ನೀರಿನ ಅಭಾವ  

(Search results - 15)
 • Karnataka Districts2, Aug 2019, 7:53 AM IST

  ತುಮಕೂರು: ನೀರಿಗೆ ಬರ, 600ರಲ್ಲಿ 200 ಬೋರ್‌ವೆಲ್‌ನಲ್ಲಿ ಮಾತ್ರ ನೀರು

  ಸ್ಮಾರ್ಟ್‌ ಸಿಟಿ ಯೋಜನೆಯಡಿಯಲ್ಲಿ ಅಭಿವೃದ್ಧಿ ಹೊಂದುತ್ತಿರುವ ತುಮಕೂರು ನಗರದಲ್ಲಿ ನೀರಿನ ಅಭಾವ ತಲೆದೋರಿದೆ. ಒಂದೆಡೆ ಸಿಟಿ ಅಭಿವೃದ್ಧಿಹೊಂದುತ್ತಿದ್ದರೆ, ಜನ ನೀರಿಲ್ಲದೆ ಪರದಾಡುವಂತಾಗಿದೆ. ತುಮಕೂರು ನಗರ ಪಾಲಿಕೆ ವ್ಯಾಪ್ತಿಯಲ್ಲಿ ಈವರೆಗೂ 600 ಕೊಳವೆ ಬಾವಿಗಳನ್ನು ಕೊರೆಯಲಾಗಿದ್ದು, ಅವುಗಳಲ್ಲಿ 200 ಕೊಳವೆ ಬಾವಿಗಳಲ್ಲಿ ನೀರು ಲಭ್ಯವಿದೆ.

 • Water

  Karnataka Districts27, Jul 2019, 12:49 PM IST

  ಚಿಕ್ಕಬಳ್ಳಾಪುರಕ್ಕೆ ಎದುರಾಗಲಿದ್ಯಾ ಜಲಕಂಟಕ..?

  ಈವರೆಗೂ ನಂದಿಗಿರಿಧಾಮದ ಪಶ್ಚಿಮ ಭಾಗದಲ್ಲಿ ಮತ್ತು ದೊಡ್ಡಬಳ್ಳಾಪುರ ಪ್ರದೇಶದಲ್ಲಿ ಉತ್ತಮವಾಗಿ ಮಳೆಯಾಗುತ್ತಿದ್ದ ಕಾರಣ ಜಕ್ಕಲಮಡಗು ಜಲಾಶಯಕ್ಕೆ ಯಥೇಚ್ಛವಾಗಿ ನೀರು ಹರಿದು ಬರುತ್ತಿತ್ತು. ಜಕ್ಕಲಮಡಗು ಜಲಾಶಯ ಭರ್ತಿಯಾಗಿ ನೀರಿನ ಕೊರತೆ ಕಾಡುತ್ತಿರಲಿಲ್ಲ. ಇದೀಗ ಜಲಾಶಯ ಸಂಪೂರ್ಣ ಬರಿದಾಗಿದ್ದು, ಚಿಕ್ಕಬಳ್ಳಾಪುರದಲ್ಲಿ ನೀರಿನ ಅಭಾವ ತಲೆದೋರಲಿದೆ.

 • আগামী বছরেই দেশ জুড়ে দেখা দিতে পারে তীব্র জলসংকট

  NEWS1, Jul 2019, 2:12 PM IST

  ಚೆನ್ನೈನಲ್ಲಿ ಹನಿ ನೀರಿಗೂ ತತ್ವಾರ ಬೆಂಗಳೂರಿಗೂ ಕಾದಿದೆ ಗಂಡಾಂತರ

  ಬೆಂಗಳೂರಿಗೆ ನೀರು ಪೂರೈಸುವ ಪ್ರಮುಖ ಮೂಲಗಳಾಗಿದ್ದ ಅರ್ಕಾವತಿ ನಶಿಸಿದೆ. ವೃಷಭಾವತಿ ನದಿಗೆ ಕಟ್ಟಲಾಗಿದ್ದ ತಿಪ್ಪಗೊಂಡನಹಳ್ಳಿ ಜಲಾಶಯ ಬಳಕೆಗೆ ಯೋಗ್ಯವಲ್ಲದ ಮಟ್ಟಿಗೆ ಹಾಳಾಗಿದೆ. ಇರುವ ಒಂದೇ ಮೂಲವೆಂದರೆ ಕಾವೇರಿ ನದಿ. ಅಲ್ಲಿಂದಲೂ 5ನೇ ಹಂತದಲ್ಲಿ ನೀರು ತರುವ ಕಾರ‍್ಯ ಚಾಲ್ತಿಯಲ್ಲಿದೆಯಾದರೂ, ಪ್ರಸ್ತುವ ವರ್ಷ ಕಾವೇರಿ ಮೂಲ ತಲಕಾವೇರಿ ವ್ಯಾಪ್ತಿಯಲ್ಲಿ ಮಳೆಯ ಪ್ರಮಾಣ ಕಡಿಮೆ ಆಗಿದೆ.

 • আগামী বছরেই দেশ জুড়ে দেখা দিতে পারে তীব্র জলসংকট

  NEWS14, Jun 2019, 4:35 PM IST

  ದೇಶದಲ್ಲಿ ನೀರನ್ನು ಪೋಲು ಮಾಡುತ್ತಿರುವವರೇ ಶ್ರೀಮಂತರು!

  ದೇಶದಲ್ಲಿ 60 ಕೋಟಿ ಜನರು ತೀವ್ರ ಬರ ಎದುರಿಸುತ್ತಿದ್ದಾರೆ. ದಿನಕ್ಕೆ 2500 ಜನರು ಶುದ್ಧ ಕುಡಿಯುವ ನೀರು ಸಿಗದೆ ಸಾವಿಗೀಡಾಗುತ್ತಿದ್ದಾರೆ. ಮುಂದಿನ ವರ್ಷದಲ್ಲಿ 21 ಪ್ರಮುಖ ನಗರಗಳಲ್ಲಿ ತೀವ್ರ ನೀರಿನ ಹಾಹಾಕಾರ ಉಂಟಾಗಲಿದೆ ಎಂದು ನೀತಿ ಆಯೋಗ ಹೇಳಿದೆ.

 • NEWS30, May 2019, 11:10 AM IST

  ಧರ್ಮಸ್ಥಳಕ್ಕೆ ಕಿಂಡಿ ಡ್ಯಾಂ: ಸಿಎಂಗೆ ಹೆಗ್ಗಡೆ ಕೃತಜ್ಞತೆ

  ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನೀರಿನ ಅಭಾವದ ಬಗ್ಗೆ ಮಾಹಿತಿ ತಿಳಿದ ತಕ್ಷಣ ಸಕಾರಾತ್ಮಕವಾಗಿ ಸ್ಪಂದಿಸಿದ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ಕೃತಜ್ಞತೆ ಸಲ್ಲಿಸಿ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಪತ್ರ ಬರೆದಿದ್ದಾರೆ.

 • NEWS30, May 2019, 9:25 AM IST

  ಕೆಆರ್‌ ಎಸ್‌ನಲ್ಲೂ ನೀರಿಲ್ಲ, ಮುಂಗಾರು ಕೈ ಕೊಟ್ಟರೆ ಬೆಂಗಳೂರಿಗೆ ಅಧೋಗತಿ!

  ಈಗಾಗಲೇ ರಾಜಧಾನಿ ಬೆಂಗಳೂರು ಕುಡಿಯುವ ನೀರಿನ ಸಮಸ್ಯೆಗೆ ತುತ್ತಾಗಿದೆ. ಈ ಬಾರಿ ಜೂನ್‌ನಲ್ಲಿ ಮುಂಗಾರು ಮಳೆ ದುರ್ಬಲಗೊಂಡರೆ ಮುಂದಿನ ದಿನಗಳಲ್ಲಿ ಈ ನೀರಿನ ಸಮಸ್ಯೆ ಮತ್ತಷ್ಟು ಉಲ್ಬಣಗೊಳ್ಳುವುದು ಸಾಧ್ಯತೆಗಳು ಹೆಚ್ಚಿವೆ.

 • NEWS29, May 2019, 7:11 PM IST

  ನೀರಿನ ನೋವಿಗೆ ಸ್ಪಂದಿಸಿದ ರಾಜ್ಯ ಸರ್ಕಾರಕ್ಕೆ ವೀರೇಂದ್ರ ಹೆಗ್ಗಡೆ ಧನ್ಯವಾದ

  ಧರ್ಮಸ್ಥಳದಲ್ಲಿ ನೀರಿನ ಅಭಾವ ಎದುರಾಗಿದ್ದು ಭಕ್ತಾದಿಗಳು ಕೆಲ ದಿನಗಳ ಕಾಲ ಪ್ರವಾಸ ಮುಂದಕ್ಕೆ ಹಾಕಿಕೊಳ್ಳಬೇಕು ಎಂದು ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಮನವಿ ಮಾಡಿಕೊಂಡಿದ್ದರು. ಇದಕ್ಕೆ ಸ್ಪಂದಿಸಿದ ಸರಕಾರ ಮತ್ತು ಜನತೆಗೆ ಹೆಗ್ಗಡೆ ಧನ್ಯವಾದ ಸಲ್ಲಿಸಿದ್ದಾರೆ.

 • Fire

  Karnataka Districts22, May 2019, 10:01 AM IST

  ಬೆಂಕಿ ನಂದಿಸಲೂ ಅಗ್ನಿ ಶಾಮಕ ದಳದಲ್ಲಿ ನೀರೇ ಇಲ್ಲ!

  ರಾಜ್ಯದಲ್ಲಿ ನೀರಿನ ಅಭಾವ ಭಾರಿ ಪ್ರಮಾಣದಲ್ಲಿ ತಟ್ಟುತ್ತಿದೆ. ಇತ್ತ ಬೆಂಕಿ ನಂದಿಸುವ ಅಗ್ನಿ ಶಾಮಕ ದಳಳದಲ್ಲಿಯೂ ನೀರು ಇಲ್ಲದಂತಾಗಿದೆ. 

 • Kanakagiri- marriage

  NEWS21, May 2019, 8:57 AM IST

  ನೀರಿಲ್ಲದೇ ಬುಟ್ಟಿಯಲ್ಲೇ ಬಾಸಿಂಗ ಬಿಟ್ಟ ವಧುವರರು

  ಉತ್ತರ ಕರ್ನಾಟಕ ಭಾಗದಲ್ಲಿ ಮದುಮಕ್ಕಳು ತಮ್ಮ ಬಾಸಿಂಗವನ್ನು ಪೂಜೆ ಮಾಡಿ ಹರಿಯುವ ನೀರಿನಲ್ಲಿ ಬಿಡುವ ಸಂಪ್ರದಾಯವಿದೆ. ಆದರೆ ನೀರಿನ ಅಭಾವದಿಂದಾಗಿ ವಧುವರರು ತಮ್ಮ ಬಾಸಿಂಗಗಳನ್ನು ಅನಿವಾರ್ಯವಾಗಿ ಬುಟ್ಟಿಯಲ್ಲಿಟ್ಟು, ಅದಕ್ಕೆ ನೀರು ಚಿಮುಕಿಸಿ ಬಾವಿಯಲ್ಲಿ ಬಿಟ್ಟಅಪರೂಪದ ಘಟನೆ ಕನಕಗಿರಿ ವೆಂಕಟಾಚಲಪತಿಯ ಸನ್ನಿಧಿಯಲ್ಲಿ ನಡೆದಿದೆ.

 • Karnataka Districts17, May 2019, 7:33 PM IST

  ಧರ್ಮಸ್ಥಳ ಪ್ರವಾಸ ಮುಂದೂಡಿ.. ವೀರೇಂದ್ರ ಹೆಗ್ಗಡೆ ಮನವಿ

  ಬೀರು ಬೇಸಿಗೆಯ ಸುಡು ಪ್ರಭಾವ ಇಡಿ ರಾಜ್ಯವನ್ನು ಕಾಡುತ್ತಿದೆ. ಈ ನಡುವೆ ಪುಣ್ಯ ಕ್ಷೇತ್ರ ಧರ್ಮಸ್ಥಳದಲ್ಲಿಯೂ ನೀರಿನ ಅಭಾವ ಕಂಡುಬಂದಿದೆ.

 • Video Icon

  NEWS30, Apr 2019, 4:48 PM IST

  ವಾರಕ್ಕೊಮ್ಮೆ ಸ್ನಾನ.. ತಿಂಗಳಿಗೊಮ್ಮೆ ಬಟ್ಟೆ ವಾಶ್!

  ಈ ಬಾರಿಯ ಬೇಸಿಗೆ ಗಣಿನಾಡು ಬಳ್ಳಾರಿಯನ್ನು ಬೇಯಿಸುತ್ತಿದೆ. ಬೆಂಕಿಯುಂಡೆಯಂತಹ ಬಿಸಿಲ ತಾಪಕ್ಕೆ ಜಿಲ್ಲೆಯ ಜಲಮೂಲಗಳು ಬತ್ತಿವೆ. ಕುಡಿಯುವ ನೀರಿಗಾಗಿ ಚಾತಕ ಪಕ್ಷಿಗಳಂತೆ ಕಾಯುವ ಜನತೆ ಟ್ಯಾಂಕರ್ ನೀರಿಗಾಗಿ ಬಡಿದಾಡುವಂತಾಗಿದೆ. ಇನ್ನು ಜಿಲ್ಲಾ ಕೇಂದ್ರದಿಂದ ಕೂಗಳತೆ ದೂರದ  ಹರಗಿನಡೋಣಿ ಗ್ರಾಮಸ್ಥರು ನೀರಿನ ಅಭಾವದಿಂದ ಪೇಪರ್ ಪ್ಲೇಟ್ನಲ್ಲಿ ಊಟ ಮಾಡಿ, ವಾರಕ್ಕೊಮ್ಮೆ ಸ್ನಾನ ಮಾಡುವ ಪರಿಸ್ಥಿತಿಗೆ ಬಂದಿದ್ದಾರೆ. ಕಳೆದ ಲೋಕಸಭಾ ಉಪಚುನಾವಣೆಯಲ್ಲಿ ಗ್ರಾಮಸ್ಥರು ನೀರಿಗಾಗಿ ಮತದಾನ ಬಹಿಷ್ಕರಿಸಿದ್ರು ಇವರ ಸಂಕಷ್ಟ ಮಾತ್ರ ಪರಿಹಾರವಾಗಿಲ್ಲ

 • water

  3, Jun 2018, 3:48 PM IST

  ನೀರಿನ ಹಾಹಾಕಾರಕ್ಕೆ ಇಸ್ರೇಲ್ ಕೊಟ್ಟ ಉತ್ತರವಿದು!

  ಇಸ್ರೇಲ್ ಸ್ವತಂತ್ರಗೊಂಡ ಎರಡು ವರ್ಷದಲ್ಲೇ ಚರಂಡಿ ನೀರನ್ನು ಬಳಸಿ ಕೃಷಿ ಮಾಡುವ ವಿಚಾರವಾಗಿ ಚರ್ಚೆ ಆರಂಭವಾಯಿತಾದರೂ ಸಂಸ್ಕರಿಸಿದ ಚರಂಡಿ ನೀರು ಆರೋಗ್ಯಕರವಲ್ಲ ಎಂಬ ನಂಬಿಕೆಯಿಂದಾಗಿ ಈ ವಿಚಾರವನ್ನು ಕೈಬಿಡಲಾಗಿತ್ತು. ಎಡೆಬಿಡದ ನೀರಿನ ಅಭಾವ, ಇಸ್ರೇಲಿನ ಸರ್ಕಾರೀ ಅಧಿಕಾರಿಗಳು ಮತ್ತು ರೈತರು ಕಾಲಕ್ರಮೇಣ ಈ ಕುರಿತು ಮರುಚಿಂತನೆ ಮಾಡುವಂತೆ ಮಾಡಿತು.

 • shimla

  2, Jun 2018, 8:13 AM IST

  ಪ್ರವಾಸಿಗರ ಸ್ವರ್ಗ ಶಿಮ್ಲಾದಲ್ಲಿ ನೀರಿಗೆ ಹಾಹಾಕಾರ!

  ಕೆಲ ತಿಂಗಳ ಹಿಂದೆ ದಕ್ಷಿಣ ಆಫ್ರಿಕಾರ ಕೇಪ್‌ಟೌನ್‌ನಲ್ಲಿ ನೀರಿಗಾಗಿ ಭಾರಿ ಕೋಲಾಹಲವೇ ಎದ್ದಿತ್ತು. ಈಗ ಅಂತದ್ದೇ ಪರಿಸ್ಥಿತಿ ಪ್ರವಾಸಿಗರ ಸ್ವರ್ಗ ಹಿಮಾಚಲ ಪ್ರದೇಶದ ಶಿಮ್ಲಾದಲ್ಲೂ ಉಂಟಾಗಿದೆ. ಕಳೆದ ಕೆಲವು ದಿನಗಳಿಂದ ತೀವ್ರ ನೀರಿನ ಅಭಾವ ಎದುರಿಸುತ್ತಿರುವ ಶಿಮ್ಲಾದಲ್ಲಿ ಪರಿಸ್ಥಿತಿ ಯಾವ ಮಟ್ಟಮುಟ್ಟಿದೆ ಎಂದರೆ, ಪ್ರವಾಸಿಗರೇ ಇಲ್ಲಿಗೆ ಬರಬೇಡಿ ಎಂದು ಸ್ಥಳೀಯರು ಬೇಡಿಕೊಳ್ಳತೊಡಗಿದ್ದಾರೆ.