ನೊವಾಕ್ ಜೋಕೋವಿಚ್
(Search results - 16)OTHER SPORTSMar 9, 2021, 8:05 AM IST
ಎಟಿಪಿ ವಿಶ್ವ ರ್ಯಾಂಕಿಂಗ್: ಜೋಕೋವಿಚ್ ನಂ.1 ದಾಖಲೆ..!
2 ವಾರಗಳ ಹಿಂದೆ ಆಸ್ಪ್ರೇಲಿಯನ್ ಓಪನ್ ಗ್ರ್ಯಾನ್ ಸ್ಲಾಂ ಪ್ರಶಸ್ತಿಯನ್ನು ದಾಖಲೆಯ 9ನೇ ಬಾರಿಗೆ ಜಯಿಸಿದ ಜೋಕೋವಿಚ್, ಅಗ್ರಸ್ಥಾನದಲ್ಲೇ ಮುಂದುವರಿಯುವುದನ್ನು ಖಚಿತಪಡಿಸಿಕೊಂಡಿದ್ದರು.
OTHER SPORTSFeb 24, 2021, 9:57 AM IST
ಟೆನಿಸ್ ರ್ಯಾಂಕಿಂಗ್: 2ನೇ ಸ್ಥಾನಕ್ಕೇರಿದ ನವೊಮಿ ಒಸಾಕ
ಜೆನಿಫರ್ ಬ್ರಾಡಿ ವಿರುದ್ದ ಭರ್ಜರಿ ಗೆಲುವು ದಾಖಲಿಸುವ ಮೂಲಕ ನವೊಮಿ ಒಸಾಕ 4ನೇ ಗ್ರ್ಯಾನ್ ಸ್ಲಾಂ ಪ್ರಶಸ್ತಿಗೆ ಮುತ್ತಿಕ್ಕಿದ್ದರು. ಇದರೊಂದಿಗೆ ಕಳೆದ ಮೂರು ವರ್ಷಗಳಲ್ಲಿ ಎರಡನೇ ಬಾರಿಗೆ ಒಸಾಕ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು.
OTHER SPORTSFeb 20, 2021, 7:56 AM IST
ಆಸ್ಪ್ರೇಲಿಯನ್ ಓಪನ್: ಫೈನಲ್ಗೆ ರಷ್ಯಾದ ಮೆಡ್ವೆಡೆವ್
ಭಾನುವಾರ ನಡೆಯಲಿರುವ ಫೈನಲ್ನಲ್ಲಿ ರಷ್ಯಾದ ಆಟಗಾರ, ವಿಶ್ವ ನಂ.1 ಹಾಗೂ ಹಾಲಿ ಚಾಂಪಿಯನ್ ಸರ್ಬಿಯಾದ ನೋವಾಕ್ ಜೋಕೋವಿಚ್ ವಿರುದ್ಧ ಚೊಚ್ಚಲ ಗ್ರ್ಯಾನ್ ಸ್ಲಾಂ ಪ್ರಶಸ್ತಿ ಗೆಲ್ಲಲು ಸೆಣಸಲಿದ್ದಾರೆ.
OTHER SPORTSFeb 19, 2021, 8:50 AM IST
ಆಸ್ಟ್ರೇಲಿಯನ್ ಓಪನ್: 9ನೇ ಬಾರಿ ಫೈನಲ್ಗೇರಿದ ಜೋಕೋವಿಚ್
ಜೋಕೋವಿಚ್ ಈ ಹಿಂದೆ 8 ಬಾರಿ ಫೈನಲ್ ಪ್ರವೇಶಿಸಿದಾಗಲೂ ಪ್ರಶಸ್ತಿ ಜಯಿಸಿದ್ದಾರೆ. ದಾಖಲೆಯ 9ನೇ ಆಸ್ಪ್ರೇಲಿಯನ್ ಓಪನ್ ಗೆದ್ದು ಒಟ್ಟು ಗ್ರ್ಯಾನ್ ಸ್ಲಾಂ ಪ್ರಶಸ್ತಿಗಳ ಸಂಖ್ಯೆಯನ್ನು 18ಕ್ಕೇರಿಸಿಕೊಳ್ಳುವ ಉತ್ಸಾಹದಲ್ಲಿದ್ದಾರೆ. ಅತಿಹೆಚ್ಚು ಗ್ರ್ಯಾನ್ ಸ್ಲಾಂ (20) ಗೆದ್ದಿರುವ ಫೆಡರರ್ ಹಾಗೂ ನಡಾಲ್ಗಿಂತ ಕೇವಲ 2 ಪ್ರಶಸ್ತಿ ಹಿಂದುಳಿಯಲಿದ್ದಾರೆ.
CricketFeb 17, 2021, 8:20 AM IST
ಆಸ್ಟ್ರೇಲಿಯನ್ ಓಪನ್: ಸೆಮೀಸ್ಗೇರಿದ ಜೋಕೋವಿಚ್, ಸೆರೆನಾ ವಿಲಿಯಮ್ಸ್
ಪುರುಷರ ಸಿಂಗಲ್ಸ್ ಕ್ವಾರ್ಟರ್ ಫೈನಲ್ನಲ್ಲಿ ಸರ್ಬಿಯಾದ ಜೋಕೋವಿಚ್, ಜರ್ಮನಿಯ ಅಲೆಕ್ಸಾಂಡರ್ ಜ್ವೆರೆವ್ ವಿರುದ್ಧ 6-7, 6-2, 6-4, 7-6 ಸೆಟ್ಗಳಲ್ಲಿ ಜಯಗಳಿಸಿದರು. ಸೆಮೀಸ್ನಲ್ಲಿ ಜೋಕೋವಿಚ್ಗೆ ರಷ್ಯಾದ ಆಸ್ಲನ್ ಕರಟ್ಲೆವ್ ವಿರುದ್ಧ ಸೆಣಸಲಿದ್ದಾರೆ.
OTHER SPORTSFeb 15, 2021, 8:07 AM IST
ಆಸ್ಪ್ರೇಲಿಯನ್ ಓಪನ್: ಕ್ವಾರ್ಟರ್ಗೆ ಜೋಕೋ, ಸೆರೆನಾ
23 ಗ್ರ್ಯಾನ್ಗಳ ಒಡತಿ ಸೆರೆನಾ ವಿಲಿಯಮ್ಸ್ 4ನೇ ಸುತ್ತಿನ ಪಂದ್ಯದಲ್ಲಿ ಬೆಲಾರುಸ್ನ ಆಯ್ರ್ನಾ ಸಬಲೆನ್ಕಾ ವಿರುದ್ಧ 6-4, 2-6, 6-4 ಸೆಟ್ಗಳಲ್ಲಿ ಜಯಿಸಿದರು. ಕ್ವಾರ್ಟರ್ ಫೈನಲ್ನಲ್ಲಿ ಸೆರೆನಾಗೆ 2ನೇ ಶ್ರೇಯಾಂಕಿತೆ ಸಿಮೋನಾ ಹಾಲೆಪ್ ಎದುರಾಗಲಿದ್ದಾರೆ.
OTHER SPORTSFeb 13, 2021, 8:59 AM IST
ಆಸ್ಟ್ರೇಲಿಯನ್ ಓಪನ್: ಜೋಕೋಗೆ ಪ್ರಯಾಸದ ಜಯ
ಅಮೆರಿಕದ ಟೇಲರ್ ಫ್ರಿಟ್ಜ್ ವಿರುದ್ಧ ನಡೆದ ಪಂದ್ಯದಲ್ಲಿ ಜೋಕೋವಿಚ್ 7-6, 6-4, 3-6, 4-6, 6-2 ಸೆಟ್ಗಳಲ್ಲಿ ಗೆಲುವು ಸಾಧಿಸಿದರು. ಮೊದಲೆರಡು ಸೆಟ್ ಜಯಿಸಿದ್ದ ಜೋಕೋವಿಚ್, 3 ಹಾಗೂ 4ನೇ ಸೆಟ್ನಲ್ಲಿ ಸೋಲುಂಡು ಹೊರಬೀಳುವ ಆತಂಕಕ್ಕೀಡಾದರು. ಆದರೆ 5ನೇ ಸೆಟ್ನಲ್ಲಿ ತಮ್ಮ ಸಾಮರ್ಥ್ಯಕ್ಕೆ ತಕ್ಕ ಆಟವಾಡಿದ ಜೋಕೋವಿಚ್ 6-2 ಗೇಮ್ಗಳಲ್ಲಿ ಗೆದ್ದು, ಮುನ್ನಡೆದರು.
OTHER SPORTSNov 8, 2020, 9:48 AM IST
ಟೆನಿಸ್ ದಿಗ್ಗಜ ಪೀಟ್ ಸಾಂಪ್ರಸ್ ದಾಖಲೆ ಸರಿಗಟ್ಟಿದ ಜೋಕೋವಿಚ್..!
33 ವರ್ಷದ ಸರ್ಬಿಯಾದ ಸ್ಟಾರ್ ಟೆನಿಸ್ ಆಟಗಾರ 2011, 2012, 2014, 2015 ಹಾಗೂ 2018ರಲ್ಲಿ ಜೋಕೋವಿಚ್ ನಂ.1 ಸ್ಥಾನದಲ್ಲಿ ವರ್ಷ ಕೊನೆಗೊಳಿಸಿದ್ದರು.
OTHER SPORTSOct 13, 2020, 12:58 PM IST
ಫ್ರೆಂಚ್ ಚಾಂಪಿಯನ್ ಇಗಾ ಸ್ವಿಟೆಕ್ ವಿಶ್ವ ನಂ.17 ಆಟಗಾರ್ತಿ..!
ಸೋಮವಾರ ನೂತನವಾಗಿ ಬಿಡುಗಡೆಯಾದ ಟೆನಿಸ್ ರ್ಯಾಂಕಿಂಗ್ನಲ್ಲಿ ಸ್ವಿಟೆಕ್ 37 ಸ್ಥಾನ ಜಿಗಿತ ಕಂಡಿದ್ದಾರೆ. ಸ್ವಿಟೆಕ್ಗೆ ಇದು ಜೀವನಶ್ರೇಷ್ಠ ಸಾಧನೆಯಾಗಿದೆ. ಆಸ್ಟ್ರೇಲಿಯಾದ ಆಶ್ಲೆ ಬಾಟಿ ನಂ.1 ಸ್ಥಾನ ಉಳಿಸಿಕೊಂಡಿದ್ದರೆ, ಸಿಮೊನಾ ಹಾಲೆಪ್, ನವೊಮಿ ಒಸಾಕ ನಂತರದ ಸ್ಥಾನದಲ್ಲಿದ್ದಾರೆ.
OTHER SPORTSOct 12, 2020, 8:50 AM IST
'ಫ್ರೆಂಚ್ ಕಿಂಗ್' ನಡಾಲ್ ಹೊಸ ದಾಖಲೆ..!
ಒಂದೂ ಸೆಟ್ನಲ್ಲಿ ಹಿನ್ನಡೆ ಅನುಭವಿಸದೇ 4 ಗ್ರ್ಯಾನ್ ಸ್ಲಾಮ್ ಟ್ರೋಫಿ ಗೆದ್ದ ಮೊದಲ ಟೆನಿಸಿಗ ಎಂಬ ದಾಖಲೆಯನ್ನು ರಾಫೆಲ್ ನಿರ್ಮಿಸಿದ್ದಾರೆ. ಭಾನುವಾರ ಇಲ್ಲಿ ನಡೆದ ಪುರುಷರ ಸಿಂಗಲ್ಸ್ ಫೈನಲ್ನಲ್ಲಿ ರಾಫೆಲ್, ವಿಶ್ವ ನಂ.1 ಸರ್ಬಿಯಾದ ನೊವಾಕ್ ಜೋಕೋವಿಚ್ ಎದುರು 6-0, 6-2, 7-5 ಸೆಟ್ಗಳಲ್ಲಿ ಗೆಲುವು ಸಾಧಿಸಿದರು.
OTHER SPORTSOct 10, 2020, 12:58 PM IST
ಫ್ರೆಂಚ್ ಓಪನ್ 2020: ಪ್ರಶಸ್ತಿಗಾಗಿ ನಡಾಲ್-ಜೋಕೋ ನಡುವೆ ಸೆಣಸಾಟ
ಸ್ವಿಜರ್ಲೆಂಡ್ನ ಫೆಡರರ್ 12 ಸಲ ವಿಂಬಲ್ಡನ್ ಫೈನಲ್ಗೇರಿದ್ದಾರೆ. ಪುರುಷರ ಸಿಂಗಲ್ಸ್ ಸೆಮೀಸ್ ನಲ್ಲಿ ನಡಾಲ್, ಅರ್ಜೆಂಟೀನಾದ ಡಿಗೊ ಸ್ಚರ್ಟಜಮನ್ ವಿರುದ್ಧ 6-3, 6-3, 7-6(7-0) ಸೆಟ್ಗಳಲ್ಲಿ ಗೆಲುವು ಸಾಧಿಸಿದರು.
OTHER SPORTSOct 6, 2020, 10:30 AM IST
ಫ್ರೆಂಚ್ ಓಪನ್: ಕ್ವಾರ್ಟರ್ಗೆ ಕ್ವಿಟೋವಾ, ಜೋಕೋ ಲಗ್ಗೆ
ಸೋಮವಾರ ನಡೆದ ಮಹಿಳಾ ಸಿಂಗಲ್ಸ್ನ ಪ್ರಿ ಕ್ವಾರ್ಟರ್ನಲ್ಲಿ 7ನೇ ಶ್ರೇಯಾಂಕಿತೆ ಕ್ವಿಟೋವಾ, ಚೀನಾದ ಜಾಂಗ್ ಶೂಯಿ ವಿರುದ್ಧ 6-2, 6-4 ಸೆಟ್ಗಳಲ್ಲಿ ಸುಲಭ ಗೆಲುವು ಪಡೆದರು. ಟೂರ್ನಿಯ ಮೊದಲ ಸುತ್ತಿನಿಂದ ಕ್ವಿಟೋವಾ ಒಂದು ಸೆಟ್ನ್ನು ಸೋತಿಲ್ಲ. ಎಲ್ಲಾ ಪಂದ್ಯಗಳಲ್ಲೂ ಕೇವಲ 2 ಸೆಟ್ಗಳ ಆಟದಲ್ಲಿ ಜಯ ಸಾಧಿಸಿದ್ದಾರೆ.
OTHER SPORTSOct 5, 2020, 12:18 PM IST
ಫ್ರೆಂಚ್ ಓಪನ್: ಹಾಲೆಪ್ ಹೋರಾಟ ಅಂತ್ಯ
ದಾಖಲೆ ಫ್ರೆಂಚ್ ಓಪನ್ ಮೇಲೆ ಕಣ್ಣಿಟ್ಟಿರುವ ಸ್ಪೇನ್ನ ರಾಫೆಲ್ ನಡಾಲ್, ಅಮೆರಿಕದ ಸೆಬಾಸ್ಟಿಯನ್ ವಿರುದ್ಧ 6-1, 6-1, 6-2 ರಲ್ಲಿ ಗೆದ್ದು ಕ್ವಾರ್ಟರ್ ಗೇರಿದರು. ಮತ್ತೊಂದು ಪ್ರಿಕ್ವಾರ್ಟರ್ನಲ್ಲಿ ಜರ್ಮನಿಯ ಜ್ವೆರೆವ್, ಇಟಲಿಯ ಸಿನ್ನೆರ್ ವಿರುದ್ಧ ಸೋತು ಹೊರಬಿದ್ದರು.
OTHER SPORTSOct 2, 2020, 10:57 AM IST
ಫ್ರೆಂಚ್ ಓಪನ್: ಮೂರನೇ ಸುತ್ತಿಗೆ ಜೋಕೋವಿಚ್ ಲಗ್ಗೆ
ಪುರುಷರ ಸಿಂಗಲ್ಸ್ನ 2ನೇ ಸುತ್ತಲ್ಲಿ 2016ರ ಫ್ರೆಂಚ್ ಓಪನ್ ಚಾಂಪಿಯನ್ ಜೋಕೋವಿಚ್, ಲಿತುನಿಯಾದ ರಿಕರ್ಡಸ್ ಬೆರ್ನಾಕಿ ವಿರುದ್ಧ 6-1, 6-2, 6-2 ಸೆಟ್ಗಳಲ್ಲಿ ಸುಲಭ ಗೆಲುವು ಸಾಧಿಸಿದರು. ಉಳಿದಂತೆ ಸ್ವಿಜರ್ಲೆಂಡ್ನ ಸ್ಟಾನ್ ವಾವ್ರಿಂಕಾ, ಬಲ್ಗೇರಿಯಾದ ಗ್ರಿಗೋರ್ ಡಿಮಿಟ್ರೊವ್, ರಷ್ಯಾದ ಕರೆನ್ ಕಚನೊವ್ ಮೂರನೇ ಸುತ್ತಿಗೆ ಲಗ್ಗೆ ಇಟ್ಟರು.
OTHER SPORTSSep 30, 2020, 9:23 AM IST
ಫ್ರೆಂಚ್ ಓಪನ್: ನಡಾಲ್, ಜೋಕೋವಿಚ್ 2ನೇ ಸುತ್ತಿಗೆ ಲಗ್ಗೆ
ನಡಾಲ್ ದಾಖಲೆಯ 13ನೇ ಫ್ರೆಂಚ್ ಓಪನ್ ಮೇಲೆ ನಡಾಲ್ ಕಣ್ಣಿಟ್ಟಿದ್ದಾರೆ. ಪುರುಷರ ಸಿಂಗಲ್ಸ್ ವಿಭಾಗದ ಮೊದಲ ಸುತ್ತಲ್ಲಿ ನಡಾಲ್, ಬೇಲಾರಸ್ನ ಇಗೊರ್ ಗೆರಸ್ಮಿಮೊವ್ ವಿರುದ್ಧ 6-4, 6-4, 6-2 ಸೆಟ್ಗಳಲ್ಲಿ ಗೆಲುವು ಸಾಧಿಸಿದರು. 2ನೇ ಸುತ್ತಲ್ಲಿ ನಡಾಲ್, ಅಮೆರಿಕದ ಮೆಕೆಂಜಿ ಮೆಕ್ಡೊನಾಲ್ಡ್ರನ್ನು ಎದುರಿಸಲಿದ್ದಾರೆ