ತಲಪಾಡಿ

(Search results - 19)

Talapady

Karnataka Districts23, Jul 2020, 9:35 AM

ಕರ್ನಾಟಕದ ಸರಕು ವಾಹನಗಳಿಗೆ ಕೇರಳ ಪ್ರವೇಶ ತಡೆ

ಕರ್ನಾಟಕದ ಸರಕು ವಾಹನಗಳಿಗೆ ಕಾಸ​ರ​ಗೋಡು ಜಿಲ್ಲೆಗೆ ಪ್ರವೇಶ ನಿಬಂಧಿ​ಸಿ ಕಾಸ​ರ​ಗೋಡು ಜಿಲ್ಲಾ​ಧಿ​ಕಾರಿ ಡಾ.ಸ​ಜಿತ್‌ ಬಾಬು ಆದೇಶ ಹೊರ​ಡಿ​ಸಿ​ದ್ದಾ​ರೆ. ಕರ್ನಾಟಕದಿಂದ ವಾಹನಗಳಲ್ಲಿ ಬರುವ ಸರಕನ್ನು ಗಡಿಯಲ್ಲಿ ಕಾಸರಗೋಡಿನ ವಾಹನಗಳಿಗೆ ತುಂಬಿಸಬೇಕು.

Talapady

Karnataka Districts8, Jul 2020, 8:51 AM

ಮಂಗಳೂರಲ್ಲಿ ಹೆಚ್ಚಿದ ಕೊರೋನಾ: ಕೇರಳಿಗರ ಡೈಲಿ ಪಾಸ್ ರದ್ದು, ಇಲ್ಲಿವೆ ಫೋಟೋಸ್

ದಿಢೀರನೆ ಕೊರೋನಾ ಸೋಂಕಿತರು ಹೆಚ್ಚಾಗುತ್ತಿದ್ದಾರೆ ಎಂಬ ನೆಪ ಮುಂದಿರಿಸಿ ಕರ್ನಾಟಕಕ್ಕೆ ನಿತ್ಯ ನೌಕರಿಗೆ ತೆರಳುವವರ ಪಾಸ್‌ಗೆ ಕೇರಳ ಸರ್ಕಾರ ಬ್ರೇಕ್‌ ಹಾಕಿದೆ. ಇದರಿಂದಾಗಿ ಗಡಿನಾಡು ಕಾಸರಗೋಡಿನಿಂದ ಮಂಗಳೂರಿಗೆ ಖಾಸಗಿ ವಾಹನದಲ್ಲಿ ನಿತ್ಯ ಪಾಸ್‌ನಲ್ಲಿ ಸಂಚರಿಸುವ ಸುಮಾರು ನಾಲ್ಕು ಸಾವಿರಕ್ಕೂ ಅಧಿಕ ಮಂದಿ ಕನ್ನಡಿಗರು ಅತಂತ್ರ ಸ್ಥಿತಿಗೆ ಸಿಲುಕಿದ್ದಾರೆ.

Talapady

Karnataka Districts8, Jul 2020, 7:27 AM

ಪಾಸ್‌ ಹಿಡಿದು ಬಂದ 100ಕ್ಕೂ ಅಧಿಕ ಜನರ ಗಡಿಯಲ್ಲಿ ತಡೆದ ಕೇರಳ ಪೊಲೀಸ್

ಮಂಗಳೂರಿನಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಕೇರಳ ಸರ್ಕಾರ ಕೇರಳಿಗರಿಗೆ ಮಂಗಳೂರು ಪ್ರವೇಶ ನಿರ್ಬಂಧಿಸಿದ ಕಾರಣ ಪಾಸ್‌ ಹಿಡಿದು ದಿನನಿತ್ಯ ಕೆಲಸಕ್ಕೆ ಬರುತ್ತಿದ್ದವರನ್ನು ಕೇರಳ ಪೊಲೀಸರು ತಲಪಾಡಿಯಲ್ಲಿ ಮಂಗ​ಳ​ವಾರ ಬೆಳಗ್ಗೆ ತಡೆಹಿಡಿದಿರುವುದು ಗೊಂದಲಕ್ಕೆ ಕಾರಣವಾಯಿತು.

• Karnataka Districts26, Jun 2020, 11:27 AM

ಕೇರಳದ 367 ವಿದ್ಯಾರ್ಥಿಗಳು ಮಂಗಳೂರಲ್ಲಿ SSLC ಪರೀಕ್ಷೆಗೆ ಹಾಜರ್‌..! ಇಲ್ಲಿವೆ ಫೋಟೋಸ್

ದ.ಕ.ಜಿಲ್ಲೆಯಲ್ಲಿ ಕೊರೋನಾ ಎಫೆಕ್ಟ್ನ ನಡುವೆ ಗುರುವಾರ ಆರಂಭವಾದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಮೊದಲ ದಿನ ನಿರಾತಂಕವಾಗಿ ಕಳೆದಿದೆ. ಜಿಲ್ಲೆಯಲ್ಲಿ ಒಟ್ಟು 30,835 ವಿದ್ಯಾರ್ಥಿಗಳಿಗೆ 95 ಪರೀಕ್ಷಾ ಕೇಂದ್ರಗಳನ್ನು ವ್ಯವಸ್ಥೆಗೊಳಿಸಲಾಗಿತ್ತು. ಇಲ್ಲಿವೆ ಫೋಟೋಸ್

• ఆదిలాబాద్ లోకసభ నియోజకవర్గం పరిధిలోని ఆదిలాబాద్, బోథ్, నిర్మల్, ముథోల్, సిర్పూర్, కాగజ్ నగర్, భైంసా మున్సిపాలిటీలపై బిజెపి దృష్టి పెట్టింది. మహబూబ్ నగర్, మక్తల్ మున్సిపాలిటీలపై కూడా బిజెపి కన్నేసింది

Karnataka Districts9, Jun 2020, 7:06 AM

ಗಡಿ ತೆರವಿಗೆ ಆಗಮಿಸಿ ಬಿಜೆಪಿ ವಿರುದ್ಧವೇ ಬಿಜೆಪಿಗರ ಪ್ರತಿಭಟನೆ!

ಕೊರೋನಾ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಬಂದ್‌ ಮಾಡಿರುವ ದ.ಕ. ಗಡಿ ಪ್ರದೇಶದಲ್ಲಿ ಮುಕ್ತ ವಾಹನ ಸಂಚಾರಕ್ಕೆ ಅವಕಾಶ ನೀಡುವಂತೆ ಆಗ್ರಹಿಸಿ ಕಾಸರಗೋಡು ಬಿಜೆಪಿ ಮುಖಂಡರು ಸೋಮವಾರ ದ.ಕ. ಜಿಲ್ಲೆಯ ಬಿಜೆಪಿ ಆಡಳಿತ ವಿರುದ್ಧವೇ ಪ್ರತಿಭಟನೆ ನಡೆಸಿದ ವಿದ್ಯಮಾನ ನಡೆದಿದೆ.

talapady

Karnataka Districts5, Jun 2020, 2:28 PM

ಮಂಗಳೂರಿಂದ ಕಾಸರಗೋಡಿಗೆ: ತಲಪಾಡಿ ಗಡಿ ದಾಟೋದು ಹೇಗೆ..? ಇಲ್ಲಿದೆ ವಿವರ

ಲಾಕ್‌ಡೌನ್‌ ಸಡಿಲಿಕೆ ಬೆನ್ನಲ್ಲೇ ಕಾಸರಗೋಡು ಹಾಗೂ ದ.ಕ. ಜಿಲ್ಲೆಯ ನಡುವಿನ ಸಂಚಾರಕ್ಕೆ ಪಾಸ್ ಗಾಗಿ ಹಲವರು ಪ್ರಯತ್ನಿಸುತ್ತಿದ್ದಾರೆ. ಎರಡೂ ಜಿಲ್ಲೆಗಳ ಜನರ ಅಂತರಾಜ್ಯ ಪ್ರಯಾಣಕ್ಕೆ ಇಲ್ಲಿಯವರೆಗೆ ತಡೆ ಇತ್ತು. ಇದೀಗ ಪಾಸ್‌ ವ್ಯವಸ್ಥೆ ಮಾಡಲಾಗಿದ್ದು, ಇಲ್ಲಿದೆ ಹೆಚ್ಚಿನ ಮಾಹಿತಿ.

Talapady

Karnataka Districts5, Jun 2020, 10:51 AM

ಕಾಸರಗೋಡು-ಮಂಗಳೂರು ಪಾಸ್‌: ಸದ್ಯ ವಾಹನ ಇದ್ದವರಿಗಷ್ಟೆ ಸಂಚಾರ ಅವಕಾಶ

ಕಾಸರಗೋಡು- ಮಂಗಳೂರು ನಡುವೆ ಸಂಚರಿಸುವ ವಿದ್ಯಾರ್ಥಿಗಳು, ಉದ್ಯೋಗಸ್ಥರಿಗೆ ಪಾಸ್‌ ನೀಡುವ ವ್ಯವಸ್ಥೆಗೆ ಚಾಲನೆ ನೀಡಲಾಗಿದ್ದು, ನೂರಾರು ಮಂದಿ ಬುಧವಾರ ಮತ್ತು ಗುರುವಾರ ನೋಂದಣಿ ಮಾಡಿಕೊಂಡಿದ್ದಾರೆ. ಅವುಗಳನ್ನು ಪರಿಶೀಲಿಸಿ ಪಾಸ್‌ ನೀಡುವ ಕಾರ್ಯಕ್ಕೆ ಜಿಲ್ಲಾಡಳಿತ ಚಾಲನೆ ನೀಡಿದೆ.

Saradka

Karnataka Districts2, Jun 2020, 7:43 AM

ಕೇರಳ- ಕರ್ನಾಟಕ ಗಡಿ ತೆರವು ಇನ್ನಷ್ಟುವಿಳಂಬ

ದ.ಕ. ತಲಪಾಡಿ ಸಹಿತ ಕೇರಳ ಮತ್ತು ಕರ್ನಾಟಕದ ಗಡಿ ಪ್ರದೇಶಗಳು ಉಭಯ ರಾಜ್ಯಗಳ ಜನರ ಪ್ರಯಾಣಕ್ಕೆ ಮುಕ್ತಗೊಳ್ಳುವ ದಿನ ಇನ್ನಷ್ಟುವಿಳಂಬವಾಗುವ ಸಾಧ್ಯತೆ ಇದೆ.

couple

Karnataka Districts19, May 2020, 7:56 AM

ಕೇರಳ-ಕರ್ನಾಟಕ ಬಾರ್ಡರ್‌ನಲ್ಲೇ ತಾಳಿ ಕಟ್ಟೋಕೆ ಮುಂದಾದ ವರ: ಏನಾಯ್ತು ನೋಡಿ

ಲಾಕ್‌ಡೌನ್‌ ಸಡಿಲಗೊಂಡರೂ ನಿಗದಿತ ಮುಹೂರ್ತಕ್ಕೆ ಎರಡು ರಾಜ್ಯಗಳ ವಧೂವರರು ದಿಬ್ಬಣ ಸಮೇತ ಗಡಿ ಭಾಗಕ್ಕೆ ಆಗಮಿಸಿ ಅಲ್ಲಿಯೇ ತಾಳಿ ಕಟ್ಟಲು ಮುಂದಾದ ವಿದ್ಯಮಾನ ಸೋಮವಾರ ಕೇರಳದ ಗಡಿ ತಲಪಾಡಿಯಲ್ಲಿ ನಡೆದಿದೆ.

• Karnataka Districts12, May 2020, 3:40 PM

ದೇವರ ಸ್ವಂತ ನಾಡಿನಲ್ಲೊಂದು ಸ್ಮಾರ್ಟ್ ಐಡಿಯಾ..! ಕೇರಳದಲ್ಲಿ ಹೀಗಿದೆ ಕ್ವಾರೆಂಟೈನ್

ಕೇರಳ ಸೇರುವ ತಲಪಾಡಿ ಗೇಟ್ ಓಪನ್ ಆಗಿದೆ ಎಂಬ ಸುದ್ದಿ ಸಿಕ್ಕಿತು. ಆದರೂ ಅಲ್ಲಿ ಯಾರು ಗಡಿ ದಾಟಬಹುದು, ಹೋಗುವ ವಿಧಾನವೇನು..? ಅಲ್ಲಿ ಹೋದರೆ ಗಡಿ ದಾಟಲಾಗದೆ ಮರಳುವಂತಾದರೆ ಏನು ಮಾಡುವುದು… ಹೀಗೆ ಸಾಕಷ್ಟು ಗೊಂದಲ, ಭಯವಿದ್ದರೂ ಒಂದು ಮುಂಜಾನೆ ಕೈಗೆ ಸಿಕ್ಕ ಅಗತ್ಯ ವಸ್ತು ಹಿಡಿದು ತಾತ್ಕಾಲಿಕವಾಗಿ ಬೆಂಗಳೂರಿಗೆ ಬಾಯ್ ಹೇಳಿಯಾಗಿತ್ತು.. ಕೇರಳಕ್ಕೆ ತಲುಪಿದಾಗ ಅಲ್ಲಿನ ಪರಿಸ್ಥಿತಿ ಹೇಗಿತ್ತು..? ಕ್ವಾರೆಂಟೈನ್ ವ್ಯವಸ್ಥೆ ಹೇಗಿದೆ..? ಇಲ್ಲಿ ಓದಿ

• heart patient medicine

Karnataka Districts11, Apr 2020, 9:12 AM

ಗಡಿ ದಾಟಲು ಹೆಲ್ತ್‌ ಎಮೆರ್ಜೆನ್ಸಿ ಡ್ರಾಮಾ..! ಅಡ್ಮಿಟ್ ಆಗಿ ರೋಗಿಗಳು ಪರಾರಿ

ಕೇರಳ ಆ್ಯಂಬುಲೆನ್ಸ್‌ಗಳಿಗೆ ತಲಪಾಡಿ ಗಡಿಯಲ್ಲಿ ನೀಡಿದ ಅವಕಾಶವನ್ನು ದುರುಪಯೋಗಪಡಿಸಿಕೊಂಡ ರೋಗಿಗಳು ಆಸ್ಪತ್ರೆಗೆ ದಾಖಲಾಗಿ ಬಳಿಕ ನಾಪತ್ತೆಯಾದ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ.

• Karnataka Districts11, Apr 2020, 7:12 AM

ಆ್ಯಂಬುಲೆನ್ಸ್‌ನಲ್ಲಿ ಬಂದ ಓರ್ವ ರೋಗಿ ಕೇರಳಕ್ಕೆ ವಾಪಸ್‌..!

ಕೇರಳದಿಂದ ಆಗಮಿಸುವ ಆ್ಯಂಬುಲೆನ್ಸ್‌ಗಳಿಗೆ ತಲಪಾಡಿ ಗಡಿಯಲ್ಲಿ ಕಟ್ಟುನಿಟ್ಟಿನ ತಪಾಸಣೆ ನಡೆಸಲಾಗುತ್ತಿದೆ. ಶುಕ್ರವಾರ ನಿಯಮ ಮೀರಿ ಆಗಮಿಸಿದ ಇಬ್ಬರು ರೋಗಿಗಳ ಪೈಕಿ ಒಬ್ಬರನ್ನು ವಾಪಸ್‌ ಕಳುಹಿಸಲಾಗಿದೆ.

• Deralakatte

Karnataka Districts9, Apr 2020, 7:46 AM

ಕಾಸರಗೋಡು ರೋಗಿಗಳಿಗೆ ದೇರಳಕಟ್ಟೆ ಆಸ್ಪತ್ರೆಯಲ್ಲಿ ಮಾತ್ರ ಚಿಕಿತ್ಸೆ

ಸರ್ವೋಚ್ಚ ನ್ಯಾಯಾಲಯದ ಆದೇಶದನ್ವಯ ಕೇರಳ ರಾಜ್ಯದಿಂದ ತುರ್ತು ವೈದ್ಯಕೀಯ ಚಿಕಿತ್ಸೆ ಅಗತ್ಯವಿರುವ ರೋಗಿಗಳಿಗೆ ತಲಪಾಡಿ ಮೂಲಕ ಮಂಗಳೂರಿಗೆ ಪ್ರವೇಶಿಸಲು ಅನುಮತಿ ನೀಡಲಾಗಿದೆ. ಆದರೆ ಈ ರೋಗಿಗಳಿಗೆ ದೇರಳಕಟ್ಟೆಯ ಕೆ.ಎಸ್‌. ಹೆಗ್ಡೆ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮಾತ್ರ ಚಿಕಿತ್ಸೆ ಪಡೆಯಲು ಅವಕಾಶ ನೀಡಲಾಗಿದೆ.

• कोरोना वायरस की बात करें तो देशभर में अब तक 450 मरीज इससे संक्रमित हो चुके हैं। इसके साथ ही भारत में अब तक 9 लोग अपनी जान गंवा चुके हैं।

Coronavirus Karnataka24, Mar 2020, 10:27 AM

ಕೊರೋನಾ ವದಂತಿ: ಸಾವಿನ 2 ದಿನ ಬಳಿಕ ಅಂತ್ಯ​ಸಂಸ್ಕಾ​ರ!

ಮಧುಮೇಹ ಹಾಗೂ ರಕ್ತದೊತ್ತಡ ಅಧಿಕವಾಗಿ ಆಸ್ಪತ್ರೆಗೆ ದಾಖಲಾಗಿದ್ದ ತಲಪಾಡಿ ಪಂಜಾಳ ನಿವಾಸಿ ಮಹಿಳೆ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಎರಡು ದಿನಗಳ ಹಿಂದೆ ಮೃತಪಟ್ಟಿದ್ದು, ಇಲಾಖಾಧಿಕಾರಿಗಳ ಸೂಚನೆಯಂತೆ ವರದಿ ಬಂದ ಬಳಿಕ ಸೋಮವಾರ ಅಂತಿಮ ಸಂಸ್ಕಾರ ನಡೆಸಲಾಯಿತು.

• খুব প্রয়োজন ছাড়া ঘর থেকে বার হতে নারাজ মুম্বইবাসী।

Karnataka Districts20, Mar 2020, 10:16 AM

ಕೊರೋನಾ ಭೀತಿ: ಕೇರಳ-ಕರ್ನಾಟಕ ಬಾರ್ಡರ್‌ನಲ್ಲಿ ದಿನಪೂರ್ತಿ ತಪಾಸಣೆ

ಕೇರಳ- ಕರ್ನಾಟಕ ಗಡಿಭಾಗ ತಲಪಾಡಿಯಲ್ಲಿ ಕಳೆದ ಮೂರು ದಿನಗಳಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನಿರ್ದೆಶನದಂತೆ ನಡೆಸಲಾಗುತ್ತಿರುವ ತಪಾಸಣೆ 24 ಗಂಟೆಯೂ ನಡೆಯುತ್ತಿದೆ.