ಪಂಚಮಸಾಲಿ ಪೀಠ  

(Search results - 13)
 • swamy

  Karnataka Districts21, Feb 2020, 10:39 AM

  ಪಂಚಮಸಾಲಿ ಪೀಠಗಳ ಒಗ್ಗಟ್ಟಿಗೆ ಮೃತ್ಯುಂಜಯ, ವಚನಾನಂದ ಶ್ರೀ ಒಗ್ಗೂಡಲಿ

  ಪಂಚಮಸಾಲಿ ಸಮುದಾಯದ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದಂತೆ ಕೂಡಲಸಂಗಮ ಪೀಠ ಮತ್ತು ಹರಿಹರ ಪೀಠ ಎರಡೂ ಒಟ್ಟಾಗಿ ಕೆಲಸ ಮಾಡಬೇಕು ಎಂಬ ಒತ್ತಾಸೆ ಸಮುದಾಯದ ಜನರಿಂದ ವ್ಯಕ್ತವಾಗುತ್ತಿದೆ.
   

 • mahesh kumathalli

  Karnataka Districts6, Feb 2020, 10:12 AM

  ಕುಮಟಳ್ಳಿ ಕೈ ಬಿಟ್ಟ ಯಡಿಯೂರಪ್ಪ: ಜಯ ಮೃತ್ಯುಂಜಯ ಸ್ವಾಮೀಜಿ ಅಸಮಾಧಾನ

  ಉಪ ಚುನಾವಣೆಯಲ್ಲಿ ಗೆದ್ದ 11 ಜನರಿಗೆ ಸಚಿವ ಸ್ಥಾನ ನೀಡುವ ವಿಶ್ವಾಸವಿತ್ತು, 10 ಜನರಿಗೆ  ಕೊಟ್ಟು ಒಬ್ಬರನ್ನ ಬಿಟ್ಟಿರೋದು ಚರ್ಚೆಗೆ ಗ್ರಾಸವಾಗಿದೆ. ಮಹೇಶ ಕುಮಟಳ್ಳಿ ಅವರನ್ನು ಕೈ ಬಿಟ್ಟಿರುವುದಕ್ಕೆ ನಮ್ಮ ಸಮುದಾಯದ ಜನ ಅಸಮಾಧಾನಗೊಂಡಿದ್ದಾರೆ ಎಂದು ಕೂಡಲಸಂಗಮದ ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಎಂದು ಹೇಳಿದ್ದಾರೆ. 

 • Kudalasangama

  Karnataka Districts31, Jan 2020, 9:07 AM

  ‘ಮದ್ಯಪಾನದಿಂದಲೇ ಅತ್ಯಾಚಾರ, ಅಪರಾಧ ಕೃತ್ಯಗಳು ಹೆಚ್ಚುತ್ತಿವೆ’

  ಜನರನ್ನು ಕಣ್ಣೀರಿನಲ್ಲಿಟ್ಟು ಅರ್ಥ ವ್ಯವಸ್ಥೆ ಸುಧಾರಣೆ ಮಾಡುವುದು ರಾಜ್ಯದ ಅಭಿವೃದ್ಧಿಯಲ್ಲ. ಆರ್ಥಿಕ ಹೊರೆಯಾದರೂ ಜನರ ನೆಮ್ಮದಿ ನಮಗೆ ಮುಖ್ಯ. ಜನರ ಸುಖ, ಶಾಂತಿಗಾಗಿ ಕರ್ನಾಟಕದಲ್ಲಿ ಮದ್ಯಪಾನ ನಿಷೇಧಕ್ಕೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮಠಾಧೀಶರ, ಚಿಂತಕರ, ಹೋರಾಟಗಾರರ, ಮಹಿಳಾ ಸಂಘಟನೆಗಳ ಸಭೆಯನ್ನು ಕೂಡಲೇ ಕರೆದು ಮದ್ಯ ನಿಷೇಧವನ್ನು ಆರ್ಥಿಕ ತೊಂದರೆ ಇಲ್ಲದೆ ನಿಷೇಧಿಸುವ ಹೊಸ ನೀತಿಯನ್ನು ಜಾರಿಗೆ ತರಬೇಕು ಎಂದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.
   

 • swamy

  Karnataka Districts16, Jan 2020, 10:32 AM

  ಪಂಚಮಸಾಲಿ ಸಮಾಜಕ್ಕೆ ಸಚಿವ ಸ್ಥಾನ ಸಿಗಲೇಬೇಕು: ಜಯಮೃತ್ಯುಂಜಯ ಸ್ವಾಮೀಜಿ

  ಮಠಾಧೀಶರ ಬಳಿ ಜನಪ್ರತಿನಿಧಿಗಳು ಬೇಡಿಕೆ ಸಲ್ಲಿಸಿದಾಗ, ಸಮಾಜದ ಧ್ವನಿಯಾಗಿ ಮುಖ್ಯಮಂತ್ರಿ ಬಳಿ ನಮ್ಮ ಸಲಹೆಗಳನ್ನು ಕೇಳುತ್ತೇವೆ. ಮನವಿ ಕೊಡಬೇಕಾಗಿರೋದು ನಮ್ಮ ಕರ್ತವ್ಯವಾಗಿದೆ. ಮನವಿ ಮಾಡಿಕೊಳ್ಳುವ ಸಂದರ್ಭದಲ್ಲಿ ಕೆಲವೊಮ್ಮೆ ಮಾತಿನ ಶೈಲಿಯಲ್ಲಿ ವ್ಯತ್ಯಾಸ ಆಗುವುದು ಸಹಜ, ಮಾತಿನ ಶೈಲಿಯಲ್ಲಿ ವ್ಯತ್ಯಾಸವಾದ್ರೆ ಅದಕ್ಕೆ ವಿನಾಕಾರಣ ಗೊಂದಲ ಸೃಷ್ಟಿಸುವುದು ಬೇಡ. ಸಾಮಾಜಿಕ ನ್ಯಾಯದನುಸಾರ ಪಂಚಮಸಾಲಿ ಸಮಾಜಕ್ಕೆ ಸಚಿವ ಸ್ಥಾನ ಸಿಗಲೇಬೇಕು ಎಂದು ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ. 
   

 • basanagouda patil yatnal

  Karnataka Districts15, Jan 2020, 3:58 PM

  ವಚನಾನಂದ ಸ್ವಾಮೀಜಿ ಬೆದರಿಕೆ ಬೆನ್ನಲ್ಲೇ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟ

  ನಮ್ಮ ಸಮಾಜಕ್ಕೆ ಸಚಿವ ಸ್ಥಾನ ನೀಡದಿದ್ದಲ್ಲಿ ನಿಮ್ಮ ಕೈ ಹಿಡಿದಿದ್ದ ನಮ್ಮ ಸಮಾಜದವರೆಲ್ಲ ಕೈ ಬಿಡಲಿದ್ದಾರೆ ಎಂದ ಪಂಚಮಸಾಲಿ ಪೀಠದ ಸ್ವಾಮೀಜಿ ಹಾಗೂ ಮುರುಗೇಶ್ ನಿರಾಣಿಗೆ ಬಿಜೆಪಿ ಶಾಸಕರೋರ್ವರು ವಾರ್ನಿಂಗ್ ಕೊಟ್ಟಿದ್ದಾರೆ.

 • panchamasali petta
  Video Icon

  Karnataka Districts12, Jan 2020, 6:01 PM

  ಬೆಳ್ಳಿಬೆಡಗು ಸಂಭ್ರಮದಲ್ಲಿ ಪಂಚಮಸಾಲಿ ಟ್ರಸ್ಟ್: ಸಂಕ್ರಾಂತಿ ಸ್ಪೆಷಲ್ ಹರಜಾತ್ರೆ

  ದಾವಣಗೆರೆ, [ಜ.12]: ಹರ ಮುನಿದರೆ ಗುರು ಕಾಯುವನು ಎಂಬ ನಾಣ್ನುಡಿ ಅತ್ಯಂತ ಪ್ರಚಲಿತ.  ಹರನಷ್ಟೇ ಶಕ್ತಿ ಗುರುವಿನಲ್ಲಿರುತ್ತದೆ ಎಂಬುದು ಇದರ ಅರ್ಥ. ಗುರು ಮತ್ತು ಹರನ ಒಲುಮೆಯನ್ನು ಒಟ್ಟಿಗೆ ಪಡೆಯಲು ಹೊಸದಾಗಿ ಆರಂಭವಾಗಿರುವ ವಿಶೇಷ ಉತ್ಸವ ಹರಜಾತ್ರೆ. 

  ದಾವಣಗೆರೆ ಜಿಲ್ಲೆಯ ಹರಿಹರದಲ್ಲಿರುವ  ಪಂಚಮಸಾಲಿ ಟ್ರಸ್ಟ್ ಬೆಳ್ಳಿಬೆಡಗಿನ ಸಂಭ್ರಮದಲ್ಲಿದೆ. ಈ ಹಿನ್ನೆಲೆಯಲ್ಲಿ ಪಂಚಮಸಾಲಿ ಪೀಠದಲ್ಲಿ ಇದೇ ಜ. 14 ಮತ್ತು 15ರಂದು ಹರಜಾತ್ರೆ ನಡೆಯಲಿದೆ. 

  ಜಾತ್ರೆಯ ಅಂಗವಾಗಿ ವಿವಿಧ ಧಾರ್ವಿುಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. 14ರಂದು ಶ್ರೀ ದಿಂಗಾಲೇಶ್ವರ ಸ್ವಾಮಿಗಳ ಸಾನ್ನಿಧ್ಯದಲ್ಲಿ ಇಲಕಲ್ ಶ್ರೀ ಮಹಾಂತಸ್ವಾಮಿಗಳು ಇಷ್ಟಲಿಂಗ ಪೂಜಾ ಪ್ರಾತ್ಯಕ್ಷಿಕೆ ನಡೆಸಿಕೊಡಲಿದ್ದಾರೆ. ಪಂಚಮಸಾಲಿ ಟ್ರಸ್ಟ್ ನ ಒಂದು  ಝಲಕ್ ವಿಡಿಯೋನಲ್ಲಿ ನೋಡಿ...

 • modi swamy

  Karnataka Districts3, Jan 2020, 2:41 PM

  ‘ಪ್ರಧಾನಿ ಮೋದಿ ನೆರೆ ಸಂತ್ರಸ್ತರ ಕಷ್ಟ ನಿವಾರಣೆ ಮಾಡದಿರುವುದು ಬೇಸರ ತರಿಸಿದೆ’

  ನೆರೆ ಸಂದರ್ಭದಲ್ಲಿ ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡದಿರುವುದಕ್ಕೆ ರೈತರು, ಸಂತ್ರಸ್ತರಲ್ಲಿ ಬೇಸರವಿದೆ. ನಮ್ಮ ರಾಜ್ಯದ ನೆರೆ ಸಂತ್ರಸ್ತರ ಕಷ್ಟ ನಿವಾರಣೆ ಮಾಡಲಿಲ್ಲ. ಬಿಹಾರ, ಉತ್ತರ ಪ್ರದೇಶಕ್ಕೆ ಸ್ಪಂದಿಸಿದಂತೆ ಕೇಂದ್ರ ಸರ್ಕಾರ ರಾಜ್ಯದ ನೆರೆ ಸಂತ್ರಸ್ತರಿಗೆ ಸ್ಪಂದಿಸಬೇಕಿತ್ತು ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರು ಹೇಳಿದ್ದಾರೆ. 
   

 • swamy

  Karnataka Districts21, Dec 2019, 11:02 AM

  ಪಂಚಮಸಾಲಿ ಜನಾಂಗದ ಮೂವರಿಗೆ ಸಚಿವ ಸ್ಥಾನ ನೀಡಿ: ಬಸವ ಜಯ ಮೃತ್ಯುಂಜಯ ಶ್ರೀ

  ನಾಡ ರಕ್ಷಣೆಗಾಗಿ ಹೋರಾಡಿದ ವೀರರಾಣಿ ಕಿತ್ತೂರ ಚನ್ನಮ್ಮ ಅವರ 241ನೇ ಜಯಂತ್ಯುತ್ಸವ ಹಾಗೂ ಪಂಚಮಸಾಲಿ ಸಮಾಜದ ಮಹಿಳಾ ಘಟಕದ ಹಾಗೂ ಯುವ ಘಟಕದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಡಿ. 29ರಂದು ನಡೆಯಲಿದೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಮಹಾಸ್ವಾಮಿಗಳು ತಿಳಿಸಿದ್ದಾರೆ.
   

 • Video Icon

  Davanagere7, Dec 2019, 4:50 PM

  ದಾವಣಗೆರೆಯಲ್ಲಿ ಹೀಗೊಬ್ಬ ಸ್ವಾಮೀಜಿ: ಮಠದೊಳಗೆ ಪ್ರವಚನ, ಹೊರಗಡೆ 'ಶ್ರಮದಾನ'!

  ಪೂಜೆ- ಪ್ರವಚನಗಳಿಗೆ ಸೀಮಿತವಾಗಿರುವ ಸ್ವಾಮೀಜಿಗಳನ್ನು ನೋಡುತ್ತೇವೆ.  ದಾವಣೆಗೆರೆಯ ಹರಿಹರದಲ್ಲಿರುವ ಪಂಚಮಸಾಲಿ ಪೀಠದ ಸ್ವಾಮೀಜಿ ಈಗ ಅವುಗಳನ್ನು ಮೀರಿ, ಕಾಯಕವೇ ಕೈಲಾಸ ಎಂಬುವುದನ್ನು ಮಾಡಿ ತೊರಿಸಿದ್ದಾರೆ.  ಮಠದ ಆವರಣದಲ್ಲಿ ಕಾಮಗಾರಿ ನಡೆಯುತ್ತಿದ್ದು, ವಚನಾನಣದ ಸ್ವಾಮೀಜಿ ಕಾರ್ಮಿಕರ ಜೊತೆ ಸೇರಿ ಕೆಲಸ ಮಾಡಿದ್ದಾರೆ.
   

 • basavana gowda patil yatnal

  Karnataka Districts25, Nov 2019, 10:24 AM

  'ವಿವಾದಾತ್ಮಕ ಹೇಳಿಕೆ ನೀಡುವ ಯತ್ನಾಳ್ ಮುಂದೊಂದಿನ ಸಿಎಂ ಆಗ್ತಾರೆ'

  ವಿವಾದಾತ್ಮಕವಾಗಿ ಹೇಳಿಕೆ ನೀಡುವ ವ್ಯಕ್ತಿ ಮುಂದೊಂದು ದಿನ ರಾಜ್ಯದ ಚುಕ್ಕಾಣಿ ಹಿಡಿತಾರೆ. ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮುಂದೊಂದಿನ ಮುಖ್ಯಮಂತ್ರಿ ಆಗ್ತಾರೆ ಎಂದು ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠಾಧ್ಯಕ್ಷ  ವಚನಾನಂದ ಶ್ರೀಗಳು ಭವಿಷ್ಯ ನುಡಿದಿದ್ದಾರೆ. ‌‌
   

 • mruthyunjaya swamiji

  Vijayapura9, Nov 2019, 2:09 PM

  'ಅಯೋಧ್ಯೆ ತೀರ್ಪು: ವಿಜೃಂಭಿಸೋದು ಬೇಡ, ವಿರೋಧಿಸೋದೂ ಬೇಡ'

  ಸುಪ್ರೀಂ ಕೋರ್ಟ್ ನೀಡಿರುವ ಅಯೋಧ್ಯೆ ತೀರ್ಪನ್ನು ಸ್ವಾಗತಿಸುತ್ತೇನೆ. ರಾಮಜನ್ಮ ಭೂಮಿ ವಿವಾದದ ಕೇಂದ್ರ ಬಿಂದುವಾಗಿತ್ತು, ತೀರ್ಪಿನಿಂದ ನಿಟ್ಟುಸಿರು ಬಿಟ್ಟಂಗಾಗಿದೆ. ಈ ಎಲ್ಲ ಸಮಸ್ಯೆಗೆ ಪರಿಹಾರವಾಗಿ ತೀರ್ಪು ಬಂದಿದೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ಅವರು ಹೇಳಿದ್ದಾರೆ. 
   

 • Davanagere

  Davanagere5, Nov 2019, 3:51 PM

  ಮೈದುಂಬಿದ ಸೂಳೆಕೆರೆ ಸೊಬಗ ಕಾಣ ಬನ್ನಿ...!

  ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಸೂಳೆಕೆರೆಯಲ್ಲಿ ಕನ್ನಡ ಪ್ರಭ ಸಂಪಾದಕರಾದ ರವಿ ಹೆಗ್ಡೆ ಹಾಗೂ ಪುರವಣಿ ಸಂಪಾದಕರಾದ ಗಿರೀಶ್ ರಾವ್ ಹತ್ವಾರ್ ಹಾಗೂ ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಶ್ರೀ ವಚನಾನಂದ ಸ್ವಾಮೀಜಿ...

 • BSY

  Karnataka Districts3, Oct 2019, 8:45 AM

  'ಕಾಣದ ಕೈಗಳಿಂದ ಬಿಎಸ್‌ವೈ ಕಟ್ಟಿಹಾಕುವ ಪ್ರಯತ್ನ'

  ಕಾಣದ ಶಕ್ತಿಗಳು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರನ್ನು ಕಟ್ಟಿಹಾಕುತ್ತಿದ್ದು, ಇಂತಹ ಸಂದರ್ಭದಲ್ಲಿ ಅವರಿಗೆ ಉತ್ತರ ಕರ್ನಾಟಕದ ಜನತೆಯ ಬೆಂಬಲ ಬಹಳ ಅಗತ್ಯವಿದೆ ಎಂದು ಕೂಡಲಸಂಗಮದ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.