ನೋಟು ಅಮಾನ್ಯೀಕರಣ  

(Search results - 20)
 • Unemployment

  BUSINESS17, Apr 2019, 4:23 PM IST

  ನೋಟ್ ಬ್ಯಾನ್ ಪರಿಣಾಮ: 5 ಮಿಲಿಯನ್ ಉದ್ಯೋಗ ಕಡಿತ!

  ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಳೆದ 2016ರಂದು ಘೋಷಿಸಿದ್ದ ನೋಟು ಅಮಾನ್ಯೀಕರಣದ ಪರಿಣಾಮವಾಗಿ, ದೇಶದಲ್ಲಿ ಸುಮಾರು 5 ಮಿಲಿಯನ್ ಉದ್ಯೋಗ ಕಡಿತಗೊಂಡಿದೆ ಎಂದು ಅಧ್ಯಯನವೊಂದು ತಿಳಿಸಿದೆ.

 • DK shivakumar

  NEWS13, Mar 2019, 8:54 AM IST

  ನೋಟ್‌ಬ್ಯಾನ್‌ ವೇಳೆ ಡಿಕೆಶಿಯಿಂದ ಹಳೆ ನೋಟು ಅಕ್ರಮ ವಿನಿಮಯ!

  ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಹಾಗೂ ಇತರೆ ಆರೋಪಿಗಳು ನೋಟು ಅಮಾನ್ಯೀಕರಣ ಸಂದರ್ಭದಲ್ಲಿ ಹಳೆಯ ನೋಟುಗಳ ಅಕ್ರಮ ವಿನಿಮಯ ಕಾರ್ಯದಲ್ಲಿ ಸಹ ಭಾಗಿಯಾಗಿದ್ದರು ಎಂದು ಜಾರಿ ನಿರ್ದೇಶನಾಲಯ (ಇ.ಡಿ.) ಹೈಕೋರ್ಟ್‌ಗೆ ತಿಳಿಸಿದೆ.

 • NEWS14, Dec 2018, 12:08 PM IST

  200, 500, 2000 ರು. ನೋಟುಗಳಿಗೆ ನಿಷೇಧ

  ದೇಶದಲ್ಲಿ ನೋಟು ಅಮಾನ್ಯೀಕರಣದ ನಂತರ ಜಾರಿಗೆ ತಂದ 200, 500, 2000 ರು.ನೋಟುಗಳ ಚಲಾವಣೆ ನಿಷೇಧಿಸಿ ನೇಪಾಳ ಸರ್ಕಾರ ಆದೇಶ ಹೊರಡಿಸಿದೆ.

 • o.p.rawath

  NEWS4, Dec 2018, 8:22 AM IST

  ನೋಟು ರದ್ದತಿಯಿಂದ ಕಪ್ಪುಹಣ ಕಡಿಮೆ ಆಗ್ಲಿಲ್ಲ: ರಾವತ್‌

  ನೋಟು ರದ್ದತಿ ಒಂದು ಆಘಾತಕಾರಿ ನಿರ್ಧಾರ ಎಂದು ಇತ್ತೀಚೆಗೆ ಕೇಂದ್ರ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರರಾಗಿದ್ದ ಅರವಿಂದ ಸುಬ್ರಮಣಿಯನ್‌ ಹೇಳಿದ್ದರು. ಆರ್‌ಬಿಐ ಮಾಜಿ ಗವರ್ನರ್‌ ರಘುರಾಂ ರಾಜನ್‌ ಕೂಡ ಇದನ್ನು ಟೀಕಿಸಿದ್ದರು. ಈಗ ನೋಟು ರದ್ದತಿಯಿಂದ ಏನೂ ಪ್ರಯೋಜನವಾಗಲಿಲ್ಲ ಎಂಬ ಹೇಳಿಕೆಯ ಸರದಿ ನಿರ್ಗಮಿತ ಮುಖ್ಯ ಚುನಾವಣಾ ಆಯುಕ್ತ ಓಂಪ್ರಕಾಶ್‌ ರಾವತ್‌ ಅವರದು.

 • BUSINESS20, Nov 2018, 2:44 PM IST

  2019ರಲ್ಲಿ ಮೋದಿ ಭವಿಷ್ಯ 'ಆ'ವರದಿ ಮೇಲೆ ನಿಂತಿದೆ!

  ಭಾರತದ ಆರ್ಥಿಕತೆ ಮೇಲೆ ನೋಟು ಅಮಾನ್ಯೀಕರಣ ಬೀರಿದ್ದ ಪರಿಣಾಮವನ್ನು ಸಿಎಜಿ ವರದಿಯಲ್ಲಿ ವಿವರಿಸಲಾಗುತ್ತದೆ. ಆದರೆ 2019 ಚುನಾವಣಾ ವರ್ಷವಾಗಿರುವುದರಿಂದ ಬಜೆಟ್ ಅಧಿವೇಶನದಲ್ಲಿ ಈ ವರದಿಯನ್ನು ಕೇಂದ್ರ ಸರ್ಕಾರ ಬಹಿರಂಗಗೊಳಿಸಲಿದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ. 

 • fake currency
  Video Icon

  BUSINESS11, Nov 2018, 11:40 AM IST

  ಶುರುವಾಗುತ್ತಾ ನೋಟ್ ಬ್ಯಾನ್ ಸೆಕೆಂಡ್ ಇನ್ನಿಂಗ್ಸ್?

  ನೋಟ್ ಬ್ಯಾನ್ ಆಗಿ 2 ವರ್ಷಗಳು ಕಳೆದಿವೆ. ಆರ್ಥಿಕತೆಯ ಮಹಾಕ್ರಾಂತಿ ಎಂದೇ ಹೇಳಲಾಗಿದ್ದ ನೋಟ್ ಬ್ಯಾನ್ ಮತ್ತೊಮ್ಮೆ ಆಗುವ ಸುಳಿವು ಸಿಕ್ಕಿದೆ. 2 ಸಾವಿರ ರೂ ನೋಟಿನಲ್ಲೂ ಖೋಟಾ ನೋಟು ಬರುತ್ತಿದೆ. ಮತ್ತೊಮ್ಮೆ ನೋಟ್ ಬ್ಯಾನ್ ಮಾಡ್ತಾರಾ ಮೋದಿ? 

 • Modi

  BUSINESS11, Nov 2018, 10:32 AM IST

  ನೋಟ್ ಬ್ಯಾನ್ ಸಾಧಿಸಿದ್ದೇನು?: ಮೋದಿ ಬೈದವರಿಗೆ ಇಲ್ಲಿದೆ ಉತ್ತರ!

  ನೋಟು ಅಮಾನ್ಯೀಕರಣದ ಬಳಿಕ ದೇಶದ ಸಣ್ಣ ಪಟ್ಟಣ, ನಗರಗಳಲ್ಲಿ ಜನರು ಸರಕು ಹಾಗೂ ಸೇವೆಗಳನ್ನು ಖರೀದಿಸಲು ಡಿಜಿಟಲ್‌ ವಿಧಾನವನ್ನು ಹೆಚ್ಚು ಬಳಸುತ್ತಿದ್ದಾರೆ ಎಂದು ಕೇಂದ್ರ ಸರ್ಕಾರದ ವರದಿ ತಿಳಿಸಿದೆ. ಕ್ಯಾಶ್‌ಲೆಸ್‌ ವರ್ಗಾವಣೆಗಳು ವೃದ್ಧಿಸಿರುವುದನ್ನು ಆರ್‌ಬಿಐ ಕೂಡ ಸ್ಪಷ್ಟಪಡಿಸಿದ್ದು, ಈ ವರ್ಷ 74,978 ಕೋಟಿ ರೂ.ಗಳಷ್ಟು ವಹಿವಾಟುಗಳು ಡಿಜಿಟಲ್‌ ಮೂಲಕ ನಡೆದಿದೆ ಎನ್ನಲಾಗಿದೆ. 

   

 • Abhinandan Pathak

  NEWS8, Nov 2018, 8:14 PM IST

  ‘ದೇಶಕ್ಕೆ ಎಂದಿಗೂ ಅಚ್ಛೇ ದಿನ ಬರುವುದೇ ಇಲ್ಲ'

  ನೋಟು ಅಮಾನ್ಯೀಕರಣಗೊಂಡು ಬರೋಬ್ಬರಿ 2 ವರ್ಷ. ದೇಶದ ಜನತೆಗೆ ಅಚ್ಛೆ ದಿನ ನೀಡುತ್ತೇನೆ ಎಂದು ಭರವಸೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಡಿಮಾನಿಟೈಜೇಶನ್ ಮಾಡಿ ಮುಗಿಸಿದ್ದರು. ಆದರೆ ಈಗ ದೇಶದ ಜನತೆಗೆ ಎಂದಿಗೂ ಅಚ್ಛೆ ದಿನ ಬರಲ್ಲ ಎಂದು ‘ಮೋದಿಯೇ’ ಹೇಳಿದ್ದಾರೆ! ಯಾಕೆ ಅರ್ಥ ಆಗ್ತಾ ಇಲ್ಲವೇ?

 • BUSINESS8, Nov 2018, 12:24 PM IST

  ನೋಟ್ ಬ್ಯಾನ್: ಉತ್ತರ ಸಿಗದ ಪ್ರಶ್ನೆಗಳು, ಮೋದಿ ಅರಿಯದ ವಿಪಕ್ಷಗಳು!

  ನೋಟು ಅಮಾನ್ಯೀಕರಣವಾಗಿ ಇಂದಿಗೆ ಬರೋಬ್ಬರಿ ಎರಡು ವರ್ಷ. ನೋಟು ಅಮಾನ್ಯೀಕರಣಗೊಂಡು ಇಂದಿಗೆ ಬರೋಬ್ಬರಿ ಎರಡು ವರ್ಷ ಸಂದಿದೆ. ಪ್ರಧಾನಿ ಮೋದಿ ನಿರ್ಧಾರದ ಪ್ರಸ್ತುತತೆಯನ್ನು ಅಳೆಯಲು ಇದು ಸಕಾಲ. ನೋಟು ಅಮಾನ್ಯೀಕರಣದ ದಿನ ಪ್ರಧಾಣಿ ಮೋದಿ ನೀಡಿದ್ದ ಕಾರಣಗಳಲ್ಲಿ ಎಷ್ಟು ಭರವಸೆಗಳು ಈಡೇರಿವೆ ಎಷ್ಟು ಭರವಸೆಗಳು ಸುಳ್ಳಾಗಿವೆ ಎಂಬುದರತ್ತ ಚಿತ್ತ ಹರಿಸಬೇಕಿದೆ.

 • Matash

  Sandalwood19, Sep 2018, 6:05 PM IST

  2 ಸಾವಿರ ನೋಟಲ್ಲಿ ಚಿಪ್ ಸಿಗಲಿಲ್ಲ, ಕತೆ ಸಿಕ್ಕಿತು!

  ಎರಡು ಸಾವಿರ ನೋಟಲ್ಲಿ ಚಿಪ್ಪು ಸಿಗಲಿಲ್ಲ ನಿಜ, ಒಂದು ಸಿನಿಮಾದ ಕತೆಯಂತೂ ಸಿಕ್ಕಿದೆ! ಆ ಕಥೆ ಆಧರಿಸಿದ ಚಿತ್ರವೇ ಎಸ್‌ಡಿ ಅರವಿಂದ್ ನಿರ್ದೇಶನದ ‘ಮಟಾಶ್’. ಈ ಚಿತ್ರದ ಕತೆಗೂ 2000 ಸಾವಿರ ರೂಪಾಯಿ ನೋಟಿನಲ್ಲಿ ಮೈಕ್ರೋ ಚಿಪ್ಪು ಇದೆ ಎಂದು ಆಗ ಹಬ್ಬಿದ ವದಂತಿಗೂ ನೇರವಾದ ಸಂಬಂಧವಿದೆ. ಈ ಚಿತ್ರದ ಕತೆ ಹುಟ್ಟಿಕೊಂಡಿದ್ದೇ ಆ ವದಂತಿಗಳಿಂದ. ಹಾಗೆ ನೋಡಿದರೆ ಇಡೀ ಸಿನಿಮಾ ನೋಟು ಅಮಾನ್ಯೀಕರಣದ ಸುತ್ತ ಹೆಣೆದಿರಲಾಗಿದೆ.

 • NEWS6, Sep 2018, 2:04 PM IST

  ದೇಶದ ಆರ್ಥಿಕತೆಯಿಂದ 2000 ರು. ನೋಟು ವಾಪಸ್‌ಗೆ ಒತ್ತಾಯ

  ದೇಶದಲ್ಲಿ ನೋಟು ಅಮಾನ್ಯೀಕರಣದ ಬಳಿಕ ಪರಿಚಯಿಸಲಾದ 2000 ರು. ನೋಟುಗಳನ್ನು ಆರ್ಥಿಕತೆಯಿಂದ ವಾಪಸ್ ಪಡೆಯಬೇಕು ಎಂದು ಆಂಧ್ರ ಪ್ರದೇಶ ಸಿಎಂ ಚಂದ್ರ ಬಾಬು ನಾಯ್ಡು ಆಗ್ರಹಿಸಿದ್ದಾರೆ. 

 • Raghuram Rajan

  BUSINESS4, Sep 2018, 11:18 AM IST

  ‘ಎಲ್ಲಾ ಹದಗೆಡಸಿದ್ದು ರಾಜನ್, ಮೋದಿ ಅಲ್ವೇ ಅಲ್ಲ’!

  ಆರ್‌ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್ ದೇಶದ ಅರ್ಥ ವ್ಯವಸ್ಥೆಯನ್ನು ಸರಿಯಾಗಿ ನಿಭಾಯಿಸುವಲ್ಲಿ ವಿಫಲರಾಗಿದ್ದರು ಎಂಬುದು ಹಲವರ ಆರೋಪ. ಇವರ ಸಾಲಿಗೆ ಇದೀಗ ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ಕೂಡ ಸೇರಿದ್ದಾರೆ. ದೇಶದ ಅರ್ಥ ವ್ಯವಸ್ಥೆ ಹಿನ್ನಡೆಗೆ ರಘುರಾಮ್ ರಾಜನ್ ಆರ್‌ಬಿಐ ಗರ್ವನರ್ ಆಗಿದ್ದಾಗ ತೆಗೆದುಕೊಂಡಿದ್ದ ನಿರ್ಣಯಗಳೇ ಹೊರತು ನೋಟು ಅಮಾನ್ಯೀಕರಣ ಅಲ್ಲ ಎಂದು ರಾಜೀವ್ ಅಭಿಪ್ರಾಯಪಟ್ಟಿದ್ದಾರೆ.

 • Modi

  BUSINESS1, Sep 2018, 6:14 PM IST

  ಬಹಿರಂಗವಾಯ್ತು ‘ಆ’ ರಹಸ್ಯ ವರದಿ: ನಿಟ್ಟುಸಿರು ಬಿಟ್ಟರು ಮೋದಿ!

  ನೋಟು ಅಮಾನ್ಯೀಕರಣದ ಕುರಿತು ಆರ್‌ಬಿಐ ವರದಿ ಬಹಿರಂಗವಾಗುತ್ತಿದ್ದಂತೇ ಎಲ್ಲಾ ಪ್ರತಿಪಕ್ಷಗತಳು ಪ್ರಧಾನಿ ನರೇಂದ್ರ ಮೋದಿ ಮೇಲೆ ಮುಗಿ ಬಿದ್ದಿವೆ. ಯಾವ ಪುರುಷಾರ್ಥವಾಗಿ ನೋಟು ಅಮಾನ್ಯೀಕರಣ ಮಾಡಲಾಯಿತು ಎಂದು ಪ್ರತಿಪಕ್ಷಗಳು ಮೋದಿ ಅವರನ್ನು ಕೇಳುತ್ತಿವೆ. ಆದರೆ ಜಿಡಿಪಿ ಕುರಿತಾದ ವರದಿಯೊಂದು ಕೇಂದ್ರ ಸರ್ಕಾರ ಮತ್ತು ಪ್ರಧಾನಿ ಮೋದಿ ಅವರಿಗೆ ಬಿಗ್ ರಿಲೀಫ್ ನೀಡಿದೆ. ಭಾರತದ ಆರ್ಥಿಕ ಬೆಳವಣಿಗೆ ಕಳೆದ ಏಪ್ರಿಲ್‌-ಜೂನ್‌ ಅವಧಿಯಲ್ಲಿ ಶೇ.8.2ಕ್ಕೆ ಏರಿಕೆಯಾಗಿದೆ ಎಂಬ ಅಂಕಿ ಅಂಶ ಇದೀಗ ಹೊರಬಿದ್ದಿದೆ.

 • Modi

  BUSINESS31, Aug 2018, 3:36 PM IST

  ಮೋದಿಗೆ ಮರ್ಯಾದೆ ಇಲ್ಲ, ಅದಕ್ಕೆ ರಾಜೀನಾಮೆ ಕೊಟ್ಟಿಲ್ಲ: ಅಂದಿದ್ಯಾರು?

  ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ನಿರಂತರ ವಾಗ್ದಾಳಿ ಮಾಡುತ್ತಿರುವ ಮಾಜಿ ಹಣಕಾಸು ಸಚಿವ ಯಶ್ವಂತ್ ಸಿನ್ಹಾ, ಮೋದಿ ಅವರ ನೋಟು ಅಮಾನ್ಯೀಕರಣ ನಿರ್ಧಾರವನ್ನು ಅತ್ಯಂತ ಕಟುವಾಗಿ ಟೀಕಿಸಿದ್ದಾರೆ. ನೋಟು ಅಮಾನ್ಯೀಕರಣ ಮೋದಿ ಅವರ ಸರ್ವಾಧಿಕಾರಿ ಧೋರಣೆಯ ಪ್ರತೀಕ ಎಂದೂ ಸಿನ್ಹಾ ಹರಿಹಾಯ್ದಿದ್ದು, ಮೋದಿ ರಾಜೀನಾಮೆಗೆ ಆಗ್ರಹಿಸಿದ್ದಾರೆ.

 • Venkaiah Naidu

  BUSINESS31, Aug 2018, 11:33 AM IST

  ಬಾತ್ ರೂಂ, ಬೆಡ್ ರೂಂ 'ರಹಸ್ಯ' ಹೊರ ಬಿತ್ತು: ವೆಂಕಯ್ಯ ನಾಯ್ಡು!

  ನೋಟು ಅಮಾನ್ಯೀಕರಣದಿಂದ ಸರ್ಕಾರ ಸಾಧಿಸಿದ್ದಾದರೂ ಏನು ಎಂಬುದಕ್ಕೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಸಮರ್ಪಕ ಉತ್ತರ ನೀಡಿದ್ದಾರೆ. ನೋಟು ಅಮಾನ್ಯೀಕರಣದಿಂದಾಗಿ ಬಾತ್ ರೂಂ, ಬೆಡ್ ರೂಂ ನಲ್ಲಿ ಅಡಗಿಸಿಟ್ಟಿದ್ದ ಕಪ್ಪುಹಣವೆಲ್ಲಾ ಇದೀಗ ಬ್ಯಾಂಕಿಂಗ್ ವ್ಯವಸ್ಥೆಗೆ ಬಂದಿದೆ ಎಂದು ನಾಯ್ಡು ಸಮರ್ಥಿಸಿಕೊಂಡಿದ್ದಾರೆ.