ಟಿಪ್ಪು ಸುಲ್ತಾನ್  

(Search results - 20)
 • Video Icon

  NEWS7, Sep 2019, 8:42 PM IST

  ಟಿಪ್ಪು ವೇಷದಲ್ಲಿ ಕುದುರೆ ಏರಿಬಂದು ಹಣ ಹಂಚಿದ ಜಮೀರ್ ಅಹ್ಮದ್

  ಹಿರಿಯ ಕಾಂಗ್ರೆಸ್ ಮುಖಂಡ ಅಲ್ಪಸಂಖ್ಯಾತ ಸಮುದಾಯದ ಪ್ರಬಲ ನಾಯಕ ಬಿ ಝಡ್ ಜಮೀರ್ ಅಹ್ಮದ್ ಖಾನ್, ಟಿಪ್ಪು ಸುಲ್ತಾನ್ ವೇಷಧಾರಿಯಾಗಿ ಗಮನ ಸೆಳೆದಿದ್ದಾರೆ. ಶುಕ್ರವಾರ ತಮ ಸ್ವಕ್ಷೇತ್ರವಾದ ಚಾಮರಾಜಪೇಟೆಯ ಟಿಪ್ಪುನಗರದಲ್ಲಿ ಕೆ.ಆರ್.ಮಾರುಕಟ್ಟೆ ವಾರ್ಡ್ ಪಾಲಿಕೆ ಸದಸ್ಯೆ ನಸೀಮಾ ಆಯುಬ್ ಖಾನ್ ಕಾರ್ಯಕ್ರಮವೊಂದನ್ನು ಆಯೋಜಿಸಿದ್ದರು. ಈ ಕಾರ್ಯಕ್ರಮಕ್ಕೆ ಜಮೀರ್ ಅಹ್ಮದ್ ಟಿಪ್ಪುವಿನಂತೆ ಪೇಟ, ಕೈಯಲ್ಲಿ ಖಡ್ಗ ಹಿಡಿದು ಅಶ್ವಾರೋಹಿಯಾಗಿ ಆಗಮಿಸಿ, ಎಲ್ಲರನ್ನು ಅಚ್ಚರಿಗೊಳಿಸಿದರು.

 • tipu-sultan

  Karnataka Districts3, Aug 2019, 11:18 AM IST

  'ಟಿಪ್ಪು ಬದುಕಿರುತ್ತಿದ್ರೆ ಕಾವೇರಿ ವಿವಾದ ಉದ್ಭವಿಸುತ್ತಿರಲಿಲ್ಲ'..!

  ಟಿಪ್ಪು ಸುಲ್ತಾನ್‌ ಬದುಕಿದ್ದಿದ್ದರೆ ತಮಿಳುನಾಡು-ಕರ್ನಾಟಕದ ನಡುವೆ ಕಾವೇರಿ ವಿವಾದವೇ ಉದ್ಭವಿಸುತ್ತಿರಲಿಲ್ಲ ಎಂದು ವಿಚಾರವಾದಿ ಪ್ರೊ.ಕೆ.ಎಸ್‌.ಭಗವಾನ್‌  ಹೇಳಿದ್ದಾರೆ. ಟಿಪ್ಪು ಬಲಿಯಾಗಿದ್ದರಿಂದ ಮಂಡ್ಯಕ್ಕೆ ಮಾತ್ರವಲ್ಲ, ಕರ್ನಾಟಕಕ್ಕೆ ಬಹು ದೊಡ್ಡ ನಷ್ಟವಾಗಿದೆ. ಅವನನ್ನು ಉಳಿಸಿಕೊಂಡಿದ್ದರೆ ಕಾವೇರಿ ನೀರೂ ನಮ್ಮದಾಗುತ್ತಿತ್ತು ಎಂದಿದ್ದಾರೆ.

 • Karnataka Districts2, Aug 2019, 3:34 PM IST

  ಟಿಪ್ಪು ಜಯಂತಿ ರದ್ದು ಮಾಡಿದ್ದು ಬೇಸರವಿಲ್ಲ : ತನ್ವೀರ್ ಸೇಠ್

  ಟಿಪ್ಪು ಜಯಂತಿ ಆಚರಣೆ ರದ್ದು ಮಾಡಿ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದ ಬೆನ್ನಲ್ಲೇ ಮೈಸೂರಿನಲ್ಲಿ ಟಿಪ್ಪು ಸುಲ್ತಾನ್ ಉರುಸ್ ಆಚರಣೆ ಮಾಡಲಾಗಿದೆ.

 • Karnataka Districts2, Aug 2019, 8:18 AM IST

  'ಮೋದಿಗಿಂತ ಟಿಪ್ಪು 100ಪಟ್ಟು ಉತ್ತಮ ಆಡಳಿತಗಾರ'..!

  ಪ್ರಧಾನಿ ನರೇಂದ್ರ ಮೋದಿ ಆಡಳಿತಕ್ಕಿಂತಲೂ ಟಿಪ್ಪು ಸುಲ್ತಾನ್‌ ದೇಶಕ್ಕೆ ಉತ್ತಮ ಆಡಳಿತ ನೀಡಿದ್ದರು. ಪ್ರಸ್ತುತ ದಿನನಿತ್ಯ ಕೋಮು ಗಲಭೆ, ಮಹಿಳೆಯ ಮೇಲೆ ನಿರಂತರ ಅತ್ಯಾಚಾರ, ರೈತರ ಆತ್ಮಹತ್ಯೆ, ದಲಿತರ ಮೇಲೆ ದೌರ್ಜನ್ಯ ಯಾವುದನ್ನು ತಡೆಯಲಾಗದ ಬಿಜೆಪಿ ಸರ್ಕಾರಕ್ಕಿಂತ ಟಿಪ್ಪು ನೂರುಪಟ್ಟು ಉತ್ತಮ ಆಡಳಿತಗಾರ ಎಂದು ಬಿಎಸ್‌ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ. ಕೃಷ್ಣಮೂರ್ತಿ ಹೇಳಿದರು.

 • Tipu Jayanti

  NEWS30, Jul 2019, 3:20 PM IST

  ಟಿಪ್ಪು ಸುಲ್ತಾನ್ ಜಯಂತಿ ಆಚರಣೆಗೆ ರಾಜ್ಯ ಸರಕಾರ ಎಳ್ಳು ನೀರು

  ರಾಜ್ಯದಲ್ಲಿ ತೀವ್ರ ಪರ ವಿರೋಧಗಳಿಗೆ ಕಾರಣವಾಗಿದ್ದ ಟಿಪ್ಪು ಜಯಂತಿ ಆಚರಣೆಯನ್ನು ರಾಜ್ಯ ಸರ್ಕಾರ ನಿರೀಕ್ಷೆಯಂತೆ ರದ್ದು ಮಾಡಿದೆ. ಸಿಎಂ ಬಿ ಎಸ್ ಯಡಿಯೂರಪ್ಪ ಸಂಪುಟದಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. 

 • NEWS5, May 2019, 1:44 PM IST

  ಟಿಪ್ಪು ಹಾಡಿ ಹೊಗಳಿದ ಪಾಕ್ ಪ್ರಧಾನಿ ಇಮ್ರಾನ್ ಖಾನ್!

  ಮೈಸೂರು ಹುಲಿ ಟಿಪ್ಪು ಸುಲ್ತಾನ್ ಪುಣ್ಯತಿಥಿ(ಮೇ.04) ಅಂಗವಾಗಿ, ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಟಿಪ್ಪುವನ್ನು ಹಾಡಿ ಹೊಗಳಿದ್ದಾರೆ.

 • krishna Byre Gowda

  NEWS11, Dec 2018, 1:28 PM IST

  ಮತ್ತೆ ಟಿಪ್ಪು ವಿವಾದ : ಹೆಸರು ಬದಲಾವಣೆ ಪ್ರಸ್ತಾವನೆಗೆ ವಿರೋಧ

  ಮತ್ತೊಮ್ಮೆ ಕರ್ನಾಟಕದಲ್ಲಿ ರಸ್ತೆ ಹಾಗೂ ಕ್ರಾಸ್ ಗಳ ಹೆಸರು ಬದಲಾವಣೆ ವಿಚಾರ ಗರಿಗೆದರಿದೆ. ಬೆಳ್ಳಹಳ್ಳಿ ಹ್ರಾಸ್ ಗೆ ಟಿಪ್ಪು ಹೆಸರಿಡುವ ಕೃಷ್ಣ ಭೈರೇಗೌಡ ಪ್ರಸ್ತಾವಣೆಗೆ ಬಿಜೆಪಿಯಿಂದ ವಿರೋಧ ವ್ಯಕ್ತವಾಗಿದೆ. 

 • Video Icon

  NEWS14, Nov 2018, 7:21 PM IST

  ಟಿಪ್ಪುವಿನ ಮೇಲೆ ಮೈಸೂರು ರಾಜಮಾತೆ ಮಾಡಿದ ಗಂಭೀರ ಆರೋಪವೇನು?

  ಟಿಪ್ಪುವಿನಿಂದ ನಮ್ಮ ಕುಟುಂಬಕ್ಕೆ ದೊಡ್ಡ ಹಾನಿಯಾಗಿದೆ, ನಮ್ಮ ಕುಟುಂಬ, ಪರಿವಾರಕ್ಕೆ ಟಿಪ್ಪು ಸುಲ್ತಾನ್ ಸಾಕಷ್ಟು ತೊಂದರೆ ನೀಡಿದ್ದ ಎಂದು ಮೈಸೂರಿನ ರಾಜಮಾತೆ ಪ್ರಮೋದಾದೇವಿ ಒಡೆಯರ್ ಹೇಳಿದ್ದು ಯಾವ ಆಧಾರದಲ್ಲಿ ಟಿಪ್ಪು ಜಯಂತಿ ಆಚರಣೆ ಮಾಡುತ್ತಿದ್ದಾರೆ ಎಂಬುದೇ ಗೊತ್ತಿಲ್ಲ ಎಂದಿದ್ದಾರೆ. ಸರ್ಕಾರ ಏಕೆ ಟಿಪ್ಪು ಜಯಂತಿಯನ್ನು ಆಚರಿಸುತ್ತಿದೆ, ಇದರ ಹಿಂದಿನ ಉದ್ದೇಶವೇನೆಂದು ನಮಗೆ ತಿಳಿಯುತ್ತಿಲ್ಲ ಎಂದು ಹೇಳಿದ್ದಾರೆ.

 • state11, Nov 2018, 11:04 AM IST

  ಟಿಪ್ಪು ಜಯಂತಿ ವಿವಾದ : ಸರ್ಕಾರದಿಂದ ಹೊಸ ಪ್ಲಾನ್‌?

  ಟಿಪ್ಪು ಸುಲ್ತಾನ್‌ ಜಯಂತಿ ವಿವಾದದ ಕಳಂಕದಿಂದ ಹೊರಬರಲು ರಾಜ್ಯ ಸರ್ಕಾರ ಹೊಸ ಯೋಜನೆಯನ್ನು ರೂಪಿಸಿದೆ. ಪ್ರತಿದಿನವೂ ಒಂದಲ್ಲಾ ಒಂದು ವ್ಯಕ್ತಿಯ ಜಯಂತಿ ಆಚರಿಸಿ ಎಲ್ಲರ ಮೆಚ್ಚುಗೆ ಪಡೆಯಲು ಸರ್ಕಾರ ಮುಂದಾಗಿದೆ. 
   

 • NEWS10, Nov 2018, 8:55 AM IST

  'ಮೈತ್ರಿ ಸರ್ಕಾರಕ್ಕೆ ಉರುಳಾಗಲಿದೆ ಈ ಸಂಗತಿ'

  ಈ ವಿಚಾರವೆ ಮೈತ್ರಿ ಸರ್ಕಾರಕ್ಕೆ ಮುಳುವಾಗಲಿದೆ ಎಂದು  ಮುಖಂಡರು ವಾಗ್ದಾಳಿ ನಡೆಸಿದ್ದಾರೆ.  ಟಿಪ್ಪು ಸುಲ್ತಾನ್‌ ಜಯಂತಿ ಆಚರಣೆ ಮಾಡಿದರೆ ಮೈತ್ರಿ ಸರ್ಕಾರ ಬಹಳ ದಿನ ಉಳಿಯಲ್ಲ ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸಿದರೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹಾಳಾಗಿ ಹೋಗುತ್ತಾರೆ ಎಂದು ಆರ್ ಅಶೋಕ್ ವಾಗ್ದಾಳಿ ನಡೆಸಿದ್ದಾರೆ. 

 • state5, Nov 2018, 10:49 AM IST

  ಟಿಪ್ಪು ಜಯಂತಿ ಆಮಂತ್ರ​ಣ​ದಲ್ಲಿ ನನ್ನ ಹೆಸರು ಬೇಡ: ಅನಂತ್‌ ಹೆಗ​ಡೆ

  ಟಿಪ್ಪು ಸುಲ್ತಾನ್‌ ಜಯಂತಿ ಆಮಂತ್ರಣ ಪತ್ರಿಕೆಯಲ್ಲಿ ತಮ್ಮ ಹೆಸರನ್ನು ಹಾಕದಂತೆ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. 
   

 • KRS Flow

  Chamarajnagar16, Jul 2018, 8:19 PM IST

  ಕಾವೇರಿ ನೀರಿನ ರಭಸಕ್ಕೆ ಐತಿಹಾಸಿಕ ಸೇತುವೆ ಕುಸಿತ

  • ಟಿಪ್ಪು ಸುಲ್ತಾನ್ ರಾಜಾಡಳಿದ 1818 ರಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಈ ಸೇತುವೆಯನ್ನ ಕಟ್ಟಲಾಗಿತ್ತು
  • ನೀರಿನ ಸೆಳೆತ ಹೆಚ್ಚಾಗಿದ್ದರಿಂದ ಕಳೆದ ಮೂರು ದಿನದ ಹಿಂದೆಯಷ್ಟೆ ಪ್ರವಾಸಿಗರಿಗೆ ನಿರ್ಬಂಧಿಸಲಾಗಿತ್ತು
 • Anjaneya
  Video Icon

  NEWS25, Jun 2018, 9:55 AM IST

  ಆಂಜನೇಯ ದೇವರ ಬಗ್ಗೆ ಫೇಸ್’ಬುಕ್’ನಲ್ಲಿ ಅವಹೇಳನಕಾರಿ ಪೋಸ್ಟ್

  ಕಿಡಿಗೇಡಿಯೊಬ್ಬ ಆಂಜನೇಯ ದೇವರ ಕುರಿತು ಫೇಸ್’ಬುಕ್’ನಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿದ್ದಾನೆ. ಆಂಜನೇಯ ದೇವರು ಟಿಪ್ಪು ಸುಲ್ತಾನ್ ಕಾಲಿಗೆ ಬೀಳ್ತಾ ಇರುವ ಪೋಸ್ಟ್ ಇದಾಗಿದ್ದು ಫಯಾಜ್ ಎನ್ನುವಾತ ತನ್ನ ಫೇಸ್’ಬುಕ್ ಪೇಜ್’ನಲ್ಲಿ ಪೋಸ್ಟ್ ಮಾಡಿಕೊಂಡಿದ್ದ. ಈತನನ್ನು ಚಿಕ್ಕಮಗಳೂರು ಪೊಲೀಸರು ಬಂಧಿಸಿದ್ದಾರೆ. 

 • Tippu

  NEWS24, Jun 2018, 12:11 PM IST

  ಟಿಪ್ಪು ಓರ್ವ ಮುಸಲ್ಮಾನನೇ ಅಲ್ಲ..!

  ಟಿಪ್ಪು ಸುಲ್ತಾನ್ ಓರ್ವ ನಿಜವಾದ ಮುಸ್ಲೀಮನೇ ಅಲ್ಲ. ಆದ್ದರಿಂದ ಆತನ ಹೆಸರನ್ನು ಹಜ್ ಭವನಕ್ಕೆ ಇಡಲು ಸಾಧ್ಯವಿಲ್ಲ ಎಂದು ಬಿಜೆಪಿ ಮುಖಂಡರು ಸಿಎಂಗೆ  ಮನವಿ ಮಾಡಲು ಮುಂದಾಗಿದ್ದಾರೆ.

 • kg bopaiah
  Video Icon

  NEWS23, Jun 2018, 2:14 PM IST

  ‘ಟಿಪ್ಪು ಸುಲ್ತಾನ್ ಹೆಸರಿಟ್ಟರೆ ರಾಜ್ಯಕ್ಕೆ ಬೆಂಕಿ ಹೊತ್ತಿಕೊಳ್ಳಲು ಕಾರಣವಾಗುತ್ತೆ’

  ಹಜ್ಜ್ ಭವನಕ್ಕೆ ಟಿಪ್ಪು ಸುಲ್ತಾನ್ ಹೆಸರನ್ನಿಡುವ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಸ್ಪೀಕರ್ ಹಾಗೂ ಬಿಜೆಪಿ ನಾಯಕ ಕೆ.ಜಿ. ಬೋಪಯ್ಯ, ಸರ್ಕಾರ ಮರುನಾಮಕರಣಕ್ಕೆ ಮುಂದಾದರೆ ತೀವ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದ್ದಾರೆ.