್ದರು..!

 • Pumpwell

  Karnataka Districts1, Jan 2020, 8:51 AM IST

  'ಪಂಪ್‌ವೆಲ್ ಫ್ಲೈಓವರ್ ಉದ್ಘಾಟನೆ ಆಗಿಲ್ಲ, ಟೋಲ್ ಕೊಡಲ್ಲ'..!

  ಮಂಗಳೂರಿನ ಪಂಪ್‌ವೆಲ್‌ ಫ್ಲೈಓವರ್‌ ಕಾಮಗಾರಿ ಪೂರ್ತಿಯಾಗದ ಹಿನ್ನೆಲೆಯಲ್ಲಿ ಟೋಲ್ ಕಲೆಕ್ಷನ್ ನಿಲ್ಲಿಸಬೇಕೆಂದು ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಮಂಗಳೂರು ಟೋಲ್‌ ಗೇಟ್‌ ಬಳಿ ಜಮಾಯಿಸಿದ್ದಾರೆ.

 • Pumpwell

  Karnataka Districts31, Dec 2019, 4:49 PM IST

  ಪಂಪ್‌ವೆಲ್‌ ಫ್ಲೈ ಓವರ್‌ಗೆ 5 ಬಾರಿ ಡೆಡ್‌ಲೈನ್‌: ಸಂಸದ ನಳಿನ್ ಸಭೆ

  ಐದು ಬಾರಿ ಡೆಡ್‌ಲೈನ್ ನೀಡಿದ ಮೇಲೆಯೂ ಮಂಗಳೂರು ಪಂಪ್‌ವೆಲ್ ಫ್ಲೈ ಓವರ್ ಕೆಲಸ ಮಾತ್ರ ಮುಗಿದಿಲ್ಲ. 5ನೇ ಬಾರಿಯೂ ಸಂಸದ ನಳಿನ್ ಕುಮಾರ್ ಕಟೀಲ್ ನೀಡಿದ ಡೆಡ್ ಲೈನ್ ಫೇಲ್ ಆಗಿದೆ.

 • Pumpwell

  Karnataka Districts17, Nov 2019, 7:50 AM IST

  ಪಂಪ್‌ವೆಲ್‌ ಮೇಲ್ಸೇತುವೆ ಕಾಮಗಾರಿ ಪೂರ್ಣಕ್ಕೆ ಮತ್ತೊಂದು ಗಡುವು!

  ಸಾಮಾಜಿಕ ಜಾಲತಾಣಗಳಲ್ಲಿ ಐತಿಹಾಸಕ ತಾಣವೆಂಬ ಕುಖ್ಯಾತಿಗೆ ಒಳಗಾಗಿ ಸಾಕಷ್ಟುಟ್ರೋಲ್‌ ಆಗಿರುವ ಮಂಗಳೂರಿನ ಪಂಪ್‌ವೆಲ್‌ ಮೇಲ್ಸೇತುವೆ ಉದ್ಘಾಟನೆಗೆ ಮತ್ತೊಂದು ಗಡುವು ದೊರಕಿದೆ! ಪಂಪ್‌ವೆಲ್‌ ಮೇಲ್ಸೇತುವೆ ಕಾಮಗಾರಿಯನ್ನು ಶನಿವಾರ ವೀಕ್ಷಿಸಿದ ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಬಳಿಕ ಸುದ್ದಿಗಾರರಲ್ಲಿ ಮಾತನಾಡಿ, ಈ ಹೊಸ ಗಡುವು ಹೇಳಿದ್ದಾರೆ.