ಜಿಲ್ಲಾ ಸುದ್ದಿಗಳು  

(Search results - 3)
 • Recap 2019

  Karnataka Districts30, Dec 2019, 3:04 PM IST

  ನಿಮ್ಮ ಜಿಲ್ಲೆಯಿಂದ 2019ರಲ್ಲಿ ಭಾರೀ ಸದ್ದು ಮಾಡಿದ ಸುದ್ದಿಗಳಿವು

  2019 ಮುಗಿದು 2020ಕ್ಕೆ ನಾವೇಲ್ಲಾ ಕಾಲಿಡುತ್ತಿದ್ದೇವೆ. ಈ ಸಂದರ್ಭದಲ್ಲಿ ನಾವು ಒಮ್ಮೆ ಕಳೆಯ ದಿನಗಳತ್ತ ತಿರುಗಿ ನೋಡಿದಾಗ ಎಷ್ಟೇಲ್ಲಾ ಘಟನೆಗಳು ಆಗಿ ಹೋಗಿವೆ ಎನ್ನಿಸದೇ ಇರದು. ಅದರಂತೆ 2019 ರಲ್ಲಿ ವಿವಿಧ ಜಿಲ್ಲೆಗಳಿಂದ ಹೆಚ್ಚು ಸದ್ದು ಮಾಡಿದ ಸುದ್ದಿಗಳು ಇಲ್ಲಿದೆ. 

 • Bellary

  Ballari10, Aug 2018, 11:12 AM IST

  ಇದು ಹೆಸರಿಗಷ್ಟೇ ಗ್ರಾಪಂ; ಮೂಲಭೂತ ಸೌಕರ್ಯಗಳನ್ನು ಕೇಳಲೇಬೇಡಿ!

  ಗೋವಿಂದಗಿರಿ ತಾಂಡಾ ಹಳ್ಳಿಯಾಗಿದ್ದರೂ ಕೂಡ್ಲಿಗಿ ಪಟ್ಟಣಕ್ಕೆ ಕೂಗಳತೆ ದೂರವಿರುವುದರಿಂದ ಇದನ್ನು ಕೂಡ್ಲಿಗಿ ಪಟ್ಟಣ ಪಂಚಾಯತಿಗೆ ಸೇರಿಸಲಾಗಿದೆ. ಹೆಸರಿಗಷ್ಟೇ ಇದು ಪಟ್ಟಣ ಪಂಚಾಯತಿ ಭಾಗವಾಗಿದ್ದರೂ, ಯಾವುದೇ ಸೌಲಭ್ಯ ಗ್ರಾಮಕ್ಕೆ ಸಿಗುತ್ತಿಲ್ಲ. ಈ ಗ್ರಾಮಕ್ಕೆ ಹೋಗಿ ನೋಡಿದರೆ ಗುಡಿಸಲು ಮುಕ್ತ ಗ್ರಾಮವಾಗಿ ಕಾಣುತ್ತದೆ ಎನ್ನುವುದನ್ನು ಬಿಟ್ಟರೆ ಉಳಿದಂತೆ ರಸ್ತೆ, ವಿದ್ಯುತ್, ಶುದ್ಧ ಕುಡಿಯುವ ನೀರು, ಸ್ವಚ್ಛತೆ ಕೇಳಲೇ ಬೇಡಿ. ಪ.ಪಂಗೆ ಕೋಟಿ ಕೋಟಿ ಅನುದಾನ ಬಂದರೂ 20 ನೇ ವಾರ್ಡಿನ ವ್ಯಾಪ್ತಿಗೆ ಬರುವ ಗೋವಿಂದಗಿರಿ ತಾಂಡಾ ಕುಗ್ರಾಮದಂತೆ ಕಾಣುತ್ತಿದೆ.

 • Bidar

  Bidar10, Aug 2018, 10:41 AM IST

  ಬೀದರ್ ರೈಲ್ವೇ ನಿಲ್ದಾಣದಲ್ಲಿ ಪ್ಲಾಸ್ಟಿಕ್ ಪ್ಲೆಕ್ಸ್ ಹಾವಳಿ

  ಜನರ ಜೀವಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್  ಬಳಸಿರುವ ಫ್ಲೆಕ್ಸ್‌ಗಳು ಬೀದರ್ ರೈಲ್ವೆ ನಿಲ್ದಾಣವನ್ನು ಆವರಿಸಿವೆ. ಈ ಬಗ್ಗೆ ವಿಚಾರಿಸಿದರೆ ಮೇಲಿನವರ ಆದೇಶವಿದೆ ಎಂದೆನ್ನಲಾಗುತ್ತದೆ. ನಗರದ ಭಗತಸಿಂಗ್ ವೃತ್ತ ಹಾಗೂ ಬೊಮ್ಮಗೊಂಡೇಶ್ವರ ವೃತ್ತದ ಮಧ್ಯದಲ್ಲಿರುವ ರೈಲ್ವೆ ಕೆಳಸೇತುವೆಗೆ ಪ್ಲಾಸ್ಟಿಕ್ ಫ್ಲೆಕ್ಸ್‌ಗಳನ್ನು ಅಳವಡಿಸಲಾಗಿದೆ ಹೀಗೆಯೇ ಇನ್ನಿತರ ರೈಲ್ವೆ ನಿಲ್ದಾಣವೇಕೆ ರೈಲ್ವೆ ಕೆಳಸೇತುವೆ, ಮೇಲ್ಸೇತುವೆಗಳಿಗೂ ಪ್ಲಾಸ್ಟಿಕ್ ಫ್ಲೆಕ್ಸ್‌ಗಳು ರಾರಾಜಿಸುತ್ತಿವೆ.