ತೈಲ ಆಮದು  

(Search results - 8)
 • Fuel Bill

  BUSINESS7, Dec 2018, 12:05 PM

  ಆಯ್ತ್ರಪ್ಪಾ ನಿಮ್ ದುಡ್ಡೇ ಕೊಡಿ: ಇರಾನ್‌ಗೆ 'ಅರ್ಥ'ವಾದರು ಮೋದಿ!

  ಮಹತ್ವದ ಬೆಳವಣಿಗೆಯೊಂದರಲ್ಲಿ ಆಮದು ಮಾಡಿಕೊಳ್ಳುವ ಕಚ್ಚಾ ತೈಲಕ್ಕೆ ರೂಪಾಯಿಯಲ್ಲೇ ಪಾವತಿ ಮಾಡಲು ಭಾರತ ಇರಾನ್ ನಡುವಿನ ಒಪ್ಪಂದಕ್ಕೆ ಅಧಿಕೃತ ಮುದ್ರೆ ಬಿದ್ದಿದೆ. ಇನ್ನು ಇರಾನ್‌ನಿಂದ ಆಮದು ಮಾಡಿಕೊಳ್ಳುವ ತೈಲಕ್ಕೆ ಭಾರತ ಇರಾನ್‌ನ ನ್ಯಾಷನಲ್ ಇರಾನಿಯನ್ ಆಯಿಲ್ ಕೋ (ಎನ್ಐಒಸಿ)ದ ಯುಸಿಒ ಬ್ಯಾಂಕ್ ಖಾತೆಗೆ ರೂಪಾಯಿಯಲ್ಲೇ ಪಾವತಿ ಮಾಡಲಿದೆ.

 • Modi-Fuel

  BUSINESS6, Nov 2018, 3:55 PM

  ತೈಲದರ ಬರೀ ಸುದ್ದಿ ಅನ್ನೋ ಮೂರ್ಖರು: ಇವ್ರೇ ಮೋದಿ ಹೇಳಿದ್ದ ಧೂರ್ತರು!

  ಕಳೆದ 18 ದಿನಗಳಿಂದ ಸತತವಾಗಿ ತೈಲದರದಲ್ಲಿ ಇಳಿಕೆ ಕಂಡು ಬರುತ್ತಿದೆ. ಅದರಲ್ಲೂ ದೇಶದಲ್ಲಿ ಸದ್ಯ ಇರಾನ್ ತೈಲ ಆಮದು ಕುರಿತ ಚರ್ಚೆಗಳಿಗೆ ಬರವಿಲ್ಲ. ಆದರೆ ಪೈಸೆಗಳ ಲೆಕ್ಕದಲ್ಲಿ ತೈಲದರ ಇಳಿದಾಗ ಸಿಡಿಮಿಡಿಗೊಳ್ಳುವ ಬಹುತೇಕರು, ಈ ಪೈಸೆಯ ಲೆಕ್ಕಾಚಾರದ ಅಗಾಧತೆ ಅರಿಯುವಲ್ಲಿ ವಿಫಲವಾಗುತ್ತಾರೆ.

 • Modi-Trump

  BUSINESS12, Oct 2018, 10:58 AM

  ಇರಾನ್ ಕೈ ಬಿಡದಿದ್ದರೆ ‘ನೋಡ್ಕೊತೀವಿ’: ಭಾರತಕ್ಕೆ ಟ್ರಂಪ್ ಬೆದರಿಕೆ!

  ಅಮೆರಿಕಕ್ಕೆ ತಾನು ವಿಶ್ವದ ದೊಡ್ಡಣ್ಣ ಎಂಬ ಸೊಕ್ಕು ಇದೆ. ಅದು ಡೋನಾಲ್ಡ್ ಟ್ರಂಪ್ ಅಧ್ಯಕ್ಷರಾದ ಮೇಲೆ ಮತ್ತಷ್ಟು ಹೆಚ್ಚಾಗಿದೆ. ಇಡೀ ವಿಶ್ವದ ‘ಕೇರ್ ಟೇಕರ್’ ಎಂಬಂತೆ ಪೋಸು ಕೊಡುತ್ತಿರುವ ಟ್ರಂಪ್, ಇತರ ರಾಷ್ಟ್ರಗಳ ವಿದೇಶಾಂಗ ನೀತಿಯಲ್ಲೂ ಮೂಗು ತೂರಿಸುವ ಪ್ರಯತ್ನ ನಡೆಸಿದ್ದಾರೆ. ಅದರಂತೆ ನವೆಂಬರ್ 4 ರ ಬಳಿಕ ಇರಾನ್ ಮೇಲಿನ ಅಮೆರಿಕದ ನಿರ್ಬಂಧ ಸಂಪೂರ್ಣ ಜಾರಿಗೆ ಬರಲಿದ್ದು, ಅದಾದ ಬಳಿಕ ಇರಾನ್ ಜೊತೆ ತೈಲ ಒಪ್ಪಂದ ನಡೆಸುವ ರಾಷ್ಟ್ರಗಳನ್ನು ‘ನೋಡಿಕೊಳ್ಳಲಾಗುವುದು’ ಎಂದು ಟ್ರಂಪ್ ನೇರ ಬೆದರಿಕೆಯೊಡ್ಡಿದ್ದಾರೆ.

 • Dharmendra Pradhan

  BUSINESS8, Oct 2018, 8:11 PM

  ‘ಟ್ರಂಪ್ ಏನ್ಮಾಡ್ತಾರೋ ನೋಡೇ ಬಿಡ್ತಿವಿ: ಇರಾನ್‌ನಿಂದ ಪೆಟ್ರೋಲ್ ತರ್ತಿವಿ’!

  ಅಮೆರಿಕದ ನಿರ್ಬಂಧಗಳ ಹೊರತಾಗಿಯೂ ಭಾರತ ನವೆಂಬರ್‌ನಲ್ಲಿ ಇರಾನ್ ನಿಂದ ತೈಲ ಖರೀದಿಸಲಿದೆ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಸ್ಪಷ್ಟಪಡಿಸಿದ್ದಾರೆ. ಇರಾನ್ ಮೇಲೆ ಅಮೆರಿಕ ವಿಧಿಸಿರುವ ಕಠಿಣ ನಿರ್ಬಂಧಗಳು ನವೆಂಬರ್ 4ರಿಂದ ಜಾರಿಗೆ ಬರಲಿದ್ದು, ಇದರ ನಡುವೆಯೂ ನವೆಂಬರ್ ನಲ್ಲಿ ಇರಾನ್‌ನಿಂದ ಕಚ್ಚಾ ತೈಲ ಆಮದು ಮಾಡಿಕೊಳ್ಳಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

 • Crude Oil

  BUSINESS25, Sep 2018, 10:55 AM

  ಪೆಟ್ರೋಲ್ ಬೆಲೆ ಇಳ್ಸಿ ಅಂದ್ರೆ ಪೆಟ್ರೋಲ್ ಆಮದನ್ನೇ ಇಳ್ಸತಾರಂತೆ!

  ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ನಿರಂತರವಾಗಿ ಏರಿಕೆಯಾಗುತ್ತಲೇ ಇದೆ. ಈ ಬೆಲೆ ಏರಿಕೆ ಭಾರತದ ಆರ್ಥಿಕತೆ ಮೇಲೆ ದುಷ್ಪರಿಣಾಮ ಬೀರುತ್ತಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಿಂದ ಸರ್ಕಾರ ಮತ್ತು ಜನಸಾಮಾನ್ಯ ಕಂಗಾಲಾಗಿದ್ದಾನೆ. ಈ ಮಧ್ಯೆ ಕಚ್ಚಾತೈಲ ಬೆಲೆ ಏರಿಕೆಯಿಂದಾಗಿ ದೇಶದ ಆರ್ಥಿಕತೆ ಮೇಲೆ ಉಂಟಾಗುತ್ತಿರುವ ಗಂಭೀರ ಪರಿಣಾಮಗಳ ಹೊರೆ ಇಳಿಸಿಕೊಳ್ಳಲು, ತೈಲ ಆಮದು ಪ್ರಮಾಣವನ್ನೇ ಕೆಲ ದಿನಗಳ ಕಾಲ ಕಡಿತಗೊಳಿಸಲು ತೈಲ ಕಂಪನಿಗಳು ಚಿಂತನೆ ನಡೆಸುತ್ತಿವೆ. 

 • Oil Import

  BUSINESS21, Sep 2018, 2:17 PM

  ಇರಾನ್‌ಗೆ ಇನ್ಮುಂದೆ ನಮ್ದೇ ರೊಕ್ಕಾ: ಭಾರತದ ಬದಲಾದ ಲೆಕ್ಕಾ!

  ಇರಾನ್‌ನಿಂದ ಕಚ್ಚಾ ತೈಲ ಆಮದು ಮಾಡಿಕೊಳ್ಳುವ ಒಪ್ಪಂದದಲ್ಲಿ ಭಾರತ ಮಹತ್ವದ ಬದಲಾವಾಣೆ ಮಾಡಿದೆ. ಇನ್ನು ಮುಂದೆ ಇರಾನ್‌ಗೆ ಕಚ್ಚಾ ತೈಲ ಆಮದಿನ ಹಣವನ್ನು ರೂಪಾಯಿಯಲ್ಲೇ ಪಾವತಿ ಮಾಡುವುದಾಗಿ ಭಾರತ ಘೋಷಿಸಿದೆ.

 • India-Iran

  BUSINESS24, Jul 2018, 2:50 PM

  ಸಹಜ ಸ್ಥಿತಿಗೆ ಭಾರತ-ಇರಾನ್ ತೈಲ ಸಂಬಂಧ!

  ಭಾರತಕ್ಕೇರಿದ್ದ ತೈಲ ಜ್ವರ ನಿಧಾನವಾಗಿ ಕಡಿಮೆಯಾಗುವ ಲಕ್ಷಣ ಗೋಚರವಾಗಿದೆ. ಇರಾನ್ ಮೇಲಿನ ಮುನಿಸಿಗೆ ಆ ರಾಷ್ಟ್ರದಿಂದ ತೈಲ ಆಮದು ಮಾಡಿಕೊಳ್ಳುವುದನ್ನು ಭಾರತ ಕಡಿಮೆ ಮಾಡುವಂತೆ ಅಮೆರಿಕ ಹೇರಿದ್ದ ಒತ್ತಡ ಕೂಡ ಕಡಿಮೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಭಾರತ-ಇರಾನ್ ತೈಲ ಸಂಬಂಧ ಸಹಜ ಸ್ಥಿತಿಗೆ ಮರಳುವ ಭರವಸೆ ವ್ಯಕ್ತವಾಗಿದೆ.

 • Oil Refinary

  BUSINESS11, Jul 2018, 2:23 PM

  ಇರಾನ್‌ನಿಂದ ತೈಲ ಆಮದು ಪ್ರಮಾಣ ಇಳಿಕೆ

  ಇರಾನ್ ಮೇಲಿನ ತನ್ನ ನಿರ್ಬಂಧವನ್ನು ಅಮೆರಿಕ ಮತ್ತಷ್ಟು ಬಿಗಿಗೊಳಿಸುತ್ತಿದೆ. ಅಷ್ಟೇ ಅಲ್ಲದೇ ಇರಾನ್ ವಿಷಯದಲ್ಲಿ ಇತರ ರಾಷ್ಟ್ರಗಳೂ ತಾನು ಹೇಳಿದಂತ ಕೇಳಬೇಕು ಎಂದು ಅಮೆರಿಕ ಬಯಸುತ್ತಿದೆ. ಇದೇ ಕಾರಣಕ್ಕೆ ಇರಾನ್‌ನಿಂದ ತೈಲ ಆಮದು ಪ್ರಮಾಣವನ್ನು ಕಡಿಮೆ ಮಾಡಿಕೊಳ್ಳುವಂತೆ ಭಾರತ ಮತ್ತು ಚೀನಾ ಮೇಲೆ ಅಮೆರಿಕ ಒತ್ತಡ ಹೇರುತ್ತಲೇ ಇದೆ. ಈ ಜಾಗತಿಕ ಆರ್ಥಿಕ ಯುದ್ಧದಲ್ಲಿ ಅಮೆರಿಕದ ಮಾತು ಕೇಳಿರುವ ಭಾರತ ಇರಾನ್‌ನಿಂದ ತೈಲ ಆಮದು ಪ್ರಮಾಣವನ್ನು ಇಳಿಸಿದೆ.