ತಾಲೂಕು  

(Search results - 134)
 • Gadag20, Oct 2019, 8:47 AM IST

  ಮುಂಡರಗಿ: ವಸತಿ ರಹಿತರಿಗೆ ನಿವೇಶನಕ್ಕೆ ಆಗ್ರಹಿಸಿ ಮನವಿ

  ಪುರಸಭೆ ವ್ಯಾಪ್ತಿಯಲ್ಲಿ ಹಲವು ವರ್ಷಗಳಿಂದ ವಸತಿ ರಹಿತರಿಗೆ ನಿವೇಶನ ಮತ್ತು ಆಶ್ರಯ ಮನೆಗಳ ಸೌಲಭ್ಯ ಇಲ್ಲ ಹೀಗಾಗಿ ಕೂಡಲೇ ನಿವೇಶನದ ಜತೆಗೆ ಮನೆ ನಿರ್ಮಾಣ ಮಾಡಿಕೊಡುವಂತೆ ಆಗ್ರಹಿಸಿ ಗದಗ-ಹರಪನಹಳ್ಳಿ ರೈಲ್ವೆ ಮಾರ್ಗ ರಚನೆ ಜಂಟಿ ಕ್ರಿಯಾ ಸಮಿತಿ ಹಾಗೂ ತಾಲೂಕು ಅಭಿವೃದ್ಧಿ ಹೋರಾಟ ವೇದಿಕೆ ಆಶ್ರಯದಲ್ಲಿ ಶನಿವಾರ ತಹಸೀಲ್ದಾರ​ರಿಗೆ ಮನವಿ ಸಲ್ಲಿಸಲಾಯಿತು.
   

 • government hostel

  Dharwad19, Oct 2019, 2:55 PM IST

  ಧಾರವಾಡ: ಪ್ರತಿ ಹಾಸ್ಟೆಲ್‌ಗೆ ತಾಲೂಕು ಅಧಿಕಾರಿಗಳ ಭೇಟಿ ಕಡ್ಡಾಯ

  ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ಇರುವ ಪ್ರತಿ ಹಾಸ್ಟೆಲ್‌ಗಳಿಗೆ ಆಯಾ ತಾಲೂಕು ಅಧಿಕಾರಿಗಳು ಪ್ರತಿವಾರ ಅನಿರೀಕ್ಷಿತ ಭೇಟಿ ನೀಡಿ ಕಡ್ಡಾಯವಾಗಿ ಪ್ರಗತಿ ಪರಿಶೀಲಿಸಬೇಕು ಎಂದು ಹಿಂದು​ಳಿದ ವರ್ಗಗಳ ಕಲ್ಯಾಣ ಇಲಾಖೆ ಕಾರ್ಯದರ್ಶಿ ಮೊಹಮ್ಮದ ಮೊಹಸಿನ್‌ ಖಡಕ್‌ ಎಚ್ಚ​ರಿಕೆ ನೀಡಿ​ದ್ದಾರೆ.
   

 • Rain

  Udupi19, Oct 2019, 10:45 AM IST

  ಮೂರು ದಿನದ ಮಳೆಗೆ 4 ಲಕ್ಷಕ್ಕೂ ಹೆಚ್ಚಿನ ಹಾನಿ: ಇಬ್ಬರುಸಾವು

  ಕರಾವಳಿಯಲ್ಲಿ ಭಾರೀ ಮಳೆಯಾಗಿದ್ದು, ಉಡುಪಿ ಭಾಗದಲ್ಲಿ ಮೂರು ದಿನದಲ್ಲಿ 4 ಲಕ್ಷಕ್ಕೂ ಹೆಚ್ಚ ನಷ್ಟವಾಗಿದೆ. ಬೈಂದೂರು ತಾಲೂಕಿನಲ್ಲಿ ಇಬ್ಬರು ವಿದ್ಯಾರ್ಥಿಗಳು ಹೊಳೆಯಲ್ಲಿ ಮುಳುಗಿ ಮೃತಪಟ್ಟಿದ್ದು, ಕುಂದಾಪುರ ಮತ್ತು ಕಾರ್ಕಳ ತಾಲೂಕುಗಳಲ್ಲಿ ಲಕ್ಷಾಂತರ ರು. ಆಸ್ತಿ ಹಾನಿಯಾಗಿದೆ.

 • alvas

  Dakshina Kannada19, Oct 2019, 8:35 AM IST

  ಆಳ್ವಾಸ್‌ ಕನ್ನಡ ಮಾಧ್ಯಮ ಶಾಲೆಗಳಿಗೆ ಸಮಗ್ರ ಪ್ರಶಸ್ತಿ

  ಮೂಡುಬಿದಿರೆ ತಾಲೂಕು ಪ್ರೌಢ ಹಾಗೂ ಪ್ರಾಥಮಿಕ ಶಾಲಾ ಅಥ್ಲೆಟಿಕ್ಸ್‌ ಕ್ರೀಡಾಕೂಟ-2019ರಲ್ಲಿ 157 ಅಂಕ ಗಳಿಸಿದ ಆಳ್ವಾಸ್‌ ಕನ್ನಡ ಮಾಧ್ಯಮ ಪ್ರೌಢ ಶಾಲೆ ಪುತ್ತಿಗೆ ಮತ್ತು 42 ಅಂಕ ಪಡೆದ ಆಳ್ವಾಸ್‌ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆ ಪುತ್ತಿಗೆ ಸಮಗ್ರ ಪ್ರಶಸ್ತಿ ಎತ್ತಿಕೊಂಡಿವೆ.

 • rain in tamilnadu

  Dharwad19, Oct 2019, 7:22 AM IST

  ಹುಬ್ಬಳ್ಳಿ-ಧಾರವಾಡದಲ್ಲಿ ಧಾರಾಕಾರ ಮಳೆ: ಹೊಂಡಗಳಂತಾದ ರಸ್ತೆಗಳು

  ನಗರದಲ್ಲಿ ಶುಕ್ರವಾರ ಮಧ್ಯಾಹ್ನ ಸಾಮಾನ್ಯ ಮಳೆಯಾಗಿದ್ದರೆ, ರಾತ್ರಿ ವೇಳೆ ಗುಡುಗು, ಸಿಡಿಲು ಸಹಿತ ಸುಮಾರು 3 ಗಂಟೆಗೂ ಹೆಚ್ಚು ಕಾಲ ಧಾರಾಕಾರವಾಗಿ ಮಳೆ ಸುರಿದಿದೆ. ಈ ನಡುವೆ ಕುಂದಗೋಳ, ನವಲಗುಂದ ತಾಲೂಕುಗಳಲ್ಲೂ ಮಳೆಯಾಗಿದೆ.
   

 • udupi mutt

  Udupi18, Oct 2019, 2:57 PM IST

  ಉಡುಪಿ ಜಿಲ್ಲೆಗೆ ಮತ್ತೊಂದು ತಾಲೂಕು : ಸ್ಥಳ ಪರಿಶೀಲನೆ

  ಉಡುಪಿ ಜಿಲ್ಲೆಗೆ ಶೀಘ್ರದಲ್ಲೇ ಮತ್ತೊಂದು ಹೊಸ ತಾಲೂಕು ಸೇರ್ಪಡೆಯಾಗುತ್ತಿದ್ದು, ಈ ಸಂಬಂಧ ಸ್ಥಳ ಪರಿಶೀಲನೆಯನ್ನು ನಡೆಸಲಾಗಿದೆ. 

 • R Ashok

  Mandya17, Oct 2019, 2:19 PM IST

  ಲಂಚಕ್ಕೆ ಬೇಡಿಕೆ ಇಟ್ಟವರನ್ನು ಸ್ಥಳದಲ್ಲೇ ಅಮಾನತು ಮಾಡಿದ ಸಚಿವ

  ಸಚಿವ ಆರ್. ಅಶೋಕ್ ಅವರು ಮದ್ದೂರು ತಾಲೂಕು ಕಚೇರಿಯಲ್ಲಿ ಇಬ್ಬರು ಸಿಬ್ಬಂದಿಯನ್ನು ಸ್ಥಳದಲ್ಲಿಯೇ ಅಮಾನತು ಮಾಡಿದ್ದಾರೆ. ಕೆಲಸ ಮಾಡಿಕೊಡಲು ಲಂಚಕ್ಕೆ ಬೇಡಿಕೆ ಇಡುತ್ತಾರೆಂದು ಸಾರ್ವಜನಿಕರು ಆರೋಪಿಸಿದ್ದರು. ಈ ನಿಟ್ಟಿನಲ್ಲಿ ಸಚಿವರು ಕಚೇರಿಯನ್ನು ಪರಿಶೀಲಿಸಿದ್ದಾರೆ.

 • R Ashok New

  Mandya17, Oct 2019, 2:00 PM IST

  ತಾಲೂಕು ಕಚೇರಿಗೆ ಸಚಿವರ ದಿಢೀರ್‌ ಭೇಟಿ; ಬ್ಯಾಗ್, ಲಾಕರ್ ಚೆಕ್ ಮಾಡಿದ್ರು ಆರ್. ಅಶೋಕ್

  ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಆರ್‌.ಅಶೋಕ್‌ ಬುಧವಾರ ಮದ್ದೂರು ಪಟ್ಟಣದ ತಾಲೂಕು ಕಚೇರಿಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಿಬ್ಬಂದಿ ಲಂಚ ಪಡೆಯುತ್ತಿದ್ದಾರೆ ಎಂಬ ದೂರು ಬಂದ ಹಿನ್ನೆಲೆಯಲ್ಲಿ ಸಚಿವರು ಕಚೇರಿಯ ಹಲವು ವಿಭಾಗದ ಬ್ಯಾಗ್‌, ಲಾಕರ್‌, ಟೇಬಲ್ ಡ್ರಾಗಳನ್ನು ತೆರೆದು ಪರಿಶೀಲನೆ ನಡೆಸಿದ್ದಾರೆ.

 • liquor

  Tumakuru17, Oct 2019, 10:27 AM IST

  ಮತದಾರರಿಗೆ ಹಂಚಲು ತಂದಿದ್ದ ಮದ್ಯ ನಾಶ

  ಮತದಾರರಿಗೆ ಹಂಚಲು ತಂದಿದ್ದ ಮದ್ಯವನ್ನು ಅಬಕಾರಿ ಅಧಿಕಾರಿಗಳು ನಾಶ ಮಾಡಿದ್ದಾರೆ. ಸುಮಾರು 1.75 ಲಕ್ಷ ಮೌಲ್ಯದ ಅಕ್ರಮ ಮದ್ಯವನ್ನು ವಶಪಡಿಸಿಕೊಳ್ಳಲಾಗಿತ್ತು. ಇದನ್ನು ಪಾವ​ಗಡದಲ್ಲಿ ತಾಲೂಕು ಕಚೇರಿ ಬಳಿ ನಾಶಮಾಡಲಾಯಿತು.

 • Koragajja

  Dakshina Kannada17, Oct 2019, 9:40 AM IST

  ಕೊರಗಜ್ಜ ಕಟ್ಟೆ ಪ್ರಕರಣ: ಪರ - ವಿರೋಧದ ಕೂಗು

  ಕೊರಗಜ್ಜ ಕಟ್ಟೆಯ ಗರ್ಭಗುಡಿಯ ಬೀಗ ಮುರಿದು ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ತಂದ ಸಹಕಾರ ಸಂಘಗಳ ಉಪ ನಿಬಂಧಕರನ್ನು ಅಮಾನತುಗೊಳಿಸಬೇಕೆಂದು ರ್ನಾಟಕ ದಲಿತ ಸಂಘರ್ಷ ಸಮಿತಿಯ (ಅಂಬೇಡ್ಕರ್‌ವಾದ) ದಕ್ಷಿಣ ಕನ್ನಡ ಜಿಲ್ಲಾ ಶಾಖೆ ಹಾಗೂ ಮಂಗಳೂರು ತಾಲೂಕು ಶಾಖೆ ನೇತೃತ್ವದಲ್ಲಿ ಮೌನ ಪ್ರತಿಭಟನೆ ನಡೆದಿದೆ.

 • acb

  Dakshina Kannada15, Oct 2019, 11:11 AM IST

  ತಾಲೂಕು ಕಚೇರಿಗೆ ಎಸಿಬಿ ದಾಳಿ, ದಾಖಲೆ ಇಲ್ಲದ ಸಾವಿರಾರು ರೂಪಾಯಿ ಪತ್ತೆ

  ಮಂಗಳೂರಿನ ಮೂಡುಬಿದಿರೆ ತಾಲೂಕು ಕಚೇರಿಯಲ್ಲಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ನಾಗರಿಕರೊಬ್ಬರು ನೀಡಿದ ದೂರಿನನ್ವಯ ಅಧಿಕಾರಿಗಳು ದಾಳಿ ನಡೆಸಿ ಪರಶೀಲನೆ ನಡೆಸಿದ್ದಾರೆ.

 • dalit protest 2

  Belagavi14, Oct 2019, 11:55 AM IST

  'ನ.1 ರೊಳಗೆ ಚಿಕ್ಕೋಡಿ ಜಿಲ್ಲೆ ಘೋಷಿಸದಿದ್ದರೆ ಉಗ್ರ ಚಳವಳಿ'

  ಅಭಿವೃದ್ಧಿ ದೃಷ್ಠಿಯಿಂದ ಅಖಂಡ ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಚಿಕ್ಕೋಡಿ ಹೊಸ ಜಿಲ್ಲೆಯನ್ನಾಗಿ ಬರುವ ನ.1 ರೊಳಗಾಗಿ ಘೋಷಣೆ ಮಾಡಬೇಕು ಇಲ್ಲದಿದ್ದರೆ ಅಥಣಿ ತಾಲೂಕು ತೇಲಸಂಗದಿಂದ ಯಮಕನಮರಡಿ ಕೊನೆ ಹಳ್ಳಿಯವರಿಗೆ ಜಿಲ್ಲಾ ಹೋರಾಟ ಸಮಿತಿ ಪಾದಯಾತ್ರೆ ಕೈಗೊಂಡು ಜಿಲ್ಲೆಗೆ ಅಡ್ಡಗಾಲು ಹಾಕುವ ನಾಯಕರ ವಿರುದ್ಧ ಚಳವಳಿ ಆರಂಭಿಸಲಾಗುತ್ತದೆ ಎಂದು ಜಿಲ್ಲಾ ಹೋರಾಟ ಸಮಿತಿ ಮುಖಂಡ ಬಿ.ಆರ್‌.ಸಂಗಪ್ಪಗೋಳ ಅವರು ಹೇಳಿದ್ದಾರೆ. 
   

 • mysore

  Mysore14, Oct 2019, 10:03 AM IST

  ‘ಮೈಸೂರಲ್ಲಿ ಮತ್ತೊಂದು ಹೊಸ ತಾಲೂಕು’

  ಮೈಸೂರಿನಲ್ಲಿ ಶೀಘ್ರ ಮತ್ತೊಂದು ತಾಲೂಕು ರಚನೆಯಾಗುತ್ತಿದೆ. ಈ ಬಗ್ಗೆ ಮಾಜಿ ಸಚಿವ ಸಾರಾ ಮಹೇಶ್ ತಿಳಿಸಿದ್ದಾರೆ. 

 • Bagalkot11, Oct 2019, 12:22 PM IST

  ಬಾಗಲಕೋಟೆ ಜಿಲ್ಲೆಯ ಪ್ರತಿ ತಾಲೂಕಿಗೊಂದು ಡಿಜಿಟಲ್‌ ಗ್ರಂಥಾಲಯ

  ಜಿಲ್ಲಾ ಕೇಂದ್ರದಲ್ಲಿ 2 ಹಾಗೂ ತಾಲೂಕು ಕೇಂದ್ರದಲ್ಲಿ ತಲಾ ಒಂದರಂತೆ ಡಿಜಿಟಲ್‌ ಗ್ರಂಥಾಲಯವನ್ನಾಗಿ ಪರಿವರ್ತಿಸಲು ಕ್ರಮಕೈಗೊಳ್ಳುವಂತೆ ಜಿಲಾಧ್ಲಿ​ಕಾರಿ ಕ್ಯಾಪ್ಟನ್‌ ಡಾ.ಕೆ.ರಾಜೇಂದ್ರ ತಿಳಿಸಿದ್ದಾರೆ.
   

 • Rain forecast

  Karnataka Districts5, Oct 2019, 7:50 AM IST

  ಹಾವೇರಿ ಜಿಲ್ಲೆಯಲ್ಲಿ ಭಾರಿ ಮಳೆ: ಆತಂಕದಲ್ಲಿ ರೈತರು

  ಜಿಲ್ಲೆಯ ವಿವಿಧ ಭಾಗದಲ್ಲಿ ಶುಕ್ರವಾರ ಸಂಜೆ ಗುಡುಗು ಸಹಿತ ಭಾರೀ ಮಳೆಯಾಗಿದೆ. ಹಾವೇರಿ ನಗರ, ರಾಣಿಬೆನ್ನೂರು, ಸವಣೂರು ತಾಲೂಕುಗಳಲ್ಲಿ ಒಂದು ತಾಸಿಗೂ ಅಧಿಕ ಕಾಲ ಧಾರಾಕಾರ ಮಳೆ ಸುರಿದಿದೆ. ಬ್ಯಾಡಗಿ, ಹಿರೇಕೆರೂರು, ಹಾನಗಲ್ಲ ಭಾಗದಲ್ಲಿಯೂ ಸಾಧಾರಣ ಮಳೆಯಾಗಿದೆ. ಗುರುವಾರ ಕೂಡ ಜಿಲ್ಲಾದ್ಯಂತ ಭಾರಿ ಮಳೆ ಸುರಿದು ಅವಾಂತರ ಸೃಷ್ಟಿಯಾಗಿತ್ತು. ಸತತ ಎರಡನೇ ದಿನವೂ ಸುರಿಯುತ್ತಿರುವ ಭಾರೀ ಮಳೆ ಜನರಲ್ಲಿ ಆತಂಕ ಮೂಡಿಸಿದೆ.