ಟಾಪ್ 10 ನ್ಯೂಸ್  

(Search results - 142)
 • Top 10

  News23, Feb 2020, 5:41 PM IST

  ಸಂದರ್ಶನದಲ್ಲಿ ಫೇಲ್ ಆಗಿದ್ದ ಮಯಾಂತಿ, ನಿರ್ಭಯಾ ದೋಷಿಗಳಿಗೆ ಗಲ್ಲೇ ಗತಿ; ಫೆ.23ರ ಟಾಪ್ 10 ಸುದ್ದಿ

  ಫೆಬ್ರವರಿ 23ರ ಭಾನುವಾರ ಹಲವು ಸುದ್ದಿಗಳು ಸದ್ದು ಮಾಡಿದೆ. ದಂತಚೋರ ವೀರಪ್ಪನ್ ಪುತ್ರಿ ವಿದ್ಯಾರಾಣಿ ಬಿಜೆಪಿ ಸೇರ್ಪಡೆಗೊಳ್ಳೋ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಸ್ನೇಹಿತೆಯ ಖಾಸಗಿ ವಿಡಿಯೋ ಚಿತ್ರೀಕರಿಸಿ ಹಣಕ್ಕೆ ಬೇಡಿಕೆಯಿಟ್ಟ ಆರೋಪಿಯನ್ನುಪೊಲೀಸರು ಬಂಧಿಸಿದ್ದಾರೆ. ನಿರೂಪಕಿ ಮಯಾಂತಿ ಲ್ಯಾಂಗರ್ ಸಂದರ್ಶನ, ನಟಿ ಜಾಕ್ವೆಲಿನ್ ಫರ್ನಾಂಡೀಸ್ ತೆರೆ ಹಿಂದಿನ ರೋಚಕ ಮಾಹಿತಿ ಸೇರಿದಂತೆ ಫೆ.23ರ ಟಾಪ್ 10 ಸುದ್ದಿ ಇಲ್ಲಿವೆ.
   

 • 22 top10 stories

  News22, Feb 2020, 5:05 PM IST

  ಮುಷ್ಕರಕ್ಕೆ ಬಂದ್ ಆಗಲಿದೆ ಬ್ಯಾಕಿಂಗ್; ಕೊರೊನಾಗೆ ಅಂಜದೆ ಕಿಸ್ಸಿಂಗ್; ಫೆ.22ರ ಟಾಪ್ 10 ಸುದ್ದಿ

  ಬ್ಯಾಂಕ್ ನೌಕರರ ಮುಷ್ಕರಕ್ಕೆ ವೇದಿಕೆ ಸಜ್ಜಾಗಿದೆ. ಪ್ರತಿಭಟನೆಯಿಂದ ಖಾಸಗಿ ಹಾಗೂ ಸರ್ಕಾರಿ ಬ್ಯಾಂಕ್ ಬಂದ್ ಆಗಲಿದೆ. ಪಾಕ್ ಪರ ಘೋಷಣೆ ಕೂಗಿದ ಅಮೂಲ್ಯ ಹಾಗೂ ಆರ್ದ್ರಾ ವಿಚಾರಣೆ ತೀವ್ರಗೊಂಡಿದೆ. ಕೊರೊನಾಗೆ ಅಂಜದೆ 220 ಜೋಡಿಯಿಂದ ಸಾಮೂಹಿಕ ಕಿಸ್ಸಿಂಗ್, ಅನಾರ್ಕಲಿ ಬಿಕಿನಿ ಫೋಟೋ ವೈರಲ್ ಸೇರಿದಂತೆ ಫೆ.22ರ ಟಾಪ್ 10 ಸುದ್ದಿ ಇಲ್ಲಿವೆ.

 • 21 top10 stories new

  News21, Feb 2020, 5:00 PM IST

  ಅಮೂಲ್ಯ ಬಳಿಕ ಮತ್ತೊಬ್ಬಳ ಪಾಕ್ ಪ್ರೀತಿ, ರಶ್ಮಿಕಾಗೆ ಟ್ರೋಲ್ ಫಜೀತಿ; ಫೆ.21ರ ಟಾಪ್ 10 ಸುದ್ದಿ!

  ಶಿವರಾತ್ರಿ ದಿನ ಶಿವನಾಮ ಸ್ಮರಣೆ ಬದಲು ಪಾಕಿಸ್ತಾನ ಪ್ರೀತಿ ಹೆಚ್ಚಾಗಿದೆ. ಫ್ರೀಡಂ ಪಾರ್ಕ್‌ನಲ್ಲಿ ಅಮೂಲ್ಯ ಪಾಕ್ ಪರ ಘೋಷಣೆ ಕೂಗಿದ ಬೆನ್ನಲ್ಲೇ ಇದೀಗ ಟೌನ್‌ಹಾಲ್ ಬಳಿ ದೇಶದ್ರೋಹಿ ಕೆಲಸ ಆಗಿದೆ. ಕಾಂಗ್ರೆಸ್‌ನಲ್ಲಿ ಹೈಕಮಾಂಡ್ ಸ್ಥಾನಕ್ಕೆ ಚುನಾವಣೆ ನಡೆಸಲು ಆಗ್ರಹ ಕೇಳಿ ಬರುತ್ತಿದೆ. ಭಾರತ-ನ್ಯೂಜಿಲೆಂಡ್ ಟೆಸ್ಟ್, ಮತ್ತೆ ಟ್ರೋಲ್ ಆದ ರಶ್ಮಿಕಾ ಮಂದಣ್ಣ ಸೇರಿದಂತೆ ಫೆಬ್ರವರಿ 21ರ ಟಾಪ್ 10 ಸುದ್ದಿ ಇಲ್ಲಿವೆ.

 • 20 top10 stories

  News20, Feb 2020, 5:58 PM IST

  ಕುತೂಹಲದತ್ತ ಬಿಜೆಪಿ ಶಾಸಕರ ನಡೆ, ದೀಪಿಕಾ ಆದಾಯಕ್ಕಿಲ್ಲ ಅಡೆ-ತಡೆ; ಫೆ.20ರ ಟಾಪ್ 10 ಸುದ್ದಿ!

  ರಾಜ್ಯ ಬಿಜೆಪಿಯ 25 ಶಾಸಕರು ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ಬೇಟಿ ಮಾಡಿ ಸಮಾಲೋಚನೆ ನಡೆಸಿರುವುದು ಇದೀಗ ತೀವ್ರ ಕುತೂಹಲ ಕೆರಳಿಸಿದೆ. ಮಹದಾಯಿ ವಿಚಾರದಲ್ಲಿ ಕರ್ನಾಟಕಕ್ಕೆ ಮೊದಲ ಹಂತದ ಗೆಲುವು ಸಿಕ್ಕಿದೆ. ಮಂಗಳೂರು ಗೋಲಿಬಾರ್ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ದೀಪಿಕಾ ಪಡುಕೊಣೆ ಆದಾಯ ಹಾಗೂ ಐಟಿ, ಉದ್ಯಮಿ ಬಿಆರ್ ಶೆಟ್ಟಿಗೆ ಸಂಕಷ್ಟ ಸೇರಿದಂತೆ  ಫೆಬ್ರವರಿ 20ರ ಟಾಪ್ 10 ಸುದ್ದಿ ಇಲ್ಲಿವೆ.

 • Top feb 19

  News19, Feb 2020, 5:23 PM IST

  ಮಯಾಬಜಾರ್ ಟ್ರೇಲರ್ ಹೊರಬಿತ್ತು, ಸ್ನಾನಕ್ಕೆ ಹೋದ ಚೆಲುವೆಗೆ ಫೋನ್ ಆಪತ್ತು; ಫೆ.19ರ ಟಾಪ್ 10 ಸುದ್ದಿ!

  ಮಂಗಳೂರಿನ ಪೌರತ್ವ ವಿರೋಧಿ ಪ್ರತಿಭಟನೆ ಹಾಗೂ ಗೋಲಿಬಾರ್ ಪ್ರಕರಣ ಕಲಾಪದಲ್ಲೂ ಗದ್ದಲ ಎಬ್ಬಿಸಿದೆ. ಪಾಕ್‌ಗೆ ಜೈ ಎಂದವರಿಗೆ ಕಾಂಗ್ರೆಸ್ ಸಹಾಕರ ನೀಡುತ್ತಿದೆ ಎಂದು ಬಿಜೆಪಿ ಆರೋಪಿಸಿದೆ. ರಾಮಮಂದಿರ ನಿರ್ಮಾಣಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಪುನೀತ್ ರಾಜ್‌ಕುಮಾರ್ ಅಭಿನಯದ ಮಯಾಬಜಾರ್ ಚಿತ್ರದ ಟೇಲರ್ ಬಿಡುಗಡೆಯಾಗಿದೆ. ಸ್ನಾನಕ್ಕೆ ಹೋದ ಚೆಲುವೆಗೆ ಮೊಬೈಲ್ ಫೋನ್ ಕುತ್ತು, ಭಾರತ 5ನೇ ಅತೀ ದೊಡ್ಡ ಆರ್ಥಿಕತೆ ದೇಶ ಸೇರಿದಂತೆ ಫೆಬ್ರವರಿ 19ರ ಟಾಪ್ 10 ಸುದ್ದಿ ಇಲ್ಲಿವೆ. 
   

 • 17 top10 stories

  News17, Feb 2020, 6:10 PM IST

  ಜೆಡಿಎಸ್‌ಗೆ ಗುಮ್ಮಿದ ಜಿಟಿ ದೇವೇಗೌಡ, ಸಿಎಂ ಭೇಟಿ ಮಾಡಿದ ಕಂಬಳ ಶ್ರೀನಿವಾಸ ಗೌಡ..ಫೆ. 17 ರ ಟಾಪ್ 10 ಸುದ್ದಿಗಳು

  ಪಕ್ಷದ ಶಾಸಕಾಂಗ ಸಭೆಗೆ ಹಾಜರಾಗದೇ ನೇರವಾಗಿ ವಿಧಾನಸಭೆಗೆ ಹೋಗಿ ಜಿಟಿ ದೇವೇಗೌಡ್ರು ಮತ ಚಲಾಯಿಸಿ, ಜೆಡಿಎಸ್ ವರಿಷ್ಠರ ಕೆಂಗಣ್ಣಿಗೆ ಗುರಿಯಾದರು. ಬಜೆಟ್ ಅಧೀವೇಶನದಲ್ಲಿ ರಾಜ್ಯಪಾಲರ ಭಾಷಣ. ಕೌಟುಂಬಿಕ ಕಲಹಕ್ಕೆ ಮನನೊಂದು ಆತ್ಮಹತ್ಯೆಗೆ ಶರಣಾದ ಗಾಯಕಿ. ಕೇಂದ್ರ ಸಚಿವರಿಗೆ ಎಚ್ಚರಿಕೆ ನೀಡಿದ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ.. ಖಾಲಿ ಜಾಗಕ್ಕಾಗಿ ಚಿಕ್ಕಬಳ್ಳಾಪುರ ಮಹಿಳೆಯರ ಜಗಳ... ಫೆಬ್ರವರಿ 17ರ ಟಾಫ್ 10 ಸುದ್ದಿಗಳು..

 • Top 10feb 16

  News16, Feb 2020, 5:19 PM IST

  ರಿಕ್ಷಾವಾಲಾಗೆ ಮೋದಿ ಸರ್ಪ್ರೈಸ್, ಹುಟ್ಟು ಹಬ್ಬ ಸಂಭ್ರಮದಲ್ಲಿ ಡಿ ಬಾಸ್; ಫೆ.16ರ ಟಾಪ್ 10 ಸುದ್ದಿ!

  ಬಡ ರಿಕ್ಷಾವಾಲ ತನ್ನ ಮಗಳ ಮದುವೆಗೆ ಪ್ರಧಾನಿ ನರೇಂದ್ರ ಮೋದಿ ಆಮಂತ್ರಣ ಪತ್ರಿಕೆ ಕಳುಹಿಸಿ ಸುಮ್ಮನಾಗಿದ್ದರು. ಮದುವೆ ದಿನ ಮೋದಿ ಅಚ್ಚರಿ ನೀಡಿದ್ದಾರೆ. ದೆಹಲಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀರಿಸಿದ ಅರವಿಂದ ಕೇಜ್ರಿವಾಲ್ ಹೊಸ ಭರವಸೆ ನೀಡಿದ್ದಾರೆ. ವೇದಿಕೆಯಲ್ಲಿ ಬಹಿರಂವಾಗಿ ಸಿದ್ದರಾಮಯ್ಯಗೆ ಟಾಂಗ್ ನೀಡಿದ ಸೋಮಣ್ಣ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟು ಹಬ್ಬ, ಐಪಿಎಲ್ ವೇಳಾಪಟ್ಟಿ ಸೇರಿದಂತೆ ಫೆ.16ರ ಟಾಪ್ 10 ಸುದ್ದಿ ಇಲ್ಲಿವೆ. 

 • 15 top10 stories

  News15, Feb 2020, 4:50 PM IST

  ಟ್ರಂಪ್‌ಗಾಗಿ ಖರ್ಚು 100 ಕೋಟಿ, ಒಲಿಂಪಿಕ್ಸ್‌ಗೆ ಕಂಬಳದ ಜಾಕಿ? ಫೆ.15ರ ಟಾಪ್ 10 ಸುದ್ದಿ!

  ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಎರಡು ದಿನಗಳ ಭಾರತ ಪ್ರವಾಸಕ್ಕೆ ಕೇಂದ್ರ ಸರ್ಕಾರ 100 ಕೋಟಿ ರೂಪಾಯಿ ಖರ್ಚು ಮಾಡುತ್ತಿದೆ ಅನ್ನೋದು ಭಾರಿ ಚರ್ಚೆಗೆ ಗ್ರಾಸವಾಗಿದೆ. ರಾಜ್ಯದಲ್ಲಿ ಸಿಎಂ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಕಾಂಗ್ರೆಸ್ ನಾಯಕರನ್ನು ಬಂಧಿಸಲಾಗಿದೆ. ಕಂಬಳ ಕ್ರೀಡೆಯಲ್ಲಿ ಮಿಂಚಿನಂತೆ ಓಡಿ ವಿಶ್ವವಿಖ್ಯಾತ ಉಸೇನ್ ಬೋಲ್ಟ್ ಹಿಂದಿಕ್ಕಿದ ಶ್ರೀನಿವಾಸ ಗೌಡ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲು ಅರ್ಹ ಅನ್ನೋ ಮಾತುಗಳು ಕೇಳಿಬಂದಿದೆ. ಫೆ.15ರಂದು ಸಂಚಲನ ಮೂಡಿಸಿದ ಟಾಪ್ 10 ಸುದ್ದಿ ಇಲ್ಲಿವೆ.

 • 14 top10 stories

  News14, Feb 2020, 5:03 PM IST

  RCB ತಂಡಕ್ಕೆ ಹೊಸ ರೂಪ, ತುಟಿಗೆ ತುಟಿ ನೀಡಿದ ರಚಿತಾ; ಪ್ರೇಮಿಗಳ ದಿನದ ಟಾಪ್ 10 ಸುದ್ದಿ!

  ಪ್ರೇಮಿಗಳ ದಿನ ಪ್ರೀತಿಸಿದ ಹೃದಯಗಳು ಮಾತ್ರವಲ್ಲ, ರಾಜಕೀಯ, ಕ್ರೀಡೆ, ಸ್ಯಾಂಡಲ್‌ವುಡ್ ಸೇರಿದಂತೆ ಎಲ್ಲಾ ಕ್ಷೇತ್ರ ಸದ್ದು ಮಾಡುತ್ತಿದೆ. ಮಹಿಳಾ ಐಎಎಸ್ ಅಧಿಕಾರಿ ಪುಲ್ವಾಮಾ ದಾಳಿಯಲ್ಲಿ ಹುತಾತ್ಮರ ಹೆಣ್ಣುಮಕ್ಕಳನ್ನು ದತ್ತು ಪಡೆದಿದ್ದಾರೆ. ಇತ್ತ RCB ತಂಡಕ್ಕೆ ಹೊಸ ರೂಪ ನೀಡಲಾಗಿದೆ. ಗುಳಿ ಕೆನ್ನೆ ಚೆಲುವೆ ರಚಿತಾ ರಾಮ್ ಲಿಪ್ ಲಾಕ್, ತೆರಿಗೆ ಕುರಿತು ಪ್ರಧಾನಿ ಮೋದಿ ಮಾತು ಸೇರಿದಂತೆ ಫೆಬ್ರವರಿ 14ರಂದು ಸಂಚಲನ ಮೂಡಿಸಿದ ಟಾಪ್ 10 ಸುದ್ದಿ ಇಲ್ಲಿವೆ.

 • 13 top10 stories

  News13, Feb 2020, 4:58 PM IST

  ಮತ್ತೆ ಸಂಪುಟ ವಿಸ್ತರಣೆ ಇದೆಯಣ್ಣ, ಸಲ್ಮಾನ್ ಕೈ ಹಿಡೀತಾರ ಮಂದಣ್ಣ? ಫೆ.13ರ ಟಾಪ್ 10 ಸುದ್ದಿ

  ಸಂಪುಟ ರಚನೆ ಸರ್ಕಸ್ ಮುಗಿದರೂ ಸೂಕ್ತ ಸ್ಥಾನ ಸಿಗಲಿಲ್ಲ ಅನ್ನೋ ಅಳಲು ಇನ್ನೂ ಕೇಳಿಬರುತ್ತಿದೆ. ಇದರ ಬೆನ್ನಲ್ಲೇ 3ನೇ ಸಂಪುಟ ವಿಸ್ತರಣೆಗೆ ಸಿಎಂ ಮುಂದಾಗಿದ್ದಾರೆ. ಟಾಲಿವುಡ್‌ನಲ್ಲಿ ಸದ್ದು ಮಾಡುತ್ತಿರುವ ನಟಿ ರಶ್ಮಿಕಾ ಮಂದಣ್ಣ, ಸಲ್ಮಾನ್ ಖಾನ್‌ಗೆ ನಾಯಕಿಯಾಗಲಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಕರ್ನಾಟಕ ಬಂದ್‌ಗೆ ನೀರಸ ಪ್ರತಿಕ್ರಿಯೆ, ಭಾರತೀಯ ಆಟೋಮೊಬೈಲ್‌ಗೆ ಮತ್ತೊಂದು ಹೊಡೆತ ಸೇರಿದಂತೆ ಫೆಬ್ರವರಿ 13ರ ಟಾಪ್ 10 ಸುದ್ದಿ ಇಲ್ಲಿವೆ.

 • 12 top10 stories

  News12, Feb 2020, 4:53 PM IST

  ಬಿಟ್ಟು ಬಿಡಿ ಎಂದು ಕಣ್ಣೀರಿಟ್ಟ ನಲಪಾಡ್, ಪೂಜಾ ಹೆಗಡೆ ಕೈಹಿಡಿದ ಬಾಲಿವುಡ್; ಫೆ,12ರ ಟಾಪ್ 10 ಸುದ್ದಿ!

  ಕಾರು ಅಪಘಾತದ ಬಳಿಕ ನಾಪತ್ತೆಯಾಗಿದ್ದ ಕಾಂಗ್ರೆಸ್ ಮುಖಂಡ ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ಇದೀಗ ದಿಢೀರ್ ಪ್ರತ್ಯಕ್ಷವಾಗಿ ನನ್ನ ಬಿಟ್ಟು ಬಿಡಿ, ನಾನು ಒಳ್ಳೆಯವನಾಗಿದ್ದೇನೆ ಎಂದು ಕಣ್ಣೀರಿಟ್ಟಿದ್ದಾರೆ. ಇತ್ತ ಕರ್ನಾಟಕ ಬಂದ್‌ ದಿನ ಏನಿರುತ್ತೆ? ಏನಿರಲ್ಲ ಅನ್ನೋ ಆತಂಕ ಎಲ್ಲರನ್ನು ಕಾಡುತ್ತಿದೆ. ಬಾಲಿವುಡ್‌ನಲ್ಲಿ ಮಿಂಚುತ್ತಿರುವ ಮಂಗಳೂರು ಬೆಡಗಿ ಪೂಜಾ ಹೆಗಡೆ ಇದೀಗ ಸಲ್ಮಾನ್ ಖಾನ್‌ಗೆ ನಾಯಕಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಭಾರತಕ್ಕೆ ಡೋನಾಲ್ಡ್ ಟ್ರಂಪ್, ಭಾರತ ಹಾಗೂ ಪಾಕಿಸ್ತಾನ ಕ್ರಿಕೆಟ್ ಸರಣಿ ಸೇರಿದಂತೆ ಫೆಬ್ರವರಿ 12ರಂದು ಸಂಚಲನ ಮೂಡಿಸಿದ ಟಾಪ್ 10 ಸುದ್ದಿ ಇಲ್ಲಿವೆ. 

 • 11 top10 stories

  News11, Feb 2020, 5:04 PM IST

  ಕೇಜ್ರಿವಾಲ್‌ಗೆ ದಿಲ್ಲಿ ಕಿರೀಟ, ಏಕದಿನ ಸರಣಿ ಸೋತ ಭಾರತ; ಫೆ.11ರ ಟಾಪ್ 10 ಸುದ್ದಿ!

  ತೀವ್ರ ಕುತೂಹಲ ಕೆರಳಿಸಿದ್ದ ದೆಹಲಿ ವಿಧಾನಸಭೆ ಚುನಾವಣೆ ಫಲಿತಾಂಶ ಹೊರಬಿದ್ದಿದೆ. ಅರವಿಂದ ಕೇಜ್ರಿವಾಲ್ ನೇತೃತ್ವದ ಆಪ್ ಭರ್ಜರಿ ಗೆಲುವು ಸಾಧಿಸಿ ದಿಲ್ಲಿ ಗದ್ದುಗೆ ಏರಿದೆ. ಇತ್ತ ಕಿವೀಸ್ ನಾಡಿನಲ್ಲಿ ಟೀಂ ಇಂಡಿಯಾ ಏಕದಿನ ಸರಣಿ ಕೈಚೆಲ್ಲಿದೆ. ರಾಜ್ಯದಲ್ಲಿ ನೂತನ ಸಚಿವರ ಖಾತೆ ಹಂಚಿಕೆಯಲ್ಲಿ ಬದಲಾವಣೆಯಾಗಿದೆ. ಸಾಲದ ಸುಳಿಯಲ್ಲಿ ಅನಿಲ್ ಅಂಬಾನಿ, ಬಾಲಿವುಡ್ ಲವ್ ಬ್ರೇಕಪ್ ಕಹಾನಿ ಸೇರಿದಂತೆ ಫಬ್ರವರಿ 11ರ ಟಾಪ್ 10 ಸುದ್ದಿ ಇಲ್ಲಿವೆ.

 • 10 top10 stories

  News10, Feb 2020, 5:04 PM IST

  ಹೊಸ ಸಚಿವರಿಗೆ ಖಾತೆ ಹಂಚಿಕೆ, ನಟ-ನಟಿಯರಿಗೆ ಕಿಸ್ ಅಂಜಿಕೆ; ಫೆ.10ರ ಟಾಪ್ 10 ಸುದ್ದಿ!

  ಬಿಎಸ್ ಯಡಿಯೂರಪ್ಪ ಸರ್ಕಾರದ ನೂತನ ಸಚಿವರಿಗೆ ಖಾತೆ ಹಂಚಿಕೆಯಾಗಿದೆ. ರಮೇಶ್ ಜಾರಕಿಹೊಳಿ ಹಾಗೂ ಸೋಮಶೇಖರ್ ತಮಗಿಷ್ಟದ ಖಾತೆ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇತ್ತ ಕೊರೊನಾವೈರಸ್ ಭೀತಿಯಿಂದ ಕಿಸ್ಸಿಂಗ್ ದೃಶ್ಯಗಳ ಅಭಿನಯಕ್ಕೆ ಬ್ರೇಕ್ ಹಾಕಲಾಗಿದೆ. ನಿಖಿಲ್ ಕುಮಾರಸ್ವಾಮಿ ನಿಶ್ಚಿತಾರ್ಥ, ಮಕ್ಕಳ ಅತ್ಯಾಚಾರಿಗಳಿಗೆ ಸಾರ್ವಜನಿಕ ಗಲ್ಲು ಸೇರಿದಂತೆ ಫೆಬ್ರವರಿ 10ರ ಟಾಪ್ 10 ಸುದ್ದಿ ಇಲ್ಲಿವೆ.

 • Top 10 News

  News9, Feb 2020, 5:30 PM IST

  ಶಿಲ್ಪ ಪತಿ ವಿರುದ್ಧ ಪೂನಂ ಆಕ್ರೋಶ,ಹೆಲ್ಮೆಟ್ ನೋಡಿ ಬೆಚ್ಚಿ ಬಿದ್ದ ಶಿಕ್ಷಕ; ಫೆ.9 ಟಾಪ್ 10 ಸುದ್ದಿ!

  ಶಿಲ್ಪ ಶೆಟ್ಟಿ ಪತಿ ವಿರುದ್ಧ ಬಿಚ್ಚಮ್ಮ ಪೂನಂ ಪಾಂಡೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಟ್ ವಿಡಿಯೋಗಾಗಿ ಪೂನಂ ಪಾಂಡೆ ಕೋರ್ಟ್ ಮೆಟ್ಟಿಲೇರಲು ನಿರ್ಧರಿಸಿದ್ದಾರೆ. ದೆಹಲಿ ವಿಧಾನಸಭೆ ಚುನಾವಣೆ ಮುಗಿಯುತ್ತಿದ್ದಂತೆ ಆಪ್ ಜೊತೆ ಮೈತ್ರಿ ಮಾಡಿಕೊಳ್ಳಲು ಕಾಂಗ್ರೆಸ್ ಮುಂದಾಗಿದೆ. ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ರಮೇಶ್ ಜಾರಕಿಹೊಳಿ ಡಿಕೆಶಿಗೆ ಧನ್ಯವಾದ ಹೇಳಿ ಅಚ್ಚರಿ ಮೂಡಿಸಿದ್ದಾರೆ. ಹೆಲ್ಮೆಟ್ ನೋಡಿ ಬೆಚ್ಚಿ ಬಿದ್ದ ಶಿಕ್ಷಕ, ನಿಖಿಲ್ ನಿಶ್ಚಿತಾರ್ಥ ಸೇರಿದಂತೆ ಫೆಬ್ರವರಿ ಟಾಪ್ 10 ಸುದ್ದಿ ಇಲ್ಲಿವೆ.

 • 08 top10 stories

  News8, Feb 2020, 4:00 PM IST

  ನೂತನ ಶಾಸಕರ ಖಾತೆ ಕ್ಯಾತೆ, ಟೀಂ ಇಂಡಿಯಾ ಬ್ಯಾಟ್ಸ್‌ಮನ್‌ಗೆ ಏನಾಗೈತೆ; ಫೆ.08ರ ಟಾಪ್ 10 ಸುದ್ದಿ!

  ಬಿಎಸ್ ಯಡಿಯೂರಪ್ಪ ಸರ್ಕಾರದಲ್ಲಿ ನೂತನ ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇದೀಗ ಸಚಿವರು ಪ್ರಮುಖ ಖಾತೆ ನೀಡುವಂತೆ ಬೇಡಿಕೆ ಇಡುತ್ತಿರುವುದು ತಲೆನೋವಾಗಿ ಪರಿಣಮಿಸಿದೆ. ಬಿಜೆಪಿಗೆ ಸ್ಥಾನ ಹಂಚಿಕೆ ನಡುವೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾನೂನು ಪದವಿ ಅಸಲಿ ಅಥವಾ ನಕಲಿ ಅನ್ನೋ ಚರ್ಚೆ ಶುರುವಾಗಿದೆ. ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯನ್ನು ಟೀಂ ಇಂಡಿಯಾ ಕೈಚೆಲ್ಲಿದೆ. ಗೂಗಲ್ ಸರ್ಚ್‌ನಲ್ಲಿ ಡಿಬಾಸ್ ದರ್ಶನ್, ದೆಹಲಿ ಚುನಾವಣೆ ಸೇರಿದಂತೆ ಫೆಬ್ರವರಿ 8ರ ಟಾಪ್ 10 ಸುದ್ದಿ ಇಲ್ಲಿವೆ.