Search results - 180 Results
 • state20, Nov 2018, 7:53 AM IST

  ಮಾಸಾಂತ್ಯಕ್ಕೆ ಗೌರಿ ಕೇಸ್‌ ಚಾರ್ಜ್‌ಶೀಟ್‌

  ಗೌರಿ ಲಂಕೇಶ್‌ ಕೊಲೆ ಪ್ರಕರಣ ಸಂಬಂಧ ವಿಶೇಷ ತನಿಖಾ ದಳದ (ಎಸ್‌ಐಟಿ) ತನಿಖೆ ಅಂತಿಮ ಹಂತಕ್ಕೆ ಬಂದಿದ್ದು, ಇದೇ ತಿಂಗಳ ಕೊನೆಗೆ ಸುಮಾರು ನಾಲ್ಕು ಸಾವಿರಕ್ಕೂ ಅಧಿಕ ಪುಟಗಳ ಬೃಹತ್ತಾದ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಿದೆ.

 • kota srinivas poojary

  NEWS5, Nov 2018, 6:15 PM IST

  ‘ಗೌರಿ ಲಂಕೇಶ್  ಮಾನಸಿಕತೆಯಿಂದ ಪ್ರಕಾಶ್ ರೈ ಹೊರಬಂದಿಲ್ಲ’

  ನಟ, ನಿರ್ದೇಶಕ ಪ್ರಕಾಶ್ ರೈ ನೀಡಿದ ಹೇಳಿಕೆಗಳು  ಒಂದಿಲ್ಲೊಂದು ವಿವಾದಕ್ಕೆ ನಾಂದಿ ಯಾಗುತ್ತಲೆ ಇರುತ್ತವೆ. ಅಯ್ಯಪ್ಪ ಸ್ವಾಮಿ ದೇವರೇ ಅಲ್ಲ ಎಂದು ಹೇಳೀಕೆ ನೀಡಿದ್ದ ಪ್ರಕಾಶ್ ರೈಗೆ ಕೋಟ ಶ್ರೀನಿವಾಸ ಪೂಜಾರಿ ತಿರುಗೇಟು ನೀಡಿದ್ದಾರೆ.

 • NEWS1, Oct 2018, 2:40 PM IST

  ಗೌರಿ ಹತ್ಯೆ ಪ್ರಕರಣ: ಹಿಂದೂಪರ ಕಾರ್ಯಕರ್ತರಿಗೆ ನೋಟಿಸ್

  ಬೆಳಗಾವಿ ಜಿಲ್ಲೆಯ ಒಟ್ಟು ಆರು ಹಿಂದೂಪರ ಸಂಘಟನೆ ಕಾರ್ಯಕರ್ತರಿಗೆ ಇದೇ ಅಕ್ಟೋಬರ್ 8ರೊಳಗೆ ವಿಚಾರಣೆಗೆ ಬರುವಂತೆ ಎಸ್ ಐಟಿ ನೋಟಿಸ್ ನೀಡಿದೆ.

 • Dharwad28, Sep 2018, 7:58 PM IST

  ಕಲಬುರ್ಗಿ ಹತ್ಯೆ ಸುಳಿವು ಗೌರಿ ಹಂತಕರಿಂದ ಸಿಐಡಿಗೆ ಸಿಕ್ಕಿತೆ?

  ಗೌರಿ ಲಂಕೇಶ್ ಹತ್ಯೆ ಆರೋಪಿಗಳನ್ನು ಮತ್ತೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಸಂಶೋಧಕ ಎಂ.ಎಂ.ಕಲಬುರ್ಗಿ ಹತ್ಯೆ ಸಂಬಂಧ ಸಿಐಡಿ ಪೊಲೀಸರು 14 ದಿನಗಳ ಕಾಲ ಗೌರಿ ಲಂಕೇಶ್ ಹತ್ಯೆ ಆರೋಪಿಗಳ ವಿಚಾರಣೆ ನಡೆಸಿದ್ದಾರೆ.

 • Srikanth

  NEWS17, Sep 2018, 11:44 AM IST

  ಗೌರಿ ಹತ್ಯೆ ಪ್ರಕರಣದಲ್ಲಿ ಮಾಜಿ ಕಾರ್ಪೋರೇಟರ್ ಕೈವಾಡ..?

  ಗೌರಿ ಹತ್ಯೆಗೆ ಸಂಚು ರೂಪಿಸಿದ್ದ ಶಂಕೆ ಮೇರೆಗೆ​​ ಶ್ರೀಕಾಂತ್ ಪನ್ಗಾರ್ಕರ್ ನನ್ನು ಎಸ್ಐಟಿ ವಶಕ್ಕೆ ಪಡೆದುಕೊಂಡಿದ್ದು, ಬಾಡಿ ವಾರೆಂಟ್ ಪಡೆದು ಬೆಂಗಳೂರಿಗೆ ಕರೆತಂದಿದ್ದಾರೆ. ಶ್ರೀಕಾಂತ್ ಪನ್ಗಾರ್ಕರ್ ನನ್ನು ಇಂದು ಎಸ್ ಐಟಿಯು ನ್ಯಾಯಾಲಕ್ಕೆ ಹಾಜರು ಪಡಿಸಿ, ಹೆಚ್ಚಿನ ವಿಚಾರಣೆಗೆಂದು ತನ್ನ ವಶಕ್ಕೆ ಪಡೆದುಕೊಳ್ಳಲಿದೆ.

 • P Mahamud

  NEWS6, Sep 2018, 9:33 PM IST

  ವ್ಯಂಗ್ಯಚಿತ್ರಕಾರ ಪಿ.ಮುಹಮ್ಮದ್ ರಿಗೆ ಪ್ರತಿಷ್ಠಿತ 'ಪೆನ್-ಗೌರಿ ಲಂಕೇಶ್ ಅವಾರ್ಡ್'

  ಪತ್ರಕರ್ತೆ ಗೌರಿ ಲಂಕೇಶ್  ಸ್ಮರಣೆ ನಿಮಿತ್ತ  'ಪ್ರಜಾಪ್ರಭುತ್ವದ ಆದರ್ಶವಾದ'ಕ್ಕೆ ನೀಡುವ ಮೊದಲ ಪೆನ್-ಗೌರಿ ಲಂಕೇಶ್ ಪ್ರಶಸ್ತಿಯನ್ನು ಹಿರಿಯ ವ್ಯಂಗ್ಯಚಿತ್ರಕಾರ ಪಿ. ಮುಹಮ್ಮದ್ ಅವರಿಗೆ ನೀಡಿ ಗೌರವಿಸಲಾಗಿದೆ. 

 • NEWS6, Sep 2018, 3:34 PM IST

  ಗೌರಿ ಮರ್ಡರ್ ಮಿಸ್ಟ್ರಿ: ಎಸ್‌ಐಟಿ ರೋಚಕ ತನಿಖೆಯ ಥ್ರಿಲ್ಲಿಂಗ್ ಸ್ಟೋರಿ

  ಪತ್ರಕರ್ತೆ, ಚಿಂತಕಿ ಗೌರಿ ಲಂಕೇಶ್ ಹತ್ಯೆಯಾಗಿ ಒಂದು ವರ್ಷ ಕಳೆದಿದೆ. ಹತ್ಯೆಯ ಬಗ್ಗೆ ಮೊದಲು ಯಾವುದೇ ಸುಳಿವಿಲ್ಲದ ಬಿ.ಕೆ.ಸಿಂಗ್ ನೇತೃತ್ವದ ಎಸ್‌ಐಟಿ ತಂಡ, ಇದೀಗ ಸುಮಾರು 13ಮಂದಿ ಆರೋಪಿಗಳನ್ನು ಬಲೆಗೆ ಕೆಡವಿದೆ.  

 • Urban Naxal

  NEWS6, Sep 2018, 8:40 AM IST

  ಹೌದು, ನಾನು ನಗರ ನಕ್ಸಲ್‌ : ಗಿರೀಶ್ ಕಾರ್ನಾಡ್

  ಜ್ಞಾನಪೀಠ ಪುರಸ್ಕೃತ ಗಿರೀಶ್‌ ಕಾರ್ನಾಡ್‌ ಅವರು ನಾನು ನಗರ ನಕ್ಸಲ್‌ ಎಂಬ ಬೋರ್ಡ್‌ ನೇತುಹಾಕಿಕೊಳ್ಳುವ ಮೂಲಕ ಕೇಂದ್ರ ಸರ್ಕಾರದ ಧೋರಣೆಗೆ ಪ್ರತಿರೋಧ ತೋರಿದರು. ಗೌರಿ ಲಂಕೇಶ್‌ ಸ್ಮಾರಕ ಟ್ರಸ್ಟ್‌ ನಗರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ‘ರಾಜಭವನ ಚಲೋ’ ಹಾಗೂ ‘ಅಭಿವ್ಯಕ್ತಿ ಸ್ವಾತಂತ್ರ್ಯ ಸಮಾವೇಶ’ದಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಲಾಗಿದೆ. 

 • NEWS5, Sep 2018, 9:58 PM IST

  ಕರ್ನಾಟಕದಲ್ಲಿ ಬಿಜೆಪಿ‌ ಸರ್ಕಾರವಿಲ್ಲ : ಇಲ್ಲಿ ಶಾ, ಮೋದಿ ಆಟ ನಡೆಯಲ್ಲ

  • ಪತ್ರಕರ್ತೆ ದಿ. ಗೌರಿ ಲಂಕೇಶ್ ಸ್ಪರಣಾರ್ಥ ಕಾರ್ಯಕ್ರಮದಲ್ಲಿ  ಮೋದಿ ಸರ್ಕಾರದ ವಿರುದ್ಧ ಕನ್ನಯ್ಯ ಕುಮಾರ್ ವಾಗ್ದಾಳಿ
  • ಹಿಂದು ಧರ್ಮದ ಹೆಸರಿನಲ್ಲಿ‌ ಆಡಳಿತಕ್ಕೆ‌ಬಂದು, ಅಂಬಾನಿಯಂಥವರ ಸೇವೆ ಮಾಡುತ್ತಿದ್ದಾರೆ 
  • ನಮ‌್ಮ ದೇಶದ‌ ಸಿದ್ದಾಂತದ ವಿರೋಧವಾಗಿ ವಿಚಾರವಾದಿಗಳನ್ನು‌ ಜೈಲಿಗಟ್ಟಲಾಗಿದೆ
 • Hindu Janajagriti Samiti

  Bengaluru City5, Sep 2018, 7:12 PM IST

  ಗೌರಿ ಹತ್ಯೆ ಆರೋಪಿಗಳಿಗೆ ‘ಜಿಂದಾಬಾದ್’!

   ಗೌರಿ ಲಂಕೇಶ್​ ಹತ್ಯೆ ಹಂತಕರ ಪರವಾಗಿ ಹಿಂದೂ ಜನಜಾಗೃತಿ ಸಮಿತಿ ಧ್ವನಿ ಎತ್ತಿದೆ. ಗೌರಿ ಹತ್ಯೆ ವಿಚಾರದಲ್ಲಿ ಪೊಲೀಸರು ಹಿಂದೂ ಕಾರ್ಯಕರ್ತರಿಗೆ ಕಿರುಕುಳ ನೀಡುತ್ತಿದ್ದು, ಕೂಡಲೇ ಈ ಅನ್ಯಾಯ ಸರಿಪಡಿಸುವಂತೆ ಸಮಿತಿ ಆಗ್ರಹಿಸಿದೆ. 

 • Bengaluru City5, Sep 2018, 6:59 PM IST

  ಗೌರಿ ಹತ್ಯೆಗೆ ಒಂದು ವರ್ಷ: ಗೌರಿ ದಿನ ಆಚರಣೆ!

  ಪತ್ರಕರ್ತೆ ಗೌರಿ ಲಂಕೇಶ್‌ರನ್ನು ಗುಂಡಿಕ್ಕಿ ಹತ್ಯೆ ಮಾಡಿ ಇಂದಿಗೆ ಒಂದು ವರ್ಷ. ಈ ಹಿನ್ನೆಲೆಯಲ್ಲಿ ‘ಗೌರಿ ಲಂಕೇಶ್‌ ಬಳಗ’ ಮತ್ತು ‘ಗೌರಿ ಲಂಕೇಶ್‌ ಮೆಮೋರಿಯಲ್‌ ಟ್ರಸ್ಟ್‌’ ಇವತ್ತು ‘ಗೌರಿ ದಿನ’ ಎಂಬ ವಿಶೇಷ ಕಾರ್ಯಕ್ರಮವನ್ನ ಮಾಡ್ತಿದ್ದಾರೆ. ಈ ವೇಳೆ ಶ್ರದ್ಧಾಂಜಲಿ, ರಾಜಭವನ ಜಲೋ, ಅಭಿವ್ಯಕ್ತಿ ಸ್ವಾತಂತ್ರ್ಯ ಸಮಾವೇಶಗಳು ನಡೆಯಲಿವೆ. ನಗರದ ಟಿ.ಆರ್‌.ಮಿಲ್‌ ಸಮೀಪದ ವೀರಶೈವ ಲಿಂಗಾಯತ ರುದ್ರಭೂಮಿಯಲ್ಲಿ ಗೌರಿ ಸಮಾಧಿ ಬಳಿ ಶ್ರದ್ಧಾಂಜಲಿ ಕಾರ್ಯಕ್ರಮ ನಡೀತು.

 • NEWS5, Sep 2018, 2:21 PM IST

  ‘ದೇಶದ್ರೋಹಿಗಳ ಮಹಾತಾಯಿ ಗೌರಿ ಜನ್ಮ ಕೊಟ್ಟಿರುವ ಮಕ್ಕಳ ತಂದೆ ಯಾರು?’

  • ಗೌರಿ ಲಂಕೇಶ್, ಪ್ರಗತಿಪರರ ವಿರುದ್ಧ ಹರಿಹಾಯ್ದ ಹಿಂದೂ ಮುಖಂಡೆ 
  • ದೇಶದ್ರೋಹಿಗಳ ಮಹಾತಾಯಿ ಗೌರಿ, ಆಕೆ ಸತ್ರೆ ಎಸ್ ಐಟಿ ರಚನೆಯಾಗುತ್ತೆ: ಆಕ್ರೋಶ
 • NEWS5, Sep 2018, 8:49 AM IST

  ಗೌರಿ ಹತ್ಯೆಯಾಗಿ ಇಂದಿಗೆ ವರ್ಷ

  ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಾಗಿ ಇಂದಿಗೆ ಒಂದು ವರ್ಷಗಳು ಕಳೆದಿದೆ. ಈ ನಿಟ್ಟಿನಲ್ಲಿ ಬುಧವಾರ ಗೌರಿ ದಿನ ಎಂದು ಆಚರಣೆ ಮಾಡಲಾಗುತ್ತಿದೆ. 

 • Gauri Lankesh

  NEWS5, Sep 2018, 7:48 AM IST

  ಗೌರಿ ಹಂತಕ ಯಾರು..? : ಕೊನೆಗೂ ತಿಳಿದ ಸತ್ಯವೇನು..?

  ಹತ್ಯೆ ಕೃತ್ಯ ನಡೆದ ದಿನ ಗೌರಿ ಅವರ ಮನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದ 9 ಸೆಕೆಂಡ್‌ಗಳ ದೃಶ್ಯಾವಳಿ ಪರಿಶೀಲಿಸಿದ ಗುಜರಾತ್‌ ಎಫ್‌ಎಸ್‌ಎಲ್‌ ತಜ್ಞರು ವಾಗ್ಮೋರೆಯೇ ಶೂಟರ್‌ ಎಂದು ಸ್ಪಷ್ಟಪಡಿಸಿದ್ದಾರೆ. ತನ್ಮೂಲಕ ವಾಗ್ಮೋರೆ ಕೃತ್ಯ ರುಜುವಾತುಪಡಿಸಲು ವಿಶೇಷ ತನಿಖಾ ದಳ (ಎಸ್‌ಐಟಿ)ಕ್ಕೆ ಬಹುಮುಖ್ಯ ವೈಜ್ಞಾನಿಕ ಸಾಕ್ಷ್ಯ ಸಿಕ್ಕಂತಾಗಿದೆ.

 • Belagavi

  NEWS2, Sep 2018, 7:26 AM IST

  ಬೆಳಗಾವಿ ಸ್ಫೋಟದ ಹಿಂದೆ ಇದ್ದವರು ಯಾರು..?

  ಬೆಳಗಾವಿಯ ಪ್ರಕಾಶ್‌ ಚಿತ್ರಮಂದಿರದ ಹೊರಗೆ 2018ರ ಜನವರಿ 25ರಂದು ಪೆಟ್ರೋಲ್‌ ಬಾಂಬ್‌ ಎಸೆದ ಕೃತ್ಯದ ಹಿಂದೆ ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಸಂಚಿನಲ್ಲಿ ಪಾಲ್ಗೊಂಡಿದ್ದ ಆರೋಪಿಯ ಕೈವಾಡ ಇರುವುದು ಇದೀಗ ಬೆಳಕಿಗೆ ಬಂದಿದೆ.