ಕ್ರೀಡಾಕೂಟ  

(Search results - 90)
 • sree kanteerava stadium

  OTHER SPORTS20, Mar 2020, 4:35 PM IST

  ಭಾರತದಲ್ಲಿ ಏ.15ರ ವರೆಗೂ ಯಾವುದೇ ಟೂರ್ನಿಗೆ ಅವಕಾಶವಿಲ್ಲ; ಕೇಂದ್ರ ಸರ್ಕಾರ!

  ಕೊರೋನಾ ವೈರಸ್ ತಡೆಗೆ ಹಲವು ಕ್ರಮಗಳು ಕೈಗೊಳ್ಳುತ್ತಿದ್ದರೂ ಸೋಂಕು ಹತೋಟಿಗೆ ಬಂದಿಲ್ಲ. ಹೀಗಾಗಿ ಎಲ್ಲಾ ಕ್ರೀಡಾಕೂಟಗಳು, ಟೂರ್ನಿಗಳನ್ನು ರದ್ದುಮಾಡಲು ಕೇಂದ್ರ ಕ್ರೀಡಾ ಸಚಿವಾಲಯ ಕಟ್ಟು ನಿಟ್ಟಿನ ಆದೇಶ ನೀಡಿದೆ. 
   

 • টোকিও অলিম্পিক

  OTHER SPORTS20, Mar 2020, 2:31 PM IST

  ಕೊರೋನಾ ಆತಂಕವಿದ್ದರೂ ಒಲಿಂಪಿಕ್ಸ್ ನಡೆದರೆ ಭಾರತದ ಸ್ಪರ್ಧೆ ಖಚಿತ!

  ಕೊರೋನಾ ವೈರಸ್ ಆತಂಕದಿಂದ ಹಲವು ಅರ್ಹತಾ ಟೂರ್ನಿಗಳು ರದ್ದಾಗಿದೆ. ಕೆಲವು ಮುಂದೂಡಲ್ಪಟ್ಟಿವೆ. ಆದರೆ ಒಲಿಂಪಿಕ್ಸ್ ಕ್ರೀಡಾಕೂಟ ನಿಗದಿತ ವೇಳಾಪಟ್ಟಿಯಂತೆ ನಡೆಯಲಿದೆ ಅನ್ನೋ ಮಾತುಗಳು ಕೇಳಿ ಬರುತ್ತಿದೆ. ಇದೀಗ ಭಾರತ ಕೂಡ ಯಾವುದೇ ಆತಂಕವಿದ್ದರೂ ಸ್ಪರ್ಧಿಸುವುದಾಗಿ ಸ್ಪಷ್ಟಪಡಿಸಿದೆ. 
   

 • coronavirus hero

  Cricket14, Mar 2020, 10:30 AM IST

  ಕೊರೋನಾ ವೈರಸ್‌ನಿಂದ ರದ್ದಾದ ಕ್ರಿಕೆಟ್ ಹಾಗೂ ಕ್ರೀಡಾಕೂಟದ ವಿವರ!

  ಕೊರೋನಾ ವೈರಸ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ವಿಶ್ವದಲ್ಲಿನ ಎಲ್ಲಾ ಕಾರ್ಯಕ್ರಮಗಳು ರದ್ದಾಗಿದೆ. ಇದರ ಜೊತೆಗೆ ಕ್ರಿಕೆಟ್, ಕ್ರೀಡೆಗಳೂ ಕೂಡ ರದ್ದಾಗಿದೆ. ವೈರಸ್ ಹತೋಟಿಗೆ ಬರುವ ವರೆಗೂ ಯಾವುದೇ ಟೂರ್ನಿ ನಡೆಯುವುದು ಅನುಮಾನವಾಗಿದೆ. ಕೊರೋನಾ ವೈರಸ್‌ನಿಂದ ರದ್ದಾದ ಟೂರ್ನಿ ವಿವರ ಇಲ್ಲಿದೆ.

 • Kane Richardson

  Cricket14, Mar 2020, 9:31 AM IST

  ಆಸೀಸ್ ಕ್ರಿಕೆಟಿಗ ರಿಚರ್ಡ್ಸನ್‌ಗೆ ಕೊರೋನಾ ಶಂಕೆ, ಕೊಠಡಿಯಲ್ಲಿ ಕೂಡಿಟ್ಟು ಪರೀಕ್ಷೆ!

  ಕೊರೋನಾ ವೈರಸ್‌ನಿಂದಾಗಿ ಕ್ರಿಕೆಟ್ ಟೂರ್ನಿಗಳು ರದ್ದಾಗುತ್ತಿದೆ. ಕ್ರೀಡಾಕೂಟಗಳು ಮುಂದೂಲ್ಪಟ್ಟಿದೆ. ಸದ್ಯ ನಡೆಯುತ್ತಿರುವ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ನಡುವಿನ ಏಕದಿನ ಸರಣಿ ಪ್ರೇಕ್ಷಕರ ಪ್ರವೇಶ ನಿರಾಕರಿಸಿ ಪಂದ್ಯ ಆಯೋಜಿಸಲಾಗಿತ್ತು. ಇದೇ ಪಂದ್ಯದಲ್ಲಿ ಆಸೀಸ್ ಕ್ರಿಕೆಟಿಗ ಕೇನ್ ರಿಚರ್ಡ್ಸನ್ ಮೇಲೆ ಕೊರೋನಾ ಶಂಕೆ ವ್ಯಕ್ತವಾದ ಕಾರಣ ಸಂಕಷ್ಠ ಅನುಭವಿಸಬೇಕಾಯಿತು.

 • bcci ipl

  IPL13, Mar 2020, 3:28 PM IST

  ಕೊರೋನಾ ವೈರಸ್; IPL 2020 ಟೂರ್ನಿ ರದ್ದು ಮಾಡಿದ ಬಿಸಿಸಿಐ

  ಕೊರೋನಾ ವೈರಸ್ ಪ್ರಕರಣಗಳು ಭಾರತದಲ್ಲಿ ಹೆಚ್ಚಾಗುತ್ತಿದ್ದಂತೆ ಹಲವು ಕ್ರೀಡಾಕೂಟಗಳು ರದ್ದಾಗಿತ್ತು. ಆದರೆ ಐಪಿಎಲ್ ಟೂರ್ನಿ ವೇಳಾಪಟ್ಟಿ ಪ್ರಕಾರ ನಡೆಸಲು ಬಿಸಿಸಿಐ ನಿರ್ಧರಿಸಿತ್ತು. ವೈರಸ್ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ 13ನೇ ಆವೃತ್ತಿ ಐಪಿಎಲ್ ಟೂರ್ನಿಯನ್ನು ಎಪ್ರಿಲ್ 15ರ ವರೆಗೆ ಬಿಸಿಸಿಐ ರದ್ದು ಮಾಡಿದೆ. 

 • ಮೇ. 24 ರಂದು IPL 2020 ಫೈನಲ್ ಪಂದ್ಯ ಆಯೋಜನೆ

  IPL11, Mar 2020, 4:04 PM IST

  ಕೊರೋನಾ ವೈರಸ್ ಆತಂಕ; IPL ವೇಳಾಪಟ್ಟಿಯಲ್ಲಿ ಕೊಂಚ ಬದಲಾವಣೆ?

  ಮುಂಬೈ(ಮಾ.11): ಭಾರತದಲ್ಲಿ ಕೊರೋನಾ ವೈರಸ್ ಪತ್ತೆಯಾದ ಬೆನ್ನಲ್ಲೇ ಹಲವು ಕಾರ್ಯಕ್ರಮಗಳು ರದ್ದಾಗಿದೆ. ಶೂಟಿಂಗ್ ವಿಶ್ವಕಪ್ ಸೇರಿದಂತೆ ಕೆಲ ಕ್ರೀಡಾಕೂಟಗಳು ಮುಂದೂಡಲ್ಪಟ್ಟಿದೆ. ಇದೀಗ ಐಪಿಎಲ್ ಟೂರ್ನಿಗೂ ಬಿಸಿ ತಟ್ಟಿದೆ. ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ನಿಗದಿತ ವೇಳಾಪಟ್ಟಿಯಂತೆ ನಡೆಯಲಿದೆ ಎಂದಿದ್ದಾರೆ. ಆದರೆ ಕೇಂದ್ರ ಆರೋಗ್ಯ ಸಚಿವಾಲಯ ಹಾಗೂ ಆಯಾ ರಾಜ್ಯಗಳ ಆರೋಗ್ಯ ಇಲಾಖೆಯ ಸೂಚನೆಯಿಂದ ವೇಳಾಪಟ್ಟಿಯಲ್ಲಿ ಕೊಂಚ ಬದಲಾವಣೆ ಮಾಡಲು ಬಿಸಿಸಿಐ ಮುಂದಾಗಿದೆ. 

 • Shooting

  OTHER SPORTS27, Feb 2020, 10:27 AM IST

  ಕುಸ್ತಿ ಪಟು ಸಾಕ್ಷಿಗೆ ಸೋಲು, ಶೂಟಿಂಗ್ ವಿಶ್ವಕಪ್‌‌ನಿಂದ 6 ರಾಷ್ಟ್ರ ಹಿಂದಕ್ಕೆ!

  ರಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಪದಕ ಗೆದ್ದಿದ್ದ ಕುಸ್ತಿ ಪಟು ಸಾಕ್ಷಿ ಮಲ್ಲಿಕ್ ಸೋಲು ಅನುಭವಿಸೋ ಮೂಲಕ ಟೊಕಿಯೋ ಒಲಿಂಪಿಕ್ಸ್ ಕೂಟದಲ್ಲಿ ಭಾಗವಹಿಸುವುದು ಅನುಮಾನವೆನಿಸಿದೆ. ಇತ್ತ ಶೂಟಿಂಗ್ ವಿಶ್ವಕಪ್ ಟೂರ್ನಿಯಿಂದ 6 ರಾಷ್ಟ್ರಗಳು ಹಿಂದೆ ಸರಿದಿವೆ. ಎರಡು ಸುದ್ದಿಗಳ ವಿವರ ಇಲ್ಲಿದೆ. 
   

 • mayu

  IPL23, Feb 2020, 4:23 PM IST

  IPL ಕ್ರಿಕೆಟ್: ಸತತ 4 ಬಾರಿ ನಿರೂಪಣೆ ಸಂದರ್ಶನದಲ್ಲಿ ಫೇಲ್ ಆಗಿದ್ದ ಮಯಾಂತಿ!

  ಕ್ರೀಡಾ ನಿರೂಪಣೆಯಲ್ಲಿ ಜನಪ್ರಿಯವಾಗಿರುವ ಮಯಾಂತಿ ಲ್ಯಾಂಗರ್ ಸದ್ಯ ವಿಶ್ವದಲ್ಲೇ ಅತ್ಯುತ್ತಮ ಸ್ಪೋರ್ಟ್ಸ್ ಆ್ಯಂಕರ್ ಅನ್ನೋ ಹೆಗ್ಗಳಿಕಗೆ ಪಾತ್ರರಾಗಿದ್ದಾರೆ. ಕ್ರಿಕೆಟ್ ವಿಶ್ವಕಪ್, ಫುಟ್ಬಾಲ್ ವಿಶ್ವಕಪ್, ಒಲಿಂಪಿಕ್ಸ್ ಸೇರಿದಂತೆ ಎಲ್ಲಾ ಕ್ರೀಡಾಕೂಟಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ ಮಯಾಂತಿ ಲ್ಯಾಂಗರ್. ಐಪಿಎಲ್ ಟೂರ್ನಿಯಲ್ಲಿ ನಿರೂಪಕಿಯಾಗೋ ಕನಸು ಇಟ್ಟುಕೊಂಡಿದ್ದ ಮಯಾಂತಿ, 4 ಬಾರಿ ತಿರಸ್ಕೃತಗೊಂಡಿದ್ದರು. ಕಾರಣ ಮಾತ್ರ ವಿಚಿತ್ರ.

 • Kho Kho

  OTHER SPORTS8, Feb 2020, 8:26 AM IST

  ಮಿನಿ ಒಲಿಂಪಿಕ್ಸ್‌: ಬೆಳಗಾವಿ ಖೋ-ಖೋ ತಂಡಕ್ಕೆ ಚಿನ್ನ

  ಬೆಂಗಳೂರಿನಲ್ಲಿ ನಡೆಯುತ್ತಿರುವ ಮಿನಿ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಬೆಳಗಾವಿ  ಖೋ ಖೋ ತಂಡ ಚಿನ್ನದ ಪದಕಕ್ಕೆ ಮುತ್ತಿಕ್ಕಿದೆ. ಅಥ್ಲಿಟಿಕ್ಸ್ ವಿಭಾಗದಲ್ಲಿ ಧೃವ್ ಬಲ್ಲಾಳ್ ಹಾಗೂ ಪ್ರಿಯಾಂಕ ಒಲೇಕಾರ್ ಚಿನ್ನ ಗೆದ್ದುಕೊಂಡಿದ್ದಾರೆ. ಮಿನಿ ಒಲಿಂಪಿಕ್ಸ್ ಕೂಟದ ವಿವರ ಇಲ್ಲಿದೆ. 

 • Karnataka Khelo India

  OTHER SPORTS23, Jan 2020, 10:05 AM IST

  ಖೇಲೋ ಇಂಡಿಯಾ: ಕರ್ನಾಟಕಕ್ಕೆ 4ನೇ ಸ್ಥಾನ

  ಖೇಲೋ ಇಂಡಿಯಾ ಕ್ರೀಡಾಕೂಟ ಮುಕ್ತಾಯಗೊಂಡಿದೆ. ಪ್ರತಿಷ್ಠಿತ ಕ್ರೀಡಾಕೂಟದಲ್ಲಿ ಅದ್ಬುತ ಪ್ರದರ್ಶನ ನೀಡಿದ ಕರ್ನಾಟಕದ ಕ್ರೀಡಾಪಟುಗಳು 80 ಪದಕ ಬಾಚಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಮಹಾರಾಷ್ಟ್ರ ಸತತ 2ನೇ ಬಾರಿಗೆ ಚಾಂಪಿಯನ್ ಪಟ್ಟ ಗೆದ್ದುಕೊಂಡಿದೆ. 
   

 • Vinesh Phogat

  OTHER SPORTS18, Jan 2020, 7:01 PM IST

  ರೋಮ್ ರ‍್ಯಾಂಕಿಂಗ್ ಕುಸ್ತಿ ಸೀರಿಸ್: ಭಾರತದ ವಿನೇಶ್ ಫೋಗಟ್‌ಗೆ ಚಿನ್ನ!

  ಒಲಿಂಪಿಕ್ ಕ್ರೀಡಾಕೂಟಕ್ಕೆ ತಯಾರಿ ನಡೆಸುತ್ತಿರುವ ರಸ್ಲರ್ ವಿನೇಶ್ ಫೋಗಟ್ ಇದೀಗ 2020ರ ಮೊದಲ ಸೀರಿಸ್ ಗೆದ್ದುಕೊಂಡಿದ್ದಾರೆ. ಈ ಮೂಲಕ ರೋಮ್‌ನಲ್ಲಿ ಭಾರತದ ಪತಾಕೆ ಹಾರಿಸಿದ್ದಾರೆ. 

 • Swimming Karnataka Kushi dinesh

  OTHER SPORTS18, Jan 2020, 11:12 AM IST

  ಈಜಿನಲ್ಲಿ ರಾಜ್ಯಕ್ಕೆ 5 ಚಿನ್ನ; ಅಂಕಪಟ್ಟಿಯಲ್ಲಿ 7ನೇ ಸ್ಥಾನಕ್ಕೆ ಕರ್ನಾಟಕ!

   ಖೇಲೋ ಇಂಡಿಯಾ ಕ್ರೀಡಾಕೂಟದಲ್ಲಿ ಕರ್ನಾಟಕದ ಅಥ್ಲೀಟ್‌ಗಳು ಚಿನ್ನದ ಬೇಟೆ ಮುಂದುವರಿಸಿದ್ದಾರೆ. ಈಜಿನಲ್ಲಿ ರಾಜ್ಯದ 5 ಚಿನ್ನದ ಪದಕ ಗೆದ್ದುಕೊಂಡಿದೆ. ಕರ್ನಾಟಕದ ಒಟ್ಟು ಚಿನ್ನದ ಪದಕ ಸೇರಿದಂತೆ ಹಚ್ಚಿನ ವಿವರ.

 • খেলো ইন্ডিয়া

  OTHER SPORTS11, Jan 2020, 2:03 PM IST

  ಖೇಲೋ ಇಂಡಿಯಾಗೆ ಅದ್ಧೂರಿ ಚಾಲನೆ

  ಖೇಲೋ ಇಂಡಿಯಾ ಕ್ರೀಡಾಕೂಟಕ್ಕೆ ಚಾಲನೆ ಸಿಕ್ಕಿದೆ. ಭಾರತದ ಉದಯೋನ್ಮುಖ ಕ್ರೀಡಾಪಟುಗಳಿಗೆ ಅತ್ಯುತ್ತಮ ವೇದಿಕೆಯಾಗಿರುವ ಈ ಕ್ರೀಡಾಕೂಟ ಹಲವರ ಬದುಕನ್ನೇ ಬದಲಿಸಿದೆ. ಮೊದಲ ದಿನದ ಪ್ರಮುಖ ಅಂಶಗಳು ಇಲ್ಲಿವೆ.
   

 • v somanna

  Karnataka Districts3, Jan 2020, 12:41 PM IST

  ದಸರಾ ಕ್ರೀಡಾ ವಿಜೇತರಿಗೆ ಸಿಗದ ಹಣ, ಅಧಿಕಾರಿಯನ್ನು ವೇದಿಕೆಯಲ್ಲೇ ಸಸ್ಪೆಂಡ್ ಮಾಡಿದ ಸಚಿವ ಸೋಮಣ್ಣ..!

  ದಸರಾ ಕ್ರೀಡಾಕೂಟದ ವಿಜೇತರಿಗೆ ಬಹುಮಾನ ಮೊತ್ತವನ್ನು ಇನ್ನೂ ನೀಡದಿರುವ ಬಗ್ಗೆ ಸಚಿವ ವಿ. ಸೋಮಣ್ಣ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇವನು ಎಲ್ಲವನ್ನು ತಿಂದು ತೇಗಿದ್ದಾನೆ. ಏ... ಎಕೌಂಟ್ ಬುಕ್ ತಗೊಂಡ್‌ ಬಾ ಎಂದು ಅಧಿಕಾರಿಯ ಬೆವರಿಳಿಸಿದ್ದಾರೆ.

 • Delhi stadium

  OTHER SPORTS21, Dec 2019, 11:41 AM IST

  ಸುಳ್ಳು ವಯಸ್ಸು ನೀಡಿ ಸಿಕ್ಕಿಬಿದ್ದ ಅಥ್ಲೀಟ್ಸ್‌!

  ಕ್ರೀಡೆಯಲ್ಲಿ ಸುಳ್ಳು ವಯಸ್ಸು ನೀಡುವುದು ಗಂಭೀರ ಅಪರಾಧ. ಈ ಕುರಿತು ಕ್ರೀಡಾಪಟುಗಳಿಗೆ ಅರಿವು ಮೂಡಿಸಲಾಗುತ್ತಿದೆ. ಇದೀಗ ರಾಷ್ಟ್ರೀಯ ಅಂತರ ಜಿಲ್ಲಾ ಕಿರಿಯರ ಕೂಟದಲ್ಲಿ ಸುಳ್ಳು ವಯಸ್ಸು ನೀಡಿದ 51 ಕ್ರೀಡಾಪಟುಗಳನ್ನು ಅಮಾನತು ಮಾಡಲಾಗಿದೆ.