Search results - 59 Results
 • Gadag11, Feb 2019, 3:43 PM IST

  ’ಹಿಂದುತ್ವವಾದಿ ಬಿಜೆಪಿಯಿಂದಲೇ ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಹಿನ್ನಡೆ’

  ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟಕ್ಕೆ ಸಹಕರಿಸದ ಬಿಜೆಪಿ ವಿರುದ್ಧ ತೋಂಟದಾರ್ಯ ಮಠದ ಡಾ.ಸಿದ್ಧರಾಮ ಶ್ರೀಗಳು ಆಕ್ರೋಶ ವ್ಯಕ್ತಪಡಿಸಿದರು. 'ಬಿಜೆಪಿ ಹಿಂದುತ್ವ ರಕ್ಷಕ ಪಕ್ಷ. ಹಿಂದುತ್ವವಾದಿ ಬಿಜೆಪಿಯಿಂದಲೇ ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಹಿನ್ನಡೆಯಾಯಿತು ಎಂದು ಡಾ. ಸಿದ್ಧರಾಮ ಶ್ರೀಗಳು ಆಕ್ರೋಶ ವ್ಯಕ್ತಪಡಿಸಿದರು. 

 • Dog

  Gadag5, Feb 2019, 3:38 PM IST

  ಶ್ವಾನ ‘ರಮ್ಯಾ’ ನಿಧನಕ್ಕೆ ಗದಗ ಪೊಲೀಸರ ಶೋಕ

  ಪೊಲೀಸ್ ಇಲಾಖೆಯಲ್ಲಿ 11 ವರ್ಷಗಳ ಕಾಲ ನಿಷ್ಠೆಯಿಂದ ಕಾರ್ಯನಿರ್ವಹಿಸಿದ್ದ ಶ್ವಾನ ರಮ್ಯಾ ಮೃತಪಟ್ಟಿದ್ದು, ಇಲ್ಲಿನ ಸಿಬ್ಬಂದಿಯಲ್ಲಿ ತೀವ್ರ ನೋವುಂಟು ಮಾಡಿದೆ. 

 • Gadag

  Gadag31, Dec 2018, 9:21 PM IST

  ದಾನದಲ್ಲಿಯೇ ಖುಷಿಕಾಣುವ ಗದಗದ ಅಶೋಕ ಸಮಾಜಕ್ಕೆ ಮಾದರಿ

  ಇತ್ತೀಚೆಗೆ ಮಾನವೀಯತೆ ಮರೆತು ಹಣ ಗಳಿಕೆಗೆ ಮುಂದಾಗುವವರೇ ಹೆಚ್ಚು. ಆದರೆ ಜಿಲ್ಲೆಯ ಗಜೇಂದ್ರಗಡ ಪಟ್ಟಣದ ಉದ್ಯಮಿ ಅಶೋಕ ಭಾಗಮಾರ ಕುಟುಂಬ ಕೊಟ್ಟಿದ್ದು ತನಗೆ ಬಚ್ಚಿಟ್ಟದ್ದು ಪರರಿಗೆ ಎಂಬ ಗಾದೆ ಮಾತಿನಂತೆ ತಾವು ವರ್ಷಪೂರ್ತಿ ದುಡಿದ ಹಣವನ್ನು ಬಚ್ಚಿಡದೇ ತಮ್ಮ ಸುತ್ತಲಿರುವ ಬಡ ಜನರಿಗೆ ಅನೇಕ ವಿಧದಲ್ಲಿ ದಾನ ಮಾಡಿ ಮಾದರಿಯಾಗಿದ್ದಾರೆ. ಹೌದು ಅಶೋಕ ಭಾಗಮಾರ ಕುಟುಂಬ ಕಳೆದ 8-10 ವರ್ಷಗಳಿಂದ ಹೆತ್ತವರಾದ ತಂದೆ ದೇವರಾಜ್ ಭಾಗಮಾರ ಹಾಗೂ ತಾಯಿ ಶಾಂತಾಬಾಯಿ ಭಾಗಮಾರ ಸ್ಮರಣಾರ್ಥ ಪ್ರತೀ ವರ್ಷ ಗಜೇಂದ್ರಗಡ ಪಟ್ಟಣದಲ್ಲಿನ ಬಡವರ ಬಾಳಲ್ಲಿ ಕೊಂಚ ಉಸಿರು ತುಂಬಿಸುವ ಕೆಲಸ ಮಾಡುತ್ತಿದ್ದಾರೆ.

  ಅದೇ ರೀತಿಯಾಗಿ ಈ ವರ್ಷವೂ ಕೂಡ ಸುಮಾರು  4 ಲಕ್ಷ ರೂ. ವೆಚ್ಚದಲ್ಲಿ ನಗರದ 1300ಕ್ಕೂ ಹೆಚ್ಚು ಕಡು ಬಡವರನ್ನ ಗುರುತಿಸಿ ಅವರಿಗೆ ಒಂದೊತ್ತಿನ ಊಟ, ಉಡಲು ಬಟ್ಟೆ, ಬೆಡ್‌ಶೀಟ್, ಚಾಪೆ, ರಗ್ಗು ಹಾಗೂ ಅಡುಗೆ ಮನೆಗೆ ಬೇಕಾಗುವಂತ ಅನೇಕ ಸಾಮಗ್ರಿಗಳನ್ನು ವಿತರಿಸಿದ್ದಾರೆ. ಅಲ್ಲದೇ ಈ ರೀತಿ ತಮ್ಮ ಶ್ರಮದ ಹಣವನ್ನ ಬಡವರಿಗೆ ಹಂಚುವ ಮೂಲಕ ಅವರ ಸಂತೋಷದಲ್ಲಿ ನಮ್ಮ ತಂದೆ-ತಾಯಿಯನ್ನ ಕಾಣುತ್ತಿರುವೆ. ಸಮಾಜದಲ್ಲಿನ ನಿರ್ಗತಿಕರಿಗೆ, ಬಡವರಿಗೆ ಹಾಗೂ ಅಸಹಾಯಕತೆಯಿಂದ ಬಳಲುವವರಿಗೆ ಸಹಾಯ ಮಾಡುವುದೇ ನಿಜವಾದ ಸೇವೆ. ಹೀಗಾಗಿ ಈ ಸೇವೆಯಿಂದ ತಾವು ಹಾಗೂ ತಮ್ಮ ಕುಟುಂಬ ಸಂತಸದಿಂದಿದೆ ಎಂದು ಅಶೋಕ ಭಾಗಮಾರ ಖುಷಿ ಹಂಚಿಕೊಳ್ಳುತ್ತಾರೆ.

 • Venkatarao Nadagouda

  Gadag9, Dec 2018, 4:49 PM IST

  ಪಶುವೈದ್ಯರಿಗೆ ಖಡಕ್ ವಾರ್ನಿಂಗ್ ಕೊಟ್ಟ ಸಚಿವ ನಾಡಗೌಡ

  ಪಶುವೈದ್ಯರು ಕೂಡಲೇ ಮಾತೃ ಇಲಾಖೆಗೆ ಹಾಜರಾಗದಿದ್ರೆ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಪಶುಸಂಗೋಪನಾ ಹಾಗೂ ಮೀನುಗಾರಿಕೆ ಸಚಿವ ವೆಂಕಟರಾವ್ ನಾಡಗೌಡ ಖಡಕ್ ಎಚ್ಚರಿಕೆ ನೀಡಿದ್ದಾರೆ.

 • Gadag5, Dec 2018, 6:09 PM IST

  ಸೂ... ಮಕ್ಳಾ....ಹೊಲಸು ಭಾಷೆಯಲ್ಲೇ ಬಿಜೆಪಿ ಶಾಸಕನ ಅವಾಜ್! ವಿಡಿಯೋ ವೈರಲ್

  ಅಧಿಕಾರ ಕೈಗೆ ಸಿಕ್ಕಿದ ಬಳಿಕ ನಾಲಗೆ ಹೆಚ್ಚು ಜವಾಬ್ದಾರಿಯುತವಾಗಿ ಚಲಾಯಿಸಬೇಕು.ಆದರೆ, ಅಧಿಕಾರವೇ ಮದವಾಗಿರುವ ಕೆಲವೊಂದು ರಾಜಕಾರಣಿಗಳಿಗೆ ನಾಲಗೆ ಹರಿಯಬಿಡುವುದು ಚಾಳಿ. ಇದೀಗ ಗದಗ ಜಿಲ್ಲೆಯ ಶಿರಹಟ್ಟಿ ಶಾಸಕ ರಾಮಣ್ಣ ಲಮಾಣಿ ನೂರಾರು ಮಂದಿಯ ಮುಂದೆಯೇ  ಕೆಟ್ಟ ಭಾಷೆ ಬಳಸಿ ಮಾತನಾಡುವ ವಿಡಿಯೋ ವೈರಲ್ ಆಗಿದೆ. ಕೆಲದಿನಗಳ ಹಿಂದೆ ದೇವದುರ್ಗ ಬಿಜೆಪಿ ಶಾಸಕ ಶಿವನಗೌಡ ನಾಯಕ್ ಅಧಿಕಾರಿಯೊಬ್ಬರಿಗೆ ಆಶ್ಲೀಲವಾಗಿ ಬೈದಿರುವ ಆಡಿಯೋ ಕ್ಲಿಪ್ ವೈರಲ್ ಆಗಿತ್ತು. 

 • Ram Mandir archive

  Gadag25, Nov 2018, 9:01 PM IST

  'ಹಿಂದುಗಳು ಎದ್ದೇಳಲ್ಲ, ಒಮ್ಮೆ ಎದ್ರೆ ಕೆಟ್ಟ ಶಕ್ತಿಗಳು ಉಳಿಯಲ್ಲ'

  ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡಲೇಬೇಕು ಎಂದು ಕೇಂದ್ರದ ಮೇಲೆ ಒತ್ತಡ ಹೇರಲು ದೇಶಾದ್ಯಂತ ಹಲವು ಕಡೆಗಳಲ್ಲಿ ಜನಾಗ್ರಹ ಸಭೆಗಳು ನಡೆಯುತ್ತಿವೆ.  ಕರ್ನಾಟಕದಲ್ಲೂ ಉಡುಪಿ, ಹುಬ್ಬಳ್ಳಿ, ಗದಗದಲ್ಲಿ ಬೃಹತ್​ ಸಮಾವೇಶಗಳು ನಡೆಯುತ್ತಿವೆ. ಅದರಂತೆ ಇಂದು [ಭಾನುವಾರ] ಗದಗನಲ್ಲೂ ಸಹ ಜನಾಗ್ರಹ ಸಭೆ ನಡೆಯಿತು.

 • Gadag

  NEWS14, Nov 2018, 10:35 PM IST

  ಅರೇ ಇದೇನಿದು..! ಶಾಸಕರೊಬ್ಬರ ಫೋಟೋ ಇಟ್ಟು ಶಿಕ್ಷಕನಿಂದ ಪೂಜೆ ..!

  ಗದಗ ಜಿಲ್ಲೆ ರೋಣ ವಿಧಾನ ಸಭಾ ಕ್ಷೇತ್ರದ ಶಾಸಕ ಕಳಕಪ್ಪ ಬಂಡಿ ಫೋಟೊವನ್ನು ದೇವರ ಜೊತೆ ಇಟ್ಟು ಪೂಜೆ ಮಾಡಿದ್ದಾರೆ. ಅಲ್ಲದೇ ಕಳಕಪ್ಪ ಬಂಡಿಗೆ ರಾಜಕೀಯದಲ್ಲಿ ಓಳ್ಳೆ ಸ್ಥಾನ - ಮಾನ ಸಿಗಲಿ ಅಂತ ದೀಡ ನಮಸ್ಕಾರ ಹಾಕಿದ್ದಾರೆ. 

 • NEWS11, Nov 2018, 1:47 PM IST

  ಈಶ್ವರಪ್ಪ ಒಬ್ಬ ಪೆದ್ದ, ಅವನ ತಲೆಯಲ್ಲಿ ಮೆದುಳಿಲ್ಲ: ಸಿದ್ದರಾಮಯ್ಯ

  ಉಪ ಚುನಾವಣೆಯಲ್ಲಿ ಜನತೆ ಬಿಜೆಪಿಯನ್ನು ತಿರಸ್ಕರಿಸಿದ್ದಾರೆ. ಎಲ್ಲಾ ಕಡೆಗಳಲ್ಲಿಯೂ ಭಾರೀ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಜನಾರ್ದನ ರೆಡ್ಡಿ ಪ್ರಕರಣದ ಬಗ್ಗೆ ಯಡಿಯೂರಪ್ಪನವರೇ ಹೇಳಿದ್ದಾರೆ. ಅವರು ಬಿಜೆಪಿಯಲ್ಲಿ ಇಲ್ಲ ಅಂತ. ಆ ಬಗ್ಗೆ ನಾನೇನು ಹೇಳುವುದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ. 

 • Delhi University Student Kills 2 Brothers

  CRIME30, Oct 2018, 6:15 PM IST

  ಗದಗ್‌ನಲ್ಲಿ ದಂಡುಪಾಳ್ಯ ಮಾದರಿಯಲ್ಲಿ ಕೊಲೆ ಮಾಡ್ತಿದ್ದ ಗ್ಯಾಂಗ್ ಪತ್ತೆ..!

  ಗದಗನಲ್ಲಿ ಪೊಲೀಸರು ಇಂದು [ಮಂಗಳವಾರ] ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ದಂಡುಪಾಳ್ಯ ಮಾದರಿಯಲ್ಲಿ ಕೊಲೆ ಮಾಡ್ತಿದ್ದ ಗ್ಯಾಂಗ್ ಅನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

 • HD Devegowda

  NEWS21, Oct 2018, 3:51 PM IST

  ತೋಂಟದಾರ್ಯ ಶ್ರೀಗಳ ಅಂತಿಮ ದರ್ಶನ ಪಡೆದ ಮಾಜಿ ಪ್ರಧಾನಿ

  ತೋಂಟದಾರ್ಯ ಶ್ರೀಗಳ ಅಂತಿಮ ದರ್ಶನ ಪಡೆದ ಮಾಜಿ ಪ್ರಧಾನಿ ದೇವೇಗೌಡ.

 • Tontadarya Seer

  NEWS21, Oct 2018, 3:08 PM IST

  'ಸಿದ್ದಲಿಂಗ ಸ್ವಾಮಿಗಳ ಆದರ್ಶದಿಂದ ಇಸ್ಲಾಂ ಧರ್ಮ ಬಿಟ್ಟು ಸನ್ಯಾಸಿ ಆಗಿದ್ದೇನೆ'

  ಭಾವುಕಾಗಿ ಮಾತನಾಡಿದ ಜೇವರ್ಗಿಯ ಸಿದ್ದಬಸವ ಕಬೀರ ಶ್ರೀಗಳು, ಸಿದ್ದಲಿಂಗ ಸ್ವಾಮಿಗಳ ಉಪನ್ಯಾಸ ಕೇಳಿ ಇಸ್ಲಾಂ ಧರ್ಮ ಬಿಟ್ಟು ಬಂದು ಸನ್ಯಾಸಿ ಆಗಿದ್ದೇನೆ. ಜೇವರ್ಗಿಯಲ್ಲಿರುವ ನನ್ನ ಮಠಕ್ಕೆ ಆಗಾಗ ಬರುತ್ತಿದ್ದರು ಎಂದು ಸಿದ್ದಲಿಂಗ ಸ್ವಾಮಿಗಳನ್ನು ನೆನೆದು ಭಾವುರಾದರು.

 • Siddarama swamiji

  NEWS21, Oct 2018, 2:25 PM IST

  ಗದಗ ತೋಂಟದಾರ್ಯ ಮಠಕ್ಕೆ ನೂತನ ಉತ್ತರಾಧಿಕಾರಿ ನೇಮಕ

  ಗದಗ ತೋಂಟದಾರ್ಯ ಮಠದ ನೂತನ ಪೀಠಾಧಿಪತಿಯಾಗಿ ನಾಗನೂರು ರುದ್ರಾಕ್ಷಿ ಮಠದ ಸಿದ್ದರಾಮ ಮಹಾಸ್ವಾಮಿಗಳನ್ನು ನೇಮಕ ಮಾಡಲಾಗಿದೆ.

 • Tontadarya Seer

  NEWS20, Oct 2018, 6:06 PM IST

  ತೋಂಟದಾರ್ಯ ಶ್ರೀಗಳ ಹಲವು ವಿಚಾರಗಳನ್ನು ಮೆಲುಕು ಹಾಕಿದ ಸಚಿವ HK ಪಾಟೀಲ್

  ತೋಂಟದಾರ್ಯ ಶ್ರೀಗಳ ಜೊತೆಗಿನ ಒಡನಾಟ ನೆನೆದು ಭಾವುಕಾರದ ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ ಪಾಟೀಲ್  .

 • NEWS20, Oct 2018, 2:53 PM IST

  ತೋಂಟದಾರ್ಯ ಶ್ರೀಗಳ ಬಗ್ಗೆ ತಿಳಿದಿರಬೇಕಾದ ಇಂಟರೆಸ್ಟಿಂಗ್ ವಿಚಾರಗಳು

  ತೀವ್ರ ಹೃದಯಾಘಾತದಿಂದ ಗದಗಿನ ತೋಂಟದಾರ್ಯ ಸಿದ್ಧಲಿಂಗ ಶ್ರೀಗಳು ಲಿಂಗೈಕ್ಯರಾಗಿದ್ದಾರೆ. 

 • NEWS20, Oct 2018, 12:35 PM IST

  ಹೃದಯಾಘಾತದಿಂದ ತೋಂಟದಾರ್ಯ ಶ್ರೀಗಳು ಲಿಂಗೈಕ್ಯ

  ಗದಗದ ತೋಂಟದಾರ್ಯ ಸಿದ್ಧಲಿಂಗ ಸ್ವಾಮೀಜಿ ತೀವ್ರ ಹೃದಯಾಘಾತದಿಂದ ಕೊನೆ ಉಸಿರೆಳೆದಿದ್ದಾರೆ.