ಗೆಜ್ಜೆಗಿರಿ  

(Search results - 3)
 • Koti chennayya

  Karnataka Districts4, Jul 2020, 8:08 AM

  ಈ ತಿಂಗಳ ಕೊನೆವರೆಗೂ ಗೆಜ್ಜೆಗಿರಿ ಕ್ಷೇತ್ರದಲ್ಲಿ ದರ್ಶನ ನಿರ್ಬಂಧ

  ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ಕ್ಷೇತ್ರವಾದ ಗೆಜ್ಜೆಗಿರಿ ನಂದನ ಬಿತ್ತೆಲ್‌ನಲ್ಲಿ ಜುಲೈ 31ರ ವರೆಗೆ ಭಕ್ತರ ಪ್ರವೇಶ, ದರ್ಶನಕ್ಕೆ ನಿರ್ಬಂಧ ವಿಧಿಸಲಾಗಿದೆ.

 • ಗರಡಿಯ ಬಳಿ ಕೈ ಮುಗಿದು ನಮಿಸುತ್ತಿರುವ ಭಕ್ತರು

  Karnataka Districts10, Mar 2020, 7:32 AM

  ಕೋಟಿ-ಚೆನ್ನಯರ ಜನ್ಮಭೂಮಿ ಇನ್ನು ಪ್ರವಾಸಿ ತಾಣ..!

  ಕೋಟಿ ಚೆನ್ನಯ್ಯರ ಜನ್ಮಸ್ಥಳ ಪ್ರವಾಸಿ ತಾಣವಾಗಿ ಬದಲಾಗಲಿದೆಯಾ..? ಇತ್ತೀಚೆಗಷ್ಟೇ ಗೆಜ್ಜೆಗಿರಿಯಲ್ಲಿ ಅದ್ಧೂರಿಯಾಗಿ ಬ್ರಹ್ಮ ಕಲಶೋತ್ಸವ ನೆರವೇರಿತ್ತು. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಐತಿಹಾಸಿಕ ಪ್ರಾಮುಖ್ಯ ಪಡೆದಿರುವ ಸ್ಥಳ ಮುಂದಿನ ದಿನಗಳಲ್ಲಿ ಪ್ರವಾಸಿ ತಾಣವಾಗಿ ಬದಲಾಗುವ ಬಗ್ಗೆ ಮಾತು ಕೇಳಿ ಬಂದಿದೆ.

 • Koti chennayya

  Karnataka Districts29, Feb 2020, 12:03 PM

  ಕೋಟಿ-ಚೆನ್ನಯ ಬಿಂಬ ಸ್ಥಾಪ​ನೆ, ಗೆಜ್ಜೆಗಿರಿ ಪ್ರತಿಷ್ಠಾ ಬ್ರಹ್ಮಕಲಶೋತ್ಸವ

  ದೇಯಿ ಬೈದ್ಯೆತಿ, ಕೋಟಿಚೆನ್ನಯರ ಮೂಲಸ್ಥಾನವಾದ ಗೆಜ್ಜೆಗಿರಿ ನಂದನ ಬಿತ್ತಲ್‌ ಕ್ಷೇತ್ರದಲ್ಲಿ ಶುಕ್ರವಾರ ಬೆಳಗ್ಗೆ ದೇಯಿ ಬೈದ್ಯೆತಿ ಬಿಂಬ ಪ್ರತಿಷ್ಠೆ, ಸಾಯನ ಬೈದ್ಯರ ಗುರುಪೀಠ ಸ್ಥಾಪನೆ, ಮೂಲ ಗರಡಿಯಲ್ಲಿ ಗುರು ಸಾಯನ ಬೈದರ ಹಾಗೂ ಕೋಟಿ-ಚೆನ್ನಯರ ಬಿಂಬ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ ಕ್ಷೇತ್ರದ ತಂತ್ರಿ ಎಂ.ಕೆ.ಲೋಕೇಶ್‌ ತಂತ್ರಿ ನೇತೃತ್ವದಲ್ಲಿ ನಡೆಯಿತು. ಫೋಟೋಸ್ ಇಲ್ಲಿವೆ.

  ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು.

  ಕ್ಷೇತ್ರದ ಯಜಮಾನ ಶ್ರೀಧರ ಪೂಜಾರಿ, ಅನುವಂಶಿಕ ಮೊಕ್ತೇಸರರಾದ ಲೀಲಾವತಿಯಮ್ಮ, ಪದ್ಮನಾಭ ಸುವರ್ಣ, ರವೀಂದ್ರ ಸುವರ್ಣ, ದೇಯಿ ಬೈದ್ಯೆತಿ -ಕೋಟಿ ಚೆನ್ನಯ ಮೂಲಸ್ಥಾನ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಜಯಂತ ನಡುಬೈಲು,ಪ್ರಧಾನ ಕಾರ್ಯದರ್ಶಿ ರವಿ ಪೂಜಾರಿ ಚಿಲಿಂಬಿ, ಕಾರ್ಯದರ್ಶಿಗಳಾದ ಸುಧಾಕರ ಸುವರ್ಣ, ಉಲ್ಲಾಸ್‌ ಕೋಟ್ಯಾನ್‌, ಕೋಶಾಧಿಕಾರಿ ದೀಪಕ್‌ ಕೋಟ್ಯಾನ್‌, ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷರಾದ ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ಅಧ್ಯಕ್ಷ ಡಾ.ರಾಜಶೇಖರ ಕೋಟ್ಯಾನ್‌, ಅಧ್ಯಕ್ಷ ಪೀತಾಂಬರ ಹೇರಾಜೆ, ಕಾರ್ಯಾಧ್ಯಕ್ಷ ನಾರಾಯಣ ಪೂಜಾರಿ ಮಡ್ಯಂಗಳ,ಕಾರ್ಯಾಧ್ಯಕ್ಷ ನರೇಶ್‌ ಕುಮಾರ್‌ ಸಸಿಹಿತ್ಲು, ಪ್ರಧಾನ ಕಾರ್ಯದರ್ಶಿ ಯಶವಂತ ದೇರಾಜೆಗುತ್ತು, ಉಪಾಧ್ಯಕ್ಷ ಪ್ರವೀಣ್‌ಕುಮಾರ್‌ ಕೆಡೆಂಜಿಗುತ್ತು, ವಿವಿಧ ಸಮಿತಿಗಳ ಪ್ರಮುಖರಾದ ನಾರಾಯಣ ಪೂಜಾರಿ ಮಡ್ಯಂಗಳ, ರವಿ ಕಕ್ಕೆಪದವು,ಶಶಿಧರ್‌ ಕಿನ್ನಿಮಜಲು, ಕೆ.ಮೋನಪ್ಪ ಪೂಜಾರಿ ಕೆರೆಮಾರು, ಬಿ.ಟಿ.ಮಹೇಶ್ಚಂದ್ರ ಸಾಲ್ಯಾನ್‌ ಮತ್ತಿ​ತ​ರರು ಹಾಜ​ರಿ​ದ್ದ​ರು.

  ---

  ಪವಾಡ ಸದೃಶ ಹೆಜ್ಜೆ​ಗು​ರುತು ಗೋಚ​ರ

  ನೂತನವಾಗಿ ನಿರ್ಮಿಸಿದ ಸತ್ಯ ಧರ್ಮ ಚಾವಡಿಯಲ್ಲಿ ಸಾಯನ ಬೈದ್ಯರ ಗುರು ಪೀಠದ ಬಳಿ ವೈದಿಕ ಕಾರ್ಯಕ್ರಮಗಳನ್ನು ನೆರವೇರಿಸಿ ಗುರುವಾರ ರಾತ್ರಿ ಕೋಟಿ-ಚೆನ್ನಯರ ಹಾಗೂ ಗುರು ಸಾಯನ ಬೈದ್ಯರ ಬಿಂಬಗಳನ್ನು ಶಯನಾವಸ್ತೆಯಲ್ಲಿ ಇಟ್ಟು ರಾತ್ರಿ ವೇಳೆ ಬಾಗಿಲು ಮುಚ್ಚಲಾಗಿತ್ತಂತೆ. ಅಲ್ಲೇ ಪಕ್ಕದಲ್ಲಿ ಅರ್ಧ ನಾರೀಶ್ವರ ಮಂಡಲ ಬರೆಯಲಾಗಿತ್ತು. ಶುಕ್ರವಾರ ಮುಂಜಾನೆ ಬಾಗಿಲು ತೆರೆದು ನೋಡಿದಾಗ ಆ ಮಂಡಲದಲ್ಲಿನ ಶಿರಭಾಗದಲ್ಲಿ ಪುಟ್ಟಮಗುವಿನ 8 ಹೆಜ್ಜೆ ಗುರುತುಗಳು ಕಾಣಿಸಿಕೊಂಡಿದೆ. ಕ್ಷೇತ್ರದ ಬಾಗಿಲು ಮುಚ್ಚಿದ ಬಳಿಕ ಹೆಜ್ಜೆ ಗುರುತು ಮೂಡಿರುವುದು ಕ್ಷೇತ್ರದಲ್ಲಿನ ಪವಾಡವಾಗಿದೆ ಎಂದು ಆಡಳಿತ ಮಂಡಳಿ ಕಾರ್ಯದರ್ಶಿ ಸುಧಾಕರ ಸುವರ್ಣ ಅವರು ಮಾಧ್ಯಮಕ್ಕೆ ತಿಳಿಸಿದರು.