ಡಿ.ಕೆ. ಶಿವಕುಮಾರ್  

(Search results - 183)
 • Video Icon

  NEWS18, Jul 2019, 4:55 PM IST

  ‘ಶ್ರೀರಾಮುಲುಗೆ ಡಿಸಿಎಂ ಮಾಡಲ್ಲ’

  ವಿಧಾನಸಭೆ ಹಾಗೇನೆ.... ಏನೇನೋ ‘ಕ್ಷಣ’ಗಳಿಗೆ ಸಾಕ್ಷಿಯಾಗುತ್ತದೆ. ಹೊರಗಡೆ ಪರಸ್ಪರ ವಾಗ್ಯುದ್ಧ ನಡೆಸುವ ರಾಜಕೀಯ ವಿರೋಧಿಗಳು ಇಲ್ಲಿ ತಮಾಷೆ ಮಾಡೋದು ಇದೆ. ಇಂದಿನ ವಿಶ್ವಾಸ ಮತ ಕಲಾಪದ ಬಿಸಿಬಿಸಿ ಚರ್ಚೆಯ ನಡುವೆಯೂ, ಬದ್ಧ ರಾಜಕೀಯ ವಿರೋಧಿಗಳಾದ ಡಿ.ಕೆ. ಶಿವಕುಮಾರ್ ಮತ್ತು ಶ್ರೀರಾಮುಲು ಪರಸ್ಪರ ಕಾಲೆಳೆದುಕೊಂಡಿರುವುದು ಹೀಗೆ...  

 • shivakumar kumaraswamy
  Video Icon

  NEWS11, Jul 2019, 12:40 PM IST

  ಸಿಎಂ ರಾಜೀನಾಮೆ ನಿರ್ಧಾರ ಬಗ್ಗೆ ಡಿಕೆಶಿ ಖಡಕ್ ಮಾತು!

  ರಾಜ್ಯದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ICUನಲ್ಲಿದೆ. ಸಿಎಂ ಎಚ್.ಡಿ. ಕುಮಾರಸ್ವಾಮಿ ರಾಜೀನಾಮೆ ನೀಡುತ್ತಾರೆ ಎಂಬ ಗುಸುಗುಸು ರಾಜಕೀಯ ಪಡಸಾಲೆಯಲ್ಲಿ ಕೇಳಿಬರುತ್ತಿದೆ. ಈ ಬಗ್ಗೆ ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಬನ್ನಿ ಅವರೇನು ಹೇಳಿದ್ದಾರೆ ನೋಡೋಣ...

 • shivakumar
  Video Icon

  NEWS10, Jul 2019, 2:35 PM IST

  ಡಿಕೆಶಿಗೆ ಬಂಡಾಯ ಶಾಸಕನ ‘ಪ್ರೀತಿಯ’ ಮನವಿ!

   ಗನ್ ತಂದಿಲ್ಲ, ಹೃದಯ ತಂದಿದ್ದೇನೆ, ಭೇಟಿಯಾಗಿಯೇ ಹೋಗ್ತೀನಿ ಎಂದು ಬಂಡಾಯ ಶಾಸಕರು ಬೀಡು ಬಿಟ್ಟಿರುವ ಮುಂಬೈ ಹೋಟೆಲ್ ಹೊರಗಡೆ  ಡಿ.ಕೆ. ಶಿವಕುಮಾರ್  ಝಾಂಡಾ ಊರಿ ಕೂತಿದ್ದಾರೆ. ಡಿಕೆಶಿಯ ಈ ನಡೆ ಅವರ ಆಪ್ತ ಶಾಸಕರಿಗೆ ಕಸಿವಿಸಿ ಉಂಟುಮಾಡಿದೆ. ರಾಜಕಾರಣ ಬೇರೆ, ಸ್ನೇಹ ಬೇರೆ ಎಂದು  ಹೇಳುತ್ತಿರುವ ಶಾಸಕರು ಡಿಕೆಶಿಗೆ ‘ಪ್ರೀತಿ’ಯಿಂದಲೇ ಮನವಿ ಮಾಡಿದ್ದಾರೆ. 
    

   

 • बागी विधायक विधानसभा स्पीकर के खिलाफ सुप्रीम कोर्ट पहुंच गए हैं।
  Video Icon

  NEWS10, Jul 2019, 2:16 PM IST

  ಡಿಕೆಶಿಗೆ ಅವಮಾನ ಸಹಿಸಲ್ಲ; ಟ್ರಬಲ್ ಶೂಟರ್ ಹೊಗಳಿದ ಬಂಡಾಯ ಶಾಸಕ!

  ರಾಜಕೀಯವೇ ಹಾಗೇ. ಯಾರು? ಹೇಗೆ? ಯಾವಾಗ? ಏನ್ಮಾಡ್ತಾರೆ? ಏನು ಹೇಳ್ತಾರೆ? ಎಂದು ಹೇಳಕ್ಕಾಗಲ್ಲ. ಮುಂಬೈ ಹೋಟೆಲ್ ನಲ್ಲಿ ಬೀಡು ಬಿಟ್ಟಿರುವ ಬಂಡಾಯ ಶಾಸಕರನ್ನು ಭೇಟಿಯಾಗಲು ಡಿ.ಕೆ. ಶಿವಕುಮಾರ್ ಹಠ ಹಿಡಿದು ಕೂತಿದ್ದಾರೆ. ಡಿಕೆಶಿಯವರನ್ನು ಭೇಟಿಯಾಗಲ್ಲ ಎಂದು ಬಂಡಾಯ ಶಾಸಕರು ಖಡಕ್ ಮಾತು. ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ಕೊಟ್ಟ ಬಂಡಾಯ ಶಾಸಕರೊಬ್ಬರು, ಡಿಕೆಶಿಗೆ ಆಗುವ ಅವಮಾನ ಸಹಿಸಲ್ಲ, ಅವರಿಂದಾಗಿಯೇ ನಾವು ಬೆಳೆದಿದ್ದೇವೆ,  ಎಂದು ಹೇಳಿರುವುದು ಅಚ್ಚರಿ ಮೂಡಿಸಿದೆ.     

 • Ramesh Jarkiholi
  Video Icon

  NEWS10, Jul 2019, 1:58 PM IST

  ‘ಸಿದ್ದರಾಮಯ್ಯರೇ ನಮ್ಮ ನಾಯಕ’ ಕೊನೆಗೂ ಮಾಧ್ಯಮ ಮುಂದೆ ಬಂದ ರಮೇಶ್ ಜಾರಕಿಹೊಳಿ ಹೇಳಿಕೆ!

  ಹೋಟೆಲ್ ಒಳಗಡೆ ಬಂಡಾಯ ಶಾಸಕರು, ಹೋಟೆಲ್ ಹೊರಗಡೆ ಕಾಂಗ್ರೆಸ್ ಟ್ರಬಲ್ ಶೂಟರ್ ಡಿ.ಕೆ. ಶಿವಕುಮಾರ್. ಭೇಟಿಯಾಗಿಯೇ ಹೋಗ್ತೀನಿ ಎಂದು ಡಿಕೆಶಿ ಹಟ, ಭೇಟಿಯಾಗೋದೇ ಇಲ್ಲ ಎಂದು ಶಾಸಕರ ಪಟ್ಟು. ಈ ನಡುವೆ ಮಾಧ್ಯಮಗಳೊಂದಿಗೆ ಮಾತನಾಡಿದ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ, ಪ್ರಸಕ್ತ ವಿದ್ಯಮಾನಗಳ ಬಗ್ಗೆ ಮಾತನಾಡಿದ್ದಾರೆ.

 • Video Icon

  NEWS10, Jul 2019, 1:23 PM IST

  ಮುಂಬೈ ಹೋಟೆಲ್‌ನಲ್ಲಿರುವ ಶಾಸಕರಿಂದ ಡಿಕೆಶಿಗೆ ಆಹ್ವಾನ?

  ಕರ್ನಾಟಕ ರಾಜಕಾರಣ ಈಗ ಮುಂಬೈಯಲ್ಲೂ ಹೈಡ್ರಾಮಾ ಸೃಷ್ಟಿಸಿದೆ. ಬಂಡಾಯ ಶಾಸಕರನ್ನು ಭೇಟಿಯಾಗಲು ತೆರಳಿರುವ ಕಾಂಗ್ರೆಸ್ ಟ್ರಬಲ್ ಶೂಟರ್ ಡಿ.ಕೆ. ಶಿವಕುಮಾರ್‌ರನ್ನು ಪೊಲೀಸರು ತಡೆದಿದ್ದಾರೆ. ತುರ್ತು ಕಾರಣ ನೀಡಿ ಡಿ.ಕೆ.ಶಿವಕುಮಾರ್‌ರ ಹೋಟೆಲ್ ಬುಕಿಂಗ್‌ನ್ನು ರದ್ದುಪಡಿಸಲಾಗಿದೆ. ಏನೇ ಆಗಲಿ, ಶಾಸಕರನ್ನು ಭೇಟಿಯಾಗಲೇ ಬೇಕು ಎಂದು ಡಿಕೆಶಿ ಪಟ್ಟುಹಿಡಿದಿದ್ದಾರೆ. ಇದೇ ವೇಳೆ ಮಾಧ್ಯಮಗಳೊಂದಿಗೆ ಡಿಕೆಶಿ ಮಾತನಾಡಿದ್ದಾರೆ. ಬನ್ನಿ ಅವರೇನು ಹೇಳಿದ್ದಾರೆ ನೋಡೋಣ... 

 • Video Icon

  NEWS9, Jul 2019, 3:59 PM IST

  ರೇವಣ್ಣ ಹಸ್ತಕ್ಷೇಪ, ಸಿದ್ದರಾಮಯ್ಯಗೆ ತರಾಟೆ ಭಾಗ್ಯ!

  ಇಂದು (ಮಂಗಳವಾರ) ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಶಾಸಕರೆಲ್ಲಾ ಸೇರಿ ನಾಯಕರನ್ನೇ ತರಾಟೆಗೆ ತೆಗೆದುಕೊಂಡರು. ಆಡಳಿತದಲ್ಲಿ ಜೆಡಿಎಸ್ ಸಚಿವ ಎಚ್.ಡಿ. ರೇವಣ್ಣರ ಅನಗತ್ಯ ಹಸ್ತಕ್ಷೇಪ ಸಭೆಯಲ್ಲಿ ಪ್ರತಿಧ್ವನಿಸಿತು. ಅಲ್ಲದೇ, ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಮತ್ತು ಡಾ. ಜಿ. ಪರಮೇಶ್ವರ್ ಸೇರಿದಂತೆ  ಪ್ರಮುಖ ನಾಯಕರಿಗೆ ಪ್ರಶ್ನೆಗಳ ಸುರಿಮಳೆಗೈದ ಶಾಸಕರು, ಸಖತ್ ಕ್ಲಾಸ್ ತೆಗೆದುಕೊಂಡರು.    

 • DK Shivakumar

  NEWS5, Jul 2019, 9:02 AM IST

  ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ಹೊರಬಿದ್ದ ಆಕ್ರೋಶ

   ಕನ್ನಡ ಮತ್ತು ಸಂಸ್ಕೃತಿ ಸಚಿವ ಡಿ.ಕೆ. ಶಿವಕುಮಾರ್ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ. ಪ್ರತಿಭಟನೆ ಎಚ್ಚರಿಕೆಯನ್ನೂ ನೀಡಲಾಗಿದೆ. 

 • Siddaramaiah
  Video Icon

  NEWS3, Jul 2019, 4:27 PM IST

  ತಿಂಗಳಿಗೈದು ಬಾರಿ ವರುಣಾ! ರಾಜ್ಯದಲ್ಲಿ ಮಧ್ಯಂತರ ಚುನಾವಣೆಯ ಲಕ್ಷಣ?

  ಇಬ್ಬರು ಶಾಸಕರ ರಾಜೀನಾಮೆ ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಹುಟ್ಟುಹಾಕಿದೆ. ಈ ಸಂದರ್ಭದಲ್ಲಿ, ಸಿಎಂ ಎಚ್.ಡಿ. ಕುಮಾರಸ್ವಾಮಿ ಅಮೆರಿಕಾದಲ್ಲಿದ್ದರೆ, ಕಾಂಗ್ರೆಸ್ ರಾಜ್ಯಾಧ್ಯಕ್ಷ ದಿನೇಶ್ ಗುಂಡೂ ರಾವ್ ಲಂಡನ್ ಪ್ರವಾಸಕ್ಕೆ ತೆರಳಿದ್ದಾರೆ. ಇಲ್ಲಿ ಟ್ರಬಲ್ ಶೂಟರ್ ಡಿ.ಕೆ. ಶಿವಕುಮಾರ್ ಮೌನಕ್ಕೆ ಶರಣಾಗಿದ್ದರೆ, ಸಿದ್ದರಾಮಯ್ಯ ಮೈಸೂರಿನಲ್ಲಿ ಠಿಕಾಣಿ ಹೂಡಿದ್ದಾರೆ. ಈ ಬೆಳವಣಿಗೆಗಳು ಸರ್ಕಾರ ಉಳಿಸುವ ತಂತ್ರವೇ ಅಥವಾ ಮಧ್ಯಂತರ ಚುನಾವಣೆಗೆ ರಣತಂತ್ರ ರೂಪಿಸುವ ಲಕ್ಷಣವೇ? 

 • Video Icon

  NEWS2, Jul 2019, 2:05 PM IST

  ಅಖಾಡಕ್ಕೆ ಧುಮುಕಿದ ಡಿಕೆಶಿ; ಬಹುದಿನಗಳ ಬಳಿಕ ‘ಖದರ್’ ಮಾತು!

  ಇತ್ತೀಚೆಗೆ ಪಕ್ಷದೊಳಗಿನ ಆಂತರಿಕ ಕಚ್ಚಾಟದ ವಿಷಯದಲ್ಲಿ ಮೌನವಹಿಸಿದ್ದ ಕಾಂಗ್ರೆಸ್ ಟ್ರಬಲ್ ಶೂಟರ್ ಡಿ.ಕೆ. ಶಿವಕುಮಾರ್ ಮತ್ತೆ ಅಖಾಡಕ್ಕಿಳಿದಿದ್ದಾರೆ. ಭಿನ್ನಮತೀಯರ ವಿರುದ್ಧ ತಮ್ಮ ಎಂದಿನ ಸ್ಟೈಲ್‌ನಲ್ಲಿ ಗುಡುಗಿದ್ದಾರೆ.

 • Video Icon

  NEWS1, Jul 2019, 4:31 PM IST

  ಆನಂದ್ ಸಿಂಗ್ ರಾಜೀನಾಮೆ; ಕೈಚಿಲ್ಲಿದ ಟ್ರಬಲ್ ಶೂಟರ್ ಡಿಕೆಶಿ?

  ಶಾಸಕ ಆನಂದ್ ಸಿಂಗ್ ರಾಜೀನಾಮೆ; ಮನವೊಲಿಸಲು ಪ್ರಯತ್ನಿಸಿದ್ದ ಕಾಂಗ್ರೆಸ್ ಟ್ರಬಲ್ ಶೂಟರ್ ಡಿ.ಕೆ. ಶಿವಕುಮಾರ್; ಪಕ್ಷ ಬಿಟ್ಟು ಹೋಗಲ್ಲ ಎಂದಿದ್ದ ಆನಂದ್ ಸಿಂಗ್!  

 • NEWS1, Jul 2019, 3:58 PM IST

  ‘ನಾನು ರಾಜೀನಾಮೆ ಕೊಟ್ರೂ ಸರ್ಕಾರಕ್ಕೆ ಏನಾಗಲ್ಲ’

  ರಾಜ್ಯ ರಾಜಕೀಯದಲ್ಲಿ ಆನಂದ್ ಸಿಂಗ್ ರಾಜೀನಾಮೆಯಿಂದ ಸಾಕಷ್ಟು ಪಲ್ಲಟವಾಗಿದ್ದು, ಈ ಬಗ್ಗೆ ಡಿ.ಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ. ಹಾಗಾದ್ರೆ ಈ ಬಗ್ಗೆ ಟ್ರಬಲ್ ಶೂಟರ್ ಹೇಳಿರೋದೇನು..?

 • Video Icon

  NEWS19, Jun 2019, 6:17 PM IST

  KPCC ಅಧ್ಯಕ್ಷ ಹುದ್ದೆ: ಕೊನೆಗೂ ನಿಲುವು ಪ್ರಕಟಿಸಿದ ಡಿಕೆಶಿ

  ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ ಹುದ್ದೆ ಕುರಿತು ರಾಜಕೀಯ ವಲಯದಲ್ಲಿ ಚರ್ಚೆ ನಡೆಯುತ್ತಿದೆ. ಟ್ರಬಲ್ ಶೂಟರ್ ಡಿ.ಕೆ. ಶಿವಕುಮಾರ್ ಮುಂದಿನ ಕೆಪಿಸಿಸಿ ಸಾರಥಿಯಾಗುತ್ತಾರಾ। ಎಂಬ ಬಗ್ಗೆ ತೆರೆಮರೆಯಲ್ಲಿ ಚರ್ಚೆ ಸಾಗಿದೆ. 

 • DK shivakumar

  NEWS17, Jun 2019, 2:14 PM IST

  ‘ಡಿ.ಕೆ. ಶಿವಕುಮಾರ್ ಅವರ ಕನಕಪುರದ ಆಸ್ತಿ ಮಾರಾಟ ಮಾಡಲಿ’

  ಸಚಿವ ಡಿ.ಕೆ.ಶಿವಕುಮಾರ್ ಅವರ ಕನಕಪುರದ ಆಸ್ತಿ ಮಾರಾಟ ಮಾಡಲಿ. ಅದಕ್ಕೆ ನನ್ನ ಅಭ್ಯಂತರವಿಲ್ಲ ಎಂದು ಬಿಜೆಪಿ ನಾಯಕರ ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ. 

 • Raghavendra

  NEWS5, Jun 2019, 1:53 PM IST

  ಡಿ.ಕೆ.ಶಿವಕುಮಾರ್ ಭೇಟಿ ಮಾಡಿದ ಬಿಜೆಪಿ ಸಂಸದ ಬಿ.ವೈ ರಾಘವೇಂದ್ರ

  ಶಿವಮೊಗ್ಗ ಕ್ಷೇತ್ರದ ಬಿಜೆಪಿ ನೂತನ ಸಂಸದ ಬಿ.ವೈ.ರಾಘವೇಂದ್ರ ಜಲಸಂಪನ್ಮೂಲಕ ಸಚಿವ ಡಿ.ಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದರು.