ಕ್ರೀಡೆ  

(Search results - 61)
 • INDIA VS SOUTH KOREA KABADDI

  Dharwad10, Oct 2019, 7:30 AM IST

  ಅ.11 ರಿಂದ ಧಾರವಾಡದಲ್ಲಿ ರಾಜ್ಯ ಮಟ್ಟದ ಹೊನಲು-ಬೆಳಕಿನ ಕಬಡ್ಡಿ

  ಮೊಟ್ಟಮೊದಲ ಬಾರಿಗೆ ರಾಜ್ಯ ಮಟ್ಟದ ಪದವಿಪೂರ್ವ ವಿದ್ಯಾರ್ಥಿ, ವಿದ್ಯಾರ್ಥಿನಿಯರ ಹೊನಲು- ಬೆಳಕಿನ ಕಬಡ್ಡಿ ಪಂದ್ಯಾ​ವ​ಳಿ​ಯ​ನ್ನು ಅ. 11 ರಿಂದ 3 ದಿನ​ಗಳ ಕಾಲ ನಗರದ ಆರ್‌.ಎನ್‌. ಶೆಟ್ಟಿ ಒಳಾಂಗಣ ಕ್ರೀಡಾಂಗಣದ ಮ್ಯಾಟ್‌ (ಅಂತಾರಾಷ್ಟ್ರೀಯ ಗುಣಮಟ್ಟದ ಮೈದಾನ) ಮೇಲೆ ನಡೆ​ಸ​ಲಾ​ಗು​ತ್ತಿದೆ ಎಂದು ಪದವಿ ಪೂರ್ವ ಮತ್ತು ವೃತ್ತಿ ಶಿಕ್ಷಣ ಇಲಾಖೆ ಪ್ರಭಾರಿ ಉಪ ನಿರ್ದೇ​ಶ​ಕಿ ಶಾರದಾ ಕಿರೇ​ಸೂರ ಹೇಳಿದ್ದಾರೆ.
   

 • दम्पती ने पुणे पुलिस आयुक्त के. वेंकटेशम को एक लिखित आवेदन दिया था।

  Karnataka Districts4, Oct 2019, 8:07 AM IST

  ವೃದ್ಧಾಶ್ರಮಗಳು ಹೆಚ್ಚುವುದು ಸಮಾಜಕ್ಕೆ ಒಳಿತಲ್ಲ: ಸಿಂಘಿ

  ಆಧುನಿಕ ಜಗತ್ತಿನಲ್ಲಿ ವಯಸ್ಸಾದ ತಂದೆ ತಾಯಿ ಹಾಗೂ ಹಿರಿಯರನ್ನು ನಿರ್ಲಕ್ಷಿಸಲಾಗುತ್ತಿದೆ. ಪ್ರೀತಿಯಿಂದ ಸೇವೆ ಮಾಡುವುದರ ಬದಲು, ವೃದ್ಧಾಶ್ರಮಕ್ಕೆ ಕಳುಹಿಸುವ ಪರಿಪಾಠ ಬೆಳೆಯುತ್ತಿದೆ. ವೃದ್ಧಾಶ್ರಮಗಳು ಹೆಚ್ಚುವುದು ಸಮಾಜಕ್ಕೆ ಒಳಿತಲ್ಲ ಎಂದು ಮಹಾವೀರ ಲಿಂಬ್‌ ಸೆಂಟರ್‌ ಮಹೇಂದ್ರ ಸಿಂಘಿ ಹೇಳಿದರು.
   

 • kambala yakshagana ct rav

  Karnataka Districts1, Oct 2019, 10:37 AM IST

  ಕಂಬಳ, ಯಕ್ಷಗಾನ ಪ್ರವಾಸೋದ್ಯಮ: ಸಿ.ಟಿ.ರವಿ ಸೂಚನೆ

  ದಕ್ಷಿಣ ಕನ್ನಡ ಜಿಲ್ಲೆಯ ವಿಶಿಷ್ಟಕಂಬಳ ಕ್ರೀಡೆ, ಯಕ್ಷಗಾನ ಇತ್ಯಾದಿಗಳನ್ನು ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಬಳಕೆ ಮಾಡುವಂತೆ ಪ್ರವಾಸೋದ್ಯಮ, ಕನ್ನಡ ಸಂಸ್ಕೃತಿ ಸಚಿವ ಸಿ.ಟಿ. ರವಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಮುಂದೆ ಕರಾವಳಿಯ ಸಂಸ್ಕೃತಿಯ ಭಾಗವಾದ ಯಕ್ಷಗಾನ ಹಾಗೂ ಕಂಬಳ ಪ್ರವಾಸೋದ್ಯಮದಲ್ಲಿಯೂ ಮಿಂಚಲಿದೆ.

 • NEWS30, Sep 2019, 12:14 AM IST

  ಶಾಪ್ ಡಿಸ್ಪ್ಲೇಯಲ್ಲಿ ಗಂಟೆಗಟ್ಟಲೇ ಪ್ಲೇ ಆದ ನೀಲಿ ಚಿತ್ರ...ಯಾರೇನು ಮಾಡಕಾಗಿಲ್ಲ!

  ಕ್ರೀಡಾ ಸಾಮಗ್ರಿಗಳ ಅಂಗಡಿಯ ಡಿಸ್ಪ್ಲೇಯಲ್ಲಿ ಬೆಳಗ್ಗೆ ಇದ್ದಕ್ಕಿದ್ದಂತೆ ನೀಲಿ ಚಿತ್ರ ಪ್ರದರ್ಶಿತವಾಗತೊಡಗಿದೆ. ಅಂಗಡಿ ಮಾಲೀಕರು ಬಂದು ಆಫ್ ಮಾಡುವವರೆಗೂ ಹಲವಾರು ಜನ ಮುಜುಗರಕ್ಕೆ ಒಳಗಾಗಿದ್ದಾರೆ.

 • Sports Park

  Karnataka Districts28, Sep 2019, 11:30 AM IST

  ಫಿಯರ್ ಫ್ಯಾಕ್ಟರ್: ಮೈಸೂರಿನಲ್ಲಿ ಪ್ರಥಮ ಸಾಹಸ ಕ್ರೀಡೆ ಉದ್ಯಾನವನ

  ಸಮಾನ್ಯ ಉದ್ಯಾನವನಗಳು ಎಲ್ಲ ಕಡೆಯಲ್ಲೂ ಇರುತ್ತವೆ. ಅವು ಸಾಮಾನ್ಯ. ಮೈಸೂರಿನಲ್ಲೀಗ ಸಾಹಸ ಕ್ರೀಡೆಗಳ ಉದ್ಯಾನವ ನಿರ್ಮಿಸಲಾಗಿದೆ. ಈ ಉದ್ಯಾನವನದಲ್ಲಿ ಮಕ್ಕಳು, ಯುವಕರು ಸುಮಾರು 30 ಬಗೆಯ ಸಾಹಸ ಚಟುವಟಿಕೆಗಳು, 25 ಅಡಿ ಎತ್ತರದ ಜಿಪ್‌ಲೈನ್, ಕೆಸರು ಗದ್ದೆ ಓಟ, ಮಳೆ ನೃತ್ಯ ಮುಂತಾದ ಆಟಗಳನ್ನು ಅಳವಡಿಸಲಾಗಿದೆ.

 • চ্যাম্পিয়নদের পুরস্কার দিলেন ক্রীড়ামন্ত্রী

  SPORTS25, Sep 2019, 3:35 PM IST

  ಕುಸ್ತಿಯನ್ನು ರಾಷ್ಟ್ರೀಯ ಕ್ರೀಡೆಯನ್ನಾಗಿ ಮಾಡಿ: ಭಜರಂಗ್ ಆಗ್ರಹ

  ಭಾರತೀಯ ಕುಸ್ತಿಪಟುಗಳು ವಿಶ್ವ ಚಾಂಪಿಯನ್‌ಶಿಪ್, ಒಲಿಂಪಿಕ್ಸ್’ಗಳಲ್ಲಿ ಸತತವಾಗಿ ಪದಕ ಗೆಲ್ಲುತ್ತಿರುವ ಹಿನ್ನೆಲೆಯಲ್ಲಿ, ಕುಸ್ತಿ ರಾಷ್ಟ್ರೀಯ ಕ್ರೀಡೆ ಎಂದು ಕರೆಸಿಕೊಳ್ಳಲು ಯೋಗ್ಯ ಎಂದು ಕೇಂದ್ರ ಕ್ರೀಡಾ ಸಚಿವಾಲಯದಿಂದ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದ ವೇಳೆ ಅವರು ಹೇಳಿದರು.

 • PV Sindhu

  Karnataka Districts20, Sep 2019, 8:43 AM IST

  ದಸರಾ ಕ್ರೀಡಾಕೂಟ ಉದ್ಘಾಟಿಸಲಿರುವ ಪಿ.ವಿ.ಸಿಂಧು

  ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಅಂಗವಾಗಿ ನಡೆಯುವ ದಸರಾ ಕ್ರೀಡಾಕೂಟವನ್ನು ಬ್ಯಾಡ್ಮಿಂಟನ್‌ ಆಟಗಾರ್ತಿ ಪಿ.ವಿ.ಸಿಂಧು ಅವರು ಉದ್ಘಾಟಿಸಲಿದ್ದಾರೆ. ಅ. 1 ರಂದು ಕ್ರೀಡಾಕೂಟ ಮತ್ತು ಯುವ ದಸರಾ ಉದ್ಘಾಟನೆಯಾಗಲಿದೆ. 

 • ivan d'souza

  Karnataka Districts18, Sep 2019, 2:45 PM IST

  ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟಕ್ಕೆ ಚಾಲನೆ ನೀಡಿದ ಐವನ್‌ ಡಿಸೋಜ

  ಎಲ್ಲ ವಿಶ್ವವಿದ್ಯಾನಿಲಯಗಳಲ್ಲಿ ಕ್ರೀಡೆಯಲ್ಲಿ ಸತತವಾಗಿ ಭಾಗವಹಿಸಿ ಜಿಲ್ಲೆ, ರಾಜ್ಯ, ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿದ ವಿದ್ಯಾರ್ಥಿಗಳಿಗೆ ಗ್ರೇಸ್‌ ಅಂಕಗಳನ್ನು ನೀಡುವ ನಿಯಮವನ್ನು ಜಾರಿಗೊಳಿಸುವ ಚಿಂತನೆ ನಡೆಸಲಾಗಿದೆ ಎಂದು ವಿಧಾನಪರಿಷತ್‌ ಸದಸ್ಯ ಐವನ್‌ ಡಿಸೋಜ ತಿಳಿಸಿದ್ದಾರೆ.
   

 • Nithin Anjaneya Muaythai
  Video Icon

  SPORTS12, Sep 2019, 6:31 PM IST

  ಮುಯೆ ಥಾಯ್ ಬಾಕ್ಸಿಂಗ್ ಚಾಂಪಿಯನ್‌ಶಿಪ್; ಕನ್ನಡಿಗ ನಿತಿನ್ ಆಂಜನೇಯಗೆ ಚಿನ್ನ!

  ಮಣಿಪುರ(ಸೆ.12): ಮುಯೆ ಥಾಯ್ ಬಾಕ್ಸಿಂಗ್ ಚಾಂಪಿಯನ್‌ಶಿಪ್ ಟೂರ್ನಿಯ ಲೈಟ್ ವೆಯ್ಟ್ ವಿಭಾಗದಲ್ಲಿ ಕರ್ನಾಟಕದ  ನಿತಿನ್ ಆಂಜನೇಯ ಚಿನ್ನದ ಪದಕ ಗೆದ್ದಿದ್ದಾರೆ. ಓವರಾಲ್ ಟೂರ್ನಿಯಲ್ಲಿ 2ನೇ ಸ್ಥಾನ ಸಂಪಾದಿಸಿರುವ ಅಂಜನೇಯ ಕರ್ನಾಟಕದ ಕೀರ್ತಿ ಪತಾಕೆಯನ್ನು ಎತ್ತರಕ್ಕೆ ಹಾರಿಸಿದ್ದಾರೆ.  ಥೈಲ್ಯಾಂಡ್ ನ ರಾಷ್ಟ್ರೀಯ ಕ್ರೀಡೆಯಾಗಿರುವ ಮುಯೆ ಥಾಯ್ ಬಾಕ್ಸಿಂಗ್ ಕ್ರೀಡೆ ಬ್ರುಟಲ್ ಫೈಟ್ ಎಂದೇ ಖ್ಯಾತಿ ಪಡೆದಿದೆ. 

 • Sindhu

  SPORTS25, Aug 2019, 9:06 PM IST

  ವಿಶ್ವ ಚಾಂಪಿಯನ್‌ಶಿಪ್‌ ಗೆದ್ದ ಸಿಂಧುಗೆ ಬಹುಮಾನ ಘೋಷಿಸಿದ ಯಡಿಯೂರಪ್ಪ

  ವರ್ಲ್ಡ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ ಗೆದ್ದ ಭಾರತದ ಮೊದಲ ಆಟಗಾರ್ತಿ ಎಂಬ ಖ್ಯಾತಿಗೆ ಭಾಜನರಾಗಿರುವ ಪಿ.ವಿ.ಸಿಂಧುಗೆ ಕರ್ನಾಟಕ ಸರ್ಕಾರ 5 ಲಕ್ಷ ರೂ. ಘೋಷಣೆ ಮಾಡಿದೆ.

 • Sports India
  Video Icon

  SPORTS13, Aug 2019, 9:28 PM IST

  ಸ್ವತಂತ್ರ ಭಾರತದ 7 ದಶಕಗಳಲ್ಲಿ 7 ಕ್ರೀಡಾ ಸಾಧನೆಯ ಹಿನ್ನೋಟ!

  ಭಾರತ 73ನೇ ಸ್ವಾತಂತ್ರ್ಯ ದಿನಾಚರಣೆಗೆ ಸಜ್ಜಾಗಿದೆ.  ಆಗಸ್ಟ್ 15, 1947ರಲ್ಲಿ ಬ್ರಿಟಿಷರಿಂದ ಮುಕ್ತಗೊಂಡ ಭಾರತ ಇದೀಗ ವಿಶ್ವದಲ್ಲೇ ಬಲಿಷ್ಠ ರಾಷ್ಟ್ರವಾಗಿ ಹೊರಹೊಮ್ಮಿದೆ.  ಮಂಗಳನ ಅಂಗಳ ಪ್ರಯಾಣ ಸೇರಿದಂತೆ ಎಲ್ಲಾ ಕ್ಷೇತ್ರದಲ್ಲಿ ಭಾರತ ಮಿಂಚಿನ ವೇಗದಲ್ಲಿ ಮುನ್ನಗ್ಗುತ್ತಿದೆ. ಸ್ವತಂತ್ರ ಭಾರತ ಕ್ರೀಡೆಯಲ್ಲೂ  ದಾಖಲೆ ಬರೆದಿದೆ. ಕಳೆದ 7  ದಶಕಗಳಲ್ಲಿ ಭಾರತ ಕ್ರೀಡಾ ಕ್ಷೇತ್ರದಲ್ಲಿ ಸಾವಿರಕ್ಕೂ ಹೆಚ್ಚಿನ ಐತಿಹಾಸಿಕ ಸಾಧನೆ ಮಾಡಿದೆ. ಲಕ್ಷಕ್ಕೂ ಹೆಚ್ಚಿನ ಕ್ರೀಡಾಪಟುಗಳು  ಮಿಂಚಿದ್ದಾರೆ. ಇದರಲ್ಲಿ ಪ್ರಮುಖ 7 ಸ್ಮರಣೀಯ ಹಾಗೂ ದೇಶದ ಚರಿಷ್ಮಾ ಬದಲಿಸಿದ ಘಟನೆಗಳು ಇಲ್ಲಿವೆ

 • Hockey 2

  SPORTS7, Aug 2019, 5:03 PM IST

  ಬೆಂಗಳೂರು ಕಪ್; ಅಖಿಲ ಭಾರತ ಹಾಕಿ ಟೂರ್ನಿಗೆ ಕೌಂಟ್‌ಡೌನ್!

  ಭಾರತದ ಹಾಕಿ ಗತವೈಭವ ಮತ್ತೆ ಮರುಕಳಿಸುವತ್ತ ಹೆಜ್ಜೆ ಹಾಕುತ್ತಿದೆ.  ಕರ್ನಾಟಕದ ಹಾಕಿ ರಾಜಧಾನಿ ಕೊಡಗಿನಲ್ಲಿ ಮಾತ್ರವಲ್ಲ, ಇದೀಗ ಇತರ ಜಿಲ್ಲೆಗಳಲ್ಲೂ ಹಾಕಿ ಕ್ರೀಡೆ ಜನಪ್ರಿಯವಾಗುತ್ತಿದೆ. ಪ್ರತಿಭಾನ್ವಿತರು ಮಿಂಚಿನ ಪ್ರದರ್ಶನದ ಮೂಲಕ ಗಮನಸೆಳೆಯುತ್ತಿದ್ದಾರೆ. ಇದೀಗ ಪ್ರತಿಭೆಗಳ  ಅನ್ವೇಷಣೆಗೆ ಬೆಂಗಳೂರು ರೆಡಿಯಾಗಿದೆ. ಇದಕ್ಕಾಗಿ ಉದ್ಯಾನ ನಗರಿ ಅಖಿಲ ಭಾರತ ಹಾಕಿ ಟೂರ್ನಿ ಆಯೋಜನೆಗೆ ಸಜ್ಜಾಗಿದೆ. ದೇಶದ 8 ಪ್ರಮುಖ ತಂಡಗಳು ಪ್ರಶಸ್ತಿಗಾಗಿ ಕಾದಾಡಲಿದ್ದು, ಹಾಕಿ ಇಂಡಿಯಾದ ಸ್ಟಾರ್ ಆಟಗಾರರು ಕಣಕ್ಕಿಳಿಯುತ್ತಿದ್ದಾರೆ. ಈ ಟೂರ್ನಿ ಆಗಸ್ಟ್ 10 ರಿಂದ ಆರಂಭವಾಗಲಿದೆ. ಈ ಕುರಿತ ವಿವರ ಇಲ್ಲಿದೆ.

 • Swimming

  SPORTS2, Aug 2019, 11:03 AM IST

  ರಾಜ್ಯ ಈಜು: ಬಸವನಗುಡಿ ಕೇಂದ್ರಕ್ಕೆ ಸಮಗ್ರ ಪ್ರಶಸ್ತಿ

  ಕ್ರಿಕೆಟ್ ಮಾತ್ರವಲ್ಲ ಕರ್ನಾಟಕದಲ್ಲಿ ಇತರ ಕ್ರೀಡೆಗಳೂ ಅಷ್ಟೇ ಜನಪ್ರಿಯಾವಾಗಿದೆ. ಅದರಲ್ಲೂ ಕರ್ನಾಟಕದ ಈಜು ಪಟುಗಳು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿದ್ದಾರೆ. ಇದೀಗ ರಾಜ್ಯದಲ್ಲಿನ  ಈಜು ಚಾಂಪಿಯನ್‌ಶಿಪ್‍‌ನಲ್ಲಿ ಬಸವನಗುಡಿ ಕೇಂದ್ರ ದಾಖಲೆ ಬರೆದಿದೆ. 
   

 • Trevor Bayliss
  Video Icon

  Sports17, Jul 2019, 7:52 PM IST

  ವಿಶ್ವಕಪ್ ಚಾಂಪಿಯನ್ ಕೋಚ್ ಟ್ರಾವರ್ ಬೇಲಿಸ್ KKR ಗುರು..?

  ಇಂಗ್ಲೆಂಡ್ ವಿಶ್ವಕಪ್ ಗೆಲುವಿಗೆ ಪ್ರಮುಖ ಕಾರಣರಾಗಿರುವ ಕೋಚ್ ಟ್ರಾವರ್ ಬೈಲಿಸ್‌ರನ್ನು ಕೋಲ್ಕತಾ ನೈಟ್ ರೈಡರ್ಸ್ ತಂಡದ ಮುಖ್ಯ ಕೋಚ್ ಆಗಿ ನೇಮಕವಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ಬ್ಯಾಟಿಂಗ್ ಕೋಚ್ ಆಗಿ ನ್ಯೂಜಿಲೆಂಡ್ ಮಾಜಿ ಕ್ರಿಕೆಟಿಗ ಬ್ರೆಂಡನ್ ಮೆಕ್ಕಲಂರನ್ನು ಆಯ್ಕೆ ಮಾಡಲಾಗಿದೆ. ಮುಖ್ಯ ಕೋಚ್ ಆಗಿದ್ದ ಜಾಕ್ ಕಾಲಿಸ್ ಹಾಗೂ ಸಹಾಯಕ ಕೋಚ್ ಸೈಮನ್ ಕ್ಯಾಟಿಚ್ ದಿಢೀರ್ ವಿದಾಯ ಹೇಳಿದ್ದರು. ಹೀಗಾಗಿ ಕೆಕೆಆರ್ ಸಹ-ಮಾಲೀಕ ಶಾರುಖ್ ಖಾನ್ ಇದೀಗ ಚಾಂಪಿಯನ್ ಕೋಚ್ ಆಯ್ಕೆ ಮಾಡಿ 3ನೇ ಐಪಿಎಲ್ ಟ್ರೋಫಿಯತ್ತ ಚಿತ್ತ ನೆಟ್ಟಿದ್ದಾರೆ ಎನ್ನಲಾಗಿದೆ.

 • williamson lead new zealand

  World Cup15, Jul 2019, 5:46 PM IST

  ಕ್ರೀಡೆಗೆ ಬರಬೇಡಿ; ವಿಶ್ವಕಪ್ ಬಳಿಕ ಮಕ್ಕಳಲ್ಲಿ ನ್ಯೂಜಿಲೆಂಡ್ ಕ್ರಿಕೆಟಿಗನ ಮನವಿ!

  ಇಂಗ್ಲೆಂಡ್ ವಿರುದ್ಧದ ವಿಶ್ವಕಪ್ ಫೈನಲ್ ಪಂದ್ಯ ಸೋತ ನ್ಯೂಜಿಲೆಂಡ್ ತಂಡ ತೀವ್ರ ಆಘಾತಕ್ಕೊಳಗಾಗಿದೆ. ಸೋಲಿನ ನೋವಿನ ಬೆನ್ನಲ್ಲೇ ನ್ಯೂಜಿಲೆಂಡ್ ಕ್ರಿಕೆಟಿಗ ಜೇಮ್ಸ್ ನೀಶನ್ ಮಕ್ಕಳಲ್ಲಿ ಮನವಿ ಮಾಡಿದ್ದಾರೆ. ಇಲ್ಲಿದೆ ವಿವರ.