ಗವಿಮಠ ಜಾತ್ರೆ  

(Search results - 11)
 • Koppala gavi

  Karnataka Districts25, Jan 2020, 8:23 AM

  ಕೊಪ್ಪಳದ ಗವಿಮಠ ಜಾತ್ರೆ: 25 ಲಕ್ಷ ಭಕ್ತರಿಗೆ ಪ್ರಸಾದ ವಿತರಣೆ

  ಶುಕ್ರವಾರ ಅಮಾವಾಸ್ಯೆಯ ದಿನವಾದ್ದರಿಂದ ಸಹಸ್ರಾರು ಭಕ್ತರು ಶ್ರೀಗವಿಸಿದ್ದೇಶ್ವರ ಮಠಕ್ಕೆ ಆಗಮಿಸಿ ಕರ್ತೃ ಗದ್ದುಗೆಯ ದರ್ಶನ ಪಡೆದಿದ್ದಾರೆ. ಬೆಳಗ್ಗೆಯಿಂದಲೇ ಭಕ್ತರು ಎತ್ತಿನ ಬಂಡಿ, ಟ್ರ್ಯಾಕ್ಟರ್ ಹಾಗೂ ಲಘು ವಾಹನಗಳೊಂದಿಗೆ ಆಗಮಿಸಿದ್ದರು. ಇದರಿಂದಾಗಿ ಶ್ರೀಮಠದ ಆವರಣದಲ್ಲಿ ಮತ್ತೊಂದು ಜಾತ್ರೆಯಷ್ಟು ಜನರು ಸೇರಿದ್ದು ವಿಶೇಷವಾಗಿತ್ತು. 
   

 • Koppal
  Video Icon

  Karnataka Districts19, Jan 2020, 11:59 AM

  ವಿನೂತನ ಕಾರ್ಯಕ್ರಮಕ್ಕೆ ಸಾಕ್ಷಿಯಾದ ಕೊಪ್ಪಳದ ಗವಿಮಠ ಜಾತ್ರೆ

  ದಕ್ಷಿಣ ಭಾರತದ ಕುಂಭಮೇಳ ಎಂದೇ ಖ್ಯಾತಿ ಗಳಿಸಿರುವ ಕೊಪ್ಪಳದ ಗವಿಮಠದ ಜಾತ್ರೆಯಲ್ಲಿ ಸ್ವಚ್ಛ ಮಾಡುವ ಮಹಿಳಾ ಪೌರಕಾರ್ಮಿಕರಿಗೆ ಟಿಫನ್ ಸೆಂಟರ್ ಮಾಲೀಕರು ಉಡಿ ತುಂಬಿ ಗೌರವಿಸಿದ್ದಾರೆ. ಈ ಮೂಲಕ ಕೊಪ್ಪಳದ ಗವಿಸಿದ್ದೇಶ್ವರ ಜಾತ್ರೆ ವಿನೂತನ ಕಾರ್ಯಕ್ಕೆ ಸಾಕ್ಷಿಯಾಗಿದೆ. ಅಪ್ಪಾಜಿ ಕ್ಯಾಂಟೀನ್‌ನಿಂದ ಪೌರ ಕಾರ್ಮಿಕರಿಗೆ ಉಪಹಾರದ ವ್ಯವಸ್ಥೆ ಕಲ್ಪಿಸಲಾಗಿತ್ತು. 
   

 • Sangeeta
  Video Icon

  Karnataka Districts17, Jan 2020, 12:09 PM

  ಗವಿಮಠದ ಜಾತ್ರೆ: ಪೊರಕೆ ಹಿಡಿದು ಕಸಗೂಡಿಸಿದ ಕೊಪ್ಪಳ ಎಸ್‌ಪಿ

  ಕೊಪ್ಪಳದಲ್ಲಿ ನಡೆಯುತ್ತಿರುವ ಗವಿಮಠದ ಜಾತ್ರೆಯಲ್ಲಿ ಎಸ್‌ಪಿ ಸಂಗೀತಾ ಅವರು ಜಾತ್ರೆಯನ್ನ ಅಂಗಳವನ್ನ ಸ್ವಚ್ಛಗೊಳಿಸಿದ್ದಾರೆ. ಪೊಲೀಸ್‌ ಸಿಬ್ಬಂದಿ ಜೊತೆ ಅಂಗಳವನ್ನ ಸ್ವಸ್ಛಗೊಳಿಸಿದ್ದಾರೆ. ಜಾತ್ರೆಯ ದಿನದಂದು ಸುಮಾರು 5 ರಿಂದ 6 ಜನರು ಭಾಗವಹಿಸಿದ್ದರು. ಹೀಗಾಗಿ ಎಸ್‌ಪಿ ಸಂಗೀತಾ ಅವರು ಸ್ವಯಂ ಪ್ರೇರಿತರಾಗಿ ತಮ್ಮ ಸಿಬ್ಬಂದಿ ಜೊತೆ ಜಾತ್ರೆಯ ಮೈದಾನದಲ್ಲಿ ಕಸಗೂಡಿಸುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ. 
   

 • Gavimath

  Karnataka Districts17, Jan 2020, 11:29 AM

  ಗವಿಮಠ ಜಾತ್ರೆಗೆ 1 ಲಕ್ಷ ಶೇಂಗಾ ಹೋಳಿಗೆ: ಮುಸ್ಲಿಂ ಭಕ್ತರಿಂದಲೂ ಸೇವೆ

  ಗವಿಮಠ ಜಾತ್ರೆಯ ಮಾರನೇ ದಿನ (ಸೋಮವಾರ) ದಾಸೋಹಕ್ಕೆ ಬಂದ ಭಕ್ತರೆಲ್ಲರಿಗೂ ಮಿರ್ಚಿ ಚಪ್ಪರಿಸುವ ಭಾಗ್ಯವಾದರೆ, ಗುರುವಾರ ಎಲ್ಲರಿಗೂ ಸಿಹಿ ಸಿಹಿಯಾದ ಶೇಂಗಾ ಹೋಳಿಗೆ ಸವಿಯುವ ಯೋಗ. ಕೊಪ್ಪಳ ಗವಿಸಿದ್ಧೇಶ್ವರ ಜಾತ್ರೆ ಒಂದರ್ಥದಲ್ಲಿ ಅಸಾಧ್ಯಗಳ ಸಾಧ್ಯವಾಗಿಸುವ ತಾಣ. ಇಲ್ಲಿಯ ದಾಸೋಹ ವ್ಯವಸ್ಥೆ, ಜಾತ್ರೆಗೆ ಸೇರುವ ಲಕ್ಷಾಂತರ ಮಂದಿಗೆ ಅಗತ್ಯ ಸೌಲಭ್ಯ, ರಕ್ಷಣೆ, ಸ್ವಚ್ಛತೆ, ಜನರು ಸ್ವಯಂಸ್ಫೂರ್ತಿಯಿಂದ ಪಾಲ್ಗೊಳ್ಳುವಿಕೆ ಪ್ರತಿಯೊಂದು ವಿಭಿನ್ನ, ವಿಶೇಷ. ಅದಕ್ಕೇ ಇದೊಂದು ಐತಿಹಾಸಿಕ, ದಕ್ಷಿಣ ಭಾರತದ ಕುಂಭಮೇಳ ಎಂಬ ಖ್ಯಾತಿಯನ್ನು ಹೊತ್ತಿದೆ. 
   

 • ಈ ಬಾರಿಯ ಮಹಾರಥೋತ್ಸವದಲ್ಲಿ 5 ರಿಂದ‌ 6 ಲಕ್ಷ ಭಕ್ತಾದಿಗಳು ಭಾಗಿಯಾಗಿದ್ದಾರೆ.

  Karnataka Districts15, Jan 2020, 9:50 AM

  ವಿದೇಶಗಳಿಂದಲೂ ಗವಿಮಠ ಅಜ್ಜನ ಜಾತ್ರೆಯ ವೈಭವ ವೀಕ್ಷಿಸಿದ ಭಕ್ತರು

  ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವ ಕೇವಲ ರಾಜ್ಯ, ದೇಶಕ್ಕೆ ಸೀಮಿತವಾಗಿಲ್ಲ. ಈಗ ನಾನಾ ದೇಶಗಳಲ್ಲಿಯೂ ಗವಿಮಠ ಭಕ್ತರು ಇದ್ದು, ಅಲ್ಲಿಯೂ ಜಾತ್ರೆಯ ರಥೋತ್ಸವವನ್ನು ನೇರವಾಗಿ ವೀಕ್ಷಣೆ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣಕ್ಕೆ ಗವಿಮಠದ ವತಿಯಿಂದ ಅಪ್ ಲೋಡ್ ಮಾಡಲಾಗುತ್ತದೆ ಮತ್ತು ನೇರ ಪ್ರಸಾರವೂ ಇರುತ್ತದೆ. ಇದನ್ನು ದೇಶ, ವಿದೇಶಗಳಲ್ಲಿ ನೋಡಿರುವ ವಿವರ ಲಭ್ಯವಾಗಿದೆ. 

 • ಅಜ್ಜನ ಜಾತ್ರೆಯಲ್ಲಿ ಸೇರಿದ ಭಕ್ತರು, ಡ್ರೋನ್ ಕ್ಯಾಮರದಲ್ಲಿ ಸೆರೆ

  Karnataka Districts15, Jan 2020, 8:56 AM

  ಕೊಪ್ಪಳದ ಗವಿಮಠ ಜಾತ್ರೆ: ಎರಡೇ ದಿನದಲ್ಲಿ 5 ಲಕ್ಷ ಭಕ್ತರಿಂದ ಪ್ರಸಾದ ಸ್ವೀಕಾರ

  ದಾಸೋಹಕ್ಕೆ ಹೆಸರಾದ ದಕ್ಷಿಣ ಭಾರತದ ಕುಂಭಮೇಳ ಖ್ಯಾತಿಯ ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದಲ್ಲಿ ಕೇವಲ 2 ದಿನದಲ್ಲಿ ಪ್ರಸಾದ ಸ್ವೀಕರಿಸಿದ ಭಕ್ತರ ಸಂಖ್ಯೆ 5 ಲಕ್ಷ. ಎರಡೂ ದಿನವೂ ಮುಂಜಾನೆ 9 ಗಂಟೆಗೆ ಆರಂಭವಾದ ದಾಸೋಹ ಸೇವೆ ಮುಗಿದಿದ್ದು ಮಧ್ಯರಾತ್ರಿ 2 ಗಂಟೆಯ ಬಳಿಕವೇ. 

 • Gavimatha

  Karnataka Districts13, Jan 2020, 8:48 AM

  ಕೊಪ್ಪಳದ ಜಾತ್ರೆಯಲ್ಲಿಯೂ ಮೋದಿ ಮೋದಿ, ಹೌದು ಹುಲಿಯಾದ್ದೇ ಹವಾ!

  ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಜಾತ್ರಾಮಹೋತ್ಸವದ ವೇದಿಕೆಗೆ ಆಗಮಿಸುತ್ತಿದ್ದಂತೆ ಪೈಪೋಟಿಯಲ್ಲಿ ‘ಮೋದಿ ಮೋದಿ’ ಎಂದು ಅನೇಕರು ಕೂಗಿದರೆ ಇನ್ನು ಕೆಲವರು ‘ಹೌದು ಹುಲಿಯಾ’ ಎಂದು ಸಹ ಕೂಗಿದ ಘಟನೆ ಭಾನುವಾರ ಕೊಪ್ಪಳದಲ್ಲಿ ನಡೆದಿದೆ.
   

 • Malati Holla

  Karnataka Districts13, Jan 2020, 8:29 AM

  ಗವಿಮಠ ರಥೋತ್ಸವಕ್ಕೆ ಚಾಲನೆ: ನನ್ನ ಜನ್ಮ ಸಾರ್ಥಕವಾಯಿತು, ಮಾಲತಿ ಹೊಳ್ಳ

  ಮಾಲತಿ ಹೊಳ್ಳ ಒಬ್ಬ ಮಹಿಳೆ, ಅಂಗವಿಕಲೆಯಾದ ನನಗೆ ರಥೋತ್ಸವಕ್ಕೆ ಚಾಲನೆ ನೀಡುವ ದೊಡ್ಡ ಅವಕಾಶ ನೀಡಲಾಗಿದೆ. ಇದರಿಂದ ನನ್ನ ಜನ್ಮ ಸಾರ್ಥಕವಾಯಿತು. ಇಂಥ ಅವಕಾಶ ಹಿಂದೆ ಬಂದಿಲ್ಲ, ಮುಂದೆ ಬರುವುದಿಲ್ಲ, ಇದುವೇ ಶ್ರೇಷ್ಠ ಅವಕಾಶವಾಗಿದ್ದು, ನಾನು ಪುನೀತಳಾಗಿದ್ದೇನೆ ಎಂದು ಖ್ಯಾತ ಕ್ರೀಡಾಪಟು ಡಾ. ಮಾಲತಿ ಹೊಳ್ಳ ಹೇಳಿದ್ದಾರೆ. 
   

 • undefined

  Karnataka Districts11, Jan 2020, 9:56 AM

  ಕೊಪ್ಪಳ: ಸಂಭ್ರಮದ ಗವಿಸಿದ್ಧೇಶ್ವರ ಪಲ್ಲಕ್ಕಿ ಉತ್ಸವ, ಭಕ್ತರಿಂದ 200 ಕ್ವಿಂಟಲ್‌ ಅಕ್ಕಿ ರವಾನೆ

  ಗವಿಮಠದ ಜಾತ್ರಾ ಮಹೋತ್ಸವದ ನಿಮಿತ್ತ ಶುಕ್ರವಾರ ಸಂಜೆ ಗವಿಸಿದ್ಧೇಶ್ವರ ಮೂರ್ತಿ (ಪಲ್ಲಕ್ಕಿ) ಕಳಸದ ಮೆರವಣಿಗೆ ಕೋಟೆ ಏರಿಯಾದಲ್ಲಿರುವ ಜಡೇಗೌಡರ ಮನೆಯಿಂದ ಗಡಿಯಾರ ಕಂಬ, ಜವಾಹರ ರಸ್ತೆ, ಕಿತ್ತೂರ ಚೆನ್ನಮ್ಮ ಸರ್ಕಲ್, ಕವಲೂರ ಓಣಿ, ಸಿದ್ಧೇಶ್ವರ ವೃತ್ತದ ಮಾರ್ಗವಾಗಿ ಗವಿಮಠದವರೆಗೆ ಸಕಲ ವಾದ್ಯಮೇಳದೊಂದಿಗೆ ಅದ್ಧೂರಿಯಾಗಿ ಜರುಗಿದೆ. 

 • volleyball

  Karnataka Districts22, Dec 2019, 8:21 AM

  ಕೊಪ್ಪಳ: ಗವಿಮಠ ಜಾತ್ರೆಯಲ್ಲಿ ಮಹಿಳೆಯರ ವಾಲಿಬಾಲ್‌

  ಶ್ರೀ ಗವಿಸಿದ್ಧೇಶ್ವರ ಜಾತ್ರಾಮಹೋತ್ಸವದಲ್ಲಿ ಇದೇ ಮೊದಲ ಬಾರಿಗೆ ರಾಜ್ಯಮಟ್ಟದ ಮಹಿಳೆಯರ ವಾಲ್‌ಬಾಲ್‌ ಪಂದ್ಯಾವಳಿ ಆಯೋಜಿಸಲಾಗಿದೆ. ಜಾತ್ರೆ ಎಂದರೇ ಕೇವಲ ದೇವರು, ಪೂಜೆಗೆ ಮಾತ್ರ ಸೀಮಿತವಲ್ಲ, ಅದೊಂದು ಸಂಪ್ರದಾಯ, ಬದುಕಿಗೆ ದಾರಿ ತೋರಿಸುವ ಪ್ರೇರಣಾದಾಯಕ ಕಾರ್ಯಕ್ರಮಗಳನ್ನು ಹಾಕಿಕೊಳ್ಳುವ ಮೂಲಕ ಗವಿಸಿದ್ಧೇಶ್ವರ ಶ್ರೀಗಳು ವರ್ಷದಿಂದ ವರ್ಷಕ್ಕೆ ಗವಿಮಠ ಜಾತ್ರೆಯ ಅರ್ಥಪೂರ್ಣತೆಯನ್ನು ಹೆಚ್ಚಳ ಮಾಡುತ್ತಿದ್ದಾರೆ.
   

 • Chariot

  Karnataka Districts6, Oct 2019, 10:24 AM

  ಅ.8 ರಂದು ಶಿರೋಳದ ಯಚ್ಚರಸ್ವಾಮಿ ಗವಿಮಠದ ಮಹಾರಥೋತ್ಸವ

  ತಾಲೂಕಿನ ಶಿರೋಳ ಗ್ರಾಮದ ಯಚ್ಚರಸ್ವಾಮಿ ಗವಿಮಠದ ಮಹಾರಥೋತ್ಸವವು ಯಚ್ಚರಸ್ವಾಮಿ ಶ್ರೀ ನೇತೃತ್ವದಲ್ಲಿ ಅ. 8ರ ಮಂಗಳವಾರ ಸಂಜೆ 5 ಗಂಟೆಗೆ ಭೈರನಹಟ್ಟಿದೊರೆಸ್ವಾಮಿ ವಿರಕ್ತಮಠ ಶಾಂತಲಿಂಗ ಶ್ರೀ ಸಮ್ಮುಖದಲ್ಲಿ ಸಕಲವಾದ್ಯ ವೈಭವಗಳೊಂದಿಗೆ ಹಾಗೂ ಪುರವಂತರ ಸೇವೆ ಜೊತೆಗೆ ಮಹಾರಥೋತ್ಸವ ಹಾಗೂ 6 ಗಂಟೆಗೆ ಬನ್ನಿ ಮುಡಿಯುವ ಕಾರ್ಯಕ್ರಮ ಜರುಗುವುದು.