ಜಿಲ್ಲಾಸ್ಪತ್ರೆ  

(Search results - 34)
 • Video Icon

  Karnataka Districts20, Sep 2019, 7:01 PM IST

  ಮಹಿಳಾ ನೌಕರಳಿಂದ ಆತ್ಮಹತ್ಯೆ ಎಚ್ಚರಿಕೆ; ತತ್ತರಿಸಿಬಿಟ್ಟಳು ಸಿ.ಟಿ. ರವಿ ಉತ್ತರಕ್ಕೆ!

  ಸಚಿವ ಸಿ.ಟಿ. ರವಿ ಮುಂದೆಯೇ ಮಹಿಳಾ ನೌಕರೊಬ್ಬಳು ಆತ್ಮಹತ್ಯೆ ಬೆದರಿಕೆ ಹಾಕಿದ ಘಟನೆ ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ. ಹೊರಗುತ್ತಿಗೆ ನೌಕರರನ್ನು ಕೆಲಸದಿಂದ ತೆಗೆದುಹಾಕುತ್ತಿರುವುದಕ್ಕೆ ಸಚಿವರಿಗೆ ಮನವಿ ಮಾಡಿದ ಮಹಿಳೆ, ಆತ್ಮಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದರು. ಆದರೆ ಅದಕ್ಕೆ ಜಗ್ಗದ ಸಚಿವ ಸಿ.ಟಿ. ರವಿ, ಇದೆಲ್ಲಾ ಇಮೊಶನಲ್ ಬ್ಲಾಕ್ ಮೇಲ್ ನನ್ನ ಬಳಿ ಬೇಡ ಎಂದು ಖಡಕ್ ಉತ್ತರ ನೀಡಿದರು.   

 • Chikkamagaluru
  Video Icon

  Karnataka Districts20, Sep 2019, 4:25 PM IST

  ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯಲ್ಲಿ ಟಾನಿಕ್ ಬಾಟ್ಲುಗಿಂತ ಎಣ್ಣೆ ಬಾಟ್ಲೇ ಹೆಚ್ಚು..!

  ಚಿಕ್ಕಮಗಳೂರು ಜಿಲ್ಲಾಸ್ಪತ್ರೆ ಮದ್ಯದಂಗಡಿಯಾಗೆ ಮಾರ್ಪಟ್ಟಿದೆ. ವಾಷ್ ರೂಂ, ಟಾಯ್ಲೆಟ್ ರೂಂ ಎಲ್ಲೆಂದರಲ್ಲಿ ಹಾಲ್ಕೋಹಾಲ್ ಬಾಟೆಲ್, ಪ್ಯಾಕೇಟ್ ಗಳು ಬಿದ್ದಿದದು, ಸರ್ಕಾರಿ ಆಸ್ಪತ್ರೆ ಮದ್ಯ ಸೇವಿಸೋ ಅಡ್ಡೆಯಾಗಿದೆ.  ಆಸ್ಪತ್ರೆ ಸಿಬ್ಬಂದಿಗಳ ನಿರ್ಲಕ್ಷ್ಯಕ್ಕೆ ರೋಗಿಗಳು ಹೈರಾಣಾಗಿದ್ದಾರೆ. ಎಣ್ಣೆ ಕುಡಿದು ಬಾಟಲಿಗಳನ್ನು ಗೋಡೆ ಮೇಲೆ ಸಾಲಾಗಿ ಜೋಡಿಸಿರೋ ದೃಶ್ಯವನ್ನು ವಿಡಿಯೋನಲ್ಲಿ ನೋಡಿ.

 • Sriramulu1

  Karnataka Districts10, Sep 2019, 10:25 AM IST

  ಆರೋಗ್ಯ ಸಚಿವರ ತವರಲ್ಲೇ ಅವ್ಯವಸ್ಥೆ : ಬಡರೋಗಿಗಳ ಪರದಾಟ

  ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಕೇವಲ ಎರಡು ತುರ್ತು ವಾಹನಗಳಿದ್ದು ಇದರಿಂದ ಜಿಲ್ಲೆಯ ಬಡರೋಗಿಗಳ ಗೋಳು ಕೇಳುವವರಿಲ್ಲದಂತಾಗಿದೆ.

 • Karnataka Districts31, Jul 2019, 8:45 AM IST

  ಜಿಲ್ಲಾಸ್ಪತ್ರೆ ಪಾರ್ಕ್‌ನಲ್ಲಿ ಊಟ, ತಿಂಡಿಗೆ ನಿಷೇಧ: ಡಿಸಿ ಸೂಚನೆ

  ಜಿಲ್ಲಾಸ್ಪತ್ರೆ ಪಾರ್ಕ್‌ನಲ್ಲಿ ವಾಯವಿಹಾರಕ್ಕೆ ಮಾತ್ರ ಅನುಮತಿ ನೀಡಬೇಕು. ಕಡ್ಡಾಯವಾಗಿ ಯಾರೂ ಪಾರ್ಕ್ ಒಳಗಡೆ ಕುಳಿತು ಊಟ, ತಿಂಡಿ ಮಾಡಬಾರದು ಎಂದು ದಾವಣಗೆರೆ ಜಿಲ್ಲಾಧಿಕಾರಿ ಜಿ.ಎನ್‌.ಶಿವಮೂರ್ತಿ ಆದೇಶ ನೀಡಿದ್ಧಾರೆ

 • dogs
  Video Icon

  Karnataka Districts4, Jul 2019, 5:13 PM IST

  BIG 3 ಕ್ಯಾಮೆರಾ ಮಹಿಮೆ.. ವರದಿಗೂ ಮುನ್ನ ಜಿಲ್ಲಾಸ್ಪತ್ರೆಗೆ ರೇಬಿಸ್ ಚಿಕಿತ್ಸೆ!

  ಕೆಲವೊಮ್ಮೆ ಹೀಗೂ ಆಗುತ್ತೆ, ವರದಿಗೂ ಮುನ್ನವೇ ಫಲಶೃತಿ ಸಿಗುತ್ತೆ. ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ಕಳೆದ ನಾಲ್ಕೈದು ತಿಂಗಳಿನಿಂದ ರೇಬಿಸ್ ವ್ಯಾಕ್ಸಿನ್ ಇಲ್ಲದೇ, ಕಚ್ಚಿಸಿಕೊಂಡವರ ಸ್ಥಿತಿ ನಾಯಿಪಾಡಿನಂತಾಗಿತ್ತು. ಈ ಬಗ್ಗೆ ನಮ್ಮ ಪ್ರತಿನಿಧಿ ವರದಿ ಮಾಡಲು ತೆರಳಿದ್ದೇ ತಡ.... ಮುಂದೇನಾಯ್ತು ನೀವೇ ನೋಡಿ...

 • Gadaga
  Video Icon

  NEWS30, Jun 2019, 12:27 PM IST

  ಗದಗ ಜಿಲ್ಲಾಸ್ಪತ್ರೆಯಲ್ಲಿ ಕಟ್ಟಿರುವೆ ಕಾಟ; ಕೇಳೋರಿಲ್ಲ ಬಾಣಂತಿಯರ ಗೋಳು

  ಗದಗ ಜಿಲ್ಲೆಯ ಆಸ್ಪತ್ರೆಗಳ ಸ್ಥಿತಿ ದೇವರಿಗೆ ಪ್ರೀತಿ. ಚಿಕಿತ್ಸೆಗೆಂದು ಬಂದ ರೋಗಿಗಳಿಗೆ ನರಕ ತೋರಿಸುತ್ತೆ ಗದಗ ಜಿಲ್ಲಾಸ್ಪತ್ರೆ. ಬಾಣಂತಿ ಮತ್ತು ಹಸುಗೂಸುಗಳ ಮೇಲೆ ಕಟ್ಟಿರುವೆಗಳು ದಾಳಿ ಮಾಡುತ್ತಿವೆ. ಇರುವೆಗಳ ಕಾಟ ತಪ್ಪಿಸುವಂತೆ ಅಧಿಕಾರಿಗಳಿಗೆ ಹೇಳಿದ್ರೂ ಡೋಂಟ್ ಕೇರ್. 

 • Video Icon

  Karnataka Districts26, Jun 2019, 11:58 AM IST

  ವೈದ್ಯರ ಎಡವಟ್ಟು!: ಡಯಾಲಿಸಿಸ್ ಮಾಡಿಸಿಕೊಂಡವರಲ್ಲಿ HCV ವೈರಾಣು!

  ಕಿಡ್ನಿ ವೈಫಲ್ಯಗೊಂಡು ಸರ್ಕಾರಿ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಮಾಡಿಸಿಕೊಂಡಿದ್ದ 30 ರೋಗಿಗಳು ಜೀವಭಯದಲ್ಲಿದ್ದಾರೆ. ಕೆಆರ್ ನಗರ ಸರ್ಕಾರಿ ಆಸ್ಪತ್ರೆಯಲ್ಲಿ 2 ವರ್ಷಗಳಿಂದ ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿದ್ದ 30ಕ್ಕೂ ಹೆಚ್ಚು ರೋಗಿಗಳಲ್ಲಿ ಹೆಚ್‌ಸಿವಿ ವೈರಾಣು ಸೋಂಕು ಪತ್ತೆಯಾಗಿದೆ. ತಮ್ಮ ತಪ್ಪಿನ ಅರಿವಾಗುತ್ತಲೇ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತೆ ಸಿಬ್ಬಂದಿಗಳು ಸೂಚಿಸಿದ್ದಾರೆ. ಆದರೀಗ ವೈದ್ಯರ ಎಡವಟ್ಟಿನಿಂದ ಕೆಆರ್ ನಗರ ತಾಲೂಕು ಆಸ್ಪತ್ರೆ ಮುಂಭಾಗ ರೋಗಿಗಳು ಪ್ರತಿಭಟನೆ ಆರಂಭಿಸಿದ್ದಾರೆ. 

 • Mother

  Karnataka Districts27, May 2019, 7:59 AM IST

  ಭಿಕ್ಷೆ ಬೇಡಿ ನಿಶ್ಶಕ್ತ ತಾಯಿಯನ್ನು ಸಲಹುತ್ತಿದೆ 3 ವರ್ಷದ ಮಗು!

  ಭಿಕ್ಷೆ ಬೇಡಿ ನಿಶ್ಶಕ್ತ ತಾಯಿಯನ್ನು ಸಲಹುತ್ತಿದೆ 3 ವರ್ಷದ ಮಗು!| ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಮನಕುಲಕುವ ಘಟನೆ| ಭಿಕ್ಷೆ ಬೇಡಿ ಮದ್ಯ ವ್ಯಸನಿ ತಾಯಿಗೆ ಉಣಿಸುವ ಕಂದ|

 • drinking water

  NEWS21, May 2019, 8:15 AM IST

  ರೋಗಿ ನೋಡಲು ಬರುವವರು 1 ಬಾಟಲ್ ನೀರು ತನ್ನಿ!

  ‘ನಮ್ಮನ್ನು ಕಾಣಲು, ಮಾತನಾಡಿಸಲು ಬರೋದಾದ್ರೆ, ಜೊತೆಗೊಂದೆರಡು ಬಾಟಲ್‌ ನೀರು ಹಿಡ್ಕೊಂಡು ಬರ್ರಿ’ - ಇದು ಕಲಬುರಗಿ ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿರುವ ಒಳರೋಗಿಗಳು, ಅವರ ಸಹಾಯಕರು ತಮ್ಮನ್ನು ಭೇಟಿ ಮಾಡಲು ಬರುತ್ತಿರುವ ಬಂಧುಮಿತ್ರರಿಗೆ ಮಾಡುತ್ತಿರುವ ಮನವಿ.

 • pregnant

  NEWS11, May 2019, 11:32 AM IST

  ರಾಜ್ಯದಲ್ಲಿ ಒಂದು ವರ್ಷದಲ್ಲಿ 578 ಅಪ್ರಾಪ್ತ ಗರ್ಭಿಣಿಯರು ಪತ್ತೆ!

  2018-19ರಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ವಿತರಿಸಿದ ತಾಯಿ ಕಾರ್ಡ್‌ನಲ್ಲಿ ಬಯಲಾದ ಸತ್ಯ, ಬಾಲ್ಯ ವಿವಾಹ ಶಂಕೆ

 • Doctor strike

  NEWS13, Mar 2019, 8:42 AM IST

  ಗರ್ಭಿಣಿಯೇ ಅಲ್ಲದ ಮಹಿಳೆಗೆ ಸಿಸೇರಿಯನ್‌ ಮಾಡಿದ ವೈದ್ಯೆ!

  ಹೊಟ್ಟೆನೋವು ಎಂದು ಆಸ್ಪತ್ರೆಗೆ ದಾಖಲಾದ ಮಹಿಳೆಯನ್ನು ಗರ್ಭಿಣಿ ಎಂದು ತಪ್ಪಾಗಿ ಭಾವಿಸಿ ಸಿಸೇರಿಯನ್‌ ಮಾಡಿದ ಘಟನೆ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ. ಈ ವೇಳೆ ತೀವ್ರ ರಕ್ತಸ್ರಾವವಾದ್ದರಿಂದ ಮಹಿಳೆ ಮೃತಪಟ್ಟಿದ್ದಾಳೆ. ವೈದ್ಯರ ನಿರ್ಲಕ್ಷ್ಯಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಜಿಲ್ಲಾಸ್ಪತ್ರೆ ಮುಂದೆ ಸಂಬಂಧಿಕರು ಮಹಿಳೆಯ ಶವದೊಂದಿಗೆ ಪ್ರತಿಭಟನೆ ನಡೆಸಿದ್ದಾರೆ.

 • Accident

  NEWS22, Feb 2019, 11:32 AM IST

  ಸಿಟಿ ರವಿ ಆಯ್ತು ಈಗ ಶಾಸಕಿ ಪೂರ್ಣಿಮಾ ಕಾರು ಡಿಕ್ಕಿ ; ಓರ್ವ ಗಾಯ

  ಹಿರಿಯೂರು ನಗರದ ಪ್ರವಾಸಿ ಮಂದಿರದ ನೂತನ ಸಂಕೀರ್ಣದ ಆವರಣದಲ್ಲಿ ಶಾಸಕಿ ಪೂರ್ಣಿಮಾ ಅವರ ಕಾರು ಹರಿದು ಪಾದಚಾರಿಯೊಬ್ಬ ತೀವ್ರವಾಗಿ ಗಾಯಗೊಂಡು ಜಿಲ್ಲಾಸ್ಪತ್ರೆ ಸೇರಿದ ಘಟನೆ  ನಡೆದಿದೆ.

 • Chikkaballapur Hospital

  Chikkaballapur19, Dec 2018, 11:23 PM IST

  ವಿಷ ಪ್ರಸಾದದ ದುರಂತ ಕಣ್ಣಾರೆ ಕಂಡೇವು...ಈ ಜಿಲ್ಲಾಸ್ಪತ್ರೆಯ ದುಸ್ಥಿತಿಯೂ ಅಷ್ಟೆ

  ಇದು ಚಿಕ್ಕಬಳ್ಳಾಪುರ ಸರಕಾರಿ ಆಸ್ಪತ್ರೆಯ ಘೋರ ಕತೆ. ರಾಜಧಾನಿ ಬೆಂಗಳೂರಿಗೆ ತುಂಬಾ ಹತ್ತಿರವಿರುವ ಜಿಲ್ಲೆಯ ಜಿಲ್ಲಾಸ್ಪತ್ರೆಯ ದುಸ್ಥಿತಿ ಇದು. ಚಾಮರಾಜನಗರದ ವಿಷ ಪ್ರಸಾದದ ಘೋರ ದುರಂತದ ವೇಳೆ ತಾಲೂಕು ಆಸ್ಪತ್ರೆಯಲ್ಲಿ ಸೌಲಭ್ಯ ಕೊರತೆಯನ್ನು ಕಣ್ಣಾರೆ ಕಂಡಿದ್ದೇವೆ.

 • Belagavi hospital
  Video Icon

  NEWS27, Jul 2018, 11:36 AM IST

  ಸೋರುತಿಹುದು ಬೆಳಗಾವಿ ಜಿಲ್ಲಾಸ್ಪತ್ರೆ; ಹೇಳೋರಿಲ್ಲ, ಕೇಳೋರಿಲ್ಲ!

  ಬೆಳಗಾವಿ ಜಿಲ್ಲಾಸ್ಪತ್ರೆ ಸೋರುತ್ತಿದೆ. ರೋಗಿಗಳು ಕೂರಲು, ಮಲಗಲು ಪರದಾಡುತ್ತಿದ್ದಾರೆ. ಆದರೂ  ಸಂಬಂಧಪಟ್ಟವರು ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ. ಈ ಆಸ್ಪತ್ರೆಗೆ ಬಂದರೆ ಆರೋಗ್ಯ ಮತ್ತಷ್ಟು ಹದಗೆಡುತ್ತದೆ. ರೋಗಿಗಳ ಬೆಡ್ ಮೇಲೆ ನೀರು ಸೋರುತ್ತಿದ್ದು ಮಲಗಲು ಕಷ್ಟವಾಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಇನ್ನಾದರೂ ಗಮನಿಸುತ್ತಾರಾ? 

 • Video Icon

  Bagalkot26, Jul 2018, 8:16 PM IST

  ವ್ಹೀಲ್‌ಚೇರ್ ಸಿಗದೇ ಪರದಾಡಿದ ಅಂಗವಿಕಲ; ಮನಕಲಕುವ ದೃಶ್ಯ ಕ್ಯಾಮೆರಾದಲ್ಲಿ ಸೆರೆ

  ಸರ್ಕಾರಿ ಆಸ್ಪತ್ರೆಗಳ ದುಸ್ಥಿತಿಯ ಬಗ್ಗೆ ಬರೆದಷ್ಟೂ ಕಡಿಮೆ. ಬಾಗಲಕೋಟೆಯ ಜಿಲ್ಲಾಸ್ಪತ್ರೆಯಲ್ಲಿ ನಾಗರಿಕ ಸಮಾಜ ತಲೆತಗ್ಗಿಸುವ ಘಟನೆ ನಡೆದಿದೆ. ಆಸ್ಪತ್ರೆಗೆ ಬಂದಿದ್ದ ಅಂಗವಿಕಲ ವ್ಯಕ್ತಿಯೊಬ್ಬ ವ್ಹೀಲ್ ಚೇರ್ ಸಿಗದೆ ಪರದಾಡಿದ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.