ತರಕಾರಿ ಮಾರುಕಟ್ಟೆ  

(Search results - 12)
 • JCB

  Raichur8, Nov 2019, 11:25 AM IST

  ಮುದಗಲ್‌ನಲ್ಲಿ ತೆರವು ಕಾರ್ಯಾಚರಣೆಗೆ ವ್ಯಾಪಾರಸ್ಥರ ಖಂಡನೆ

  ಪಟ್ಟಣದ ಬಸ್ ನಿಲ್ದಾಣದ ಮುಖ್ಯ ರಸ್ತೆಯಿಂದ ತರಕಾರಿ ಮಾರುಕಟ್ಟೆಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಗಳ ಎರಡು ಬದಿಗಳಲ್ಲಿನ ಟಿನ್ ಶೆಡ್‌ಗಳನ್ನು ತೆರವುಗೊಳಿಸಿರುವುದು ಖಂಡನಾರ್ಹ ಜೊತೆಗೆ ಪೂರ್ವಾಪರ ಮುನ್ಸೂಚನೆ ನೀಡದೇ ವ್ಯಾಪಾರಸ್ಥರ ಮೇಲೆ ದೌರ್ಜನ್ಯ ಮಾಡುವುದುರ ಮೂಲಕ ಪುರಸಭೆ ಮುಖ್ಯಾಧಿಖಾರಿ ನರಸಿಂಹಮೂರ್ತಿ ಪುಟ್ ಪಾಥ್ ವ್ಯಾಪರಸ್ಥರಿಗೆ ತೊಂದರೆ ನೀಡಿದ್ದಾರೆ ಎಂದು ಮುಖಂಡರಾದ ಗುರುಬಸ್ಸಪ್ಪ ಸಜ್ಜನ್ ಅವರು ಆರೋಪಿಸಿದರು. 
   

 • Bagalkot3, Nov 2019, 12:32 PM IST

  ಗಬ್ಬೆದ್ದು ನಾರುತ್ತಿರುವ ಜಮಖಂಡಿ ತರಕಾರಿ ಮಾರ್ಕೆಟ್!

  ಜಮಖಂಡಿ ರಾಜ ಮಹಾರಾಜರು ನಗರೀಕರಣಕ್ಕೆ ಹೆಚ್ಚಿನ ಅನುಕೂಲವಾಗಲೆಂದು ತರಕಾರಿ ಮಾರುಕಟ್ಟೆಗೆ ಪ್ರತ್ಯೇಕ ಕಟ್ಟಡ ನಿರ್ಮಿಸಿ ವ್ಯಾಪಾಸ್ಥರಿಗೆ ಸುವ್ಯವಸ್ಥೆ ಮಾಡಿಕೊಟ್ಟಿದ್ದರು. ಮುಂದೆ ಸಂಸ್ಥಾನಗಳು ಹೋಗಿ ರಾಜ್ಯ ಸರ್ಕಾರದ ಅಧೀನದಲ್ಲಿ ತರಕಾರಿ ಮಾರುಕಟ್ಟೆಗೆ ಯಾವುದೇ ಮೂಲಭೂತ ಸೌಲಭ್ಯ ನೀಡದ್ದಕ್ಕೆ ತರಕಾರಿ ವ್ಯಾಪಾರಸ್ಥರು ರಸ್ತೆ ಬದಿಗೆ ಬಂದು ತಮ್ಮ ವ್ಯಾಪಾರ ವಹಿವಾಟು ನಡೆಸಿದ್ದರಿಂದ ವಾಹನ, ಪಾದಚಾರಿಗಳ ಸಂಚಾರಕ್ಕೆ ತುಂಬಾ ತೊಂದರೆ ಉಂಟಾಗುತ್ತಿದೆ.
   

 • Belagavi30, Oct 2019, 12:05 PM IST

  ಲೋಕಾಪುರದ ರೋಗಗ್ರಸ್ತ ಮಾರ್ಕೆಟ್‌ಗೆ ಬೇಕಿದೆ ಚಿಕಿತ್ಸೆ!

  ಅಭಿವೃದ್ಧಿ ಕಾಣದೆ ಪಟ್ಟಣದಲ್ಲಿರುವ ದಿನದ ಸಂತೆ ಅಕ್ಷರಶಃ ಕೆಸರಿನ ಗದ್ದೆ ಆಗಿದೆ. ಮಾರುಕಟ್ಟೆ ಅಸ್ವಚ್ಛತೆಯಿಂದ ಕೂಡಿರುವುದರಿಂದ ವ್ಯಾಪಾರಸ್ಥರು ಹಾಗೂ ಗ್ರಾಹಕರು ನಿತ್ಯ ರೋಗದ ಭಯದಲ್ಲೇ ವ್ಯಾಪಾರ ಮಾಡುವಂತಾಗಿದೆ.

 • market

  Bagalkot27, Oct 2019, 10:55 AM IST

  ಕುಡುಕರ ತಾಣವಾದ ಹುನಗುಂದದ ತರಕಾರಿ ಮಾರುಕಟ್ಟೆ!

  ಲಕ್ಷಾಂತರ ರುಪಾಯಿ ಖರ್ಚು ಮಾಡಿ ಪಟ್ಟಣದಲ್ಲಿ ತರಕಾರಿ ಮಾರುಕಟ್ಟೆ ನಿರ್ಮಿಸಲಾಗಿದೆ. ಆದರೆ, ಇದಕ್ಕೆ ಸೂಕ್ತ ನಿರ್ವಹಣೆ ಮತ್ತು ರಕ್ಷಣೆ ಇಲ್ಲದ ಕಾರಣ ಈ ಮಾರುಕಟ್ಟೆ ಹಂದಿ ಹಾಗೂ ಮದ್ಯವ್ಯಸನಿಗಳಿಗೆ ತಾಣವಾಗಿ ರೂಪಗೊಂಡಿದೆ.
   

 • Policeman

  Gadag27, Oct 2019, 9:13 AM IST

  ಗಜೇಂದ್ರಗಡ: ಜೋಡು ರಸ್ತೆಯಲ್ಲಿ ಸುಗಮ ಸಂಚಾರಕ್ಕೆ ಪೊಲೀಸರ ಹರಸಾಹಸ

  ಪಟ್ಟಣದ ಜೋಡು ರಸ್ತೆಯಲ್ಲಿ ಬೀದಿ ಬದಿ ವ್ಯಾಪಾರಸ್ಥರನ್ನು ಪೊಲೀಸ್‌ ಅಧಿಕಾರಿಗಳು ರಸ್ತೆಯ ಇನ್ನೊಂದು ಬದಿ ಸ್ಥಳಾಂತರಿಸಿ ವಾಹನ ಸವಾರರಿಗೆ ಹಾಗೂ ಪಾದಚಾರಿಗಳಿಗೆ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಿದ್ದರು. ಆದರೆ ಪಿಎಸ್‌ಐ ಗುರುಶಾಂತ ದಾಶ್ಯಾಳ ಹಾಗೂ ಸಿಬ್ಬಂದಿ ಮುಂದೆ ಹೋಗುತ್ತಿದ್ದಂತೆ ಮತ್ತೆ ಬೀದಿ ಬದಿ ವ್ಯಾಪಾರಸ್ಥರು ರಸ್ತೆಯಲ್ಲಿ ವ್ಯಾಪಾರ ಮುಂದುವರೆಸಿದ್ದು, ವಾಹನ ಸಂಚಾರ ಮತ್ತಷ್ಟು ದುಸ್ತರವಾಗಿದೆ.
   

 • Bagalkot23, Oct 2019, 11:47 AM IST

  ಅಮೀನಗಡ: ಕೊಚ್ಚೆಯಲ್ಲೇ ತರಕಾರಿ ಖರೀದಿ: ಮರೀಚಿಕೆಯಾದ ಸ್ವಚ್ಛತೆ

  ಗ್ರಾಮ ಪಂಚಾಯತಿ ಮೇಲ್ದರ್ಜೆಗೇರಿ ಪಟ್ಟಣ ಪಂಚಾಯತಿಯಾದರೂ ಸಂತೆ ಮಾರುಕಟ್ಟೆಗಿಲ್ಲ ನಿಗದಿತ ಸ್ಥಳ. ಇದರಿಂದಾಗಿ ಅತಂತ್ರ ಸ್ಥಿತಿಯಲ್ಲಿ ವ್ಯಾಪಾರಿಗಳು, ಗ್ರಾಹಕರಿಗಿಲ್ಲ ಶುದ್ಧ ಸ್ವಚ್ಛತೆಯ ತರಕಾರಿ, ವಾರಕ್ಕೊಮ್ಮೆ ನಡೆಯುವ ಸಂತೆಯಿಂದ ಹೆದ್ದಾರಿಯಲ್ಲಿ ನಡೆಯುವ ವಾಹನ ಸಂಚಾರ ದಟ್ಟಣೆಯಿಂದ ಪ್ರಯಾಣಿಕರು ಕೂಡ ಪರದಾಡುವಂತಾಗಿದೆ. ಇದು ಅಮೀನಗಡ ಪಟ್ಟಣ ಮಾರುಕಟ್ಟೆ ದುಸ್ಥಿತಿ.
   

 • Bagalkot21, Oct 2019, 2:27 PM IST

  ಕೆಸರಿನ ಗದ್ದೆಯಾದ ಮುಧೋಳದ ತರಕಾರಿ ಮಾರುಕಟ್ಟೆ

  ಪಟ್ಟಣದ ಏಕೈಕ ರನ್ನ ತರಕಾರಿ ಮಾರುಕಟ್ಟೆಈಗ ಕೆಸರಿನ ಗದ್ದೆಯಾಗಿದೆ. ಔದ್ಯೋಗಿಕ ನಗರ ಎಂದೇ ಕರೆಯಿಸಿಕೊಳ್ಳುವ ಇಲ್ಲಿನ ರನ್ನ ತರಕಾರಿ ಮಾರುಕಟ್ಟೆಯ ಅವ್ಯವಸ್ಥೆ ಆ ದೇವರಿಗೆ ಪ್ರೀತಿ ಎನ್ನುವಂತಾಗಿದೆ.

 • Bahrain Fire

  Bidar18, Oct 2019, 12:43 PM IST

  ಬೀದರ್‌ನಲ್ಲಿ ಹತ್ತಿ ಗೋದಾಮಿಗೆ ಬೆಂಕಿ: ಲಕ್ಷಾಂತರ ರು ಹಾನಿ

  ನಗರದ ಸಿಂಗಾರ ಬಾಗ್‌ನಲ್ಲಿರುವ (ಹಳೆ ತರಕಾರಿ ಮಾರುಕಟ್ಟೆ) ಹತ್ತಿ ಗೋದಾಮಿಗೆ ಬೆಂಕಿ ತಗುಲಿ ಸುಮಾರು 12 ಲಕ್ಷ ರು.ಗಳಿಗೂ ಹೆಚ್ಚು ಹತ್ತಿ, ಮತ್ತಿತರ ಸಾಮಗ್ರಿಗಳು ಹಾನಿಯಾದ ಘಟನೆ ನಡೆದಿದೆ. 
   

 • market

  Bagalkot16, Oct 2019, 11:48 AM IST

  ತಿಪ್ಪೆಯಾಗಿ ಮಾರ್ಪಟ್ಟ ಇಳಕಲ್ಲ ತರಕಾರಿ ಮಾರುಕಟ್ಟೆ!

  ನಗರದ ಹೃದಯ ಭಾಗದಲ್ಲಿರುವ ಮಾರುಕಟ್ಟೆಗೆ ತೆರಳಿದರೆ ಕಸದ ರಾಶಿಯೇ ಮುಖ್ಯವಾಗಿ ಸ್ವಾಗತಿಸುತ್ತದೆ. ಇಲ್ಲಿ ಯಾರೇ ಹೊಸದಾಗಿ ಬಂದರೂ ಅಸಹ್ಯ ಹುಟ್ಟಿಸುವುದು ಗ್ಯಾರಂಟಿ. ಮೂಗು ಮುಚ್ಚಿಕೊಂಡೇ ಸಾಗಬೇಕು. ನಗರಸಭೆಯವರು ಜಾಗೃತಿ ಮೂಡಿಸಿ ಕಸ ಸಂಗ್ರಹ ಮಾಡುತ್ತಿದ್ದರೂ ಕಸದ ರಾಶಿ ಬೆಳೆಯುತ್ತಿರುವುದು ನಿಂತಿಲ್ಲ. ಹೀಗಾಗಿ ಗ್ರಾಹಕರು ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ.
   

 • market

  Karnataka Districts28, Sep 2019, 2:21 PM IST

  ದುಡ್ಡು ಕೊಟ್ಟು ತರಕಾರಿ ಖರೀದಿಸಿದ್ರೆ ‘ಡೆಂಘೀ’ ಫ್ರೀ!

  ಎಲ್ಲಿ ನೋಡಿದರೂ ಕಸ ಕಡ್ಡಿಗಳ ರಾಶಿ, ಕಾಲಿಟ್ಟಲ್ಲೆಲ್ಲ ರಜ್ಜು-ಗೊಜ್ಜು. ಮೂಗು ಮುಚ್ಚಿಕೊಂಡೇ ಇಲ್ಲಿ ಸಂಚರಿಸಬೇಕು. ಆಯತಪ್ಪಿ ಬಿದ್ದರೆ ಕೊಚ್ಚೆ ಕೊಳಚೆ ಗಳ ಮಧ್ಯೆ ಬಿದ್ದು ಈಜಾಡಿ ಬರಬೇಕಾದ ಅನಿವಾರ್ಯತೆ. ನೂರಕ್ಕೂ ಹೆಚ್ಚು ಹಂದಿಗಳು, ಕ್ರಿಮಿ ಕೀಟಗಳ ತಾಣ. ತರಕಾರಿ ಖರೀದಿಸಲು ಬಂದವರಿಗೆ ಡೆಂಘೀ ಇಲ್ಲಿ ಫ್ರೀ..! ಎಲ್ಲಿ ನೋಡಿದರೂ ಕಸ ಕಡ್ಡಿಗಳ ರಾಶಿ, ಕಾಲಿಟ್ಟಲ್ಲೆಲ್ಲ ರಜ್ಜು-ಗೊಜ್ಜು. ಮೂಗು ಮುಚ್ಚಿಕೊಂಡೇ ಇಲ್ಲಿ ಸಂಚರಿಸಬೇಕು. ಆಯತಪ್ಪಿ ಬಿದ್ದರೆ ಕೊಚ್ಚೆ ಕೊಳಚೆ ಗಳ ಮಧ್ಯೆ ಬಿದ್ದು ಈಜಾಡಿ ಬರಬೇಕಾದ ಅನಿವಾರ್ಯತೆ. ನೂರಕ್ಕೂ ಹೆಚ್ಚು ಹಂದಿಗಳು, ಕ್ರಿಮಿ ಕೀಟಗಳ ತಾಣ. ತರಕಾರಿ ಖರೀದಿಸಲು ಬಂದವರಿಗೆ ಡೆಂಘೀ ಇಲ್ಲಿ ಫ್ರೀ..! 

 • NEWS8, Jun 2019, 6:21 PM IST

  ಸಂಸ್ಕೃತ ಬಂದರಷ್ಟೇ ಸಂತೆಗೆ ಬನ್ನಿ: ತರಕಾರಿ ಹೆಸರು ತಿಳಿದು ತಿನ್ನಿ!

  ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿರುವ ನಿಶತ್'ಗಂಜ್ ತರಕಾರಿ ಮಾರುಕಟ್ಟೆಯಲ್ಲಿ ಎಲ್ಲಾ ತರಕಾರಿ ಹೆಸರುಗಳನ್ನು ಸಂಸ್ಕೃತದಲ್ಲಿ ಬರೆಯಲಾಗಿದೆ. ಸಂಸ್ಕೃತ ಭಾಷೆಯ ಅಭಿವೃದ್ಧಿಗಾಗಿ ತರಕಾರಿ ಮಾರಾಟಗಾರರು ಎಲ್ಲಾ ತರಕಾರಿಗಳಿಗೆ ಸಂಸ್ಕೃತದ ಹೆಸರನ್ನಷ್ಟೇ ಇಟ್ಟಿದ್ದಾರೆ.

 • Vidyarthi Bhavan

  Food25, Oct 2018, 10:39 AM IST

  ವಿದ್ಯಾರ್ಥಿ ಭವನಕ್ಕೆ ತುಂಬಿತು 75: ಪಯಣದ ಕಥೆ ಇಲ್ಲಿದೆ

  ಹೂವಿನ ಮಾರ್ಕೆಟ್ಟು, ಹಣ್ಣಿನ ಸಂತೆ, ತರಕಾರಿ ಮಾರುಕಟ್ಟೆ, ಪುಸ್ತಕದ ಅಂಗಡಿ, ಮಾಸ್ತಿ ಕ್ಲಬ್ಬು, ಗ್ರಂಥಿಗೆ ಅಂಗಡಿ, ವೀಳ್ಯೆದೆಲೆ ಬುಟ್ಟಿ- ಹೀಗೆ ಏನೆಲ್ಲವನ್ನು ಮಾರುವ ಗಾಂಧಿಬಜಾರಿನ ನಟ್ಟನಡುವೆ ಘಮ್ಮನೆ ಮೂಗಿಗೆ ಅಡರುವ ಮಸಾಲೆ ದೋಸೆಯ ಪರಿಮಳಕ್ಕೆ ಮನಸೋಲದವರು ಯಾರಿದ್ದಾರೆ? ಬೆಳಗ್ಗೆ ಸಂಜೆ ಅಲ್ಲಿ ಜನ ಸಾಲುಗಟ್ಟಿ ನಿಂತು ಮಸಾಲೆ ದೋಸೆಗಾಗಿ ಕಾಯುತ್ತಾರೆ. ಆಧಾರ್ ಕಾರ್ಡು ಮಾಡಿಸಿಕೊಳ್ಳಲು ಕ್ಯೂ ನಿಲ್ಲುವಂತೆ ಸರದಿಯ ಸಾಲಲ್ಲಿ ನಿಂತು ದೋಸೆ ತಿನ್ನುತ್ತಾರೆ. ದೋಸೆಗೂ ಅದನ್ನು ತಿನ್ನುವವರಿಗೂ ಭಾವನಾತ್ಮಕ ಸಂಬಂಧ ಉಂಟೆಂಬುದು ಗೊತ್ತಾಗುವುದು ವಿದ್ಯಾರ್ಥಿ ಭವನಕ್ಕೆ ಕಾಲಿಟ್ಟಾಗಲೇ. ಈ ಹೋಟೆಲ್ಲಿನ ೭೫ ವರ್ಷಗಳ ಪಯಣದ ಕತೆ ಇಲ್ಲಿದೆ.