ಪಂಚಾಂಗ

(Search results - 623)

সংসারের অনটন ও আর্থিক সমস্যা দূর করুন, এই নিয়মে পুজো করুন সিদ্ধিদাতার

Video Icon

Panchanga7, Aug 2020, 8:36 AM

ಇಂದು ಸಂಕಷ್ಟ ಹರ ಗಣಪತಿ ವ್ರತ ಮಾಡಿದರೆ ಕಾರ್ಯಸಿದ್ಧಿಯಾಗುತ್ತದೆ

ಶುಭೋದಯ ಓದುಗರೇ, ಶ್ರೀ ಶಾರ್ವರಿ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಶ್ರಾವಣ ಮಾಸ, ಕೃಷ್ಣ ಪಕ್ಷ, ಚತುರ್ಥಿ ತಿಥಿ, ಪೂರ್ವಾಭಾದ್ರಾ ನಕ್ಷತ್ರ. ಈ ದಿನ ಸಂಕಷ್ಟ ಹರ ಗಣಪತಿ ವ್ರತ ಇದೆ. ಗಣಪತಿ ಆರಾಧನೆಯನ್ನು ನಾವು ರಾತ್ರಿ ಮಾಡಬೇಕು. ಅಥರ್ವ ಶೀರ್ಷ ಮಂತ್ರಗಳನ್ನು 21 ಬಾರಿ ಪಠಿಸಿ ಚಂದ್ರನ ದರ್ಶನ ಮಾಡಿ ವ್ರತ ಮುಕ್ತಾಯ ಮಾಡಬೇಕು. ಚಂದ್ರನ ಅನುಗ್ರಹಕ್ಕೆ, ಗಣಪತಿ ಅನುಗ್ರಹಕ್ಕೆ ಈ ವ್ರತ ಬಹಳ ದಿವ್ಯವಾದದ್ದು. ಇಂದಿನ ಪಂಚಾಂಗದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!

Mantralaya

Video Icon

Panchanga6, Aug 2020, 8:37 AM

ಗುರುವಾರ ರಾಯರ ನೆನೆಯಮ್ಮ.... ಮಂತ್ರಾಲಯದಲ್ಲಿ ರಥೋತ್ಸವದ ದಿನವಿದು

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಶ್ರಾವಣ ಮಾಸ, ಕೃಷ್ಣ ಪಕ್ಷ, ತೃತೀಯ ತಿಥಿ, ಶತಭಿಷ ನಕ್ಷತ್ರ. ಇಂದು ಮಂತ್ರಾಲಯದ ಉತ್ತರ ಆರಾಧನೆ ದಿನ. ಗುರುರಾಯರು ಭಕ್ತರ ಮನೆ ಬಾಗಿಲಿಗೆ ಬಂದು ಹರಸಿ ಹೋಗುತ್ತಾರೆ ಎಂಬುದು ರಥೋತ್ಸವದ ಅರ್ಥ. ಈ ಮೂರು ದಿನಗಳಲ್ಲಿ ರಾಯರು ಭಕ್ತರನ್ನು ಅನುಗ್ರಹಿಸುತ್ತಾರೆ, ಕಷ್ಟಗಳನ್ನು ಪರಿಹರಿಸುತ್ತಾರೆ ಎಂದರ್ಥ. ಇಂದಿನ ಪಂಚಾಂಗದ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ..!

Ram Mandir

Video Icon

Panchanga5, Aug 2020, 8:59 AM

ಪಂಚಾಂಗ: ರಾಮ ಮಂದಿರ ಮುಹೂರ್ತದ ಬಗ್ಗೆ ಶಾಸ್ತ್ರ ಹೇಳೋದು ಹೀಗೆ!

ಆಗಸ್ಟ್ 5 2020, ಬುಧವಾರದ ಪಂಚಾಂಗ| ಇದು ಅತ್ಯಂತ ಪ್ರಶಸ್ತವಾದ ದಿನ. ಇದು ಎಲ್ಲರಿಗೂ ಮನಸ್ಸಿನಲ್ಲಿ ಚಿರಸ್ಥಾಯಿಯಾಗಿ ಉಳಿಯುವಂತಹ ದಿನ. ನಮ್ಮ ಇಡೀ ದೇಶದ ದೇಗುಲ ರಾಮ ಮಂದಿರಕ್ಕಿಂದು ಶಂಕು ಸ್ಥಾಪನೆ. ಜೊತೆಗೆ ರಾಯರ, ರಾಘವೇಂದ್ರ ಸ್ವಾಮಿಗಳ ಮಧ್ಯ ಆರಾಧನೆ ದಿನ.

• Video Icon

Panchanga4, Aug 2020, 8:29 AM

ಪಂಚಾಂಗ: ಇಂದು ಗಾಯತ್ರಿ ಮಾತೆಯನ್ನು ಆರಾಧಿಸಿದರೆ ಶುಭ ಫಲ

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಶ್ರಾವಣ ಮಾಸ, ಕೃಷ್ಣ ಪಕ್ಷ, ಪ್ರತಿಪತ್ ತಿಥಿ, ಶ್ರವಣ ನಕ್ಷತ್ರ. ಈ ದಿವಸ ಗಾಯತ್ರಿ ಅನುಷ್ಠಾನ, ಗಾಯತ್ರಿ ಮಂತ್ರ ಜಪ ಮಾಡಿದರೆ ಶುಭಫಲ. ವೇದಮಾತಾ ಗಾಯತ್ರಿ ಎಂದೇ ಆಕೆಯನ್ನು ಕರೆಯಲಾಗುತ್ತದೆ. ವೇದ ಮಂತ್ರಗಳಿಗೆ ಆಕೆಯೇ ಅಧಿಪತಿ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!

- 23 अगस्त, रविवार को ऋषि पंचमी है। इस दिन सप्तऋषियों की पूजा करने की परंपरा है। इस व्रत से जाने-अनजाने में किए गए पापों का प्रभाव खत्म होता है।

Video Icon

Panchanga3, Aug 2020, 8:30 AM

ಇಂದು ರಕ್ಷಾ ಬಂಧನ, ಉಪಕರ್ಮದ ಸಂಭ್ರಮ: ಹಿನ್ನಲೆ, ಮಹತ್ವ ಹೀಗಿದೆ ನೋಡಿ..!

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಶ್ರಾವಣ ಮಾಸ, ಶುಕ್ಲ ಪಕ್ಷ, ಪೌರ್ಣಮಿ ತಿಥಿ, ಉತ್ತರಾಷಾಢ ನಕ್ಷತ್ರ. ಇಂದಿನ ದಿನ ರಕ್ಷಾಬಂಧನ ಸಂಭ್ರಮ. ಹಿಂದೆ ವ್ಯಾಪಾರ ಸಂಬಂಧಿ ನೌಕಾಯಾತ್ರೆ ಅಂತ ಹೊರಡುತ್ತಿದ್ದರಂತೆ. ಆಗ ದೂರ ದೂರದ ಊರುಗಳಿಗೆಲ್ಲಾ ಪ್ರಯಾಣ ಬೆಳೆಸಬೇಕಿತ್ತು. ಹಾಗಾಗಿ ಅವರು ಸುರಕ್ಷಿತವಾಗಿ ಮರಳಿ ಬರಲಿ ಎಂದು ರಕ್ಷಾ ರೂಪದಲ್ಲಿ ರಾಖಿಯನ್ನು ಕಟ್ಟುತ್ತಿದ್ದರು. ಈಗ ಸಹೋದರ- ಸಹೋದರಿಯರ ಬಾಂಧವ್ಯದ ಪ್ರತೀಕವಾಗಿ ಕಟ್ಟುತ್ತಿದ್ದಾರೆ. ಯಜುರ್ವೇದಿಗಳಿಗೆ ಇಂದು ಉಪಕರ್ಮವಿದೆ. ಎಲ್ಲದರ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ..!

• Video Icon

Panchanga2, Aug 2020, 8:39 AM

ಪಂಚಾಂಗ: ಇಂದು ಸೂರ್ಯನ ಆರಾಧನೆ ಮಾಡುವುದರಿಂದ ಧೀಶಕ್ತಿ ಹೆಚ್ಚುತ್ತದೆ

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ದಕ್ಷಿಣಾಯನ, ವರ್ಷ ಋತು, ಶ್ರಾವಣ ಮಾಸ, ಶುಕ್ಲ ಪಕ್ಷ, ಚತುರ್ದಶಿ ತಿಥಿ, ಪೂರ್ವಾಷಾಢ ನಕ್ಷತ್ರ. ಇಂದು ಭಾನುವಾರವಾಗಿದ್ದು ಸೂರ್ಯನ ಆರಾಧನೆ, ಈಶ್ವರನ ಆರಾಧನೆಗೆ ಪ್ರಶಸ್ತವಾದ ದಿನವಾಗಿದೆ. ನಮ್ಮಲ್ಲಿ ಧೀಶಕ್ತಿ, ಆತ್ಮಶಕ್ತಿ ಜಾಗೃತವಾಗಿರಲು ಸೂರ್ಯನ ಅನುಗ್ರಹ ಬಹಳ ಮುಖ್ಯ. ಹಾಗಾಗಿ ಜಗತ್ತನ್ನೇ ಬೆಳಗುವ ಸೂರ್ಯನ ಅನುಗ್ರಹಕ್ಕಾಗಿ ಆರಾಧಿಸಿದರೆ ಒಳಿತಾಗುತ್ತದೆ.

• Video Icon

Panchanga1, Aug 2020, 8:25 AM

ಇಂದು ಶ್ರಾವಣ ಶನಿವಾರ: ವಿಷ್ಣುವಿನ ಆರಾಧನೆ ಮಾಡಿದರೆ ಶುಭ ಫಲ

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಶ್ರಾವಣ ಮಾಸ, ಶುಕ್ಲ ಪಕ್ಷ, ತ್ರಯೋದಶಿ ತಿಥಿ, ಮೂಲ ನಕ್ಷತ್ರ. ಇಂದು ಶ್ರಾವಣ ಶನಿವಾರ. ಇಂದು ವಿಷ್ಣುವಿನ ಆರಾಧನೆ, ವಿಷ್ಣು ಸಹಸ್ರನಾಮ ಪಠಿಸುವುದರಿಂದ ಶುಭವಾಗುತ್ತದೆ. ಶ್ರಾವಣ ಶನಿವಾರದ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ..!

• Video Icon

Panchanga31, Jul 2020, 8:26 AM

ವರವ ಕೊಡೇ ಮಹಾಲಕ್ಷ್ಮೀ... ವರ ಮಹಾಲಕ್ಷ್ಮೀ ವ್ರತದ ಮಹತ್ವ, ಆಚರಣೆ ಬಗ್ಗೆ ಒಂದಷ್ಟು ಮಾಹಿತಿ

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಶ್ರಾವಣ ಮಾಸ, ಶುಕ್ಷ ಪಕ್ಷ, ದ್ವಾದಶ ತಿಥಿ, ಜ್ಯೇಷ್ಠ ಮಾಸ. ಇಂದು ವರಮಹಾಲಕ್ಷ್ಮೀ ವ್ರತ. ಎಲ್ಲದಕ್ಕೂ ಆದಿಶಕ್ತಿ ಅಂದರೆ ಅದು ಮಹಾಲಕ್ಷ್ಮೀ. ಮಹಾಲಕ್ಷ್ಮೀ ಸ್ವರೂಪದಲ್ಲಿರುವ ಸತ್ವ ಗುಣದಿಂದ ಮಹಾ ಸರಸ್ವತಿ ಹುಟ್ಟಿದಳು, ತಾಮಸ ಗುಣದಿಂದ ಮಹಾಕಾಳಿ ಹುಟ್ಟಿದಳು, ತಾನು ರಜೋ ಗುಣದಲ್ಲಿದ್ದಾಳೆ. ಮಹಾಲಕ್ಷ್ಮೀ ವ್ರತದ ಹಿನ್ನಲೆ, ಆಚರಣೆ ಹೇಗೆ? ಫಲಾಫಲಗಳೇನು? ಇಲ್ಲಿದೆ ನೋಡಿ..!

guru

Video Icon

Panchanga30, Jul 2020, 9:07 AM

ಪಂಚಾಂಗ: ಗುರುವಿನ ಆರಾಧನೆಗೆ ಪ್ರಶಸ್ತವಾದ ದಿನ!

2020 ಜುಲೈ  30ರ ಪಂಚಾಂಗ: ಗುರುವಾರದವಾಗಿದ್ದು, ಅನುರಾಧಾ ನಕ್ಷತ್ರವಾಗಿದೆ. ಇದು ಬಹಳ ಒಳ್ಳೆಯ ದಿನ. ಗುರುವಾರ ಗುರುವಿನ ಆರಾಧನೆಗೆ ಪ್ರಶಸ್ತವಾದ ದಿನ. ಗುರು ನಮ್ಮ ವಿವೇಕವನ್ನು ಜಾಗೃತಗೊಳಿಸುತ್ತಾನೆ. ವಿವೇಕ ಇದ್ದವನಿಗಷ್ಟೇ ಭಗವಂತನ ಸಾಕ್ಷಾತ್ಕಾರವಾಗುತ್ತದೆ. ಹೀಗಾಗಿ ಭಗವಂತನ ಸಾಕ್ಷಾತ್ಕಾರಕ್ಕೆ ಕಾರಣೀಕರ್ತನಾಗಿರುವವನು ಗುರು. ಹೀಗಾಗಿ ಅವರ ಮಾರ್ಗದರ್ಶನದಲ್ಲಿ ನಾವೆಲ್ಲಾ ಸಾಗಬೇಕು. ಹೀಗಾಗಿ ಗುರುವನ್ನು ಪ್ರಾರ್ಥಿಸಿ, ಶುಭವಾಗುತ್ತದೆ.

• Video Icon

Panchanga29, Jul 2020, 8:57 AM

ಪಂಚಾಂಗ: ಇಂದು ವಿಷ್ಣು ಸಹಸ್ರನಾಮ ಪಠಿಸಿದರೆ ಶುಭ ಫಲ

ಶುಭೋದಯ ಓದುಗರೇ, ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಶ್ರಾವಣ ಮಾಸ, ಶುಕ್ಲ ಪಕ್ಷ, ಬುಧವಾರವಾಗಿದ್ದು ದಶಮಿ ತಿಥಿ, ವಿಶಾಖ ನಕ್ಷತ್ರವಾಗಿದೆ. ಇಂದು ವಿಷ್ಣು ಸಹಸ್ರನಾಮ, ವಿಷ್ಣುವಿನ ಆರಾದನೆ ಮಾಡುವುದರಿಂದ ಶುಭಫಲ ನಮ್ಮದಾಗುತ್ತದೆ. ಶ್ರಾವಣ ಮಾಸ ವಿಷ್ಣುವಿಗೆ ಪ್ರಿಯವಾದ ಮಾಸ.

mangala Gowri

Video Icon

Panchanga28, Jul 2020, 8:42 AM

ಪಂಚಾಂಗ: ಇಂದು ಮಂಗಳಗೌರಿ ಪೂಜೆ ಮಾಡಿದರೆ ಶುಭವಾಗುತ್ತದೆ

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ  ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಶ್ರಾವಣ ಮಾಸ, ಶುಕ್ಲ ಪಕ್ಷ, ಅಷ್ಟಮಿ/ನವಮಿ ತಿಥಿ, ಸ್ವಾತಿ ನಕ್ಷತ್ರ. ಇಂದು ಮಂಗಳವಾರವಾಗಿದ್ದು ಮಂಗಳಗೌರಿ ಪೂಜೆ ಮಾಡಿದರೆ ಅಕೆ ಒಳಿತನ್ನು ಮಾಡುತ್ತಾಳೆ. ಇಂದಿನ ಪಂಚಾಂಗದ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ..!

ಅಪಾರ ನಂಬಿಕೆ ಹಾಗೂ ಪರಿಶುದ್ಧ ಹೃದಯದಿಂದ ದೇವನಿಗೆ ಪ್ರಾರ್ಥಿಸಿದಲ್ಲಿ ಇಷ್ಟಾರ್ಥಗಳು ಸಿದ್ಧಿಸುವುದರಲ್ಲಿ ಅನುಮಾನವೇ ಇಲ್ಲ.

Video Icon

Panchanga27, Jul 2020, 8:23 AM

ಪಂಚಾಂಗ: ಪರಶಿವನ ಆರಾಧನೆಗೆ, ಶಿವಶಕ್ತಿಯರ ಆರಾಧನೆಗೆ ಪ್ರಶಸ್ತವಾದ ದಿನ

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ,  ಶ್ರಾವಣ ಮಾಸ, ಶುಕ್ಲ ಪಕ್ಷ,  ವರ್ಷ ಋತು, ಸಪ್ತಮಿ ತಿಥಿ. ಇಂದು ಸೋಮವಾರವಾಗಿದ್ದು ಶಿವನ ಆರಾಧನೆಗೆ, ಶಿವಶಕ್ತಿಯರ ಆರಾಧನೆಗೆ ಪ್ರಶಸ್ತವಾದ ದಿನವಾಗಿದೆ. ಇಂದಿನ ಪಂಚಾಂಗದ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ..!

lord Shiva

Video Icon

Panchanga26, Jul 2020, 8:34 AM

ಪಂಚಾಂಗ: ಇಂದು ಶಿವನ ಆರಾಧನೆಗೆ, ಸೂರ್ಯೋಪಾಸನೆಗೆ ಪ್ರಶಸ್ತವಾದ ದಿನ

ಶುಭೋದಯ ಓದುಗರೇ, ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ಶ್ರಾವಣ ಮಾಸ, ವರ್ಷ ಋತು, ಶುಕ್ಲ ಪಕ್ಷ, ಷಷ್ಠಿ ತಿಥಿ, ಹಸ್ತ ನಕ್ಷತ್ರ. ಇಂದು ಭಾನುವಾರವಾಗಿದ್ದು ಸೂರ್ಯೋಪಾಸನೆಗೆ, ಶಿವನ ಆರಾಧನೆಗೆ ಪ್ರಶಸ್ತವಾದ ದಿನ. ಭಾನುವಾರವಾಗಿದ್ದು, ಹಸ್ತ ನಕ್ಷತ್ರ ಬಂದಿರುವುದರಿಂದ ಅಮೃತ ಸಿದ್ಧಿಯೋಗ ಇದೆ.  ಹೀಗಾಗಿ ಇಂದು ಎಲ್ಲಾ ಕೆಲಸಕ್ಕೆ ಶುಭದಿನ.

ನಾಗರ ಪಂಚಮಿಯ ಮುನ್ನಾದಿನವೇ ಈ ರೀತಿಯಾಗಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ.

Video Icon

Panchanga25, Jul 2020, 8:42 AM

ನಾಗರ ಪಂಚಮಿ ನಾಡಿಗೆ ದೊಡ್ಡದು... ಈ ಪಂಚಮಿಯ ಆಚರಣೆ, ಮಹತ್ವದ ಬಗ್ಗೆ ಇಲ್ಲಿದೆ ಮಾಹಿತಿ

ಶುಭೋದಯ ವೀಕ್ಷಕರೇ, ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಶ್ರಾವಣ ಮಾಸ, ಶುಕ್ಲಪಕ್ಷ, ಶನಿವಾರ, ಪಂಚಮಿ ತಿಥಿ, ಉತ್ತರ ಫಲ್ಗುಣಿ ನಕ್ಷತ್ರ. ಶ್ರಾವಣ ಮಾಸದ ಶನಿವಾರವಾಗಿದ್ದು ವಿಷ್ಣುವಿಗೆ ಪ್ರಿಯವಾದ ವಾರ. ಜೊತೆಗೆ ನಾಗರ ಪಂಚಮಿ ಕೂಡಾ ಇದೆ. ನಾಗಪ್ಪನಿಗೆ ಇಂದು ಪೂಜೆಯನ್ನು ಸಲ್ಲಿಸಿದರೆ ಆತ ನಮ್ಮನ್ನು ಅನುಗ್ರಹಿಸುತ್ತಾನೆ. ನಾಗರ ಪಂಚಮಿಯ ಮಹತ್ವ? ಹಿನ್ನಲೆಯ ಬಗ್ಗೆ ಇಲ್ಲಿದೆ ಮಾಹಿತಿ.!

lord Shiva

Festivals24, Jul 2020, 4:56 PM

ಪರಶಿವನ ಕೃಪೆ ಪಡೆವ ಶ್ರಾವಣ ಮಾಸ ಮಹತ್ವ, ಆಚರಣೆ!

ಶ್ರಾವಣವು ಪವಿತ್ರವಾದ ಮಾಸ, ಧಾರ್ಮಿಕ ಕಾರ್ಯಗಳಿಗೆ, ಭಗವಂತನ ಒಲುಮೆಯನ್ನು ಪಡೆಯಲು ಪ್ರಶಸ್ತವಾದ ಕಾಲವಾಗಿದೆ. ಶ್ರಾವಣ ಸೋಮವಾರ, ಮಂಗಳ ಗೌರಿ ವ್ರತ, ವರ ಮಹಾಲಕ್ಷ್ಮೀ ವ್ರತ ಹೀಗೆ ಅನೇಕ ಹಬ್ಬ ಮತ್ತು ವ್ರತಗಳನ್ನು ಆಚರಿಸುವ ಪುಣ್ಯಕಾಲ. ಈ ಮಾಸದಲ್ಲಿ ಶಿವನನ್ನು ಆರಾಧಿಸಿದರೆ ಪುಣ್ಯಫಲವನ್ನು ಹೊಂದಬಹುದಾಗಿದೆ. ಈ ಶ್ರಾವಣ ಮಾಸದ ಮಹತ್ವದ ಬಗ್ಗೆ ತಿಳಿಯೋಣ.