ಕೊರೋನಾ ವೈರಸ್  

(Search results - 412)
 • Karnataka Districts12, Apr 2020, 10:46 AM

  ಕೋವಿಡ್‌-19 ವಿರುದ್ಧ ಹೋರಾಟ: ವೈದ್ಯರ ರಕ್ಷಣಾ ಸಾಮಗ್ರಿಗಳಿಗೆ ಕೊರತೆ ಇಲ್ಲ: DCM

  ಜಿಲ್ಲೆಗೆ ಕೊರೋನಾ ವೈರಸ್‌ ನಿಯಂತ್ರಣಕ್ಕಾಗಿ ಸರ್ಕಾರ ಸಕಲ ಸೌಲಭ್ಯಗಳನ್ನು ನೀಡುತ್ತಿದ್ದು ವೈದ್ಯಕೀಯ ಪರಿಕರಗಳು ಹಾಗೂ ವೈದ್ಯರ ರಕ್ಷಣಾ ಸಾಮಗ್ರಿಗಳಿಗೆ ಕೊರತೆ ಇಲ್ಲ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ತಿಳಿಸಿದ್ದಾರೆ.

 • Coronavirus Karnataka23, Mar 2020, 3:37 PM

  ಕೊರೋನಾ ಶಂಕಿತ ಕುಟುಂಬಸ್ಥರಿಂದ ಓಡಾಟ: ಗ್ರಾಮಸ್ಥರಲ್ಲಿ ಹೆಚ್ಚಿದ ಆತಂಕ

  ಕೊರೋನಾ ಶಂಕಿತನ ಕುಟುಂಬಸ್ಥರು ಅಧಿಕಾರಿಗಳ ಸೂಚನೆ ಪಾಲಿಸದೆ ರಾಜಾರೋಷವಾಗಿ ಹೊರಗಡೆ ಓಡಾಡುತ್ತಿರುವ ಘಟನೆ ಜಿಲ್ಲೆಯ ಮದ್ದೂರು ತಾಲೂಕಿನ ಬೆಸಗರಹಳ್ಳಿಯಲ್ಲಿ ಇಂದು[ಸೋಮವಾರ] ನಡೆದಿದೆ. ಕೊರೋನಾ ಶಂಕಿತನ ಕುಟುಂಬಸ್ಥರ ಉದ್ದಟತನದಿಂದ ಗ್ರಾಮಸ್ಥರು ಭಯಭೀತರಾಗಿದ್ದಾರೆ. 
   

 • laxman savadi

  Coronavirus Karnataka23, Mar 2020, 3:08 PM

  ಪ್ರಯಾಣಿಕರಿಂದ ದುಪ್ಪಟ್ಟು ಹಣ ವಸೂಲಿ: ಖಾಸಗಿ ವಾಹನಗಳ ವಿರುದ್ಧ ಡಿಸಿಎಂ ಸವದಿ ಗರಂ

  ಕೊರೋನಾ ಪಿಡುಗನ್ನು ತಡೆಗಟ್ಟುವ ಮುನ್ನೆಚ್ಚರಿಕಾ ಕ್ರಮವಾಗಿ ನಮ್ಮ ಸಾರಿಗೆ  ಸಂಸ್ಥೆಗಳ ಬಸ್ಸುಗಳ ಮತ್ತು ರೈಲು ಸಂಚಾರಗಳನ್ನು ಕಡಿಮೆಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಆದರೆ ಈ ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಂಡು ಹೆಚ್ಚಿನ ಹಣವನ್ನು ವಸೂಲಿ ಮಾಡುತ್ತಿರುವ ವಾಹನಗಳ ಮಾಲೀಕರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಾರಿಗೆ ಸಚಿವ ಹಾಗೂ ಡಿಸಿಎಂ ಲಕ್ಷ್ಮಣ  ಸವದಿ ಎಚ್ಚರಿಕೆ ನೀಡಿದ್ದಾರೆ.

 • HBL

  Coronavirus Karnataka23, Mar 2020, 2:45 PM

  ಕೊರೋನಾ ವೈರಸ್ ಭಯಾನೇ ಇಲ್ವಾ ಇಲ್ಲಿನ ಜನಕ್ಕೆ: ಟಂ ಟಂ ವಾಹನಗಳಲ್ಲಿ ರಾಜಾರೋಷ ಪ್ರಯಾಣ!

  ಹುಬ್ಬಳ್ಳಿ[ಮಾ.23]: ಕೊರೋನಾ ವೈರಸ್ ನಿಯಂತ್ರಣಕ್ಕಾಗಿ ಧಾರವಾಡ ಜಿಲ್ಲೆಯಲ್ಲಿ ಲಾಕ್ ಡೌನ್ ಘೋಷಿಸಲಾಗಿದೆ. ಇದರಿಂದ ಸಾರಿಗೆ ಬಸ್ ಗಳ ಓಡಾಟ ಸಂಪೂರ್ಣ ಬಂದ್ ಆಗಿದೆ. ಆದರೆ ಕೆಲ ಖಾಸಗಿ ಮ್ಯಾಕ್ಸಿಕ್ಯಾಬ್, ಕ್ರೂಸರ್, ಟಂ ಟಂ ಮತ್ತಿತರ ವಾಹನಗಳ ಮಾಲೀಕರು ಇದನ್ನೇ ಬಂಡವಾಳ‌ ಮಾಡಿಕೊಂಡು ಜನರನ್ನು ತುಂಬಿಕೊಂಡು ಓಡಾಡುತ್ತಿದ್ದು ಇಂತವರ ವಿರುದ್ಧ ಆರ್‌ಟಿಓ ಸಿಬ್ಬಂದಿ ಚಾಟಿ ಬೀಸಿದ್ದಾರೆ. 

 • karnataka

  Coronavirus Karnataka23, Mar 2020, 1:37 PM

  ಎಲ್ಲ 30 ಜಿಲ್ಲೆಗಳಲ್ಲಿ ಲಾಕ್‌ಡೌನ್ ಮಾಡಲು ಕರ್ನಾಟಕ ಚಿಂತನೆ ?

  ಮಾರ್ಚ್ 31 ರವಗೆ ಕರ್ನಾಟಕವನ್ನ ಸಂಪೂರ್ಣವಾಗಿ ಲಾಕ್ ಡೌನ್ ಮಾಡಲು ಚಿಂತನೆ ನಡೆಸಲಾಗುತ್ತಿದೆ. ಈ ಬಗ್ಗೆ ಸಂಜೆ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂಪ್ಪ ಅವರು ಹೇಳಿದ್ದಾರೆ. 
   

 • bhaskar rao bangalore police commissioner
  Video Icon

  Coronavirus Karnataka23, Mar 2020, 1:20 PM

  ‘ಕೊರೋನಾ ಶಂಕಿತರೇ ಹುಷಾರ್: ಹೊರಗಡೆ ಓಡಾಡಿದ್ರೆ ಪೊಲೀಸರು ಅರೆಸ್ಟ್ ಮಾಡ್ತಾರೆ’

  ಕ್ವಾರಂಟೈನ್ ಮುದ್ರೆ ಇದ್ದವರು ಹೊರಗಡೆ ಓಡಾಡಿದರೆ ಬಂಧಿಸುತ್ತೇವೆ ಎಂದು ಬೆಂಗಳೂರು ನಗರ ಪೊಲೀಸ್ ಕಮೀಷನರ್ ಭಾಸ್ಕರ್ ರಾವ್ ಅವರು ಟ್ವೀಟ್ ಮಾಡಿ ಎಚ್ಚರಿಕೆ ನೀಡಿದ್ದಾರೆ. ಕ್ವಾರಂಟೈನ್ ಮುದ್ರೆ  ಇದ್ದವರ ಮೇಲೆ ಪೊಲೀಸರು ಹದ್ದಿನ ಕಣ್ಣು ಇಟ್ಟಿದ್ದಾರೆ. ಕ್ವಾರಂಟೈನ್ ಮುದ್ರೆ ಹಾಕಿಸಿಕೊಂಡವರು ಹೊರಗಡೆ ಓಡಾಡುವುವರನ್ನ ಕಂಡರೆ ತಕ್ಷಣ ಪೊಲೀಸ್ ಕಂಟ್ರೋಲ್ ರೂಂ 100 ನಂಬರ್ ಗೆ ಕಾಲ್ ಮಾಡಿ ನಾವು ಎತ್ತಾಕೊಂಡು ಹೋಗುತ್ತೇವೆ ಎಂದು ಹೇಳಿದ್ದಾರೆ.

 • Myths About Coronavirus Debunked

  Coronavirus Karnataka23, Mar 2020, 12:45 PM

  ಕೊರೋನಾ ಭೀತಿ: ‘ಎಷ್ಟೇ ಮುಂಜಾಗ್ರತಾ ಕ್ರಮ ಕೈಗೊಂಡರೂ ಜನ್ರು ಜಾಗೃತರಾಗ್ತಿಲ್ಲ’

  ಸರ್ಕಾರ ಎಷ್ಟೇ ಮುಂಜಾಗ್ರತಾ ಕ್ರಮ ಕೈಗೊಂಡರೂ ಜನರು ಜಾಗೃತರಾಗುತ್ತಿಲ್ಲ. ಹೀಗಾಗಿ ಜನರಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಜಾಗೃತಿ ಮೂಡಿಸುವ ಕೆಲಸವಾಗಬೇಕಿದೆ. ದೂರವಾಣಿ ಕರೆಗಳ ಮೂಲಕ ಪ್ರಖ್ಯಾತ ವೈದ್ಯರ ಧ್ವನಿ ಬಳಕೆ ಮಾಡಿಕೊಂಡ ಜಾಗೃತಿ ಮೂಡಿಸಬೇಕು. ಡಾ.ದೇವಿಶೆಟ್ಟಿ, ಡಾ. ಮಂಜುನಾಥ್ ಸೇರಿದಂತೆ ಪ್ರಖ್ಯಾತ ವೈದ್ಯರ ಧ್ವನಿ ಮುದ್ರಿಕೆಯ ಮೆಸೆಜ್ ಜನರಿಗೆ ಮುಟ್ಟಿಸುವಂತ ಕಾರ್ಯವಾಗಬೇಕು ಎಂದು ಖಾಸಗಿ ಆಸ್ಪತ್ರೆ ಮುಖ್ಯಸ್ಥರು ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. 
   

 • Mysuru

  Coronavirus Karnataka23, Mar 2020, 12:19 PM

  ಮೈಸೂರು ಲಾಕ್‌ಡೌನ್: ಕೊರೋನಾ ಎಮರ್ಜೆನ್ಸಿ ಉಲ್ಲಂಘಿಸಿದ್ರೆ ಕ್ರಿಮಿನಲ್ ಕೇಸ್

  ಇನ್ನು ಹತ್ತು ದಿನಗಳ ಕಾಲ ಮೈಸೂರು ನಗರ ಸಂಪೂರ್ಣ ಲಾಕ್‌ಡೌನ್ ಆಗಲಿದೆ. ಅನಗತ್ಯ ಓಡಾಟ ಕಂಡು ಬಂದಲ್ಲಿ ಅವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದು. ಪೊಲೀಸ್ ಇಲಾಖೆ ಕೊರೋನಾ ನಿರ್ಬಂಧವನ್ನ ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದೆ ಎಂದು ಮೈಸೂರು ನಗರ ಪೊಲೀಸ್ ಆಯುಕ್ತ ಚಂದ್ರಗುಪ್ತ ಹೇಳಿದ್ದಾರೆ. 
   

 • कनिका के खिलाफ लखनऊ के सरोजिनी नगर थाने में एफआईआर भी दर्ज की जा चुकी है। इसके साथ ही सोशल मीडिया पर भी लोग कनिका कपूर द्वारा बरती गई लापरवाही को लेकर जमकर मजाक उड़ा रहे हैं।

  Coronavirus Karnataka23, Mar 2020, 12:03 PM

  ವಿಜಯಪುರ ಜಿಲ್ಲೆಗೆ ವಿದೇಶದಿಂದ ಬಂದ 290 ಮಂದಿ: 144 ಸೆಕ್ಷನ್ ಜಾರಿ

  ಇದುವರೆಗೂ ಜಿಲ್ಲೆಗೆ  290 ಜನರು ವಿದೇಶದಿಂದ ಬಂದಿದ್ದಾರೆ. ಅದರಲ್ಲಿ 173 ಮಂದಿ ನಿಗಾದಲ್ಲಿದ್ದಾರೆ. ಈಗಿನಿಂದಲೇ ಜಿಲ್ಲೆಯಲ್ಲಿ 144 ಜಾರಿ ಮಾಡಲಾಗಿದೆ. ಕರ್ನಾಟಕ ಮಹಾರಾಷ್ಟ್ರ ಗಡಿಯಲ್ಲಿ ಚೆಕ್ ಪೋಸ್ಟ್ ಗಳನ್ನ ನಿರ್ಮಾಣ ಮಾಡಲಾಗಿದೆ. ಇಂದಿನಿಂದ ಮಾರ್ಚ್ 31ರ ವರೆಗೆ 144 ಸೆಕ್ಷನ್  ಮುಂದುವರಿಯಲಿದೆ ಎಂದು ಜಿಲ್ಲಾಧಿಕಾರಿ ವೈ ಎಸ್ ಪಾಟೀಲ್ ಹೇಳಿದ್ದಾರೆ. 

 • coronavirus

  Karnataka Districts23, Mar 2020, 11:35 AM

  ಬೆಳಗಾವಿ: ಮಗುವಿಗೆ ಕೊರೋನಾ ಸೋಂಕು ಇಲ್ಲ, ಕುಟುಂಬಸ್ಥರ ಮೇಲೂ ನಿಗಾ

  ಜಿಲ್ಲೆಯ ನಾಲ್ಕೂವರೆ ವರ್ಷದ ಮಗುವಿಗೆ ಕೋರೊನಾ ವೈರಸ್ ಇಲ್ಲ. ಮಗು ಉತ್ತಮ ಆರೋಗ್ಯವಂತಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಸ್ಪಷ್ಟಪಡಿಸಿದ್ದಾರೆ. ನಾಲ್ಕೂವರೆ ವರ್ಷದ ಮಗುವಿಗೆ ಯಾವುದೇ ರೀತಿಯ ಸೋಂಕು ಇಲ್ಲ. ಮಗು ಆರೋಗ್ಯಯವಾಗಿದೆ ಎಂದು ತಿಳಿಸಿದ್ದಾರೆ. 
   

 • coronavirus

  Karnataka Districts23, Mar 2020, 11:07 AM

  ಕೊರೋನಾ ಕಾಟ: ನೆದರ್‌ಲ್ಯಾಂಡ್‌ನಿಂದ ಬಂದ ವಿದ್ಯಾರ್ಥಿಯ ಅಳಲು

  ಕೊರೋನಾ ಸೋಂಕಿನ ಯಾವುದೇ ಮುನ್ಸೂಚನೆ ಇಲ್ಲದಿದ್ದರೂ ಎಲ್ಲ ಬಗೆಯ ಪರೀಕ್ಷೆಗೆ ಒಳಗಾಗಿದ್ದೇನೆ. ಪರೀಕ್ಷೆಯಲ್ಲಿ ನೆಗೆಟಿವ್‌ ವರದಿ ಬಂದಿದೆ. ವೈದ್ಯರಿಂದ ಸರ್ಟಿಫಿಕೆಟ್‌ ಪಡೆದು ತಾಯಿ ನೆಲಕ್ಕೆ ಆಗಮಿಸಿದ್ದೇನೆ. ಆದರೂ ನನ್ನ ಮೇಲೆ ಅನುಮಾನ ವ್ಯಕ್ತಪಡಿಸುತ್ತಿರುವುದು, ವಾಸ್ತವ ಸ್ಥಿತಿಯ ಚಿತ್ರಣ ಅರಿಯದೇ ಅಸ್ಪೃಶ್ಯನಂತೆ ನೋಡುತ್ತಿರುವುದು ತೀವ್ರ ಬೇಸರ, ನೋವು ತಂದಿದೆ.
   

 • Karnataka Districts23, Mar 2020, 10:39 AM

  ರಾಜ್ಯದಲ್ಲಿ ಮತ್ತೊಂದು ಕೊರೋನಾ ಕೇಸ್: ಸೋಂಕಿತ ಸಂಖ್ಯೆ 27ಕ್ಕೇರಿಕೆ

  ರಾಜ್ಯದಲ್ಲಿ ಮತ್ತೋಂದು ಕೊರೋನಾ ಸೋಂಕು ದೃಢಪಟ್ಟಿದೆ. ಈ ಮೂಲಕ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 27ಕ್ಕೆ ಏರಿಕೆಯಾಗಿದೆ. 

 • coronavirus clap

  Karnataka Districts23, Mar 2020, 10:13 AM

  ಬೆಂಗಳೂರಲ್ಲಿ ಮೊಳಗಿದ ಘಂಟಾನಾದ, ಚಪ್ಪಾಳೆ: BSY, ದೇವೇಗೌಡರಿಂದ ಅಭಿನಂದನೆ

  ಕೊರೋನಾ ವೈರಸ್‌ ವಿರುದ್ಧ ಹೋರಾಡುತ್ತಿರುವ ವೈದ್ಯಕೀಯ ಸಿಬ್ಬಂದಿ, ಸಾರಿಗೆ, ಪೌರ ಕಾರ್ಮಿಕರು, ಸೈನಿಕರು, ಪೊಲೀಸರು ಹಾಗೂ ಮಾಧ್ಯಮ ಸಿಬ್ಬಂದಿಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಸೇರಿದಂತೆ ಸಚಿವರು, ಶಾಸಕರು, ಹಿರಿಯ ಅಧಿಕಾರಿಗಳು, ಕಲಾವಿದರು, ಉದ್ಯಮಿಗಳು, ಸಮಾಜದ ವಿವಿಧ ವಲಯಗಳಲ್ಲಿ ಸೇವೆ ಸಲ್ಲಿಸುತ್ತಿರುವ ಗಣ್ಯರು, ಸಾರ್ವಜನಿಕರು, ಮಹಿಳೆಯರು ಮಕ್ಕಳು ನಗರದಲ್ಲಿ ಏಕ ಕಾಲದಲ್ಲಿ ಕರತಾಡನದ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.
   

 • Tata LNG Bus

  Karnataka Districts23, Mar 2020, 9:51 AM

  ಕೊರೋನಾ ಕಾಟದಿಂದ ಖಾಸಗಿ ಬಸ್‌ ಮಾಲೀಕರಿಗೆ ಸಂಕಷ್ಟ!

  ಕೊರೋನಾ ವೈರಸ್‌ ಭೀತಿ ಹೆಚ್ಚಳ ಹಾಗೂ ಪ್ರಯಾಣಿಕರ ಕೊರತೆ ಉಂಟಾಗಿರುವ ಹಿನ್ನೆಲೆಯಲ್ಲಿ ಸೋಮವಾರದಿಂದ ರಾಜ್ಯದಲ್ಲಿ ಬಸ್‌ ಕಾರ್ಯಾಚರಣೆ ಮಾಡುವ ಬಗ್ಗೆ ಖಾಸಗಿ ಬಸ್‌ ಆಪರೇಟರ್‌ಗಳು ಗೊಂದಲಕ್ಕೆ ಸಿಲುಕಿದ್ದಾರೆ.

 • Karnataka Districts23, Mar 2020, 9:38 AM

  ಕೊರೋನಾ ಭೀತಿ: ಕಳೆದ ಎರಡು ದಿನದಲ್ಲಿ ವಿದೇಶದಿಂದ ಬೆಂಗಳೂರಿಗೆ 1406 ಮಂದಿ

  ಕಳೆದ ಎರಡು ದಿನಗಳಲ್ಲಿ 1406 ಮಂದಿ ವಿದೇಶದಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ. ಈ ಪೈಕಿ ಐವರಲ್ಲಿ ಸೋಂಕು ಲಕ್ಷಣ ಕಂಡುಬಂದ ಹಿನ್ನೆಲೆಯಲ್ಲಿ ನಿಗಾ ಆಸ್ಪತ್ರೆಗೆ ದಾಖಲಿಸಲಾಗಿದೆ.