Search results - 30 Results
 • BUSINESS11, Nov 2018, 11:13 AM IST

  ಸಂಡೇ ಸ್ಪೆಶಲ್: ಹೌದಪ್ಪ ಅಂದಂಗೆ ಇಳಿದಿದೆ ಪೆಟ್ರೋಲ್, ಡೀಸೆಲ್!

  ನಿರಂತರ ತೈಲ ಇಳಿಕೆಯಿಂದಾಗಿ ಜನರಲ್ಲಿ ಸಂತಸ ಮೂಡಿದ್ದು, ಇಂದೂ ಕೂಡ ದೇಶಾದ್ಯಂತ ತೈಲದರದಲ್ಲಿ ಕೊಂಚ ಇಳಿಕೆ ಕಂಡು ಬಂದಿದೆ. ಅಂತರಷ್ಟ್ರೀಯ ಮಾರುಕಟ್ಟೆಯಲ್ಲಿ ನಿರಂತರವಾಗಿ ಕುಸಿಯುತ್ತಿರುವ ಕಚ್ಚಾ ತೈಲದರದಿಂದಾಗಿ ಬೆಲೆ ಇಳಿಕೆ ಮಾಡಲಾಗುತ್ತಿದೆ ಎಂದು ಭಾರತೀಯ ತೈಲ ಕಂಪನಿಗಳು ಮಾಹಿತಿ ನೀಡಿವೆ.

 • BUSINESS10, Nov 2018, 2:10 PM IST

  ಮುಗೀತಾ ಹಬ್ಬ?: ಪೆಟ್ರೋಲ್ ರೇಟ್ ಕಥೆ ಏನಾಗಿದೆ ನೋಡಿ!

  ನಿರಂತರ ತೈಲದರ ಇಳಿಕೆ ಜನರಲ್ಲಿ ಹೊಸ ನಿರೀಕ್ಷೆಗಳನ್ನು ಮೂಡಿಸಿದ್ದು, ಇಂದೂ ಕೂಡ ದೇಶದ ಮಹಾನಗರಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿದೆ. ಇಂದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ತಲಾ 18 ಪೈಸೆ ಇಳಿದಿರುವುದು ವಿಶೇಷ.

 • BUSINESS9, Nov 2018, 12:40 PM IST

  ಫುಲ್ 'ಪೈಸಾ' ವಸೂಲ್: ಪೆಟ್ರೋಲ್ ರೇಟ್ ಇಳಿಕೆಯ ಕಮಾಲ್!

  ನಿರಂತರ ತೈಲದರ ಇಳಿಕೆ ಜನರಲ್ಲಿ ಹೊಸ ನಿರೀಕ್ಷೆಗಳನ್ನು ಮೂಡಿಸಿದ್ದು, ಇಂದೂ ಕೂಡ ದೇಶದ ಮಹಾನಗರಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿದೆ.

 • Modi-Fuel

  BUSINESS6, Nov 2018, 3:55 PM IST

  ತೈಲದರ ಬರೀ ಸುದ್ದಿ ಅನ್ನೋ ಮೂರ್ಖರು: ಇವ್ರೇ ಮೋದಿ ಹೇಳಿದ್ದ ಧೂರ್ತರು!

  ಕಳೆದ 18 ದಿನಗಳಿಂದ ಸತತವಾಗಿ ತೈಲದರದಲ್ಲಿ ಇಳಿಕೆ ಕಂಡು ಬರುತ್ತಿದೆ. ಅದರಲ್ಲೂ ದೇಶದಲ್ಲಿ ಸದ್ಯ ಇರಾನ್ ತೈಲ ಆಮದು ಕುರಿತ ಚರ್ಚೆಗಳಿಗೆ ಬರವಿಲ್ಲ. ಆದರೆ ಪೈಸೆಗಳ ಲೆಕ್ಕದಲ್ಲಿ ತೈಲದರ ಇಳಿದಾಗ ಸಿಡಿಮಿಡಿಗೊಳ್ಳುವ ಬಹುತೇಕರು, ಈ ಪೈಸೆಯ ಲೆಕ್ಕಾಚಾರದ ಅಗಾಧತೆ ಅರಿಯುವಲ್ಲಿ ವಿಫಲವಾಗುತ್ತಾರೆ.

 • BUSINESS28, Oct 2018, 3:37 PM IST

  11ನೇ ದಿನದಾಟ: ಇನ್ಮೇಲೆ ಇರಲ್ವಾ ಪೆಟ್ರೋಲ್ ದರ ಏರಿಕೆ ಕಾಟ?

  ನಿರಂತರವಾಗಿ ಇಳಿಕೆಯಾಗುತ್ತಿರುವ ಪೆಟ್ರೋಲ್, ಡೀಸೆಲ್ ದರ ಇದೀಗ 11ನೇ ದಿನವೂ ಕೂಡ ಇಳಿದಿದೆ. ಭಾನುವಾರ ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲಿ ಇಳಿಕೆ ಕಂಡು ಬಂದಿದೆ. ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಪ್ರತೀ ಲೀಟರ್ ಪೆಟ್ರೋಲ್ ಬೆಲೆಯಲ್ಲಿ 40 ಪೈಸೆ ಇಳಿಕೆಯಾಗಿದೆ.

 • Petrol

  BUSINESS27, Oct 2018, 2:03 PM IST

  ಮೋದಿ ಕೊಟ್ರು ದಶರಾತ್ರಿ: ಪೆಟ್ರೋಲ್ ರೇಟ್ ಇಳಿಕೆಯ ಖಾತ್ರಿ!

  ದೇಶದಾದ್ಯಂತ ತೈಲೆ ಬೆಲೆ ಮತ್ತೆ ಇಳಿಕೆಯಾಗಿದ್ದು, ಕಳೆದ ಒಂದು ವಾರದಲ್ಲಿ ಪ್ರತೀ ಲೀಟರ್ ಪೆಟ್ರೋಲ್ ಬೆಲೆ ರೂ.1.98 ಹಾಗೂ ಡೀಸೆಲ್ 99 ಪೈಸೆ ಇಳಿಕೆಯಾಗಿದೆ. ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಇಳಿಕೆಯಾಗಿರುವ ಹಿನ್ನಲೆಯಲ್ಲಿ ಸಾರ್ವಜನಿಕರಿಗೆ ಕೊಂಚ ನಿರಾಳವಾದಂತಾಗಿದೆ.

 • BUSINESS26, Oct 2018, 12:55 PM IST

  ಇದಪ್ಪಾ ಅಸಲಿ ನವರಾತ್ರಿ:9ನೇ ದಿನವೂ ಇಳಿದ ಪೆಟ್ರೋಲ್ ದರ!

  ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದರದಲ್ಲಿ ಇಳಿಕೆ ಮತ್ತು ಡಾಲರ್ ಎದುರು ಭಾರತದ ರೂಪಾಯಿ ಮೌಲ್ಯ ಚೇತರಿಕೆ ಕಂಡು ಬಂದ ಪರಿಣಾಮ ತೈಲದರದಲ್ಲಿ ಇಳಿಕೆ ಕಂಡು ಬರುತ್ತಿದೆ. ಅದರಂತೆ ದೇಶದ ಮಹಾನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಗಮನಾರ್ಹ ಇಳಿಕೆಯಾಗಿದೆ.

 • petrol 5 rupees reduce

  BUSINESS19, Oct 2018, 2:51 PM IST

  ಹಬ್ಬದ ಎರಡನೇ ದಿನ: ಪೆಟ್ರೋಲ್ ಇಳಿದಿದ್ದೆಷ್ಟು ನೋಡಣ್ಣ!

  ಹಬ್ಬದ ನಿಮಿತ್ತ ತೈಲದರ ಕಡಿಮೆ ಮಾಡಲು ಮುಂದಾಗಿರುವ ಕೇಂದ್ರ ಸರ್ಕಾರ, ಕಳೆದ ಎರಡು ದಿನಗಳಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಕೊಂಚ ಇಳಿಕೆ ಮಾಡಿದೆ. ಅದರಂತೆ ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ದರ  24 ಪೈಸೆ , ಡೀಸೆಲ್ ಬೆಲೆಯಲ್ಲಿ 10 ಪೈಸೆ ಇಳಿದಿದೆ. 

   

 • fuel price hike

  BUSINESS18, Oct 2018, 2:05 PM IST

  ಹಬ್ಬಕ್ಕೆ ಮೋದಿ ಗಿಫ್ಟ್: ಪೆಟ್ರೋಲ್ ರೇಟ್ ಡೌನ್!

  ನಿರಂತರವಾಗಿ ಆಗಸದತ್ತ ಮುಖ ಮಾಡಿದ್ದ ತೈಲೋತ್ಪನ್ನಗಳ ದರ ಕೊನೆಗೂ ಅಲ್ಪ ಪ್ರಮಾಣದಲ್ಲಿ ಇಳಿಕೆಯಾಗಿದೆ. ದೇಶದ ಪ್ರಮುಖ ಮಹಾನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಅಲ್ಪ ಪ್ರಮಾಣದಲ್ಲಿ ಇಳಿಕೆಯಾಗಿದೆ.

 • Sensex

  BUSINESS9, Oct 2018, 3:06 PM IST

  ಇಂದೆನೋ ವಿಶೇಷ: ಸಿಹಿ ಸುದ್ದಿಗಳ 'ಮಹಾಮಳೆ'!

  ಭಾರತದ ಆರ್ಥಿಕ ಕ್ಷೇತ್ರದಲ್ಲಿ ಇಂದು ಕೆಲವು ಸಿಹಿ ಸುದ್ದಿಗಳಿಗೆ ಪ್ರಾಶಸ್ತ್ಯ ದೊರೆತಿದೆ. ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ, ತೈಲದರ ಏರಿಕೆ, ಷೇರು ಮಾರುಕಟ್ಟೆ ಕುಸಿತ ಇವೇ ಮುಂತಾದ ಕಹಿ ಸುದ್ದಿಗಳನ್ನು ಕೇಳುತ್ತಿದ್ದ ಗ್ರಾಹಕ, ಇಂದು ಈ ಕ್ಷೇತ್ರಗಳಲ್ಲಿ ಸಿಹಿ ಸುದ್ದಿಗಳನ್ನು ಕೇಳುವಂತಾಗಿದೆ. ಬ್ಯಾಂಕ್ ಮತ್ತು ರಫ್ತುದಾರರು ಅಮೆರಿಕದ ಕರೆನ್ಸಿಯ ಮಾರಾಟದಿಂದಾಗಿ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯ 18 ಪೈಸೆ ಏರಿಕೆಯಾಗಿ ಡಾಲರ್ ವೊಂದಕ್ಕೆ ರೂಪಾಯಿ ಬೆಲೆ 73.88 ರೂ. ಆಗಿದೆ.

   

   

 • Ethanol

  BUSINESS12, Sep 2018, 6:09 PM IST

  ಅಯ್ಯೋ! ಎಥೆನಾಲ್ ದರ ಏರಿಕೆ: ಮೋದಿ ಸಮ್ಮತಿಸಿದರೇಕೆ?

  ಹೆಚ್ಚುತ್ತಿರುವ ತೈಲದರದಿಂದ ಜನಸಾಮಾನ್ಯ ಕಂಗಾಲಾಗಿದ್ದಾನೆ. ಕೇಂದ್ರ ಸರ್ಕಾರವೂ ತೈಲದರ ನಿಯಂತ್ರಣಕ್ಕೆ ತರಲು ನಿರಂತರ ಪ್ರಯತ್ನ ನಡೆಸುತ್ತಲೇ ಇದೆ. ಈ ಮಧ್ಯೆ ಎಥೆನಾಲ್ ತೈಲದರವನ್ನೂ ಏರಿಸುವ ನಿರ್ಧಾರಕ್ಕೆ ಕೇಂದ್ರ ಸಂಪುಟ ಸಭೆ ಒಪ್ಪಿಗೆ ನೀಡಿದೆ.

 • HP petrol

  BUSINESS12, Sep 2018, 11:40 AM IST

  5ಲೀ. ಪೆಟ್ರೋಲ್, ಡೀಸೆಲ್ ಕೊಂಡರೆ 1ಲೀ. ಉಚಿತ:ಯಾರಿಗುಂಟು ಯಾರಿಗಿಲ್ಲ?

  ನಿರಂತರ ತೈಲದರ ಏರಿಕೆಯಿಂದ ಜನಸಾಮಾನ್ಯ ತತ್ತರಿಸಿ ಹೋಗಿದ್ದಾನೆ. ಪೆಟ್ರೋಲ್, ಡೀಸೆಲ್ ಬೆಲೆ ಬೆಲೆ ದಿನೇ ದಿನೇ ಹೆಚ್ಚುತ್ತಿದ್ದು, ತೈಲದರದ ಮೇಲೆ ನಿಯಮತ್ರಣ ಸಾಧಿಸಲು ಕೇಂದ್ರ ಸರ್ಕಾರ ಕೂಡ ಪ್ರಯತ್ನ ನಡೆಸಿದೆ. ಈ ಮಧ್ಯೆ ತಮಿಳುನಾಡಿನ ಪೆಟ್ರೋಲ್ ಬಂಕ್ ಒಂದರಲ್ಲಿ ಉಚಿತವಾಗಿ ಪೆಟ್ರೋಲ್ ಮತ್ತು ಡೀಸೆಲ್ ನೀಡಲಾಗುತ್ತಿದೆ.

 • Car

  BUSINESS12, Sep 2018, 10:47 AM IST

  ಕಾರೇ ಕೊಳ್ತಿಲ್ಲ ಜನ: ತೈಲದರದ ಎಫೆಕ್ಟಾ?

  ಜಾಗತಿಕ ವಾಣಿಜ್ಯ ಯುದ್ಧದ ಪರಿಣಾಮ ದೇಶದ ಆಟೊಮೊಬೈಲ್ ಕ್ಷೇತ್ರದ ಮೇಲೂ ಪರಿಣಾಮ ಬೀರಿದಂತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ಸಾಲಿನಲ್ಲಿ ಪ್ರಯಾಣಿಕ ವಾಹನ ಮತ್ತು ಕಾರುಗಳ ಮಾರಾಟದಲ್ಲಿ ಕುಸಿತ ಕಂಡು ಬಂದಿದೆ. ಕಳೆದ ಆಗಸ್ಟ್ ತಿಂಗಳಲ್ಲೇ ದೇಶಿ ಪ್ರಯಾಣಿಕ ವಾಹನಗಳ ಮಾರಾಟ ಶೇ.2.46ರಷ್ಟು ಹಾಗೂ ಕಾರು ಮಾರಾಟ ಶೇ.1ರಷ್ಟು ಕುಸಿತ ಕಂಡಿರುವುದು ವ್ಯಾಪಾರ ಮಂಕಾಗಿದೆ ಎಂಬುದನ್ನು ಸೂಚಿಸುತ್ತದೆ.

 • Train

  Belagavi10, Sep 2018, 3:55 PM IST

  ಬಂದ್ ಎಫೆಕ್ಟ್: ರೈಲಲ್ಲಿ ಒದ್ದಾಡಿ ಮಗು ಹೆತ್ತ ತಾಯಿ!

  ತೈಲದರ ಖಂಡಿಸಿ ಇಂದು ದೇಶಾದ್ಯಂತ ಭಾರತ್ ಬಂದ್ ಆಚರಿಸಲಾಗುತ್ತಿದೆ. ಈ ಮಧ್ಯೆ ಬಸ್ ಸಿಗದ ಕಾರಣಕ್ಕೆ ರೈಲಲ್ಲಿ ಪ್ರಯಾಣಿಸುತ್ತಿದ್ದ ಗರ್ಭಿಣಿಯೋರ್ವಳು, ರೈಲಲ್ಲೆ ಮಗುವಿಗೆ ಜನ್ಮ ನೀಡಿದ ಘಟನೆ ರಾಯಬಾಗದಲ್ಲಿ ನಡೆದಿದೆ.

 • petrol price hike bharath bandh

  BUSINESS10, Sep 2018, 12:46 PM IST

  ಬಂದ್‌ಗೂ ಬಗ್ಗದ ತೈಲದರ: ಇಂದಿನ ಬೆಲೆ ಆಗ್ತಿಲ್ಲ ಕೇಳ್ಲಿಕ್ಕೆ!

  ಹಲವು ದಿನಗಳಿಂದಲೂ ತೈಲ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದ್ದು, ಇದನ್ನು ಖಂಡಿಸಿ ಭಾರತ್ ಬಂದ್ ಆಚರಿಸುತ್ತಿರುವ ಬೆನ್ನಲ್ಲೇ ಇಂದೂ ಕೂಡ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ದಾಖಲೆ ಮಟ್ಟದಲ್ಲಿ ಏರಿಕೆ ಕಂಡುಬಂದಿದೆ.