ಜಿಲ್ಲೆ  

(Search results - 1422)
 • Nalin Kumar Kateel

  Yadgir18, Oct 2019, 11:55 AM IST

  ರಾಜ್ಯದಲ್ಲಿ 36 ಜಿಲ್ಲೆ ಎಂದ ಕಟೀಲ್: ಸಮರ್ಥಿಸಿಕೊಂಡ ಬಿಜೆಪಿ

  ರಾಜ್ಯದಲ್ಲಿ ಒಟ್ಟು ಎಷ್ಟು ಜಿಲ್ಲೆಗಳಿವೆ ಅನ್ನೋದೇ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ ಕುಮಾರ್‌ ಕಟೀಲ್‌ ಅವರಿಗೆ ಗೊಂದಲ ಮೂಡಿದೆಯೇನೋ? ಪಕ್ಷ ಸಂಘಟನೆ ಹಾಗೂ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಳ್ಳಲು ಗುರುವಾರ ಯಾದಗಿರಿ ನಗರಕ್ಕೆ ಆಗಮಿಸಿದ್ದ ಕಟೀಲ್‌ ಅವರು, ಬೆಳಿಗ್ಗೆ ಪ್ರವಾಸಿ ಮಂದಿರದಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರ ಜೊತೆ ಮಾತನಾಡುವಾಗ 32 ಜಿಲ್ಲೆಗಳು ಎಂದಿದ್ದರು. ಇದು ಬೆಳಿಗ್ಗೆ ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು.
   

 • dalit protest 2

  Vijayapura18, Oct 2019, 10:49 AM IST

  'ಇಂಡಿ ನೂತನ ಜಿಲ್ಲೆ ಮಾಡದಿದ್ರೆ ಉಗ್ರ ಹೋರಾಟ'

  ಸಮೀಪದ ಹೊರ್ತಿ ಗ್ರಾಮದಲ್ಲಿ ಗುರುವಾರ ಸೇರಿದ ಸುತ್ತ ಮುತ್ತಲಿನ ಗ್ರಾಮಸ್ಥರು, ಮುಖಂಡರು, ವ್ಯಾಪರಸ್ಥರು ಇಂಡಿಯನ್ನು ನೂತನ ಜಿಲ್ಲೆ ಮಾಡಲು ಬೆಂಬಲ ವ್ಯಕ್ತಪಡಿಸಿದರು. 
   

 • Shivamogga

  Shivamogga17, Oct 2019, 10:12 PM IST

  ಮಾಲಿಕತ್ವಕ್ಕೆ ಎರಡು ಗ್ರಾಮಗಳ ಜಿದ್ದಾಜಿದ್ದಿ, ದೇವರಿಗೆ ಬಿಟ್ಟ ಕೋಣಕ್ಕೂ ಡಿಎನ್‌ಎ ಪರೀಕ್ಷೆ

  ಇದು ಒಂದು ಕೋಣದ ಕತೆ. ದೇವರಿಗೆ ಬಿಟ್ಟ ಕೋಣ ಯಾವ ಊರಿಗೆ ಸೇರಿದ್ದು ಎಂಬ ವಿಚಾರ ಎರಡು ಜಿಲ್ಲೆಗಳ ಎರಡು ಗ್ರಾಮದ ಜನರ ನಡುವಿನ ತಿಕ್ಕಾಟಕ್ಕೆ ಕಾರಣವಾಗಿದೆ. ಅಂತಿಮವಾಗಿ ಇದೀಗ ಡಿಎನ್ ಎ ಪರೀಕ್ಷೆಗೆ ಬಂದು ನಿಂತಿದೆ.

 • alamatti

  News17, Oct 2019, 4:48 PM IST

  ಆಲಮಟ್ಟಿಗೆ 6 ದಶಕ: ಇನ್ನೂ ಆಗಬೇಕಾದ್ದೇನು?

  1959 ರಲ್ಲಿ ಆರಂಭವಾದ ಕೃಷ್ಣಾ ಯೋಜನೆ ‘60’ರ ಷಷ್ಟ್ಯಬ್ದಿ ಪೂರ್ಣಗೊಳಿಸಿದೆ. ಆದರೆ, ವಿಜಯಪುರ-ಬಾಗಲಕೋಟೆ ಅವಳಿ ಜಿಲ್ಲೆಗಳ ಜನತೆಗೆ ಕೃಷ್ಣಾ ಯೋಜನೆಯ ತ್ಯಾಗದ ಫಲ ಇನ್ನೂ ಸಿಕ್ಕಿಲ್ಲ. ಅತ್ಯಂತ ನೋವಿನ ಸಂಗತಿ ಎಂದರೆ ಕುಡಿಯುವುದಕ್ಕೆ ಕೊಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಬಿಡಬೇಕು ಎಂದು ಮಹಾರಾಷ್ಟ್ರ ಸರ್ಕಾರದ ಮುಂದೆ ಕರ್ನಾಟಕ ಸರ್ಕಾರ ಮಂಡಿಯೂರಿ ಕುಳಿತು ಮನವಿ ಮಾಡಿಕೊಳ್ಳುವ ಪರಿಸ್ಥಿತಿ ಪ್ರತಿವರ್ಷವೂ ತಪ್ಪುತ್ತಿಲ್ಲ.

 • invitation

  Dharwad17, Oct 2019, 4:33 PM IST

  ಹಾವೇರಿ, ಗದಗ, ಧಾರವಾಡ ಪತ್ರಕರ್ತರಿಗೆ ಹುಬ್ಬಳ್ಳಿಯಲ್ಲಿ ವಿಶಿಷ್ಟ ಕಾರ್ಯಾಗಾರ

  ಧಾರವಾಡ, ಗದಗ ಮತ್ತು ಹಾವೇರಿ ಮೂರು ಜಿಲ್ಲೆಯ ಪತ್ರಕರ್ತರಿಗೆ ನವ ಮಾಧ್ಯಮಗಳ ಸಂರಚನೆ ಅರಿಯಲು ಒಂದು ಸುವರ್ಣ ಅವಕಾಶ ತೆರೆದುಕೊಂಡಿದೆ. ಅಕ್ಟೋಬರ್ 19  ಶನಿವಾರ ನವಮಾಧ್ಯಮಗಳ ನಿರ್ವಹಣೆ ಕುರಿತ ಕಾರ್ಯಾಗಾರದಲ್ಲಿ ಎಲ್ಲ ಪತ್ರಕರ್ತರು ಪಾಲ್ಗೊಳ್ಳಬಹುದು.

 • nalin
  Video Icon

  state17, Oct 2019, 3:31 PM IST

  32, 34: ರಾಜ್ಯದ ಜಿಲ್ಲೆಗಳೆಷ್ಟು ತಿಳಿಯದೆ ಒದ್ದಾಡಿದ ಬಿಜೆಪಿ ರಾಜ್ಯಾಧ್ಯಕ್ಷ!

  ರಾಜ್ಯದಲ್ಲಿ ಎಷ್ಟು ಜಿಲ್ಲೆಗಳಿವೆ ಅಂತಾ ಬಿಜೆಪಿ ರಾಜ್ಯಾಧ್ಯಕ್ಷರಿಗೆ ಗೊತ್ತಿಲ್ವಾ?| ಒಮ್ಮೆ 32 ಜಿಲ್ಲೆ ಅಂತಾರೆ.. ಮತ್ತೊಮ್ಮೆ 34 ಜಿಲ್ಲೆ ಅಂತಾರೆ| ರಾಜ್ಯದ 32 ಜಿಲ್ಲೆಗಳಲ್ಲಿ ಪ್ರವಾಸ ಮಾಡುತ್ತಿದ್ದೇನೆ| ಯಾದಗಿರಿ ನಗರದ ಸರ್ಕಿಟ್ ಹೌಸ್ ನಲ್ಲಿ ಅಚ್ಚರಿ ಹೇಳಿಕೆ

 • school flood karnataka
  Video Icon

  state17, Oct 2019, 1:46 PM IST

  ನೆರೆ ಪೀಡಿತ ಮಕ್ಕಳ ಶಿಕ್ಷಣ; BIG 3 ಅಭಿಯಾನಕ್ಕೆ ಕನ್ನಡಿಗರ ಪಣ!

  ‘ಗಾಯದ ಮೇಲೆ ಬರೆ’ ಎಂಬಂತೆ ‘ಬರದ ಮೇಲೆ ನೆರೆ’ - ಇದು ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳ ಪರಿಸ್ಥಿತಿ. ಪ್ರತಿ ವರ್ಷ ಬೆಂಬಿಡದೆ ಕಾಡುವ ಬರದ ನಡುವೆ ಶಿಕ್ಷಣ ಪಡೆಯಲು ಹೋರಾಡುವ ಇಲ್ಲಿನ ಶಾಲಾ ಮಕ್ಕಳು, ಈ ಬಾರಿ ನೆರೆಯ ವಿರುದ್ಧ ಹೋರಾಡುತ್ತಿದ್ದಾರೆ. ಶಾಲಾ ಮಕ್ಕಳಿಗಾಗಿಯೇ ಸುವರ್ಣನ್ಯೂಸ್ ಅಭಿಯಾನವೊಂದನ್ನು ಆರಂಭಿಸಿದೆ.  

 • ಹಾವೇರಿಯಿಂದ ಬಂದು ಇಡೀ ಕರ್ನಾಟಕದ ಮೆಚ್ಚುಗೆ ಗಳಿಸಿದ್ದ ಗಾಯಕ ಹನುಮಂತ ಅವರ ಹೆಸರು ಚಾಲ್ತಿಯಲ್ಲಿದೆ.
  Video Icon

  Sandalwood17, Oct 2019, 12:56 PM IST

  ಹನುಮಂತ ಬಿಗ್ ಬಾಸ್ ಮನೆಗೆ ಹೋಗೋದನ್ನು ದರ್ಶನ್ ತಡೆದ್ರಾ?

  ಉತ್ತರ ಕರ್ನಾಟಕದ ಹಾವೇರಿ ಜಿಲ್ಲೆಯ ಚಿಲ್ಲೂರು ಬುಡ್ನಿ ತಾಂಡಾದಲ್ಲಿದ್ದ ಕುರಿಗಾಯಿ ಹನುಮಂತ ಗಾನ ಪ್ರತಿಭೆಗೆ ಇಡೀ ರಾಜ್ಯದ ಮಂದಿಯೇ ಮರುಳಾಗಿದ್ದಾರೆ. ಆತನ ಮುಗ್ಧತೆ ಹಾಗೂ ಪ್ರತಿಭೆಯನ್ನು ಮೆಚ್ಚಿಕೊಂಡಿರೋ ಜನರು ಹನುಮ ಈ ಭಾರಿ ಬಿಗ್ ಬಾಸ್ ನಲ್ಲಿರ್ತಾನೆ ಎಂದುಕೊಂಡಿದ್ದರು. ಆದ್ರೆ ಬಿಗ್ ಬಾಸ್ ಮನೆಗೆ ಹೋಗದಿದ್ದುದ್ದಕ್ಕೆ ಅಭಿಮಾನಿಗಳಿಗೆ ಬೇಸರವಾಗಿದೆ. ಅಷ್ಟಕ್ಕೂ ಹನುಮ ಬಿಗ್ ಬಾಸ್  ಕಾರ್ಯಕ್ರಮಕ್ಕೆ ಯಾಕೆ ಹೋಗಲಿಲ್ಲ ಅನ್ನೋದಕ್ಕೆ ಕಾರಣ ಮಾತ್ರ ಡಿಬಾಸ್ ಅಂತೆ! ಹೌದಾ? ನಿಜನಾ ಈ ಸುದ್ದಿ? 
   

 • सड़क हादसे में एक ही परिवार के 6 लोगों की मौत हो गयी।

  Vijayapura17, Oct 2019, 12:18 PM IST

  ಮುದ್ದೇಬಿಹಾಳದಲ್ಲಿ ಸಾರಿಗೆ ಬಸ್ ಹರಿದು ವೃದ್ಧೆ ಸಾವು

  ಸಾರಿಗೆ ಬಸ್ ಮುಂದಿನ ಚಕ್ರ ಹರಿದು ವೃದ್ಧೆಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದ ಬಸ್ ನಿಲ್ದಾಣದಲ್ಲಿ ಗುರುವಾರ ನಡೆದಿದೆ. ಮೃತ ವೃದ್ಧೆಯನ್ನು ಬಿಯಾಮಾ ನಬಿಸಾಬ ಟಕ್ಕಳಕಿ (67) ಎಂದು ಗುರುತಿಸಲಾಗಿದೆ. 
   

 • Vijayapura17, Oct 2019, 9:56 AM IST

  ಸಿಂದಗಿಯಲ್ಲಿ ಗುಂಪು ಘರ್ಷಣೆ: ಅಂಬೇಡ್ಕರ್‌ ಮೂರ್ತಿ ಭಗ್ನ

  ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಎರಡು ಕೋಮುಗಳ ಮಧ್ಯೆ ನಡೆದ ಗುಂಪು ಘರ್ಷಣೆ ನಡೆದು, ಅಂಬೇಡ್ಕರ್‌ ಪುತ್ಥಳಿ ಭಗ್ನಗೊಂಡಿರುವ ಘಟನೆ ಜಿಲ್ಲೆಯ ಸಿಂದಗಿ ತಾಲೂಕಿನ ಕಕ್ಕಳಮೇಲಿಯಲ್ಲಿ ಮಂಗಳವಾರ ರಾತ್ರಿ ನಡೆದಿದೆ.
   

 • Dharwad17, Oct 2019, 8:08 AM IST

  ಗದಗ ಜಿಲ್ಲೆಯ ‘ಕಪ್ಪತಗುಡ್ಡ’ಕ್ಕೆ ಮತ್ತೊಮ್ಮೆ ಅಗ್ನಿಪರೀಕ್ಷೆ!

  ಉತ್ತರ ಕರ್ನಾಟಕದ ಸಹ್ಯಾದ್ರಿ ಎಂದೇ ಬಿಂಬಿತವಾಗಿರುವ ಗದಗ ಜಿಲ್ಲೆಯ ‘ಕಪ್ಪತಗುಡ್ಡ’ಕ್ಕೆ ಮತ್ತೊಮ್ಮೆ ಅಗ್ನಿಪರೀಕ್ಷೆ ಎದುರಾಗಿದ್ದು, ಗುರುವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನೇತೃತ್ವದಲ್ಲಿ ನಡೆಯಲಿರುವ ‘ಕರ್ನಾಟಕ ವನ್ಯಜೀವಿ ಮಂಡಳಿ’ ಸಭೆಯಲ್ಲಿ ಇದರ ಸಂರಕ್ಷಣೆಯ ಭವಿಷ್ಯ ನಿರ್ಧಾರವಾಗಲಿದೆ.
   

 • Dakshina Kannada17, Oct 2019, 7:41 AM IST

  ಮಂಗಳೂರು: ಜಿಲ್ಲೆಯಲ್ಲಿ ಗುಡುಗಿನಬ್ಬರ, ಸಾಧಾರಣ ಮಳೆ

  ಮಂಗಳೂರಿನಲ್ಲಿ ಕಳೆದೆರಡು ದಿನಗಳಿಂದ ಮಳೆಯಾಗುತ್ತಿದ್ದು, ಬುಧವಾರ ಜಿಲ್ಲೆಯಾದ್ಯಂತ ಗುಡುಗು ಸಹಿತ ಮಳೆಯಾಗಿದೆ. ಗುಡುಗಿನ ಅಬ್ಬರ ಹೆಚ್ಚಿದ್ದರಿಂದ ಜನತೆ ಕೆಲಕಾಲ ಭಯಭೀತರಾದರು. ಆದರೆ ಅದರ ಅಬ್ಬರಕ್ಕೆ ತಕ್ಕಂತೆ ಮಳೆಯಾಗದೆ ಸಾಧಾರಣ ಮಳೆ ಸುರಿದಿದೆ.

 • H Vishwanath

  Mysore16, Oct 2019, 3:03 PM IST

  'ಸಾ.ರಾ. ಮಹೇಶ್‌ ತಾಲೂಕನ್ನೇ ಒಡೆದಿದ್ದಾರೆ, ಹುಣಸೂರು ಜಿಲ್ಲೆ ಯಾಕಾಗ್ಬಾರ್ದು'..?

  ಹುಣಸೂರು ಜಿಲ್ಲೆ ಪ್ರಸ್ತಾಪ ಚುನಾವಣೆ ಗಿಮಿಕ್‌ ಅಲ್ಲ ಎಂದು ಅನರ್ಹ ಶಾಸಕ ಎಚ್‌.ವಿಶ್ವನಾಥ್‌ ತಿಳಿಸಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು ಹುಣಸೂರು ಜಿಲ್ಲೆಯ ಪ್ರಸ್ತಾಪದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

 • Shivamogga16, Oct 2019, 2:27 PM IST

  ಮಲೆನಾಡಲ್ಲೂ ಉಗ್ರರ ಕರಿನೆರಳು : ತೀರ್ಥಹಳ್ಳಿಯಲ್ಲಿ ಶಂಕಾಸ್ಪದ ಉಗ್ರ ಅರೆಸ್ಟ್

  ಎಲ್ಲೆಡೆ ಬಾಂಗ್ಲಾ ಉಗ್ರರು ಇರುವ ಶಂಕೆ ವ್ಯಕ್ತವಾಗಿದ್ದು ಇದೀಗ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಮನೆಯೊಂದರಲ್ಲಿಯೂ ಶಂಕಾಸ್ಪದ ವ್ಯಕ್ತಿಯೋರ್ವನನ್ನು ಪೊಲೀಸ್ ವಶಕ್ಕೆ ಪಡೆಯಲಾಗಿದೆ. 

 • thieft2

  Shivamogga16, Oct 2019, 1:27 PM IST

  ಸಾಗರ : ಮಾಜಿ ಶಾಸಕರ ಮನೆಯಲ್ಲಿ ಕಳ್ಳತನ

  ಶಿವಮೊಗ್ಗ ಜಿಲ್ಲೆಯ ಸಾಗರದ  ಮಾಜಿ ಶಾಸಕರೋರ್ವರ ಮನೆಯಲ್ಲಿ ಬೀಗ ಮುರಿದು ಕಳ್ಳತನ ಮಾಡಲಾಗಿದೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಈ ಕೃತ್ಯ ಎಸಗಲಾಗಿದೆ.