ನಮೋ ವರ್ಷ

(Search results - 24)
• India2, Jun 2020, 11:54 AM

ಮೋದಿ ವರ್ಚಸ್ಸು ಅಂತಾರಾಷ್ಟ್ರೀಯ ಮಟ್ಟದಲ್ಲಿ ವೃದ್ಧಿ; ಸಂಸದ ನಾರಾಯಣ ಸ್ವಾಮಿ

ಹಿಂದೊಮ್ಮೆ ಯಡಿಯೂರಪ್ಪ ಅವರ ಸರ್ಕಾರದಲ್ಲಿ ಸಮಾಜ ಕಲ್ಯಾಣ ಸಚಿವರಾಗಿದ್ದ ವೇಳೆಯೇ ಚಿತ್ರದುರ್ಗ ಜಿಲ್ಲೆಯಲ್ಲಿ ಒಂದಷ್ಟುಸುತ್ತಾಟ ನಡೆಸಿದ್ದ ನಾರಾಯಣಸ್ವಾಮಿಗೆ ಈ ಪ್ರಾಂತ್ಯ ಚಿರಪರಿಚಿತ. ಮೇ 30ಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರ್ಕಾರ ಎರಡನೇ ಅವಧಿಯಲ್ಲಿ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ‘ಕನ್ನಡಪ್ರಭ’ಕ್ಕೆ ಸಂದರ್ಶನ ನೀಡಿದ್ದಾರೆ.

Annasaheb jolle

India1, Jun 2020, 11:03 PM

'ಬೃಹತ್‌, ಮಧ್ಯಮ ಕೈಗಾರಿಕೆ ಸ್ಥಾಪನೆಗೆ ಉತ್ಸುಕನಾಗಿರುವೆ'

ಚಿಕ್ಕೋಡಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಸಮಸ್ಯೆಗಳಿಗೆ ಸ್ಪಂದಿಸುವುದರ ಜತೆಗೆ ಈ ಭಾಗದ ಜನರಲ್ಲಿ ಆತ್ಮಸ್ಥೈರ್ಯ ತುಂಬುವ ಕಾರ್ಯವನ್ನು ಸಂಸದ ಅಣ್ಣಾಸಾಹೇಬ ಜೊಲ್ಲೆ ಮಾಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ 2.0 ಸರ್ಕಾರದ ಅವಧಿಯಲ್ಲಿ ಮೊದಲ ಬಾರಿಗೆ ಸಂಸದರಾಗಿ ಲೋಕಸಭೆ ಪ್ರವೇಶಿಸಿದ ಅಣ್ಣಾಸಾಹೇಬ ಜೊಲ್ಲೆ ಅವರು ಚಿಕ್ಕೋಡಿ ಕ್ಷೇತ್ರದ ಸಮಗ್ರ ಅಭಿವೃದ್ಧಿ ಕುರಿತು ತಮ್ಮ ಒಂದು ವರ್ಷದ ಅನುಭವವನ್ನು  ಹಂಚಿಕೊಂಡಿದ್ದಾರೆ.

BLS

India1, Jun 2020, 3:49 PM

'ಆತ್ಮನಿರ್ಭರತೆಯ ಸಂಕಲ್ಪದೊಡನೆ ಸಾರ್ಥಕ 365 ದಿನಗಳು'

ಎರಡನೇ ಬಾರಿ ಪ್ರಮಾಣವಚನದ ನಂತರ, ಮೋದಿ ಅವರ ಹೆಜ್ಜೆಗಳು ದೃಢ ನಿಶ್ಚಯದ ಧಾವಂತದ ಹೆಜ್ಜೆಗಳಾಗಿದ್ದವು. ಸಮಸ್ಯೆಗಳು, ಜಡತ್ವವನ್ನು ಹಿಂದೆ ಬಿಟ್ಟು ವಿಕಾಸದ ರಾಜಮಾರ್ಗದೆಡೆಗೆ ತೆರಳುವ ಧಾವಂತ ಅವರಲ್ಲಿ ಕಾಣುತ್ತಿತ್ತು.

• India1, Jun 2020, 3:49 PM

ಜನರ ನೋವು ಅರಿತ ಸರ್ಕಾರ: ಮೋದಿಗೆ ದೇಶವೇ ಮನೆ, ಜನರೇ ಕುಟುಂಬ

ರಾಜ್ಯದಿಂದ ಕೇಂದ್ರ ಸರ್ಕಾರದಲ್ಲಿ ಸಚಿವರಾಗಿರುವವರ ಪೈಕಿ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ.ಸದಾನಂದಗೌಡರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಆರು ವರ್ಷಗಳ ಕಾಲವೂ ಜತೆ ಜತೆಗೆ ಹೆಜ್ಜೆ ಹಾಕಿದ್ದಾರೆ. ಮೋದಿ ಅವರ ಆಡಳಿತ ವೈಖರಿಯನ್ನು ಹತ್ತಿರದಿಂದ ಬಲ್ಲವರು. ಎರಡನೇ ಅವಧಿಯ ಕೇಂದ್ರ ಸರ್ಕಾರ ತನ್ನ ಮೊದಲ ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ನೀಡಿದ ವಿಶೇಷ ಸಂದರ್ಶನದಲ್ಲಿ ಸದಾನಂದಗೌಡರು ಮೋದಿ ಮತ್ತು ಸರ್ಕಾರದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.

• India1, Jun 2020, 3:46 PM

ಮೋದಿ ಸರಕಾರ 2.0ಕ್ಕೆ ವರ್ಷ : ಪ್ರಭಾಕರ ಕೋರೆ ಮನದಾಳದ ಮಾತುಗಳು

ಮೋದಿ ಸರಕಾರ 2.0ಕ್ಕೆ ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಕನ್ನಡಪ್ರಭಕ್ಕೆ ವಿಶೇಷ ಸಂದರ್ಶನದಲ್ಲಿ ಮನದಾಳದ ಮಾತುಗಳನ್ನು ಹಂಚಿಕೊಂಡಿರುವ  ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ.

• India1, Jun 2020, 3:28 PM

ಸಂದರ್ಶನ: ಮೋದಿ ಸರ್ಕಾರ 2.0ಕ್ಕೆ ವರ್ಷ: ಉಮೇಶ್ ಜಾಧವ್ ಮೊದಲ ಬಾರಿಗೆ ಸಂಸತ್ ಪ್ರವೇಶ

2019ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಕಲಬುರಗಿಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಉಮೇಶ್​ ಜಾಧವ್​ ಸೋಲಿಲ್ಲದ ಸರದಾರ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಸ್ಪರ್ಧಿಸಿ ಭರ್ಜರಿ ಗೆಲುವು ಸಾಧಿಸಿ ಮೊದಲ ಬಾರಿಗೆ ಸಂಸತ್ ಪ್ರವೇಶಿಸಿದ್ದಾರೆ. ಇನ್ನು ಮೋದಿ ಸರಕಾರ 2.0ಕ್ಕೆ ವರ್ಷದ ಸಂಭ್ರಮದ ಬಗ್ಗೆ ಸಂಸದ ಉಮೇಶ್ ಜಾಧವ್ ಸಂದರ್ಶನದ ಪೂರ್ಣ ಪಾಠ ಇಲ್ಲಿದೆ.

sn Bhagwanth Khuba

India1, Jun 2020, 3:01 PM

ಮೋದಿ ಒಡನಾಟದಿಂದ ಬೀದರ್‌ ಅಭಿವೃದ್ಧಿ ನಾಗಾಲೋಟ: ಸಂಸದ ಭಗವಂತ ಖೂಬಾ

ಮೋದಿ ಸರಕಾರ 2.0ಕ್ಕೆ ಮೇ.30ಕ್ಕೆ ಒಂದು ವರ್ಷ ಪೂರೈಸಿದೆ. ಈ ಅವಧಿಯಲ್ಲಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೈಗೊಂಡ ನಿರ್ಧಾರಗಳ ಕುರಿತು ಸಂದರ್ಶನದಲ್ಲಿ ಬೀದರ್ ಸಂಸದ ಭಗವಂತ ಖೂಬಾ ಆಡಿದ ಮಾತುಗಳು..

• India1, Jun 2020, 2:35 PM

ಮೋದಿ ಸರ್ಕಾರ 2.0ಕ್ಕೆ ವರ್ಷ, 2 ದಶಕಗಳ ಬಳಿಕ ಗಂಗಾವತಿಗೆ ರೈಲು: ಕರಡಿ ಸಂಗಣ್ಣ ಹರ್ಷ

ಮೇ 30. ಮೋದಿ ಅವರು 2ನೇ ಅವಧಿಗೆ ಪ್ರಧಾನಿಯಾಗಿ ವರ್ಷ ಪೂರೈಸಿದ್ದಾರೆ. ಈ ಅವಧಿಯಲ್ಲಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೈಗೊಂಡ ನಿರ್ಧಾರಗಳು, ದೇಶದ ಪ್ರಗತಿಯಲ್ಲಿ ಮೋದಿ ವಹಿಸಿದ ಪಾತ್ರ ಸೇರಿದಂತೆ ಹಲವು ಮಹತ್ತರ ವಿಚಾರಗಳನ್ನು ಎರಡನೇ ಬಾರಿಗೆ ಆಯ್ಕೆಯಾಗಿರುವ ಕೊಪ್ಪಳ ಸಂಸದ ಕರಡಿ ಸಂಗಣ್ಣನವರ ಮನದಾಳದ ಮಾತುಗಳು ಇಲ್ಲಿವೆ.

• India1, Jun 2020, 1:45 PM

ಮೋದಿ ಕಾಲದಲ್ಲಿ ಭಾರತ ಬದಲಾಗಿದೆ, ಜಗತ್ತೂ ಬದಲಾಗಿದೆ

ಮೇ 30. ಮೋದಿ ಅವರು 2ನೇ ಅವಧಿಗೆ ಪ್ರಧಾನಿಯಾಗಿ ವರ್ಷ ಪೂರೈಸಿದ್ದಾರೆ. ಈ ಅವಧಿಯಲ್ಲಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೈಗೊಂಡ ನಿರ್ಧಾರಗಳು, ದೇಶದ ಪ್ರಗತಿಯಲ್ಲಿ ಮೋದಿ ವಹಿಸಿದ ಪಾತ್ರ, ಕೊರೋನಾ ಹೋರಾಟದ ಬಗ್ಗೆ ಉಪ ಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಅವರು ದೇಶದ ಮೊದಲ ಸೇವಕನ ಬಗ್ಗೆ ಇಲ್ಲಿ ವಿಭಿನ್ನವಾಗಿ ಚರ್ಚೆ ಮಾಡಿದ್ದಾರೆ.

Raja Amareshwara Naik

India1, Jun 2020, 12:30 PM

ಮೋದಿ ಮಾದರಿಯಲ್ಲೇ ರಾಯಚೂರು ಅಭಿವೃದ್ಧಿ: ಸಂಸದ ರಾಜಾ ಅಮರೇಶ್ವರ ನಾಯಕ

ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳನ್ನೊಳಗೊಂಡ ಲೋಕಸಭಾ ಕ್ಷೇತ್ರದಿಂದ ಮೊದಲ ಬಾರಿ ಸಂಸದರಾಗಿ ಆಯ್ಕೆಯಾಗಿ ಒಂದು ವರ್ಷ ಮಾಡಿದ ಕೆಲಸ ಕಾರ್ಯಕ್ರಮಗಳು, ಮುಂದಿನ ಯೋಜನೆಯ ಆಲೋಚನೆಯನ್ನು ಹೊಂದಿರುವ ಸಂಸದ ರಾಜಾ ಅಮರೇಶ್ವರ ನಾಯಕ ಅವರು ತಮ್ಮ ಅವಧಿಯಲ್ಲಿ ಕ್ಷೇತ್ರಕ್ಕೆ ಶಾಶ್ವತ ಕೊಡುಗೆಯನ್ನು ನೀಡುವ ಅಭಿಲಾಷೆಯನ್ನು ವ್ಯಕ್ತಪಡಿಸಿದ್ದಾರೆ.

Ramesh Jigajinagi

India1, Jun 2020, 12:09 PM

ಕೇಳುವ ಮೊದಲೇ ಮೋದಿ ಹಣ ಕೊಡ್ತಿದಾರೆ: ಸಂಸದ ರಮೇಶ ಜಿಗಜಿಣಗಿ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಳಿಕ ವಿಜಯಪುರ ಜಿಲ್ಲೆಯಲ್ಲಿ ನಾನಾ ಅಭಿವೃದ್ಧಿ ಕಾಮಗಾರಿ ಆಗಿದ್ದು, ಇನ್ನೂ ಆಗುತ್ತಲೇ ಇವೆ. ಕಾಂಗ್ರೆಸ್‌ ಸರ್ಕಾರ 50 ವರ್ಷಗಳ ಕಾಲ ದೇಶದಲ್ಲಿ ಆಡಳಿತದ ಚುಕ್ಕಾಣಿ ಹಿಡಿದಿದ್ದರೂ ಯೋಜನೆ ಹೊರತಾಗಿ ಒಂದು ನಯಾಪೈಸೆ ಜಿಲ್ಲೆಗೆ ಹರಿದು ಬರಲಿಲ್ಲ. ಆದರೆ ನರೇಂದ್ರ ಮೋದಿ ಸರ್ಕಾರ ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿಯನ್ನು ಹಿಡಿದ ಬಳಿಕ ಅಭಿವೃದ್ಧಿಗೆ ಸಾಕಷ್ಟು ಹಣ ಹರಿದು ಬಂದಿದೆ. ಜಿಲ್ಲೆ ಅಭಿವೃದ್ಧಿಯತ್ತ ದಾಪುಗಾಲು ಹಾಕುತ್ತಿದೆ.

• India1, Jun 2020, 11:53 AM

ಜನಸ್ನೇಹಿ ಸೇವೆಗೆ ರೈಲ್ವೆ ಇಲಾಖೆ ಸಂಕಲ್ಪ: ಸುರೇಶ್ ಅಂಗಡಿ

ಪ್ರಧಾನಮಂತ್ರಿ ನರೇಂದ್ರ ಮೋದಿ ಆಶಯದಂತೆ ರೈಲ್ವೆ ಇಲಾಖೆಯನ್ನು ಜನಸ್ನೇಹಿಯಾಗಿಸುವ ಗುರಿಯೊಂದಿಗೆ ಹೆಜ್ಜೆ ಇಟ್ಟಿದ್ದು, ದೇಶದ ರೈಲು ನಿಲ್ದಾಣಗಳಲ್ಲಿ ಸ್ವಚ್ಛತೆ, ನೈರ್ಮಲ್ಯಕ್ಕೆ ಹೆಚ್ಚಿನ ಆದ್ಯತೆ ನೀಡಿದೆ. ಈ ಬಾರಿ ಬಜೆಟ್‌ನಲ್ಲಿಯೂ ರಾಜ್ಯಕ್ಕೆ ಹಲವಾರು ರೈಲ್ವೆ ಯೋಜನೆಗಳನ್ನು ಘೋಷಿಸಿದೆ. ಅಲ್ಲದೆ, ನೆನೆಗುದಿಗೆ ಬಿದ್ದಿರುವ ಹಳೆಯ ಯೋಜನೆಗಳನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸುವ ಸಂಕಲ್ಪ ಮಾಡಿರುವುದಾಗಿ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಅವರು ಹೇಳಿಕೊಂಡಿದ್ದಾರೆ. ಮೋದಿ ಸರ್ಕಾರ 2.0 ಅಸ್ತಿತ್ವಕ್ಕೆ ಬಂದು ಮೇ 30ಕ್ಕೆ ಒಂದು ವರ್ಷ ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ನಡೆಸಿದ ಸಂದರ್ಶನದಲ್ಲಿ ಮಾತು.

P C Mohan

India1, Jun 2020, 11:30 AM

ಎಲ್ಲಾ ಸಂಸದರಿಗೂ ಸೂಕ್ತ ಸಲಹೆ ಸೂಚನೆ ನೀಡುವ ಮೋದಿ: ಸಂಸದ ಪಿ.ಸಿ.ಮೋಹನ್‌

ಮೂರನೇ ಬಾರಿ ಸಂಸದರಾಗಿ ಚುನಾಯಿತರಾಗಿರುವ ಬೆಂಗಳೂರಿನ ಪಿ.ಸಿ.ಮೋಹನ್‌ ಅವರು ಹಿಂದಿನ ಯುಪಿಎ ಸರ್ಕಾರದ ಆಡಳಿತವನ್ನೂ ಗಮನಿಸಿ ಇದೀಗ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರದ ಬಿಜೆಪಿ ಸರ್ಕಾರದ ಎರಡನೇ ಅವಧಿಯನ್ನೂ ನೋಡಿದ್ದಾರೆ. ಕನ್ನಡಪ್ರಭಕ್ಕೆ ನೀಡಿರುವ ಸಂದರ್ಶನದಲ್ಲಿ ಹಲವಾರು ವಿಷಗಳನ್ನು ಅವರು ಪ್ರಸ್ತಾಪಿಸಿ ವಿಶ್ಲೇಷಿಸಿದ್ದಾರೆ.

• India31, May 2020, 2:24 PM

ಮೋದಿ ಇಟ್ಟ ಹೆಜ್ಜೆಯಿಂದ ಭಾರತ ಹಿರಿಯಣ್ಣ ಆಗುತ್ತೆ: ಪ್ರಹ್ಲಾದ ಜೋಶಿ

ಕೇಂದ್ರ ಸರ್ಕಾರದಲ್ಲಿನ ಪ್ರಭಾವಿ ಸಚಿವರುಗಳಲ್ಲಿ ಧಾರವಾಡ ಲೋಕಸಭಾ ಕ್ಷೇತ್ರದ ಸದಸ್ಯ, ಸಚಿವ ಪ್ರಹ್ಲಾದ ಜೋಶಿ ಅವರು ಕೂಡ ಒಬ್ಬರಾಗಿ ಹೊರಹೊಮ್ಮಿದ್ದಾರೆ. ಸರ್ಕಾರದ ನೀತಿ ನಿರ್ಧಾರಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಕೊರೋನಾ ವೈರಸ್‌ನಿಂದಾಗಿ ಜಗತ್ತಿನ ವಿವಿಧ ರಾಷ್ಟ್ರಗಳಲ್ಲಿ ಸಂಭವಿಸಿದ ಸಾವು ನೋವುಗಳಿಗೆ ಹೋಲಿಸಿದರೆ ಭಾರತ ಅತ್ಯಂತ ಸುರಕ್ಷಿತವಾಗಿದೆ.

• India31, May 2020, 12:50 PM

ಮೋದಿ ಆಶಯದಂತೆ ಹಾವೇರಿ-ಗದಗ ಅಭಿವೃದ್ಧಿ: ಸಂಸದ ಶಿವಕುಮಾರ ಉದಾಸಿ

ಕೇಂದ್ರ ಸರ್ಕಾರದ ಯಾವುದೇ ಜನ ಕಲ್ಯಾಣ ಕಾರ್ಯಕ್ರಮ, ಯೋಜನೆಯಿದ್ದರೂ ಅದರ ಗರಿಷ್ಠ ಪ್ರಯೋಜನ ತನ್ನ ಕ್ಷೇತ್ರದ ಜನರಿಗೆ ಸಿಗಬೇಕು ಎಂಬ ಮಹತ್ವಾಕಾಂಕ್ಷೆಯನ್ನು ಹೊಂದಿ ಅದರಲ್ಲಿ ಬಹುಮಟ್ಟಿಗೆ ಯಶಸ್ಸು ಕಂಡವರು ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಸದಸ್ಯರಾಗಿರುವ ಶಿವಕುಮಾರ ಉದಾಸಿ. 2009ರಿಂದ ಸತತವಾಗಿ ಮೂರು ಬಾರಿ ಕ್ಷೇತ್ರದಿಂದ ಗೆದ್ದು ಹ್ಯಾಟ್ರಿಕ್‌ ಬಾರಿಸಿರುವ ಅವರು, ಹಾವೇರಿ ಮತ್ತು ಗದಗ ಜಿಲ್ಲೆಯನ್ನು ಒಳಗೊಂಡ ಕ್ಷೇತ್ರದ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತಿದ್ದಾರೆ.